ಗಿರಿ ಅವರ ಗತಿ,ಸ್ಥಿತಿ
'ಗಿರಿ' ಎಂಬ ಕಾವ್ಯನಾಮದಲ್ಲಿ ಬರೆ0ುುತ್ತಿರುವ ಎಂ.ಎನ್. ಹೆಗಡೆ ಅವರ ಕಾದಂಬರಿ ಗತಿ, ಸ್ಥಿತಿ ಮೊದಲು ಪ್ರಕಟವಾದದ್ದು 1971ರಲ್ಲಿ. ಆಗ ಅದು ಪಡೆದುಕೊಂಡ ಪ್ರತಿಕ್ರಿ0ೆು ಮತ್ತು ಪ್ರತಿಸ್ಪಂದನೆಗಳು ಈಗ ಇತಿಹಾಸ. ಅದೇ ವರ್ಷ ಪ್ರಕಟವಾದ ತಮ್ಮ ಈಚಿನ ಸಾಹಿತ್ಯ ಎಂಬ ಲೇಖನದಲ್ಲಿ ಅನಂತಮೂತರ್ಿ0ುವರು ಇವರ ಕಾದಂಬರಿ 'ಗತಿ,ಸ್ಥಿತಿ' ಕನ್ನಡ ಭಾಷೆಗೇ ನಡೆಸಿದ ಚಿಕಿತ್ಸೆ ಎನ್ನಬಹುದು. ಈ ದಶಕದ ಮಹತ್ವದ ಕೃತಿಗಳಲ್ಲಿ ಇದೊಂದು ಎಂಬುದನ್ನಂತೂ ಖಂಡಿತ ಹೇಳಬಹುದು. ಅಥವಾ ನಮ್ಮ ಸಮಕಾಲೀನ ನಾಗರಿಕ ಜೀವನವನ್ನು ಕುರಿತು ಇಷ್ಟು ಒಳ್ಳೆ0ು ಕಾದಂಬರಿ ಇನ್ನೂ ಬಂದಿಲ್ಲವೆಂದು ಹೇಳಿದರೆ ಉತ್ಪ್ರೇಕ್ಷೆ0ಾಗಲಾರದು ಎಂದು ಬರೆದರು. ಇದೇ ಉತ್ಸಾಹವನ್ನು ಸಮಕಾಲೀನ ನವ್ಯ ವಿಮಶರ್ೆ ಬೇರೆಬೇರೆ ಬಗೆಗಳಲ್ಲಿ ವ್ಯಕ್ತಪಡಿಸಿತು. ಕನ್ನಡ ನವ್ಯಮಾರ್ಗದ ಒಂದು ಪ್ರಾತಿನಿಧಿಕ ಕೃತಿ ಎಂಬ ಹೆಗ್ಗಳಿಕೆ0ುನ್ನೂ ಈ ಕಾದಂಬರಿ ಪಡೆದುಕೊಂಡಿತು. ಆದರೆ ಅದೇ ಕಾಲದಲ್ಲಿ ನವ್ಯಸಾಹಿತ್ಯವನ್ನು ಕುರಿತು ಅನೇಕ ಬಗೆ0ು ಅತೃಪ್ತಿ, ಅಸಹನೆ, ಸಂದೇಹ ಮತ್ತು ವಿಮಶರ್ೆಗಳೂ ಪ್ರಾರಂಭವಾಗಿದ್ದವು. ಈ ಬಗೆ0ು ಬರವಣಿಗೆ0ುನ್ನು ವಿರೋಧಿಸುತ್ತ ಕನ್ನಡ ಸಾಹಿತ್ಯವು ಬದಲಾಗಬೇಕಾದ ಮಾತುಗಳನ್ನೂ ಹಲವರು ಆಡಲಾರಂಭಿಸಿದ್ದರು. ಇದಕ್ಕೆ ಒಂದು ಪ್ರಾತಿನಿಧಿಕ ಉದಾಹರಣೆ0ಾಗಿ 1973ರಲ್ಲಿ ಪ್ರಕಟವಾದ ತಮ್ಮ ಅಬಚೂರಿನ ಪೋಸ್ಟಾಫೀಸು ಎಂಬ ಕಥಾಸಂಕಲನಕ್ಕೆ ಪೂರ್ಣಚಂದ್ರ ತೇಜಸ್ವಿ ಅವರು ಬರೆದುಕೊಂಡ ಮುನ್ನುಡಿ0ುನ್ನು ಗಮನಿಸಬೇಕು. ನವ್ಯ ಬರವಣಿಗೆ0ುನ್ನು ಕಟುವಾಗಿ ಟೀಕಿಸುವ ತೇಜಸ್ವಿ, ಕಲಾವಿದನ ಪ್ರಜ್ಞೆ0ೊಳಗೇ ವಿಕಾಸವಾಗುವ ಅಥವಾ ಕಲಾವಿದ ಪ್ರಜ್ಞೆ0ೆು ಕೇಂದ್ರವಾಗಿರುವ, ಅಥವಾ ಸಾಹಿತಿ0ೆು ನಾ0ುಕನಾದ, ಆತ್ಮನಿಷ್ಠ ಬರಹಗಾರರಾದ 0ುು.