stat Counter



Tuesday, July 31, 2018

ಜಿ. ಎನ್. ದೇವಿ - - ಎಚ್ಚರ, ಅಧಿಕಾರಿಗಳು ಮನಸ್ಸು ಮಾಡಿದರೆ ನಿಮ್ಮ ಭಾಷೆ ಕಾಣೆ ಆಗಬಹುದು!

ಮಕ್ಕಳ ಸಾಹಿತ್ಯಕ್ಕೆ ಪ್ರಾಶಸ್ತ್ಯ ಸಿಗಲಿ

ವಿಶಿಷ್ಟ ಕಂಠಸಿರಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಗದಗದ ಕುರಿಗಾಹಿ ನಿಂಗಪ್ಪ

ಹೋರಾಟಗಾರ್ತಿಯರ ಸಮುದಾಯ ಪ್ರಜ್ಞೆ: 33 ಕೆರೆಗಳು ಭರ್ತಿ!

Monday, July 30, 2018

ಸೌದಿಯಲ್ಲಿ ನಿಗೂಢ ಸಾವನಪ್ಪಿದ ಹೆಝಲ್ ಜ್ಯೋತ್ಸ್ನಾ

ಪ್ರಿಯಾಂಕ - - ಇರಬಹುದೆ ಒಬ್ಬರ ಹಂಗಿಲ್ಲದೆ { ಕವನ } 'Erabahude Obbara Hangillade' by Priyanka | Kannada Poetry | YQ - Jaguli...

ಸುಂದರ ಸಾರುಕ್ಕೈ - Sunder Sarukkai - God cannot be privatised

ಸುರಪುರದ ಇತಿಹಾಸ - Surpur History Created by Kumar G Nayak

ಕದಂಬ ಮರ - TREE TALE | KADAMBA | ENGLISH | Indian Tree

ಸಂತಾಲೀ ನಾಟಕ - All India Santali Writer's Meet [Santali Play] at 6 pm (30-3-2017), New ...

Sunday, July 29, 2018

ಗುರುಪ್ರಸಾದ್ ಕಾಗಿನೆಲೆ ಅವರ ‘ಹಿಜಾಬ್‌’ ಕೃತಿಗೆ ಡಾ.ಎಚ್‌.ಶಾಂತಾರಾಮ್‌ ಪ್ರಶಸ್ತಿ -2018

ಭಾಷಾ ಇತಿಹಾಸದ ಅಧ್ಯಯನ ಆಗಲಿ

ಭೂಮಿ ಗೀತ - धरती की कविता : Earth Poem : Tritha Sinha in Hindi Studio with Manish Gupta

ಡಾ / ಶಿವರುದ್ರಪ್ಪ ಕಲ್ಲೋಳಿಕರ್ --- ಹೊಲಗೇರಿಯ ರಾಜಕುಮಾರ { ಕಾದಂಬರಿ }

No automatic alt text available.

ಕಾಡುವ ಕಿ. ರಂ--7-8-2018

Image may contain: 1 person, text

ರಂಗ ಶಿಕ್ಷಣ ಪದವೀಧರರ ಸಮಾವೇಶ -2- 8-2018

No automatic alt text available.

ವೈದೇಹಿ --- ಓ ಗಂಡಸರೇ, ನೀವು ಎಂದು ಪುರುಷರಾಗುವಿರಿ?

ಟಿ.ಎಸ್. ಗೊರವರ -- ಕಾರ್ಲ್ ಮಾರ್ಕ್ಸ್ ಕವಿತೆಗಳು T.S.Goravar @ Marx200 in Dharwad

ಸಮ್ಮೇಳನ ಅಧ್ಯಕ್ಷರ ಬೇಡಿಕೆಗಳೇನು: ಬಂಜಗೆರೆ ಜಯಪ್ರಕಾಶ.!

Saturday, July 28, 2018

ಕನ್ನಡ ಹಾಸ್ಯ --- ಎಚ್ ಎಮ್ ಎಮ್ ಎಮ್ ಎಮ್ When girls say hmmmm | Pavan Venugopal | Kannada standup comedy | Lolbagh

ಕನ್ನಡದ ಹಾಸ್ಯಕ್ಕೆ ಜಾಗವೆಲ್ಲಿ?

ಜಿ. ಎನ್. ರಂಗನಾಥ ರಾವ್- ಕಾವ್ಯದಿಂದ ದೃಶ್ಯ ಕಾವ್ಯಕ್ಕೆ ಎಚ್ಚೆಸ್ವಿ ಲಂಘನ

ಅರೆಬಾಸೆ ಲಿಪಿ , ವ್ಯಾಕರಣ ಮತ್ತು ಭಾಷಾ ಸಬಲೀಕರಣ

Image may contain: 1 person, text

ಮಕರಂದ ದೇಶಪಾಂಡೆ - Makrand Deshpande ‘From chaos I have reached clarity’

ಸುಹೈಲ್ ಕಕೋರ್ವಿ - ಮಿರ್ಜಾ ಘಾಲಿಬ್ ಅವರ ಕಾವ್ಯ A daunting exercise -

ನವನಿಧಿ ಸಾಹಿತ್ಯಮಾಲೆ , ಮಂಗಳೂರು _ ಆಜ್ಜಿ ಕತೆ { 1954 }

No automatic alt text available.

Friday, July 27, 2018

ಡಾ / ಎಸ್. ಎಸ್. ಗುಂಡೂರ - ಆತ್ಮವಿಲ್ಲದ ದೇಹವಾಗುತ್ತಿದೆಯೇ ಇಂಗ್ಲಿಷ್‌ ಕಲಿಕೆ?

29ಕ್ಕೆ ಶಿವಮೊಗ್ಗ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ

ಪೂರ್ಣ ಚಂದ್ರ ಗ್ರಹಣ 27-7-2018 Blood Moon 2018 : World looks to the skies for rare lunar eclipse

ಮೇರಿ ಜೋಸೆಫ್ -- ಸರ್ವಾಧಿಕಾರದ ವಿರುದ್ಧ ರಷ್ಯಾ ಯುವತಿಯರ ಯುದ್ಧ

ವೈದೇಹಿ ಭಾಗ್ಯಾದ ಬಳೆಗಾರ ಬಳೆ ತೊಡಿಸಿದ ಕೈಗಳು

ಪತ್ರಕರ್ತೆ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಬೆರಳು ತೋರುತ್ತಿರುವುದು ಯಾರೆಡೆಗೆ?

ಬೆಳಸಲಿಗೆ ಗಣಪತಿ ಹೆಗಡೆ ಅವರ ಯಕ್ಷಗಾನ ಕೃತಿಗಳು

No automatic alt text available.

