ಶಿವರಾಮ ಕಾರಂತರ ಗ್ರಂಥ ಸಂಗ್ರಹ
- ಮುರಳೀಧರ ಉಪಾಧ್ಯ ಹಿರಿಯಡಕ
ಉಡುಪಿಯ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಡಾ| ಶಿವರಾಮ ಕಾರಂತರು ದಾನವಾಗಿ ನೀಡಿದ ಗ್ರಂಥಗಳ ಒಂದು ಸಂಗ್ರಹವಿದೆ. ಕಾರಂತರು ನಾಲ್ಕು ಕಂತುಗಳಲ್ಲಿ ಈ ಪುಸ್ತಕಗಳನ್ನು ಎಂ.ಜಿ.ಎಂ. ಕಾಲೇಜಿಗೆ ನೀಡಿದ್ದಾರೆ. ಅವರು ನೀಡಿರುವ ಪುಸ್ತಕಗಳ ಒಟ್ಟು ಸಂಖ್ಯೆ 858. ಹೆಚ್ಚಿನ ಪುಸ್ತಕಗಳನ್ನು ಕಾರಂತರು 1973ರಲ್ಲಿ ಕೊಟ್ಟಿದ್ದಾರೆ. ಬಹುಶಃ ಪುತ್ತೂರಿನ 'ಬಾಲವನ'ವನ್ನು ಬಿಟ್ಟು ಸಾಲಿಗ್ರಾಮಕ್ಕೆ ಹೊರಟ ಸಂದರ್ಭದಲ್ಲಿ ಕಾರಂತರು ಈ ಪುಸ್ತಕಗಳನ್ನು ಎಂ.ಜಿ.ಎಂ.ಗೆ ಕಳುಹಿಸಿರಬಹುದು.
ಈ ಸಂಗ್ರಹದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ನೇಪಾಳಿ, ತೆಲುಗು, ಮರಾಠಿ, ಮಲಯಾಳಮ್ ಹಾಗೂ ಗುಜರಾತಿ ಭಾಷೆಯ ಪುಸ್ತಕಳಿವೆ. ಇಂಗ್ಲಿಷ್ ಭಾಷೆಯಲ್ಲಿರುವ ಗ್ರಂಥಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ವಿಜ್ಞಾನ ವಿವಿಧ ವಿಷಯಗಳಿಗೆ - ಯಂತ್ರಗಳು, ಕಂಪ್ಯೂಟರ್, ಖಗೋಳಶಾಸ್ತ್ರ, ಪ್ರಾಣಿಶಾಸ್ತ್ರ ಇತ್ಯಾದಿಗೆ ಸಂಬಂಧಿಸಿದ ಗ್ರಂಥಗಳು ಇಲ್ಲಿವೆ. ಕಾರಂತರು 'ಬಾಲಪ್ರಪಂಚ' (1936), 'ವಿಜ್ಞಾನ ಪ್ರಪಂಚ' (1959, 1960, 1962, 1964-4 ಸಂಪುಟಗಳು), 'ಕಲಾಪ್ರಪಂಚ' (1978) ಗ್ರಂಥಗಳನ್ನು ಬರೆಯುವ ಮೊದಲು ಪೂರ್ವ ಸಿದ್ಧತೆಗಾಗಿ ಈ ಪುಸ್ತಕಗನ್ನು ಓದಿರಬಹುದು. ಕಾರಂತರು ಪುಸ್ತಕದಂಗಡಿಗಳಿಗೆ ಹೋದಾಗಲೆಲ್ಲ ವಿಜ್ಞಾನಕ್ಕೆ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಇಂಗ್ಲಿಷ್ ಗ್ರಂಥಗಳನ್ನು ಖರೀದಿಸುತ್ತಿದ್ದರೆಂದು ಈ ಸಂಗ್ರಹವನ್ನು ನೋಡುವಾಗ ಗೊತ್ತಾಗುತ್ತದೆ.
