stat Counter



Saturday, April 2, 2016

ಲೀಲಾ ಬಾಯಿ ಕಾಮತರ ಕತೆಗಳು - ಮುರಳೀಧರ ಉಪಾಧ್ಯ ಹಿರಿಯಡಕ



ಲೀಲಾ ಬಾಯಿ ಕಾಮತರ ಕತೆಗಳು - ಮುರಳೀಧರ ಉಪಾಧ್ಯ ಹಿರಿಯಡಕ


ಸರಸ್ವತಿ ಬಾಯಿ ರಾಜವಾಡೆ, ಲೀಲಾ ಬಾ  ಕಾಮತ್  ಮತ್ತು  ಜೈನ ಮಹಿಳೆ ರಾಧಮ್ಮ ಇವರು ರಾಷ್ಟ್ರಕವಿ ಗೋವಿಂದ ಪೈಗಳಿಂದ ಮುನ್ನುಡಿ ರೂಪದ ಪ್ರೋತ್ಸಾಹ ಪಡೆದ  ಕನ್ನಡ ಲೇಖಕಿಯರು. ಲೀಲಾ ಬಾ ಕಾಮತ್ ರ ಹಾರಿಹೋದ ಹಕ್ಕಿ ಗೋವಿಂದ ಪೈಗಳ ಮುನ್ನುಡಿಯೊಂದಿಗೆ ೧೯೫೦ರಲ್ಲಿ ಪ್ರಕಟವಾಯಿತು. ೫೦ರ್ ದಶಕದಲ್ಲೆ ಪ್ರಕಟವಾದ ಅವರ ಇನ್ನೊಂದು ಕಥಾ ಸಂಕಲನ-’ನಮ್ಮೂರ ಶಿವಪಾರ್ವತಿ’. ಈ ಎರಡೂ ಕಥಾಸಂಕಲನಗಳ ಸಂಯುಕ್ತ ಪುನರ್ ಮುದ್ರಣ ಇತ್ತೀಚೆಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಪ್ರಕಟವಾಗಿದೆ. ಲೀಲಾ   ಬಾಯಿ  ಕಾಮತರ ಕಥಾಸಂಕಲನಗಳನ್ನು  ನಲುವತ್ತೈದು ವರ್ಷಗಳ ಅನಂತರ ಪುನರ್ ಮುದ್ರಣಕ್ಕಾಗಿ ಆಯ್ಕೆ ಮಾಡಿದ್ದು ಪ್ರಶಂಸನೀಯ. ಆದರೆ ಮುದ್ರಣ ಇತಿಹಾಸ ಮತ್ತು ಲೇಖಕಿಯ  ಪರಿಚಯ ನೀಡದೆ ಇದನ್ನು ಪ್ರಕಟಿಸಿರುವ ಸಂಸ್ಕೃತಿ ಇಲಾಖೆಯ ಬೇಕಾಬಿಟ್ಟಿ ಕೆಲಸ ಆಕ್ಷೇಪಾರ್ಹ.
ಶ್ರೀನಿವಾಸ ಡಾಂಗೆ-ಕಾಶೀಬಾಯಿ ದಂಪತಿಗಳ  ಮಗಳಾಗಿ ೧೯೧೧ ರಲ್ಲಿ ಮಂಗಳೂರಿನಲ್ಲಿ   ಜನಿಸಿದ ಲೀಲಾ ಬ್  .....  ಕಾಮತರು ಪ್ರಾಥಮಿಕ ಶಿಕ್ಷಣವನ್ನಷ್ಟೆ  ಪಡೆದರು. ಸ್ವಾಧ್ಯಾಯದಲ್ಲಿ ಹಿಂದಿ, ಮರಾಠಿ..., ಇಂಗ್ಲಿಷ್ ಭಾಷೆಗಳನ್ನು ಕಲಿತ ಅವರು ನೂರಾರು ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅವರ ಕತೆಗಳು, ಭಾಷಾಂತರಗಳು,  ಲೇಖನಗಳು, ಸ್ವದೇಶಾ ಭಿಮಾನಿ’, ’ಪ್ರಭಾತ’, ’ರಾಷ್ಟ್ರ ಬಂಧು, ’ಪ್ರಜಾಮತ, ಕತೆಗಾರ, ನವಯುಗ, ರಾಯಭಾರಿ, ಜೀವನ", ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಸವತಿಯ ಸೋಲು, ಅಶೋಕ ಚಕ್ರವರ್ತಿ, ರೋಗಿಯ ಕೋಣೆ ಯಲ್ಲಿ ನ್ಯಾಯಮೂರ್ತಿ -ಇವು ಸಾರಸ್ವತದಲ್ಲಿ ಪ್ರಕವಾಗಿದ್ದ ಅವರ ಕೊಂಕಣಿ ನಾಟಕಗಳು. ಅವರ ’ಕಾಶೀ ಯಾತ್ರೆ’ ಎಂಬ ಪ್ರವಾಸ  ಕಥನ ಉದಯವಾಣಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.  ಲೀಲಾ ಬಾ  ಕಾಮತರು ತನ್ನ ಹನ್ನೊಂದನೆಯ  ವಯಸ್ಸಿನಲ್ಲಿ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿ ಶ್ರೀ ವಿ. ಆರ್. ಕಾಮತರನ್ನು ಮದುವೆಯಾಗಿ, ಉಡುಪಿಯಲ್ಲಿ ನೆಲೆಸಿದರು. ಡಾ| ಮೀರಾ ಬಾಳಿಗ, ಮುಂಬಯಿಯಲ್ಲಿರುವ ಡಾ| ಸುಂದರರಾಮ  ಕಾಮತ್, ಅಮೆರಿಕದಲ್ಲಿರುವ ಡಾ| ಗೋಪಿನಾಥ ಕಾಮತ್ ಮತ್ತು ರತ್ನಾಕರ ಕಾಮತ್ ಇವರು ಕಾಮತ್  ದಂಪತಿಗಳ ಮಕ್ಕಳು. ಲೀಲಾ ಬಾ// ಕಾಮತರು ಉಡುಪಿ ನಗರಸಭೆಯ ಉಪಾಧ್ಯಕ್ಷೆಯಾಗಿ ಮತ್ತು ಮದ್ರಾಸ್ ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ ತನ್ನ ಇಳಿವಯಸ್ಸಿನಲ್ಲಿರುವ ಲೀಲಾ  .... ಕಾಮತರು ತನ್ನ ಬರವಣಿಗೆಯ ದಿನಗಳ ಕಹಿ-ಸಿಹಿ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ.

 ಲೀಲಾ ಬಾಯಿ    ಕಾಮತರ ಕತೆಗಳಲ್ಲಿ  ಸ್ವಾತಂತ್ರ್ಯ ಪೂರ್ವದ   ಗಾಧೀ ಯುಗದಲ್ಲಿ               ನಿಧಾನವಾಗಿ ಬದಲಾಗುತ್ತಿದ್ದ ನಮ್ಮ ಸಮಾಜದ ಸ್ಥೂಲ ಚಿತ್ರಣವನ್ನು ಕಾಣುತ್ತೇವೆ. ’ವಿಧವೆಯ ಬಾಳು’, ’ಆರಭಾಗ್ಯ ಕತೆಗಳಲ್ಲಿ ಅವರು ಹೆಣ್ಣೆನ ಅಸಹಾಯಕತೆಯನ್ನು ಚಿತ್ರಿಸಿದ್ದಾರೆ. ”ವಿಧವೆಯ ಬಾಳು’ ಕತೆಯ ವಿಧವೆ ಗುಲಾಬಿ ಊರಿನ್ ಪುಂಡನೊಬ್ಬ ನೊಬ್ಬನ      ......
 ಬಲಿಯಾಗುತ್ತಾಳೇ. ಆಕೆಯ ಕೊನೆಯ ವಾಕ್ಯಗಳಿವು. "ನಿಜ್ವಾಗಿಯೂ ಗುಲಾಬಿಯ್ ಮಾತುಗ್ಳು ವಿಚಾರಪೂರ್ಣವಾಗಿವೆ. ಅವಳೊಬ್ಬ್ ಹಿಂದೂ ಸ್ತ್ರೀ. ಒಂದು  ಸಲ ಮಾನಭಂಗವಾಯಿತೆಂದರೆ ನಾಯಿಮುಟ್ಟಿದ ಪಾತ್ರೆಯಂತೆ ಅವಳು ಭ್ರಷ್ಟಳೇ  ಸರಿ. ತಪ್ಪು ಬೇಕಾದರೆ ಪುರುಷನದೇ ಇರಲಿ. ಆದರೆ ಅದರ   ಪರಿಣಾಮವನ್ನು ಅನುಭವಿಸ ಬೇಕಾದುದು
ಸ್ತ್ರೀ. ಪುರುಷನು ತಾವ್ರೆಯ ಎಲೆಯಂತೆ ನಿರ್ಲಿಪ್ತನು| ’ ಆರಭಾಗ್ಯ ಕತೆಯಲ್ಲಿ   ವೈದ್ಯಕೀಯ  ವಿದ್ಯಾರ್ಥಿ ಶ್ರೀನಿವಾಸ್ ತನ್ನ  ಸೋಮಾರಿತದಿಂದಾಗಿ ಪರೀಕ್ಷೆ ಯಲ್ಲಿ ಅನುತ್ತೀರ್ಣನಾಗುತ್ತಾನೆ. ಅವನ ತಂದೆ ಸುಬ್ಬರಾಯರು ತನ್ನ ಸೊಸೆಯ ಮೇಲೆ ಆರೋಪ ಹೊರಿಸುತ್ತಾರೆ. "ಇವಳು  ಮನೆಯಲ್ಲಿ  ಕಾಲಿಟ್ಟಂದಿನಿಂದ , ಬೃಹ ಸ್ಪತಿಯಂತೆ ವಿದ್ಯೆಯಲ್ಲಿ ಚುರುಕಾಗಿದ್ದ ನಮ್ಮ ಶೀನುವಿಗೆ ಶನಿ ತಾಗಿದಂತಾಯಿತು.
