stat Counter



Sunday, February 5, 2017

ಅಗ್ನಿಶೇಖರ್- ಕ್ಷಮಾ ಕೌಲ್ ದಂಪತಿ.

ಹುಟ್ಟೂರಿಗೆ ಮರಳುವ ಹಂಬಲ ಹೊತ್ತ ಕಾಶ್ಮೀರಿ ಪಂಡಿತರ ಅಳಲಿಗೆ ಸಾಕ್ಷಿಯಾದ ಅಗ್ನಿಶೇಖರ್- ಕ್ಷಮಾ ಕೌಲ್ ದಂಪತಿ.

ಜನವರಿ 30 ರಂದು ರಥಬೀದಿ ಗೆಳೆಯರು, ಉಡುಪಿ, ಇವರ ಆಶ್ರಯದಲ್ಲಿ ಕಾಶ್ಮೀರಿ ಮೂಲದ ಬಹುಚಚರ್ಿತ ಹಿಂದಿ ಕವಿ ಡಾ. ಅಗ್ನಿಶೇಖರ್ ಹಾಗೂ ಅವರ ಪತ್ನಿ ಹಿಂದಿ ಲೇಖಕಿ ಕ್ಷಮಾ ಕೌಲ್ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು.
ಅವರೀರ್ವರೂ 27 ವರ್ಷಗಳ ಹಿಂದೆ (1990) ಕಾಶ್ಮೀರ ಕಣಿವೆಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ಹಾಗೂ ಉಗ್ರಗಾಮಿ ಚಟುವಟಿಕೆಗಳ ತುರೀಯಾವಸ್ಥೆಯಲ್ಲಿ ನಲುಗಿ ಮನೆಮಾರು ಕಳೆದುಕೊಂಡು ದಿಲ್ಲಿ, ವಾರಣಾಸಿ ಮುಂತಾದೆಡೆಗಳ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ನಾರಕೀಯ ಜೀವನ ಸವೆಸುತ್ತ, ತವರಿಗೆ ತೆರಳುವ ಹಂಬಲ ಹೊತ್ತ ಸಹಸ್ರಾರು ಕಾಶ್ಮೀರಿ ಪಂಡಿತರ ನೋವು-ನೈರಾಶ್ಯಗಳನ್ನು ನಮ್ಮೆದುರು ತೆರೆದಿಟ್ಟರು.
'ಕಿಸೀ ಭೀ ಸಮಯ್' (ಏ ಛ ಖಚಿಟಚಿಥಿ), 'ಮುಝಸೆ ಛೀನ್ ಲೀಗಯೀ ಮೇರೀ ನದೀ'(ಒಣಧಜ ಅಜಜಟಿ ಟಜಜರಚಿಥಿಜಜ ಟಜಡಿ ಓಚಿಜ), 'ಕಾಲವೃಕ್ಷ ಕೀ ಛಾಯಾ ಮೇಂ'(ಏಚಿಚಿಟ ಗಿಡಿಞ ಞಜಜ ಛಿಚಿಥಿಚಿ ಟಜಟಿ), 'ಮೇರೀ ಪ್ರಿಯ ಕವಿತಾಯೇಂ'(ಒಜಡಿ ಕಡಿಥಿಚಿ ಏಚಿತಣಚಿಥಿಜಟಿ) ಕವನ ಸಂಕಲನಗಳು, 'ದೋಜéಖ್'(ಆಠದಚಿಞ), 'ಜವಾಹರ್ ಟನೆಲ್'(ಎಚಿತಿಚಿಚಿಡಿ ಖಿಣಟಿಟಿಜಟ) ನಂತಹ ಕಥಾ ಸಂಕಲನಗಳ ಜೊತೆಗೆ ಹಿಂದಿ-ಕಾಶ್ಮೀರಿ ಸಾಹಿತ್ಯಗಳ ಅನುವಾದಕರಾಗಿ, ಪುಸ್ತಕ ಸಂಪಾದಕರಾಗಿ, ಸಿನೇಮಾದ ಸ್ಕ್ರೀನ್ ಪ್ಲೇ ರೈಟರ್ ಆಗಿ ಪ್ರಸಿದ್ಧಿ ಪಡೆದ ಡಾ. ಅಗ್ನಿಶೇಖರ್ರು ಕಾಶ್ಮೀರದಲ್ಲಿಯ ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಯಿಂದಾಗಿ 27 ವರ್ಷಗಳಿಂದ ತಮ್ಮ ನೆಲೆ ಕಳೆದುಕೊಂಡವರು. ಕಾಶ್ಮೀರದ ನೆನಪುಗಳನ್ನು ಹೃದಯಾಂತರಾಳದಲ್ಲಿ ಶೇಖರಿಸಿಟ್ಟುಕೊಂಡು ಇಂದಲ್ಲ ನಾಳೆ ತಮ್ಮ ನೆಲೆ ತಮಗೆ ಸಿಗಬಹುದೆಂಬ ಆಸೆ ಹೊತ್ತುಕೊಂಡವರು. ಮಾನವಾಧಿಕಾರದ ಮೂರ್ತತೆಯಲ್ಲಿ 'ಮನೆಗೆ ಮರಳುವ ಆಂದೋಲನ' ದಲ್ಲಿ ಪ್ರಮುಖ ಪಾತ್ರವಹಿಸಿಕೊಂಡವರು. ಈ ನೆಪದಲ್ಲಿ ಅಮೇರಿಕಾ, ಲಂಡನ್, ಫ್ರಾನ್ಸ್, ಹೇಗ್, ಆ್ಯಮಸ್ಟರಡ್ಯಾಮ್ನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸಿದವರು.
ಆರಂಭದಲ್ಲಿ 'ದರ್ದಪುರ' ಕಾದಂಬರಿಯ ಮೂಲಕ ಕಟು ವಿಮಶರ್ೆಗೆ ಗುರಿಯಾದ ಲೇಖಕಿ ಡಾ. ಕ್ಷಮಾ ಕೌಲ್ ತಮ್ಮ ಅನುಭವವನ್ನು ಹಂಚಿಕೊಂಡರು. ಮೂರು ತಲೆಮಾರುಗಳ ಕಾಶ್ಮೀರಿ ಮಹಿಳೆಯರ ಶೋಷಣೆಯ ನಗ್ನ ಚಿತ್ರವನ್ನು ಈ ಕಾದಂಬರಿಯ ಮೂಲಕ ಕಟ್ಟಿಕೊಟ್ಟಿದ್ದಕ್ಕೆ ನನ್ನ ಸಂಬಂಧಿಗಳೇ ನನ್ನಲ್ಲಿ ಕೇಳಿದ್ದೇನು ಗೊತ್ತೆ, 'ಇವೆಲ್ಲ ನಿನಗೆ ಬೇಕಿತ್ತಾ? ಇವನ್ನೆಲ್ಲ ಯಾಕೆ ಬರೆಯಲಿಕ್ಕೆ ಹೋದೆ?...' ಆದರೆ ಯಾವುದೇ ದಂಡಯಾತ್ರೆಯಾಗಲಿ, ದಂಗೆಯಾಗಲಿ, ಆಕ್ರಮಣವಾಗಲಿ ನೇರ ಪ್ರಭಾವಕ್ಕೊಳಗಾಗುವವಳು ಮಹಿಳೆ ಎಂಬುದರಲ್ಲಿ ಎರಡು ಮಾತಿಲ್ಲ.
ನಾವು ಮೊದಲಿನಿಂದಲೂ ಜಾತಿಯ ಒಳ ಪಂಗಡಗಳನ್ನು ನಂಬಿದವರೇ ಅಲ್ಲ. ನಮ್ಮ ಅಜ್ಜಿ-ಅಮ್ಮಂದಿರು ಈಶ್ವರ-ಭಕ್ತಿಯಲ್ಲಿ ಪುನೀತತೆಯನ್ನು ಕಂಡುಕೊಂಡವರು. ನಾವು ನಮ್ಮ ನೆಲೆ ಕಳಚಿಕೊಂಡು ಪರಸ್ಥಳಕ್ಕೆ ಬಂದಾಗ ಸಹಜ ಭಕ್ತಿಭಾವದಿಂದ ನಮ್ಮ ಈ ಹೆಂಗಳೆಯರು ಅಲ್ಲಿರುವ ಅನ್ಯಪಂಗಡದವರ ದೇವಾಲಯಗಳಿಗೆ ಹೋಗುತ್ತಿದ್ದರು. ದುವರ್ಿಧಿಯೆಂದರೆ, ಆ ದೇವಾಲಯಗಳಿಗೆ ಸಂಬಂಧಪಟ್ಟವರು  'ನೀವು ನಮ್ಮ ದೇವಸ್ಥಾನಕ್ಕೆ ಬರಬೇಡಿ' ಎಂದು ಅವರನ್ನು ಕರೆದು ಹೇಳಿದಾಗ ಅವರಿಗಾದ ಭಯ ಅಷ್ಟಿಷ್ಟಲ್ಲ. ತಾವೇನು ತಪ್ಪು ಮಾಡಿದ್ದೇವೆ, ಇವರು ತಮಗೆ ಹೀಗೇಕೆ ಹೇಳುತ್ತಾರೆ, ಎಂದು ಮುಗ್ಧತೆಯಲ್ಲಿ ಮನನೊಂದುಕೊಳ್ಳುತ್ತಿದ್ದರು. ಅವರು ದೂರವಿಡುವುದು ಇವರು ಕಾಶ್ಮೀರಿ ಉಚ್ಚ ಬ್ರಾಹ್ಮಣರು ಎಂಬ ಕಾರಣಕ್ಕಾಗಿ! ಆದರೆ ನಮ್ಮಲ್ಲಿ ಅಂಥ ಮೇಲು-ಕೀಳು ಭಾವನೆಯೇ ಇಲ್ಲ.
ಆಕ್ರಮಣಶೀಲತೆಯ ಕರಾಳ ಮುಖವನ್ನು ನೋಡಿದ ಮೇಲಂತೂ ಕೌಟುಂಬಿಕ ಚೌಕಟ್ಟಿನಲ್ಲಿ ಹಿಂದುಗಳೆಲ್ಲ ಒಂದೇ  ಎಂಬ ಭಾವನೆ ಮೊದಲಿಗಿಂತಲೂ ಗಟ್ಟಿಯಾಗಿದೆ. ಹಾಗಾಗಿ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆಯಾದ ನಮ್ಮ ಮಗಳು ಭಾಷಾ, 'ತಾನೊಬ್ಬ ಹುಡುಗನನ್ನು ಪ್ರೀತಿಸುತ್ತೇನೆ' ಎಂದು ಹೇಳಿದಾಗ ನಾವು ಕೇಳಿದ ಏಕೈಕ ಪ್ರಶ್ನೆ, 'ಅವನು ಹಿಂದು ಹೌದಲ್ಲವಾ?' ಅವನ ಬಗ್ಗೆ ಮತ್ತೇನನ್ನೂ ಕೇಳಲಿಲ್ಲ....ಎಂದು ತಮ್ಮ ಮನದಾಳದ ಮಾತುಗಳನ್ನಾಡುತ್ತ ಅವರು ತುಸು ಭಾವುಕರಾದರು.
