stat Counter



Sunday, June 1, 2014

ನಂದಿನಿ - ಪಾಳು ತೋಟದಲ್ಲಿ ಹೂಗಳು ಅರಳೋ ಹೊತ್ತು { ಜನಪದ ಕತೆ ]

ಮಹರಾಜ ಸತ್ತು ಯುವರಾಜ ಹುಟ್ಟಿ ಪಾಳು ತೋಟದಲ್ಲಿ ಹೂಗಳು ಅರಳೊ ಹೊತ್ತು ! ಅಂದ್ರೆ ಯಾವುದು? ಜನಪದರ ಕಥೆ (ಅಪ್ಪ ಹೇಳಿದ್ದು)

ಒಂದೂರಲ್ಲಿ ಒಬ್ಬ ರಾಜ ಇರ್ತಾನೆ. ಒಮ್ಮೆ ಅವನು ವಾಯು ವಿಹಾರಕ್ಕೆಂದು ಹೋಗುತ್ತಾನೆ , ಆಗ ಕುದುರೆ ಸವಾರಿ ಮಾಡುತ್ತಿದ್ದ ಒಬ್ಬ ಸುಂದರ ತರುಣಿಯನ್ನು ನೋಡುತ್ತಾನೆ ಅವಳ ಸೌಂದರ್ಯ ನೋಡಿ ಬೆರಗಾಗುತ್ತಾನೆ. ಇದನ್ನು ಗಮನಿಸಿದ ಮಂತ್ರಿಗಳು ಆಕೆ ಪಕ್ಕದ ರಾಜ್ಯದ ಯುವರಾಣಿ ಎಂದು ಮಾಹಿತಿ ನೀಡುತ್ತಾರೆ. ಆಗ ರಾಜ ಆಹಾ ಎಂಥ ಸುಂದರಿ ಆ ಯುವರಾಣೀ!! ಅವರನ್ನು ಒಮ್ಮೆ ಭೇಟಿಯಾಗಲೇ ಬೇಕಲ್ಲಾ? ಮಂತ್ರಿಗಳೆ" "ಇಂದೇ ಈ ವಿಷಯವನ್ನು ಯುವರಾಣಿಯವರಿಗೆ ಮುಟ್ಟಿ"ಸಿ ಎಂದು ಆಜ್ಞಾಪಿಸುತ್ತಾನೆ, ಆಗ ಮಂತ್ರಿ ಅನುಮತಿಯನ್ನು ಕೋರಿ ಒಂದು ಪತ್ರ ಬರೆದು ರಾಯಭಾರಿಯ ಮೂಲಕ ಕಳುಹಿಸಿಕೊಡುತ್ತಾನೆ. ಅದನ್ನು ಓದಿದ ರಾಜಕುಮಾರಿ, ಆ ರಾಯಭಾರಿಯನ್ನು ಕುರಿತು, " ರಾಯಭಾರಿಗಳೇ, ಮಹಾರಾಜ ಸತ್ತು, ಯುವರಾಜ ಹುಟ್ಟಿ ಪಾಳಾಗಿರೊ ತೋಟದಲ್ಲಿ ಹೂವುಗಳು ಅರಳೋ ಕಾಲದಲ್ಲಿ ನನ್ನನ್ನು ಬೇಟಿಮಾಡಬೇಕಾಗಿ ನಿಮ್ಮ ಯುವರಾಜನಿಗೆ ತಿಳಿಸಿ" ಎಂದು ಒಗಟಿನ ಉತ್ತರ ನೀಡುತ್ತಾಳೆ. ಯುವರಾಜನಿಗೆ ಇದು ಅರ್ಥವಾಗುವುದಿಲ್ಲ, ಆಸ್ಥಾನಕವಿಗಳು, ಮಂತ್ರಿಗಳು ಯಾರಿಗು ಉತ್ತರ ತಿಳಿಯುವುದಿಲ್ಲ. ಇದು ರಾಜ್ಯದ ಮರ್ಯಾದೆ ಪ್ರಶ್ನೆಯಾಗಿದ್ದರಿಂದ ಒಗಟು ಬಿಡಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ರಾಜ್ಯದ ತುಂಬ ಡಂಗೂರ ಸಾರಲಾಗುತ್ತದೆ.
ಆಗ ಊರಿನ ಸಾಮಾನ್ಯ ಹಳ್ಳಿಗ ಆ ಒಗಟು ಬಿಡಿಸುವುದಾಗಿ ಬರುತ್ತಾನೆ. "ಪ್ರಭುಗಳೆ; , ಮಹರಾಜ ಎಂದರೆ ಲೋಕಕ್ಕೆ ಬೆಳಕು ಕೊಡುವ, ಸಂಜೆಯಾದಾಗ ಮರೆಯಾಗುವ ಸೂರ್ಯ. ಯುವರಾಜ ಅಂದರೆ ಸೂರ್ಯ ಮುಳುಗಿದ ನಂತರ ಹುಟ್ಟುವ ಚಂದ್ರ. ಚಂದ್ರ ಹುಟ್ಟಿದಾಗ ಆ ಆಕಾಶವೆಂಬ ಪಾಳುತೋಟದಲ್ಲಿ ಅರಳುವ ಗಗನಕುಸುಮಗಳೇ ಆ ತಾರಕ್ಕಿಗಳು (ನಕ್ಷತ್ರ) ಆ ಹೊತ್ತು ರಾತ್ರಿ ಮಹಾಪ್ರಭು ಎಂದು ಬಿಡಿಸಿ ಹೇಳುತ್ತಾನೆ. ಆಗ ರಾಜ ಆಹಾ ಆಹಾ!! ಪಾಳು ತೋಟದಲ್ಲಿ ಹೂ ಅರಳೋ ಕಾಲ!! ಅಂದ್ರೆ ರಾತ್ರಿ! ನೋಡಿದಿರಾ ಮಂತ್ರಿಗಳೇ ಯುವರಾಣಿಯ ಒಗಟು ಮಾತನ್ನು ನಮ್ಮ ರಾಜ್ಯದ ಒಬ್ಬ ಸಾಮಾನ್ಯ ಪ್ರಜೆ ಬಿಡಿಸುತ್ತಾನೆ ಎಂದರೆ ಇಂಥಾ ಬುದ್ದಿವಂತ ಪ್ರಜೆಗಳನ್ನು ಹೊಂದಿರುವ ನಾನೇ ಧನ್ಯ! ಎಂದು ಸಾವಿರ ವರಹಗಳನ್ನು ಕಾಣಿಕೆಯಾಗಿ ಕೊಟ್ಟು ಗೌರವಿಸುತ್ತಾನೆ.
ಅಲ್ಲಿಗೆ ಕಥೆ ಮುಗಿಯಿತು

[  ನಂದಿನಿ ಅವರ  face book  ನಿಂದ ಆಯ್ಕೆ ಮಾಡಿದ ಕತೆ }

No comments:

Post a Comment