ಶಂಕರ ಮೊಕಾಶಿ ಪುಣೇಕರ ಅವರ ಗಂಗವ್ವ ಮತ್ತು ಗಂಗಾಮಾಯಿ
ಗಂಗವ್ವ ಮತ್ತು ಗಂಗಾಮಾಯಿ ಶಂಕರ ಮೊಕಾಶಿ ಪುಣೇಕರ ಅವರ ಮೊದಲನೆ0ು ಕಾದಂಬರಿ. 1955-56ರಲ್ಲಿ ರಚಿತವಾದ ಈ ಕಾದಂಬರಿ0ುು ಧಾರವಾಡದ ಮನೋಹರ ಗ್ರಂಥಪ್ರಕಾಶನ ಸಮಿತಿಯಿಂದ 1957ರಲ್ಲಿ ಪ್ರಕಟವಾಯಿತು. ಇಪ್ಪತ್ತನೆ0ು ಶತಮಾನದ ಆರಂಭದಲ್ಲಿ ಕಾಣಿಸಿಕೊಂಡ ಕಾದಂಬರಿ ಎಂಬ ಹೊಸ ಪ್ರಕಾರವು ಆ ವೇಳೆಗೆ ನವೋದ0ು, ಪ್ರಗತಿಶೀಲ ಚಳುವಳಿಗಳನ್ನು ಹಾ0ು್ದು ಬಂದು ತನ್ನ ನೆಲೆಗಟ್ಟನ್ನು ಭದ್ರಪಡಿಸಿಕೊಂಡಿತ್ತು. ಅಷ್ಟೇ ಅಲ್ಲ, ಕಾದಂಬರಿ ರಚನೆ0ುಲ್ಲಿ ಹೊಸ ಪ್ರ0ೋಗಗಳಿಗೆ ತೆರೆದುಕೊಳ್ಳಲಾರಂಭಿಸಿದ್ದ ಕಾಲ ಅದು. ಕನ್ನಡ ನವ್ಯ ಸಾಹಿತ್ಯದ ಅರಂಭ ಕಾಲ ಅದು. ಈ ಹಂತದಲ್ಲಿ ಮೊಕಾಶಿ ಅವರು ಹೊಸ ಪ್ರ0ೋಗಗಳಿಗೆ ಮುಂದಾಗದೆ 'ಸಾಂಪ್ರದಾ0ುಕ' ಕಾದಂಬರಿ0ೊಂದನ್ನು ಬರೆದದ್ದು ಕುತೂಹಲಕಾರಿ0ಾಗಿದೆ. ಅದಕ್ಕೆ ಕಾರಣವನ್ನೂ ಅವರು ತಮ್ಮ ಕಾದಂಬರಿ0ು ಉಪಸಂಹಾರದ ಸಂದರ್ಭದಲ್ಲಿ ಕೊಟ್ಟಿದ್ದಾರೆ: ಇಪ್ಪತ್ತನೆ0ು ಶತಮಾನದ ಮಧ್ಯಭಾಗದಲ್ಲಿ, ಸ್ವಾತಂತ್ರ್ಯೋತ್ತರ ಸಮ0ುದಲ್ಲಿ, ಅಣು0ುುಗದಲ್ಲಿ ಈ ಸಂಪ್ರದಾ0ುಶರಣ ಕಾದಂಬರಿ ಹುಟ್ಟಿದೆ. ಕನ್ನಡದಲ್ಲಿ ಪರಂಪರೆ ಹುಟ್ಟಲಿ ಮೊದಲು; ಅಮೇಲೆ ಅದನ್ನು ಮುರಿ0ುುವ ಸೊಗಸೇ ಬೇರೆ ಎಂದು ಪ್ರಸ್ತುತ ಲೇಖಕನು ಸೂಚಿಸುತ್ತಾನೆ. ಅದೇ ಹಟದಿಂದ ಸಾಂಪ್ರದಾಯಿಕ ಮುದ್ರೆಗಳನ್ನು ಮೈತುಂಬ ಒತ್ತಿಕೊಂಡಿದ್ದಾನೆ. ಕನರ್ಾಟಕದಲ್ಲಿ ಉತ್ತಮ ಸಾಂಪ್ರದಾಯಿಕ ಕಾದಂಬರಿಗಳು ಹುಟ್ಟಿ ಪರಂಪರೆ ನಿಮರ್ಾಣವಾಗಲಿ, ಎಂಬ ದೂರದ ಆಸೆ0ೆು ಈ ಕಾದಂಬರಿ0ಾಗಿ ನಿಂತಿದೆ. ತಾನು ಬಹಳ ಮುಂದೆ ಹೋಗದಿದ್ದರೂ ತುಳಿ0ುಬಹುದಾದ ಹಳೆ0ು ದಾರಿ0ೊಂದು ಇದೆ ಎಂದು ಕೈ ಚಾಚಿ ನಿಂತುಕೊಂಡಿದೆ, ಅಷ್ಟೆ.
ಇದು ಒಂದು ರೀತಿ0ುಲ್ಲಿ ಎಮ್.ಎಸ್.ಪುಟ್ಟಣ್ಣನವರು ಹಾಕಿಕೊಟ್ಟ ಮಾರ್ಗಕ್ಕೆ ಹತ್ತಿರವಾಗಿದೆ. ಹಾಗೆ, ನಿಜವಾಗಿ ಆ ಮಾರ್ಗ ಮುಂದುವರೆದದ್ದು ಮಾಸ್ತಿ0ುವರಲ್ಲಿ0ೆು. ಕಂಬಾರರ 'ಕರಿಮಾಯಿ', ಲಂಕೇಶರ 'ಮುಸ್ಸಂಜೆ0ು ಕಥಾಪ್ರಸಂಗ'ಗಳಲ್ಲಿ0ುೂ ಆ ಛಾ0ೆು0ುನ್ನು ಕಾಣಬಹುದು. ಆದರೆ ನವ್ಯ ಮತ್ತು ನವ್ಯೋತ್ತರ ಸಂದರ್ಭಗಳಲ್ಲಿ ಕನ್ನಡ ಕಾದಂಬರಿ ಹೆಚ್ಚು ಹೆಚ್ಚು ಪ್ರ0ೋಗಶೀಲವಾಯಿತು. ವಾಸ್ತವದ ರಾಜಮಾರ್ಗವನ್ನು ಬಿಟ್ಟು ತನ್ನದೇ ಒಳದಾರಿ-ಕವಲುದಾರಿಗಳನ್ನು ಶೋಧಿಸಿಕೊಳ್ಳುತ್ತಾ ಮುಂದುವರೆಯಿತು. ಮತ್ತೆ ಎಷ್ಟೋ ವರ್ಷಗಳ ನಂತರ ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳ , ಎಚ್.ನಾಗವೇಣಿ ಅವರ ಗಾಂಧಿ ಬಂದ, ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ, ಬೊಳುವಾರು ಮಹಮದ್ ಕುಂಞಿ ಅವರ ಸ್ವಾತಂತ್ರ್ಯದ ಓಟ ಮುಂತಾದ ಕಾದಂಬರಿಗಳಲ್ಲಿ 'ಸಾಂಪ್ರದಾಯಿಕ' ಕಾದಂಬರಿ0ು ಆಕೃತಿ ಮತ್ತೆ ಕಾಣಿಸಿಕೊಂಡ ಹಾಗಿದೆ. ಸದಾ ಚಲನಶೀಲವಾಗಿರುವ, ಪ್ರ0ೋಗಶೀಲವಾಗಿರುವ ಕನ್ನಡ ಕಾದಂಬರಿ ಪರಂಪರೆ0ುಲ್ಲಿ 'ಸಾಂಪ್ರದಾಯಿಕ' ಕಾದಂಬರಿ0ುೂ ಒಂದು 'ಪ್ರ0ೋಗ'ವಾಗಿ0ೆು ಆಗಿ ಉಳಿದಿರುವುದು ಕುತೂಹಲದ ಸಂಗತಿ0ಾಗಿದೆ. ಅದೇನೇ ಇದ್ದರೂ ಮೊಕಾಶಿ0ುವರ ಗಂಗವ್ವ ಮತ್ತು ಗಂಗಾಮಾಯಿ ಒಂದು ಗಟ್ಟಿಮುಟ್ಟಾದ ಬರಹ ಎಂಬುದರಲ್ಲಿ ಎರಡು ಮಾತಿಲ್ಲ. ಇದು ನಿಸ್ಸಂದೇಹವಾಗಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು. ಕನ್ನಡ ಓದುಗ ಮತ್ತು ವಿಮರ್ಶಕ ಎರಡೂ ವಲ0ುಗಳಲ್ಲಿ ಪ್ರಿ0ುವಾದ ಈ ಕಾದಂಬರಿ ಈಗಾಗಲೇ ಹಲವು ಮುದ್ರಣಗಳನ್ನು ಕಂಡಿದೆ.
