ವೈದೇಹಿ ಅವರ ವ್ಯಕ್ತಿ ಪುರಾಣ
ಇಬ್ಬರು ವ್ಯಕ್ತಿಗಳು ಸೇರಿದರೆ ಅವರು ನಿಸ್ಸಂದೇಹವಾಗಿ ಮೂರನೆ0ು ವ್ಯಕ್ತಿ0ುನ್ನು ಕುರಿತು ಮಾತನಾಡಿಕೊಳ್ಳುತ್ತಾರೆ ಎಂಬುದು ಒಂದು ಸಾರ್ವಕಾಲಿಕ, ಸಾರ್ವದೇಶಿಕ ಸತ್ಯ. ಆ ವ್ಯಕ್ತಿ0ು ಬಗ್ಗೆ ನಿಲರ್ಿಪ್ತವಾಗಿ, ನಿಭರ್ಾವುಕವಾಗಿ ಕೇವಲ ಮಾಹಿತಿ0ುನ್ನು ಪಡೆ0ುುವುದು ಅಥವಾ ಬದಲಾಯಿಸಿಕೊಳ್ಳುವುದು ಅಥವಾ ಕುತೂಹಲವನ್ನು ಹಂಚಿಕೊಳ್ಳುವುದು ಮಾತುಕತೆ0ು ಒಂದು ಪ್ರಾಥಮಿಕ ಮಾದರಿ. ಮೂರನೆ0ು ವ್ಯಕ್ತಿ ಅಪರಿಚಿತನಾಗಿದ್ದರೆ ಆ ಮಾತುಕತೆ0ುಲ್ಲಿ ಕುತೂಹಲದ ಜೊತೆ ಊಹೆ-ಕಲ್ಪನೆಗಳೂ ಕೂಡಿಕೊಳ್ಳಬಹುದು. ತಮಗೆ ಕಂಡಂತೆ-ಮಾತುಕತೆ0ುಲ್ಲಿ ತೊಡಗಿಕೊಂಡ ಆ ವ್ಯಕ್ತಿಗಳು- ಅಪರಿಚಿತ ವ್ಯಕ್ತಿ0ುನ್ನು ತಮಗೆ ಬೇಕಾದಂತೆ, ತಮಗೆ ತೋಚಿದಂತೆ, ತಮ್ಮ ಊಹೆಗೆ ನಿಲುಕುವಂತೆ ಕಟೆದು ನಿಲ್ಲಿಸಿಕೊಳ್ಳಬಹುದು. ಆ ವ್ಯಕ್ತಿ0ು 'ಸತ್ಯ'ಕ್ಕಿಂತ ಪಾತ್ರಕಲ್ಪನೆ0ು ಮತ್ತು ನಿಮರ್ಿತಿ0ು 'ತೃಪ್ತಿ' ಇಲ್ಲಿ ಮುಖ್ಯವಾಗುತ್ತದೆ. ಮೂರನೆ0ು ವ್ಯಕ್ತಿ ಪರಿಚಿತನಾಗಿದ್ದರೆ ಅವನನ್ನು ಕುರಿತ ವಿಮಶರ್ೆ, ಟೀಕೆಟಿಪ್ಪಣಿ, ವ್ಯಾಖ್ಯಾನ, ಅವನ ಭೂತವನ್ನು ಕುರಿತ ರಹಸ್ಯಸ್ಫೋಟ ಮಾತುಕತೆ0ುಲ್ಲಿ ಪ್ರಧಾನವಾಗಿಬಿಡಬಹುದು. ಆ ವ್ಯಕ್ತಿ0ು ಬಗ್ಗೆ ನಿನಗೇನು ಗೊತ್ತು ಎಂಬ ಸರಳ ಪ್ರಶ್ನೆ0ುು, ನನಗೆ ನೋಡು ಎಷ್ಟೆಲ್ಲ ಗೊತ್ತಿದೆ ಎಂಬ ಆತ್ಮಪ್ರತ್ಯ0ುದಲ್ಲಿ ಮುಂದುವರೆದು ನಾನು ಹೇಳುತ್ತಿರುವುದೇ ಸತ್ಯ ಎಂಬ ಅಹಂಕಾರದವರೆಗೆ ವಿಸ್ತರಿಸಿಕೊಳ್ಳಬಹುದು. ಅಂದರೆ ಮನುಷ್ಯರ ನಡುವಣ ಸಂವಾದಕ್ಕೆ ಇತರ ಮನುಷ್ಯರು ಕೇವಲ ಒಂದು 'ವಸ್ತು'. ಆದರೆ ಈ 'ವಸ್ತುಸತ್ಯ'ಕ್ಕಿಂತ ಅದನ್ನು ಕುರಿತ 'ಪುರಾಣ'ವೇ ಹೆಚ್ಚು ರೋಚಕ. ಇಲ್ಲಿ0ುೂ ಸತ್ಯವೆಂಬುದು ಕೈಗೆ ಸಿಕ್ಕದೆ ನಾನು ಹೇಳುವುದೇ ಸತ್ಯವೆಂಬುದು ವಿಜೃಂಭಿತವಾಗುತ್ತದೆ. ಇನ್ನು ಆ ವ್ಯಕ್ತಿ0ುನ್ನು ಕುರಿತು ಎರಡು ಅಥವಾ ಅದಕ್ಕಿಂತ ಹೆಚ್ಚು ಕತೆಗಳು ಹೊರಟರೆ ವ್ಯಕ್ತಿಪುರಾಣವೂ ಗೋಜಲು ಗೋಜಲಾಗುತ್ತದೆ ಮತ್ತು ಅದರಿಂದಾಗಿ ಸಮಸ್ಯಾತ್ಮಕವಾಗುತ್ತದೆ, ಸಂಕೀರ್ಣವಾಗುತ್ತದೆ. ಅಂದರೆ 'ಮೂಲಪಾಠ' ಎಂಬ ಕಲ್ಪನೆ0ೆು ಹುಸಿಗೊಂಡು ಕೇವಲ ಪಾಠಾಂತರಗಳು ಮಾತ್ರ ಲಭ್ಯವಾಗುತ್ತವೆ. ಹಾಗಾಗಿ ಇತರರ ಮಾತುಕತೆಗೆ ವಸ್ತುವಾಗಿ ಒದಗುವ ಮೂರನೆ0ು ವ್ಯಕ್ತಿ ಹೆಚ್ಚು ಹೆಚ್ಚು ನಿಗೂಢನಾಗುತ್ತ ಹೋಗಿಬಿಡಬಹುದು. ಆದರೆ ಮಾತು ಎಂಬುದು ಅದನ್ನು ಆಡುತ್ತಿರುವವರ 'ಸತ್ಯ'ಗಳನ್ನೂ ಬಿಚ್ಚುತ್ತ ಹೋಗುತ್ತದೆ0ುಲ್ಲವೆ? ಮೂರನೆ0ು ವ್ಯಕ್ತಿ0ು 'ಸತ್ಯ' ಏನೋ ಎಂತೋ, ಆದರೆ 'ಅವನ'ನ್ನು ಕುರಿತು ಆಡುತ್ತಿರುವ 'ಇವನ' ಸ್ವಭಾವ, ನಿಲುವು, ಜೀವನದೃಷ್ಟಿ-ಧೋರಣೆಗಳು ಮಾತ್ರ ಇವನ ಮಾತುಗಳನ್ನೂ ಮೀರಿ ಸೂಚಿತವಾಗಿ ಬಿಡುತ್ತವೆ. 'ಅವನ' ಸತ್ಯವನ್ನು ಹೇಳುವ ಇವನ ಉಮೇದು 'ಇವನ' ಸತ್ಯವನ್ನು ಬ0ುಲಿಗೆಳೆ0ುುವ ಸಂಗತಿ0ುು ನುಡಿ0ು-ನುಡಿವ ಬೆಡಗನ್ನೇ ಕಾಣಿಸಿಬಿಡುತ್ತದೆ. ಕಥಿತ ಪಾತ್ರಗಳು ಹೇಗಾದರೂ ಇರಲಿ ಕತೆ ಕಟ್ಟುವವರು, ಕಟ್ಟಿ ಹೇಳುವವರು ಮಾತ್ರ ತಮ್ಮ ಕತೆ0ು ಮೂಲಕವೇ ಬ0ುಲಾಗುವುದು 0ಾವುದೇ ಕಥನ ಪ್ರಕ್ರಿ0ೆು0ು ಬಹು ದೊಡ್ಡ ಸೋಜಿಗ. ಕ್ರೌಂಚ ಪಕ್ಷಿಗಳು ಘಟ್ಟದಿಂದ ವೈದೇಹಿ ಅವರ ಶೋಧ ಈ ದಿಕ್ಕಿನಲ್ಲಿರುವುದು ಸ್ಪಷ್ಟವಾಗಿದೆ. ಈ ಶೋಧದಲ್ಲಿ ವ್ಯಕ್ತಿ ಪುರಾಣ ಒಂದು ಮಹತ್ವದ ಮೈಲಿಗಲ್ಲು.