ನಾಂಕ ೨೫-೦೩-೨೦೧೭ ರಂದು ಜಯನಗರದ ಸಿರಿಸಂಪಿಗೆಯಲ್ಲಿ ಶ್ರೀ ಕೆ. ಸತ್ಯನಾರಾಯಣ ಅವರ ಎರಡು ಕಿರುಕಾದಂಬರಿಗಳು “ವಿಕಲ್ಪ” ದ ಕುರಿತಾದ ಈ ಹೊತ್ತಿಗೆಯ ಚರ್ಚೆಯಲ್ಲಿ ಭಾಗವಹಿಸಿದ್ದವರಲ್ಲಿ ಉಷಾ.ಪಿ ರ್ಐ, ಜಯಶ್ರೀ ದೇಶಪಾಂಡೆ ಮತ್ತು ಸಹನಾ ಹೆಗಡೆ ಅವರ ಅಭಿಪ್ರಾಯಗಳು ಬರಹ ರೂಪದಲ್ಲಿ, ನಿಮ್ಮ ಓದಿಗೆ ಜೊತೆಯಾಗಿ. :)
” ಎಲ್ಲರೂ ವಿಕಲ್ಪದ ಬಗ್ಗೆ ಮಾತಾಡಿದ ಮೇಲೆ ನನಗೆ ಹೇಳುವುದೇನೂ ಉಳಿದಿಲ್ಲ ಎಂದೆನಿಸುತ್ತದೆ. ಅದರಲ್ಲೂ ಸಹನಾ ಅವರು ನನಗನಿಸಿದ ಹಲವಾರು ಸಂಗತಿಗಳನ್ನು ಹೇಳಿದ್ದಾರೆ. ಕೆಲವೇ ಮಾತುಗಳಲ್ಲಿ ಹೇಳುವುದಾದರೆ ಮೊದಲ ಸಲ ಓದಿದಾಗ ಈ ಕಾದಂಬರಿ ನನಗೆ ಅಷ್ಟೇನೂ ಹೆಚ್ಚು ಇಷ್ಟವಾಗಲಿಲ್ಲವೆಂದೇ ಹೇಳಬಹುದು. ಎಲ್ಲಾ ಪಾತ್ರಗಳೂ ವಿಕಲ್ಪರೇ ಸರಿಯಾದ ಮನಸ್ಥಿತಿಯವರು ಯಾರೂ ಇಲ್ಲ ಎಂದನಿಸಿತ್ತು. ಆ ಕಾರಣಕ್ಕೆ ಇನ್ನೊಮ್ಮೆ ಓದಿದೆ. ಆಗ ಹೌದಲ್ಲ ಮನುಷ್ಯರು ಹೀಗೂ ಇರಬಹುದಲ್ಲ ಎಂದು ಅನಿಸಿತು. ಇಲ್ಲಿಯ ಹೆಣ್ಣು ಪಾತ್ರಗಳು ಆಧುನಿಕ ಮನೋಭಾವದವರೆಂದು ಅನಿಸಿದರೂ ಅವರಿಗೆ ಏನು ಬೇಕೆಂದು ಅವರಿಗೇ ಗೊತ್ತಿಲ್ಲದೆ ಗಂಡನನ್ನು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕಾಕ್ಕೆ ಹಾರಿದರೂ ಅವರು ಕೊನೆಗೆ ಮಾಡುವುದು ಅಲ್ಲೇ ಮದುವೆಯಾಗಿ ಸಂಸಾರವಂದಿಗರಾಗುವುದು. ಇದೇ ಆದರೆ ಅವರೇನು ಸಾಧಿಸಿದಂತಾಯಿತು? ಇಬ್ಬರು ಒಂದೇ ರೀತಿಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದುದನ್ನು ನೋಡುವಾಗ ಹೆಂಗಸರೆಂದರೆ ಇಷ್ಟೆನೇ ಎನ್ನುವ ಚೌಕಟ್ಟು ಹಾಕಿ ಬರೆದಿದ್ದಾರೇನೋ ಎಂದು ಆಲೋಚಿಸುವಂತೆ ಮಾಡುತ್ತದೆ.ಲೇಖಕರು ಅವರಿಬ್ಬರನ್ನೂ ಬೇರೆ ರೀತಿಯಲ್ಲಿ ಚಿತ್ರಿಸಬಹುದಿತ್ತು. ಮೂರನೇಯವಳೂ ಅವರಿಗಿಂತ ಭಿನ್ನಳಲ್ಲ. ಆದರೆ ಗಂಡನಿಂದ ತನಗೇನು ಬೇಕು ಎನ್ನುವ ಅರಿವು ಇದ್ದವಳು. ಇಲ್ಲಿಯ ನಾಯಕನೇ ತುಂಬಾ ವೀಕ್ ಕ್ಯಾರೆಕ್ಟರ್ ಅನಿಸುತ್ತದೆ.