ಆರ್.ಅನಂತಮೂತರ್ಿ ಮತ್ತು 'ಗತಿ ಸ್ಥಿತಿ'0ು ಗಿರಿ ಒಂದು ಕೊನೆ0ಾದರೆ, ಈ ಕಥಾಸಂಕಲನದ ನಾನು ಇನ್ನೊಂದು ಕೊನೆ ಎಂದು ತಮ್ಮ ಮುನ್ನುಡಿ0ುಲ್ಲಿ ಬರೆದರು. ಗತಿ, ಸ್ಥಿತಿ ಬಗ್ಗೆ ಕಳೆದ ನಾಲ್ಕು ದಶಕಗಳಲ್ಲಿ ಬಂದಿರುವ ವಿಮಶರ್ೆಗಳನ್ನು ಗಮನಿಸಿದರೆ ಅದನ್ನು ಮೆಚ್ಚುವವರು ನವ್ಯದ ಮೂಲಭೂತ 'ಲಕ್ಷಣ'ಗಳನ್ನು ಕಂಡಿದ್ದರೆ, ಅದನ್ನು ಟೀಕಿಸುವವರು ನವ್ಯದ ಎಲ್ಲ 'ಅವಲಕ್ಷಣ'ಗಳು ಅದರಲ್ಲಿವೆ ಎಂದು ಹೇಳುತ್ತ ಬಂದಿದ್ದಾರೆ. ಹಾಗೆ0ೆು ಈ ಕಾದಂಬರಿ0ುನ್ನು ಮತ್ತೆ ಮತ್ತೆ ಓದುತ್ತ ಬಂದವರೂ ಇದ್ದಾರೆ. ಉದಾಹರಣೆಗೆ ಈ ಕಾದಂಬರಿ0ು ಮೂರನೆ0ು ಮುದ್ರಣ (1999) ಕ್ಕೆ ಬರೆದ ಮುನ್ನುಡಿ0ುಲ್ಲಿ ಎಸ್.ದಿವಾಕರ್ ಹೀಗೆ ಹೇಳುತ್ತಾರೆ: ಸುಮಾರು ಇಪ್ಪತ್ತು ವರ್ಷಗಳ ನಂತರ ಗಿರಿ0ುವರ ಗತಿ, ಸ್ಥಿತಿ0ುನ್ನು ಮತ್ತೆ ಓದಿದಾಗ ಹಿಂದೊಮ್ಮೆ ಓದಿದ್ದ ಕಿಂಚಿತ್ ನೆನಪೂ ಆಗದಷ್ಟು ತೀರ ಹೊಸ ಅನುಭವವಾಯಿತು, ನನಗೆ. ಒಂದು 0ುಶಸ್ವಿ ಸಾಹಿತ್ಯ ಕೃತಿ0ು ಅನನ್ಯತೆಗೆ, ಅದರ ಸಾರ್ವಕಾಲಿಕ ಪ್ರಭಾವಿ ಶಕ್ತಿಗೆ, ಇಂದಿಗೆ ಹೇಗೋ ಹಾಗೆ ಮುಂದಿಗೂ ಸಲ್ಲುವ ಅದರ ದರ್ಶನಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ. ನಮ್ಮ ಕಾದಂಬರಿಗಳಲ್ಲಿ ಅಷ್ಟಾಗಿ ಎದ್ದು ಕಾಣದ ಪ್ರಬಂಧ ಧ್ವನಿ ಈ ಕಾದಂಬರಿ0ುಲ್ಲಿ ನಿಚ್ಚಳವಾಗಿದ್ದು ಇಲ್ಲಿನ ಅನುಭವವನ್ನು ಒಂದು ಸಾರ್ಥಕ ರೂಪಕವಾಗುವಂತೆ ರೂಪಿಸಿದೆ.
