ಭಟ್ಟರ ತೋಟದ ಪಕ್ಕದ ಕಾಡಲಿವಾಸಿಸುತಿದ್ದವು ಮಂಗಗಳು
ತಿನ್ನಲು ಏನೂ ಸಿಕ್ಕದೆ ಹಸಿವಲಿ ಇದ್ದವು ಮರದಲಿ ಕುಳಿತಲ್ಲೇ
ಹಿಂದೆ ಕಾಡಲಿ ತಿನ್ನಲು ತುಂಬಾ ಹಣ್ಣು ಹ್ಂಪಲು ಸಿಗುತಿತ್ತು
ಕಾರೆ ಕುಂಟಲ ಕೊಟ್ಟೆ ಸಂಪಿಗೆ ಹಣ್ಣುಗಳಿಂದಾ ತುಳುಕಿತ್ತು
ಕಾಲ ಉರುಳಿತು ಕಾಡು ಹೋಯಿತು ಬರಡಾಯಿತು ನೆಲ ಎಲೆಲ್ಲೂ
ಪರದೇಶೀ ತಳಿ ಅಕೇಶಿಯಾಕ್ಕೆ ಆಶ್ರಯ ಸಿಕ್ಕಿತು ಕಾಡಲ್ಲಿ
ಮಂಗ ಹಂದಿ ನರಿ ಕಾಡು ಕೋಣಗಳು ಕಂಗೆಟ್ಟವು ಬಲು ಹಸಿವಲ್ಲಿ
ವಲಸೆ ಹೋದವು ವನ್ಯ ಪ್ರಾಣಿಗಳು ಮಂಗಗಳೆಲ್ಲವ ಬಿಟ್ಟಿಲ್ಲಿ
ಕಂಗು ಪೇರಳೆ ಹಲಸು ಮಾವುಗಳು ತೋಟದ ತುಂಬಾ ಬೆಳೆದಿತ್ತು
ಗೊಂಚಲು ಗೊಂಚಲು ಎಳನೀರಿಂದ ತೆಂಗಿನ ಮರ ಕಂಗೊಳಿಸಿತ್ತು
ಹಸಿವನು ತಾಳದ ಮುದಿಕಪಿಯೊಂದಕೆ ಯೋಚನೆಯೊಂದು ಹೊಳೆದಿತ್ತು
ಬನ್ನಿರಿ ಎಲ್ಲರು ಮಾತನು ಕೇಳಿರಿ ಎನ್ನುತ ಬಳಗವ ಕರೆದಿತ್ತು
ನೋಡಿರಿ ತೋಟದಿ ಕಾಯಿಗಳಿಂದ ತೊನೆಯುತ್ತಿರುವ ತೆಂಗನ್ನು
ಎಲ್ಲರು ಮರವನು ಏರುತ ಕುಡಿಯುವ ಸಿಹಿ ಸಿಹಿ ತೆಂಗಿನ ನೀರನ್ನು
ನುಗ್ಗೆಯ ಸೊಪ್ಪು ಬಾಳೆಯ ಹಣ್ಣು ಕೊಕೋ ಪೇರಳೆ ಮೆಲ್ಲುವ ನಾವ್
ಹಲಸು ಮಾವುಗಳ ಸವಿಯುತ ಹಸಿವನು ನೀಗಿಸಿಕೊಳ್ಳುವ ಅನುದಿನವೂ
ಹಿರಿಕಪಿ ಮಾತನು ಕೇಳುತ ತೋಟಕೆ ಹಾರಿದವೆಲ್ಲಾ ಮಂಗಗಳು
ಏರುತ ಮರವನು ಕುಡಿದವು ಕೆಡೆದವು ಚೆಲ್ಲಾಡಿದವೆಳೆ ಕಾಯಿಗಳ
ಭಟ್ಟರ ತೋಟದಿ ಲೆಕ್ಕಕೆ ಇಂದಿಗೆ ತೆಂಗಿನ ಮರಗಳು ನೂರಾರು
ಒಂದೇ ಒಂದು ಕಾಯಿಯು ಇಲ್ಲ ನಿತ್ಯಕೆ ಮಾಡಲು ಸಾಂಬಾರು
ಎಲ್ಲೆಡೆ ಎದ್ದಿದೆ ಹಾಹಾಕಾರ ಕಪಿಗಳಿಗೇನು ಪರಿಹಾರ
ಕೃಷಿ ಉತ್ಪನ್ನ ಕಪಿ ಪಾಲಾದರೆ ನಮಗೇನುಳಿಯಿತು ಆಹಾರ
ಕಾಡನು ರಕ್ಷಿಸೆ ನಾಡುಳಿಯುವುದು ಎಂಬುದ ನಾವು ತಿಳಿದಿರಲು
ನೆಲೆಸುವುದೆಲ್ಲೆಡೆ ಸುಖ ಸಂಮೃದ್ಧಿ ನಮ್ಮಯ ಬದುಕಿಗೆ ಮರು ಅರಳು
ಡಾ| ಸುಬ್ಬಣ್ಣಯ್ಯ ಕೋಟಿಗದ್ದೆ
ಪ್ರಾಧ್ಯಾಪಕ
ಸೂಕ್ಷ್ಮಜೀವಶಾಸ್ತ್ರ ವಿಭಾಗ
ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
ಕುರುಂಜಿಬಾಗ್,ಸುಳ್ಳ್ಯ574327
ತಿನ್ನಲು ಏನೂ ಸಿಕ್ಕದೆ ಹಸಿವಲಿ ಇದ್ದವು ಮರದಲಿ ಕುಳಿತಲ್ಲೇ
ಹಿಂದೆ ಕಾಡಲಿ ತಿನ್ನಲು ತುಂಬಾ ಹಣ್ಣು ಹ್ಂಪಲು ಸಿಗುತಿತ್ತು
Dr.Subbannayya Kotigadde |
ಕಾಲ ಉರುಳಿತು ಕಾಡು ಹೋಯಿತು ಬರಡಾಯಿತು ನೆಲ ಎಲೆಲ್ಲೂ
ಪರದೇಶೀ ತಳಿ ಅಕೇಶಿಯಾಕ್ಕೆ ಆಶ್ರಯ ಸಿಕ್ಕಿತು ಕಾಡಲ್ಲಿ
ಮಂಗ ಹಂದಿ ನರಿ ಕಾಡು ಕೋಣಗಳು ಕಂಗೆಟ್ಟವು ಬಲು ಹಸಿವಲ್ಲಿ
ವಲಸೆ ಹೋದವು ವನ್ಯ ಪ್ರಾಣಿಗಳು ಮಂಗಗಳೆಲ್ಲವ ಬಿಟ್ಟಿಲ್ಲಿ
ಕಂಗು ಪೇರಳೆ ಹಲಸು ಮಾವುಗಳು ತೋಟದ ತುಂಬಾ ಬೆಳೆದಿತ್ತು
ಗೊಂಚಲು ಗೊಂಚಲು ಎಳನೀರಿಂದ ತೆಂಗಿನ ಮರ ಕಂಗೊಳಿಸಿತ್ತು
ಹಸಿವನು ತಾಳದ ಮುದಿಕಪಿಯೊಂದಕೆ ಯೋಚನೆಯೊಂದು ಹೊಳೆದಿತ್ತು
ಬನ್ನಿರಿ ಎಲ್ಲರು ಮಾತನು ಕೇಳಿರಿ ಎನ್ನುತ ಬಳಗವ ಕರೆದಿತ್ತು
ನೋಡಿರಿ ತೋಟದಿ ಕಾಯಿಗಳಿಂದ ತೊನೆಯುತ್ತಿರುವ ತೆಂಗನ್ನು
ಎಲ್ಲರು ಮರವನು ಏರುತ ಕುಡಿಯುವ ಸಿಹಿ ಸಿಹಿ ತೆಂಗಿನ ನೀರನ್ನು
ನುಗ್ಗೆಯ ಸೊಪ್ಪು ಬಾಳೆಯ ಹಣ್ಣು ಕೊಕೋ ಪೇರಳೆ ಮೆಲ್ಲುವ ನಾವ್
ಹಲಸು ಮಾವುಗಳ ಸವಿಯುತ ಹಸಿವನು ನೀಗಿಸಿಕೊಳ್ಳುವ ಅನುದಿನವೂ
ಹಿರಿಕಪಿ ಮಾತನು ಕೇಳುತ ತೋಟಕೆ ಹಾರಿದವೆಲ್ಲಾ ಮಂಗಗಳು
ಏರುತ ಮರವನು ಕುಡಿದವು ಕೆಡೆದವು ಚೆಲ್ಲಾಡಿದವೆಳೆ ಕಾಯಿಗಳ
ಭಟ್ಟರ ತೋಟದಿ ಲೆಕ್ಕಕೆ ಇಂದಿಗೆ ತೆಂಗಿನ ಮರಗಳು ನೂರಾರು
ಒಂದೇ ಒಂದು ಕಾಯಿಯು ಇಲ್ಲ ನಿತ್ಯಕೆ ಮಾಡಲು ಸಾಂಬಾರು
ಎಲ್ಲೆಡೆ ಎದ್ದಿದೆ ಹಾಹಾಕಾರ ಕಪಿಗಳಿಗೇನು ಪರಿಹಾರ
ಕೃಷಿ ಉತ್ಪನ್ನ ಕಪಿ ಪಾಲಾದರೆ ನಮಗೇನುಳಿಯಿತು ಆಹಾರ
ಕಾಡನು ರಕ್ಷಿಸೆ ನಾಡುಳಿಯುವುದು ಎಂಬುದ ನಾವು ತಿಳಿದಿರಲು
ನೆಲೆಸುವುದೆಲ್ಲೆಡೆ ಸುಖ ಸಂಮೃದ್ಧಿ ನಮ್ಮಯ ಬದುಕಿಗೆ ಮರು ಅರಳು
ಡಾ| ಸುಬ್ಬಣ್ಣಯ್ಯ ಕೋಟಿಗದ್ದೆ
ಪ್ರಾಧ್ಯಾಪಕ
ಸೂಕ್ಷ್ಮಜೀವಶಾಸ್ತ್ರ ವಿಭಾಗ
ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
ಕುರುಂಜಿಬಾಗ್,ಸುಳ್ಳ್ಯ574327
No comments:
Post a Comment