ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Friday, November 30, 2018
ಹಿರಿಯಡ್ಕ ಗೋಪಾಲರಾಯರಿಗೆ ಸಚಿವೆ ಜಯಮಾಲರಿಂದ ರಾಜ್ಯೋತ್ಸವ ಪ್ರಶಸ್ತಿ ಹಸ್ತಾಂತರ
ಹಿರಿಯಡ್ಕ ಗೋಪಾಲರಾಯರಿಗೆ ಸಚಿವೆ ಜಯಮಾಲರಿಂದ ರಾಜ್ಯೋತ್ಸವ ಪ್ರಶಸ್ತಿ ಹಸ್ತಾಂತರ | Vartha Bharati- ವಾರ್ತಾ ಭಾರತಿ: ಉಡುಪಿ, ನ. 30: ಇನ್ನು 15 ದಿನಗಳಲ್ಲಿ (ಡಿ.15) ಬದುಕಿನ ಶತಕವನ್ನು ಪೂರ್ಣಗೊಳಿಸಲಿರುವ ಯಕ್ಷಗಾನ ರಂಗದ ‘ಮದ್ದಲೆ ಮಾಂತ್ರಿಕ’ ಹಿರಿಯಡ್ಕ ಗೋಪಾಲರಾಯರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಅವರು ಶುಕ್ರವಾರ ಹಿರಿಯಡ್ಕ ಸಮೀಪದ ಓಂತಿಬೆಟ್ಟಿನಲ್ಲಿರುವ ಅವರ ‘ಸೀತಾರಾಮ ನಿಲಯ’ದಲ್ಲಿ ಪ್ರದಾನ ಮಾಡಿದರು.
ಮಂಜುನಾಟ್ಃಆ ನಾಯಕ - ಗೀಜಗ ಗೂಡು ಕಟ್ಟುವ ಸೋಜಿಗ
ಗೀಜಗ ಗೂಡು ಕಟ್ಟುವ ಸೋಜಿಗ – ವಿಜಯವಾಣಿ: ಪರಿಸರದ ಅದ್ಭುತ ಇಂಜಿನಿಯರ್ ಎಂದೇ ಕರೆಯಲ್ಪಡುವ ಗೀಜಗ ಹಕ್ಕಿಯ ಗೂಡು ನೋಡಲು ಆಕರ್ಷಕ. ಹೀಗಾಗಿ, ಖಾಲಿ ಗೂಡನ್ನು ಹೊಲಗದ್ದೆಗಳ ಅಂಚಿನಿಂದ ಕಿತ್ತು ತಂದು ಮನೆಯ ಅಲಂಕಾರಕ್ಕೆ ಇಡುವುದಿದೆ. ಆದರೆ, ಗೂಡು ಖಾಲಿಯಾಗಿದ್ದರೂ ಅದು ಇನ್ನೊಂದು ಋತುವಿಗೆ ಸಹಾಯ ಮಾಡುವಂಥದ್ದೇ ಆಗಿರುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ಗೀಜಗದ ಗೂಡಿಗೆ ಕೈ ಹಾಕಬಾರದು, ಕಿತ್ತು ತರಬಾರದು.
| ಮಂಜ
ಯಾವ ಧಾಟಿಯಲ್ಲಿ ‘ಕರ್ನಾಟಕ ಮಾತೆ’ಗೆ ‘ಜಯ ಹೇ’ ಎನ್ನೋಣ...