ಕನರ್ಾಟಕದ ಎಲ್ಲ ಭಾಗಗಳ ಲೇಖಕರು ಕಾರಂತರನ್ನು ಗೌರವದಿಂದ ಕಾಣುತ್ತಿದ್ದರು. ಹಿರಿಯ-ಕಿರಿಯ ಲೇಖಕರು ಕಾರಂತರಿಗೆ ಕಳುಹಿಸಿದ ಪುಸ್ತಕಗಳು ಈ ಸಂಗ್ರಹದಲ್ಲಿವೆ. ಆಲೂರು ವೆಂಕಟರಾವ್, ವಿ. ಸೀತಾರಾಮಯ್ಯ, ಜಿ.ಟಿನಾರಾಯಣ ರಾವ್, ಬಿ. ಎಚ್. ಶ್ರೀಧರ, ಬಿ. ಖ. ಗಣಪತಿ, ಎ.ಆರ್.ಕೃಷ್ಣಶಾಸ್ತ್ರಿ, ಡಾ| ಎಂ. ಚಿದಾನಂದ ಮೂತರ್ಿ, ಪ್ರೊ| ಎಸ್.ವಿ. ಪರಮೇಶ್ವರ ಭಟ್ಟ, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಪಾಟೀಲ, ಕೆ. ಎಸ್. ನಿಸಾರ್ ಅಹಮದ್, ಮಉದೇನೂರು ಸಂಗಣ್ಣ, ಎನ್.ಆರ್. ನಾಯಕ, ಶಾ.ಮಂ. ಕೃಷ್ಣರಾಮ, 'ಗಿರಿ', ಪ್ರೊ. ಯು. ಎಲ್. ಆಚಾರ್ಯ, ಶಿವರಾಮ ಐತಾಳ, ಎಂ. ರಾಮಚಂದ್ರ, ಜಿ. ಗುಂಡಣ್ಣ, ಕೆ.ಟಿ. ಪಾಂಡುರಂಗ, ಪಂಚಾಕ್ಷರೀ ಹಿರೇಮಠ, ಟಿ.ಜಿ. ಮೂಡೂರು - ಇವರೆಲ್ಲ ತಾವು ಬರೆದ ಪುಸ್ತಕಗಳನ್ನು ಕಾರಂತರಿಗೆ ಕಳುಹಿಸಿದ್ದಾರೆ.
ಕಾರಂತರ ಕೆಲವು ಸ್ವಂತ ಕೃತಿಗಳು ಈ ಸಂಗ್ರಹದಲ್ಲಿವೆ. 'ಚೋಮನದುಡಿ', ಮರಳಿ ಮಣ್ಣಿಗೆ' (1946), 'ಮಣ್ಣುಂ ಮನಿ ತರುಮ್' ('ಮರಳಿ ಮಣ್ಣಿಗೆ'ಯ ತಮಿಳು ಅನುವಾದ - ಟಿ.ಬಿ.ಸಿದ್ಧಲಿಂಗಯ್ಯ, ಸಾಹಿತ್ಯ ಅಕಾಡೆಮಿ, ನವದೆಹಲಿ) ಈ ಸಂಗ್ರಹದಲ್ಲಿವೆ. 'ಮರಳಿ ಮಣ್ಣಿಗೆ'ಯ ಪ್ರತಿಯಲ್ಲಿ ಕಾರಂತರ ಮಗಳು ಮಾಲವಿಕಾ ಕಾರಂತರ 6-2-1954ರ ರುಜು ಇದೆ.