ಮಹಿಳೆಯರಿಗಿಂತ ವೀಕ್ ಅನಿಸುವಂತೆ ಒಬ್ಬ ಲೇಖಕ ನಾಯಕನನ್ನು ಚಿತ್ರಿಸುವುದು ಬಹಳ ಅಪರೂಪ. ಅದನ್ನು ಲೇಖಕ ಇಲ್ಲಿ ಮಾಡಿದ್ದಾರೆ. ತನ್ನ ಮೊದಲ ಹೆಂಡತಿಯರು ತಮ್ಮ ಆತ್ಮ ಚರಿತ್ರೆ ಬರೆಯುವರೆನ್ನುವಾಗ ಅವನಿಗೆ ಅನಿಸುವ ಕೀಳರಿಮೆ, ತನ್ನ ಬಗ್ಗೆ ಅವರೇನು ಬರೆಯುತ್ತಾರೋ ಎನ್ನುವ ಭಯ ಅವರಿಗಿಂತ ಮೊದಲು ತಾನೇ ಎಲ್ಲವನ್ನೂ ಹೇಳಿ ಬಿಡಬೇಕು ಎನ್ನುವ ತುಡಿತವನ್ನು ಹುಟ್ಟಿಸುತ್ತದೆ. ಹಾಗೇ ಬರೆದು ನಿರಾಳವಾಗಿ ಬಿಡುತ್ತಾನೆ. ಓದುಗರಿಗೆ ಆ ಹೆಂಗಸರು ದಕ್ಕುವುದು ಅವನು ಬರೆದ ಪುಟಗಳಿಂದ. ಇದರಲ್ಲಿ ಕೊನೆಯಲ್ಲಿ ಬರುವ ರಾಜಲಕ್ಷ್ಮಿ ಪಾತ್ರ ಇವರೆಲ್ಲರಿಗಿಂತ ಭಿನ್ನವಾದದ್ದು.ಅವಳೂ ಆತ್ಮ ಚರಿತ್ರೆ ಬರೆದವಳು ಆದರೆ ಅವಳದಲ್ಲ ಗಂಡ ಸತ್ತನಂತರ ಅವನದ್ದು. ಹೀಗೆ ಒಂದೆರಡು ಆತ್ಮಕತೆಗಳು ಕನ್ನಡದಲ್ಲಿ ಬಂದಿವೆ. ಅದರ ನೆನಪು ಇಲ್ಲಿ ಬಂತು. ಆದರೆ ಯಾರೂ ಬೇರೆಯವರ ಆತ್ಮ ಚರಿತ್ರೆ ಬರೆಯುವುದು ಸಾಧ್ಯವಿಲ್ಲ. ಅಲ್ಲಿ ಸಂಪೂರ್ಣ ಸತ್ಯ ಬರುವುದಿಲ್ಲ. ಹಾಗಾಗಿ ರಾಜಲಕ್ಷ್ಮಿಗೂ ಗಂಡನ ಆತ್ಮಚರಿತ್ರೆ ಬರೆದು ಅದು ಪ್ರಕಟವಾದ ನಂತರ ತಾನು ಬರೆಯಬಾರದಿತ್ತು ಎಂದು ಅನಿಸುತ್ತದೆ. ಅವಳು ಕೊನೆಯಲ್ಲಿ ಹೇಳುವ ಯಾರಲ್ಲೂ ಪರಿಪೂರ್ಣತೆ ಹುಡುಕುವುದು ಸರಿಯಲ್ಲ ಎನ್ನುವ ಮಾತನ್ನು ಈ ಕಾದಂಬರಿ ಹೇಳಲು ಹೊರಟಿದೆ ಎಂದನಿಸುವಂತೆ ಮಾಡುತ್ತದೆ. ಅದರಿಂದಾಗಿಯೇ ಇಲ್ಲಿಯ ನಾಯಕ ಅವನ ಆತ್ಮ ಚರಿತ್ರೆಯನ್ನು ಬರೆದ ಮೇಲೆ ನಿರಾಳನಾಗುವುದು ಇರಬಹುದು.
ವಿಕಲ್ಪ.
ಯಾವುದೇ ಕಥನ ರೂಪುಗೊಳ್ಳುವಾಗ ಲೇಖಕರು ಅದರೊಳಗೆ ಅನುಭವಿಸುವ ತಾದಾತ್ಮ್ಯತೆ, ಅಥವಾ ದ್ವಂದ್ವ, ಪಾತ್ರಪೋಷಣೆಯಲ್ಲಿನ ಸತ್ವ ಅಥವಾ ಕಥೆಯ ಸಂಬದ್ಧತೆಯ ಆಳವನ್ನು ಗ್ರಹಿಸಬೇಕೆಂದರೆ ನಾವು ಆ ಪಾತ್ರಗಳಲ್ಲಿಳಿದು ನೋಡಬೇಕು. ಹಾಗೊಮ್ಮೆ ಹೇಳುವುದಾದರೆ ಯಾವುದೇ ಕಥಾನಕದಲ್ಲಿನ ಪಾತ್ರಗಳು ತಮ್ಮನ್ನು ಸಮರ್ಥಿಸುವ ಧಾಟಿಯಲ್ಲಿಯೇ ರೂಪುಗೊಂಡಿರುತ್ತವೆ. ಆದರೆ ವಿಕಲ್ಪ ಕಾದಂಬರಿಯಲ್ಲಿ ನಾಯಕ ನಾಗರಾಜನ ದೃಷ್ಟಿಕೋನದಲ್ಲೇ ಪ್ರಸ್ತುತಪಡಿಸಲ್ಪಟ್ಟಿರುವ ಅವನ ಮೂವರು ಸಹಧರ್ಮಿಣಿಯರ ವ್ಯಕ್ತಿತ್ವ, ಅಸ್ತಿತ್ವಗಳು ಮದುವೆಯ ಚೌಕಟ್ಟಿನಲ್ಲಿ ನಾಗರಾಜನೊಡನೆ ಬಂಧಿತವಾಗಿಯೂ ತಮ್ಮಡೇ ಆದ ಪ್ರತ್ಯೇಕ ಐಡೆಂಟಿಟಿ ಯನ್ನು ತಮ್ಮ ಮಾತು ಮತ್ತು ಕೃತ್ಯಗಳ ಮೂಲಕ ಸಾರುತ್ತವೆ. ನೇತ್ರಾಳ ವಿಕ್ಷಿಪ್ತವೆನಿಸಬಹುದಾದ ಅತಿದೈವಭಕ್ತಿ, ಸರ್ವಾಲಂಕಾರದಲ್ಲಿ ದೇವಿಯನ್ನು ದೇಹಕ್ಕಾಹ್ವಾನಿಸಿಕೊಂಡು ಸಂತಾನಪಡೆಯುವ ವೈಚಿತ್ರ್ಯ, ಅನಂತರವೂ ತನ್ನದೇ ಆದ ಕಾರಣಗಳಿಗಾಗಿ ಮಾಂಗಲ್ಯಸಹಿತಳಾಗಿ ಬೇರ್ಪಡುವುದು ಅಸಹಜತೆಯ ನಡಾವಳಿಗಳಾಗಿ ಅವಳ ವೈಕಲ್ಪ್ಯ, ಅಕ್ಕನ ನೆರಳಾಗಿ ಬೆಳೆದುಳಿದ ಸರಸ್ವತಿ ಅಕ್ಕನೇ ತನ್ನ ಅತ್ತೆಯಾಗಿ, ಗಂಡನ ತಾಯಿಯಾಗಿ ಬರುವ ಮಾಡರ್ನಿಟಿಯನ್ನು ಸಮರ್ಥಿಸುವ ಸುಶಿಕ್ಷಿತೆ...ಈ ಎರಡನೆಯ ಮದುವೆಯ ಸಾಫಲ್ಯಕ್ಕೆ ಅಂಥ ವಿಚಾರವಂತೆಯೂ ಸಾಥ್ ಕೊಡದೆ ಕತ್ತರಿಸಿಕೊಂಡಾಗ ಅದರ ಅಸ್ಪಷ್ಟ ಹಿನ್ನೆಲೆಯ ಅವ್ಯಕ್ತ ಗೊಣಗಾಟದಲ್ಲಿ ತೊಡಗುವ ನಾಗರಾಜನ ಪಾತ್ರಪೋಷಣೆ ಕೊಂಚ ಸೊರಗಿದಂತೆ ಭಾಸವಾಗುತ್ತದೆ. ಇನ್ನು ಅನಿತಾಳೊಂದಿಗಿನದ್ದು ಒಂದು ನಿಟ್ಟಿನಲ್ಲಿ ಸ್ನೇಹಿತರ ಬಲವಂತ,'' ಮದುವೆ ಎಲ್ಲ ವನ್ನೂ ಸರಿಪಡಿಸುತ್ತದೆ'' ಅನ್ನುವ ವಿಚಿತ್ರ ಸಮಾಧಾನೊಪಾಯಗಳ ಪರಿಣಾಮ ಅಷ್ಟೇ... ಅವಶ್ಯಕತೆ, ಇಚ್ಚ್ಚೆ, ಅಪೇಕ್ಷೆಗಳ ಗಟ್ಟಿ ಅಡಿಪಾಯವಿಲ್ಲದ ಪ್ರೌಢ ವಯಸ್ಸನ್ನೂ ಮೀರುತ್ತಿರುವ ಹೊತ್ತಿನಲ್ಲಿ ಬೆಸೆದ ನಂಟು ಬೆಸೆಯುವ ಮೊದಲೇ ಅಲ್ಲಾಡಿದ್ದರೆ ಅಚ್ಚರಿ ಇಲ್ಲ.
ಬಯಾಗ್ರಫಿಗೆ ಎದುರಾಗಿ ಬರೆಯುವ ಬಯಾಗ್ರಫಿಯಾಗಿ ತೆರೆದುಕೊಳ್ಳುವ ಈ ಕಾದಂಬರಿ, ವಿಭಿನ್ನ ಸ್ತರದ ಓದನ್ನು ನೀರೀಕ್ಷಿಸುತ್ತ ತನ್ನ ಕಾಂಪ್ಲೆಕ್ಸಿಟಿಗೆ ತಾನೇ ಸಾಕ್ಷಿಯಾಗುತ್ತದೆ. ಮಲ್ಟಿಪಲ್ ಮದುವೇಗಳ ಸುಳಿಯಲ್ಲಿ ಸಿಕ್ಕವನೊಬ್ಬನ ಆತ್ಮಕಥನದಂತೆ ವಿವರಗಳನ್ನು ತನ್ನದೇ ಮಾಪಕದಲ್ಲಿ ಕಟ್ಟಿಕೊಡುತ್ತ ಇಂಥ ಮದುವೆಗಳ ಸಾಫಲ್ಯ, ಸಾರ್ಥಕತೆಯ ಬಗೆಗೆ ಏಳಿಸುವ ಅನೇಕ ಪ್ರಶ್ನೆಗಳ ಕಡೆಗೆ ಕರೆದೊಯ್ಯುತ್ತದೆ. ಬಾಲ್ಯ, ಅಪ್ಪ, ಅಮ್ಮ, ಮೂವರು ಪತ್ನಿಯರ ಸಾಂಗತ್ಯದ ಅನೇಕ ವೈರುಧ್ಯಾವಸ್ಥೆಗಳಲ್ಲಿ ನಾಗರಾಜನ ಬದುಕು ಉತ್ತರ ಕಷ್ಟ ಎನ್ನಬಹುದಾದ ಪ್ರಶ್ನೆಗಳ ಪುಸ್ತಕವಾಗಿ ಎದುರಾಗುತ್ತದೆ. ಒಟ್ಟಿನಲ್ಲಿ ಗಾಢ ಅನುಭವಗಳ ಭಂಡಾರ 'ವಿಕಲ್ಪ' ಕಾದಂಬರಿ.
*******************************************
ಅ-ಚರಿತ್ರೆ- ಒಂದು ಪತ್ರ.

