ಎಸ್. ದಿವಾಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ.ಸಿ.ಎನ್.ಆರ್ ಅವರು ಲೇಖಕರ ‘ಹಾರಿಕೊಂಡು ಹೋದವನು (ಹಲವು ದೇಶಗಳ ಅತಿಸಣ್ಣ ಕತೆಗಳು) ಪುಸ್ತಕದಲ್ಲಿರುವ ಪಾಕಿಸ್ತಾನಿ ಲೇಖಕ ‘ಸಾದತ್ ಹಸನ್ ಮಂಟೊ’ ಬರೆದಿರುವ
ಅತಿಸಣ್ಣ ಕಥೆಯೊಂದನ್ನು ತೆಗೆದುಕೊಂಡು ವಿಶ್ಲೇಷಿಸಿದ, ವಿಮರ್ಶಿಸಿದ ರೀತಿ ಅದೆಷ್ಟು
ನನ್ನ ಕಾಡತೊಡಗಿತು ಎಂದರೆ ದಿನಕ್ಕೊಮ್ಮೆಯಾದರೂ ಆ ಕಥೆ ತೆರೆದು ನಾನು
ಓದುತ್ತಿರುತ್ತೇನೆ!! ಹಾಗೆ ಓದಿದಾಗೆಲ್ಲಾ, ಪ್ರತಿ ಸಲವೂ ನಾನಾ ರೀತಿಯ ಹೊಳಹುಗಳು, ಅತಿ
ಕಟು ವಾಸ್ತವಿಕತೆಯ, ಕರಾಳ ಸತ್ಯಗಳ ವಿರಾಟ್ ರೂಪದರ್ಶನ ನನ್ನೆದುರಿಗೆ
ತೆರೆದುಕೊಳ್ಳುತ್ತಾ ಹೋಗುತ್ತದೆ ಈ ಕಥೆ! ಆ ಕಥೆಯನ್ನು ನಿಮ್ಮೊಂದಿಗೆ
ಹಂಚಿಕೊಳ್ಳಬೇಕೆಂದೆನಿಸಿತು. ಅದು ಇಂತಿದೆ....
**********************************
ಮಿಷ್ಟೀಕು
ಹೊಟ್ಟೆಯನ್ನು ಬಗೆದು ಸೀಳಿದ ಚೂರಿ ಅದೇ ನೇರ ರೇಖೆಯಲ್ಲಿ ಕೆಳಗಿಳಿದು ಆ ಮನುಷ್ಯನ ಪೈಜಾಮದ ಲಾಡಿಯನ್ನು ಕತ್ತರಿಸಿ ಹಾಕಿತು.
ಚೂರಿ ಹಾಕಿದವನು ಒಂದು ಸಲ ಆ ಕಡೆ ನೋಡಿ ‘ಛೆ ಛೆ..... ಎಂಥಾ ಮಿಸ್ಟೀಕಾಗಿಹೋಯಿತು’ ಎಂದ ವಿಷಾದದಿಂದ.
****************************************
ಈ ಮೇಲಿನ ಪುಟ್ಟ ಎರಡೇ ಎರಡು ಸಾಲಿನ ಕಥೆಯೊಳಗೆ ಭಾರತ-ಪಾಕಿಸ್ತಾನದ ವಿಭಜನೆಯ ಆ ಕರಾಳ ದಿನಗಳ, ಅಮಾನುಷತೆಯ ಪರಾಕಷ್ಠೆಯ ಚಿತ್ರಣವನ್ನು ಹೇಗೆ ಕಾಣಬಹುದು... ತಣ್ಣನೆಯ ಕ್ರೌರ್ಯವನ್ನೂ ಕೇವಲ ‘ಮಿಷ್ಟೀಕೆಂದಷ್ಟೇ’ ಹೇಳಿ ನುಣಚಿಕೊಳ್ಳಬಹುದೆನ್ನುವುದರ ಚಿತ್ರಣ ತುಂಬಾ ಗಾಢವಾಗಿ ಮೂಡಿಬಂದಿದೆ ಎಂದೆನಿಸಿತು. ಕೇವಲ ಆ ಒಂದು ದಿನಗಳಷ್ಟೇ ಅಲ್ಲಾ.. ಎಲ್ಲಾ ರೀತಿಯ ಕ್ರೌರ್ಯಗಳಿಗೂ ಕನ್ನಡಿ ಹಿಡಿದು, ನಮ್ಮೊಳಗೆ ತಣ್ಣನೆಯ ಐಸಿನ ಚೂರಿಯನ್ನಿಳಿಸಿ ಕೊರೆದು ಹನಿ ರಕ್ತವನ್ನೂ ಹರಿಸಿದರೆ ನೋಯಿಸುವಂತಹ ಭಾವಸ್ಫುರಣಗೊಳಿಸುವ ಈ ಕಥೆ ತುಂಬಾ ಇಷ್ಟವಾಯಿತು. ಈ ಕಥೆಯನ್ನು ನೆನೆದಾಗೆಲ್ಲಾ ಹತ್ತು ಹಲವು ಪ್ರಶ್ನೆಗಳು ನನ್ನ ಕೊರೆಯುತ್ತಿರುತ್ತವೆ..
