stat Counter



Monday, April 4, 2016

ಬನ್ನಂಜೆ ಕಂಡ ರಾಮಾಯಣ

ಬನ್ನಂಜೆ ಕಂಡ ರಾಮಾಯಣ
ವಾಲ್ಮಿಕಿ ರಾಮಾಯಣದ ಭಾಗಗಳು ಕಾಂಡಗಳು; ಬಾಲ, ಅಯೋಧ್ಯಾ, ಅರಣ್ಯ, ಕಿಷ್ಕಂಧಾ, ಸುಂದರ, ಯುದ್ಧ, ಉತ್ತರ ಎಂಬ ಏಳು ಕಾಂಡಗಳಿರುವ ಕಾವ್ಯವೃಕ ್ಷರಾಮಾಯಣ. ಈ ಮರ ಸ್ಥಾವರವಲ್ಲ, ಜಂಗಮ. ಇದು ನಿರಂತರ ಬೆಳೆಯುತ್ತಿರುವ, ಏಷ್ಯಾಖಂಡದಲ್ಲೆಲ್ಲ ನಡೆದಾಡುತ್ತಿರುವ ಮರ, ಅಮರ. ಹಿಂದೀಯ ತುಲಸೀದಾಸರಿಂದ, ತುಳುವಿನ ಮಂದಾರ ಕೇಶವಭಟ್ಟರ ವರೆಗೆ ನೂರಾರು ಕವಿಗಳು ರಾಮಾಯಣ ಪರಂಪರೆಯನ್ನು ಬೆಳೆಸಿದ್ದಾರೆ. 'ತಿಮತಿಣೆಯಲಿ ರಘವರರಚರಿತೆಯಲಿ ಕಾಲಿಡಲು ತೆರಪಿಲ್ಲ ಎನ್ನುತ್ತಾನೆ ಕುಮಾರವ್ಯಾಸ.
ರಾಮಾಯಣವನ್ನು ಕುರಿತು ನೂರಾರು ವ್ಯಾಖ್ಯಾನಗಳು, ವಿಮಶರ್ೆಗಳು ಬಂದಿವೆ. ಈ ವಿಭಿನ್ನ, ಬಹುಮುಖಿ ವಿಮಶರ್ೆಗಳಿಗೆ ರಾಮಾಯಣದ ಸ್ವೋಪಜ್ಞತೆಯೇ ಕಾರಣ. ಕೆಲವರು, ವಾಲ್ಮೀಕಿ ತನ್ನ ಕೆಲವು ಪಾತ್ರಗಳ ಕುರಿತು ಅನಾದರ ತೋರಿಸಿದ್ದಾನೆ ಎಂದಿದ್ದಾರೆ. ಇನ್ನು ಕೆಲವರು ವಾಲ್ಮೀಕಿ ಎಲ್ಲಿ ತೂಕಡಿಸಿದ್ದಾನೆ ಎಂದು ಕಾದು ನೋಡಿದ್ದಾರೆ. ಮತ್ತೆ ಕೆಲವರು ವಾಲ್ಮೀಕಿಯ ಪ್ರಕೃತಿವರ್ಣನೆ, ಮನುಷ್ಯ ಸಂಬಂಧಗಳ ಸೂಕ್ಷ್ಮ ಚಿತ್ರಣಗಳನ್ನು ಕಂಡು ಬೆರಗಾಗಿದ್ದಾರೆ.
ವಾಲ್ಮೀಕಿರಾಮಾಯಣ ವಿಮಶರ್ೆಯ ಸಮೂಹ ಶೋಧದಲ್ಲಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಅಳಿಲ ಸೇವೆ-'ವಾಲ್ಮೀಕಿ ಕಂಡ ರಾಮಾಯಣ' ಅಳಿಲ ಸೇವೆ, ಯಾಕೆಂದರೆ ಬನ್ನಂಜೆಯವರ ಈ ಪುಸ್ತಕದಲ್ಲಿ ಬಾಲಕಾಂಡದ ವಿಮಶರ್ೆ ಮಾತ್ರ ಇದೆ. ಇದರ ಮೊದಲ ಮುದ್ರಣ ಪ್ರಕಟವಾದದದು 1986 ಹನ್ನೆರಡು ವರ್ಷಗಳಾದರೂ ಬನ್ನಂಜೆಯವರು ಮುಂದಿನ ಭಾಗಗಳನ್ನು ಬರೆದಿಲ್ಲ. 'ರಾಮನಾಮದ ಅಮಲು ಇಳಿದಿಲ್ಲ ಸೋದರ' ಎನ್ನುತ್ತಾರೆ ಕಬೀರದಾಸರು. ಬನ್ನಂಜೆಯವರಿಗೆ ಬಿಡುವಾಗುವುದು ಯಾವಾಗ, ಅವರಿಗೆ ರಾಮಾಯಣ ವ್ಯಾಖ್ಯಾನ ಪೂರೈಸುವ ಅಮಲೇರುವುದು ಯಾವಾಗ ಎಂದು ನನ್ನಂಥ, ಅವರ ನೂರಾರು ಮಿತ್ರರು, ಅಭಿಮಾನಿಗಳು ಕಾಯುತ್ತಿದ್ದಾರೆ.
