stat Counter



Friday, September 27, 2013

ಬರ್ಟೋಲ್ಟ್ ಬ್ರೆಕ್ಟ್ - ಜನರಲ್ ಆಹಾ ನಿಮ್ಮ ಟ್ಯಾಂಕರ್... { ಕನ್ನಡಕ್ಕೆ - ಅನುಪಮಾ ]

‘ಜನರಲ್,
ಆಹಾ! ನಿಮ್ಮ ಟ್ಯಾಂಕರ್! ತುಂಬ ಶಕ್ತಿಶಾಲಿ ವಾಹನ.
ಅದು ಕಾಡುಮೇಡುಗಳ ನುಚ್ಚುನೂರು ಮಾಡಬಲ್ಲದು.
ನೂರಾರು ಜನರ ಹಿಂಡಿ ಹಿಸುಕಬಹುದು.
ಆದರೆ ಅದರದ್ದು ಒಂದೇ ಕೊರತೆ:
ಅದಕೊಬ್ಬ ಡ್ರೈವರ್ ಬೇಕು!

ಜನರಲ್,
ಓಹ್! ನಿಮ್ಮ ಬಾಂಬರ್ ಎಷ್ಟು ಶಕ್ತಿಶಾಲಿ!
ಬಿರುಗಾಳಿಗಿಂತ ವೇಗವಾಗಿ ಓಡಬಲ್ಲದು
ಆನೆಗಿಂತ ಹೆಚ್ಚು ಭಾರ ಹೊತ್ತೊಯ್ಯಬಲ್ಲದು,
ಆದರೆ ಅದರದ್ದು ಒಂದೇ ಲೋಪ,
ಅದಕ್ಕೊಬ್ಬ ಮೆಕ್ಯಾನಿಕ್ ಬೇಕು.

ಜನರಲ್,
ಈ ಮನುಷ್ಯ ಇದ್ದಾನಲ್ಲ, ತುಂಬ ಪ್ರಯೋಜನಕಾರಿ.
ಆತ ಹಾರಬಲ್ಲ, ಕೊಲ್ಲ ಬಲ್ಲ.
ಆದರೆ ಅವನದ್ದು ಒಂದೇ ಕೊರತೆ,
ಅವನು ಯೋಚಿಸಲೂ ಬಲ್ಲ.’

- ಬರ್ಟೋಲ್ಟ್ ಬ್ರೆಕ್ಟ್
ಕನ್ನಡಕ್ಕೆ: ಅನುಪಮಾ
Bertolt  Brecht - Gerneral ..translated to kannada by  ANUPAMA

No comments:

Post a Comment