stat Counter



Friday, March 25, 2011

Sirigannada (Contemporary Kannada Writings) edited by Vivek Shanbhag

ಸಿರಿಗನ್ನಡ'ದಲ್ಲಿ ಸಮಕಾಲೀನ ಕನ್ನಡ ಸಾಹಿತ್ಯದ ಇಂಗ್ಲಿಷ್ ಭಾಷಾಂತರ

'ಫ್ಲಿಪ್‍ಕಾರ್ಟ್'ನಲ್ಲಿ ಯಾವ ಕನ್ನಡ ಪುಸ್ತಕಗಳಿವೆ ಎಂದು ಅಂತರ್ಜಾಲದಲ್ಲಿ ಹುಡುಕಿದಾಗ 'ಸಿರಿಗನ್ನಡ' ಎಂಬ ಇಂಗ್ಲಿಷ್ ಪುಸ್ತಕ ಕಣ್ಣಿಗೆ ಬಿತ್ತು.  ವಿಪಿಪಿ ಮೂಲಕ ಕಳುಹಿಸಿ ಎಂದು ವಿನಂತಿಸಿ, ಒಂದು ವಾರದೊಳಗೆ ಪುಸ್ತಕ ಮನಗೆ ಬಂತು.

ಯು.ಆರ್. ಅನಂತಮೂರ್ತಿಯವರ 'ಕಾಮರೂಪಿ' (ಅನುವಾದ- ದೀಪಾ ಗಣೇಶ್), ಲಂಕೇಶರ 'ಕ್ಲಾಸ್‍ಮೇಟ್'' (ಮೂಲಕತೆ? - ಅನುವಾದ - ಸಂತೋಷಕುಮಾರ), ಜಯಂತ ಕಾಯ್ಕಿಣಿ ಅವರ 'ಟಿಕ್ ಟಿಕ್ ಗೆಳೆಯ' (ಅನುವಾದ - ಜಯಂತ ಕೋಡ್ಕಣಿ) ವಸುದೇಂದ್ರರ ----------------(ಅನುವಾದ - ಜಯಂತ ಕೋಡ್ಕಣಿ) ಅಬ್ದುಲ್ ರಶೀದ್ ಅವರ 'ಕಾಮ್ರೇಡ್ ಮತ್ತು ಉಮ್ಮ', ಸುನಂದಾ ಪ್ರಕಾಶ ಕಡಮೆ ಅವರ ಒಂದು ಕತೆ (ಮೂಲ ಕತೆಯ ಹೆಸರು?), ಅನುವಾದ - ದೀಪಾ ಗಣೇಶ್) - ಇವು ಇಲ್ಲಿರುವ ಆರು ಕತೆಗಳು.

ಎಚ್. ಎಸ್. ಶಿವಪ್ರಕಾಶರ ಒಂದು ಕವನ (ಮೂಲ ಕವನದ ಹೆಸರು? ಅನುವಾದ - ದೀಪಾ ಗಣೇಶ್), ಸಂಧ್ಯಾದೇವಿ ಅವರ ಒಂದು ಕವನ (ಮೂಲ ಕವನ? - ಅನುವಾದ- ಜಯಂತ ಕೋಡ್ಕಣಿ), ಪ್ರತಿಭಾ ನಂದಕುಮಾರ್ ಅವರ ಒಂದು ಕವನ (ಮೂಲ ಕವನ? - ಅನುವಾದ- ಜಯಂತ ಕೋಡ್ಕಣಿ), ಎಸ್. ಮಂಜುನಾಥ್ ಅವರ ಒಂದು ಕವನ (ಅನುವಾದ - ದೀಪಾ ಗಣೇಶ್) - ಇವು ಇಲ್ಲಿರುವ ನಾಲ್ಕು ಕವನಗಳು.

ಚಂದ್ರಶೇಖರ ಕಂಬಾರರ 'ಶಿಖರ ಸೂರ್ಯ' ಕಾದಂಬರಿಯ ಆಯ್ದ ಭಾಗ (ಅನುವಾದ - ಲಕ್ಷ್ಮೀ ಚಂದ್ರಶೇಖರ್), ಶ್ರೀನಿವಾಸ ವೈದ್ಯರ''ಹಳ್ಳ ಬಂತು ಹಳ್ಳ'  ಕಾದಂಬರಿಯ ಮೊದಲ ಅಧ್ಯಾಯ (ಅನುವಾದ ಶ್ರೀಕಾಂತ ಶಾಸ್ತ್ರಿ) - ಈ ಪುಸ್ತಕದಲ್ಲಿವೆ.