ವಾಲ್ಮೀಕಿಗೆ ಅನುಷ್ಟುಪ್ ಛಂದಸ್ಸು ಎಷ್ಟು ಇಷ್ಟವೋ ಮೌನವೂ ಅಷ್ಟೇ ಇಷ್ಟ. ವಾಲ್ಮೀಕಿಯ ಮೌನಕಾಂಡ, ಧ್ವನಿಕಾಂಡಗಳನ್ನು ಗುರುತಿಸಿರುವುದು ಬನ್ನಂಜೆಯವರ ಅಗ್ಗಳಿಕೆ. ರಾಮಾಯಣದ ವ್ಯಾಖ್ಯಾನಗಳ ಭಾರದಿಂದ ತಿಣುಕುವ ಸಹೃದಯರಿಗೆ ಈ ಪುಸ್ತಕ ಓದುವಾಗ ದಂಡಕಾರಣ್ಯದಲಿ ್ಲ'ಸಚರ್್ಲೈಟ್' ಸಿಕ್ಕಿದಂತಾಗುತ್ತದೆ. ಬನ್ನಂಜೆಯವರಲ್ಲಿ ವ್ಯುತ್ಪತ್ತಿ ಹಾಗೂ ಭಾವಯತ್ರಿ ಪ್ರತಿಭೆಗಳು ಕ್ರೌಂಚಮಿಥುನದಂತಿವೆ.
ಬಾಲಕಾಂಡದಲ್ಲಿರುವ ಅನೇಕ ಅಸ್ಪಷ್ಟ ಭಾಗಗಳನ್ನು ಬನ್ನಂಜೆಯವರು ಸ್ಪಷ್ಟಗೊಳಿಸಿದ್ದಾರೆ. ವಾಲ್ಮೀಕಿ. ಕೈಕೇಯಿ ಹಾಗೂ ಸುಮಿತ್ರೆ ಇಬ್ಬರನ್ನೂ 'ಮಧ್ಯಮಾ; ಎಂದು ಯಾಕೆ ಕರೆಯುತ್ತಾನೆ?
ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದರಲ್ಲಿ ವಿರೋಧವೇನೂಇಲ್ಲ. ಮಧ್ಯಮಾ ಎನ್ನುವುದಕ್ಕೆ ಎರಡುಅರ್ಥವಿದೆ. ನಡುವಿನವಳು ಎನ್ನುವುದು ಒಂದು ಅರ್ಥ. ಪರಿಭೇದಮಾಡದೆ ಎಲ್ಲರನ್ನೂ ಸಮಾನವಾಗಿ ನೋಡುವವಳು ಎನ್ನುವುದು ಇನ್ನೊಂದು ಅರ್ಥ. ವಿವಾದದಲ್ಲಿ 'ಮಧ್ಯಸ್ಥ'ಎನ್ನುವಂತೆ ನಡುವಿನವಳು ಎನ್ನುವ ಅರ್ಥದಲ್ಲಿ ಕೇಕೇಯಿ ಮಧ್ಯ ಮಾಂಭಾ. ಸವತಿಯ ಮಕ್ಕಳು ಎಂದು ತಾರತಮ್ಯ ಮಾಡದೆ ಎಲ್ಲ ಮಕ್ಕಳನ್ನೂ ಸಮಾನವಾಗಿ ಪ್ರೀತಿಸುವವಳು ಎನ್ನುವ ಅರ್ಥದಲ್ಲಿ ಸುಮಿತ್ರೆ ಮಧ್ಯಮಾಂಭಾ ಮತ್ತು ರಾಜನ ಮಧ್ಯಮ ಪತ್ನಿ. ಈಗ ಯಾವ ವಿರೋಧವೂಇಲ್ಲ ಎನ್ನುತ್ತಾರೆ ಬನ್ನಂಜೆ.
ರಾಮನ ಅನಂತರ ಮೊದಲು ಹುಟ್ಟಿದವ ಭರತನಲ್ಲ ಲಕ್ಷ್ಮಣ ಎಂಬುದನ್ನು, ಲಕ್ಷ್ಮಣ-ಶತ್ರುಘ್ನರು ಅವಳಿ-ಜವಳಿಗಳಲ್ಲ ಎಂಬುದನ್ನು ರಾಮಾಯಣದ ಆಂತರಿಕ ಸಾಕ್ಷ್ಯಗಳಿಂದ ಬನ್ನಂಜೆಯವರು ಸ್ಪಷ್ಟ ಪಡಿಸಿದ್ದಾರೆ. ದಶರಥ ತನ್ನ ಮೂವರು ಪತ್ನಿನಿಯರಿಗೆ ನಾಲ್ಕು ಪಾಲು ಮಾಡಿ ಪಾಯಸ ಹಂಚಿದ್ದನ್ನು ತಿಳಿಸುವ ವಾಲ್ಮಿಕಿಯ ಶ್ಲೋಕಗಳು ಧ್ವನಿಪೂರ್ಣವಾಗಿವೆ. ದಶರಥನ ಭಯ, ಮುಂದಾಲೋಚನೆಗಳು ಈ ಶ್ಲೋಕಗಳಲ್ಲಿ ಅಡಗಿವೆ.  ಪಂಪ ಭಾರತದ 'ನೆತ್ತಮನಾಡಿ ಭಾನುಮತಿ ಸೋಲ್ತೊಡೆ' ಎಂಬ ಪದ್ಯದಂಥ ಈ ಧ್ವನಿಪೂರ್ಣ ಶ್ಲೋಕಗಳ ಅರ್ಥವನ್ನು ಅನಾವರಣ ಮಾಡುತ್ತ ಬನ್ನಂಜೆಯವರು, ವಾಲ್ಮೀಕಿ ತನ್ನ ಮೌನದಲ್ಲಿ ಎಷ್ಟು ಅರ್ಥವನ್ನು ತುಂಬಬಲ್ಲ ಎನ್ನುವುದಕ್ಕೆ ಈ ಪ್ರಕರಣ ಒಂದು ಶೇಷ್ಠ ಉದಾಹರಣೆ ಎಂದು ವಿವರಿಸುತ್ತಾರೆ. ಅಹಲ್ಯೋದ್ಧಾರ ಹಾಗೂ ರಾಮ-ಪರಶುರಾಮರ ಭೇಟಿಯ ಪ್ರಸಂಗಗಳ ವಿವರಣೆಯಲ್ಲಿ ಮೌನದ ಸೆರಗಿನಲಿ ಒರಗಿದ ಮಾತಿನ ಹಿಂದಿನ ಅಂತ:ಕರಣದ ಚೆಲುವನ್ನು ಬನ್ನಂಜೆಯವರು ಕಾಣಿಸುತ್ತಾರೆ.