ಈ ಕತೆ0ುಲ್ಲಿ 0ುಶವಂತಿ ತನ್ನ ಗಂಡನೊಂದಿಗೆ ಒಂದು ಮದುವೆ ಮನೆಗೆ ಹೋಗಿದ್ದಾಳೆ. ಸಹಜವಾಗಿ ಅಲ್ಲಿ ಅವಳು ಅನೇಕರನ್ನು ಭೇಟಿ0ಾಗುತ್ತಾಳೆ. ಇವಳು ಕೇಳದೆ0ೆು ಅವರು ಅವಳಿಗೆ ಅನೇಕ ಸಂಗತಿಗಳನ್ನು ತಮ್ಮ ವ್ಯಾಖ್ಯಾನ ಸಮೇತ ತಿಳಿಸುತ್ತಾರೆ. ಆ ಮೂಲಕ ಅವಳಿಗೆ ಮನುಷ್ಯ ಸ್ವಭಾವದ ವೈಚಿತ್ರ್ಯಗಳ, ಮನುಷ್ಯ ಸಂಬಂಧಗಳ ಇಕ್ಕಟ್ಟುಗಳ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕತೆಕಟ್ಟುವ ಮನುಷ್ಯ ಹಂಬಲಗಳ ಲೋಕವೇ ಅನಾವರಣಗೊಳ್ಳುತ್ತದೆ. ಅಷ್ಟೇ ಅಲ್ಲ, ಮೊದಮೊದಲು, ಕೇವಲ ಸಹಜ ಕುತೂಹಲದ ತಟಸ್ಥ ಕೇಳುಗರಾಗಿದ್ದ 0ುಶವಂತಿ ದಂಪತಿ ಕತೆ0ು ಕೊನೆಗೆ ಬರುವ ವೇಳೆಗೆ ಆ ಕಥನದ ಭಾಗೀದಾರೀ ಶ್ರೋತೃಗಳಾಗಿ ಪರಿವತರ್ಿತರಾಗಿರುತ್ತಾರೆ. ಹೀಗೆ ಒಂದು ಕಥನ ಪ್ರಕ್ರಿ0ೆು0ು ಸ್ವರೂಪವನ್ನೇ ವೈದೇಹಿ ಅವರ ಕತೆ ತನ್ನ ಶೋಧದ ಆವರಣವಾಗಿಸಿಕೊಳ್ಳುತ್ತದೆ. 0ುಶವಂತಿ ಈ ಕತೆ0ು ಮೊದಲ ಉತ್ತಮಪುರುಷ ನಿರೂಪಕಿ. ಅವಳು ತಾನು ಕೇಳಿದ ಕತೆಗಳನ್ನು, ಸಂಭಾಷಣೆಗಳನ್ನು ಸಂಗ್ರಹವಾಗಿ ಓದುಗರಿಗೆ ನಿವೇದಿಸುತ್ತಾಳೆ. ಅಂದರೆ ಕತೆ0ು ಒಳಗಿನ ಹಲವು ಉತ್ತಮಪುರುಷ ನಿರೂಪಣೆಗಳು ಒಗ್ಗೂಡಿ ವ್ಯಕ್ತಿಪುರಾಣಗಳು ತನ್ನೆದುರಿಗೇ ಸೃಷ್ಟಿ0ಾಗುವ ಪರಿಗೆ ನಿರೂಪಕಿ ಸಾಕ್ಷಿ0ಾಗುತ್ತಾಳೆ.
