stat Counter



Tuesday, September 2, 2014

ಉದಯಕುಮಾರ ಹಬ್ಬು - ಪ್ರಶಸ್ತಿ ನೀಡುವವರು ಪುಸ್ತಕ ಖರೀದಿಸಲಿ

ಹಲವಾರು ಸಂಘ, ಸಂಸ್ಥೆಗಳು ಸಾಹಿತಿಗಳ ಕೃತಿಗಳನ್ನು ಸ್ಪರ್ಧೆಗಾಗಿ ಆಹ್ವಾನಿಸುತ್ತವೆ. ನಿಜಕ್ಕೂ ಇದು ಸಾಹಿತಿಗೆ ಮತ್ತು ಸಾಹಿತ್ಯಕೃತಿಗೆ ಪ್ರೋತ್ಸಾಹದಾಯಕವೇ. ಆ ಸಂಘ ಸಂಸ್ಥೆಗಳು ಸಾಹಿತಿಯ ಮೂರು ಅಥವಾ ನಾಲ್ಕು ಕೃತಿಗಳನ್ನು ಕಳುಹಿಸುವಂತೆ ಹೇಳುತ್ತವೆ. ಸಾಹಿತಿಗಳು ತಮ್ಮ ಹಣದಲ್ಲಿ ಕೋರಿಯರ್ ಮಾಡಿ ಕೃತಿಗಳನ್ನು ಕಳುಹಿಸುತ್ತಾರೆ. ಮನ್ನಣೆಯ ದಾಹ ಯಾರಿಗಿಲ್ಲ? ಆದರೆ ಆ ಸಂಘಸಂಸ್ಥೆಗಳು ಸಾಹಿತಿಯ ಕೃತಿಗಳು ಬಂದು ತಲುಪಿದ್ದಕ್ಕೆ ಸೌಜನ್ಯಕ್ಕಾದರೂ ತಿಳಿಸುವ ಗೋಜಿಗೆ ಹೋಗುವುದಿಲ್ಲ. ಮತ್ತೆ ಫಲಿತಾಂಶವನ್ನು ಸಾಹಿತಿಗೆ ತಿಳಿಸದೆ ಅವರಷ್ಟಕ್ಕೆ ಇಟ್ಟುಕೊಂಡುಬಿಡುತ್ತಾರೆ. ಯಾರಿಗೆ ಬಹುಮಾನ ಸಿಕ್ಕಿತು ಎನ್ನುವುದನ್ನು ನಾವು ಪೇಪರ್ ನೋಡಿ ತಿಳಿಯಬೇಕಂತೆ. ಇದು ಸಾಹಿತಿಗೆ ಮಾಡುವ ಅವಮಾನ ಮತ್ತು ಅವಜ್ನೆ. ಇನ್ನಾದರೂ ಸ್ಪರ್ಧೆ ಏರ್ಪಡಿಸುವವರು ಸಾಹಿತಿ ಕಳಿಸಿದ ಕೃತಿಗಳನ್ನು ಹಣಕೊಟ್ಟು ಖರೀದಿಸಿ ಗೌರವಿಸಲಿ. ಇದು ನನಗೆ ಆದ ಅನುಭವ. ಬಾಗಲಕೋಟೆಯ ಸಂಸ್ಥೆಯೊಂದು ನನ್ನ ಕೃತಿಗಳನ್ನು ಫೋನ್ ಮಾಡಿ ತರಿಸಿದರು. ಮತ್ತೆ ಅವರ ಸುದ್ದಿಯಿಲ್ಲ. ಅಂತೆಯೇ ಉಡುಪಿಯ ವ್ಯಕ್ತಿಯೊಬ್ಬರು ಹೀಗೆ ಕೃತಿಗಳನ್ನು ಆಹ್ವಾನಿಸಿ ನನ್ನನ್ನು ಅಲಕ್ಷಿಸಿ ಅವಮಾನಿಸಿದರು. ಇದು ಸರಿಯೇ? ಬಲ್ಲವರು ಹೇಳಬೇಕು.
{ ಉದಯ ಕುಮಾರ್ ಅವರ  face book  ನಿಂದ ಆಯ್ಕೆ ಮಾಡಿದ ಲೇಖನ ]

No comments:

Post a Comment