stat Counter



Sunday, April 9, 2017

ವಿ. ಎಸ್.. ಶ್ಯಾನುಭಾಗ್-- ಯುಗಾದಿ

ಯುಗಾದಿ 



Image may contain: 1 person

























ಯುಗಾದಿ ಎಂದರೆ  ಹೀಗೆ
ಅಗ್ದಿ ನಿಗದಿಯಂತೆ ಪ್ರತಿವರ್ಷ
ಮ್ಮಾಗಿದೆ  ಎಂದರ್ಥ? ಮತ್ತೆ
ಪಂಕ್ತಿಯಲ್ಲಿ ಹೊಸ ಸವಟು
ಸರತಿಯಲ್ಲಿ ಹೊಸ ದೀಪ್ತಿ?


ಯುಗಾದಿ ಎಂದರೆ
ಹಳಯಹಾದಿ ಹೊಸ ಗಾದಿ  ಹೊಸ ಕನಸು?
ಹಳೇ ಬೇತಾಳ ಹೊಸ ಹೊಸ ಕಥೆಯ ಹೆಗಲಮೇಲೆ
ಪೇಜ್ ತ್ರಿವಿಕ್ರಮ ?
ಸುಳಿದಷ್ಟೂ ಸರಳವಾಗದ ಹಾಡಿನಂತೆ
ಅಂಬಿಕಾತನಯ ದತ್ತನ ?ಉದಾತ್ತನ ?

ಲೆಕ್ಕ ಇಲ್ಲದ ಚಿಕ್ಕ ಚಿಕ್ಕ ಬೆಕ್ಕು ಬಿಟ್ಟ ಕಣ್ಣು
ಪಡಕೊಂಡಷ್ಟೂ ಕಳಕೊಂಡ ಬಿದ್ದಹಣ್ಣು
ಎಂಬ ಲೆಕ್ಕಾಚಾರದಲ್ಲಿ
ಹೊದ್ದುಕೊಂಡ ಚಾದರದಲ್ಲಿ
ಎದ್ದವರಿಲ್ಲ ಕನಸ ಕದಿಯಲು ಬಲ್ಲ
 ಜನರಿಗೆ ಮೈಲಿಗೆ ಸಲ್ಲ

ಯುಗಾದಿ ಎಂದರೆ ಹೊಸಹಾದಿ ತುಳಿದು
ಮೊಗ್ಗಿಗೆ ಹೊಸಬಣ್ಣ ನೋಡುವ ಕಣ್ಣು
ಹೊಕ್ಕುಳಲಿ ಹೂವ ಬಿಟ್ಟವರೇ
ಮರಳಿ ಮರಳಿ ಬರುವ ಯುಗಾದಿಗೆ
ಹೊಸ ಗಿಡ ನಿಟ್ಟವರೇ

ಕನಸುಗಳ ಪೊಟ್ಟಣಕಟ್ಟಿ ಪಟ್ಟಣದಲ್ಲಿ ಬಿಟ್ಟವರೇ
ಕುಣಿದಾವು ನಿಮ್ಮ ಪರೀಕ್ಷೆಗಳ ಕಾಳಿ
ಅಥವಾ ಬೇಂದ್ರೆ ಅಜ್ಜನ ಕವನದ ಹಾಳಿ
ಜೀವನದ ಪಾಳಿ ಅಂದ್ರ ಕಟ್ಟಿದಂತ ತಾಳಿ

ಯುಗಾದಿ ಎಂದರೆ
ಹೊಸತಿರುವು ದಾಟಿದವರಿಗೆ ಬೇರು ಹಾಳೆಹಾದಿ ಜ್ಞಾನ
ಕನಸಬೇಡಿ ಬರುವವರಿಗೆ ಬಾಡಿಹೋದವರ ಸಹನ
ಹೊಸ ನದಿಯಲ್ಲಿ ತೇಲುವವರಿಗೆ ಮುಳುಗಿಹೋದ ದೋಣಿ
ರಾಜರಸ್ತೆ ಎಷ್ಟೇ ಹತ್ತಿರವಿದ್ದರೂ ದಾಟಬೇಕು ಓಣಿ


ಯುಗಾದಿ ಮರೆಸಲಿ ಉದರಿ ದಿನಗಳು ಉದುರಿ
ಬೇಡ ಹಾಕುವ ಲಾಗ ಮದಾರಿಗೆ ಹೆದರಿ
ಬೇಡ ಹಂಗು ಚಂಗುಮಂಗು ಗಳ ಸಂಗ
ಒಂದಿಷ್ಟು ಆಗು ಕೊನೆಯ ಮನೆಯ ವಿನಯ
ಅರ್ಥ ಹೊರಿಸದ   ಸಹಜ ಕಾವ್ಯ

ಯುಗಾದಿ ಎಂದರೆ
ಹೊಸೆದ ಹೊಸ ಬತ್ತಿ ದೀಪ ಕಳೆದು ಕಾಡುವ ನೆರಳು
ಹೊಸ ಹಾಡಿಗೆ ಮೀಟುವ ಹಳೆ ತಂತಿಗೆ ಅದೇ ಬೆರಳು
ಹಳೆಯ ಮುರಳಿಗೆ ಹೊಸ ಗೋಪಿಯ ಮರುಳು
ಅದೇ ದೇವರು ಹೊಸಹೊಸದಾಗಿ ಸಜ್ಜಾದ ಹಳೆ ತೇರು

No comments:

Post a Comment