stat Counter



Tuesday, August 2, 2011

ಖ್ಯಾಲು ಖಯಾಲಿಗಳು

ಖ್ಯಾಲು ಖಯಾಲಿಗಳು

ಗುರುರಾಜ ಮಾರ್ಪಳ್ಳಿ

 ನಾನು ಬರೆಯುತ್ತಿರುವುದು ಒಂದೇ ಕವನ
 ಅದು ಜೀವನ..........

ನುಂಗಲಾರದ ಉಗುಳಲಾರದ ಅನುಭವವೊಂದು ತೀವ್ರವಾಗಿ ಚಡಪಡಿಕೆ ಯಾತನೆ ತಲ್ಲಣಗಳಾಗಿ ಮೈಮನಸ್ಸು ಉರಿದೆದ್ದ ಗಳಿಗೆಯಲ್ಲಿ ನಾನು ನನಗೆ ತೋಚಿದ್ದನ್ನು ಈ ಮೂರು ದಶಕಗಳಿಂದ ಬರೆಯುತ್ತ ಬಂದಿದ್ದೇನೆ.  ನನ್ನ ಈ ಅನುಭವಕ್ಕೆ ದೇಶಕಾಲಪಾತ್ರಗಳ ತೆಕ್ಕೆಗೊದಗುವ ಕಾರಣಗಳೇ ಬಹುತೇಕ ಕಾರಣಗಳು.

ನಾನು ಪ್ರತಿಯೊಂದು ಮಾಧ್ಯಮವನ್ನು ಆಯ್ದುಕೊಂಡಾಗಲೂ ಆ ಮಾಧ್ಯಮದ ಮಂದಿ ನನ್ನನ್ನು ಆಕ್ಷೇಪಿಸುವ ರೀತಿಯಲ್ಲಿ ನೋಡಿದ್ದಾರೆ.  ಕಾವ್ಯವೆಂದರೆ ಕನ್ನಡ ಪ್ರೇಮ, ನಾಡುನುಡಿಗಳ ಅಭಿಮಾನವಾಗಿ ಬೆಳೆಸಿಕೊಳ್ಳುವ ಜಾಯಮಾನಕ್ಕೆ ದೂರವಾಗಿರುವ ನಾನು ಸಂಶಯ ಪಿಶಾಚಿಗಳ ಕಿವಿಮಾತುಗಳನ್ನು ಶ್ರದ್ಧೆಯಿಂದ ಕೇಳುತ್ತ ಬಂದವನು.
ವರ್ತಮಾನ ಜಗತ್ತು ಒಂದುಕಡೆ ಭೀಭತ್ಸ, ಭಯಾನಕ ಮತ್ತು ಅನೈತಿಕತೆಯ ಅಗ್ನಿಕುಂಡದಂಥ ಮಾಧ್ಯಮಗಳ ತೆಕ್ಕೆಗೆ ಜನರನ್ನು ಪತಂಗಗಳಂತ DPÀ¶ð¸ÀÄwÛgÀĪÁUÀ ರಾಜಕಾರಣ, ಧರ್ಮ, ಸಿದ್ಧಾಂತಗಳ ಕ್ಷೇತ್ರಗಳು, ಭ್ರಷ್ಟತೆ, ಅಪಮೌಲ್ಯಗಳಿಂದ ಆಷಾಢಭೂತಿ ಮುಖವಾಡಗಳನ್ನು ಕಟ್ಟಿಕೊಂಡಿರುವಾಗ ಇದರಲ್ಲಿ ಸಲೀಸಾಗಿ ಈಜಾಡಿ ಹಳೆಮನೆಯ ಮಂದಿಯಾಗಿ ರೊಮ್ಯಾಂಟಿಕ್ ಯುಗದಲ್ಲೆ ಕಾಲಕಳೆಯುವುದು ನನಗೆ ಸಾಧ್ಯವಿಲ್ಲ.