 ’ಮಾತೃ ಹೃದಯ’ ಕತೆಯ್ ಅಶೋಕನಿಗೆ ತನ್ನ ಪತ್ನಿ ವಿವಾಹ ಪೂರ್ವದಲ್ಲಿ ಹೆತ್ತ ಮಗುವಿನ ಸಂಗತಿ ತಿಳಿಯುತ್ತದೆ. ಆದರೂ ಈ ದಾಂಪತ್ಯ ಒಡೆಯುವುದಿಲ್ಲ ’ಮಾತೃ ಹೃದಯ’ ಮತ್ತು ’ಸುಶಿಕ್ಷಿತ್ ಹೆಣ್ಣು’ ಕತೆಗಳು ಬದಲಾವಣಿಯ   ಹಂತದಲ್ಲಿದ್ದ ಸುಶಿಕ್ಷಿತ ಮಹಿಳೆಯರ ಜೀವನವನ್ನು ಚಿತ್ರಿಸುತ್ತವೆ.
’ಹಾರಿಹೋದ ಹಕ್ಕಿ ಮತ್ತು ’ನಮ್ಮೂರ ಶಿವ ಪಾರ್ವತಿ; ಕತೆಗಳು ಗಂಡು-ಹೆಣ್ಣಿನ ಸಂಬಂಧದ  ಸಂಕೀರ್ಣತೆಯನ್ನು ನಿರೂಪಿಸುತ್ತವೆ. ’ಹಾರಿಹೋದ  ಹಕ್ಕಿ’ ಕತೆಯಲ್ಲಿ ಕುಂಟ ಸದಾಶಿವನನ್ನು ಮದುವೆಯಾದ ಚೆಲುವೆ ಉಮಾಸುಂದ್ರಿಯ ಕುರಿತು ನಿರೂಪಕನಿಗೆ ಪೂರ್ವಗ್ರಹವಿದೆ. ಅವಳು ವೇಶ್ಯೆಯ ಕುಟುಂಬದವಳಾಗಿರುವುದು ಇದಕ್ಕೆ ಕಾರಣ. ತನ್ನ ಗಂಡನ ಅನಾರೋಗ್ಯದಿಂದ   ಕಂಗಾಲಾದ ಉಮಾಸುಂದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಮ್ಮೂರ ಶಿವಪಾರ್ವತಿ’ ಕತೆಯಲ್ಲಿ ಕುರುಡ ಶಿವು ಮತ್ತು ಮೂಕಿ ಪಾತು ಎಂಬ್ ಭಿಕ್ಷುಕ ದಂಪತಿಗಳ ಆನೋನ್ಯ ದಾಂಪತ್ಯದ ಚಿತ್ರಣವಿದೆ. ’ಹೆಡ್ ಟೀಚರ್’ ಶಿಕ್ಷಕರ ಸಣ್ಣತನದಿಂದಾಗುವ್ ದುರಂತವನ್ನು’, ಸೋದರ ಮಾವ’ ಜಾತಿ ವ್ಯವಸ್ಥೆಯ    ಕರಾಳ ಮುಖವನ್ನು ಬಣ್ಣೆಸುತ್ತವೆ. ’ರೂಂ. ನಂ.೭’ ಮತ್ತು ’ ತೂಗಾಡುವ ಅಸ್ಥಿಪಂಜರ’ ತ್ಯಾಗ ಮತ್ತು ಆದರ್ಶಗಳತ್ತ ತುವಿಯುವ  ಕತೆಗಳು. "ಪ್ಲೇಗ್ ಇಲಿ" ಒಂದು ಹಾಸ್ಯಕತೆ.

