stat Counter



Friday, July 8, 2016

ಡಿ. ವಿ. ಜಿ - ಗುಡಿಯ ಪೂಜೆಯೋ ಕಥೆಯೋ ಸೊಗಸೋ ?

ಡಿ.ವಿ.ಜಿ ಬೆಳಗು:-
ಗುಡಿಯ ಪೂಜೆಯೊ
ಕಥೆಯೊ,ಸೊಗಸು ನೋಟವೋ
ಹಾಡೋ,ಬಡವರಿಂಗುಪಕೃತಿಯೋ, ಆವುದೋ ಮನದ
ಬಡಿದಾಟವನು ನಿಲಿಸಿ
ನೆಮ್ಮದಿಯನೀವೊಡದೆ
ಬಿಡುಗಡೆಯೊ ಜೀವಕ್ಕೆ
ಮಂಕುತಿಮ್ಮ
*ನಲ್ಬೆಳಗು *ಕವಿತಾ ಅಡೂರು *
(ದೇಗುಲದಲ್ಲಿ ಮಾಡುವ ಪೂಜೆ-ಪುನಸ್ಕಾರಗಳು,ಹರಿಕಥೆ,ಭಜನೆ,ಪ್ರವಚನ,ಸತ್ಸಂಗ ಗಳಲ್ಲಿ ಪಾಲ್ಗೊಳ್ಳುವುದು ಅಥವಾ ಒಂದು ಸೊಗಸಾದ ನೋಟವನ್ನು ನೋಡುವುದು ಅಥವಾ ಸುಶ್ರಾವ್ಯವಾದ ಸಂಗೀತವನ್ನು ಆಲಿಸುವುದು ಅಥವಾ ಬಡಜನರಿಗೆ,ದೀನರಿಗೆ ಉಪಕಾರವನ್ನು ಮಾಡುವುದೋ..ಹೀಗೆ ಯಾವುದಾದರೂ ಒಂದು ಉದ್ದೇಶ ದಲ್ಲಿ, ಕೆಲಸದಲ್ಲಿ ನಿನ್ನನ್ನು ನೀನು ತೊಡಗಿಸಿಕೊ. ಬದುಕಿಗೆ ಒಂದು ಉದ್ದೇಶ ಇರಲೇ ಬೇಕು. ಇದು ಮನಸ್ಸಿನ ಬಡಿದಾಟವನ್ನು, ಬೇಸರವನ್ನು ಕಳೆದು ನೆಮ್ಮದಿಯನ್ನು ನೀಡುತ್ತದೆ. ಅದುವೇ ಜೀವಕ್ಕೆ ನಿರಾಳವಾದ,ನಿಶ್ಚಿಂತೆಯ ಬಿಡುಗಡೆಯಾಗಿರುತ್ತದೆ.ಹಾಗಾಗಿ ನಮ್ಮ ನಮ್ಮ ಬದುಕಿನ ಉದ್ದೇಶಗಳನ್ನು ಕಂಡುಕೊಳ್ಳೊಣ. ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳೊಣ.


{ಕವಿತಾ ಅಡೂರು ಅವರ Face Book  ನಿಂದ }

No comments:

Post a Comment