stat Counter



Saturday, June 28, 2014

ಕೆ. ಸತ್ಯನಾರಾಯಣ - ಮುರಳೀಧರ ಉಪಾಧ್ಯರ ’ ಸಖೀಗೀತ ’ ಬ್ಲಾಗ್

ಸಂವೇದನಾಶೀಲವಾದ ಮತ್ತು ಸದ್ಯದ ಒತ್ತಾಸೆಗಾಗಿ ಓದನ್ನು,  ವಾಗ್ವಾದವನ್ನು ಪ್ರೇರೇಪಿಸುವುದಕ್ಕೆ ಹೊಸ ತಂತ್ರ ಜ್ಞಾನ ಮತ್ತು ಮಾಧ್ಯಮಗಳು ಹೇಗೆ ಬಳಕೆಯಾಗಬಹುದೆಂಬುದಕ್ಕೆ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಪ್ರಸ್ತುತ ನಡೆಸುತ್ತಿರುವ’ ಸಖೀಗೀತ " ಬ್ಲಾಗ್ ಉತ್ತಮ ಉದಾಹರಣೆಯಾಗಿದೆ . ಕನ್ನಡ ಸಾಹಿತ್ಯ ಪುಸ್ತಕ ಸಂಸ್ಕೄತಿಗೆ ಮುಖ್ಯವೆನಿಸಿದ ಸುದ್ದಿ , ವಿಶ್ಲೇಷಣೆ , ನೋಟಗಳಿಲ್ಲವನ್ನು ವಿವಿಧ ಪತ್ರಿಕೆ ಮತ್ತು ಪ್ರಕಟಣೆಗಳಿಂದ ಸಂಗ್ರಹಿಸಿ ಒಂದು ರೀತಿಯ ಸಂಪರ್ಕ ಜಾಲವನ್ನು ನಿರ್ಮಿಸಿ ಕೊಡಲಾಗುತ್ತಿದೆ .
      ಬ್ಲಾಗ್ಗಳು ಹೀಗೆ  connect  ಮಾಡುವ ಕೆಲಸವನ್ನು ಮಾತ್ರ ಮಾಡಿದಾಗ ಪರಸ್ಪರ ಸಂವಹನ  ಸ್ಪಂದನವನ್ನು ಹೆಚ್ಚಿಸುತ್ತವೆ.ಬ್ಲಾಗ್ ಗೇ ವಿಶಿಷ್ಟವಾದ ಸ್ವಂತ  ದೄಷ್ಟಿಕೋನಕ್ಕೆ ಬದಲಾಗಿ ಸಮಕಾಲೀನ ಬದುಕಿನಲ್ಲಿ ಕ್ರಿಯಾಶೀಲವಾಗಲು  ತವಕಿಸುತ್ತಿರುವ ಹತ್ತಾರು ದೄಷ್ಟಿಕೋನಗಳು ಒಟ್ಟೀಘೇ ಸಿಕ್ಕಿ ಸಂಸ್ಕೄತಿಕ  ಜೀವನದ ಬಹುಮುಖತೆಯನ್ನು ಪರಿಭಾವಿಸಲು ಸಾಧ್ಯವಾಗುತ್ತದೆ .
                           - ಕೆ. ಸತ್ಯನಾರಾಯಣ.
              { ’ ಓದು ಮತ್ತು ಹೊಸ ತಾಂತ್ರಿಕತೆ ’ ಆಕಾಶವಾಣಿ ಬೆಂಗಳೂರು ಕೇಂದ್ರವು ನಡೆಸಿದ - ನವ ನವೋದಯ - ಕನ್ನಡ ಸಾಹಿತ್ಯದ ನಾಳೆಗಳು - ಸಾಹಿತ್ಯ ಉತ್ಸವದಲ್ಲಿ ಓದಿದ ಪ್ರಬಂಧ .[2013 ] ಕೆ. ಸತ್ಯನಾರಾಯಣ ಅವರ ’ ಸುಮ್ಮನೆ ಓದೋಣ ’ { 2013 -ಐ. ಬಿ. ಎಚ್ ಪ್ರಕಾಶನ } ಪುಸ್ತಕದಲ್ಲಿ ಈ ಲೇಖನ  ಪ್ರಕಟವಾಗಿದೆ.}

2 comments:

  1. ಪರಸ್ಪರ ಸಂವಹನ ಸ್ಪಂದನ ಎಲ್ಲಿ ನಡೀತಿದೆ? ನೀವೆಲ್ಲ ಸಕತ್ತಾಗಿ ಬೆನ್ನು ಕೆರಕೋತೀರ ಬಿಡಿ ಸರ್

    ReplyDelete
  2. ಸಂವಹನ- communication - ನಡೀತಿದೆ . ಸಂವಾದ ನಡೆಯುತ್ತಿಲ್ಲ . ನೀವು ಯಾವುದಾದರು ಲೇಖನಕ್ಕೆ ಪ್ರತಿಕ್ರಿಯೆ ಬರೆದಿದ್ದೀರಾ ? ಸಾತ್ವಿಕ್ , ನಿಮ್ಮ ಬ್ಲಾಗ್ ಯಾವುದು ? ನಿಮ್ಮ blogger profile ನಲ್ಲಿ ಮಾಹಿತಿ ಇಲ್ಲ .

    ReplyDelete