ಇದು ಅಂತರಂಗ ಬಹಿರಂಗದ ಸಮಾಚಾರ.ರಾಜಸತ್ತೆಯ ಅವಸಾನವಾಗಿ ಖಾಸಗೀ ಸಾಮ್ರಾಜ್ಯಗಳು ಪ್ರಜಾಪ್ರಭುತ್ವದ ಹೊಸ ಅಲೆಯಲ್ಲಿ ಲೀನವಾಗುತ್ತಿದ್ದ ಸಮಯದ ಸೋಲಿನ ಅನುಭವದ ವ್ಯಾಖ್ಯೆಗಳಿವು... ಮುಳುಗುತ್ತಿದ್ದ ಸಂಸ್ಥಾನಗಳ ಒಡೆಯರು ಪಟ್ಟ ಅವಸ್ಥೆಗಳು, ಅವರ ಭಾರೀ ಅರಮನೆಗಳ ಉದ್ದಾನುದ್ದ ಗೋಡೆಗಳ ಹಿಂದೆ ಸಾವಿರಾರು ನೋವುಗಳ ಸಂತೆ. ಕುಗ್ಗುತ್ತಿದ್ದ ರಾಜಸೀ ಪ್ರಭಾವ, ಆದಾಯಗಳ ಹೊಡೆತಕ್ಕೆ ಕಂಗಾಲಾಗಿದ್ದ ರಾಜ ಮಹಲಿನ ಸಮಸ್ತ ಆಶ್ರಿತರು, ಅಂತೆಯೇ ಕರಗುತ್ತಿದ್ದ ಆದಾಯಕ್ಕೆ ಬೆದರಿ ಇನ್ನಷ್ಟು ಆಸ್ತಿಪಾಸ್ತಿ ಮಾಡಿಕೊಳ್ಳುವ ಹುನ್ನಾರದಲ್ಲಿ ಸಂಸ್ಥಾನಿಕರು ನಡೆಸುತ್ತಿದ್ದ ನೂರಾರು ಕುತಂತ್ರಗಳು...ದರ್ಬಾರು, ದಸರಾ ಸಮಯದಲ್ಲಿ ರಾಜರು ಅನುಭವಿಸಿದ ಪರೋಕ್ಷ ಅವಮಾನಗಳು, ರಾಜರುಗಳ ಕೃಪಾಶ್ರಯದಲ್ಲಿ ನೆಮ್ಮದಿಯಾಗಿದ್ದ ಬ್ರಾಹ್ಮಣ ಅರ್ಚಕರು ಈ ಕುಸಿತದಿಂದಾಗಿ ಅನುಭವಿಸಿದ ಅಸ್ಥಿರತೆ, ಅಸಮಾಧಾನೀ ಅಂತಃಪುರದ ರಾಣಿಯರು...ಮುರಿದು ಬೀಳುತ್ತಿದ್ದ ಮಹಲಿನ ಗೋಡೆಗಳಂತೆ ಅಭದ್ರ ಸೂಚಕಗಳು.
ತಮ್ಮ ತಮ್ಮಲ್ಲಿನ ದ್ವೇಷ, ವೈರತ್ವವನ್ನು ಬಿಟ್ಟುಕೊಡದ ರತ್ನಗಿರಿ, ಕೋದಂಡರಾಮಪುರದ ಸಂಸ್ಥಾನಿಕ ನಡುವೆ ದಾಳದ ಕಾಯಿಯಾದ ಕೃಷ್ಣವೇಣಿಯ ದುರಂತ ನಮ್ಮ ಮನಸ್ಸನ್ನು ತಟ್ಟುತ್ತದೆ.
ನಾನಾ ಬಗೆಯ-- ಕಾಶೀನಾಥರದ್ದೇ ಉಲ್ಲೇಖದಂತೆ--ಯುದ್ಧವೊಂದನ್ನು ಬಿಟ್ಟು-ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಿ ಉಳಿಸಿ ಕರೆದುಕೊಂಡು ಬಂದ ಕೃಷ್ಣವೇಣಿ ಗುರ್ಖಾನೊಂದಿಗೆ ಓಡಿ ಹೋಗಿ ನಡೆಸಿದ ಉತ್ಪಾತದಲ್ಲಿ ಧೂಳೀಪಟ ಸಂಸ್ಥಾನದ ಮರ್ಯಾದೆ.
ಕಾಶೀನಾಥರು ಅವಳ ಮರಿಮೊಮ್ಮಗನಿಗೆ ತಮ್ಮ ಸಂಸ್ಥಾನದ ಅನೇಕ ರಹಸ್ಯಗಳ ಬಾಗಿಲನ್ನು ತೆರೆದಿಟ್ಟು ಅವನು ಬರೆಯುವ ತಮ್ಮ ರಾಜಮನೆತನದ ಚರಿತ್ರೆಯನ್ನು ಬೆಂಬಲಿಸಿದ್ದು ನಿಜಕ್ಕೂ ವಿಶೇಷ. ವಿಕಲ್ಪದಲ್ಲಿ ಚರಿತ್ರೆಯೇ ಅ-ಚರಿತ್ರೆಯಾಗಿ ತನ್ನೊಳಗಿನ ಗುಟ್ಟುಗಳನ್ನು ಬಹಿರಂಗ ಪಡಿಸುವ ಸಾಧನದಂತಿದೆ. ಆದರೆ ಎಷ್ಟು ತೆರೆಯಬೇಕು? ಯಾವುದನ್ನು ಬಿಡಬೇಕೆನ್ನುವ ತೊಳಲಾಟದಲ್ಲಿ ಅರಮನೆಯ ಅಂತರಂಗಕ್ಕೆ ಹಾಕಿದ್ದ ತೆರೆಯನ್ನು ಅಲ್ಪಸ್ವಲ್ಪವಾದರೂ ಸರಿಸಿ ಹೊರಬಿದ್ದ ನೋವು... ಶೀತಲ್ ಮಹಾಜನ್ ರಾಜಮನೆತನದ ಹುಡುಗಿಯಾಗಿಯೂ ಸಾಮಾನ್ಯ ಶಾಲಾ ಮಾಷ್ಟ್ರ ಮಗನ ಕೈ ಹಿಡಿದಿದ್ದನ್ನು ಬೆಂಬಲಿಸಿ ನಿಂತು ಆ ಮದುವೆ ನಡೆಸಿದ ಸಂಗತಿಯನ್ನು ನೋಡಿದಾಗ ತಮ್ಮ ಪುರಾತನ ದರ್ಪ ಪ್ರತಿಷ್ಠೆಗಳನ್ನು ಕೈ ಬಿಟ್ಟು ಕಾಲಕ್ಕೆ ತಕ್ಕ ಬದಲಾವಣೆಗೆ ಕೆಲವರಾದರೂ ರಾಜರು ಒಗ್ಗಿಕೊಂಡದ್ದು ಸ್ಪಷ್ಟ.