ಯಾವ ಧಾಟಿಯಲ್ಲಿ ‘ಕರ್ನಾಟಕ ಮಾತೆ’ಗೆ ‘ಜಯ ಹೇ’ ಎನ್ನೋಣ... | Prajavani: ನಮ್ಮ ನಾಡಗೀತೆಯನ್ನು ಇಂಥದ್ದೇ ಸ್ವರ ಸಂಯೋಜನೆಯಲ್ಲಿ ಹಾಡಬೇಕು ಎನ್ನುವ ಅಧಿಕೃತ ನಿಯಮವೇ ಇಲ್ಲ. ಇದು ವಿಪರ್ಯಾಸ, ಆದರೂ ಸತ್ಯ. ಹೀಗಾಗಿಯೇ ನಾಡಗೀತೆಯನ್ನು ಯಾವ ಧಾಟಿಯಲ್ಲಿ ಬೇಕಾದರೂ ಹಾಡುವಂತಹ ಗೊಂದಲ ನಿರ್ಮಾಣವಾಗಿದೆ.
Thursday, November 29, 2018
Wednesday, November 28, 2018
Tuesday, November 27, 2018
Monday, November 26, 2018
ರಾಜಶೇಖರ. ಜಿ. ಮಠಪತಿ -........: ಗಾಂಧೀಜಿ ದೃಷ್ಟಿಯಲ್ಲಿ ರಾಮಾಯಣ
ಅಲೆಮಾರಿ ಜೋಳಿಗೆಯ ಭಾವಬಿಂದುಗಳು (A satchel of a Vagabond-a Kannada blog).........: ಗಾಂಧೀಜಿ ದೃಷ್ಟಿಯಲ್ಲಿ ರಾಮಾಯಣ: ನಾಯಿ ಸೆ ನ ನಾಯಿ ಲೇತ್ ಧೋಭೀ ಸೆ ನ ಧೋಭೀ ಲೇತ್ ಲೇಕೆ ಮಜೂರಿಯಾಂ ಯೆ ಜಾತಿ ಕೋ ನ ದಿಖಾಯಿಯೋ ಪ್ರಭು ಆಯೆ ಮೋರೆ ಘಾಟ್ ತೋ ಪಾರ್ ಮೈ...
ವಾರಣಾಸಿ, ದಿಲ್ಲಿ ವಿವಿಯ ಕನ್ನಡ ಅಧ್ಯಯನ ಪೀಠ ಪುನಾರಂಭಕ್ಕೆ ದಿಲ್ಲಿ ಕರ್ನಾಟಕ ಸಂಘ ಒತ್ತಾಯ
ವಾರಣಾಸಿ, ದಿಲ್ಲಿ ವಿವಿಯ ಕನ್ನಡ ಅಧ್ಯಯನ ಪೀಠ ಪುನಾರಂಭಕ್ಕೆ ದಿಲ್ಲಿ ಕರ್ನಾಟಕ ಸಂಘ ಒತ್ತಾಯ | Vartha Bharati- ವಾರ್ತಾ ಭಾರತಿ: ಮಂಗಳೂರು/ದಿಲ್ಲಿ, ನ.26: ವಾರಣಾಸಿ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಮತ್ತೆ ಕನ್ನಡ ಅಧ್ಯಯನ ಪೀಠ ಪುನರಾರಂಭಿಸಲು ದಿಲ್ಲಿ ಕರ್ನಾಟಕ ಸಂಘ ಒತ್ತಾಯಿಸಿದೆ. ನವದಿಲ್ಲಿಯಲ್ಲಿ ದಿಲ್ಲಿ ಕರ್ನಾಟಕ ಸಂಘವು ರವಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ್ ಹೊಸೂರು, ದಿಲ್ಲಿಯಲ್ಲಿದ್ದು ಹೊರನಾಡ ಕನ್ನಡಿಗರಾದ ನಮಗೆ ಕರ್ನಾಟಕದಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ.
ಸಿಬಂತಿ ಪದ್ಮನಾಭ - ಕೃತಿಚೌರ್ಯಕ್ಕೆ ಆತ್ಮಸಾಕ್ಷಿಯ ಕಾನೂನು
ಕೃತಿಚೌರ್ಯಕ್ಕೆ ಆತ್ಮಸಾಕ್ಷಿಯ ಕಾನೂನು? | Prajavani: ಅಂತರ್ಜಾಲವೆಂಬ ಬಟಾಬಯಲಲ್ಲಿ ಕದಿಯುವುದೂ ಸುಲಭ, ಸಿಕ್ಕಿಹಾಕಿಕೊಳ್ಳುವುದೂ ಸುಲಭ.