ಕಾರಂತರ ಸಂಗ್ರಹದಲ್ಲಿ ನಾನು ಗಮನಿಸಿದ ಕನ್ನಡದ ಕೆಲವು ಮುಖ್ಯ ಪುಸ್ತಕಗಳ ವಿವರ ಇಲ್ಲಿದೆ -
(1) ಮೈಸೂರು 'ವಿದ್ಯಾ ಇಲಾಖೆ'ಯು 1937ರಲ್ಲಿ ಪ್ರಕಟಿಸಿದ 'ಮೈಸೂರು ಕೈಪಿಡಿ' ಹೈಸ್ಕೂಲಲು ವಿದ್ಯಾಥರ್ಿಗಳಿಗಾಗಿ ರಚಿಸಲಾದ ಈ ಪುಸ್ತಕದ 5000 ಪ್ರತಿಗಳು ಮುದ್ರಣಗೊಂಡಿದ್ದವು. ಇದರ ಸಂಪಾದಕರು ಎಂ. ಆರ್. ಶ್ರೀನಿವಾಸ ಮೂತರ್ಿ, ಕಎ. ಕೃಷ್ಣಮಾಚಾರ್, ವಿ. ಸೀತಾರಾಮಯ್ಯ. ಈ ಪುಸ್ತಕದ 'ಹೊಸಗನ್ನಡ ಸಾಹಿತ್ಯ' ವಿಭಾಗದಲ್ಲಿ ನವೋದಯದ ಗುಲ್ವಾಡಿ, ಪಂಜೆ, ಮಾಸ್ತಿ, ಗೋವಿಂದ ಪೈ, ಡಿ.ವಿ.ಜಿ. ಇವರ ಹೆಸರುಗಳು ಉಲ್ಲೇಖಗೊಂಡಿಲ್ಲ.
(2) ಮೈಸೂರು ಸರಕಾರ 1956ರಲ್ಲಿ ಪ್ರಕಟಿಸಿದ ಲೇಖನ ಸಂಕಲನ 'ಮೈಸೂರು ರಾಜ್ಯ'.
(3) ಎಂ. ವೆಂಕಟ ರಾವ್, ಹೆಚ್.ಕೇಶವಯ್ಯಂಗಾರ್ (ಸಂ.) - 'ನಾಗವರ್ಮ ವಿರಚಿತ ಅಭಿಧಾನ ರತ್ನಮಾಲಾ'.
(4) ಈ 'ಸಮರ್ಪಣೆ' (ಧರ್ಮಸ್ಥಳದ ಮಂಜಯ್ಯ ಹೆಗ್ಗಡೆಯವರ ಅಭಿನಂದನ ಗ್ರಂಥ - 1950.
(5) ಕುವೆಂಪು (ಸಂ.) - 'ಸವಿನೆನಪು' (ಟಿ. ಎನ್. ವೆಂಕಣ್ಣಯ್ಯ ಸ್ಮಾರಕ ಗ್ರಂಥ - 1970.)
(6) ಅ.ನ.ಕೃ. (ಸಂ.) - 'ಭಾರತೀಯ ಕಲಾದರ್ಶನ' - ಸಂಗೀತ ನಾಟಕ ಅಕಾಡೆಮಿ, ಮೈಸೂರು ರಾಜ್ಯ (1964).
(7) ಡಾ|ಎಂ. ಚಿದಾನಂದಮೂತರ್ಿ (ಸಂ.) - 'ಅಧ್ಯಯನ' (ಶಂ. ಬಾ. ಅಭಿನಂದನೆ.) ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಒಳ್ಳೆಯ ಪುಸ್ತಕಗಳು ಈ ಸಂಗ್ರಹದಲ್ಲಿವೆ.
ಕಾರಂತರ ಸಂಗ್ರಹದಲ್ಲಿರುವ ಇಂಗ್ಲಿಷ್ ಪುಸ್ತಕಗಳಲ್ಲಿ ನನ್ನ ಗಮನ ಸೆಳೆದ ಕೆಲವು ಪುಸ್ತಕಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

1. 'INDIA' - Pictorial Survey-Govt. of India Publication (1950).
2. This is Holland.
3. J. B. S. Haldane 0 'The Inequality of man' (1932).
4. Kenneth Walker - 'The Physiology of sex'.
5. Isac Asimov - 'The Genetic Code' (1962).
6. 'Nehru - A Birthday Book' (1949).