ಸಾಮಾನ್ಯ ಜನರ ಮನೆಯಲ್ಲಿ ಬಂಧುಗಳೆಲ್ಲ ಸೇರಿ ನಡೆಸುವ ಮದುವೆ ಕೈಂಕರ್ಯಗಳನ್ನು ಮೆಚ್ಚುವ ಕಾಶೀನಾಥರು ಅರಮನೆಯ ಸಿಬ್ಬಂದಿ, ರಾಣಿಯರ ಕುತ್ಸಿತ ಮನೋಭಾವದ ಬಗ್ಗೆ ತೆರೆದಿಡುವ ನೋವು ಅಂದಿನ ಸಂಸ್ಥಾನಿಕರ ಬದುಕಿನ ಚಿತ್ರದ ಹಾಗಿದೆ.ಇಲ್ಲಿ ಸಂತಾನದ ಬಗ್ಗೆ ವಿಚಿತ್ರ ಆಟವಾಡುತ್ತಿದ್ದ ಸಂಸ್ಥಾನದ ಸೊಸೆಯರು ಮುಟ್ಟಾಗುವ ದಿನಗಳ ಮೊದಲೇ ವಾಡೆಯ ವಿಶೇಷ ಕೋಣೆಗೆ ಹೋಗಿ ಕೂತು ಸಮಯ ಕಳೆದು ಸಂತಾನ ಸಂಭವದ ದಿನಗಳನ್ನು ತಪ್ಪಿಸುತ್ತಿದ್ದ ನೋವನ್ನು ಸ್ವತಃ ಮಹಾರಾಜನೇ ಬೇರೊಬ್ಬರ ಮುಂದೆ ತೋಡಿಕೊಳ್ಳಬೇಕೆಂದರೆ ಅಲ್ಲಿ ನಡೆಯುವ ಕಾರಸ್ಥಾನಗಳ ನಮೂನೆಗಳಾದರೂ ಎಷ್ಟಿದ್ದಾವು?

ಈ ಇಡೀ ಕಥೆಯಲ್ಲಿ ಕಾಣಿಸಿಕೊಳ್ಳದೆಯೂ ಕೃಷ್ಣವೇಣಿ, ಹೆಣ್ಣಿನ ಮೇಲೆ ನಿರಂತರ ನಡೆಯುವ ಪುರುಷ ಅಧಿಕಾರ ಸ್ಥಾಪನೆಯ ಪ್ರತೀಕ ಅನಿಸುತ್ತಾಳೆ. ಮದುವೆ, ಅನಂತರ ಜೈಲು, ಯಾವುದೇ ಕ್ಷಣದಲ್ಲಿಯೂ ಅವಳನ್ನು ಜೈಲಿನಿಂದಲೇ ಸಮುದ್ರಕ್ಕೆ ಎಸೆದುಬಿಡಬಹುದಾದ ಅಪಾಯಗಳಲ್ಲಿ ಅವಳ ತಪ್ಪೇನಿತ್ತು ಎಂಬ ಚಿಂತೆ ನಮ್ಮನ್ನು ಕಾಡುತ್ತದೆ. ಕಳೆದು ಹೋಗುತ್ತಿದ್ದ ಪ್ರೀವಿ ಪರ್ಸಿನ ಧನಾದಾಯದ ಹಿನ್ನೆಲೆಯಲ್ಲಿ ಮೂರು ತಲೆಮಾರು ಹಿಂದಣ ಸಮೃದ್ಧಿಯಲ್ಲೂ ಮದುವೆ ಮಾಡಿ ತಂದೆ ಸೊಸೆಯನ್ನು ಹೀನ ಪಶುವಿಗಿಂತ ಕಡೆಯಾಗಿ ಕಂಡ ರಾಜಸತ್ತೆಯ ಅಹಂಕಾರಕ್ಕೊಂದು ಧಿಕ್ಕಾರ ಹೇಳುವ ಮನಸ್ಸಾಗುತ್ತದೆ...
-- ಜಯಶ್ರೀ ದೇಶಪಾಂಡೆ
ವಿಕಲ್ಪ:
ಹ್ಯಾಮ್ಲೆಟ್ ನಾಟಕದ ದೃಶ್ಯದೊಂದಿಗೆ ಆರಂಭವಾಗುವ ಕಾದಂಬರಿ ವಿಕಲ್ಪದ ವಸ್ತುವು, ಈ ಬದುಕೇ ಒಂದು ನಾಟಕ ಎನ್ನುವುದನ್ನು ಉದ್ದಕ್ಕೂ ಸಾರುವಂತಿದೆ. ಕಾದಂಬರಿಯು ಕೊನೆಗೊಳ್ಳುವುದೂ ಒಂದು ನಾಟಕದ ದೃಶ್ಯದ ಮೂಲಕವೇ ಆಗಿರುವುದು ಈ ನಾಟಕವೂ ಹೀಗೇ ಮುಂದುವರೆಯುತ್ತದೆ ಎನ್ನುವುದನ್ನು ಸೂಚಿಸುವಂತಿದೆ. ನಾಟಕದಲ್ಲಿ ಪಾತ್ರಗಳು ವೀಕ್ಷಕರ, ಪ್ರೇಕ್ಷಕರ ನೋಟಕ್ಕೆ ತೆರೆದುಕೊಳ್ಳುವಂತೆ ಕಥೆಯಲ್ಲಿನ ಪಾತ್ರಗಳು ತಮ್ಮ ಒಡನಾಟಕ್ಕೆ ಬಂದ, ಬರುವ ಇನ್ನಿತರ ಪಾತ್ರಗಳ ಅಭಿಪ್ರಾಯ, ದೃಷ್ಟಿಯಲ್ಲಿ ತಮ್ಮ ಬದುಕು ಕಾಣಿಸಿಕೊಳ್ಳಬೇಕೆಂದು ನಿರಂತರವಾಗಿ ಹೆಣಗಾಡುವ ಪ್ರಯತ್ನ ಕಂಡುಬರುತ್ತಿದ್ದು ಮನುಷ್ಯನ ವರ್ತನೆ ಇರುವುದೇ, ಇತರರ ಅಭಿಪ್ರಾಯದಲ್ಲಿ ತಾನು ಹೇಗೆ ಇರಬೇಕು ಎನ್ನುವುದನ್ನು ಅವಲಂಬಿಸಿ, ಎನ್ನುವುದನ್ನು ಇದು ಒತ್ತಿ ಹೇಳುತ್ತದೆ.