ಲೀಲಾ ಬಾ ಕಾಮತರು   ನಗರ ಜೀವನದ, ಮಧ್ಯಮ ವರ್ಗದ  ತನ್ನ  ಸೀಮಿತ ಜೀವನಾನುಭವದಲ್ಲಿ ಕೆಲವು ಒಳ್ಳೆಯ ಕತೆಗಳನ್ನು ಬರೆದಿದ್ದಾರೆ. ತನ್ನ ಕುಟುಂಬದ ಕ್ರೇಂದ್ರಿತ ಚಿಂತನೆಯ ಚೌಕಟ್ಟಿನಲ್ಲಿ ಮಹಿಳೆಯ ಶೋಷಣಿಯ ಹಲವು ಮುಖಗಳನ್ನು   ಅವರು  ಗುರುತಿಸಿದ್ದಾರೆ. ಪಂಜೆ, ಎಂ. ಎನ್. ಕಾಮತ್, ಕಡೆಂಗೋಡ್ಲು, ಕೊರಡ್ಕಲ್ ಮತ್ತು ಸೇಡಿಯಾಪು ಕೃಷ್ಣ ಭಟ್ಟರು ಈ ಶತಮಾನದ ಪೂರ್ವಾರ್ಧದ ದಕ್ಷಿಣ ಕನ್ನಡದಲ್ಲಿ ಸಣ್ಣಕತೆಯನ್ನು ಬೆಳೆಸಿದರು.. ಸರಸ್ವತಿ ಬಾಯಿ ಕಾಮತರಿಂದಾಗಿ ಪುರುಷಪ್ರಧಾನವಾಗಿದ್ದ ಸಣ್ಣ ಕತೆಯ   ಕ್ಷೇತ್ರದಲ್ಲಿ  ಮಹಿಳಾಧ್ವನಿ ಕೇಳಿಸ ತೊಡಗಿತು.
    -----       ಮುರಳೀಧರ ಉಪಾಧ್ಯ ಹಿರಿಯಡಕ
ನಮ್ಮೂರ ಶಿವ ಪಾರ್ವತಿ
ಹಾಗೂ ಹಾರಿ ಹೋದ ಹಕ್ಕಿ
ಲೇ: ಲೀಲಾ.. ಕಾಮತ್
ಪ್ರ: ಕರ್ನಾಟಕ ಸ ರಕಾರ ಕನ್ನಡ ಮತ್ತು
 ಸಂಸ್ಕೃತಿ ನಿರ್ದೇಶನಾಲಯ,
ನಂ.೧೪/೩ಎ, ನೃಪತುಂಗ ರಸ್ತೆ,
ಬೆಂಗಳೂರು-೨
ದ್ವಿತೀಯ ಮುದ್ರಣ-೧೯೯೪


No comments:

Post a Comment