7. J. Hachin, Clement Haurt and others - 'Asiatic Mythology'.
8. More details from the pictures in the National Gallery, England - 1941.
9. H. Krishna Shastry - 'South Indian Inscriptions' (Vol. IV-1923) and (Vol. V-1926).
10. LUCIEN RUDAUX & G. DF. VAUCOULEURS (Ed.) - 'LAROUSSE ENCYCLOPAEDIA OF ASTRONOMY' (1959).
11. JEROME WYCKOFF - 'The Hasper Encyclopaedia of Science' (4 volumes ) (1963).
12. Harry Whetlan - 'Practical Printing and Binding', (London-1946).
13. Russian Classics.
14. N. M. Adyanthaya - 'Melody Music of India' (1965).
15. Adrian Brunel - 'Film Production' (1936).
16. S. N. Sinha, N. K. Basu - 'History of Prostitution in India' (1933, Bengal).
17. L. V. Rajgopal - 'The Philosophy of A. N. Whitehead' (University of Mysore, 1966, Ph.D. Thesis).
18. Who makes machinery - 1949-50 (Germany).
19. K. T. Pandurangi - 'A Descriptive Catalogue of Sanskrit Manuscripts'. Vol.I
20. R. Satyanarayana - 'Bharatanatya-Critical Study' (1956).
21. Peter Milme - Motion Picture Directing (Newyork-1922).
22. Kenneth Clark - The Nude (Penguin-1956).
23. Prajesh Banerje - 'Dance of Shiva' (Allahabad-1042).
24. R. Satyanarayana - 'Studies in Indian Dance' (1970).
'ಮೂಕಜ್ಜಿ ಕನಸುಗಳು' ಇದರ ಮೂಕಜ್ಜಿ ಎಲುಬಿನ ಚೂರುಗಳನ್ನು ಕಂಡು ಚರಿತ್ರೆಯ ಕತೆಗಳನ್ನು ಹೇಳುವಂತೆ ಇಲ್ಲಿನ ಒಂದೊಂದು ಪುಸ್ತಕವೂ ಒಂದೊಂದು ಕತೆ ಹೇಳುತ್ತದೆ. ಛಾಯಾಚಿತ್ರ ಕತೆ, ಮುದ್ರಣ, ಸಿನೆಮಾ, ಸಂಗೀತ, ಜಾನಪದ, ಪುರಾಣ - ಕಾರಂತರ ಬಹುರೂಪಿ ಆಸಕ್ತಿಗಳಿಗೆ, ಅಧ್ಯಯನಕ್ಕೆ ಪುಸ್ತಕಗಳು ರುಜುವಾತು ನೀಡುತ್ತವೆ.
ಇತರ ಭಾಷೆಗಳ ಕೆಲವು ಗಮನಾರ್ಹ ಪುಸ್ತಕಗಳು - ಹಿಂದೀ - ಡಾ| ಎನ್. ಎಸ್. ದಕ್ಷಿಣಾಮೂತರ್ಿ - 'ಪಂಪ ರಾಮಾಯಣ್ ಕೀ ಕಥಾ' (1968), ನೇಪಾಳೀ - ಭಗವತೀ ಚರಣವಮರ್ಾ - 'ಚಿತ್ರಲೇಖಾ' (1963). ಭಾಷಾಂತರ - ತಾರಿಣೀಪ್ರಸಾದ ಕೊಯಿರಾಲಾ ಗಾಂಧೀಜಿಯ ಆತ್ಮಕತೆಯ ನೇಪಾಳೀ ಭಾಷಾಂತರ. ತೆಲುಗು - ತ್ರಿವೇಣಿ 'ಪಾಪ ಪರಿಹಾರ' (ಭಾಷಾಂತರ - ಶವರ್ಾಣಿ (1972)). ಮಲಯಾಳಂ - ಮಲಯಾಳಮ್ ವಿಶ್ವಕೋಶದ ಎರಡು ಸಂಪುಟಗಳು (1961). ಗುಜರಾತಿ - 'ನರ್ಮಗದ್ಯ' - ನರ್ಮದಾಶಂಕರ ಲಾಲಾಶಂಕರ (ಮುಂಬಯಿ ಸರಕಾರ - 1874). ಮರಾಠಿ - ಡಾ| ಮಾ. ಪ. ಮಣೂರ್ಕರ್ - 'ಮಾಝಾಸಾಧನಾ', ಡಾ| ಗೋ. ದೇಶಪಾಂಡೆ (ಸಂ.) 'ಸಂವಾದ' (ಮೂಲ - ದ. ರಾ. ಬೇಂದ್ರೆ).