-2-
ಉತ್ಸವಮೂತರ್ಿಯ ಜಾತ್ರೆಯಲ್ಲಿ ಮೈಮರೆತವರಿಗ ೆಗರ್ಭಗುಡಿಯ ಮೂಲಬಿಂಬದ ಚೆಲುವು ಕಾಣಿಸುವುದಿಲ್ಲ. ಬನ್ನಂಜೆಯವರು ತಾವೂ ಕುತೂಹಲಿಗಳನ್ನು ರಾಮಾಯಣದ ಗರ್ಭಗುಡಿಗೆ ಕರೆದೊಯ್ದು, ವ್ಯಾಖ್ಯಾನಗಳೆಂಬ ಆಭರಣಗಳನ್ನೆಲ್ಲ ತೆಗೆದಿಟ್ಟು, ನಂದಾದೀಪಕ್ಕೆ ಎಣ್ಣೆ ಹೊಯ್ದು, ಕಾವ್ಯ ಶಿಲ್ಪದ ಲಾವಣ್ಯವನ್ನು ತೋರಿಸುತ್ತಾರೆ.
ಬನ್ನಂಜೆಯವರ ರಾಮಾಯಣ ವಿಮಶರ್ೆ, 'ಅರ್ಧನೇಮಿ'ಯಾಗದೆ, ಆದಷ್ಟು ಬೇಗನೆ ಪೂರ್ಣಗೊಂಡು, ರಾಮಾಯಣವನ್ನು ಕುರಿತ ಹೊಸ ಸಂವಾದಗಳನ್ನು ಆರಂಭಿಸಲಿ ಎಂದು ಹಾರೈಸುತ್ತೇನೆ.


'ಸಖೀಗೀತ'ಮುರಳೀಧರ ಉಪಾಧ್ಯ ಹಿರಿಯಡಕ
ದೊಡ್ಡನಗುಡ್ಡೆ,
ಉಡುಪಿ-576102
ನವೆಂಬರ-10,1998.


No comments:

Post a Comment