ಜಿ. ಎನ್. ಆಶೋಕ ವರ್ಧನ - - ಜಿ. ಆರ್. ಉಪಾಧ್ಯಾಯರ - { ವಿ } ಚಿತ್ರ ಜೀವನ

ಸಂಗ್ರಾಹ್ಯ ಪುಸ್ತಕ - (ವಿ)ಚಿತ್ರ ಜೀವನ, जी.Are. ಉಪಾಧ್ಯಾಯ
ನಾಲ್ಕೈದು ವಾರಗಳ ಹಿಂದೆ ಸಾಹಿತ್ಯಪ್ರೇಮಿ ಗೆಳೆಯ ಹಿರಿಯಡಕ ಮುರಳೀಧರ ಉಪಾಧ್ಯರು ಚರವಾಣಿಸಿ ಮೇಲ್ಕಾಣಿಸಿದ ವಿಚಿತ್ರ ಪುಸ್ತಕ ಮತ್ತು ಲೇಖಕರನ್ನು ಎರಡು ಮಾತಿನಲ್ಲಿ ಪರಿಚಯಿಸಿದರು. ಮುಂದುವರಿದು, "ಉಪಾಧ್ಯಾಯರಿಗೆ ತನ್ನ ಪುಸ್ತಕವನ್ನು ಅಂತರ್ಜಾಲಕ್ಕೂ ಏರಿಸಿ, ಸಾರ್ವಜನಿಕರಿಗೆ ಚಿರಕಾಲ ಮುಕ್ತವಾಗುವಂತೆಯೂ ಮಾಡಬೇಕೆಂಬ ಬಯಕೆಯಿದೆ. ಏನು ಮಾಡಬಹುದು?" ನಾನು ಸಹಜವಾಗಿ "ಪಠ್ಯದ ಬೆರಳಚ್ಚು ಲೇಖಕರು ಕೊಡುವುದಿದ್ದರೆ, ನನ್ನ ಜಾಲತಾಣದ (www.athreebook.com) ಪುಸ್ತಕ ವಿಭಾಗದಲ್ಲಿ ಈಗಾಗಲೇ ಇರುವ ಹದಿನಾರು ವಿದ್ಯುನ್ಮಾನ ಪುಸ್ತಕಗಳೊಡನೆ ಇದನ್ನೂ ಸೇರಿಸಬಲ್ಲೆ. ಅಲ್ಲಿಗೆ ಹದಿನೇಳು ಪುಸ್ತಕಗಳು ಉಚಿತವಾಗಿ ಸಾರ್ವಜನಿಕರಿಗೆ ಸಿಗುವಂತಾಗುತ್ತದೆ" ಎಂದೆ. ಮರುದಿನವೇ ಜೀಯಾರ್ ಉಪಾಧ್ಯಾಯರೊಡನೇ ದೂರವಾಣಿ ಮಾತುಕತೆಯಾಯ್ತು. ಬೆರಳಚ್ಚಿನ ಸಮಸ್ಯೆಯೂ ಬಾರದಂತೆ, ಅವರ ಬಳಿ ಇಡೀ ಪುಸ್ತಕದ ಪೀಡಿಯೆಫ್ (ಸರಳವಾಗಿ ಹೇಳುವುದಿದ್ದರೆ ಶುದ್ಧ ಛಾಯಾನಕಲು) ಕಡತ ಇತ್ತು. ಅದನ್ನು ಒಂದು ಕ್ಷಣದ ಮಿಂಚಂಚೆಯಲ್ಲಿ ನನಗೆ ಕಳಿಸಿದರು. ನನ್ನ ಜಾಲತಾಣ ಹಾಗೂ ಮುಂದುವರಿದ ಎಲ್ಲ ಗಣಕ ಚಟುವಟಿಕೆಗಳ ನಿರ್ವಾಹಕ ಅಭಯ, ಅಷ್ಟೇ ಚುರುಕಿನಲ್ಲಿ ಅದನ್ನು ಅಂತರ್ಜಾಲಕ್ಕೇರಿಸಿ, ನನ್ನ ಜಾಲತಾಣದಲ್ಲಿ ನೆಲೆಗೊಳಿಸಿಬಿಟ್ಟ. ಮುರಳೀಧರ ಉಪಾಧ್ಯರು ಹೇಳಿದ ಎರಡು ಮಾತಿನ ಪರಿಚಯದಿಂದಾಚೆ ಲೇಖಕ, ಕೃತಿಯನ್ನು ನಾನು ನೋಡದೇ ನನ್ನ ಪ್ರಕಟಣ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದೆ!
ಜಿಯಾರ್ ಉಪಾಧ್ಯಾಯರು ಬಲು ದಾಕ್ಷಿಣ್ಯದವರಿರಬೇಕು. ನಮ್ಮೊಳಗಿನ ಚರವಾಣಿ ಮಾತುಕತೆಯಲ್ಲಿ ಮತ್ತೆ ಮತ್ತೆ "ನಾನೆಷ್ಟು (ಖರ್ಚು) ಕೊಡಬೇಕು" ಎಂದೇ ವಿಚಾರಿಸಿದ್ದರು. ನಾನೂ ಅಷ್ಟೇ ಖಡಕ್ಕಾಗಿ "ಏನೂ ಇಲ್ಲ" ಎಂದಿದ್ದೆ. ಆದರೂ "ಕನಿಷ್ಠ ಮುದ್ರಿತ ಪುಸ್ತಕದ ಒಂದು ಪ್ರತಿಯಾದರೂ ನಿಮ್ಮಲ್ಲಿರಲಿ" ಎಂದು ಒಂದು ಪುಸ್ತಕವನ್ನು ಉಚಿತವಾಗಿ ಅಂಚೆಯಲ್ಲಿ ಕಳಿಸಿಯೇಬಿಟ್ಟರು. ಹಾಗೆ ಬಂದ ಪುಸ್ತಕದ ಮುಖಪುಟ ನೋಡಿದ್ದೇ "ಅರೆ, ಇವರು ನನ್ನಂಗಡಿಗೆ ಬರುತ್ತಿದ್ದರು...." ಎಂಬಲ್ಲಿಂದ ತೊಡಗಿ, ನನ್ನಂಗಡಿ ಎದುರಿನ ಸರಕಾರೀ ಶಿಕ್ಷಕರ ಶಿಕ್ಷಣ ಸಂಸ್ಥೆಯಲ್ಲೇ ಹದಿಮೂರು ವರ್ಷ ಸೇವೆ ಬೇರೆ ಸಲ್ಲಿಸಿದವರು ಎಂದೆಲ್ಲ ತಿಳಿಯುತ್ತಿದ್ದಂತೆ ಸಂತೋಷವೇನೋ ಆಯ್ತು. ಆದರೆ ತನ್ನ ಹೆಸರು ಮುದ್ರಿಸುವಲ್ಲಿ ಮೂರು ಭಾಷೆಗಳ ಮಿಶ್ರಣ, ರಟ್ಟು ತಿರುಗಿಸಿದ್ದೇ ದೇವದೇವಿಯರೂ ಅಸಂಖ್ಯ ಕೌಟುಂಬಿಕ ಚಿತ್ರಗಳೂ ವಂಶವೃಕ್ಷಗಳೂ ಕಾಣಿಸಿತು. ಇಡಿಯ ಪುಸ್ತಕದಲ್ಲಿ ಲೆಕ್ಕವಿಲ್ಲದಷ್ಟು ಚಿಕಣಿ ಚಿತ್ರಗಳು, ಕೊನೆಯ ಸುಮಾರು ಇಪ್ಪತ್ತೈದು ಪುಟಗಳಂತೂ ಪೂರ್ಣ ವರ್ಣಮಯ ಆಲ್ಬಂನಂತೇ ಇರುವುದು ನೋಡಿದ ಮೇಲೆ ಮನಸ್ಸು ಸ್ವಲ್ಪ ಮುದುಡಿತು. ಎಲ್ಲೋ ನಗಣ್ಯ ಹಿನ್ನೆಲೆಯಿಂದ ಮೇಲೆ ಬಂದ ವ್ಯಕ್ತಿ ಆತ್ಮಸಂತೋಷಕ್ಕೆ ಪ್ರಕಟಿಸಿಕೊಂಡ ಸಾಹಿತ್ಯ, ಕಿರಿದಕ್ಕೆ ಹಿಡಿದ ಭೂತಗನ್ನಡಿ, ಮದುವೆ ವಿಡಿಯೋದ ಹಾಗೇ ಇರಬಹುದು ಎಂದೆಲ್ಲ ಯೋಚಿಸುತ್ತ ಅರೆಮನಸ್ಸಿನಲ್ಲಿ ಪುಟ ಮಗುಚಿದೆ. ಒಂದು ಲೆಕ್ಕದಲ್ಲಿ ನಗಣ್ಯ ಹಿನ್ನೆಲೆ ಹೌದು. ಆರ್ಥಿಕವಾಗಿ ಬಡಬ್ರಾಹ್ಮಣ ಕುಟುಂಬ, ವೈಯಕ್ತಿಕವಾಗಿ (ಕಾರಣ ಏನೇ ಇರಲಿ) ಎಸ್ಸೆಸ್ಸೆಲ್ಸಿಯಿಂದ ಮೇಲೆ ಬಿದ್ದದ್ದೇ ದೊಡ್ಡದು, ಹೆಚ್ಚುಕಮ್ಮಿ ಮನೆಯಿಂದ ಓಡಿಹೋಗಿ ಧಾರವಾಡದಲ್ಲಿ ಹೋಟೆಲ್ ಮಾಣಿ.....ಇತ್ಯಾದಿ. ಆದರೆ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ, ಪುಟ್ಟಪುಟ್ಟ ಟಿಪ್ಪಣಿಗಳಂಥ ಕಥನಗಳಲ್ಲಿ ಬಿಡಿಸಿಕೊಳ್ಳುತ್ತಾ ಹೋದ ಉಪಾಧ್ಯಾಯರ ಜೀವನಾನುಭವ ನನ್ನ ಪೂರ್ವಾಗ್ರಹವನ್ನು ಬಹಳ ಬೇಗನೇ ಹುಸಿಗೊಳಿಸಿಬಿಟ್ಟಿತು.
ಹುಟ್ಟಾ ಸಂಗೀತಗಾರ, ವಿಜ್ಞಾನಿ, ಕ್ರೀಡಾಳು ಎಂದೆಲ್ಲಾ ಹೇಳುತ್ತಾರಲ್ಲ ಹಾಗೇ - ಹುಟ್ಟಾ ಚಿತ್ರಕಾರರು ಗೋಪಾಲಕೃಷ್ಣ ರಾಮ ಉಪಾಧ್ಯಾಯ. ಆದರೆ ಯಾವುದೇ ದೊಡ್ಡ ಆಯಾಮದ ಹಪಹಪಿಯಿಲ್ಲದೇ ಸರಳ, ಸಾಂಪ್ರದಾಯಿಕ ಚಿತ್ರ ಬಿಡಿಸುವ ಒಲವನ್ನು ಜೀವನಶೈಲಿಗೆ ಹೊಂದಿಸಿಕೊಂಡು, (‘ಡ್ರೋಯಿಂಗ್ ಮಾಸ್ಟರ್’) ವೃತ್ತಿಯಾಗಿ ರೂಢಿಸಿಕೊಂಡು, ನಿವೃತ್ತಿಯಲ್ಲೂ ಸಮಾಜಸೇವೆಯಾಗಿ ಉಳಿಸಿಕೊಂಡೇ ಆರ್ಥಿಕ ಯಶಸ್ಸು, ಕೌಟುಂಬಿಕ ಸಂತೋಷಗಳನ್ನು ಗಳಿಸಿದವರು ಈ ಜೀಯಾರ್ ಉಪಾಧ್ಯಾಯ. ಮೇಲೆ ನಾನು ಹೇಳಿದ ವಿಶೇಷಣಗಳೆಲ್ಲವನ್ನು ೨೮೦ಕ್ಕೂ ಮಿಕ್ಕಿದ ಪುಟಗಳಲ್ಲಿ, ನೂರಾರು ರೇಖಾ, ವರ್ಣ, ಛಾಯಾ ಚಿತ್ರಗಳ ಸಾಂಗತ್ಯದಲ್ಲಿ ನಿರ್ಮಮ ಆತ್ಮಕಥಾನಕದ ದಾರದಲ್ಲಿ ಸುಂದರವಾಗಿ ಪ್ರಸ್ತುತಪಡಿಸುತ್ತದೆ - (ವಿ)ಚಿತ್ರ ಜೀವನ. ಆತ್ಮಕಥೆಯಾದ್ದರಿಂದ ಅದು ನುಡಿಚಿತ್ರವೇ ಇರಲಿ, ನಿಜಚಿತ್ರವೇ ಇರಲಿ, ನಿಸ್ಸಂದೇಹವಾಗಿ ಕೌಟುಂಬಿಕ ಅಂಶಗಳು ಇದ್ದೇ ಇವೆ. ಆದರೆ ನುಡಿಚಿತ್ರಗಳಲ್ಲಿ ಎಪ್ಪತ್ನಾಲ್ಕಕ್ಕೂ ಮಿಕ್ಕು ವರ್ಷಗಳ ಈ ಜೀವನಯಾನದಲ್ಲಿ ಸಾಂಪ್ರದಾಯಿಕ ಕಲಿಕೆಯಲ್ಲಿ ದಂಡಭಯದಿಂದ ಕುಗ್ಗಿದ ಎಳೆಯ, ಮನಸ್ಸಿನ ಉಮ್ಮಳಕ್ಕೆ ಚಿತ್ರರಚನೆಯ ಮರಸು ಬಯಸಿ ದೇಶಾಂತರ ಓಡಿ ದಕ್ಕಿಸಿಕೊಂಡ ಸಾಹಸ, ನೆಲೆಕೊಟ್ಟವರಿಗೆ ಹೊರೆಯಾಗದ ಸ್ವಾಭಿಮಾನ, ಹಾಗೆಂದು ತನ್ನ ಮಿತಿಯಲ್ಲಿ ಇತರರಿಗೆ ಒದಗುವಲ್ಲಿನ ಔದಾರ್ಯ, ವೃತ್ತಿಯಲ್ಲಿ ತರತಮ ಕಾಣದ ಶ್ರಮ, ವಿಶ್ವಾಸಕ್ಕೆ ಎರಡು ಬಗೆಯದ ಪ್ರಾಮಾಣಿಕತೆ, ಗೆಲುವಿನಂತೆ ಸೋಲನ್ನೂ ತೆರೆದಿಡುವ ನಿಸ್ಸಂಕೋಚ ಸಮಭಾವ, ಇದ್ದುದರಲ್ಲಿ ಸಮೃದ್ಧವಾಗಿರುವ ತೃಪ್ತಿ....... ಪಟ್ಟಿ ಮಾಡಿದಷ್ಟೂ ಮುಗಿಯದ ಕುಸುರಿ ಕೆಲಸವನ್ನು ನೀವು ಓದಿಯೇ ಸವಿಯಬೇಕು. ಎಲ್ಲೂ ವಾಚಾಳಿಯಲ್ಲ, ಹಾಗೆಂದು ಮುಚ್ಚುಮರೆಯೂ ಇಲ್ಲದ ಟಿಪ್ಪಣಿಗಳ ಓಟದಲ್ಲಿ ಓದು ನಮ್ಮನ್ನು ಹಲವು ಮಜಲುಗಳಲ್ಲಿ ಸೆಳೆಯುತ್ತದೆ. ಉಪಾಧ್ಯಾಯರು ದಿನಚರಿ ಬರೆಯುವ ಹವ್ಯಾಸಿಗಳೋ ಅಥವಾ ಚಿತ್ರಕಾರನ ಮನೋಭಿತ್ತಿ ಅಷ್ಟೂ ವಿವರಗಳನ್ನು ಹಿಡಿದಿಟ್ಟುಕೊಂಡಿತ್ತೋ ಎಂದು ಕೆಲವೊಮ್ಮೆ ಆಶ್ಚರ್ಯಪಡುವಷ್ಟು ಸೂಕ್ಷ್ಮಗಳನ್ನು ಗೆಲುವಿನಲ್ಲಿ ಹಮ್ಮು, ಸೋಲಿನಲ್ಲಿ ಸಂಕೋಚದ ರಂಗುಗಳಿಲ್ಲದೆ ಪ್ರಸ್ತುತಪಡಿಸುತ್ತಾರೆ. ಒಂದು ಸಣ್ಣ ಕೊರತೆ - ಇದನ್ನು ಪ್ರಕಟಣಪೂರ್ವ ಅನುಭವೀ ಗ್ರಂಥಕರ್ತರಿಂದ ತುಸು ಪರಿಷ್ಕರಣೆಗೊಳಪಡಿಸಿದಂತಿಲ್ಲ. ಇದು ಕೆಲವು ಪ್ರಸಂಗಗಳು ಮರುಕಳಿಸುವುದನ್ನು ತಪ್ಪಿಸುತ್ತಿತ್ತು, ಕೆಲವೆಡೆಗಳ ಪ್ರಯೋಗ ಶುದ್ಧಿಯನ್ನು ಹೆಚ್ಚಿಸುತ್ತಿತ್ತು. ಮುದ್ರಣ ಕಾಲದಲ್ಲಿ ಅಕ್ಷರ ಸ್ಖಾಲಿತ್ಯ (ಮುದ್ರಾರಾಕ್ಷಸ) ನಿವಾರಿಸುವಲ್ಲೂ ಭಾವನಾತ್ಮಕ ಓದುಗನಿಗಿಂತ ವೃತ್ತಿಪರ ‘ಛಿದ್ರಾನ್ವೇಷಿ’ ಹೆಚ್ಚು ಉಪಯೋಗಕ್ಕೊದಗುತ್ತಾನೆ. ಪುಸ್ತಕದ ಗುಣಗಳ ಕುರಿತು ಇನ್ನೂ ಹೆಚ್ಚು ಹೇಳಿ ನಿಮ್ಮ ಸ್ವಾರಸ್ಯಗೆಡಿಸುವುದಿಲ್ಲ. ಬದಲಿಗೆ........
ಶಿಕ್ಷಕರ ಶಿಕ್ಷಕನಾಗಿದ್ದ ಬಲದಲ್ಲಿ ಉಪಾಧ್ಯಾಯರು ಬರಹದಲ್ಲಿ ಅಸಂಖ್ಯ ಸುಭಾಷಿತಗಳನ್ನು ಉದ್ಧರಿಸುತ್ತಾರೆ, ಉಪದೇಶಗಳನ್ನೂ ಮಾಡುತ್ತಾರೆ. ಅವೆಲ್ಲವನ್ನೂ ಮೀರಿ ಗ್ರಹಿಸಬಲ್ಲ ಸಹೃದಯಿಗಳಿಗೆ ಅವರ ಜೀವನಶೈಲಿಯೇ ಒಂದು ಆದರ್ಶ ಎಂದರೆ ತಪ್ಪಾಗದು. ಅದಲ್ಲದೆ ಪುಸ್ತಕದೊಳಗಿನ ಅಸಂಖ್ಯ ಜನಪದ ಮತ್ತು ಸಾಂಪ್ರದಾಯಿಕ ಸಲಕರಣೆ ಮತ್ತು ಚಟುವಟಿಕೆಗಳ ಚಿತ್ರಗಳು ಪಲ್ಲಟಿಸುವ ಕಾಲಮಾನದಲ್ಲಿ ದಾಖಲೀಕರಣ ಮತ್ತು ಪುನರುತ್ಥಾನಕ್ಕೆ ಮುಖ್ಯ ಆಕರದ ಆವಶ್ಯಕತೆಯನ್ನು ಪೂರೈಸುತ್ತದೆ. (ವಿ)ಚಿತ್ರ ಜೀವನವನ್ನು ಉಪಾಧ್ಯಾಯರು ಕಳೆದ ವರ್ಷವಷ್ಟೇ ಸ್ವಂತ ಹೆಸರು ವಿಳಾಸದಲ್ಲಿ ಪ್ರಕಟಿಸಿದ್ದಾರೆ. ಆದರೆ ಸಾರ್ವಜನಿಕರ ಅನುಕೂಲಕ್ಕೋಸ್ಕರ ಮಂಗಳೂರು, ಪುತ್ತೂರು ಹಾಗೂ ಉಡುಪಿಯ ಖ್ಯಾತ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುವಂತೆ ನೋಡಿಕೊಂಡಿದ್ದಾರೆ. ಇದರ ಘನ ಮಹತ್ತಿಗೆ ಮುದ್ರಿತ ಬೆಲೆ ರೂಪಾಯಿ ಮುನ್ನೂರು ತುಂಬ ತುಂಬಾ ಕಡಿಮೆಯೇ ಸರಿ. ಅವರು ಮುದ್ರಿಸಿರುವ ಕೆಲವೇ ಪ್ರತಿಗಳು ಮುಗಿಯುವ ಮುನ್ನ ಅವಸರಿಸಿ ಕೊಂಡುಕೊಳ್ಳಿ. ಏನಲ್ಲದಿದ್ದರೂ........
ಜೀಯಾರ್ ಉಪಾಧ್ಯಾಯರು ಹೇಳಿಕೇಳಿ ಹಳೆಗಾಲದ ಉಪಾಧ್ಯಾಯರೇ! ಇವರಿಗೆ ತನಗೆ ತಿಳಿದೆಲ್ಲವನ್ನೂ ಬಯಸಿ ಬಂದವರಿಗೆ ಮುಕ್ತವಾಗಿ ಕೊಟ್ಟೇ ಗೊತ್ತು. ಸಹಜವಾಗಿ ತಾನು ಮುದ್ರಿಸಿಟ್ಟುಕೊಂಡ ಪುಸ್ತಕಗಳ ಬಗ್ಗೆ ಚಿಂತೆ ಹಚ್ಚಿಕೊಳ್ಳದೇ, ಕಾಲಧರ್ಮಕ್ಕೆ ಒಗ್ಗುವಂತೆ ಈ ಎಲ್ಲ ಮಾಹಿತಿ ಅಂತರ್ಜಾಲದಲ್ಲೂ ಲಭ್ಯವಿರಬೇಕೆಂದು ಬಯಸಿ ನನ್ನಲ್ಲಿಗೆ ಮುಟ್ಟಿಸಿದರು. ಇಂದು ಅದು ನನ್ನ ಜಾಲತಾಣ - www.athreebook.com ಇದರ ‘ಪುಸ್ತಕ ವಿಭಾಗ’ದಲ್ಲಿ ಹದಿನೇಳನೇ ವಿ-ಪುಸ್ತಕವಾಗಿ ಸೇರ್ಪಡೆಗೊಂಡಿದೆ. ನನ್ನ ಇತರ ಪುಸ್ತಕಗಳಂತೆ ಇದನ್ನೂ ಆಸಕ್ತರು ಮುಕ್ತವಾಗಿ (ಪಾವತಿ, ಅನುಮತಿಗಳ ವಿನಾ) ಅಂತರ್ಜಾಲದಲ್ಲಿ ಓದಬಹುದು, ತಂತಮ್ಮ ವಿದ್ಯುನ್ಮಾನ ಸಲಕರಣೆಗಳಿಗೆ ಇಳಿಸಿಕೊಂಡು ಸ್ವಾಂತ ಸುಖಾಯ (ವಾಣಿಜ್ಯ ಅಲ್ಲ) ಧಾರಾಳ ಬಳಸಬಹುದು. ಸದ್ಯ ಯಾವುದಕ್ಕೂ (ವಿ)ಚಿತ್ರ ಜೀವನದ ಪ್ರಾಥಮಿಕ ನೋಟಕ್ಕಾದರೂ ಈ ಸೇತಿನ ಮೇಲೆ ಚಿಟಿಕೆ ಹೊಡೆಯಿರಿ.
Comments
Muralidhar N Prabhu ಸರ್ ಇವರು ನಮ್ಮ ಹೈಸ್ಕೂಲ್ ನ ಡ್ರಾಯಿಂಗ್ ಮೇಸ್ಟ್ರು. ಸಾರ್. ನನ್ನಂಥವನಿಗೂ ಡ್ರಾಯಿಂಗ್ ಕಲಿಸುವ ಕ