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿದರ್ೇಶಕರಾಗಿದ್ದ ಡಾ| ಪ್ರಭುಶಂಕರ ಅವರು ಕಾರಂತರಿಗೆ ಕೊಡುಗೆಯಾಗಿ ಕಳುಹಿಸಿದ ಮೈಸೂರು ವಿಶ್ವವಿದ್ಯಾನಿಲಯದ ಹಲವು ಪುಸ್ತಕಗಳು ಈ ಸಂಗ್ರಹದಲ್ಲಿವೆ.
ಕಾರಂತರ ಸಂಗ್ರಹದ ಕೆಲವು ಪುಸ್ತಕಗಳು ದುಃಸ್ಥಿತಿಯಲ್ಲಿವೆ. ಅವುಗಳು ಇನ್ನಷ್ಟು ಹಾಳಾಗದಂತೆ ರಕ್ಷಿಸಬೇಕಾಗಿದೆ. ಸಂಶೋಧಕರು ಈ ಸಂಗ್ರಹದ ಸದುಪಯೋಗ ಪಡೆಯುವಂತಾಗಲು ಇದರ ವಗರ್ೀಕೃತ ಸೂಚಿಯೊಂದನ್ನು ತಯಾರಿಸಬೇಕು. ವರ್ಷಕ್ಕೊಮ್ಮೆ ಕಾರಂತರ ಹುಟ್ಟುಹಬ್ಬದಂದು ಕಾರಂತರ ಸಂಗ್ರಹದ ಅಪರೂಪದ ಗ್ರಂಥಗಳ ಪ್ರದರ್ಶನವನ್ನು ಕಲೇಜು ವಿದ್ಯಾಥರ್ಿಗಳಿಗಾಗಿ ಏರ್ಪಡಿಸಬೇಕು.
ಶಿವರಾಮ ಕಾರಂತರಿಗೆ ಸಂಬಂಧಪಟ್ಟ ನನ್ನ ಕೆಲವು ನೆನಪುಗಳನ್ನು ಇಲ್ಲಿ ಬರೆದರೆ ಅಪ್ರಸ್ತುತವಾಗಲಾರದು. 'ಕಡಲತೀರದ ಭಾರ್ಗವ' ನನ್ನ ಪಾಲಿಗೆ ಕೆಲವೊಮ್ಮೆ ದುವರ್ಾಸಮುನಿಯಾಗಿದ್ದರು. ಕಹಿ ನೆನಪುಗಳನ್ನು ನುಂಗಿಕೊಂಡು, ಇಲ್ಲಿ ಸಿಹಿ ನೆನಪುಗಳನ್ನಷ್ಟೆ ಬರೆಯುತ್ತೇನೆ.
ನಾನು ಎಂ. ಜಿ. ಎಂ.ನ ವಿದ್ಯಾಥರ್ಿಯಾಗಿದ್ದಾಗ ಕಾರಂತರು ಆಗಾಗ ನಮ್ಮ ಕಾಲೇಜಿಗೆ ಬರುತ್ತಿದ್ದರು. ಕಾರಂತರ ಮಗಳು ಕ್ಷಮಾ ಆಗ ಇಲ್ಲಿನ ವಿದ್ಯಾಥರ್ಿಯಾಗಿದ್ದರು. ಇಲ್ಲಿಗೆ ಬಂದಾಗ ಪ್ರೊ| ಬಿ. ವಿ. ಆಚಾರ್ಯರಂಥ ಪ್ರಾಧ್ಯಾಪಕರನ್ನು 'ಏನು, ಯಮಜೀಯಮ ಕಾಲೇಜಿನವರು ಹ್ಯಾಗಿದ್ದೀರಿ?' ಎಂದು ಮಾತನಾಡಿಸುತ್ತಿದ್ದ ಕಾರಂತರ ನೆನಪಾಗುತ್ತದೆ.
