ಕೋಟ ವಿವೇಕ ಪ್ರೌಢಶಾಲೆಯಲ್ಲಿ ಮೂವತ್ತನಾಲ್ಕು ವರ್ಷಗಳ ಕಾಲ ಕಾಲ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಕೋಟ ಪರಿಸರದ ಅತ್ಯಂತ ಜನಪ್ರಿಯ ವಿದ್ವಾಂಸರಾಗಿದ್ದ ಪಾದೂರು ರಘುರಾಮ ಐತಾಳರು ಕೋಟದ ತಮ್ಮ ಸ್ವಗೃಹದಲ್ಲಿ ಇಂದು ಅಪರಾಹ್ನ ವಿಧಿವಶರಾದರು. ವೈದಿಕ ಮನೆತನದ ಹಿನ್ನೆಲೆಯ ರಘುರಾಮ ಐತಾಳರು ಪೇಜಾವರ, ಫಲಿಮಾರು ಮತ್ತು ಕಾಣಿಯೂರು ಮಠಗಳಲ್ಲಿ ಸೇವೆ ಸಲ್ಲಿಸಿದ್ದು, ಕನ್ನಡ, ಹಿಂದಿ, ಸಂಸ್ಕೃತ ಭಾಷಾ ಸಾಹಿತ್ಯದಲ್ಲಿ ಅಪಾರ ಜ್ಞಾನಿಗಳಾಗಿದ್ದರು. ಸ್ವತಃ ಕವಿಗಳೂ ಗಮಕಿಗಳೂ ಆಗಿದ್ದ ಶ್ರೀಯುತರು ಕುಂದಾಪುರದಲ್ಲಿ ಜರುಗಿದ್ದ ದ.ಕ.ಜಿಲ್ಲಾ ಗಮಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಓರ್ವ ಪುತ್ರ ಹಾಗೂ ಈರ್ವರು ಪುತ್ರಿ ಯರು ಮತ್ತು ಅಪಾರ ಸಂಖ್ಯೆಯ ಶಿಷ್ಯರನ್ನೂ ಅಭಿಮಾನಿಗಳನ್ನೂ ಅಗಲಿದ್ದಾರೆ.
No comments:
Post a Comment