ಅನುಭೂತಿ, ಅನುಭವ, ಆಧ್ಯಾತ್ಮ, ತತ್ವಜ್ಞಾನ ಏನೇ ಹೇಳಿದರೂ ವರ್ತಮಾನದ ತೆಕ್ಕೆಗೊಗ್ಗುವ ಅನುಭವಗಳ ಮಿತಿಯಲ್ಲೆ ವ್ಯಕ್ತಿ ಬಾಳಬೇಕಾಗುತ್ತದೆ.  ಒಂದು ವ್ಯವಸ್ಥಿತ ಕಲ್ಪನೆಯ ಶಿಷ್ಠಸಮಾಜದಲ್ಲಿ ಸಾಹಿತ್ಯ, ಕಾವ್ಯ, ಚುತ್ರ, ನೃತ್ಯಗಳಂತಹ ಮಾಧ್ಯಮಗಳಿಗೆ ಒಂದು ದೀರ್ಘ ಚರಿತ್ರೆ, ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳಿಗಿರುವ ಹಾಗೆಯೇ ಸೃಜನಶೀಲತೆ
¥Àæ0iÉÆÃUÀ²Ã®vÉUÀ½UÉ 
ಸ್ವಚ್ಛಂದ ಸೃಷ್ಟಿಯ ಸಾಧ್ಯತೆಗಳಿಗೂ ಈ ಮಾಧ್ಯಮಗಳು ತೆರೆದುಕೊಳ್ಳಬೇಕೆಂಬ ಅರಿವು ಇದರಲ್ಲಿ ಕೆಲಸ ಮಾಡುವವರಿಗೆ ಕಡಿಮೆಯಾಗುತ್ತ ಬಂದಿವೆ.

ವೈಯಕ್ತಿಕವಾಗಿ ಬಹಿರಂಗ ವೇದಿಕೆಗಳನ್ನು ಕಂಡುಕೊಂಡಿರುವ ಉಚ್ಛೃಂಖಲ ಅಶ್ಲೀಲತೆ ಯಾದೃಚ್ಛಿಕವೇನಲ್ಲ.  ತಾಯಿಯ ಒಡಲಿನಿಂದ ಜಗತ್ತಿಗೆ ಕಣ್ಣು ಬಿಡುವಷ್ಟರಲ್ಲಿ ಮನುಷ್ಯ ಜೀವದ ಸ್ವಾತಂತ್ರ್ಯಗಳನ್ನು ಅಪಹರಿಸಿ ಸಿದ್ಧ ಮಾದರಿಯ ಶಿಕ್ಷಣ ಸಂಸ್ಕೃತಿಯ ರೂಪಕಗಳನ್ನು ಪಡೆಯುವಂಥ ಒಂದು DyðPÀ ವ್ಯವಸ್ಥೆ ಅಸಮಾನತೆಗೆ ತಾಯಿಯ ಬಸಿರಲ್ಲೆ ದೀಕ್ಷೆಕೊಡುವಂತೆ ಮಾಡುತ್ತದೆ.  ದೇಶ, ಕಾಲ, ಪಾತ್ರಗಳಲ್ಲಿ ಹೆಸರು ಗುರುತಿನ ಚೀಟಿ, ¥Á¸ï¥ÉÇÃmïð  ಹೊಂದದೆ ಮನುಷ್ಯ ವಿಶ್ವಮಾನವನಾಗುವುದು ಸಾಧ್ಯವೇ ಇಲ್ಲ.  ಇದನ್ನು ತಾನು ಸಾಕುವ ಪ್ರಾಣಿಗಳಿಗೂ ಅನ್ವಯಿಸುತ್ತದೆ ಮನುಷ್ಯ ಸಮಾಜ.  ಈ ವಿಚಿತ್ರಗಳನ್ನು ಪ್ರಶ್ನಿಸಿದರೆ ಪ್ರಜ್ಞೆ ತೊಳಲಾಡತೊಡಗುತ್ತದೆ, ಪ್ರಜ್ಞೆಗೆ ಅವಜ್ಞೆ ಕಾಡುತ್ತದೆ.  ವಿವೇಕ
²ÃµÁð¸À£À ಹಾಕಿ - ನಿಲ್ಲುತ್ತದೆ.