ನಾಗರಾಜ/ ನಿರೂಪಕ, ತನ್ನ ಈ ಮೊದಲಿನ ಹೆಂಡತಿಯರಾದ ನೇತ್ರಾ ಹಾಗೂ ಸರಸ್ವತಿಯರು ದಿನಚರಿಯನ್ನು ಬರೆದು ಪ್ರಕಟಿಸಲಿದ್ದಾರೆ ಎನ್ನುವ ಸುಳಿವು ಸಿಕ್ಕಿದ್ದೇ ಒಂದು ಚಿತ್ರಣವನ್ನು ಮೂಡಿಸಲು ಅಥವಾ ಬಿಂಬಿಸಲು ಪ್ರಯತ್ನಿಸುತ್ತಾನೆ. ತನ್ನ ಕುರಿತು ಒಂದು ಅಭಿಪ್ರಾಯವನ್ನು ತಾನೇ ರೂಪಿಸಿಬಿಡಬೇಕು ಎನ್ನುವ ಆತನ ಹೆಣಗಾಟ ಮೂಲಭೂತವಾದ ಮನುಷ್ಯ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಆತನೊಡನೆ ತಮ್ಮ ಸಂಬಂಧ ಅಸ್ಪಷ್ಟ ರೀತಿಯಲ್ಲಿಯೇ ಕೊನೆಗೊಂಡಿದ್ದರೂ ಆನಂತರದಲ್ಲಿ ಇಬ್ಬರೂ ಆರಿಸಿಕೊಳ್ಳುವ ಬದುಕಿನ ರೀತಿ ಒಂದೇ ಆಗಿರುವುದು ಬರಹಗಾರರ ದೃಷ್ಟಿಯಲ್ಲಿ ಕಾಕತಾಳೀಯವೋ, ಪ್ರಜ್ಞಾಪೂರ್ವಕವೋ ಅಥವಾ ಒಟ್ಟಾರೆ ಅವರನ್ನು ಈ ಸನ್ನಿವೇಶದಿಂದ ಹೊರತಾಗಿಸುವುದಷ್ಟಕ್ಕೇ ಸೀಮಿತವೋ ಎಂಬ ಪ್ರಶ್ನೆಗೆ ಸತ್ಯನಾರಾಯಣ ಅವರು, ಅಸಾಂಗತ್ಯದ ಹೊರತಾಗಿ ಇಬ್ಬರೂ ಆತನನ್ನು ಬಿಟ್ಟು ಹೋಗಿರುವುದು ಬೇರೆ ಬೇರೆ ಕಾರಣಕ್ಕಾಗಿ. ಮುಂದೆ ಅವರು ಆರಿಸಿಕೊಳ್ಳುವುದು ಒಂದೇ ತರಹದ ಬದುಕನ್ನು, ಮಾಡುವ ನಿರ್ಧಾರಗಳೂ ಒಂದೇ ತೆರನಾದದ್ದು, ಹೀಗೆ ಆಗಬಾರದೆಂದೇನಿಲ್ಲ - ಇದು ಪ್ರಜ್ಞಾಪೂರ್ವಕವಾದದ್ದೇನೂ ಅಲ್ಲ, ಅಂತಹ ಕಾರಣಗಳೂ ಯಾವುದೂ ಇಲ್ಲ, ಆದರೆ ಇದು ಒಂದು ತರದಲ್ಲಿ ನಮ್ಮದೇ ಪ್ರಜ್ಞೆಯ ಬೇರೆ ಬೇರೆ ಭಾಗಗಳು ಇದ್ದ ಹಾಗೆ. ವಿಭಿನ್ನ ಪಾತ್ರಗಳು ಪ್ರಜ್ಞೆಯ ಬೇರೆ ಬೇರೆ ಭಾಗಗಳನ್ನು ಪ್ರತಿನಿಧಿಸುತ್ತವೆ. ಒಂದು ಸುದೀರ್ಘ ಜೀವನವನ್ನು ತೆಗೆದುಕೊಂಡರೆ ಇದು ಒಂದೇ ವ್ಯಕ್ತಿಯ ಮೂಲಕವೂ ಪ್ರತಿನಿಧಿಸಲ್ಪಡಬಹುದು, ಎಂದು ಉತ್ತರಿಸಿದರು.
ನೇತ್ರಾ ಒಬ್ಬಳು ಅತ್ಯಂತ ಧಾರ್ಮಿಕ ಮನೋಭಾವದ ಸಂಪ್ರದಾಯಸ್ಥ ಹೆಣ್ಣುಮಗಳಾಗಿ ಕಂಡು ಬರುತ್ತಿದ್ದರೂ ನಿರೂಪಕನೊಂದಿಗೆ ವಿಚ್ಛೇದನ ಪಡೆದು ಅವಳು ಹೋಗುವುದು ವಿದೇಶವೊಂದಕ್ಕೆ, ಓದನ್ನು ಮುಂದುವರೆಸಲು. ಅವಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದೂ ಅದೊಂದು ರಿಚುವಲ್ ಎನ್ನುವ ಹಾಗೆ. ಇದು ಅವಳ ಸ್ವಭಾವದಲ್ಲಿನ ಅಂತರ್ಗತ ವೈರುದ್ಧ್ಯ.