ಈ ಕಾದಂಬರಿ0ುು ಮುಖ್ಯವಾಗಿ ಮೂರು ಕುಟುಂಬಳ ಕಥೆಗಳನ್ನು ಒಳಗೊಂಡಿದೆ. ಹೆಚ್ಚಿನ ಒತ್ತು ಗಂಗವ್ವಳ ಕುಟುಂಬದ ಮೇಲೆ ಬಿದ್ದಿರುವುದರಿಂದ ಕಾದಂಬರಿ0ು ಶೀಷರ್ಿಕೆಗೆ ಈ ಹೆಸರು ಥಳಕು ಹಾಕಿಕೊಂಡಿರಬಹುದು. ಹಾಗೆ0ೆು ಈ ಗಂಗವ್ವಳು ಗಂಗೆ0ು ಬಗ್ಗೆ ಇಟ್ಟುಕೊಂಡ ದ್ವಂದ್ವಾತ್ಮಕ-ಸಮಸ್ಯಾತ್ಮಕ ನಿಲುವುಗಳಲ್ಲಿ ಅವಳ ಜೀವನಸಂಕಲ್ಪವು ಒಡಮೂಡುವುದರಿಂದ ಅವೆಲ್ಲದರ ಕ್ರೋಡೀಕೃತ ರೂಪವೆಂಬಂತೆ ಲೇಖಕರು ತಮ್ಮ ಕಾದಂಬರಿ0ುನ್ನು ಗಂಗವ್ವ ಮತ್ತು ಗಂಗಾಮಾಯಿ ಎಂದು ಕರೆದಿರಬಹುದು. ಗಂಗವ್ವಳು ಮಧ್ಯವ0ುಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ತನ್ನ ಒಬ್ಬನೇ ಮಗನಾದ ಕಿಟ್ಟಿ0ುನ್ನು ಕಷ್ಟದಿಂದ ಬೆಳೆಸಿರುವಂಥವಳು. ಅವನ 0ೋಗಕ್ಷೇಮ ಮತ್ತು ಭವಿಷ್ಯಗಳನ್ನೇ ತನ್ನ ಜೀವನದ ಗುರಿ0ಾಗಿಟ್ಟುಕೊಂಡಿರುವವಳು. ಒಮ್ಮೆ ಅವಳು ಕಾಶೀ0ಾತ್ರೆ ಮಾಡಿ, ಗಂಗೋದಕವನ್ನು ಒಂದು ಬಿಂದಿಗೆ0ುಲ್ಲಿ ತುಂಬಿಕೊಂಡು ಮರು ಪ್ರ0ಾಣದಲ್ಲಿದ್ದಾಗ ಅವಳ ಮನಸ್ಸಿನಲ್ಲಿ ಒಂದು ಜಿಜ್ಞಾಸೆ ಏಳುತ್ತದೆ. ತಾನು ಸಾ0ುುತ್ತಿರುವಾಗ ಕಿಟ್ಟಿ ತನ್ನ ತಲೆ0ು ಬಳಿ ಕುಳಿತು ಬಾ0ುಲ್ಲಿ ಗಂಗೋದಕ ಹಾಕದ ಹೊರತು ತನಗೆ ಸದ್ಗತಿಯಿಲ್ಲ ಎಂದು ಅವಳು ಇದುವರೆಗೆ ನಂಬಿದ್ದಳು. ಆದರೆ ಈಗ ತನ್ನ ಸಾವಿನ 0ೋಚನೆ0ೆು ಅವಳ ಮನಸ್ಸನ್ನು ಕ್ಷುಬ್ಧಗೊಳಿಸುತ್ತದೆ. ಕಿಟ್ಟಿ0ು ನೆನಪಾಗುತ್ತದೆ: ಕಿಟ್ಟಿ0ು ಮದುವೆ0ೊಂದಾದರೆ ಮುಗಿಯಿತೇ? ತನ್ನ ಬಾಳಿನ ಸಾರ್ಥಕತೆ, ಧನ್ಯತೆ ನಂತರ ಬರಬೇಕಾಗಿದೆ. ಅವನ ಬದುಕನ್ನೂ ತಾನು ಕಾಣಬೇಕು. ನಾಲ್ಕು ಜನರು ಅವನನ್ನು ಹೊಗಳುತ್ತಿರುವುದನ್ನು ತಾನು ಕೇಳಬೇಕು. ಅವನ ಮಕ್ಕಳು ಅಜ್ಜಿ0ು ಅಂಗೈಬುತ್ತಿಗಾಗಿ ತನ್ನ ಸುತ್ತು ಸುಳಿದಾಡಬೇಕು. ಅವರಿಗೆ ತಾನು ಕಥೆ ಹೇಳಿ 'ತಾರಮ್ಮ0್ಯು' ಮಾಡಿಸಬೇಕು. ಅದಕ್ಕಾಗಿ ತಾನು ಸಾ0ುಲಾರಳು. ಕೊನೆ0ುವರೆಗೆ ಸಾಧ್ಯವಿದ್ದ ಮಟ್ಟಿಗೆ ಬದುಕುವಳು! ಬಾಳುವ ಆಸೆ ಅವಳ ಹೃದ0ುವನ್ನು ಉನ್ನತವಾಗಿ ಎತ್ತಿಹಿಡಿಯಿತು. ಈ ಕಲ್ಪನೆ0ುಲ್ಲಿ ಕಾಶೀತಂಬಿಗೆ ಅವಳಿಗೆ ತಾನು ಬ0ುಸದ ಸಾವಿನ ಮುನ್ಸೂಚನೆ0ುಂತೆ ಕಂಡು ಇರುಸುಮುರುಸಾಗಿ ಗಂಗಾಜಲ ತುಂಬಿದ ಬಿಂದಿಗೆ0ುನ್ನು ಓಡುತ್ತಿದ್ದ ರೈಲಿನ ಕಿಟಕಿ0ು ಆಚೆ ಬರಿದು ಮಾಡಿಬಿಡುತ್ತಾಳೆ. ಕಾಶೀ0ಾತ್ರೆ ಮುಗಿಸಿ ಬಂದದ್ದಕ್ಕಾಗಿ ಎಲ್ಲರೂ ಅವಳನ್ನು ಅಭಿನಂದಿಸುತ್ತಾರೆ. ಆದರೆ ಗಂಗಾಮಾಯಿ0ುನ್ನು ರೇಲ್ವೆಬಂಡಿಯಿಂದ ಹಾಗೆ ಸುರುವಿದ ಬಗ್ಗೆ ಟೀಕಿಸುತ್ತಾರೆ. ಮತ್ತೆ ಅವಳು ಗಂಗಾಮಾತೆ0ು ಪಾದಕ್ಕೆ ಹೋಗಿಬೀಳಬೇಕು ಎನ್ನುತ್ತಾರೆ. 'ಆತ್ಯು, ಇನ್ನೊಮ್ಮೆ ಕಾಶೀ0ಾತ್ರೆ0ು 0ೋಗ ಇದ್ದರೆ ಆಗಲಿ' ಎಂದು ಗಂಗವ್ವ ಸಮಾಧಾನ ಹಚ್ಚಿಕೊಳ್ಳುತ್ತಾಳೆ. ಮತ್ತೊಮ್ಮೆ ಅವಳಿಗೆ ಕಾಶೀ0ಾತ್ರೆ0ು 0ೋಗವೇನೂ ಬರುವುದಿಲ್ಲ. ಆದರೆ ಎಷ್ಟೋ ವರ್ಷಗಳ ನಂತರ ಅ0ಾಚಿತವಾಗಿ ಗಂಗಾಜಲವೇ ಅವಳ ಮನೆಗೆ ಬರುತ್ತದೆ. ಅವಳು ಪುನೀತಳಾಗುತ್ತಾಳೆ. ಈ ಎರಡು ಘಟನೆಗಳ ನಡುವಿನ ದೀರ್ಘ ಅವಧಿ0ುಲ್ಲಿ ಗಂಗವ್ವಳ ಬದುಕು ಸಾಗಿ ಬಂದ ಪರಿ0ುನ್ನು ಮೊಕಾಶಿ0ುವರ ಕಾದಂಬರಿ ದಟ್ಟವಾದ ವಿವರ-ವರ್ಣನೆಗಳಲ್ಲಿ ನಿರೂಪಿಸುತ್ತದೆ. ಅವಳ ಬದುಕು ಮುಖ್ಯವಾಗಿ ಅವಳ ಮಗ ಕಿಟ್ಟಿ0ು ಬದುಕಿನೊಂದಿಗೆ ಬೆಸೆದುಕೊಂಡಿದೆ. ಕಿಟ್ಟಿ0ು 'ಶೀಲ'ವು ಗಂಗವ್ವಳ ಬದುಕನ್ನು ಪ್ರಭಾವಿಸಿದ ಬಗೆ ಈ ನಿರೂಪಣೆ0ುಲ್ಲಿ ದಾಖಲಾಗುತ್ತದೆ.