Sunday, November 25, 2018
ಡಾ / ಸುಜಾತಾ ಲಕ್ಷ್ಮೀಪುರ - ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ‘ಕನಕದಾಸರ ಕೃತಿಗಳ ಅಧ್ಯಯನ’
ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ‘ಕನಕದಾಸರ ಕೃತಿಗಳ ಅಧ್ಯಯನ’ | Vartha Bharati- ವಾರ್ತಾ ಭಾರತಿ: ಕನಕದಾಸರ ಕೃತಿಗಳ ಅಧ್ಯಯನವು ಬಹುಮುಖಿ ಆಯಾಮಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಕನ್ನಡ ಸಂಸ್ಕೃತಿಯ ಅಧ್ಯಯನದ ಆಕರಗಳನ್ನಾಗಿ ಕನಕದಾಸರ ಕೃತಿಗಳ ಅಧ್ಯಯನ. ಎರಡನೆಯದು ಕನಕದಾಸರ ಕೃತಿಗಳ ಅಧ್ಯಯನದ ಮೂಲಕ ಕನ್ನಡ ಸಂಸ್ಕೃತಿಯ ಆಕೃತಿಗಳನ್ನು ಕಟ್ಟಿಕೊಳ್ಳುವ ಬಗೆ. ಈ ನಿಟ್ಟಿನಲ್ಲಿ ಕನಕದಾಸರ ಕೃತಿಗಳನ್ನು ಒಂದು ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಮತ್ತು ನಿರಂತರವಾಗಿ ರೂಪುಗೊಳ್ಳುತ್ತಲೇ ಇರುವ ಸಾಹಿತ್ಯಕ- ಸಾಂಸ್ಕೃತಿಕ ಪ್ರಕ್ರಿಯೆಯ ಮುಖೇನವಾಗಿ ಚರ್ಚಿಸುವ ಅಗತ್ಯವಿದೆ.
Saturday, November 24, 2018
ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಇನ್ನಿಲ್ಲ
ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಇನ್ನಿಲ್ಲ | Prajavani: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಸ್ನೇಹಜೀವಿ, ಕಠಿಣ ಮಾತಿನ, ಮಲ್ಲಿಗೆ ಹೂವಿನ ಹೃದಯದ, ಡೈನಮಿಕ್ ಹಿರೊ ‘ಅಂಬಿ’
ಸ್ನೇಹಜೀವಿ, ಕಠಿಣ ಮಾತಿನ, ಮಲ್ಲಿಗೆ ಹೂವಿನ ಹೃದಯದ, ಡೈನಮಿಕ್ ಹಿರೊ ‘ಅಂಬಿ’ | Prajavani: ಮಾತು ಕಠಿಣವಾದರೂ ಮಲ್ಲಿಗೆ ಹೂವಿನಂತ ಹೃದಯವಂತ ಅಂಬರೀಷ್. ಕನ್ನಡ ಜನರ ಮನ ಗೆದ್ದ ವ್ಯಕ್ತಿ, ವಿಶೇಷವಾಗಿ ಮಂಡ್ಯ, ಮೈಸೂರು ಜನರ ಮನೆ ಮಗನಾಗಿದ್ದ ಗೆಳೆಯ. ಅಂಬರೀಷ್‌ಗೆ ಅಂಬರೀಷ್‌ಗೆ ಅವರೇ ಸಾಟಿ’– ಶಾಸಕ ಬಸವರಾಜ ಬೊಮ್ಮಾಯಿ.