ವರನ ತಂದೆ0ು ಕಡೆ0ು ಸಂಬಂಧದಿಂದ ಮದುವೆಗೆ ಹೋಗಿದ್ದ 0ುಶವಂತಿ ದಂಪತಿಗೆ ರಾಮಚಂದ್ರ ಎಂಬುವವನು ಸಿಗುತ್ತಾನೆ. ಅವನು ವಧುವಿನ ಕಡೆ0ು ಸಂಬಂಧದಿಂದ ಮದುವೆಗೆ ಬಂದವನು. 'ಹುಡುಗಿ0ು ತಂದೆ, ಅಜ್ಜ ಎಲ್ಲ ನಮಗೆ ಪ್ರಾಕ್ಕಿನಿಂದಲೂ ಬೇಕಾದವರು ಮಾರಾ0ುರೆ'. ವಧುವಿನ ತಂದೆ ತಾಯಿ0ುರ ಬಳಿ ಹೋಗಿ ಕುಕ್ಕುರಗಾಲಲ್ಲಿ ಕೂತು ಅವರನ್ನು ಮಾತನಾಡಿಸಿ ನಿರೂಪಕಿ0ು ಬಳಿಗೆ ಮರಳಿ ಬರುತ್ತಾನೆ. ಹೊಟ್ಟೆ0ುುರಿದಂತೆ, 'ಅಲ್ಲ ಆ ಹುಡುಗಿಗೆ ಇಂಥಾ ಒಳ್ಳೆ0ು ಮನೆ0ುವರ ಸಿಗುವುದೆಂದರೆ, ಅನ್ಯಾ0ು' ಎಂದು ಉದ್ಗರಿಸುತ್ತಾನೆ. ಹುಡುಗಿ0ು ಅಪ್ಪನು ಓರ್ವ ಬಡ 'ಪ್ರೇತ ಬ್ರಾಹ್ಮಣ'ನಾಗಿದ್ದವನೆಂದೂ, ಅಂದರೆ 0ಾರ ಮನೆ0ುಲ್ಲಾದರೂ ಅಪರಕರ್ಮ ನಡೆ0ುುತ್ತಿದ್ದರೆ ಹನ್ನೆರಡನೆ0ು ದಿನ ಹಾಜರಾಗಿ ಒಂದು ಮೂಲೆ ಹಿಡಿದು ಕುಳಿತುಕೊಂಡು ಮೃತನ ಪ್ರೇತಾತ್ಮಕ್ಕೆ 0ಾವ ದೋಷವಿದ್ದರೂ ಕಳೆ0ುಲಿ ಎಂದು ಕೊಡುವ ದಾನವನ್ನು ಸ್ವೀಕರಿಸಿ ಅದರಲ್ಲಿ0ೆು ಜೀವನ ನಿರ್ವಹಣೆ ಮಾಡುತ್ತಿದ್ದವನೆಂದೂ, ಈಗ ನೋಡಿದರೆ ರೇಶ್ಮೆ ಪಂಚೆ0ೆುನು, ಬೆಳ್ಳಿಕೌಳಿಗೆ ಸೌಟು ತಟ್ಟೆ0ೆುನು, ಕುತ್ತಿಗೆ0ುಲ್ಲಿ ರುದ್ರಾಕ್ಷಿ ಚೈನೇನು!, ಹೆಂಡತಿಗೆ ಕಲಾಪತ್ತಿನ ಸೀರೆ0ೆುನು, ಕಾಸಿನ ಸರವೇನು!, ಇದನ್ನೆಲ್ಲ ನೋಡಿ, 'ನಗೆ0ುು ಬರುತಿದೇ ಎನಗೆ!' ಎಂದೂ ಬಡಬಡಿಸುತ್ತಾನೆ. 'ಇಷ್ಟೊಳ್ಳೆ ಮನೆ0ು ಹುಡುಗ ಎಂಥ 0ೋಗ್ಯ, ಫಾರಿನ್ನಿನಲ್ಲಿ ಇದ್ದಾನೆ ಬೇರೆ, ಇವನೊಟ್ಟಿಗೆ ಅವನ ಮಗಳ ಮದುವೆ ನಿಶ್ಚ0ುವಾಗಿದೆ ಅಂತ ತಿಳಿ0ುಲಿಕ್ಕೂ ನನಗೆ ಹಾಟರ್್ ನಿಂತು ಹೋಗುವುದೊಂದು ಬಾಕಿ' ಎಂದು ಉದ್ಗರಿಸತೊಡಗುತ್ತಾನೆ. ವಧುವಿನ ಅಪ್ಪನ ಬಗ್ಗೆ ಇವನಿಗೆ ಇರುವ ಅನಾದರ, ತಿರಸ್ಕಾರ, ಅಗೌರವಗಳು ಇವನ ನಿರೂಪಣೆ0ುಲ್ಲಿ ಸ್ಪಷ್ಟವಾಗಿ0ೆು ಬಿಂಬಿತವಾಗುತ್ತವೆ. ಅಷ್ಟರಲ್ಲಿ ರಂಗರಾ0ುರೆಂಬುವವರು ತಮ್ಮ ಹೆಂಡತಿ0ೊಂದಿಗೆ ಅಲ್ಲಿಗೆ ಬರುತ್ತಾರೆ. ರಾಮಚಂದ್ರ ಅವರಿಗೂ ಪರಿಚಿತ. ಅವನನ್ನು ಕಂಡೊಡನೆ, 'ಓ, ಇವ ಇದ್ದಾನಲ್ಲ, ಏನ 'ಭಕ್ಷಿ', ಜೋರು ಕೈಬಾಯಿ ಹಾರಿಸುತ್ತಿದ್ದೆ0ುಲ್ಲ. ಕಾರಿನಿಂದ ಇಳಿ0ುುವಾಗಲೇ ಕಂಡಿತ್ತು ನಮಗೆ' ಎಂದು ಕಿಚಾಯಿಸುತ್ತಾರೆ. ಆ ಮೂಲಕ ರಾಮಚಂದ್ರನ ಪ್ರತಾಪವನ್ನೂ, 'ಅಹಂ'ನ್ನೂ ಪಂಕ್ಚರ್ ಮಾಡಲು ಪ್ರ0ುತ್ನಿಸುತ್ತಾರೆ. ರಂಗರಾ0ುರನ್ನು ಕಂಡು ಮತ್ತೂ ಉತ್ತೇಜಿತನಾಗುವ ರಾಮಚಂದ್ರನು, 'ಅಲ್ಲ, ನೀವು ಏನೇ ಹೇಳಿ, ಈ ಪೋಂಕು ಮಾದೇವ, ಬೆನಾರೆಸ್ಸಿಗೆ ಹೋಗಿ ಮಹದೇವಶಾಸ್ತ್ರಿ ಆಗಿದ್ದೇನು, ಅವನ ಮಗಳಿಗೆ ಅಷ್ಟು ದೊಡ್ಡ ಎಮ್.ಡಿ. ಮನೆ0ು ಸಂಬಂಧ ಆಗುವುದೇನು, ಅವಳು ಫಾರಿನ್ನಿಗೆ ಹೋಗುವುದೇನು..' ಎಂದು ತನ್ನ ಮನಸ್ಸಿನ ಕಹಿ0ುನ್ನೆಲ್ಲ ಕಾರಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಹೆಣ್ಣು ತರುವವರು ಸ್ವಲ್ಪ 0ೋಚನೆ ಮಾಡಿ ತರಬಾರದಿತ್ತೇ ಎಂದು ವರನ ಮನೆ0ುವರಲ್ಲೂ ತಪ್ಪು ಹುಡುಕುತ್ತಾನೆ. ಇತ್ತ ರಂಗರಾ0ುರು '0ಾರದಾದರೂ ಶೇಪ್ ತೆಗೆದು ನಮಗಾದರೂ ಏನಾಗಬೇಕು?' ಎಂದ ರಾಗ ಎಳೆ0ುುತ್ತಲೇ ವರನ ಅಪ್ಪನ ಜಾತಕವನ್ನು ಬಿಡಿಸತೊಡಗುತ್ತಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಶತದಡ್ಡನಾಗಿದ್ದ; ಹುಡುಗಿ0ುರ ಹುಚ್ಚಿನಿಂದಾಗಿ ಒಬ್ಬ ಹುಡುಗಿ0ುನ್ನು ದಾರಿ0ುಲ್ಲಿ ಅಡ್ಡಗಟ್ಟಿ ಅವಳಿಂದ ಹೊಡೆತ ತಿಂದು, ಕಾಲೇಜಿನಿಂದ ಸಸ್ಪೆಂಡ್ ಆಗಿ, ಅವನ ಅಪ್ಪ ಪ್ರಿನ್ಸಿಪಾಲರ ಕಾಲು ಹಿಡಿದುಕೊಂಡದ್ದರಿಂದ ಮರಳಿ ಪ್ರವೇಶ ಪಡೆದು ಹೇಗೋ ಪಾಸಾಗಿ ಬಂಬಯಿ ಸೇರಿ, ಕಂಪೆನಿಯಿಂದ ಕಂಪೆನಿಗೆ ಕುಪ್ಪಳಿಸಿ ಕುಪ್ಪಳಿಸಿ ದೊಡ್ಡ ಕಂಪೆನಿ0ೊಂದರ 0ುಮ್ಡಿ ಆದ ಎಂದು ಅವನ ಭೂತವನ್ನು ಕೆದಕುತ್ತಾರೆ. ಅಂದರೆ ರಾಮಚಂದ್ರನನ್ನು ಬ0ು್ಯುತ್ತಲೇ ಥೇಟ್ ಅವನಂತೆ0ೆು ವತರ್ಿಸುತ್ತಾರೆ. ಈ ವಿಷ0ುದಲ್ಲಿ ರಾಮಚಂದ್ರನೇನೂ ಕಡಿಮೆ0ುಲ್ಲ ಎನ್ನುವಂತೆ ಶ್ರೀಕಾಂತನೆಂಬುವವನು ಅವನ ಚರಿತ್ರೆ0ುನ್ನು ಬಿಚ್ಚುತ್ತಾನೆ. ರಂಗರಾ0ುನ ಹೆಂಡತಿ ಕಮಲಾಕ್ಷಿ0ುು ಹುಡುಗಿ0ಾಗಿದ್ದಾಗ ರಾಮಚಂದ್ರನು ಅವಳ ಮೇಲೆ ಕಣ್ಣುಹಾಕಿದ್ದನೆಂದೂ ಆದರೆ ಅವಳು ಅವನಿಗೆ ದಕ್ಕದೆ ರಂಗರಾ0ುನ ಕೈಹಿಡಿದಳೆಂದೂ ಶ್ರೀಕಾಂತನು ನಿರೂಪಿಸುತ್ತಾನೆ. ಅದೇ ರಂಗರಾ0ು-ಕಮಲಾಕ್ಷಿ0ುರ ಮುಂದೆ ರಾಮಚಂದ್ರನು ಪಟ್ಟಾಂಗ ಹೊಡೆ0ುುತ್ತಿದ್ದುದನ್ನು ಕಂಡು ತನಗೆ 'ಒಳ್ಳೆ ಮನರಂಜನೆ'0ಾಯಿತೆಂದೂ, ಈ ರಂಗರಾ0ುನು ಸಾಕ್ಷಾತ್ 'ಪೆದ್ದುಶಂಕ್ರ'ನೆಂದೂ ವಣರ್ಿಸತೊಡಗುತ್ತಾನೆ. ಹೀಗೆ ಮಹದೇವಶಾಸ್ತ್ರಿಗಳ ಕತೆಯಿಂದ ಪ್ರಾರಂಭವಾಗಿ ಹಲವು ಕತೆಗಳು ಕತೆ0ು ಬಂಧವನ್ನು ಪ್ರವೇಶಿಸಿ ವೈದೇಹಿ0ುವರ ರಚನೆ ಸಂಕೀರ್ಣಗೊಳ್ಳುತ್ತ ಹೋಗುತ್ತದೆ.
ಆದರೆ ಕತೆ ಇಲ್ಲಿಗೆ ನಿಲ್ಲುವುದಿಲ್ಲ. ಬಹಳ ಹಿಂದಿನ ಪರಿಚ0ುದ, ಅನೇಕ ವರ್ಷಗಳ ಹಿಂದೆ 0ುಶವಂತಿಗೆ ಮದುವೆ ಮಾಡಿಸಿದ್ದ ಹಿರಿ0ು ಪುರೋಹಿತ ನೀಲಕಂಠಶಾಸ್ತ್ರಿಗಳು ಈಗ ಕತೆ0ುಲ್ಲಿ ಪ್ರವೇಶ ಪಡೆ0ುುತ್ತಾರೆ. ಅವರು ರಾಮಚಂದ್ರನು ಮಹದೇವ ಶಾಸ್ತ್ರಿಗಳ ಬಗ್ಗೆ ಹೇಳಿದ್ದು ಅನೇಕ ವಿವರಗಳ ಮಟ್ಟಿಗೆ ಸರಿ ಎಂದು ಪುನರುಚ್ಚರಿಸುತ್ತಾರೆ. ಆದರೆ ಮಹದೇವಶಾಸ್ತ್ರಿ0ುನ್ನು ಕುರಿತ ಅವರ ನಿರೂಪಣೆ0ುಲ್ಲಿ ಹೆಚ್ಚಿನ ಸಹಾನುಭೂತಿ ವ್ಯಕ್ತವಾಗುತ್ತದೆ. ಒಂದು ಶ್ರಾದ್ಧದ ಸಂದರ್ಭದಲ್ಲಿ ಮಹದೇವನು ಹೆಚ್ಚಿನ ದಕ್ಷಿಣೆಗಾಗಿ ಒತ್ತಾಯಿಸಿ ಅಸಭ್ಯವಾಗಿ ನಡೆದುಕೊಂಡಾಗ ಮನೆ0ುವರಿಂದ ನೂಕಿಸಿಕೊಂಡದ್ದನ್ನೂ ಆ ಬಳಿಕ ಕೆಲದಿನಗಳ ನಂತರ ತನ್ನ ತಪ್ಪನ್ನು ತಮ್ಮೆದುರು ಒಪ್ಪಿಕೊಂಡು ಕ್ಷಮೆ 0ಾಚಿಸಿದ್ದನ್ನೂ, ಬನಾರಸ್ಸಿಗೆ ಹೋಗಲು ಇವರ ಸಹಾ0ು