ಆದರೆ ಸರಸ್ವತಿ ಸಾಮಾಜಿಕ ಹಾಗೂ ಖಾಸಗೀ ಬದುಕಿಗೆ ಸಂಬಂಧಿಸಿದಂತೆ ಸ್ವತಂತ್ರ ನಿಲುವು ಇರುವವಳಂತೆ, ಲೈಂಗಿಕ ವಿಷಯಗಳಲ್ಲಿಯೂ ಮುಕ್ತ ವಿಚಾರಗಳನ್ನು ಹೊಂದಿದವಳಂತೆ ಕಂಡರೂ ಒಟ್ಟಾರೆ ಅವಳ ವ್ಯಕ್ತಿತ್ವವೇ ಅಕ್ಕನ, ಆ ಮೂಲಕ ಇತಿಹಾಸದ ಬಿಗಿಹಿಡಿತದಲ್ಲಿದೆ. ವಾಸ್ತವದಲ್ಲಿ ಆಕೆ ಸ್ವತಂತ್ರ ನಿಲುವುಳ್ಳ ಹೆಣ್ಣುಮಗಳಲ್ಲದಿದ್ದರೂ ಓದಿಗಾಗಿ ವಿದೇಶಕ್ಕೆ ಹೋಗುವುದು, ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ನೆಲೆಗೊಳ್ಳುವುದು, ಮತ್ತೆ ಗತ ಬದುಕಿನ ಕುರಿತಾಗಿ ದಿನಚರಿ ಬರೆಯಲು ನಿರ್ಧರಿಸುವುದು ಎಲ್ಲವೂ ವಿಕ್ಷಿಪ್ತವಾಗಿ ತೋರುವುದಲ್ಲದೇ, ನೇತ್ರಾಳ ಬದುಕಿನ ಪುನರಾವರ್ತನೆಯಾದಂತೆ ಎನ್ನಿಸುವುದಲ್ಲವೇ, ನೇತ್ರಾ ಹಾಗೂ ಸರಸ್ವತಿಯರ ಬದುಕಿನ ಸಾಮ್ಯತೆಗಳ ಹಿನ್ನೆಲೆಯಲ್ಲಿ ಸರಸ್ವತಿಯ ಪಾತ್ರದ ಔಚಿತ್ಯವೇನು ಎಂದು ಪ್ರಶ್ನಿಸಿದಾಗ ಸತ್ಯನಾರಾಯಣ ಅವರು, ವಿಭಿನ್ನ ಮನೋಭಾವಗಳನ್ನು ಪ್ರತಿನಿಧಿಸುವ ಪಾತ್ರಗಳಾಗಿದ್ದರಿಂದ ಹಾಗೆ ಚಿತ್ರಿಸಲಾಗಿದೆ ಎಂದು ಉತ್ತರಿಸಿದರು. ಒಂದು ವ್ಯಕ್ತಿಯ ಬದುಕಿನಲ್ಲಿ ನಾಟಕೀಯ ಅಥವಾ ತೀವ್ರಸ್ವರೂಪದ್ದು ಎನ್ನಬಹುದಾದ ಬದಲಾವಣೆಗಳು ಕಾಣಿಸಿಕೊಳ್ಳಲು ಸಾಧ್ಯ ಇದೆಯಾದರೂ ಅದು ದೀರ್ಘಕಾಲಾವಧಿಯಲ್ಲಿ ಮಾತ್ರ ಎಂದು ಪರಿಗಣಿಸಿದಾಗ ಎರಡು ವಿಭಿನ್ನ ಪಾತ್ರಗಳನ್ನು ತರುವುದು ಅಗತ್ಯವಾಗಿತ್ತು ಎಂದು ಉತ್ತರಿಸಿದರು.
ಒಬ್ಬ ಯಶಸ್ವಿ ಹಾಗೂ ವೃತ್ತಿನಿರತ ಮಹಿಳೆಯಂತೆ ಚಿತ್ರಿಸಲ್ಪಟ್ಟಿದ್ದರೂ ಅನಿತಾ ಅಭದ್ರ ಮನಸ್ಥಿತಿಯವಳಾಗಿಯೇ ಕಂಡುಬರುತ್ತಾಳೆ. ನಿರೂಪಕನೊಡನೆಯ ಸಂಬಂಧದಲ್ಲಿ ಅವಳನ್ನು ಸದಾ ಕಾಡುವುದು ಒಂದು ಅಸುರಕ್ಷಿತತೆಯ ಭಾವ.
ವೈಯಕ್ತಿಕ ಚರಿತ್ರೆ ಸಾಮಾಜಿಕ ಸಂಬಂಧಗಳನ್ನು ಪ್ರಭಾವಿಸುವ ವಿವಿಧ ಸಾಧ್ಯತೆಗಳನ್ನು ತೋರಿಸುವಲ್ಲಿ ಹಾಗೂ ವಿವಿಧ ಕೋನಗಳಿಂದ ಸ್ತ್ರೀಸಂವೇದನೆಯನ್ನು ತೆರೆದಿಡುವ ನಿಟ್ಟಿನಲ್ಲಿ ರಮಾನಾಯಕ್, ಸುಶೀಲ, ರಾಜಲಕ್ಷ್ಮಿಯವರ ಪಾತ್ರಗಳು ಯಶಸ್ವಿಯಾಗುತ್ತವೆ.