ಪ್ರಶ್ನೆಗಳು ನಮಗೆ ಪ್ರತಿಧ್ವನಿಗಳಾಗಿ ಅಪ್ಪಳಿಸುವ ಸಮಾಜದಲ್ಲಿ ಕ್ಲೀಷೆಗಳನ್ನು ಪ್ರೀತಿಸಲು ಸಾಧ್ಯವಾಗದಿದ್ದರೆ ನಿತ್ಯಜೀವನ ನರಕವಾಗಿ ಕಾಡುತ್ತದೆ.  ಶಿಕ್ಷಣಕಿಲ್ಲದ ಅನುಕೂಲತೆ ಕ್ಷಿಪಣಿಗಳನ್ನು ತಯಾರಿಸಿಡಲೂ, ಹೊಟ್ಟೆ ಬಟ್ಟೆಗಿಲ್ಲದ ಅನ್ನ ಗೋದಾಮಿಗಳಲ್ಲಿ ಕೊಳೆಯುವುದೂ ಫ್ಯಾಶನ್ನಾಗುತ್ತದೆ.  ನೋಬೆಲ್ ವಿಜೇತ ಕಾಲ ತುಲನೆಯ ಅರ್ಥಶಾಸ್ತ್ರಜ್ಞರಿಗೆ ಪ್ರಜಾಪ್ರಭುತ್ವ ಅಪ್ಯಾಯಮಾನವಾಗಿ ಕಂಡೀತು.  ಎಲ್ಲ ಶೋಧನೆಗಳ ಮೌಲ್ಯಮಾಪನಗಳಿಗೆ ಶ್ರೇಷ್ಠಾತಿಶ್ರೇಷ್ಠ ಎಂಬ ಗ್ರಹಿಕೆಯ ರತ್ನಪ್ರಶಸ್ತಿಗಳು, ನೋಬೆಲ್ಲುಗಳು ಕೊನೆಗೂ ಕಾರಣಗಳಾಗುತ್ತವೆ.

ಆರೇಳು ದಶಕಗಳ ಹಿಂದೆ ಬಂಗಾಳದ ರೇ ¤«Äð¹zÀ ಚಿತ್ರಗಳ ಕಾಲದಲ್ಲಿ ಕ್ಯಾಮರಾದ ಟೆಕ್ನಾಲಜಿ ಈಗಿನಂತೆ ಬೆಳೆದಿರಲಿಲ್ಲ.  ಬಸ್ಸಿನಲ್ಲಿ ತಂಡಗಳನ್ನ ಕಟ್ಟಿಕೊಂಡು ಪ್ರಯಾಣಿಸಿ ಒಡವೆ ಒತ್ತೆಯಿಟ್ಟು ¤«Äð¹zÀ ಈ ಚತ್ರಗಳಲ್ಲಿ ಕಾಣಿಸುವ ಕ್ಯಾಮರಾದ ಕಣ್ಣಿನ ಜೀವಂತಿಕೆ ಹೆಲಿಕಾಪ್ಟರುಗಳಲ್ಲಿ ಜೋತಾಡುತ್ತ ಶೂಟಿಂಗ್ ಮಾಡುವ ಅತ್ಯಾಧುನಿಕತೆಯಲ್ಲಿ ಯಾಕೆ ಕಾಣುವುದಿಲ್ಲ?  ಟೆಕ್ನಾಲಜಿಯ ಅಪಾಯಕ್ಕೆ ಮಾನವೀಯತೆ ಧ್ವಂಸವಾಗುತ್ತ ಬಂದಿದೆ.  ನನ್ನ ಕಾಲದ ಬದುಕಿನ ಬಗ್ಗೆ ನನ್ನ ಎಡಗೈ ಹೆಬ್ಬೆಟ್ಟಿನ ರುಜು ಹಾಕದೇ ಇರುವುದಕ್ಕೆ ನನಗೆ ನೂರಾರು ಕಾರಣಗಳಿವೆ.  ಭಾಷೆ, ಕಾವ್ಯ, ಸಾಹಿತ್ಯ, ಸಂಗೀತ ಯಾವ ಮಾಧ್ಯಮಗಳೂ ಇರದ ಜೀವರಾಶಿಗಳಲ್ಲಿ ಬದುಕಿನಲ್ಲೆ ಕಾವ್ಯವಿದೆ ಸೌಂದರ್ಯವಿದೆ ಎಂಬುದನ್ನು ಕಂಡಿರುವ ನನಗೆ ಮನುಷ್ಯ ಸಮಾಜದ ಕುರಿತು ಕೆಲವು ಮೂಲಭೂತ ಸಂಶಯ ಮತ್ತು ಆಕ್ಷೇಪಗಳಿವೆ.  ಅದನ್ನು ಬರೆಯಲು ನಾನು ಬಳಿಸಿಕೊಂಡ ಅವಕಾಶವನ್ನು ಬಳಸದೇ ಇದ್ದರೂ ಇರಬಹುದಿತ್ತು.  ಆದರೆ ಎಲ್ಲವೂ ನಮ್ಮ ಬುದ್ಧಿಯ ನಿಕಷದಲ್ಲೆ ಉಳಿದುಬಿಡಬಾರದೆಂದೂ ಅನಿಸುತ್ತದೆ.