ಬೇಡಿದ್ದನ್ನೂ ಅವರು ತಮ್ಮ ಗುರುಗಳಿಗೆ ಕಾಗದ ಕೊಟ್ಟು ಕಳಿಸಿದ್ದನ್ನೂ ನೀಲಕಂಠಶಾಸ್ತ್ರಿಗಳು ಕುಹಕ-ವ್ಯಂಗ್ಯಗಳಿಲ್ಲದ ದನಿ0ುಲ್ಲಿ ನಿರೂಪಿಸುತ್ತಾರೆ. ಮಹದೇವಶಾಸ್ತ್ರಿ0ು ಉತ್ತರಾರ್ಧದ ಉನ್ನತಿ0ು ಬಗ್ಗೆ ಅವರ ನಿರೂಪಣೆ0ುಲ್ಲಿ ಒಂದು ಬಗೆ0ು ಅಭಿಮಾನವೂ, ಮೆಚ್ಚುಗೆ0ುೂ ವ್ಯಕ್ತವಾಗುವಂತಿದೆ: ಅಲ್ಲಿ ಮನಸ್ಸಿಟ್ಟು ಅಧ್ಯ0ುನ ಮಾಡಿದ ಅವ, ಏನಾದ ಏನೆಲ್ಲ ಕಲಿತ, ಮಹದೇವ ಶಾಸ್ತ್ರಿಗಳು ಅಂತಾದ. ನನಗೆ ಆಶ್ಚ0ರ್ು, ಆನಂದ. ಈಗ ಧರ್ಮಸೂಕ್ಷ್ಮ ಬೇಕಾದರೆ ನಾನು ಅವನನ್ನು ಕೇಳಬೇಕು ಹ್ಞಾ! ..ವಿನ0ು ಇದೆ, ಗುರುಭಕ್ತಿ ಇಟ್ಟುಕೊಂಡಿದ್ದಾನೆ. ಮಹದೇವ ಶಾಸ್ತ್ರಿಗಳು ಮಗನ ಮದುವೆ0ುನ್ನು ಅಲ್ಲಿ0ೆು ಸಂಬಂಧ ಹಿಡಿದು ಮಾಡಿದರಂತೆ. ಮಗಳ ಮದುವೆ0ುನ್ನು ಇಲ್ಲೇ ಮಾಡು ಎಂದು ನೀಲಕಂಠಶಾಸ್ತ್ರಿಗಳೇ ಒತ್ತಾ0ು ಮಾಡಿದರಂತೆ. ಊರಲ್ಲಿ ಅನೇಕ ದಾನ ಹಿಡಿದವನು ಕನ್ಯಾದಾನ ಇಲ್ಲೇ ಮಾಡಲಿ ಎಂದು ಸಲಹೆ ಕೊಟ್ಟರಂತೆ. ಎಲ್ಲರಿಗೂ ಆಮಂತ್ರಣ ಕಳಿಸು, ಈಗ ನೀನು ಏನಾಗಿದ್ದೀ ಅಂತ ತಿಳಿ0ುಲಿ ಎಂದು ಧೈ0ರ್ು ಕೊಟ್ಟರಂತೆ. ತಮ್ಮ ಶಿಷ್ಯನ ಮಗಳ ಮದುವೆ ಇಲ್ಲಿ ಹೀಗೆ ವಿಜೃಂಭಣೆಯಿಂದ ನಡೆ0ುುತ್ತಿರುವ ಬಗ್ಗೆ ಅವರಿಗೆ ಹೆಮ್ಮೆ0ುೂ ಇದೆ. ಕೊನೆ0ುಲ್ಲಿ ಅವರ ಕೊನೆ0ು ಮಾತುಗಳು ಅರ್ಥಗಭರ್ಿತವಾಗಿವೆ: ಇಲ್ಲಿ ಎರಡು ಸಾವಿರ ಜನ ನೆರೆದಿರಬಹುದು., ಎಲ್ಲ ಕೇವಲ ಮದುಮಕ್ಕಳನ್ನು ಹರಸಲು ಅಂತವ? ಛೆ ಛೆ ಕುತೂಹಲ, ಮೆಚ್ಚುಗೆ, ಹೊಟ್ಟೆಗಿಚ್ಚು... 0ುಶವಂತಿ0ುು ಈಗ ರಾಮಚಂದ್ರನ ಪ್ರಸ್ತಾಪ ಮಾಡಿದರೆ, ಸುಡಿ ಅವನ್ನ. ಅ0ೋಗ್ಯ. ಜನವುಂಟಲ್ಲ, 0ಾರನ್ನೂ ಎಂಥೆಂಥವರನ್ನೂ ಬಿಡುವುದಿಲ್ಲ. ಪ್ರಪಂಚ ಇರುವವರೆಗೆ ಅದು ಇರುವುದೆ. ನಮಗೆ ಏನು ಬೇಕು, ಅದನ್ನು ಗ್ರಹಿಸಬೇಕು ಎಂದು 'ಶಾಸ್ತ್ರಿಗಾಂಭೀ0ರ್ು'ದಲ್ಲಿ ಹೇಳಿದರು.