ನರೇಂದ್ರ ಪೈ - ರಾಜೂ ಹೆಗಡೆಯವರ ಕಥಾಜಗತ್ತು
ಟಿಪ್ಪಣಿಪುಸ್ತಕ: ರಾಜೂ ಹೆಗಡೆಯವರ ಕಥಾಜಗತ್ತು: "Reading, Literature, Books, Language, Kannada, Englis
Friday, November 23, 2018
ಡಿ.1, 2ರಂದು ಮಂಗಳೂರಿನಲ್ಲಿ ಜನ ನುಡಿ ಸಮ್ಮೇಳನ
ಡಿ.1, 2ರಂದು ಮಂಗಳೂರಿನಲ್ಲಿ ಜನ ನುಡಿ ಸಮ್ಮೇಳನ | Prajavani: ಸಮಾನ ಮನಸ್ಕರು ಸೇರಿ ಈ ಬಾರಿಯ ಜನ ನುಡಿ ಸಮ್ಮೇಳನವನ್ನು ಡಿ.1 ಮತ್ತು 2ರಂದು ಮಂಗಳೂರಿನ ನಂತೂ ರಿನಲ್ಲಿ ಆಯೋಜಿಸಿದ್ದಾರೆ. ಇದಕ್ಕೆ ಸಾಂಸ್ಕೃತಿಕ ಸಂಘಟನೆಯಾದ ‘ಅಭಿ ಮತ ಮಂಗಳೂರು’ ಸಹಯೋಗ ನೀಡುತ್ತಿದೆ.
ಉತ್ತರ ಕನ್ನಡ: 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಝಮೀರುಲ್ಲಾ ಶರೀಫ್
ಉತ್ತರ ಕನ್ನಡ: 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಝಮೀರುಲ್ಲಾ ಶರೀಫ್ | Prajavani: ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಝಮೀರುಲ್ಲಾ ಶರೀಫ್ ಆಯ್ಕೆಯಾಗಿದ್ದಾರೆ
Thursday, November 22, 2018
ಪ್ರಸಿದ್ಧ ಕವಯಿತ್ರಿ ಮೀನಾ ಅಲೆಕ್ಸಾಂಡರ್ ನಿಧನ
ಪ್ರಸಿದ್ಧ ಕವಯಿತ್ರಿ ಮೀನಾ ಅಲೆಕ್ಸಾಂಡರ್ ನಿಧನ | Vartha Bharati- ವಾರ್ತಾ ಭಾರತಿ: ಲಕ್ನೊ, ನ.22: ಲೇಖಕಿ, ಸಾಹಿತಿ ಹಾಗೂ ವಿದ್ವಾಂಸರಾಗಿದ್ದ ಮೀನಾ ಅಲೆಕ್ಸಾಂಡರ್ (67 ವರ್ಷ) ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ. ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದ್ದ ಮೀನಾ ಕೇರಳ ಹಾಗೂ ಸುಡಾನ್‌ನಲ್ಲಿ ಬೆಳೆದಿದ್ದರು. ಅಮೆರಿಕದ ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನ ಇಂಗ್ಲಿಷ್ ಮತ್ತು ಮಹಿಳಾ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಅಮೆರಿಕನ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ 2009ರಲ್ಲಿ ಸೌತ್ ಏಶ್ಯನ್ ಲಿಟರರಿ
Wednesday, November 21, 2018
ಎಸ್. ಆರ್. ವಿಯಯಶಂಕರ -- - ಕಮಲಾ ಹಂಪನಾ ಅವರ ಸಂಶೋಧನಾ ನಿಲುವುಗಳು
Kamala Hampana: kamala hampana and her books - ಕಮಲಾ ಹಂಪನಾ ಅವರ ಸಂಶೋಧನಾ ನಿಲುವುಗಳು | Vijaya Karnataka: ಕಮಲಾ ಹಂಪನಾ ಅವರ ಚೈತನ್ಯ ಹಾಗೂ ಸಾಹಿತ್ಯಾಸಕ್ತಿ ಹಲವು ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ್ದರೂ ಅವರ ಸಂಶೋಧನಾ ಬರಹಗಳು, ವೈಚಾರಿಕ ಹಾಗೂ ವಿಮರ್ಶಾ ಪ್ರಬಂಧಗಳು ಹಾಗೂ ವಡ್ಡಾರಾಧನೆ ಸೇರಿದಂತೆ ಸಂಪಾದಿಸಿದ ಹಲವಾರು ಕೃತಿಗಳು ಮೊದಲಿಗೆ ಗಮನ ಸೆಳೆಯುತ್ತವೆ. ಸಂಶೋಧನಾ ಕ್ಷೇತ್ರದಲ್ಲೂ ಅವರಿಗೆ ಜೈನ ಸಾಹಿತ್ಯ- ಸಂಸ್ಕೃತಿ- ವಿಚಾರಗಳ ಕುರಿತಾಗಿ ಹೆಚ್ಚಿನ ಆಸಕ್ತಿ.