ನೋವನ್ನು ಸಹಿಸಬೇಕಾದ, ಪರಿಸ್ಥಿತಿಯೊಂದಿಗೆ ರಾಜೀ ಮಾಡಿಕೊಳ್ಳಬೇಕಾದ, ಹೊಂದಿಕೊಂಡು ಹೋಗಬೇಕೆನ್ನುವ ಮನೋಭಾವಕ್ಕೂ ಒಂದು ಮಿತಿಯಿರಬೇಕು ಎಂಬುದನ್ನು ಸಾಬೀತು ಪಡಿಸಲೋ ಎಂಬಂತೆ ನೇತ್ರಾ, ಸರಸ್ವತಿ ಇಬ್ಬರೂ ಅತೃಪ್ತ ದಾಂಪತ್ಯದಿಂದ ವಿಚ್ಛೇದನದ ಮೂಲಕ ದೂರವಾಗಿ ಹೋದರೂ ಅಲ್ಲಿ ಮತ್ತೆ ವೈಯಕ್ತಿಕ ಹಾಗೂ ಕೌಟುಂಬಿಕ ಬದುಕನ್ನು ಕಟ್ಟಿಕೊಳ್ಳುವುದು, ಪತಿ ಮತ್ತು ಮಕ್ಕಳೊಡನೆ ಸಂತೋಷವಾಗಿರುವುದು, ದಿನಚರಿಯನ್ನು ಬರೆಯಲು ನಿರ್ಧರಿಸಿದರೂ ಹೆಸರು, ಊರುಗಳಿಲ್ಲದ ಕತೆಯ ರೂಪದಲ್ಲಿ ಅದನ್ನು ಬಹಿರಂಗ ಪಡಿಸಲು ಬಯಸುವುದು ಒಂದು ರೀತಿಯಲ್ಲಿ ಸ್ತ್ರೀ ಸ್ವಭಾವದ ಮೂಲಭೂತ ಸ್ವರೂಪವಾದ ತಾಳ್ಮೆ ಅಥವಾ ಸಹನೆಯನ್ನೇ ಎತ್ತಿ ಹಿಡಿಯುತ್ತದೆ ಎಂದು ಅನ್ನಿಸುತ್ತದೆ. ನಾಗರಾಜ, ಅವರು ದಿನಚರಿಯನ್ನು ಬರೆಯುವ ವಿಚಾರ ತಿಳಿದಿದ್ದೇ ತನ್ನ ಆವೃತ್ತಿಯನ್ನು ಮೊದಲೇ ಬಿಡುಗಡೆ ಮಾಡುವ ಹುನ್ನಾರದಲ್ಲಿದ್ದಾನೆ. ಆದರೆ,ಅವರು ಸದ್ಯ ತಮ್ಮ ಬದುಕನ್ನು ನೆಲೆಗೊಳಿಸಿಕೊಳ್ಳುವುದರತ್ತ ಲಕ್ಷ್ಯ ವಹಿಸಿದ್ದಾರೆ. ಎಲ್ಲವೂ ಒಂದು ಸ್ಥಿತಿಗೆ ಬಂದ ಮೇಲೆ ಗತ ಜೀವನದ ಕುರಿತಾಗಿ ಬರೆಯಲು ಉದ್ಯುಕ್ತರಾದರೂ ಅದು “ಸೆಟ್ಲಿಂಗ್ ಸ್ಕೋರ್” ಅಥವಾ ಪ್ರತೀಕಾರದ ರೂಪದಲ್ಲಲ್ಲ. ಹಾಗೆ ಬರೆಯುವುದು, ಋಣಾತ್ಮಕ ಅಂಶಗಳನ್ನು ಎತ್ತೆಣಿಸುವುದು ಅವರ ಬದುಕಿನ ಆದ್ಯತೆಯೂ ಆಗಿರುವಂತೆ ಕಾಣುವುದಿಲ್ಲ. ಅನಿತಾ ಕೂಡ ನಾಗರಾಜನ ಗತ ಜೀವನದ ಕುರಿತು ವಿವರಗಳನ್ನು ಕೆದಕುವುದಕ್ಕಿಂತಲೂ ವರ್ತಮಾನದ ನೆಮ್ಮದಿಯನ್ನೇ ಬಯಸುವವಳಾಗಿ ಕಂಡುಬರುತ್ತಾಳೆ. ಆ ಮೂಲಕ ಅತ್ಯಂತ ಪರಿವರ್ತನಾಶೀಲವಾದ ಬದುಕಿನಲ್ಲಿ ಕೂಡ ಸಿಗುವ ಪ್ರತಿ ಅವಕಾಶವನ್ನೂ ಬದುಕನ್ನು ಕಟ್ಟುವ ಕಡೆಗೇ ಉಪಯೋಗಿಸುವತ್ತ ಅವರ ಗಮನವು ಇರುವುದನ್ನು ನೋಡಿದರೆ ಹೆಣ್ಣಿನ ಈ ಇಚ್ಛಾಶಕ್ತಿಯನ್ನು ಅದರ ಹಿಂದಿರುವ ಒಂದು ಧನಾತ್ಮಕ ಮನೋಭೂಮಿಕೆಯನ್ನೂ ಈ ಕೃತಿಯು ಎತ್ತಿ ಹಿಡಿಯುತ್ತದೆ ಎಂಬುದು ನನ್ನ ಅನಿಸಿಕೆ.

ಅ-ಚರಿತ್ರೆ - ಒಂದು ಪತ್ರ:
ರಾಜಮನೆತನದ ಚರಿತ್ರೆಯನ್ನು ಬಿಚ್ಚಿಡುವ ಕತೆಯು ಸಂಪೂರ್ಣ ಸಾರ್ವಜನಿಕವಾಗಿರುವ ಒಂದು ಬದುಕಿನಲ್ಲಿ ವೈಯಕ್ತಿಕ ಸಂಬಂಧಗಳು, ಖಾಸಗೀ ಬದುಕು ನಲುಗಿಹೋಗುವ ಪರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳುತ್ತದೆ. ರಾಜಮನೆತನದ ಇತಿಹಾಸವನ್ನು ದಾಖಲಿಸಲು ಯಾರೋ ಬರುತ್ತಿದ್ದಾರೆ ಎಂದರೂ ಕೂಡ ಅದೂ ಅಂತಿಮವಾಗಿ ಮನೆತನಕ್ಕೆ ಸಂಬಂಧಿಸಿದ, ಒಂದು ರೀತಿಯಲ್ಲಿ ಒಳಗಿನ ವ್ಯಕ್ತಿಯೇ ಆಗಿರುವುದು ಒಂದು ವ್ಯವಸ್ಥೆ ಹೇಗೆ ತನ್ನ ಆಂತರಿಕ ದೌರ್ಬಲ್ಯಗಳಿಂದಲೇ ಕುಸಿಯುತ್ತದೆ ಎನ್ನುವುದರ ಸಂಕೇತವಾಗಿ ಮೂಡಿಬಂದಿದೆ.

-- ಸಹನಾ ಹೆಗಡೆ
No comments:
Post a Comment