"ಇಲ್ಲಿಯ ಮಾತುಗಳು ಹೇಳುವವನಿಗೂ ಕೇಳುವವನಿಗೂ ಸಮಾನವಾಗಿಯೇ ಅನ್ವಯಿಸುವ ರೂಪದಲ್ಲಿರುವುದನ್ನು ಅವಶ್ಯವಾಗಿ ಗಮನಿಸಬೇಕಾಗಿದೆ. 'ನೀನು ಹೀಗೆ ಮಾಡು, ನೀನು ಹೀಗೆ ಮಾಡಬೇಡ, ಈ ಮಾರ್ಗ ನಿನಗೆ ಒಳಿತು, ಈ ಮಾರ್ಗದಿಂದ ನಿನಗೆ ಲಾಭ’ ಎಂದು ನೇರವಾಗಿ ಇವು ತಿಳಿಸಿ ಹೇಳುವುದರ ಬದಲು ಓದುಗನ ಮನಸ್ಸಿನಲ್ಲಿ ಯಾವುದೇ ವಿಷಯದ ಕುರಿತಾದ ಸ್ವಂತ ನಿರ್ಣಯವನ್ನು ತೆಗೆದುಕೊಳ್ಳಲು ಪ್ರೇರಣೆ ನೀಡುವಂತಿವೆ. ಡಿ.ವಿ.ಜಿ. ಅವರ ’ಮಂಕುತಿಮ್ಮನ ಕಗ್ಗ’ದಿಂದ ಈ ವಿಧಾನದಲ್ಲಿ ಪ್ರೇರಣೆಯನ್ನು ಪಡೆದಿರಲೂಬಹುದು. ಡಿ.ವಿ.ಜಿ. ಅವರನ್ನು ಅಂಬಾತನಯರು ತುಂಬ ಗೌರವದಿಂದ ಕಾಣುತ್ತಾರೆಂಬ ವಿಷಯವನ್ನು ನಾನು ಬಲ್ಲೆ."
- ಪಾದೇಕಲ್ಲು ವಿಷ್ಣು ಭಟ್
'ಕೃಷ್ಣಾ' 1ನೇ ಮುಖ್ಯರಸ್ತೆ, ವಿದ್ಯಾನಗರ
'ಅಮೃತ ಸಿಂಚನ' (ನಲ್ನುಡಿಗಳು)
- ಅಂಬಾತನಯ ಮುದ್ರಾಡಿ
- ಅಂಬಾತನಯ ಮುದ್ರಾಡಿ
ಪ್ರಕಾಶಕರು:
ಗಾಯತ್ರಿ ಶಿವರಾಮ್
ಚಿತ್ರದುರ್ಗ -577509
ಮೊದಲ ಮುದ್ರಣ 2011
ರೂ.60/-
No comments:
Post a Comment