ಗಂಗವ್ವಳ ವೈ0ುಕ್ತಿಕ ಬದುಕು ಮಾತ್ರವಲ್ಲ, ಅವಳ ಕುಟುಂಬದ ಏಳುಬೀಳುಗಳೂ ಇತರ ಎರಡು ಕುಟುಂಬಗಳ ಸಹವಾಸದಲ್ಲಿ ನಿರ್ಧರಿತವಾದ ಬಗೆ0ುನ್ನು ನಿರೂಪಿಸುವಲ್ಲಿ ಮೊಕಾಶಿ0ುವರ ಕಾದಂಬರಿಗೆ ಒಂದು ಸಣ್ಣ ಮಹಾಕಾವ್ಯದ ಬೀಸು ಮತ್ತು ಮಹತ್ವಾಕಾಂಕ್ಷೆಗಳು ಒದಗಿ ಬಂದುಬಿಟ್ಟಿವೆ. ಒಂದು, ಅವಳ ತಮ್ಮ ರಾಘಪ್ಪ ಮತ್ತು ಅವನ ಕುಟುಂಬ; ಎರಡು, ನೆರೆಮನೆ0ು ದೇಸಾ0ುರು ಮತ್ತು ಅವರ ಕುಟುಂಬ. ರಾಘಪ್ಪನು ಕಾದಂಬರಿ0ುುದ್ದಕ್ಕೂ ಗಂಗವ್ವಳನ್ನು ಹಲವು ರೀತಿ0ುಲ್ಲಿ 'ಕಾಡು'ತ್ತಾ ಹೋಗುತ್ತಾನೆ; ದೇಸಾ0ುರು ಗಂಗವ್ವಳನ್ನು ಹಲವು ಬಗೆಗಳಲ್ಲಿ 'ಕಾ0ುು'ತ್ತಾ ಹೋಗುತ್ತಾರೆ. ಇದರ ಪರಿಣಾಮವೇನೆಂದರೆ ಪರಸ್ಪರ ಪರಿಚ0ು-ವ್ಯವಹಾರಗಳೇನೂ ಇರದಿದ್ದ ರಾಘಪ್ಪ-ದೇಸಾ0ುರು ಗಂಗವ್ವಳಿಗಾಗಿ ಮುಖಾಮುಖಿ0ಾಗಿ ನಿಲ್ಲುತ್ತಾರೆ. ಹಾಗಾಗಿ ರಾಘಪ್ಪ-ಗಂಗವ್ವರ ಸಂಘರ್ಷವು ಅವರ ಕುಟುಂಬಗಳನ್ನು ದಾಟಿ ತುಸು ಸಾರ್ವಜನಿಕ ಎಂದು ಹೇಳಬಹುದಾದ ವಲ0ುವನ್ನು ಪ್ರವೇಶಿಸಿಬಿಡುತ್ತದೆ. ಎಂ.ಎಸ್.ಪುಟ್ಟಣ್ಣನವರ ಮಾಡಿದ್ದುಣ್ಣೋ ಮಹಾರಾ0ು ಕಾದಂಬರಿಗೆ ರಾಮಾ0ುಣದ ಛಾ0ೆು ಇದ್ದರೆ ಗಂಗವ್ವ ಮತ್ತು ಗಂಗಾಮಾಯಿಗೆ ಒಂದು ರೀತಿ0ುಲ್ಲಿ ಮಹಾಭಾರತದ ಪ್ರಭಾವಳಿ ಇದ್ದ ಹಾಗೆ ತೋರುತ್ತದೆ. ಗಂಗವ್ವಳ ಪಾಲಿಗೆ ರಾಘಪ್ಪನು ದು0ರ್ೊಧನ-ಶಕುನಿ0ುರಂತೆ ಇದ್ದರೆ ದೇಸಾ0ುರು ಕೃಷ್ಣನಂತೆ ಉದ್ದಕ್ಕೂ ಗಂಗವ್ವಳ ರಕ್ಷಣೆ0ುನ್ನು ಮಾಡುತ್ತಾರೆ. ಹಾಗೆಂದು ಮೊಕಾಶಿ0ುವರ ಕಾದಂಬರಿ0ು ಪಾತ್ರ-ಸನ್ನಿವೇಶಗಳನ್ನು ಮಹಾಭಾರತದ ಪಾತ್ರ-ಸನ್ನಿವೇಶಗಳೊಂದಿಗೆ ಸರಳ ಸಮೀಕರಣವನ್ನು ಮಾಡಬಾರದು. ಮುಖ್ಯವಾದ ಮಾತೆಂದರೆ ಮೊಕಾಶಿ0ುವರ ಪ್ರತಿಭೆ0ುು ಪಾತ್ರ-ಪಾತ್ರಗಳ, ಕುಟುಂಬ-ಕುಟುಂಬಗಳ ಸಂಘರ್ಷಗಳನ್ನು ಚಿಲ್ಲರೆ ಜಗಳವಾಗಿ ನೋಡದಿರುವುದು; ಒಂದು ರೀತಿ0ುಲ್ಲಿ ಅವುಗಳನ್ನು ಧರ್ಮ0ುುದ್ಧವೇನೋ ಎಂಬ ರೀತಿ0ುಲ್ಲಿ ಉನ್ನತೀಕರಿಸಿರುವುದು.
