‘ರಾಷ್ಟ್ರ ವಿರೋಧಿ’ ಹಣೆಪಟ್ಟಿ ಅಂಟಿದ ನಂತರ...: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನ ಅಭಿಪ್ರಾಯ ಹೊಂದುವ ಸ್ವಾತಂತ್ರ್ಯದ ಪಾಲಿಗೆ ದೆಹಲಿ ರಣಾಂಗಣವಾಗಿ ಪರಿವರ್ತಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳದೇ ಇರಲು ಆಗುತ್ತಿಲ್ಲ. 2012ರ ಡಿಸೆಂಬರ್ 16ರ ತಣ್ಣನೆಯ ರಾತ್ರಿಯಲ್ಲಿ 23 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ದೆಹಲಿಯಲ್ಲಿ ಅತ್ಯಾಚಾರ ನಡೆಸಿ, ಆಕೆಯನ್ನು ಕೊಲೆ ಮಾಡಿದಾಗ ಈಗ ನಡೆಯುತ್ತಿರುವಂಥದ್ದೇ ಪ್ರತಿಭಟನೆ ನಡೆದಿತ್ತು. ಆದರೆ, ಈ ಬಾರಿ ವಿಶ್ವವಿದ್ಯಾಲಯವೊಂದರಲ್ಲಿ ಕೂಗಿದ ಘೋಷಣೆಗಳಿಗೆ ಸಂಬಂಧಿಸಿ ವ್ಯಕ್ತವಾಗುತ್ತಿರುವ ಪ್ರತಿಭಟನೆ ಏಕರೂಪಿಯಾಗಿಲ್ಲ.
No comments:
Post a Comment