ಕಾರಂತರು ಯಕ್ಷಗಾನ ಕಮ್ಮಟವೊಂದನ್ನು ಎಂ. ಜಿ. ಎಂ.ನಲ್ಲಿ ಏರ್ಪಡಿಸಿದ್ದರು. ವಿದ್ಯಾಥರ್ಿಯಾಗಿದ್ದ ನಾನು ಪ್ರೊ| ಕು. ಶಿ.ಯವರ ಅಪ್ಪಣೆಯ ಮೇರೆಗೆ ಈ ಕಮ್ಮಟದಲ್ಲಿ ಭಾಗವಹಿಸಿ, ಕಾರಂತರಿಗಾಗಿ ಅದರ ಸುದೀರ್ಘ ವರದಿಯೊಂದನ್ನು ಬರೆದಿದ್ದೆ.
1961ರಲ್ಲಿ ಪ್ರೊ| ಕು. ಶಿ. ಹರಿದಾಸಭಟ್ಟರು ಏರ್ಪಡಿಸಿದ್ದ 'ಕಾರಂತ ಅಭಿನಂದನ ಉತ್ಸವ' ಎಂ.ಜಿ.ಎಂ.ನ ಇತಿಹಾಸದ ಅವಿಸ್ಮರಣೀಯ ಸಮಾರಂಭಗಳಲ್ಲೊಂದು. ಪ್ರೊ| ಸುನೀತಿ ಕುಮಾರ ಚಟಜರ್ಿ, ಗೋಪಾಲಕೃಷ್ಣ ಅಡಿಗ, ದೇಜಗೌ, ವಿ. ಸೀ., ಸಿ. ಪಿ. ಲಿಂಗಣ್ಣ, ಜೆ. ಆರ್. ಲಕ್ಷ್ಮಣ ರಾವ್, ರಾಯ್ ಬಹದ್ದೂರ್, ಜಿ. ಎಸ್. ಆಮೂರ, ಬನ್ನಂಜೆ ಗೋವಿಂದಾಚಾರ್ಯ, ಉದ್ಯಾವರ ಮಾಧವಾಚಾರ್ಯ, ಸೇವ ನಮಿರಾಜ ಮಲ್ಲ, ಹ. ವೆ. ನಾಗರಾಜ್ ರಾವ್, ಗುಂಡ್ಮಿ ಚಂದ್ರಶೇಖರ ಐತಾಳ, ಡಾ| ಟಿ. ಎಂ. ಎ. ಪೈ, ಟಿ. ಎ. ಪೈ - ಇವರೆಲ್ಲ ಈ ಉತ್ಸವದಲ್ಲಿ ಭಾಗವಹಿಸಿದ್ದರು. ಕಾರಂತರ 'ಮರಳಿ ಮಣ್ಣಿಗೆ'ಯ ಇಂಗ್ಲಿಷ್ ಭಾಷಾಂತರವನ್ನು ಓದಿಕೊಂಡು ಬಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ| ಸುನೀತಿ ಕುಮಾರ ಚಟಜರ್ಿಯವರು 'ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು' ಎಂಬಂತೆ ಮಾತನಾಡಿದರು. ಕು. ಶಿ. ಹರಿದಾಸ ಭಟ್ಟರು ಸಂಪಾದಿಸಿದ 'ಕಾರಂತ ಪ್ರಪಂಚ' ಈ ಸಂದರ್ಭದಲ್ಲಿ ಪ್ರಕಟವಾಯಿತು. (ನೋಡಿ - ಕು. ಶಿ. ಹರಿದಾಸ ಭಟ್ಟ, ಎನ್. ತಿರುಮಲೇಶ ಭಟ್ಟ (ಸಂ.) - 'ಅಭಿನಂದನ', ಎಂ. ಜಿ. ಎಂ. ಕಾಲೇಜು, 1970) (ಬಿ. ಮಾಲಿನಿ ಮಲ್ಯರು ಸಂಪಾದಿಸಿರುವ 'ಶಿವರಾಮ ಕಾರಂತರ ಕೃತಿ ಕೈಪಿಡಿ'ಯಲ್ಲಿ (1997) 'ಕಾರಂತ ಪ್ರಪಂಚ'ದ ಉಲ್ಲೇಖವಿದೆ. ಕು. ಶಿ. ಹರಿದಾಸ ಭಟ್ಟರ ಹೆಸರಿಲ್ಲ. ಇತಿಹಾಸದ ಪುಟಗಳನ್ನು ಅಳಿಸಲು ಯತ್ನಿಸುವವರನ್ನು ಕಂಡು ನಗಬೇಕೋ, ಅಳಬೇಕೋ ತೋಚುವುದಿಲ್ಲ.
