stat Counter



Saturday, August 10, 2013

ಕಾವ್ಯಾ ಕಡಮೆ- ಧ್ಯಾನಕೆ ತಾರೀಕಿನ ಹಂಗಿಲ್ಲ { ಕವನ ಸಂಕಲನ -2013 ]

ಕಾವ್ಯಾ ಕಡಮೆ ಅವರ ’ ಧ್ಯಾನಕೆ ತಾರೀಕಿನ ಹಂಗಿಲ್ಲ ’ ಸಂಕಲನದಲ್ಲಿ 34  ಕವನಗಳಿವೆ.
 ಈ ಸಂಕಲನದಲ್ಲಿ ’ಎಸ್ ಕೆಫೆ ’, ’ ನೀನು ಪದ್ಯಗಳು'," ಬರುತ್ತೇನೆ ’ ಮೀನು ಫ್ರೈ ’ ’ ಬೆಳಕ ಸುಳಿವು ’ ಪಾನಿಪುರಿಯ ಹುಡುಗ ’ ಮೊದಲ ಓದಿಗೆ ನನಗೆ  ಇಷ್ಟವಾದ ಕವನಗಳು .’ ಬರುತ್ತೇನೆ ’ ಹೊಸ ತಲೆಮಾರಿನ  ಕನ್ನಡ ಕಾವ್ಯದ ಒಂದು ಮುಖ್ಯ ಕವನ.
  " ಆದೇನೆಯೇ  ಒಮ್ಮೆಯಾದರು ನಾನು
    ಲ್ಯಾಂಬ್ರೆಟಾ ವೆಸ್ಪಾ ಬೆನ್ನ ಹಿಡಿಯ ಹೋದ
  ಕೀಲು ಕುದುರೆ ರಾಜ ಕುಮಾರಿ ? "
  ಎನ್ನುವ ಕಾವ್ಯ  ಕಡಮೆ  ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯ ಪರಂಪರೆಯ ಸತ್ವವನ್ನು ಸವಿದು , ಇಪ್ಪತ್ತೊಂದನೆಯ ಶತಮಾನದ  ವರ್ತಮಾನವನ್ನು ನೋಡುತ್ತ ಬೆಳೆಯುತ್ತಿದ್ದಾರೆ .
     " ಒಂದು ಬಿಸಿಯಪ್ಪುಗೆ- ಉಸಿರ ಸ್ಪರ್ಶ
      ನೀಡಲು ಸೋಲುವ
      ಮೊಬೈಲ್-ಫೇಸ್ ಬುಕ್-ಇ ಮೇಲ್
     ಬಂದು ಬಾಗಿಲು ಬಡಿಯುತ್ತಿವೆ " [ ಬೆಳಕ ಸುಳಿವು ]
  ’ ಬೆಳಕ ಸುಳಿವು ’ , ’ಎಸ್ ಕೆಫೆ ’  ಬರುತ್ತೇನೆ ’ -  ಇಂಥ ಕವನಗಳಲ್ಲಿ ಹೊಸ ತಲೆಮಾರಿನ ತರುಣಿಯರ ಅಂತರಂಗದ ಲೋಕ  ಅನಾವರಣಗೊಳ್ಳುತ್ತದೆ .
  " ನಾಳೆಯ ದಿನ ಹೊರಬಾಗಿಲಿಗೆ ಬಂದು ಬದುಕಿನ ಗಾಢ  ವರ್ಣಗಳಿಗೆ ಮುಖ ಮಾಡಬಲ್ಲೆನೇನೊ ಅಂತ  ಪ್ರಾಮಾಣಿಕವಾಗಿ ನಂಬಿದ್ದೇನೆ " ಎನ್ನ್ಮುವ  ಕಾವ್ಯಾ ಕಡಮೆ ಅವರಿಗೆ " ಪ್ರತಿಭೆಗೆ ವಿಮರ್ಶೆಯ ಹಂಗಿಲ್ಲ " ಎನ್ನುತ್ತ ಶುಭ ಹಾರೈಸುತ್ತೇನೆ.
             - ಮುರಳೀಧರ ಉಪಾಧ್ಯ ಹಿರಿಯಡಕ
DHYANAKE THAREEKINA HANGILLA
{ collection of poems - Kannada ]
 By KAVYA KADAME
Published by
AHARNISHI PRAKASHANA
 Jnanavihara extention ,
Vidyanagara,
 Shimoga- [ Karnataka }
email-akshatha.shimoga@gmail.com
 First edition- 2013
 Price-Rs- 70
Pages-70
 Cover page Design -Apara


No comments:

Post a Comment