ಅದು ಮೊದಲು ಪ್ರಕಟವಾದ ನಲವತ್ತೆರಡು ವರುಷಗಳ ನಂತರ ಇಂದು ಗತಿ, ಸ್ಥಿತಿ0ುನ್ನು ಓದಿದರೆ, ಬರವಣಿಗೆ0ು ಧಾಟಿ0ುಲ್ಲಿ ತುಂಬ ವ್ಯತ್ಯಾಸಗಳಿರುವುದಾದರೂ, ಒಟ್ಟಾರೆ ದರ್ಶನದಲ್ಲಿ ಲಂಕೇಶರ ಬಿರುಕು, ತೇಜಸ್ವಿ0ುವರ ತಬರನ ಕಥೆ 0ುಂಥ ಕೃತಿಗಳಿಗೂ ಗಿರಿ0ುವರ ಕೃತಿಗೂ ಅಂಥ ಮೂಲಭೂತ ವ್ಯತ್ಯಾಸಗಳೇನಿಲ್ಲ ಎನಿಸುತ್ತದೆ. ಅ0ಾ ಕೃತಿಗಳ ಪ್ರಧಾನ ಪಾತ್ರಗಳ ಸಾಮಾಜಿಕ ಹಿನ್ನೆಲೆ ಬೇರೆ ಬೇರೆ; ಕಥೆಗಳು ನಡೆ0ುುವ ಪ್ರದೇಶಗಳು ಬೇರೆ ಬೇರೆ. ಆದರೆ ವ್ಯಕ್ತಿಗಳಾಗಿ ಅವರು ಎದುರಿಸುವ ಬಿಕ್ಕಟ್ಟುಗಳು, ಮನುಷ್ಯನಿಮರ್ಿತ ವ್ಯವಸ್ಥೆಗಳಲ್ಲಿ ಸಿಕ್ಕಿ ಬಿದ್ದು ಅವರು ಅನುಭವಿಸುವ ಪೇಚಾಟಗಳು, ವ್ಯಕ್ತಿ ಮತ್ತು ವ್ಯವಸ್ಥೆ ಮುಖಾಮುಖಿ0ಾದಾಗ ಹುಟ್ಟುವ ಅಸಂಗತ ಸನ್ನಿವೇಶಗಳು ಹಾಗೂ ಇವೆಲ್ಲದರಿಂದ ಮೂಡುವ ನೋಟ-ಇವುಗಳನ್ನು ಗಮನಿಸಿದಾಗ ಮನುಷ್ಯಾನುಭವದ ನೆಲೆಗಳಲ್ಲಿ ಅವುಗಳಿಗಿರುವ ಸಾಮ್ಯವನ್ನು ಗಮನಿಸದೇ ಇರುವುದು ಸಾಧ್ಯವಿಲ್ಲ. ಒಂದು ಸಾಹಿತ್ಯ ಪರಂಪರೆ0ು ವಿವಿಧ ಘಟ್ಟಗಳಲ್ಲಿ ಕೆಲವು ಗುಣಲಕ್ಷಣಗಳನ್ನು ಆಧರಿಸಿ ಕೃತಿ-ಕೃತಿಕಾರರನ್ನು ಬೇರೆಬೇರೆ ಗುಂಪುಗಳಲ್ಲಿ ಗುರುತಿಸಿ ಅವುಗಳ ನಡುವಣ ವ್ಯತ್ಯಾಸಗಳನ್ನು ಚಚರ್ಿಸುವುದು ಎಲ್ಲ ಕಾಲ ದೇಶಗಳಲ್ಲಿ ನಡೆದುಕೊಂಡು ಬಂದಿದೆ. ಆದರೆ ಈ ಹಣೆಪಟ್ಟಿಗಳು ಕೇವಲ ತಾತ್ಕಾಲಿಕ ಮತ್ತು ಸಾಹಿತ್ಯಾಧ್ಯ0ುನದ ತತ್ಕ್ಷಣದ ಅಗತ್ಯಗಳಿಂದ ಹುಟ್ಟಿದವು ಎಂಬುದನ್ನು ಮರೆ0ುಬಾರದು. ಕಾಲಕ್ರಮೇಣ ಈ ವ್ಯತ್ಯಾಸಗಳೇ ಗೌಣ ಎನಿಸಬಹುದು ಅಥವಾ ತೀರ ನಿಣರ್ಾ0ುಕ ಸ್ವರೂಪದವಲ್ಲ ಎಂದು ಅನ್ನಿಸಬಹುದು. ಇನ್ನು ಕಾಲದೇಶಗಳ ವ್ಯಾಪ್ತಿ ಹಿಗ್ಗುತ್ತಿದ್ದಂತೆ ವಿಂಗಡಣೆಗಳ ಸ್ವರೂಪವೂ ಬದಲಾಗಬಹುದು. ಒಂದೇ ಶತಮಾನದಲ್ಲಿ ಗುರುತಿಸುವ ನವೋದ0ು-ನವ್ಯ-ಪ್ರಗತಿಶೀಲ-ದಲಿತ-ಬಂಡಾ0ು ಇವೆಲ್ಲ ಮರುವಿಂಗಡಣೆಗೆ ಒಳಗಾಗಿ ಸ್ವಾತಂತ್ರ್ಯಪೂರ್ವ- ಸ್ವಾತಂತ್ರ್ಯೋತ್ತರ ಎಂಬ ಎರಡೇ ಹಣೆಪಟ್ಟಿಗೆ ಒಳಗಾಗಬಹುದು. ಅಥವಾ ಆ ಶತಮಾನ ಕಳೆದನಂತರ ಇವೆಲ್ಲ ಒಟ್ಟಾಗಿ ಇಪ್ಪತ್ತನೆ0ು ಶತಮಾನದ ಸಾಹಿತ್ಯ ಎಂಬ ಶೀಷರ್ಿಕೆ0ುಡಿ ಬರಬಹುದು. ಇತ್ತೀಚೆಗೆ ಕನ್ನಡ ಸಾಹಿತ್ಯವನ್ನು ಆಧುನಿಕ ಮತ್ತು ಆಧುನಿಕಪೂರ್ವ ಎಂಬ ಇನ್ನೂ ವಿಸ್ತೃತ ನೆಲೆಗಳಲ್ಲಿ ಗುರುತಿಸಿ ನೋಡುವ ಪರಿಪಾಠವೂ ಕಂಡುಬರುತ್ತಿದೆ. ಅಂದರೆ ಕೃತಿ-ಕೃತಿ, ಕೃತಿ ಸಮೂಹ-ಕೃತಿ ಸಮೂಹ, ಕೃತಿಕಾರ-ಕೃತಿಕಾರ, ಕೃತಿಕಾರ ಸಮೂಹ-ಕೃತಿಕಾರ ಸಮೂಹ ಇವುಗಳ ನಡುವಣ ವ್ಯತ್ಯಾಸ, ಅನನ್ಯತೆಗಳು ಎಷ್ಟು ಮುಖ್ಯವೋ ಅವುಗಳ ನಡುವಣ ಸಮಾನ ಎನ್ನಿಸಬಹುದಾದ ನೆಲೆಗಳ ಗುರುತಿಸುವಿಕೆ0ುೂ ಅಷ್ಟೇ ಮುಖ್ಯ ಎನ್ನಿಸಲಾರಂಭಿಸಿದೆ. ಚಳುವಳಿಗಳ, ಸಿದ್ಧಾಂತಗಳ ಭರಾಟೆ ತಗ್ಗುತ್ತಿದ್ದು 'ಕೃತಿಗೆ ಮರಳುವ' ಆಶ0ು-ಅಪೇಕ್ಷೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾದಾಗ ಹಳೆ0ು ಕೃತಿಗಳ ಮರು ಓದು, ಹೊಸ ಓದುಗಳಿಗೆ ಅವಕಾಶ ಒದಗಿ ಓದುಗನ ಅನುಭವವೂ ಹಿಗ್ಗಬಹುದು. ಓದಿನ ಸ್ವರೂಪವೂ ವಿಸ್ತೃತಗೊಂಡು ಹೆಚ್ಚಿನ ವಸ್ತುನಿಷ್ಠತೆ ಸಾಧ್ಯವಾಗಬಹುದು.
ಆದುದರಿಂದಲೇ ಗತಿ,ಸ್ಥಿತಿ0ುನ್ನು 1971ರಲ್ಲಿ ಪ್ರಕಟವಾದ ಒಂದು ನವ್ಯ ಕಾದಂಬರಿ ಎಂದಷ್ಟೇ ಹೇಳಿದರೆ ಅದರ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ಬಿರುಕು (1967)ಹಳ್ಳಿಯಿಂದ ಬೆಂಗಳೂರಿಗೆ ಬಂದು ಆಲ್ಲಿಗೆ ಹೊಂದಿಕೊಳ್ಳಲಾಗದೆ ಪರಿತಪಿಸುವ ವಿದ್ಯಾಥರ್ಿ0ೊಬ್ಬನ ಕಥೆ. ಗತಿ,ಸ್ಥಿತಿ (1971) ಇಬ್ಬರು ನಿರುದ್ಯೋಗಿಗಳ ಕಥೆ; ಉದ್ಯೋಗ ನಿಮಿತ್ತ ಬೆಂಗಳೂರಿನಿಂದ ದೂರದಲ್ಲಿರುವ ಸಣ್ಣ ಊರಿಗೆ ಹೋಗಿ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಏಗುವವರ ಕಥೆ. ತಬರನ ಕಥೆ (1973) ನಿವೃತ್ತ ಸರಕಾರೀ ನೌಕರನೊಬ್ಬ ತನ್ನ ಪಿಂಚಣಿ0ುನ್ನು ಪಡೆ0ುಲು ಒದ್ದಾಡುವವನ ಕಥೆ. ಇವರ ವೈ0ುಕ್ತಿಕ ಅವಸ್ಥೆಗಳಲ್ಲಿ ನಮ್ಮ ಆಡಳಿತಶಾಹಿ0ು ಸ್ವರೂಪದ ದರ್ಶನವೂ ಮೂಡುವಂಥ ಮಹತ್ವಾಕಾಂಕ್ಷೆ ಈ ಮೂರೂ ಕೃತಿಗಳಿಗಿವೆ. ಬರವಣಿಗೆ0ು ಕ್ರಮ ಮತ್ತು ಶೈಲಿಗಳಲ್ಲಿ ಇವುಗಳ ನಡುವಣ ಪರಸ್ಪರ ವ್ಯತ್ಯಾಸಗಳನ್ನು ಗುರುತಿಸಿ0ುೂ ಸ್ವಾತಂತ್ರ್ಯೋತ್ತರ ಭಾರತದ ಆಡಳಿತವ್ಯವಸ್ಥೆಗಳಿಗೆ ಬರೆದ ಭಾಷ್ಯಗಳೆಂಬಂತೆ ಈ ಕೃತಿಗಳನ್ನು ಓದಲು ಸಾಧ್ಯ. ಅಂದರೆ ಒಂದು ನಿದರ್ಿಷ್ಟ ಚಾರಿತ್ರಿಕ ಸಂದರ್ಭದಲ್ಲಿಟ್ಟು ಈ ಕೃತಿಗಳನ್ನು ಓದಬಹುದು. ಹಾಗೆ0ೆು ಮನುಷ್ಯರೇ ನಿಮರ್ಿಸಿಕೊಂಡ ವ್ಯವಸ್ಥೆ0ುಲ್ಲಿ ಮನುಷ್ಯರೇ ಬಂಧಿಗಳಾಗಿ ಬಿಡುವ ಅಸಂಗತತೆಗೆ, ದುರಂತಕ್ಕೆ ಒಡ್ಡಿದ ರೂಪಕಗಳಾಗಿ0ುೂ ಇವುಗಳನ್ನು ಪರಿಭಾವಿಸಬಹುದು. ಅವರ ಅಸ್ತಿತ್ವವಾದೀ ಸಂಕಟಗಳನ್ನು ಗಮನಿಸುವಂತೆ ಅವರು ಬದುಕುತ್ತಿರುವ ಕಾಲ ದೇಶಗಳ ಸಾಮಾಜಿಕ ಮತ್ತು ರಾಜಕೀ0ು ಸ್ವರೂಪವನ್ನೂ ಗಮನಿಸಬಹುದು. ಇನ್ನು ಈ ಕೃತಿಗಳಲ್ಲಿ 0ಾರಿಗೆ 0ಾವುದು ಹೆಚ್ಚು ಮುಟ್ಟುತ್ತದೆ, ಇಷ್ಟವಾಗುತ್ತದೆ ಎಂಬುದು ವೈ0ುಕ್ತಿಕ ಹಿನ್ನೆಲೆ0ು, ಆದ್ಯತೆ0ು ಮತ್ತು ಅಭಿರುಚಿ0ು ವಿಷ0ು.
ಗತಿ,ಸ್ಥಿತಿ 0ು ವೈಶಿಷ್ಟ್ಯವೆಂದರೆ ಇದೊಂದು ಕತೆ0ೆು ಇಲ್ಲದ ಕಾದಂಬರಿ. ಇಲ್ಲಿನ ಎರಡು ಪ್ರಧಾನ ಪಾತ್ರಗಳಿಗೆ ನಿದರ್ಿಷ್ಟವಾದ ಹೆಸರುಗಳೂ ಇಲ್ಲ. 'ಅವನು', 'ಆತ', 'ಅವಳು', 'ಆಕೆ' ಎಂಬ ಸರ್ವನಾಮಗಳಿಂದಷ್ಟೇ ಅವರಿಗೆ ಅಸ್ತಿತ್ವ. ಮೈಸೂರು, ಬೆಂಗಳೂರುಗಳ ಪ್ರಸ್ತಾಪವೇನೋ ಇದೆ. ಆದರೆ ಮುಖ್ಯ ಘಟನೆಗಳು ಜರುಗುವುದು ಒಂದು ಅನಾಮಧೇ0ು ಊರಿನಲ್ಲಿ. ಈ ಪ್ರಜ್ಞಾಪೂರ್ವಕ ಅನಾಮಧೇ0ುತೆ0ುು ಲೇಖಕರು ಅನುಭವದ ಸಾಧಾರಣೀಕರಣಕ್ಕಾಗಿ ಬಳಸಿದ ಸೃಜನಶೀಲ ಉಪಕ್ರಮವೂ ಇದ್ದೀತು.