ಕೇರಳ ವಿಧಾನಸಭೆಯಲ್ಲಿ ಪ್ರಥಮ ಬಾರಿ ಕನ್ನಡದ ಕಹಳೆ ಮೊಳಗಿಸಿದ್ದ ಚೆರ್ಕಳಂ ಅಬ್ದುಲ್ಲಾ

Roopa Hassan Manada Maatu | ರೂಪ ಹಾಸನ ಮನದ ಮಾತು

‘ತ್ರಿ ಈಡಿಯಟ್ಸ್‌’ನ ಫುನ್ಸುಕ್ ವಾಂಗ್ಡುಗೆ ಮ್ಯಾಗ್ಸಸೆ ಪುರಸ್ಕಾರ

ಪಾಕ್ ಸಾರ್ವತ್ರಿಕ ಚುನಾವಣೆ: ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಅತಿ ದೊಡ್ಡ ಪಕ್ಷ

ಚಂದ್ರಗ್ರಹಣ: ಮೂಢನಂಬಿಕೆ ಬಿಡಿ..ಖಗೋಳ ವಿಸ್ಮಯ ಆನಂದಿಸಿ...

Thursday, July 26, 2018

ಮಧುಬನಿ ಚಿತ್ರಕಲೆಯಲ್ಲಿ ರಾಮ , ಸೀತೆ , ಲಕ್ಷ್ಮಣ madhubani painting-lord ram along with lakshman and maa sita

ಸುಜಾತಾ ಯು ಶೆಟ್ಟಿ - ಕಾನನದ ಹೂ { ಕವನ ಸಂಕಲನ }

No automatic alt text available.
sujata u shetty

ಪ್ರಸನ್ನ--ರಾಮಾಯಣ , ರಾಮರಾಜ್ಯ , ಗ್ರಾಮರಾಜ್ಯ

ಸಾಹಿತಿ ಶಿವರಾಮ ಕಾಡನಕುಪ್ಪೆ ನಿಧನ -26- 7-2018

ಶಶಿ ತರೂರ್ ಚಿಂತನೆ ಮತ್ತು ಬಹುತ್ವ ಭಾರತ

ಕಡೆಗೂ ರಾಜಕೀಯವಾಗಿ ಗೆದ್ದ ಕ್ರಿಕೆಟ್ ವಿಶ್ವಕಪ್ ವಿಜೇತ ಇಮ್ರಾನ್ ಖಾನ್!

ಸ್ಟೇಟ್‌ಮೆಂಟ್‌ | ಭಾರತದ ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ಶಿಕ್ಷಿತರಾಗುತ್ತಿದ್ದರೂ ಉದ...

Tuesday, July 24, 2018

ನೀರಿನಲ್ಲಿ ಮುಳುಗುತ್ತಿರುವವರ ಪಾಲಿಗೆ ಸಂಜೀವಿನಿ ಆಗಲಿದೆ ಈ ಪುಟಾಣಿ ರೋಬೊ

ರಘುನಾಥ . ಚ. ಹ - ಗುರುಪ್ರಸಾದ್ ಕಂಟಲಗೆರೆ ಅವರ " ಗೋವಿನ ಹಾಡು " - ಕಥೆಗಳ ಹೊಸ ಜಾಡು

'ದೀಪಾವಳಿ ವಿಶೇಷಾಂಕ': ಕಥೆ, ಕವನ ಹಾಗೂ ಮಕ್ಕಳ ವರ್ಣಚಿತ್ರ ಸ್ಪರ್ಧೆಗೆ ಆಹ್ವಾನ

ಲಕ್ಷ್ಮೀಶ ತೋಳ್ಪಾಡಿ-ಬೇಂದ್ರೆ " ಕಾವ್ಯ ಚಾರಿತ್ರ್ಯ ಒಂದೇ ಸಾಲದೇ ? "

ಎಂ. ವ್ಯಾಸರ ಕೃತಿಗಳ ಕುರಿತು ಕಿ.ರಂ ಉಪನ್ಯಾಸ | Ki. Ram Nagaraj Lectureon M. Vy...