ಪೂರ್ಣಚಂದ್ರ ತೇಜಸ್ವಿಯವರ 'ಪರಿಸರದ ಕತೆ'ಯ ಒಂದು ಭಾಗ (ಅನುವಾದ - ಚಂದನಗೌಡ), ವೈದೇಹಿ ಅವರ 'ಮೇಜು ಕುರ್ಚಿಯ ಮೂಲಕ' (ಅನುವಾದ - ಪ್ರಕಾಶ ಬೆಳವಾಡಿ), ಕುಂ.ವೀರಭದ್ರಪ್ಪರವರ 'ರಾಯಲಸೀಮೆ'ಯ ಒಂದು ಅಧ್ಯಾಯ (ಅನುವಾದ - ಎಸ್. ಆರ್. ರಾಮಕೃಷ್ಣ) - ಇವು ಸಂಪಾದಕರು ಆಯ್ಕೆಮಾಡಿರುವ ಪ್ರಬಂಧಗಳು.

ಗಿರೀಶ ಕಾರ್ನಾಡರ 'ಅಗ್ನಿ ಮತ್ತು ಮಳೆ' ನಾಟಕದ ಒಂದು ದೃಶ್ಯ (ಅನುವಾದ - ಕಾರ್ನಾಡ), ಕೆ.ವಿ. ಅಕ್ಷರ ಅವರ 'ಸ್ವಯಂವರ ಲೋಕ' ನಾಟಕದ ಒಂದು ದೃಶ್ಯ (ಅನುವಾದ - ಜಯಂತ ಕೋಡ್ಕಣಿ) - ಈ ಪುಸ್ತಕದಲ್ಲಿವೆ.  ಸಿದ್ಧಲಿಂಗಯ್ಯನವರ ಆತ್ಮಕತೆ 'ಊರುಕೇರಿ'ಯ ಎರಡು ಭಾಗಗಳನ್ನು ಎಸ್. ಆರ್. ರಾಮಕೃಷ್ಣ ಹಾಗೂ ಚಂದನಗೌಡ ಭಾಷಾಂತರಿಸಿದ್ದಾರೆ.       ಡಿ. ಆರ್. ನಾಗರಾಜರ 'ಕನ್ನಡ-ಇಂಗ್ಲಿಷ್ ಜಗಳ' (ಅನುವಾದ ಎಸ್. ಬಾಗೇಶ್ರೀ), ಕೆ.ವಿ. ಸುಬ್ಬಣ್ಣನವರ 'ಶ್ರೇಷ್ಠತೆಯ ವ್ಯಸನ' (ಅನುವಾದಕರ ಹೆಸರು ಉಲ್ಲೇಖವಿಲ್ಲ) ಇಲ್ಲಿರುವ ವಿಮರ್ಶೆಗಳು.

ಇಲ್ಲಿನ ಇಂಗ್ಲಿಷ್ ಭಾಷಾಂತರದ ಗುಣಮಟ್ಟದ ಬಗ್ಗೆ ಭಾಷಾಂತರ ತಜ್ಞರು ಚರ್ಚೆ ಆರಂಭಿಸಬೇಕು.  ಸಂಪಾದಕರ ಆಯ್ಕೆಯ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು.  ಆದರೆ ದೇವನೂರು ಮಹಾದೇವ ಬಂಡಾಯ ಸಾಹಿತ್ಯದ ಮಹತ್ವದ ಲೇಖಕ ಎಂದು ಸಂಪಾದಕೀಯದಲ್ಲಿ ಗುರುತಿಸಿರುವ ವಿವೇಕ ಶಾನುಭಾಗರು ದೇವನೂರು ಮಹಾದೇವರನ್ನು ಈ ಗ್ರಂಥದಲ್ಲಿ ಕೈಬಿಟ್ಟದ್ದೇಕೆ?

ಮೂಲಕೃತಿಗಳ ಹೆಸರು, ಪ್ರಕಟಣೆಯ ವಿವರ, ಭಾಷಾಂತಕಾರರ ಪರಿಚಯ ನೀಡದಿರುವುದು ಈ ಪುಸ್ತಕದ ಪ್ರಮಾದಗಳು.  ಕನ್ನಡದ ಸಮಕಾಲೀನ ಲೇಖಕರ ಕೆಲವು ಮುಖ್ಯ ಕೃತಿಗಳನ್ನು ಇಂಗ್ಲಿಷ ಭಾಷಾಂತರದ ಮೂಲಕ ಜಗತ್ತಿಗೆ ಪರಿಚಯಿಸಿರುವ ವಿವೇಕ ಶ್ಯಾನುಭಾಗರಿಗೆ ಅಭಿನಂದನೆಗಳು.


- ಮುರಳೀಧರ ಉಪಾಧ್ಯ ಹಿರಿಯಡಕ

SIRIGANNADA
(Contemporary Kannada Writings)
Edited by Vivek Shanbhag\
Published by - TRANQUEBAR (2010)
Rs. 295/-

1 comment:

  1. Dear Muralidhara Upadhya avarige,
    Thanks for your comments.
    This anthology covers the last two decades of Kannada writing; I have mentioned this in the foreword. Devanuru Mahadeva has not published any work in this period. His Kusuma Bale was published in the eighties.
    regards,
    Vivek

    ReplyDelete