ಕಾರಂತರು ತನ್ನ ಹಳೆಯ ಲೇಖನಗಳನ್ನು ಸಂಗ್ರಹಿಸುತ್ತಿರುವ ಸುದ್ದಿ ತಿಳಿದು, ನನಗೆ ಸಿಕ್ಕಿದ ಒಂದೆರಡು ಲೇಖನಗಳನ್ನು ಕಾರಂತರಿಗೆ ಕಳುಹಿಸಿದೆ.
ಕಾರಂತರು ಅಂಚೆ ಕವರಿನಲ್ಲಿ ಜೆರಾಕ್ಸ್ ಬಿಲ್ಲಿನ ಹಣವನ್ನು ಇರಿಸಿ ಕಳುಹಿಸಿದ್ದರು! ಮತ್ತೊಂದು ಲೇಖನ ಕಳುಹಿಸುವಾಗ 'ಈ ಲೇಖನದ ಪ್ರತಿ ಕೊಟ್ಟವರು ಜೆರಾಕ್ಸ್ ಬಿಲ್ ಕೊಟ್ಟಿಲ್ಲ. ಕವರಿನಲ್ಲಿ ನೋಟು ಕಳುಹಿಸಬೇಡಿ' ಎಂದು ಬರೆದೆ. ಕವರಿನಲ್ಲಿ ನೋಟು ಬರಲಿಲ್ಲ; ಕೃತಜ್ಞತೆಯ ಕಾಡರ್ು ಬಂತು.
ಒಮ್ಮೆ ಕಾರಂತರು ಪ್ರಯಾಣಿಸುತ್ತಿದ್ದ ಕಾರು ಹಿರಿಯಡ್ಕದಲ್ಲಿ ನಮ್ಮ ಮನೆಯ ಎದುರು ಕೆಟ್ಟು ನಿಂತಿತು. ಇದನ್ನು ಗಮನಿಸಿದ ನನ್ನ ಅಣ್ಣ ಶ್ರೀ ಬಿ. ಪಿ. ಜನಾರ್ದನ ಅವರು ಕಾರಂತರನ್ನು ಮನೆಗೆ ಆಹ್ವಾನಿಸಿದರು. ನಮ್ಮ ಮನೆಗೆ ಬಂದ ಕಾರಂತರು ಕಾರು ರಿಪೇರಿಯಾಗುವವರೆಗೂ ನಮ್ಮ ಅಮ್ಮನೊಡನೆ ಪಟ್ಟಂಗ ಹೊಡೆದರಂತೆ! ಕಾರಂತರು ನನ್ನನ್ನು ಕೋಟರ್ಿಗೆಳೆಯುತ್ತಾರೆ ಎಂಬ ಗಾಳಿ ಸುದ್ದಿ ಕೇಳಿದ ನನ್ನಮ್ಮ ಗಾಬರಿಯಾದಳು. 'ಕಾರಂತರ ಸುದ್ದಿಗೆ ಹೋಗಬೇಡ, ಅವರೊಡನೆ ಜಗಳಾಡಬೇಡ' ಎಂದು ಕಿವಿಮಾತು ಹೇಳಿದ್ದಳು.