ನಂತರ ಮಾತನಾಡಿದ ಡಾ. ಅಗ್ನಿಶೇಖರ್ರು, ಕಲ್ಹಣ, ಬಿಲ್ಹಣ, ಭಾಮಹ ಮುಂತಾದವರ ಕುಲದವರು ನಾವು. ಅವರೆಲ್ಲರನ್ನು ಪುರಸ್ಕರಿಸಿದ ಕನರ್ಾಟಕದ ನೆಲದ ಮೇಲೆ ಕಾಲಿಡುವ ವರೆಗೆ ಇದು ಇಷ್ಟು ಹತ್ತಿರದಲ್ಲಿರುವ ಪ್ರದೇಶ ಎಂಬ ಅರಿವು ನಮಗಿರಲಿಲ್ಲ. ಹಾಗಾಗಿ ಕಾಶ್ಮೀರದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆ ನಿಮ್ಮ ಮಟ್ಟಿಗೆ ದೂರದಲ್ಲೆಲ್ಲೋ ಆಗುತ್ತಿದೆ ಎಂದು ಅನ್ನಿಸಬಹುದು. ಅದರ ಕುರಿತಾಗಿ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಎಂದು ನೀವು ತಿಳಿದುಕೊಂಡಿದ್ದರೆ ಅದರಂತಹ ದುರಂತ ಬೇರೊಂದಿಲ್ಲ. ಇಂದು ಕಾಶ್ಮೀರ, ನಾಳೆ ದೇಶದ ಮತ್ತಾವುದೇ ಭಾಗ...ಕಬಳಿಕೆಯ ದಾಹಕ್ಕೆ ಅಂತ್ಯವೆಂಬುದಿರುವುದಿಲ್ಲ. ಮಹಾನ್ ಲೇಖಕರೆನಿಸಿಕೊಂಡ ಅರುಂಧತಿ ರಾಯ್ ನಂತವರು ಭೌಗೋಲಿಕ-ಐತಿಹಾಸಿಕ ಪ್ರಜ್ಞೆಯಿಲ್ಲದೆ ಕಾಶ್ಮೀರ ಭಾರತದ ಭಾಗವೇ ಅಲ್ಲ ಎಂಬಿತ್ಯಾದಿ ಎನ್ನುತ್ತಾರೆ. ಇಂಥವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯುತ್ತಿಲ್ಲ. ಅದೇ ರೀತಿಯಲ್ಲಿ ನಮ್ಮ ರಾಜಕಾರಣಿಗಳೂ ಅಷ್ಟೆ, ನಮ್ಮ ಮತಗಳು ಅವರ ರಾಜಕಾರಣದಲ್ಲಿ ನಿಣರ್ಾಯಕವಾಗಿಲ್ಲ ಎಂಬ ಕಾರಣಕ್ಕಾಗಿ ನಮ್ಮ ನೋವಿಗೆ ಮಿಡಿಯುವ ಗೊಡವೆಗೆ ಬರುವುದಿಲ್ಲ. ಅಂಚೆ ಮೂಲಕ ಮತ ನೀಡುವ ಆಹ್ವಾನವಿರುತ್ತದೆ. ಆದರೆ ಅಲ್ಲಿ ನಮ್ಮ ಪ್ರತಿನಿಧಿ ಯಾರು, ಹೇಗಿದ್ದಾರೆ, ನಮಗಾಗಿ ಅವರೇನು ಮಾಡಬಲ್ಲರು ಎಂಬುದರ ಅರಿವು ನಮಗಿಲ್ಲ.
ಕೇಂದ್ರದಲ್ಲಿಯ ಹಿಂದಿನ ಸರಕಾರವಿರಬಹುದು ಅಥವಾ ಇಂದಿನ ಸರಕಾರವೇ ಇರಬಹುದು, ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಹಾಗಾದರೆ ನಮ್ಮ ನೋವಿಗೆ ಸ್ಪಂದಿಸುವವರಾರು? ಸುಟ್ಟು ಕರಕಲಾದ ನಮ್ಮ ಮನೆಗಳು, ಕಣ್ಣೆದುರೇ ಅತ್ಯಾಚಾರಕ್ಕೊಳಗಾದ ನಮ್ಮ ಅಕ್ಕ-ತಂಗಿ-ಅತ್ತಿಗೆಯಂದಿರು...ಮಡುಗಟ್ಟಿರುವ ನಮ್ಮ ನೋವಿಗೆ ಸ್ಪಂದನೆಯೇ ಇಲ್ಲವಾಗಿದೆ.