:ವಿಜಯಶಂಕರ ಕಾಲಂ --|ಅಕ್ಷರ-ರಂಗಭೂಮಿಗಳ ಅನುಸಂಧಾನ ಪ್ರಸಾದ್‌ ರಕ್ಷಿದಿ -

ಉತ್ತರಕ್ಕೆ ಮಾದರಿಯಾದ ದಕ್ಷಿಣ

Monday, July 23, 2018

ಎಚ್. ಎಸ್. ವೆಂಕಟೇಶಮೂರ್ತಿ - ಎಮ್. ಎನ್ . ವ್ಯಾಸ ರಾವ್ ನೆನಪು Memories, like the fragrance of a flower -

ಗಿರಿಜಕ್ಕನ ಬರಹಗಳು ಅಲಕ್ಷಿತರ ಪ್ರತಿಧ್ವನಿ

ರೇಖಾ ಬನ್ನಾಡಿ - ಕಾರಂತ ದುಡಿಮೆ ಪ್ರಪಂಚ

Image may contain: 1 person, text

ಕೆಎಸ್‌ಎನ್ ಸಾಹಿತ್ಯದಿಂದ ಮನಸ್ಸಿಗೆ ಚೈತನ್ಯ

Sunday, July 22, 2018

ಯುವ ಲೇಖಕರ ಗುರುತಿಸುವುದು ಅಗತ್ಯ

ಕಾವ್ಯದ ಬಗ್ಗೆ ಪೂರ್ವ ಗ್ರಹಿಕೆ ಅಗತ್ಯ

ಕೇರಳದಲ್ಲಿ ಕಾದಂಬರಿ - Threatened by Hindutva groups, Kerala writer S Hareesh withdraws novel

Interaction with Kathrin Binder | ಕತ್ರೀನ್ ಬೈಂದರ್ ಅವರೊಂದಿಗೆ ಮಾತುಕತೆ

ರಾಮಾಯಣ ಮಾಸದ ಕಾರ್ಯಕ್ರಮಗಳಿಗೆ ಬೆಂಬಲ ನೀಡಿ ಅಚ್ಚರಿಗೊಳಿಸಿದ ಸಿಪಿಐಎಂ

Demonstration by Sanjeeva Suvarna | ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಪ್ರ...

ಪ್ರಸನ್ನ { ಸಂದರ್ಶನ } - Prasanna Heggodu - 27th August 2017 | ಸುದ್ದಿ ಟಿವಿ

Saturday, July 21, 2018

ರೂಪ ಹಾಸನ -ಕೈ ಚಾಚುತ್ತಿವೆ ಕಂದಮ್ಮಗಳು

ಕೈ ಚಾಚುತ್ತಿವೆ ಕಂದಮ್ಮಗಳು

-ರೂಪ ಹಾಸನ

- ಅಭಿರುಚಿ ಪ್ರಕಾಶನ , ನಂ 386 , 14ನೆಯ ಮುಖ್ಯ ರಸ್ತೆ , 3ನೆಯ ಅಡ್ಡ ರಸ್ತೆ ,

ಸರಸ್ವತಿಪುರಮ್ , ಮೈಸೂರು -570009

 kai  Chachuttive Kandammagalu - witten by

Rupa Hasana [ email-rupahassan@gmail.com}

Published by- abhiruchi Prakashana ,386 ,14th Main , 3rd cross , Sarasvathipura ,Mysuru -9 First Impression- 2017 , Pages- 247 , Price- 225 Size-1/8th Demy

No automatic alt text available.
rupa hasana  , ರೂಪ ಹಾಸನ

ಕಾಲೇಜು ವಿದ್ಯಾರ್ಥಿನಿಯರಿಗೆ ಕಥಾಸ್ಪರ್ಧೆ -2018

No automatic alt text available.

ಹಂಪನಾ ---ಹಳಗನ್ನಡದಲ್ಲಿ ಭಾಷಣ

ಎಮ್. ಆರ್. ಕಮಲಾ ---ನೀವು ನೋಡಿದವಳು



ನೀವು ನೋಡಿದವಳು....
ನಿಮ್ಮ ನೋಟ ನಾನಲ್ಲ
ನನ್ನ ಸೀರೆ, ಕುಂಕುಮ, ಬಿಚ್ಚಿದ ಕೂದಲು
ಅರಳುಗಣ್ಣು, ಭಾವಗಳ ಹೊಮ್ಮಿಸುವ ಚಿತ್ರ 
ಇದ್ಯಾವುದು ನಾನಲ್ಲ.
ಊಹಿಸುತ್ತ ಹೋಗುತ್ತೀರಿ
ನಿಮ್ಮದೇ ಕಲ್ಪನೆಗೆ ರೆಕ್ಕೆಪುಕ್ಕ ಹಚ್ಚಿ
ಸಾವಿರ ಕಣ್ಣ ನವಿಲಾಗಿ ನನ್ನ ಕುಣಿಸುತ್ತೀರಿ
ಇದ್ಯಾವುದು ನಾನಲ್ಲ
ನಿಮ್ಮ ರಾಗ ದ್ವೇಷದಮಲಿನಲಿ
ನನ್ನನ್ನು ನಾದಿ, ಕೆಂಪಗೆ ಕರಿದು
ಕುದಿವ ಸಕ್ಕರೆಯ ಪಾಕದಲ್ಲಿ ಅದ್ದುತ್ತೀರಿ
ಇದ್ಯಾವುದು ನಾನಲ್ಲ
ಓಟದ `ಹಿಮ'ದ ಹುಡುಗಿಯ
ಜಾತಿ, ಖ್ಯಾತಿಯ ಹುಡುಕಿದಂತೆ
ಹಿನ್ನೆಲೆ ಹುಡುಕುತ್ತ ಅಲೆದು ಬಳಲುತ್ತೀರಿ
ಇದ್ಯಾವುದು ನಾನಲ್ಲ
ಹುಲ್ಲು ಕಡ್ಡಿ, ಪುಟ್ಟ ಹೂವು, ಮುಳ್ಳು
ಮರಳು, ಕಡಲು, ಆಕಾಶದಲ್ಲೂ
ಅರ್ಥ ಹುಡುಕಿ,ತಡಕಿ ತೊಳಲುತ್ತೀರಿ
ಅಲ್ಲೂ ದಕ್ಕಿಲ್ಲ, ಇಲ್ಲೂ,,,,




Image may contain: Metikurke Ramaswamy Kamala, closeup


























,,,

Friday, July 20, 2018

ಸ್ಟೇಟ್‌ಮೆಂಟ್‌ | ರಾಹುಲ್‌ ಗಾಂಧಿ-ಪ್ರಧಾನಿ ಮೋದಿ ಅಪ್ಪುಗೆಯನ್ನು ನಾವೇಕೆ ಗಂಭೀರವಾಗಿ...

ಕೆ. ಫಣಿರಾಜ್ -- ‘ಗುಂಪು ಹಿಂಸೆ’ ಎಂಬ ಅಂಗೈ ಹುಣ್ಣು

ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ತಾರತಮ್ಯ ಸಲ್ಲದು ಎಂದು ಘೋಷಿಸಿದ ಸುಪ್ರೀಂ

ರಾಮಚಂದ್ರ ಗುಹಾ - ನಗುವಿನ ಹೊನಲು ಹರಿಸಿದ ‘ಜಿಯೊ’

ಪುರುಷೋತ್ತಮ ಬಿಳಿಮಲೆ - ದೇಶ ಭಾಷೆಗಳ ಸಂಗತಿ

ಖಿನ್ನತೆಯಿಂದ ಪಾರುಮಾಡಿದ ಆ ಧನ್ವಂತರಿ: ವಸುಧೇಂದ್ರ

ಫ್ರೊ/ ಜಯಪ್ರಕಾಶ್ ಗೌಡ - ನಟ, ಸಾಹಿತಿ, ಸಜ್ಜನ ರಾಜಕಾರಣಿ ಕೆ.ವಿ. ಶಂಕರಗೌಡ

ಪುರುಷೋತ್ತಮ.ಎಸ್.ವಿ ಅವರಿಗೆ ಡಾಕ್ಟರೇಟ್ ಪದವಿ _ಕನ್ನಡ ಸಾಹಿತ್ಯ ಪರಂಪರೆ ಮತ್ತು ಗೌತಮ ಬುದ್ದ

LIVE_- -ತಾಳಮದ್ದಳೆ - ಸಮರ ಸೌಗಂಧಿಕಾ { ಕಟೀಲಿನಿಂದ Namma Kudla Live -

ರಾಮ ನಾಟಕಮ್- Rama Natakam - - "Yaro Ivar Yaro" padam by Harinie Jeevitha - -Sridevi ...

Thursday, July 19, 2018

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ - |ನಿಂದಾಸ್ತುತಿಯೂ ದೇವರನ್ನು ಒಲಿಸುವ ಒಂದು ಪರಿ -

ಯು. ಜಿ. ಸಿ - ಮುಂದೇನು ? उच्च शिक्षा आयोग - यूजीसी होगा खत्म? Higher Education Commission of Ind...

ಅಡಿಗ ಪದ್ಯ : ಆನಂದತೀರ್ಥರಿಗೆ | Adiga Poem : Anandateertharige -ಎಚ್. ಎಸ್. ಶಿವಪ್ರಕಾಶ್

ಮನು ಎಸ್‌ ಪಿಳ್ಳೈ ಸಂದರ್ಶನ | ಇತಿಹಾಸ ಬರವಣಿಗೆ ಉ.ಭಾರತದತ್ತ ವಾಲಿದ್ದೂ ಒಂದು ರಾಜಕೀಯ

Wednesday, July 18, 2018

ಏಳು ಬಣ್ಣದಲ್ಲಿ ಕೆಆರ್ ಎಸ್ ಜಲವೈಭವ

ಹಂಪಿ - ಕಲ್ಲಿನ ಮೂರ್ತಿ ಪತ್ತೆ

ಆಗಸ್ಟ್‌ 4 ಮತ್ತು 5ರಂದು ಮತ್ತೆ ‘ಕಾವ್ಯೋತ್ಸವ’

28 ಸಾವಿರ ಸರಕಾರಿ ಶಾಲೆಗಳ ವಿಲೀನ: ಡಾ.ಬರಗೂರು ರಾಮಚಂದ್ರಪ್ಪ ವಿಷಾದ

ಸ್ಟೇಟ್‌ಮೆಂಟ್‌ | ೮೦ರ ಹಿರಿಯ, ಕಾವಿಧಾರಿ ಸ್ವಾಮಿ ಅಗ್ನಿವೇಶರ ಮೇಲೆ ನಡೆಸಿದ ಹಲ್ಲೆ ಯ...