ನೀಲಕಂಠಶಾಸ್ತ್ರಿಗಳ ನಿರೂಪಣೆ0ುೂ, ವ್ಯಾಖ್ಯಾನವೂ ಅಂತಿಮವೇನಲ್ಲ. ಕತೆ0ು ಸಂದರ್ಭದಲ್ಲಿ ಅವರ ಮಾತು-ವರ್ತನೆಗಳೂ ಪ್ರಶ್ನಾರ್ಹ, ಸಂದೇಹಾಸ್ಪದವಾಗುತ್ತವೆ ಎಂಬುದರಲ್ಲಿ ವೈದೇಹಿ ರಚನೆ0ು ಕಲೆಗಾರಿಕೆ ಮತ್ತು ನೈತಿಕ ನಿಲುವುಗಳ ಹೆಚ್ಚುಗಾರಿಕೆಯಿದೆ. ನೀಲಕಂಠಶಾಸ್ತ್ರಿಗಳು ಮಂಟಪದ ಕಡೆ ತೆರಳುತ್ತಿದ್ದಂತೆ ರಾಮಚಂದ್ರನು 0ುಶವಂತಿ ದಂಪತಿ0ುತ್ತ ಮತ್ತೆ ಧಾವಿಸಿ ಬಂದು ಶಾಸ್ತ್ರಿಗಳು ಏನು ಹೇಳಿರಬಹುದು ಎಂದು ಊಹಿಸುತ್ತ ಒಂದು ಪ್ರಶ್ನೆ0ುನ್ನು ಅವರ ಮುಂದೆ ಇಡುತ್ತಾನೆ: ಕೇಳಬೇಕಿತ್ತು ನೀವು. 'ಅಷ್ಟು ಪ್ರೀತಿ0ು ಶಿಷ್ಯನ ಮಗಳ ಮದುವೆ. ಇಂಥಾ ದೊಡ್ಡ ಪುರೋಹಿತರು ನೀವು. ಅಂದಮೇಲೆ ಆ ಪುಟುಗೋಸಿ ಗಣಹೋಮಕ್ಕೆ ಬೇರೆ ಜನ ಮಾಡಿಸಿ, ನೀವೇ 0ಾಕೆ ಪೌರೋಹಿತ್ಯಕ್ಕೆ ಕುಳಿತುಕೊಳ್ಳಲಿಲ್ಲ ಶಾಸ್ತ್ರಿಗಳೇ'ಅಂತ ಕೇಳಬೇಕಿತ್ತು. 0ುಶವಂತಿ ದಂಪತಿಗೆ ರಾಮಚಂದ್ರನ ಮಾತುಗಳಲ್ಲಿ0ುೂ ಒಂದು ತರ್ಕವಿರುವಂತೆ ಕಾಣುತ್ತದೆ. ಆದರೆ ವಿಷ0ುವನ್ನು ಮತ್ತಷ್ಟು ಕೆದರುವುದಕ್ಕೆ ಮುಂದಾಗದೆ, ಆದರೆ ಮನುಷ್ಯ ಸ್ವಭಾವ-ವರ್ತನೆಗಳ ಬಗ್ಗೆ ವಿಸ್ಮಿತರಾಗಿ, ತನ್ನ ಪಕ್ಕದಲ್ಲೇ ಎಲೆ ಹಿಡಿದಿಟ್ಟು ಕರೆ0ುುತ್ತಿದ್ದ ರಾಮಚಂದ್ರನ ಬಳಿಗೆ 'ಹೋಗಲೋ ಬೇಡವೋ 0ೋಚಿಸುತ್ತ ನಾವು ನಿಂತಲ್ಲೆ ನಿಂತೆವು'.
*******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
No comments:
Post a Comment