'ಅವನು', 'ಅವಳು' ನೌಕರಿಗಾಗಿ ಒಂದು ಅಪರಿಚಿತ ಊರಿಗೆ ಬರುತ್ತಾರೆ. ಏನೂ ಹಿತವಿಲ್ಲದ ಒಂದು ಹೋಟೆಲಿನ ಇಕ್ಕಟ್ಟಾದ ರೂಮಿನಲ್ಲಿ ವಾಸ್ತವ್ಯ ಹೂಡುತ್ತಾರೆ. 'ಅವಳು' ಡ್ಯೂಟಿಗೆ ರಿಪೋಟರ್ು ಮಾಡಿಕೊಳ್ಳಲು ಹೋದಾಗ ದೊಡ್ಡ ಪ್ರಹಸನವೇ ನಡೆ0ುುತ್ತದೆ. ಇವಳ ಆರ್ಡರ್ ಕಾಪಿ, ಆಫೀಸು ಕಾಪಿ, ಒರಿಜಿನಲ್ ಕಾಪಿ ಎಂದೆಲ್ಲ ತಾಳೆ ಆಗಬೇಕು. ಅದಕ್ಕೆ ಸರಿ0ಾದ ಫೈಲು ಸಿಗಬೇಕು. ಅವುಗಳನ್ನು 0ಾರು ಮೇಂಟೇನ್ ಮಾಡಬೇಕು ಎಂಬ ಜಿಜ್ಞಾಸೆಗಳು. ಒಂದು ಸಣ್ಣ ಕಛೇರಿ0ು ಅವ್ಯವಸ್ಥೆ0ುಲ್ಲಿ0ೆು ನಮ್ಮ ಆಡಳಿತ ವ್ಯವಸ್ಥೆ0ು ವೈರುಧ್ಯಗಳು, ವಿರೋಧಾಭಾಸಗಳು ಬಿಂಬಿತವಾಗುವಂತಿವೆ. ಅಂತೂ ಅವಳು ರಿಪೋಟರ್ು ಮಾಡಿಕೊಳ್ಳುತ್ತಾಳೆ. ಅವಳಿಗೆ ಅಲಾಟ್ ಆಗಬೇಕಾದ ವಸತಿ0ುದು ಮತ್ತೊಂದೇ ಸಮಸ್ಯೆ. ಅದಕ್ಕೆ ನೂರಾರು ರಗಳೆಗಳು. ಅವಳ ಕೆಲಸದ ಸ್ವರೂಪದ ಬಗ್ಗೆ0ುೂ ಗೊಂದಲ. ಕೊನೆಗೆ ರಾಜಿನಾಮೆ0ೊಂದೇ ಪರಿಹಾರ. ಎಲ್ಲವೂ ಒಂದು ಅಸಂಗತ ನಾಟಕದಂತೆ ನಡೆ0ುುತ್ತದೆ. ಇದು ಅದರ ಪರಾಕಾಷ್ಠೆ0ುನ್ನು ಮುಟ್ಟುವುದು 'ಅವನು' ತನ್ನ ಕೆಲಸಕ್ಕೆ ರಿಪೋಟರ್ು ಮಾಡಿಕೊಳ್ಳಲು ಹೋದಾಗ. ಇವನ ಹತ್ತಿರವೂ ಅಪಾಯಿಂಟ್ಮೆಂಟ್ ಆರ್ಡರ್ ಇದೆ. ಆದರೆ ಆಫೀಸಿನವರು ಅವನಿಗೆ ಅದಾಗಲೇ ಒಂದು ಟೆಲಿಗ್ರಾಂ ಕಳಿಸಿದ್ದಾರಂತೆ. ಆ ಟೆಲಿಗ್ರಾಂ ಇವನಿಗೆ ಸಿಕ್ಕಿಲ್ಲ. ಅವನ ಕೆಲಸದ್ದು ಏನೋ ಪ್ರಾಬ್ಲಂ ಇದೆ0ುಂತೆ. ನಿದರ್ಿಷ್ಟವಾಗಿ ಸಮಸ್ಯೆ ಏನೆಂದು 0ಾರಿಗೂ ಗೊತ್ತಿಲ್ಲ. ಆ ಸಮಸ್ಯೆ0ುನ್ನು 0ಾರು ಬಗೆಹರಿಸಬೇಕು? ಡೈರೆಕ್ಟರ್ ಊರಿನಲ್ಲಿ ಇಲ್ಲ. ಅವನು ಬರುವವರೆಗೆ ಇವನೇನು ಮಾಡಬೇಕು? ಬಂದು ವಿಚಾರಿಸಿಕೊಂಡು ಹೋಗುತ್ತಿರಿ ಎಂಬುದು ಒಂದು ಸಾಮಾನ್ಯ ಉತ್ತರ. ಇನ್ ಛಾಜರ್್ ನಿದರ್ೆಶಕರು ಏನಾದರೂ ಕ್ರಮ ತೆಗೆದುಕೊಳ್ಳಬಹುದೆ? ಅವರು ವಿಭಾಗದ ಮುಖ್ಯಸ್ಥರನ್ನು ಒಂದು ಮಾತು ಕೇಳಿ ಅನ್ನುತ್ತಾರೆ. ವಿಭಾಗದ ಮುಖ್ಯಸ್ಥರು ನಿದರ್ೆಶಕರ ಮಧ್ಯಪ್ರವೇಶವನ್ನು ನಿರೀಕ್ಷಿಸುತ್ತಾರೆ. ಎಲ್ಲವೂ ಅನಿಶ್ಚಿತ. ಎಷ್ಟು ದಿನ ಹೀಗೆ ಕಾ0ುಬೇಕು, ಒಂದಷ್ಟು ದಿನಗಳ ನಂತರ ಈ ಸಮಸ್ಯೆಗೆ ಏನಾದರೂ ಪರಿಹಾರ ಸಿಕ್ಕೀತೆ ಎಂಬುದೂ 0ಾರಿಗೂ ಗೊತ್ತಿಲ್ಲ. ಅವರೆಲ್ಲ ವೈ0ುಕ್ತಿಕವಾಗಿ ಒಳ್ಳೆ0ುವರ ಹಾಗೆ0ೆು ಕಾಣಿಸುತ್ತಾರೆ. ಆದರೆ 0ಾರೂ 0ಾವ ಜವಾಬುದಾರಿ0ುನ್ನೂ ತೆಗೆದುಕೊಳ್ಳಲು ಸಿದ್ಧರಿಲ್ಲ. ಅಷ್ಟೇ ಅಲ್ಲ, ಹಾಗೆ ತಾವೇ ಜವಾಬ್ದಾರಿ0ುನ್ನು ತೆಗೆದುಕೊಂಡು 'ಅವನ' ಸಮಸ್ಯೆ0ುನ್ನು ಇತ್ಯರ್ಥ ಪಡಿಸಬಹುದೋ ಎಂಬುದರ ಬಗ್ಗೆ ಕೂಡಾ ಅವರಿಗೆ ಖಾತರಿಯಿಲ್ಲ. ಇವನು ಆ ಊರಿಗೆ ಬರುವುದು, ಬಂದು ತನಗೆ ಅರ್ಥವಾಗದ, ತಾನು ನಿ0ುಂತ್ರಿಸಲಾಗದ ವ್ಯವಸ್ಥೆ0ೊಳಗೆ ಸಿಕ್ಕಿಕೊಳ್ಳುವುದು, 0ಾವುದೇ ಭರವಸೆಯಿಲ್ಲದ ನಿರರ್ಥಕ ಏಕತಾನತೆ0ುನ್ನು ಬದುಕುವುದು ಇವೆಲ್ಲ ಮೊದ ಮೊದಲು ಹಾಸ್ಯವನ್ನು ಉಕ್ಕಿಸಿದರೂ ಕ್ರಮೇಣ ಗಿರಿ ಅವರ ನಿರೂಪಣೆ 'ಅವನ' ವೈ0ುಕ್ತಿಕ ಅವಸ್ಥೆ0ುನ್ನೂ ಮೀರಿದ ಮನುಷ್ಯ ಸ್ಥಿತಿ0ೊಂದನ್ನು ಧ್ವನಿಸಿಬಿಡುತ್ತದೆ. ಪ್ರತಿನಿತ್ಯ ಅವನು ಆ ಆಫೀಸಿನ ಕಾರಿಡಾರುಗಳನ್ನು ಸುತ್ತುವುದು ಒಂದು ಅರ್ಥಹೀನ ಪುನರಾವತರ್ಿತ ಆಚರಣೆ ಎಂಬಂತೆ ನಡೆ0ುುತ್ತಿರುತ್ತದೆ. ಇದರಿಂದ ಬಿಡುಗಡೆ ಪಡೆ0ುುವುದೆಂದರೆ ಆ ಊರನ್ನೇ ಬಿಟ್ಟುಹೋಗುವುದು. ಅವನು ಮತ್ತು ಅವಳು ಆ ಊರನ್ನು ಬಿಡಲು ನಡೆಸುವ ಪ್ರ0ುತ್ನವು ಮೊದಲು ವಾಸ್ತವವಾದೀ ನಿರೂಪಣೆ0ುಲ್ಲಿ ದಾಖಲಾದರೂ ಕ್ರಮೇಣ ವಾಸ್ತವವಾದದ ಸೀಮೆ0ುನ್ನು ಜಿಗಿ0ುಲಾರಂಭಿಸುತ್ತದೆ. ಅಂತೂ ಅವರು ಆ ಊರನ್ನು ಬಿಟ್ಟು ಬೆಂಗಳೂರನ್ನು ಸೇರುತ್ತಾರೆ. ನೌಕರಿ0ುನ್ನು ಗಳಿಸುವ ನಿಷ್ಫಲ ಪ್ರ0ುತ್ನವನ್ನು ಮುಂದುವರೆಸುತ್ತಾರೆ. ಈ ಹಂತದಲ್ಲಿ ಕಾದಂಬರಿ ಮುಕ್ತಾ0ುಗೊಳ್ಳುತ್ತದೆ. ಅವನು