Tuesday, July 17, 2018

Kannada Ramayana । ಕನ್ನಡ ರಾಮಾಯಣ - ನಿರ್ದೇಶನ - ಬಿ. ಆರ್. ವೆಂಕಟರಮಣ ಐತಾಳ್

ಗೀತಾ ಹರಿಹರನ್ - " ಎ. ಕೆ. ರಾಮನುಜನ್ ಅವರ " ಮುನ್ನೂರು ರಾಮಾಯಣಗಳು " The 'Epic' Controversy of Ramanujan's Essay: A Writer's Perspective

ಸ್ಟೇಟ್‌ಮೆಂಟ್‌ | ಜೇಟ್ಲಿ, ತಮ್ಮ ಅಸಾಮರ್ಥ್ಯ ಮರೆತು ಕುಮಾರಸ್ವಾಮಿಯವರನ್ನು ಅಪಹಾಸ್ಯ .ಮಾಡಿದ್ದು ಎಷ್ಟು ಸರಿ ?..

ವಿಜಯ್ ತೆಂಡುಲ್ಕರ್ --" ಬೇಬಿ } { ನಾಟಕ } -ಕನ್ನಡಕ್ಕೆ - ಜಯಲಕ್ಷ್ಮಿ ಪಾಟೀಲ್

No automatic alt text available.

ಡಾ / ಎ. ಸತ್ಯನಾರಾಯಣ - ಕನ್ನಡದ ಕೀಲಿಮಣೆ ವಿನ್ಯಾಸಗಳಲ್ಲಿ ಬಹುಪಯೋಗಿ ‘ಮಲ್ಟಿಫಾಂಟ್ ಕೀಬೋರ್ಡ್ ಲೇಔಟ್’

ಯುರೋಪ್ ನ ಗುಬ್ಬಚ್ಚಿ ದೇಶ - ಕ್ರೋಶಿಯಾ Visit Croatia | যাওয়ার আগে দেখে নিন অদ্ভুত সুন্দর দেশ ক্রোয়েশিয়া | Best ...

ಯೂರೋಪಿನ ನವ ತಲೆಮಾರಿನ ಆಕಾಂಕ್ಷೆಯನ್ನು ಪ್ರತಿನಿಧಿಸುವ ಕ್ರೊವೇಷ್ಯಾ

Bannanje Sanjiva Suvarna | ಬನ್ನಂಜೆ ಸಂಜೀವ ಸುವರ್ಣ

ಜ್ಯೋತಿ ಗುರುಪ್ರಸಾದ್ - ಕಣ್ಣ ಭಾಷೆ

No automatic alt text available.

Rabindra Nayak - ಕವಿ ಎಮ್. ಗೋವಿಂದ ಪೈಗಳ ನೆನಪು

Monday, July 16, 2018

'ನೀಲಮ್ಮ' - ಸ್ಮಶಾನದಲ್ಲಿ ವಾಸವಿದ್ದು ಶವ ಸಂಸ್ಕಾರ ಮಾಡೋ ಧಿಟ್ಟ ಮಹಿಳೆಯ ಕಥೆ..!

ಈಜಿಪ್ಟ್: ‘ಮಮ್ಮೀಕರಣ’ ಕಾರ್ಯಾಗಾರ ಸ್ಥಳ ಪತ್ತೆ

ನಮ್ಮ " ಸಖೀ ಗೀತ " ದಲ್ಲಿ ಚಿಕ್ಕಮೇಳ Yakshagana Chikka Mela At Sakhee Geetha

ಸುಬ್ರಾಯ ಚೊಕ್ಕಾಡಿ -- ಟಿ. ಜಿ. ರಾಘವರ ಕಾದಂಬರಿ

"ಮನೆ" ಟಿ.ಜಿ.ರಾಘವರ ಒಂದು ವಿಶಿಷ್ಟ ಕಾದಂಬರಿ. ಟಿ.ಜಿ.ರಾಘವರು ನವ್ಯ ಸಾಹಿತ್ಯ ಸಂದರ್ಭದ ಪ್ರಮುಖ ಲೇಖಕರಲ್ಲಿ ಒಬ್ಬರು.ಮೊದಲ ಸಂಕ್ರಮಣ ದ್ವೈಮಾಸಿಕದಲ್ಲಿ ಪ್ರಕಟವಾದ ಅವರ"ಶ್ರಾದ್ಧ"ಕತೆಯು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.1979 ರಲ್ಲಿ ಪ್ರಥಮ ಮುದ್ರಣ ಹಾಗೂ 1990 ರಲ್ಲಿ ದ್ವಿತೀಯ ಮುದ್ರಣ ಕಂಡ ಈ ಪುಟ್ಟ ಕಾದಂಬರಿಯ ಪ್ರಕಾಶಕರು "ಗೀತಾ ಬುಕ್ ಹೌಸ್, ಮೈಸೂರು " ರಾಘವರ ಇತರ ಪ್ರಕಟಿತ ಕೃತಿಗಳಲ್ಲಿ "ಜ್ವಾಲೆ ಆರಿತು"ಹಾಗೂ "ಸಂಬಂಧಗಳು "ಎನ್ನುವ ಕಥಾ ಸಂಕಲನಗಳು,"ವಿಕೃತಿ"ಎನ್ನುವ ಕಾದಂಬರಿ,ಮತ್ತು "ಪ್ರೇತಗಳು"ಎನ್ನುವ ನಾಟಕ ಮುಖ್ಯವಾದವುಗಳು.
"ಸಂತೆಯೊಳಗೊಂದು ಮನೆಯ ಮಾಡಿ,ಸದ್ದು ಗದ್ದಲಕೆ ಅಂಜಿದೊಡೆ ಎಂತಯ್ಯಾ "ಅನ್ನುವುದು ಅಕ್ಕನ ವಚನವೊಂದರ ಸಾಲು. ಈ ಸಾಲಿಗೆ ವಿಷಾದದ ಉದಾಹರಣೆಯಾಗಿ ಈ ಕಾದಂಬರಿಯ ಮುಖ್ಯ-ಆದರೆ ಅಮಾಯಕ-ಪಾತ್ರಗಳಾದ ರಾಜಣ್ಣ ಮತ್ತು ಗೀತಾ ,ನಗರದಲ್ಲಿ ಒಂದು ಪುಟ್ಟ ಮನೆಯು ನೆಮ್ಮದಿಯ ಹಾಗೂ ಖಾಸಗಿಯ ಬದುಕಿಗಾಗಿ ಬೇಕೆಂದು ಹಂಬಲಿಸಿದವರು.;ಅಂಥ ಕನಸು ಕಂಡವರು.ಆದರೆ ನಗರದ ಗದ್ದಲ,ಎಲ್ಲ ಖಾಸಗಿತನವನ್ನೂ ನುಂಗಿ ಹಾಕಿ,ಅದರ ಪಾವಿತ್ರ್ಯವನ್ನು ನಾಶಮಾಡಿ ನಿರ್ದಯವಾಗಿ ವರ್ತಿಸುವ ನಗರದ ಕ್ರೌರ್ಯ,ಖಾಸಗಿ ಬದುಕಿನೊಳಗೆ ಮೂಗುತೂರಿಸುವ ಜನ ಸಮುದಾಯದ ತಲೆಹರಟೆ...ಇವೆಲ್ಲವುಗಳ ನಡುವೆ ರಾಜಣ್ಣ ದಂಪತಿಗಳ ಮನೆಯನ್ನು ಹೊಂದುವ.ಹಾಗೂ ಆಮೇಲೆ ಮನೆಯನ್ನು ಹೇಗೋ ಹೊಂದಿದ ಮೇಲೆ ನೆಮ್ಮದಿಯಾಗಿ ಹಾಗೂ ಖಾಸಗಿಯಾಗಿ ಬದುಕುವ ಕನಸು ವಾಸ್ತವದ ಸುಡು ಬಿಸಿಯಲ್ಲಿ ಕರಗಿ ಹೋಗುವುದನ್ನು ಈ ಕಾದಂಬಲರಿಯು ಅನನ್ಯವಾಗಿ ಚಿತ್ರಿಸುತ್ತದೆ.ಮನೆ ಎನ್ನುವ ಸಂಸ್ಥೆಯ ಸುತ್ತ ನಿರ್ಮಿತವಾಗುವ ಮಧ್ಯಮವರ್ಗದ ಜೀವನದ ದುರಂತವನ್ನು ನಗರದ ಹಿನ್ನೆಲೆಯಲ್ಲಿಈ ಬಗೆಯ ನಿಷ್ಠುರತೆಯಲ್ಲಿ ಕಟ್ಟಿಕೊಟ್ಟ ಕೃತಿ ಇನ್ನೊಂದಿಲ್ಲವೆನ್ನಬಹುದು.ಮನುಷ್ಯನ ಖಾಸಗಿತನದ ಬದುಕು ಕಳೆದು ಹೋಗುತ್ತಿರುವ ನಮ್ಮ ಕಾಲದ ನೋವಿನ ಅನುಭವಕ್ಕೆ ಈ ಕೃತಿಯು ಕನ್ನಡಿ ಹಿಡಿದ ಹಾಗಿದೆ.
ಗಿರೀಶ ಕಾಸರವಳ್ಳಿಯವರ "ಮನೆ" ಸಿನೆಮಾವು ಈ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿದೆ.ಹಿಂದಿ ಹಾಗೂ ಕನ್ನಡ-ಈ ಎರಡೂ ಭಾಷೆಗಳಲ್ಲಿ ತಯಾರಾಗಿರುವ ಈ ಸಿನೆಮಾದಲ್ಲಿ ಖ್ಯಾತ ನಟ ನಟಿಯರಾದ ನಾಸಿರುದ್ದೀನ್ ಷಾ,ದೀಪ್ತಿ ನಾವಲ್,ರೋಹಿಣಿ ಹಟ್ಟಂಗಡಿ ಮೊದಲಾದವರು ಅಭಿನಯಿಸಿದ್ದು ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರಪ್ರಶಸ್ತಿಯನ್ನು ಗಳಿಸಿರುತ್ತದೆ.
--ಸುಬ್ರಾಯ ಚೊಕ್ಕಾಡಿ.

Sunday, July 15, 2018

ವಿ. ಎನ್. ವೆಂಕಟಲಕ್ಷ್ನಿ - ಸಾಹಿತ್ಯದಿಂದ ರಾಜಕೀಯಕ್ಕೆ ಬಂದ ‘ನರೆಟಿವ್’

ಬನ್ನಂಜೆ ಸಂಜೀವ ಸುವರ್ಣ - Bannanje Sanjeeva Suvarna - Reply to Public Felicitation at Udupi

ಸಾಹಿತಿ ಎಂ.ಎನ್.ವ್ಯಾಸರಾವ್, ಕವಯತ್ರಿ ನಾಗಶ್ರೀ ಶ್ರೀರಕ್ಷ ನಿಧನ

ಬನ್ನಂಜೆ ಸಂಜೀವ ಸುವರ್ಣ - Bimba - Vyaktitvada Hudukaata..with Bannanje Sanjeeva Suvarna│Episode 13...