ಚೆನ್ನಮಲ್ಲಿಕಾರ್ಜನಯ್ಯ ಇರಿದಲಗು
ಒಡಲಲ್ಲಿ ಮುರಿದು ಹೊರಳುವೆನ್ನಳಲು
ನೀವೆತ್ತ ಬಲ್ಲಿರೇ

ಅನ್ನುವ ಅಕ್ಕನ ವಚನಗಳಲ್ಲಿ ಸೃಜನಶೀಲತೆಯ ತೊಳಲಾಟದ ಸ್ಥಿತಿಗತಿಗಳಿವೆ ಎಂಬ ಅನುಭವ ನನ್ನದು.  ಈ ಹೊರಳಾಟದ ಇರಿತಕ್ಕೆ ಮುಖ ತಿರುಗಿಸಿಬಿಡುವವರೇ ಹೆಚ್ಚು.

ಮಾಧ್ಯಮಗಳಿಗಾಗಿಯೇ ಜೀವನವನ್ನು ಮುಡಿಪಿಟ್ಟು ಬದುಕಿಬಂದ ಬದುಕುತ್ತಿರುವ ಸಾಮಾಜಿಕ ಬದ್ಧತೆಯ ವಾತಾವರಣದಲ್ಲಿ ನನ್ನಂಥವನ ಧೋರಣಿಗೆ ಅಗಾಧ ಒಂಟಿತನ ದೇಣಿಗೆಯಾಗಿ ಬರುತ್ತದೆ. ಆದರೆ ವ್ಯಕ್ತಿ ತನ್ನ D0iÀÄĪÀiÁð£À  ಇಡೀ ಬೆನ್ನುತಟ್ಟುವವರಿಗಾಗಿ ಕಾಯಬಾರದು.  (ಜೀವ ಜೀವಾನಾನುಭವ ನಿರಪೇಕ್ಷವಾಗುವುದರ ಕಡೆಗೆ ಸಾಗುವುದೇ ಅರಿವಲ್ಲವೇ?)  ಒಂಟಿ ವ್ಯಕ್ತಿ ಏಕಾಂಗಿಯಾಗುವುದರ ಜತೆಗೆ ಸಮಾಜ, ಜಗತ್ತು ಕೂಡಾ ಒಂಟಿ ಅನ್ನುವುದರ ಅರಿತು ಮೂಡುವುದು ಮಾಧ್ಯಮಗಳ ಮೂಲಕವೇ ಹೊರತು ಸಿದ್ಧಾಂತ, ತತ್ವಜ್ಞಾನ, ಧರ್ಮ, ರಾಜಕಾರಣಗಳ UÉÆö×
 ಸಮಾವೇಶಗಳಲ್ಲಿ ಖಂಡಿತಾ ಅಲ್ಲ.

UÀÄgÀÄgÁd ªÀiÁ¥Àð½’s  ಖ್ಯಾಲು ಖಯಾಲಿಗಳು
ಪ್ರ - ರಜತ ಸಾಹಿತ್ಯ
ನಂ.`14, ಸೀತಮ್ಮ ಅನಂತಯ್ಯ ಕಲ್ಯಾಣ ಮಂದಿರದ ಹತ್ತಿರ
4ನೇ ಅಡ್ಡ ರಸ್ತೆ, ಓ.ಟಿ. ರಸ್ತೆ, ಶಿವಮೊಗ್ಗ - 577 202
2011 -ರೂ.165/-

"Khyall-Khayaligalu"
(Collection of Poetry)
      By
Gururaja Marpalli

Published by

Smt. Jayanthi Ramanath, on behalf of Rajatha Sahitya
# 14, Near Seethamma Ananthaiah, Kalyana Mandira
4th Cross, O.T. Road, Shimoga 577 202 Mob.: 9844420216
First Edition: 2011
Pages VI+322+iv
Price: Rs.165

No comments:

Post a Comment