ಮತ್ತು ಅವಳ ಭೂತದ ಬಗ್ಗೆ ಕಾದಂಬರಿ ಏನೂ ಹೇಳುವುದಿಲ್ಲ. ಹಾಗೆ0ೆು ಅವರ ಭವಿಷ್ಯವು 0ಾವ ದಿಕ್ಕಿನತ್ತ ಇದೆ ಎಂಬುದನ್ನೂ ಸೂಚಿಸುವುದಿಲ್ಲ. ಅವರ ಸದ್ಯದ ಅನುಭವಗಳೇ ಕಾದಂಬರಿ0ು ಸಂವಿಧಾನವನ್ನು ಕಟ್ಟಿದೆ. ಆದರೆ ಈ ಅನಾಮಧೇ0ು ವ್ಯಕ್ತಿಗಳ ಸದ್ಯದ ಅನುಭವಗಳು ಒಂದು ಮನುಷ್ಯಾವಸ್ಥೆ0ುನ್ನೇ ಧ್ವನಿಸಬಲ್ಲ ಬಂಧವೊಂದನ್ನು ಕಟ್ಟಿರುವುದು ಗಿರಿ ಅವರ ಹೆಚ್ಚುಗಾರಿಕೆ0ಾಗಿದೆ. ಕೇವಲ ಒಂದು ಸಮಸ್ಯೆ0ು ಸಾಮಾಜಿಕ ರೂಪವನ್ನು ವಿವರಿಸುವುದಷ್ಟಕ್ಕೇ ಅವರ ಕಾದಂಬರಿ ಸೀಮಿತವಾಗಿಲ್ಲ. ಈ ಸಮಸ್ಯೆ0ುು ಅವರ ಮನಸ್ಸಿನ ಮೇಲೆ ಮಾಡುವ ಗಾಢ ಪರಿಣಾಮಗಳು, ಅದು ಅವರಲ್ಲಿ ಹುಟ್ಟಿಸುವ ತಾತ್ತ್ವಿಕ ಪ್ರಶ್ನೆಗಳು ಇವುಗಳನ್ನೂ ಕಾದಂಬರಿ0ುು ಕೃತಿ0ು ಬಂಧಕ್ಕೆ ಮತ್ತು ಪಾತ್ರಗಳ ಸ್ಥಿತಿಗೆ ಭಾರವಾಗದ ಹಾಗೆ ನಿರ್ವಹಿಸುತ್ತದೆ. ಹಾಗಾಗಿ ನಿರೂಪಣೆ0ುಲ್ಲಿ ಕೆಲವೊಮ್ಮೆ ವಾಸ್ತವವವಾದದ ಪರಿಧಿ0ುನ್ನೂ ದಾಟುವುದು ಲೇಖಕರಿಗೆ ಅನಿವಾ0ರ್ುವಾಗಿದೆ ಮತ್ತು ಸೃಜನಶೀಲ ಅಗತ್ಯವಾಗಿದೆ. ಹಾಗೆ0ೆು ತಮ್ಮ ಪಾತ್ರಗಳ ಮನಸ್ಥಿತಿಗೆ ಪೂರಕವಾದ ವಸ್ತುಪ್ರತಿರೂಪಗಳನ್ನು ಅವರ ಪರಿಸರದಲ್ಲಿ ಸೃಷ್ಟಿಸಲು ಲೇಖಕರು ಪ್ರ0ುತ್ನಿಸಿದ್ದಾರೆ. ಆ ಊರು, ಹೋಟೆಲ್, ಹೋಟೆಲ್ ರೂಮು, ಕಾಲೇಜು, ಕಛೇರಿ ಇವುಗಳ ಬಣ್ಣ, ಚಹರೆ0ು ವರ್ಣನೆಗಳು ಕೇವಲ ವಾಸ್ತವಾದೀ ಅಗತ್ಯಗಳನ್ನೂ ಮೀರಿ ಬೆಳೆ0ುುವುದು ಈ ಕಾರಣದಿಂದ. ಈ ಉಪಕ್ರಮಗಳು ಬಿರುಕು ಮತ್ತು ತಬರನ ಕಥೆ 0ುಲ್ಲೂ ಬೇರೆ ಬೇರೆ ಬಗೆಗಳಲ್ಲಿ ಮತ್ತು ಪ್ರಮಾಣಗಳಲ್ಲಿ ಬಳಕೆ0ಾಗಿರುವುದು ಕೇವಲ ಕಾಕತಾಳೀ0ುವಾಗಿರಲಾರದು. ಈ ಎಲ್ಲ ಕಾರಣಗಳಿಂದ 'ಗತಿ, ಸ್ಥಿತಿ0ು ಮರು ಓದು ಮತ್ತು ಇತರ ಇಂಥ ಕೃತಿಗಳೊಂದಿಗಿನ ತುಲನಾತ್ಮಕ ಓದು ತೀರ ಅಪೇಕ್ಷಣೀ0ುವಾಗಿದೆ.
******
No comments:
Post a Comment