ಎಮ್. ಎನ್ , ವ್ಯಾಸ ರಾವ್ - ನೀನಿಲ್ಲದೆ ನನಗೇನಿದೆ M D Pallavi / MN Vyasa Rao

ಸೂರ್ಯಂಗೂ ಚಂದ್ರಂಗೂ...ಖ್ಯಾತಿಯ ಸಾಹಿತಿ ಎಂ.ಎನ್.ವ್ಯಾಸರಾವ್ ನಿಧನ  -15 --7-2018

‘ಕನ್ನಡದ ಮೊದಲ ಸೂಫಿ ಕವಿ ಶಿಶುನಾಳ ಶರೀಫ’

ಬೋಧನೆ ಮರೆತ ಶಿಕ್ಷಕ, ಪದ್ಯ ಓದದ ಸಾಹಿತ್ಯ ವಿದ್ಯಾರ್ಥಿ

Saturday, July 14, 2018

ಎಚ್. ಎಸ್. ಶಿವಪ್ರಕಾಶ್ - |ಕನ್ನಡದ ಹೂಗಳರಳುವ, ರಾಗಿರೊಟ್ಟಿ ಸವಿಯುವ ಕ್ರಿತಿ -

ರೂಪಾ ಹಾಸನ - ಶೋಷಿತ ಮಕ್ಕಳ ಒಡನಾಟದಲ್ಲಿ

ಜಯಲಕ್ಷ್ಮಿ ಪಾಟೀಲ್ - ಮುಕ್ಕು ಚಿಕ್ಕಿಯ ಕಾಳು { ಕಾದಂಬರಿ - 2018 }

Muraleedhara Upadhya Hiriadka - ಗೋಪಾಲಕೄಷ್ಣ ಅಡಿಗರ ಕಾವ್ಯ - ಟಿಪ್ಪಣಿಗಳು

Friday, July 13, 2018

ಗುರುರಾಜ ಮಾರ್ಪಳ್ಳಿ - ಕಲಾಯಾನ [ ಕಾದಂಬರಿ }


ಕಲಾಯಾನ [ ಕಾದಂಬರಿ }

- ಗುರುರಾಜ ಮಾರ್ಪಳ್ಳಿ

- ಪ್ರಕಾಶಕರು- ಹೊಸ ಸಂಜೆ ಪ್ರಕಾಶನ , ಕಾರ್ಕಳ

- ಪ್ರಕಟಣೆ ವರ್ಷ -2018 , ಬೆಲೆ- rs -100

Kalayaana [ kannada novel by Gururaja Marpally   , published in 2018 , published by Hosa Sanje Prakashana , Karkala , udupi dist









No automatic alt text available.

ಚಿತ್ರದುರ್ಗ - 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬಂಜಗೆರೆ ಜಯಪ್ರಕಾಶ್ ಆಯ್ಕೆ

ಹಂಪಿಯಲ್ಲಿ ಎರಡು ಮೂರ್ತಿ ಪತ್ತೆ

ತೇಜಸ್ವಿ ಹೆಸರಲ್ಲಿ ಕಾದಂಬರಿ ಪುರಸ್ಕಾರ

Thursday, July 12, 2018

ಡಾ / ಜಿ. ಎಸ್. ಶಿವಪ್ರಕಾಶ್ - ದಕ್ಷಿಣ ಅಮೇರಿಕ ಒಂದು ಸುತ್ತು

 g. s. shivaprakash

ಡಾ / ಎ. ಸತ್ಯನಾರಾಯಣ - ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಸ್ಯೆಗಳು : ಉಚಿತ ತಂತ್ರಾಂಶಗಳ ರೀ-ಇಂಜಿನಿಯರಿಂಗ್

ಮೊಗಳ್ಲಿ ಗಣೇಶ್ ಅವರ " ತೊಟ್ತಿಲು " ಕಾದಂಬರಿಯ ಇಂಗ್ಲಿಷ್ ಅನುವಾದ - The Cradle {Tejasvi / P. P. Giridhar }

No automatic alt text available.
mogalli ganesh the cradle

ಕಾರಂತರ " ಸರಸಮ್ಮನ ಸಮಾಧಿ " ಮೊಗಸಾಲೆ ಅವರ " ಮುಖಾಂತರ " ಕಾದಂಬರಿಗಳ ಇಂಗ್ಲಿಷ್ ಅನುವಾದ ಬಿಡುಗಡೆ

Wednesday, July 11, 2018

ಶ್ರೇಷ್ಠ ವಿದ್ಯಾಸಂಸ್ಥೆ ಎನಿಸಿಕೊಂಡ ರಿಲಯನ್ಸ್ ಜಿಯೋ ಇನ್ನಷ್ಟೇ ಅಸ್ತಿತ್ವಕ್ಕೆ ಬರಬೇಕಿದೆ!

ಜಿ. ರಾಜಶೇಖರ-- ಎ. ಕೆ. ರಾಮಾನುಜನ್ ಕಾವ್ಯ

ದಿಶಾ ರಮೇಶ್ ಅವರ ‘ರಂಗ ದಿಶಾ’ { ಸಂಗೀತ ನಿರ್ದೇಶನ - ಬಿ. ವಿ. ಕಾರಂತ }

ಕತೆಗಳ ಜೊತೆ ಓದು ಮಾತು ಸಂವಾದ - 14-7-2018

No automatic alt text available.

ಪೂರ್ಣ ಚಂದ್ರ ತೇಜಸ್ವಿ ಅವರ ' ಕರ್ವಾಲೊ " ಕಾದಂಬರಿಯ ಜರ್ಮನ್ ಅನುವಾದ { Karvalo traslated to German by Vivekla Rai / Catharin Binder }

No automatic alt text available.

Tuesday, July 10, 2018

ಮೊಗಸಾಲೆಯವರ ‘ಧಾತು’ ಕಾದಂಬರಿ ಕುರಿತು ವಿಜಯರಾಘವನ್

ಅರಕೆರೆ ಜಯರಾಮ್ -- ಬ್ರಾಹ್ಮಣ ಅಭಿವೃದ್ಧಿ ಮಂಡಳಿ: ವಿಪ್ರ ವರ್ಗಕ್ಕೆ ಭರವಸೆಯ ತುಪ್ಪ!

ಸುಬ್ರಾಯ ಚೊಕ್ಕಾಡಿ - " ಬಿದ್ದಗರಿ " ಸಂಕಲನದ ಕೆ. ರಾಮಚಂದ್ರ {1935 -55 }

ಎಳವೆಯಲ್ಲೇ ನಿಧನರಾದ,ದ.ಕ.ದ ಇಬ್ಬರು ಕವಿಗಳ ಬಗ್ಗೆ ಬರೆಯಬೇಕೆನಿಸುತ್ತದೆ.ಯರ್ಮುಂಜ ರಾಮಚಂದ್ರ(1933-1955) ಮತ್ತುಕೆ.(ಕುಂಞಿಹಿತ್ಲು)ರಾಮಚಂದ್ರ.(1935-1955).ಈ ಇಬ್ಬರು ಕವಿಗಳೂ ಒಂದೇ ತಿಂಗಳ ಅವಧಿಯಲ್ಲಿ ಕ್ಷಯರೋಗಕ್ಕೆ ತುತ್ತಾಗಿ ನಿಧನರಾದರು.
ಅಧ್ಯಾಪಕರೂ,ಪೋಸ್ಟ್ ಮಾಸ್ಟರೂ,ಮಂಗಳೂರಿನಲ್ಲಿ ಪತ್ರಿಕೋದ್ಯೋಗಿಯೂ ಆಗಿದ್ದ ಯರ್ಮುಂಜರು, ತಮ್ಮ"ಯಾರಿಲ್ಲಿಗೆ ಬಂದರು ಕಳೆದಿರುಳು"ಎಂಬ ಪ್ರಸಿದ್ಧ ಕವಿತೆಯುಳ್ಳ "ವಿದಾಯ"ಕವನ ಸಂಕಲನ ಹಾಗೂ "ಚಿಕಿತ್ಸೆಯ ಹುಚ್ಚು"ಕಥಾ ಸಂಕಲನದ ಮೂಲಕ ಸಾಹಿತ್ಯಾಸಕ್ತರಿಗೆ ತಕ್ಕ ಮಟ್ಟಿಗೆ ಪರಿಚಿತರು.ನಿಧನರಾದಾಗ ಅವರ ವಯಸ್ಸು 22.
ಇನ್ನೊಬ್ಬ ಕವಿ ಕೆ.ರಾಮಚಂದ್ರ ಮೈಸೂರಲ್ಲಿ ಬಿ.ಎ(ಆನರ್ಸ್)ಕೊನೆಯ ವರ್ಷದಲ್ಲಿ ಕಲಿಯುತ್ತಿದ್ದಾಗಲೇ ತಮ್ಮ20ನೇವಯಸ್ಸಿನಲ್ಲೇ ನಿಧನರಾದರು.ಅವರ ಕತೆ"ಕೊನೆಯ ಮಾತು" ಪುತ್ತೂರಿನ"ಜನಪ್ರಿಯ ಸಾಹಿತ್ಯ"ಪ್ರಕಟಿಸಿದ "ಮುಂಗಾರು ಮುಗಿಲು"ಕಥಾ ಸಂಕಲನದಲ್ಲಿ ಪ್ರಕಟವಾಗಿತ್ತು.ಆ ಕೃತಿಗೆ ಅ.ನ.ಕೃ ಮುನ್ನುಡಿಯಿತ್ತು ಹಾಗೂ ಅದನ್ನು ಶಿವರಾಮ ಕಾರಂತರಿಗೆ ಅರ್ಪಿಸಲಾಗಿತ್ತು.ರಾಮಚಂದ್ರರ ಪ್ರಕಟಿತ ಕವನ ಸಂಕಲನ"ಬಿದ್ದ ಗರಿ"ಯಲ್ಲಿ 18 ಕವಿತೆಗಳಿವೆ.ಯರ್ಮುಂಜರ ಹಾಗೂ ರಾಮಚಂದ್ರರ ಕವನನ ಸಂಕಲನಗಳಿಗೆ ಮುನ್ನುಡಿ ಬರೆದವರು ಕವಿ ಗೋಪಾಲಕೃಷ್ಣ ಅಡಿಗರು.ಈ ಇಬ್ಬರ ಅಕಾಲ ನಿಧನದ ಹಿನ್ನೆಲೆಯಲ್ಲಿಆ ಎರಡೂ ಸಂಕಲನದ ಹೆಸರುಗಳು,ರಾಮಚಂದ್ರರ ಏಕಮಾತ್ರ ಕತೆಯ ಹೆಸರುಗಳು ತುಂಬಾ ಅರ್ಥಪೂರ್ಣ ಎಂಬುದನ್ನು ಗಮನಿಸಬೇಕು.
ಅಂದಹಾಗೆ ಕೆ.ರಾಮಚಂದ್ರರ ಅಣ್ಣನ ಮಗ ಕೆ.ಶಿವಸುಬ್ರಹ್ಮಣ್ಯ ಈಗ ಬೆಂಗಳೂರಿನ ಉದಯವಾಣಿಯ ಸಂಪಾದಕರು..!
ಸ್ಯಾಂಪಲ್ ಗಾಗಿ ಕೆ.ರಾಮಚಂದ್ರರ ಕವಿತೆಗಳ ಕೆಲವು ಸಾಲುಗಳ ಸಾಲುಗಳು ನಿಮಗಾಗಿ:
ನಾನು ನೀನು ಎಲ್ಲ ಎಲ್ಲ ಬಾನಿನಲ್ಲೆ ನಡೆದು ಬರುವ
ಗರುಡನಿಟ್ಟ ಮೊಟ್ಟೆಯು.
ಬುವಿಯ ಗಿರಿಕಿರೀಟದಲ್ಲಿ ಕೋಡುಗಲ್ಲ ಗೂಡಿನಲ್ಲಿ
ನಮ್ಮ ಭ್ರೂಣ ನಿದ್ರೆಯು.
ನಮ್ಮ ಸಾಕುತಾಯಿ ಮಾಯೆ, ಕಾವು ಕೂರೆ ಗರುಡನೊಂದುನಿಯಮಿಸಿಟ್ಟ ದಾದಿಯು;ನಾವು ಬೆಳೆಯೆ ಮುಗಿಲ ರಾಣಿ ಅಮರಪುತ್ರರುಣ್ಣುವಂಥ
ತುತ್ತ ತರುವ ನೇಮವು..
* * * * *
ಸಾವನಪ್ಪಿ ಚೆಲ್ಲಿ ಹೋದ ಎಲುಬ ಗೂಡ ರಾಶಿಗೆ
ಮಲಯಗಿರಿಯ ಕಳಸದಿಂದ ಅಮೃತ ಧಾರೆ ಸುರಿವೆವು.
ಸುರಿದು ಕಲ್ಪ ವೃಕ್ಷದೊಂದು ಬೀಜ ನೆಗೆವೆವು
ನೆಗೆದು ರೆಕ್ಕೆ ಬಿಚ್ಚಿ ಧರೆಗೆ ತಂಪು ನೆಳಲ ತರುವೆವು.
(ಸುಪ್ತ ಶಕ್ತಿ)
* * * * *
ಯಾವ ದುಃಖಕೊ ಯಾವ ಸುಖಕೋ ಯಾವ ಗೀತಕೊ ಕಾಣೆನು
ಯಾವ ಮೌನಕೊ ಎದೆಯ ದನಿಯೊಂದೇ ಇದೇನಿದು ಅಚ್ಚರಿ!
* * * *
ಏನಿದೇನಿದು?ಯಾವ ಮೊರೆಯನು ಅರುಹುತಿಲ್ಲಿಗೆ ಬಂದಿಹೆ
ಇಂದ್ರ ಲೋಕದ ತುಂಗ ಸ್ಥಾನವೊ?ನಿಮ್ನ ಲೋಕದ ಬಂಧುವೋ?
* * * *
(ಈ ದನಿ)