ಈ ಕಾದಂಬರಿ0ುು ಸ್ವಾತಂತ್ರ್ಯಪೂರ್ವ ಧಾರವಾಡದಲ್ಲಿ ವಿನ್ಯಸ್ತಗೊಂಡಿದೆ. ಒಂದು ಕಡೆ ಜಮೀಂದಾರೀ ಪದ್ಧತಿ0ುು ಇನ್ನೂ ವಿಜೃಂಭಿಸುತ್ತಿದೆ. ಇನ್ನೊಂದು ಕಡೆ ಗಾಂಧಿ ಭಾರತೀ0ುರ ಮನಸ್ಸನ್ನು ಆವರಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಸ್ವಾತಂತ್ರ್ಯ ಚಳುವಳಿ ನಡೆದಿದೆ. ಇಂಥ ಸಂಕ್ರಮಣ ಕಾಲದಲ್ಲಿ ಧಾರವಾಡದಲ್ಲಿ ನೆಲಸಿರುವ ಮೂರು ಕುಟುಂಬಗಳ ಕಥೆ0ುನ್ನು ಅವುಗಳ ಪರಸ್ಪರ ಸಂಬಂಧಗಳಲ್ಲಿ ಮೊಕಾಶಿ0ುವರ ಕಾದಂಬರಿ ನಿರೂಪಿಸುತ್ತದೆ. ಆ ಕಾಲದ ಸಾಮಾಜಿಕ-ರಾಜಕೀ0ು ವಿದ್ಯಮಾನಗಳಿಗೆ ಒತ್ತು ನೀಡದೆ ಕೌಟುಂಬಿಕ ನೆಲೆ0ುಲ್ಲಿ ತನ್ನ ಪಾತ್ರಗಳ ಶೀಲ ನಿರೂಪಣೆ0ು ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿರುವ ಈ ಕಾದಂಬರಿ0ುು ತನ್ನ ಸೀಮಿತ ಅವಕಾಶದಲ್ಲೇ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಸಂಕೀರ್ಣ ನೆಲೆಗಳನ್ನು ಸ್ಪಶರ್ಿಸಲು ತುಂಬ ಸಫಲವಾಗಿದೆ. ತನ್ನ ಗಂಡನಿಗೆ ಮೋಸಮಾಡಿ, ತಮ್ಮ ಆಸ್ತಿಗೆ ಸಂಚಕಾರ ತಂದು, ತನ್ನ ಗಂಡನ ಸಾವಿಗೆ ಕಾರಣನಾದನೆಂದು ಗಂಗವ್ವಳಿಗೆ ತನ್ನ ತಮ್ಮ ರಾಘಪ್ಪನ ಮೇಲೆ ಸಿಟ್ಟು ಮತ್ತು ದ್ವೇಷ. ಅವನ ನೆರಳೂ ತನ್ನ ಮಗ ಕಿಟ್ಟಿ0ು ಮೇಲೆ ಸುಳಿ0ುಬಾರದೆಂದು ಅವಳ ಹಂಬಲ. ವ್ಯಾವಹಾರಿಕವಾಗಿ ತುಂಬ ಜಾಣನೂ, ಕುಟಿಲನೂ, ಉಪಾ0ುಗಾರನೂ ಆದ ರಾಘಪ್ಪನಿಗೆ ತನ್ನ ಅಕ್ಕನ ಬಗ್ಗೆ ಒಂದು ಬಗೆ0ು ಅಳುಕು ಮತ್ತು ಭ0ು. ಅವಳಿಗೆ ಮತ್ತು ಅವಳ ಗಂಡನಿಗೆ ತನ್ನಿಂದ ತುಸು ಅನ್ಯಾ0ುವಾಗಿದ್ದರೂ ಅವಳೆಣಿಸಿದಂತೆ ಆ ಪ್ರಮಾಣದ ವಂಚಕ ತಾನಲ್ಲ ಎಂದು ರಾಘಪ್ಪನ ವಾದ. ಪರಿಸ್ಥಿತಿ0ು ಲಾಭ ಪಡೆ0ುುವುದಕ್ಕಾಗಿ ಮತ್ತು ಹಳೆ0ು ಜಗಳವನ್ನು ಹೇಗಾದರೂ ಬಗೆಹರಿಸಿಕೊಳ್ಳುವ ಸಲುವಾಗಿ ಕಿಟ್ಟಿಗೆ ತನ್ನ ಮಗಳು ರತ್ನಳೊಂದಿಗೆ ಲಗ್ನ ಮಾಡಿ ಆ ಮೂಲಕ ಮತ್ತೆ ತಾನು ಗಂಗವ್ವಳ ಮೇಲೆ ಜ0ು ಸಾಧಿಸಬೇಕೆಂಬುದು ರಾಘಪ್ಪನ ಹುನ್ನಾರ. ಕಷ್ಟದಿಂದ ತನ್ನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಿ ತನಗೆ ಸರಕಾರಿ ಕೆಲಸ ಸಿಗುವಂತೆ ಮಾಡಿದ ತನ್ನ ತಾಯಿ0ು ಬಗ್ಗೆ ಕಿಟ್ಟಿಗೆ ಭ0ು-ಭಕ್ತಿಗಳಿರುವುದು ನಿಜ. ಆದರೆ ತನ್ನ ಸ್ವಂತ ವ್ಯಕ್ತಿತ್ವವನ್ನೂ ಅಸ್ಮಿತೆ0ುನ್ನೂ ಗುರುತಿಸದೆ ತನ್ನ ಮೇಲೆ 0ಾವಾಗಲೂ ಋಣಭಾರವನ್ನು ಹೇರಿ ಅಂಕೆ0ುಲ್ಲಿಟ್ಟುಕೊಂಡಿದ್ದಾಳೆಂದು ಕಿಟ್ಟಿಗೆ ಅವಳ ಮೇಲೆ ಸಿಟ್ಟು. ಅವಕಾಶ ಸಿಕ್ಕಿದಾಗಲೆಲ್ಲ ಅವಳ ವಿರುದ್ಧ ಬಂಡೇಳಬೇಕೆಂಬ ಹಂಬಲ ಅವನಿಗೆ. ಇವೆಲ್ಲಸೇರಿ ರಾಘಪ್ಪನ ಮಗಳು ಕಿಟ್ಟಿ0ೊಂದಿಗೆ ಅವನ ಮದುವೆ0ುೂ ಆಗುತ್ತದೆ. ಆದರೆ ಸಂಘರ್ಷ ನಿಲ್ಲುವುದಿಲ್ಲ. ಅದು ಬೇರೆ ರೂಪಗಳನ್ನು ಪಡೆ0ುುತ್ತದೆ ಅಷ್ಟೆ. ಕಿಟ್ಟಿ0ು ಮದುವೆ0ು ಹಿನ್ನೆಲೆ0ುಲ್ಲಿ ದೇಸಾ0ುರೊಂದಿಗೆ ಪ್ರಾರಂಭವಾದ ರಾಘಪ್ಪನ ಸ್ಪಧರ್ೆ0ುೂ ಬೇರೆಬೇರೆ ಕಾರಣಗಳಿಂದ ಬೆಳೆ0ುುತ್ತದೆ ಮತ್ತು ಪ್ರತಿಘಟ್ಟದಲ್ಲೂ ತೀವ್ರವಾಗತೊಡಗುತ್ತದೆ. ಗಂಗವ್ವಳೊಂದಿಗಿನ ಸಂಘರ್ಷಕ್ಕೆ ಅವಳ ಮಗ ಕಿಟ್ಟಿ0ುನ್ನು ಬಳಸಿಕೊಳ್ಳುವಂತೆ ಅವನು ದೇಸಾ0ುರೊಂದಿಗಿನ ಸಂಘರ್ಷಕ್ಕೆ ಅವರ ಮಗ ವಸಂತರಾ0ುನನ್ನು ಬಳಸಿಕೊಳ್ಳುತ್ತಾನೆ. ಇದರ ಪರಿಣಾಮವು ದೇಸಾ0ುರ ನೆಮ್ಮದಿ0ುನ್ನು ಕದಡುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಸ್ವತಃ ರಾಘಪ್ಪನ ಬದುಕೂ ವಿಚಿತ್ರ ತಿರುವುಗಳಿಗೆ ಸಿಲುಕಿಕೊಳ್ಳುತ್ತದೆ. ಅಷ್ಟೇ ಅಲ್ಲ ಅದು ಅವನ ಹೆಂಡತಿ ಚಂಪಾಳ ಸಾವಿಗೆ, ಎರಡನೆ0ು ಮಗಳು ಶಾಂತಾಳ ಶೀಲಭಂಗಕ್ಕೆ ಮತ್ತು ಮೊದಲ ಮಗಳು ರತ್ನಾ ತನ್ನ ಬಗ್ಗೆ ದ್ವೇಷವನ್ನು ತಾಳುವುದಕ್ಕೆ ಕಾರಣವಾಗುತ್ತದೆ. ಒಂದರ್ಥದಲ್ಲಿ ಅವನ ಗೆಲುವುಗಳೇ ಅವನ ಸೋಲುಗಳಿಗೂ ಕಾರಣವಾಗಿ ಅವನು ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕಿಟ್ಟಿ ಮತ್ತು ರತ್ನಾ ಗಂಗವ್ವಳಿಗೆ ವಿಧೇ0ುರಾಗುತ್ತಾರೆ. ಗಂಗವ್ವಳ ಮಾತೃಸ್ಥಾನ ಮತ್ತೆ ಗೌರವ0ುುತವಾಗಿ ಪ್ರತಿಷ್ಠಾಪಿತವಾಗುತ್ತದೆ. ಈ ಎಲ್ಲ ಹೊ0್ದಾಟ-ಸಂಘರ್ಷಗಳ ತರುವಾ0ು ಕದಡಿದ್ದ ಗಂಗವ್ವಳ ಮನಸ್ಸು ತಿಳಿ0ಾಗುತ್ತದೆ ಮತ್ತು ಅವಳ ಕುಟುಂಬದಲ್ಲಿ ಶಾಂತಿ ನೆಲಸುತ್ತದೆ ಎಂಬ ಸೂಚನೆ0ುಲ್ಲಿ ಕಾದಂಬರಿ ಮುಗಿ0ುುತ್ತದೆ. ದೇಸಾ0ುರಿಗೆ ರಾಘಪ್ಪನ ವಿರುದ್ಧ ಜ0ು ದೊರಕಿದರೂ ಆ ಜ0ುದಲ್ಲಿ ಅವರ ಸೋಲೂ ಅಡಗಿರುತ್ತದೆ. ತಾನು ಕೆಡಿಸಿದ ರಾಘಪ್ಪನ ಮಗಳು ರತ್ನಾಳನ್ನು ವಸಂತರಾ0ು ಮದುವೆ0ಾಗುತ್ತಾನೆ ಮತ್ತು ಅಷ್ಟರ ಮಟ್ಟಿಗೆ ದೇಸಾ0ುರ ವರ್ಚಸ್ಸೂ ಕುಗ್ಗುತ್ತದೆ. ಆದರೆ ಈ ಪ್ರಕರಣದಲ್ಲಿ ಅವರ ಕರುಣೆ0ುೂ ಜಾಗೃತವಾಗಿ ಅದು ನೆರೆಹೊರೆ0ುವರ ಶ್ಲಾಘನೆಗೂ ಒಳಗಾಗುತ್ತದೆ. ತಮ್ಮ ಪಾತ್ರಗಳನ್ನು ತೀವ್ರವಾದ ಸಂಘರ್ಷಗಳಿಗೆ ದೂಡಿದರೂ ಅವುಗಳನ್ನು ಲೇಖಕರು ಕಪ್ಪು ಬಿಳುಪು ಪಾತ್ರಗಳಾಗಿ ಮಾಡುವುದಿಲ್ಲ. ಒಂದೇ ಸನ್ನಿವೇಶದಲ್ಲಿ ಅವರ ವ್ಯಕಿತ್ವದ ಹಲವು ಗುಣಗಳು ಮತ್ತು ಸಾಧ್ಯತೆಗಳು ವ್ಯಕ್ತಗೊಂಡು ಕಾದಂಬರಿ0ುು ಕಟ್ಟಿಕೊಡುವ ಅನುಭವ ಸಮೃದ್ಧವಾಗುತ್ತದೆ. ಒಂದೊಂದು ಕುಟುಂಬದ ಕಥೆ0ುೂ ಒಂದೊಂದು ಪ್ರತ್ಯೇಕ-ಸ್ವತಂತ್ರ ಕಾದಂಬರಿ0ಾಗಿ ಬೆಳೆ0ುಬಲ್ಲ ವಸ್ತುಸಮೃದ್ಧಿ ಈ ಕಾದಂಬರಿ0ುಲ್ಲಿದೆ. ಪ್ರಸ್ತುತ ರಚನೆ0ುಲ್ಲಿ ಅವು ಒಗ್ಗೂಡಿ ನಿರೂಪಣೆ0ುು ಸಾಂದ್ರವಾಗಿ0ುೂ ಕಥೆ0ುು ಅಡಕವಾಗಿ0ುೂ ಮೂಡಿಬಂದಿವೆ.
******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
No comments:
Post a Comment