ಮಿರ್ಜಿ ಅಣ್ಣಾರಾಯರು-ಗತಕಾಲದ ಒಂದು ಮಾದರಿ
ಮಿರ್ಜಿ ಅಣ್ಣಾರಾಯರು-ಗತಕಾಲದ ಒಂದು ಮಾದರಿ | Vartha Bharati- ವಾರ್ತಾ ಭಾರತಿ: ಖಾಸಗಿ ಬದುಕು ಮತ್ತು ಸಾಹಿತ್ಯಗಳೆರಡರಲ್ಲೂ ಆದರ್ಶಪ್ರಾಯರಾಗಿದ್ದ ಮಿರ್ಜಿ ಅಣ್ಣಾರಾಯರ ಜೀವನಗಾಥೆ ಸ್ಮರಣಯೋಗ್ಯವಾದುದು. ಕನ್ನಡ ಸಂಸ್ಕೃತಿಯ ಗತಕಾಲದ ಒಂದು ಮಾದರಿ ಎನ್ನಬಹುದಾದ ಅಣ್ಣಾರಾಯರ ಜನ್ಮ ಶತಾಬ್ದಿ ವರ್ಷವಿದು. ಅವರ ಜನ್ಮ ಶತಾಬ್ದಿ ಆಚರಣೆಯ ಸುದ್ದಿಸೂರು ಏನೂ ಕೇಳಿಬರುತ್ತಿಲ್ಲ. 1935ರಿಂದ 1975ರವರೆಗೆ ಅವರು ಅವಿಚ್ಛಿನ್ನ ಸಂಬಂಧ ಹೊಂದಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗಾಗಲೀ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಲೀ ಮಿರ್ಜಿಯವರ ನೆನಪಾದಂತಿಲ್ಲ.
Tuesday, November 20, 2018
ಎಸ್. ಆರ್. ವಿಜಯಶಂಕರ್ - 'ಶಿವನ ಡಂಗುರ'ದ ಇಂಗ್ಲಿಷ್ ಅನುವಾದ: ಜಾಗತಿಕರಣಕ್ಕೊಂದು ಪ್ರತಿಕ್ರಿಯೆ
Columns News: shiva's drum: a response to globalization - 'ಶಿವನ ಡಂಗುರ'ದ ಇಂಗ್ಲಿಷ್ ಅನುವಾದ: ಜಾಗತಿಕರಣಕ್ಕೊಂದು ಪ್ರತಿಕ್ರಿಯೆ | Vijaya Karnataka: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾಚಂದ್ರಶೇಖರ ಕಂಬಾರರ ಕಾದಂಬರಿ 'ಶಿವನ ಡಂಗುರ' ಇದೀಗ ಇಂಗ್ಲಿಷಿಗೆ ಅನುವಾದಗೊಂಡಿದೆ..
Monday, November 19, 2018
ಇಂದಿರಾ ಗಾಂಧಿ ಶಾಂತಿ ಪುರಸ್ಕಾರಕ್ಕೆ ಸಿಎಸ್‌ಇ ಆಯ್ಕೆ
ಇಂದಿರಾ ಗಾಂಧಿ ಶಾಂತಿ ಪುರಸ್ಕಾರಕ್ಕೆ ಸಿಎಸ್‌ಇ ಆಯ್ಕೆ | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ,ನ.19: ದಿಲ್ಲಿಯ ಪರಿಸರ ಚಿಂತನ ಚಾವಡಿ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್(ಸಿಎಸ್‌ಇ) ಪರಿಸರ ಶಿಕ್ಷಣ ಮತ್ತು ರಕ್ಷಣೆಯಲ್ಲಿ ತನ್ನ ಕಾರ್ಯಗಳಿಗಾಗಿ ಈ ವರ್ಷದ ಇಂದಿರಾ ಗಾಂಧಿ ಶಾಂತಿ,ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಪುರಸ್ಕಾರಕ್ಕೆ ಪಾತ್ರವಾಗಿದೆ. ಪರಿಸರ ನಾಶವನ್ನು ತಡೆಯುವಲ್ಲಿ ತನ್ನ ಕಾರ್ಯಗಳಿಗಾಗಿ ಮತ್ತು ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸರಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳ ಮೇಲೆ ಪ್ರಭಾವ
ಅಸಹಿಷ್ಣುತೆಯ ಕೆಟ್ಟ ಪ್ರದರ್ಶನ ಆತಂಕಕಾರಿ ಬೆಳವಣಿಗೆ
ಅಸಹಿಷ್ಣುತೆಯ ಕೆಟ್ಟ ಪ್ರದರ್ಶನ ಆತಂಕಕಾರಿ ಬೆಳವಣಿಗೆ | Prajavani: ಸಂಗೀತಗಾರರನ್ನೂ ಸಮಾಜವಿರೋಧಿ ಎಂಬಂತೆ ಬಣ್ಣಿಸುವುದು, ಸಮಕಾಲೀನ ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಅಸಹಿಷ್ಣುತೆಯ ಪ್ರತೀಕ
Sunday, November 18, 2018
ಆಳ್ವಾಸ್ ನುಡಿಸಿರಿಯು ಕನ್ನಡಿಗರ ವಿವೇಕವನ್ನು ಪರಿಚಯಿಸಿದೆ: ಡಾ. ಮಲ್ಲಿಕಾ.ಎಸ್.ಘಂಟಿ { ಆಳ್ವಾಸ್ ನುಡಿಸಿರಿ 2018 }
ಆಳ್ವಾಸ್ ನುಡಿಸಿರಿಯು ಕನ್ನಡಿಗರ ವಿವೇಕವನ್ನು ಪರಿಚಯಿಸಿದೆ: ಡಾ. ಮಲ್ಲಿಕಾ.ಎಸ್.ಘಂಟಿ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 18: ರಾಮಾಯಣದಿಂದ ಹಿಡಿದು ಜಾನಪದ ಜಗತ್ತಿನ ವರೆಗೆ ಸಾಹಿತ್ಯವನ್ನು ಪರಿಚಯಿಸಿದ ಆಳ್ವಾಸ್ ನುಡಿಸಿರಿ ಕನ್ನಡ ಸಾಹಿತ್ಯವನ್ನು ಯಾವ ರೀತಿಯಾಗಿ ನೋಡಬೇಕು ಎಂಬುದನ್ನು ಪುರಾವೆ ಸಹಿತವಾಗಿ ಕನ್ನಡ ನಾಡಿನ ಜನತೆಯ ಮಂದೆ ಇರಿಸಿದೆ. ನುಡಿಸಿರಿಗೆ ಬಂದು ಕನ್ನಡ ನಾಡಿನ ಜನರು ವಿವೇಕವಂತರಾಗಿರುದಲ್ಲದೆ ಕನ್ನಡಿಗರ ವಿವೇಕವನ್ನು ಆಳ್ವಾಸ್ ನುಡಿಸಿರಿಯು ಪರಿಚಯಿಸಿದೆ ಎಂದು ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ. ಎಸ್. ಘಂಟಿ ಅಭಿಪ್ರಾಯಪಟ್ಟರು. ವಿದ್ಯಾಗಿರಿಯಲ್ಲಿ ಸತತ
ಸಮಕಾಲೀನ ಸಂದರ್ಭದಲ್ಲಿ ಮಹಿಳಾ ಬಿಕ್ಕಟ್ಟುಗಳು : ಡಾ.ಎಂ.ಉಷಾ {ಆಳ್ವಾಸ್ ನುಡಿಸಿರಿ -2018 }
ಸಮಕಾಲೀನ ಸಂದರ್ಭದಲ್ಲಿ ಮಹಿಳಾ ಬಿಕ್ಕಟ್ಟುಗಳು : ಡಾ.ಎಂ.ಉಷಾ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, (ರತ್ನಾಕರವರ್ಣಿ ವೇದಿಕೆ) ನ. 18 : ಸಮಕಾಲೀನ ಸಂದರ್ಭದಲ್ಲಿಯೂ ಕೂಡಾ ಮಹಿಳೆಯರ ಬಗ್ಗೆ ಹಲವು ವಿಚಾರಗಳ ಚರ್ಚೆಗಳು ನಡೆಯುತ್ತವೆ. ಮೀಟೂ, ಶಬರಿಮಲೆ ಪ್ರವೇಶ, ಅನೈತಿಕ ಸಂಬಂಧ, ಸ್ಯಾನಿಟರ್ ಪ್ಯಾಡ್, ತ್ರಿವಳಿ ತಲಾಕ್‍ನ ಮುಂತಾದ ವಿಷಯಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತನಾಡುವ ಮೂಲಕ ಮಹಿಳೆಯರ ವಿಷಯಗಳನ್ನು ಸರಕುಗಳಾಗಿ ನೋಡುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ ಎಂದು ಡಾ.ಎಂ. ಉಷಾ ಆತಂಕ ವ್ಯಕ್ತಪಡಿಸಿದರು.
'ಸಾಮಾಜಿಕ ಜಾಲತಾಣ' ವಿಶೇಷೋಪನ್ಯಾಸ: ರೋಹಿತ್ ಚಕ್ರತೀರ್ಥ { ಆಳ್ವಾಸ್ ನುಡಿಸಿರಿ 2018 }
'ಸಾಮಾಜಿಕ ಜಾಲತಾಣ' ವಿಶೇಷೋಪನ್ಯಾಸ: ರೋಹಿತ್ ಚಕ್ರತೀರ್ಥ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 18: ಸಾಮಾಜಿಕ ಜಾಲತಾಣವು ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ. ನಮ್ಮ ಸಮಾಜದಲ್ಲಿ ಹುಟ್ಟಿಕೊಂಡ ಹೊಸಚಿಂತನೆಗಳನ್ನು ವ್ಯಕ್ತಪಡಿಸಲು ಇದು ಒಳ್ಳೆಯ ವೇದಿಕೆ ಎಂದು ಲೇಖಕ ರೋಹಿತ್ ಚಕ್ರತೀರ್ಥ ಹೇಳಿದರು. ಆಳ್ವಾಸ್ ನುಡಿಸಿರಿಯ ಮೂರನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ `ಸಾಮಾಜಿಕ ಜಾಲತಾಣ' ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು.