ಕಾಶ್ಮೀರಿ ವಿಸ್ಥಾಪಿತರ (ಜಠಿಟಚಿಛಿಜಜ ಏಚಿಟಡಿ) 'ಕೇಶುರ್ ಸಮಾಚಾರ್ (ಕಾಶ್ಮೀರಿ-ಹಿಂದಿ-ಇಂಗ್ಲಿಷ್ ತ್ರಿಭಾಷಾ ಮಾಸಪತ್ರಿಕೆ) ದಲ್ಲಿಯ ಬರವಣಿಗಳ ಮೂಲಕ ಚದುರಿಹೋದ ನಾವು ಎಲ್ಲೆಲ್ಲಿಂದಲೋ ಭರವಸೆಯ ನಾಳೆಗಳ ದಾರಿ ನೋಡುತ್ತಿದ್ದೇವೆ. ಈ ರೀತಿಯಲ್ಲಿ ಡಾ. ಅಗ್ನಿಶೇಖರ್ರು ಆಕ್ರೋಶರಹಿತರಾಗಿ ತಮ್ಮ ಮನಸ್ಸನ್ನು ಬಿಚ್ಚಿಟ್ಟರು.
ಡಾ. ಮಾಧವಿ ಎಸ್. ಭಂಡಾರಿಯವರು ಅಗ್ನಿಶೇಖರ್ರ ಪರಿಚಯ ಮಾಡಿ,'19 ಜನವರಿ, 1990 ಕೀ ರಾತ್' ಎಂಬ ಅವರ ಹಿಂದಿ ಕವಿತೆ ಹಾಗೂ ತಾವು ಮಾಡಿದ ಕನ್ನಡಾನುವಾದವನ್ನು ವಾಚಿಸಿದರು.
ಡಾ. ಉಷಾರಾಣಿ ರಾವ್, ಬಾಲ್ಡವಿನ್ ಮಹಿಳಾ ಕಾಲೇಜು, ಬೆಂಗಳೂರು ಇವರು, ಡಾ. ಕ್ಷಮಾ ಕೌಲ್ರ ಪರಿಚಯ ಮಾಡಿಕೊಡುವುದರ ಜೊತೆಗೆ 'ದರ್ದಪುರ' ಕಾದಂಬರಿಯ ಕಿರುಪರಿಚಯ ಮಾಡಿಕೊಟ್ಟರು.
ಪ್ರೊ. ಮುರಳೀಧರ ಉಪಾಧ್ಯಾಯರು ಪ್ರಾಸ್ತಾವಿವಾಗಿ ಮಾತನಾಡುತ್ತ ಅಂತಜರ್ಾಲದಿಂದ ಕಲೆಹಾಕಿದ ಅಗ್ನಿಶೇಖರ್ರ ಬಗೆಗಿನ ಹಲವು ಮಾಹಿತಿಗಳನ್ನು ಸಭೆಯ ಮುಂದಿಟ್ಟರು. ತಮ್ಮ ಸುಭದ್ರತೆಗೆ ಆದ್ಯತೆ ನೀಡದ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸರಕಾರ ಕೊಟ್ಟ 50,000/- ರೂ. ಮೊತ್ತದ ಪುರಸ್ಕಾರವನ್ನು ತಿರಸ್ಕರಿಸಿರುವ ಅವರ ದಿಟ್ಟತನವನ್ನು ಶ್ಲಾಘಿಸಿದರು.


ಡಾ. ಮಾಧವಿ ಎಸ್. ಭಂಡಾರಿ

No comments:

Post a Comment