Image may contain: 1 person, text

ಗಿರೀಶ್ ಕಾರ್ನಾಡ್ - ರಾಕ್ಷಸ- ತಂಗಡಿ { ನಾಟಕ -2018 }

Image may contain: one or more people

Phaniraj k -ಕವಿ ಎಸ್. ಮಂಜುನಾಥ್ ರಿಗೆ ನುಡಿ ನಮನ

ನೋಡುವಾಗಲೇ ಮೈರೋಮಾಂಚನಗೊಳ್ಳುವ ವನಸಿರಿ ಹತ್ತಿರದಲ್ಲೇ ಕಾಣಸಿಗುತ್ತದೆ ಅರಿಂಗುಲ..

ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗೆ ಸೌಮ್ಯ ಆಯ್ಕೆ { 2018 }

ಸುಮಿಯೊ ಮೊರಿಜಿರಿ - ಯಕ್ಷಗಾನ, ಭೂತಾರಾಧನೆಯ ಗ್ರಂಥ ಬರೆದ ಜಪಾನ್‌ ವಿದ್ವಾಂಸ

ಜೇನು ಕೃಷಿಯನ್ನು ನೆಚ್ಚಿಕೊಂಡ ಶಿರಸಿಯ ಈ ವಿದ್ಯಾರ್ಥಿಯ ಆದಾಯ ಲಕ್ಷಕ್ಕೂ ಅಧಿಕ!

Monday, July 9, 2018

ಸುಮಿಯೋ ಮೊರಿಜಿರಿ - Sumio Morijiri 's boom on Yakshahana released

ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದ ಬಂಗಾಳಿ ನೀಳ್ಗತೆ -- " ವಾಸನಾ "

ಬಲಾಯಿಚಂದ್ ಮುಖ್ಯೋಪಾಧ್ಯಾಯ { 1899-1979 }  ಠಾಗೋರೋತ್ತರ ಬಂಗಾಳಿ ಸಾಹಿತ್ಯದ ಮುಖ್ಯ ಲೇಖಕರಲ್ಲಿ ಒಬ್ಬರು. ಬನ್ ಫೂಲ್ " ಕಾವ್ಯನಾಮದ ಬಲಾಯಿಚಂದ್ ಅವರು ಬಂಗಾಳಿ ಕಾವ್ಯ , ನಾಟಕ , ಕಾದಂಬರಿ , ಸಣ್ಣಕತೆ ಪ್ರಕಾರಗಳಿಗೆ ಸಮೃದ್ದ ಕೊಡುಗೆ ನೀಡಿದ್ದಾರೆ . ಅವರ 61  ಕಾದಂಬರಿಗಳು , 600 ಸಣ್ಣ ಕತೆಗಳು ಪ್ರಕಟವಾಗಿವೆ .. ಸತ್ಯಚರಣ ಮುಖ್ಯೋಪಾಧ್ಯಾಯ , ಮೃಣಾಲಿನಿದೇವಿ ದಂಪತಿಗಳ ಮಗನಾಗಿ ಬಲಾಯಿಚಂದರು ಹುಟ್ಟಿದ್ದು ಬಿಹಾರದ ಪೂರ್ವೀಯಾ ಜಿಲ್ಲೆಯ ಮೊನಿಹಾರಿಯಲ್ಲಿ{1899}. ಸತ್ಯಚರಣ್ ಬಿಹಾರದ ಪೂರ್ವಿಯಾ ಜಿಲ್ಲಾಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದರು. ಬಲಾಯಿಚಂದರು 1928 ರಲ್ಲಿ  ಕಲ್ಕತ್ತ ಮೆಡಿಕಲ್ ಕಾಲೇಜಿನ ಎಮ್. ಬಿ. ಬಿ. ಎಸ್ ಪದವೀಧರರಾದರು. ಮುನಿರಾಬಾದ್ ನ ಮುನಿಸಿಪಲ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಬಲಾಯಿಚಂದರು ಮುಂದೆ ಭಾಗಲ್ಪುರದಲ್ಲಿ  ಸ್ವಂತ ಕ್ಲಿನಿಕ್ ಆರಂಭಿಸಿದರು .