೧. ಮಿಸ್ಟೀಕು ಆಯಿತೆಂದು ಆ ಚೂರಿ ಇರಿದವನಿಗೆ ಅನಿಸಿದ್ದು ಯಾಕಾಗಿ? ಪೈಜಾಮವನ್ನಷ್ಟೇ ಸೀಳಬೇಕಾಗಿದ್ದ ಚೂರಿ ಹೊಟ್ಟೆಯನ್ನು ಸೀಳಿತಲ್ಲಾ ಎಂಬಾ ವಿಷಾದವಂತೂ ಇರಲಿಕ್ಕಿಲ್ಲವಲ್ಲಾ?! ಛೇ... ಕೇವಲಾ ಹೊಟ್ಟೆಯನ್ನು ಮಾತ್ರ ಸೀಳಿ.. ಇನ್ನೂ ಸೀಳಬೇಕಾಗಿದ್ದ ಭಾಗವನ್ನು ತಪ್ಪಿ, ಯಕಶ್ಚಿತ್ ಲಾಡಿಯನ್ನಷ್ಟೇ ಕತ್ತರಿಸಿಹಾಕಿತಲ್ಲಾ! ಅನ್ನುವ ವಿಷಾದವೇ ಹೆಚ್ಚಾಗಿ ಕಾಣುತ್ತಿದೆಯೇ?
೨. ಅಥವಾ ಇನ್ನೆಲ್ಲೋ ಇರಿಯಬೇಕಾಗಿದ್ದು, ಈ ರೀತಿ ಮತ್ತೆಲ್ಲೋ ಇರಿದು ಇರಿತವೇ ಪೋಲಾಯಿತೆನ್ನುವ ಚಡಪಡಿಕೆಯೇ?
೩. ಎಂಥಾ ಮಿಷ್ಟೀಕು?! ಯಾವುದು ಮಿಷ್ಟೀಕು? ಈ ಮಿಷ್ಟೀಕು ಎಂದೆನಿಸಿದ್ದೇ ಒಂದು ದೊಡ್ಡ ಮಿಷ್ಟೀಕೆ?
ಹೀಗೆ ಹತ್ತು ಹಲವು.. ಪ್ರಶ್ನೆಗಳೊಳಗೇ ಹಲವು ಪ್ರಶ್ನೆಗಳು ಹುಟ್ಟಿ ಕಥೆ ಓದಿದ್ದೇ ಮಿಷ್ಟೀಕೆ? ಎಂದೆನಿಸಲುತೊಡಗಿಬಿಟ್ಟಿದೆ ನನಗೆ. ಆದರೂ ಈ ‘ಮಿಷ್ಟೀಕು’ ದೂರವಾಗುತ್ತಿಲ್ಲ ಎಂಬುದು ಮಾತ್ರ ಸತ್ಯ
[ತೇಜಸ್ವಿನಿ ಹೆಗಡೆಯವರ Face Book ನಿಂದ ಆಯ್ಕೆ ಮಾಡಿದ ಲೇಖನ }

No comments:
Post a Comment