ನಾನು ಮತ್ತು ಪ್ರೊ| ಹೆರಂಜೆ ಕೃಷ್ಣ ಭಟ್ಟರು ಸಂಪಾದಿಸಿದ 'ಗೋವಿಂದ ಪೈ ಸಂಶೋಧನ ಸಂಪುಟ' (1995)ದ ಬಿಡುಗಡೆಗೆ ಕಾರಂತರು ಎಂ. ಜಿ. ಎಂ.ಗೆ ಬಂದಿದ್ದರು. ಆ ಸಂಪುಟವನ್ನು ತುಂಬ ಮೆಚ್ಚಿಕೊಂಡ ಕಾರಂತರು ಸಂಪುಟದ ಪ್ರಕಟಣೆಯ ನಿಧಿಗೆ ಇಪ್ಪತ್ತೈದು ಸಾವಿರ ರೂ.ಗಳ ಚೆಕ್ ಕಳುಹಿಸಿದರು. ಗೋವಿಂದ ಪೈಗಳ ಕುಟುಂಬದವರು ನೀಡಿದ ಗೌರವ ಪದಕವನ್ನು ಶಿವರಾಮ ಕಾರಂತರಿಂದ ಸ್ವೀಕರಿಸುವ ಅವಕಾಶ ಸಿಕ್ಕಿದ್ದು ನನ್ನ ಸವಿನೆನಪುಗಳಲ್ಲೊಂದು. 'ಗೋವಿಂದ ಪೈ ಸಂಶೋಧನ ಸಂಪುಟ'ದ ಪ್ರತಿಗಳನ್ನು ಕನರ್ಾಟಕ ಸರಕಾರದ ಸಂಸ್ಕೃತಿ ಇಲಾಖೆಗೆ ಕೊಡಲು ನಾನು ಪ್ರೊ| ಹೆರಂಜೆಯವರೊಡನೆ ಬೆಂಗಳೂರಿಗೆ ಹೋಗಿದ್ದೆ. ಬರುವಾಗ ಶಿವರಾಮ ಕಾರಂತರು ನಮ್ಮ ಜತೆಯಲ್ಲಿ ಬಂದರು. ಪ್ರಯಾಣದಲ್ಲಿ ನಿದ್ರಿಸದೆ ಎಚ್ಚರದಿಂದಿದ್ದ ಕಾರಂತರೊಡನೆ ನಾನು ನನ್ನ ಆಸಕ್ತಿಯ ಹಲವು ಪ್ರಶ್ನೆಗಳನ್ನು ಕೇಳಿದೆ. ಕಾರಂತರು ತಾಳ್ಮೆಯಿಂದ, ಲವಲವಿಕೆಯಿಂದ ಹಳೆಯ ನೆನಪುಗಳನ್ನು ಹಂಚಿಕೊಂಡರು. ಕಾರಂತ ಪ್ರಪಂಚದಲ್ಲಿ 'ವಿಸ್ಮೃತಿ' ಎಂಬ ಶಬ್ದವೇ ಇರಲಿಲ್ಲ!
ಕಾರಂತರ ಮನಸ್ಸಿಗೆ ನೋವಾದ ಒಂದು ಪ್ರಸಂಗದಲ್ಲಿ ನಾನು ನಿರಪರಾಧಿಯಾಗಿದ್ದೆ. 'ಇದು ಆ ಸಣಕಲನದೇ ಕಿತಾಪತಿ' ಎಂದು ಪತ್ರಿಕಾ ಸಂಪಾದಕರೊಬ್ಬರೊಡನೆ ಕಾರಂತರು ನನ್ನನ್ನು ಬೈದರಂತೆ. ಕಾರಂತರು ಸಿಟ್ಟಿನಲ್ಲಿ ನನಗೆ ಕೊಟ್ಟ 'ಸಣಕಲ' ಎಂಬ ಬಿರುದನ್ನು ನೆನಪಿಸಿಕೊಳ್ಳುತ್ತ, ಅವರಿಗೆ ಶ್ರದ್ಧಾಂಜಲಿ ಅಪರ್ಿಸುತ್ತ ಈ ಲೇಖನವನ್ನು ಮುಗಿಸುತ್ತೇನೆ.
(ಕೃತಜ್ಞತೆಗಳು: ಎಂ. ಜಿ. ಎಂ.ನ ಗ್ರಂಥಪಾಲಕ ಶ್ರೀ ಎಸ್. ಬಾಲು ಹಾಗೂ ಗ್ರಂಥಾಲಯ ಸಿಬ್ಬಂದಿಯವರಿಗೆ).
Books donated by Dr. Shivarama Karanth at Govinda Pai Research Centre, udupi[ survey] by- Muraleedhara Upadhya Hiriadka[2000]
ನಂದಾದೀಪ
(Special supplement to MGM College Magazine (UDUPI) brought out on the occassion of the Golden Jubilee Celebrations , Feb-2000)
No comments:
Post a Comment