 ಬಲಾಯಿಚಂದರ ಕಾದಂಬರಿಗಳನ್ನು ಆಧರಿಸಿದ ಎಂಟು ಸಿನಿಮಾಗಳಿವೆ . ಅವುಗಳಲ್ಲಿ " ಭುವನ್ ಶೋಮ್ " { 1960 } , " ಅಗ್ನೀಶ್ವರ " ಮತ್ತು " ಅರ್ಜುನ್ ಪಂಡಿತ್ "  ಪ್ರಸಿದ್ದಿ ಗಳಿಸಿವೆ.   ಮೃಣಾಲ್ ಸೆನ್ ನಿರ್ದೇಸಿದ ’ ಭುವನ್ ಶೋಮ್ "  ರಾಷ್ಟ್ರ ಪ್ರಶಸ್ತಿ ಗಳಿಸಿದೆ. ಮಧುಸೂದನ "{1940 -  ಮೈಖೇಲ್ ಮಧುಸೂಧನ ದತ್ತರ ಜೀವನ ಚರಿತ್ರೆ.} , " ವಿದ್ಯಾ ಸಾಗರ "{ 1941  -ಈಶ್ವರಚಂದ್ರ ವಿದ್ಯಾ ಸಾಗರ ಅವರ ಜೀವನ ಚರಿತ್ರೆ } ಗಳನ್ನು ಬರೆದಿರುವ ಬಲಾಯಿಚಂದರು ತನ್ನ ಆತ್ಮಕತೆಗೆ " ಪಶ್ಚಾತ್ತಾಪ " ಎಂಬ ಶೀರ್ಷಿಕೆ ನೀಡಿದ್ದಾರೆ.. 1975 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡಿದ ಬಲಾಯಿಚಂದರ ಸಮಗ್ರ ಕೃತಿಗಳು ಅಂತರ್ಜಾಲದಲ್ಲಿ ಲಭ್ಯ ಇವೆ.
                                                  ೨
   ಎಮ್. ಹರಿದಾಸ ರಾವ್  ಕನ್ನಡದ ಅಲಕ್ಷಿತ ಲೇಖಕರಲ್ಲೊಬ್ಬರು. ಹರಿದಾಸ ರಾವ್ ಅವರು ಹುಬ್ಬಳ್ಳಿಯಲ್ಲಿ ಆರಂಭಿಸಿದ್ದ  ಸರ್ವೋದಯ ಸಾಹಿತ್ಯಮಾಲೆಯಲ್ಲಿ ಪಿ. ವಿ. ಆಚಾರ್ಯ { ಪಾ. ವೆಂ. ಆಚಾರ್ಯ} ರ  " ವಾಸನಾ "  { ಬನ್ ಫೂಲ್ ಅವರ ಬಂಗಾಳಿ ಕತೆಯ ಆಧಾರದಿಂದ } 1950 ರಲ್ಲಿ ಪ್ರಕಟವಾಗಿದೆ. .ಪಾ. ವೆಂ . ಆಚಾರ್ಯರು { 1915- 1992 }  ತನ್ನ  35  ನೆಯ ವಯಸ್ಸಿನಲ್ಲಿ ಈ ನೀಳ್ಗತೆಯನ್ನು ಭಾಷಾಂತರಿಸಿದ್ದಾರೆ . ಬಂಗಾಳಿ ಭಾಷೆ ಕಲಿತಿದ್ದ ಪಾ.ವೆಂ ಮೂಲ ಬಂಗಾಳಿಯಿಂದಲೇ ಈ ಕೃತಿಯನ್ನು ಅನುವಾದಿಸಿರಬಹುದು.
     ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳಿಯ ಶರತ್ ಚಂದ್ರ , ಬಂಕಿಮ ಚಂದ್ರ , ಮತ್ತು ರವೀಂದ್ರನಾಥ ಟಾಗೋರ ಅವರ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಪಾ.ವೆಂ .ಆಚಾರ್ಯರು ಬಂಗಾಳಿಯ ಹೊಸ ಲೇಖಕರೊಬ್ಬರನ್ನು - ಬಲಾಯಿಚಂದ ಮುಖ್ಯೋಪಾಧ್ಯಾಯ - ಕನ್ನಡಕ್ಕೆ ಪರಿಚಯಿಸಿದರು .
 ಬಲಾಯಿಚಂದರು ತನ್ನ ಕಥನ ತಂತ್ರ ಮತ್ತು ಪಾತ್ರಗಳ ಅಂತರಂಗ ಶೋಧದದಿಂದ ಖ್ಯಾತರಾದ ಲೇಖಕ . ’ ವಾಸನಾ ’ ನೀಳ್ಗತೆಯಲ್ಲೂ ಒಂದು ವಿನೂತನ ಕಥನ ತಂತ್ರ ಕಾಣಿಸುತ್ತದೆ .’ ವಾಸನಾ ದ ’ ದ ನಿರೂಪಕ ಒಬ್ಬ ಸರಕಾರಿ ಆಸ್ಪತ್ರೆಯ   ಡಾಕ್ಟರ್. ತನ್ನ ಕರ್ತವ್ಯಕ್ಕಾಗಿ  ನೂರಾರು ಹೆಣಗಳ ಮರಣೋತ್ತರ ಪರೀಕ್ಷೆ ಮಾಡಿದ್ದಾನೆ. ನಿದ್ರೆ ಬರದ ಒಂದು ರಾತ್ರಿ ಅವನಿಂದ ಸಿಗಿಸಿಕೊಡ ಹಲವು ಪಾತ್ರಗಳು ಅವನ ಬಳಿ  ಬಂದು ತಮ್ಮ ಕತೆ ವಿವರಿಸುತ್ತವೆ . ಇಲ್ಲಿ ಭಗ್ನ ಪ್ರಣಯ , ದಾಂಪತ್ಯೇತರ ಸಂಬಂಧ , ಬಡತನ , ಹೆಣ್ಣಿನ ಬಣ್ಣವನ್ನು ಕುರಿತ ಪೂರ್ವಗ್ರಹ , ಕೌಟುಂಬಿಕ ಕ್ರೌರ್ಯ , ಬಾಲ್ಯ ವಿವಾಹಗಳಿಗೆ ಸಂಬಂಧಿಸಿದ ಹಲವು ದಾರುಣ ಕತೆಗಳಿವೆ. ವಿದೇಶಿ ಪಸ್ತ್ರಗಳ ಬಹಿಷ್ಕಾರ ಚಳುವಳಿಯಿಂದ ಒಬ್ಬನ ಬಟ್ಟೆ ಅಂಗಡಿ ದಿವಾಳಿಯಾದ ಪ್ರಸ್ತಾಪ - ಇದು ಸ್ವಾತಂತ್ರ್ಯ ಪೂರ್ವದ ಕತೆ ಎಂಬುದನ್ನು ಸೂಚಿಸುತ್ತದೆ . ಪುರುಷ ಪ್ರಧಾನ ಸಮಾಜದ ಗಂಡು  ಹೆಣ್ನಿ ನ ಸಂಕೀರ್ಣ ಸಂಬಂಧಗಳನ್ನು ಈ ನೀಳ್ಗತೆ ಅನಾವರಣ ಗೊಳಿಸುತ್ತದೆ . ಸೇಡು ಹಾಗೂ ಕೇಡಿನ ,’ ಭದ್ರಲೋಕ’ ದ ಅಭದ್ರ ದಾಂಪತ್ಯ ವ್ಯವಸ್ಥೆಯ ವಿವಿಧ ಕರಾಳ ಮುಖಗಳನ್ನು ಈ ನೀಳ್ಗತೆ ಚಿತ್ರಿಸುತ್ತದೆ .
   ಈ ನೀಳ್ಗತೆಯ ಒಬ್ಬಳು , ಹೆಂಗಸರ ಅಸಹಾಯಕ ಸ್ತಿತಿಯನ್ನು ಹೀಗೆ ವಿವರಿಸುತ್ತಾಳೆ --"ನಾನು ಬದುಕಿದ್ದಾಗ ನೋಡಿದ ಮಟ್ಟಿಗೆ   ಗಂಡಸರು ನಮ್ಮನ್ನು ತೆಗೆದುಕೊಂಡು ಬರಿ ಚಿನ್ನಾಟ ಆಡುತ್ತಾರೆ.. ನಾವು ಹೆಂಗಸರು ಫುಟ್ ಬಾಲ್ . ಅವರು ಪಟುಗಲಾದ ಪಂದ್ಯಾಟಗಾರರು . "    ಹದಿಮೂರರ ಹರೆಯದಲ್ಲಿ " ಪತಿದೇವರನ್ನು " ಕಳೆದುಕೊಂದ ಯುವತಿ , ವಿಧವೆಯರರ ಪಾಡನ್ನು ಕುರಿತು  " ನಮ್ಮ ದೇಶದಲ್ಲಿ ಸತೀ ಸಹಗಮನ ಪದ್ದತಿ ಇತ್ತಲ್ಲ ಅದೇ ಸುಖವಿತ್ತು ನೋಡಿರಿ. ಗಂಡನ ಜತೆಗೇ ಹೆಂಡತಿಯೂ ಸುಟ್ಟು ಹೋಗುತ್ತಿದ್ದಳು . ಸರಿ. ಹೀಗೆ ಬೆಂದು ಬೆಂದು ಕೊರಗಿ ಕೊರಗಿ ಸಾಯುವ ಅವಸ್ಥೆ ಯಾರಿಗೆ ಬೇಕಿತ್ತು ? ಈ ದೇಶದ ಮನೆ ಮನೆಯಲ್ಲಿಯೂ ವಿಧವೆಯರು ಬೆಂದು ಬೆಂದು ಸಾಯುತ್ತಿದ್ದಾರೆ. ಬೆಂಕಿಯ ರೂಪ ಮಾತ್ರ ಬೇರೆ- ಅದು ಚಿತಾನಲ , ಇದು ವ್ಯಥಾನಲ " ಹುಚ್ಚಿ ಹೆಂಡತಿಯನ್ನು ಅಟ್ಟದ ಮೇಲೆ ಬಂಧಿಸಿಟ್ಟು , ತನ್ನ ಏಕಮಾತ್ರ ಪುತ್ರನನ್ನು ಮನೆ ಪಾಥದವನಿಗೆ ಒಪ್ಪಿಸಿ , ತನ್ನ ಲಂಪಟಲೀಲೆಗೆ ಹೊರಡುವ ಶ್ರೀಮಂತನ ಚಿತ್ರ ಕಣ್ಣಿಗೆ ಕಟ್ಟುವಂತಿದೆ.
                      ಬಡರೋಗಿಗಳನ್ನು ಅಲಕ್ಷಿಸುವ ಸರಕಾರಿ ಆಸ್ಪತ್ರೆಯ ವರ್ಣನೆಯಲ್ಲಿ , ವೈದ್ಯ ವೃತ್ತಿಯಲ್ಲಿದ್ದ ಲೇಖಕ ಬಲಾಯಿಚಂದರ   ವೃತ್ತಿ ವಿಮರ್ಸೆ ತೀಕ್ಷ್ಣ ವಾಗಿದೆ.’ . ವಾಸನಾದಲ್ಲಿ ’ ದಲ್ಲಿ ಒಂದು ಕಲಾತ್ಮಕ  ಸಿನಿಮಾದ ಪಠಯ ನಿಚ್ಚಳವಾಗಿ ಕಾಣಿಸುತ್ತದೆ..’ ವಾಸನಾ ’ ಶಬ್ದಕ್ಕಿರುವ ಹಿಂದಿನ ಜನ್ಮದ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ , ಕಲ್ಪನೆ , ಬಯಕೆ , ಸುಗಂಧ , ದುರ್ಗಂಧ , ಜಾಡು - ಈ ಎಲ್ಲ ಅರ್ಥಗಳನ್ನೂ ಈ ಕಾದಂಬರಿ  ಧ್ವನಿಸುತ್ತದೆ. ಪಾ. ವೆಂ. ಆಚಾರ್ಯರ ಭಾಷಾಂತರ ಸ್ವತಂತ್ರ ಕೃತಿಯಂತೆ ಓದಿಸಿ ಕೊಂಡು ಹೋಗುತ್ತದೆ. ಮೂಲ ಕೃತಿ ಓದಲು ನನಗೆ ಬಂಗಾಳಿ ಭಾಷೆ ತಿಳಿದಿಲ್ಲ .
                                                             ೩
     ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದಿರುವ ’ ವಾಸನಾ  ದ ವಸ್ತು ಕನ್ನಡದ ಎರಡು ಕೃತಿಗಳನ್ನು ನೆನಪಿಗೆ ತರುತ್ತದೆ.. ಆಸ್ಪತ್ರೆಗಳ ದುಸ್ಥಿತಿಯ ಚಿತ್ರಣ ನೀಡುವ " ಶವದ ಮನೆ " ಚದುರಂಗರ  ಪ್ರಸಿದ್ದ ಕತೆಗಳಲ್ಲಿ ಒಂದು.’ ಸಾವಿನ ದಶಾವತಾರ{ 2017- ಕೆ. ಸತ್ಯನಾರಾಯಣ }  ಕಾದಂಬರಿಯ ನಿರೂಪಕ ಶವ ಸಂಸ್ಕಾರ ನಿರ್ವಹಣೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಇದೊಂದು ಹೊಸ ವಸ್ತು ಇರುವ,  ಕಾಡುವ ಕಾದಂಬರಿ
            ಈ ಮುನ್ನುಡಿ ಬರಿಯುವ ಅವಕಾಶ ನೀಡಿದ ಪ್ರೊ/ ರಾಥಾ ಕೃಷ್ಣ ಆಚಾರ್ಯರಿಗೆ ಅಭಿವಂದನೆಗಳು .

                                     ಮುರಳೀಧರ ಉಪಾಧ್ಯ ಹಿರಿಯಡಕ
                                        26- 3-2018
  

Dr. KISHORI NAYAK K - Trasforming Hierarchies Multicultural Women Writers { Mangalore University }

No automatic alt text available.
 dr kishori nayak muticultural women writers ,

ಶಿವರಾಮ ಕಾರಂತರ ’ಸರಸಮ್ಮನ ಸಮಾಧಿ " ಯ ಇಂಗ್ಲೀಷ್ ಭಾಷಾಂತರ -A Shrine for Sarasamma { Shivarama Karanth }

No automatic alt text available.
shivarama karanth a shrine for sarasamma

ಕವಯತ್ರಿ ನಾಗಶ್ರೀ ಶ್ರೀರಕ್ಷ ಅವರ ಬದುಕುವ ಛಲವನ್ನು ಬೆಂಬಲಿಸಿ

ಡಿ. ಬಿ. ಮಹೇಶ -- ಶಿಕ್ಷಣ ಸಚಿವರೇ, ನಾನು ಓದಿದ ಶಾಲೆಗೆ ದಯಟ್ಟು ಬನ್ನಿ -

ಎಸ್. ಆರ್. ವಿಜಯಶಂಕರ -| ಕವಿ ತಿರುಮಲೇಶರೊಡನೆ ಎರಡು ಸಂಜೆಗಳು

ಬಜೆಟ್ ವಿಶ್ಲೇಷಣೆ | ಅಹಿಂದದಾಚೆಯ ಮತಬುಟ್ಟಿಗೂ ಕೈಹಾಕಿ ಗಮನ ಸೆಳೆದ ಎಚ್‌ಡಿಕೆ

ರೇಣುಕಾರಾಧ್ಯ . ಎಚ್. ಎಸ್ - ಪಂಪನೇ ಹೇಳಿದ ಮಾತಿದು.. ಸೆಕ್ಸ್ ಇಲ್ಲದೇ ಇರಬಾರದು..

Wednesday, July 4, 2018

ಪ್ರಸನ್ನ - ಬೆಲ್ಲಕ್ಕೆ ಮುತ್ತುವ ಇರುವೆಗಳ ಹಾಗೆ!

ಎ. ಸೂರ್ಯಪ್ರಕಾಶ್ - ಆರ್ಥಿಕ ಅಭಿವೃದ್ಧಿಯ ಪ್ರವಾದಿಯ ಮರೆಯದಿರೋಣ! |

| ವಿಡಿಯೋ | ಖ್ಯಾತ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್‌

ರಾಶಿ ಕಣದ ಎದುರು ನಿಂತ ಜಯಲಕ್ಶ್ಮಿ ಪಾಟೀಲ್

ಚಂದ್ರಶೇಖರ ಕೆದ್ಲಾಯ - -ಅಡಿಗ ಶತಮಾನೋತ್ಸವ - ಸಮಾರೋಪ ಭಾಷಣ