stat Counter



Thursday, November 21, 2013

ಶಿವಾನಂದ ಕಳವೆ - ಭೂಮಿಗೆ ಶಕ್ತಿಯಿದೆ ಆದರೆ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ

ಭೂಮಿಗೆ ಶಕ್ತಿಯಿದೆ, ಆಳುವ ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇಲ್ಲ !
ಇನ್ನೂ ಕೆಲವೆಡೆ ತೆರೆದ ಬಾವಿಗಳಿಂದ ಕಬ್ಬಿಗೆ ನೀರಾವರಿ , ಕಬ್ಬಿನ ಸಾಲಿನ ಅಂತರ ಹಿಗ್ಗಿಸಿ ಉಪಬೆಳೆ ತೆಗೆಯುವ ತಂತ್ರಗಳು. ಇಥ್ರೇಲ್ ಹೊಡೆದು ಎಲೆ ಉದುರಿಸಿದ ಬಳಿಕ ಡಾರ್ಮೆಕ್ಸ್ ಬಳಿದುಕೊಂಡು ಹೂ ಬಿಡಲು ಅಣಿಯಾದ ದ್ರಾಕ್ಷಿ. ತೊಗರಿಯ ನಡುವೆ ಅರಿಸಿನ ಸೊಬಗು, ಗುಲಬರ್ಗಾ ಕಮಲಾಪುರ ಕೆಂಪು ಬಾಳೆಯ ಬೆರಗು, ವಿಜಾಪುರ ಇಂಡಿಯ ಕೃಷಿಯ ಮಳೆ ಆಶ್ರಿತ ನೆಲದ ಬೆಳೆ ವಿಶೇಷಗಳು ನೂರಾರು. ಬೀದರ ಮಾಂಜ್ರಾ ನದಿಯ ಗಡಿಯಲ್ಲಿ ಸುತ್ತಾಡುತ್ತ ಕಲಿತ ಪಾಠಗಳು ನೂರಾರು. ೭೦ ೦ ಕಿಲೋ ಮೀಟರ್ ದೂರದ ಈ ಊರಿಗೆ ಹೊರಟಾಗ ನನ್ನ ಜೊತೆ ಇದ್ದದ್ದು ಒಬ್ಬ ಸ್ನೇಹಿತನ ಮೊಬೈಲ್ ನಂಬರ್ ಮಾತ್ರ ..... ಆದರೆ ರೈತರ ಪ್ರೀತಿ ದೊಡ್ಡದು .... ಹಲವರು ಸಿಕ್ಕರು,ಸ್ನೇಹಿತರಾದರು, ಅವರ ಮನೆಗಳಲ್ಲಿ ವಾಸ್ತವ್ಯ. ಬಿಳಿಜೋಳದ ರೊಟ್ಟಿ, ಪುಡಿ ಚಟ್ನಿಯ ಜೊತೆ ಕುಸುಬಿ ಹಸಿರೆಲೆ ಎಲೆ ತಿನ್ನುತ್ತ ನಮ್ಮ ಕೃಷಿ ಹರಟೆ. ಗೆಳೆಯ ಚಂದ್ರಶೇಖರ ಕಾಡಾವಿ ನೇರ ಬಸವ ಕಲ್ಯಾಣದ ಶರಣ ಕಮ್ಮಟಕ್ಕೆ ಕರೆದೊಯ್ದರು. ರಾಜ್ಯದ ಕೃಷಿಯ ಕಥೆ ಕೇಳಿದರು. ಸ್ವಾಮಿಗಳು ಅಕ್ಕರೆಯಲ್ಲಿ ಸತ್ಕರಿಸಿದರು.
' ಅಧಿಕಾರಿಗಳನ್ನು ಬೀದರಕ್ಕೆ ವರ್ಗಾಯಿಸುತ್ತೆನೆಂದು ರಾಜಕಾರಣಿಗಳು ಲಂಚಕೋರ ಅಧಿಕಾರಿಗಳನ್ನು ಹೆದರಿಸುವದು ಕೇಳಿದ್ದೇನೆ ..... ಈ ಜಿಲ್ಲೆಯ ಹಳ್ಳಿ ಸುತ್ತಾಡಿ ಒಂದು ಮಾತು ಹೇಳಬೇಕು ಬೇಕು .... ರಾಜ್ಯದ ಕೃಷಿ ಅಭ್ಯುದಯಕ್ಕೆ ಇಂದು ಬೀದರ ಕೃಷಿಕರ ಜ್ಞಾನವರ್ಗಾವಣೆ ತುರ್ತಾಗಿ ಆಗಬೇಕಿದೆ 'ರೈತರು ಯಾವ ನೀರಾವರಿ ಯೋಜನೆ ಇಲ್ಲದಿದ್ದರೂ ಬಹಳ ಚನ್ನಾಗಿ ಕೃಷಿ ನಡೆಸಿದ್ದಾರೆ... ಉತ್ತಮ ಬೆಳೆ ಪಡೆಯುತ್ತಾರೆ. ದುಃಖದ ಸಂಗತಿಯೆಂದರೆ ಇಲ್ಲಿನ ಎಲ್ಲ ಕೃಷಿ ಉತ್ಪನ್ನಗಳಿಗೂ ಮಹಾರಾಷ್ಟ್ರ ಮುಖ್ಯ ಮಾರುಕಟ್ಟೆ ! ನಮ್ಮ ಭೂಮಿಗೆ ಶಕ್ತಿಯಿದೆ, ಆಳುವ ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇಲ್ಲ !
 (6 photos)

No comments:

Post a Comment