ವ್ಯಕ್ತಿತ್ವ, ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಅಪಾಯಕಾರಿ - ಪ್ರೊ.ಜಿ.ಬಿ.ಶಿವರಾಜು {ಆಳ್ವಾಸ್ ನುಡಿಸಿರಿ 2018 }
ವ್ಯಕ್ತಿತ್ವ, ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಅಪಾಯಕಾರಿ - ಪ್ರೊ.ಜಿ.ಬಿ.ಶಿವರಾಜು | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 17: ವ್ಯಕ್ತಿತ್ವ ನಿರ್ಮಾಣ ಹಾಗೂ ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಬಹಳ ಅಪಾಯಕಾರಿಯೆಂದು ಪ್ರೊ.ಜಿ.ಬಿ.ಶಿವರಾಜು ಅಭಿಪ್ರಾಯ ಪಟ್ಟರು. ವಿದ್ಯಾಗಿರಿಯಲ್ಲಿ ನಡೆಯುತ್ತಿರುವ 15ನೇ ಸಾಲಿನ ನುಡಿಸಿರಿಯಲ್ಲಿ ಸಮಾಜ ಅಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿಕೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಗಾಂಧಿ ಸ್ಮಾರಕ ನಿಧಿ ಬೆಂಗಳೂರುನ ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ವ್ಯಕ್ತಿಕೇಂದ್ರ ಅಭಿವೃದ್ಧಿ ಸಾಧ್ಯ, ಅದಕ್ಕೆ ಜ್ವಲಂತ ಉದಾಹರಣೆ ನುಡಿಸಿರಿಯ
ಕೀರ್ತನೆಗಳ ಮೂಲಧಾತು ಇರುವುದು ಸಂಭೋದನೆಯಲ್ಲಿ: ಡಾ. ಎಚ್.ಎನ್ ಮುರುಳೀಧರ { ಆಳ್ವಾಸ್ ನುಡಿಸಿರಿ 2018 }
ಕೀರ್ತನೆಗಳ ಮೂಲಧಾತು ಇರುವುದು ಸಂಭೋದನೆಯಲ್ಲಿ: ಡಾ. ಎಚ್.ಎನ್ ಮುರುಳೀಧರ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ.17: ದಾಸರು ಅಭಿವ್ಯಕ್ತಿಯಲ್ಲಿ ಬಹುರೂಪತ್ವವನ್ನು ಅನುಸರಿಸಿದ್ದಲ್ಲದೆ ಏಕರೂಪದ ಸೈದ್ಧಾಂತಿಕತೆಯ ಅಸಮ್ಮತಿಯನ್ನು ತಮ್ಮ ಕೀರ್ತನೆಗಳ ಮೂಲಕ ತೋರ್ಪಡಿಸುತ್ತಾ ಹೋದರು. ಯಾವ ಪಠ್ಯ ಸಂಬೋಧನೆ ಮಾಡುವುದಿಲ್ಲವೋ ಅದು ಸ್ವೀಕರಿಸುವ ಸಮುದಾಯವನ್ನು ಮಾನ್ಯ ಮಾಡುವುದಿಲ್ಲ, ಕೀರ್ತನೆಗಳ ಮೂಲಧಾತು ಇರುವುದೇ ಸಂಬೋಧನೆಯಲ್ಲಿ ಎಂದು ಸಂಶೋಧಕ ಡಾ. ಎಚ್. ಎನ್ ಮುರುಳೀಧರ್ ತಿಳಿಸಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನದ ಮೊದಲ ಗೋಷ್ಠಿ ಕರ್ನಾಟಕ ದರ್ಶನ, ಅಧ್ಯಾತ್ಮ
ಸಮಾಜದ ಕತ್ತಲನ್ನು ಕಳೆದು ಬೆಳಕು ಮೂಡಿಸಿ: ಡಾ ಶ್ರೀನಿವಾಸಮೂರ್ತಿ { ಆಳ್ವಾಸ್ ನುಡಿಸಿರಿ -2018 }
ಸಮಾಜದ ಕತ್ತಲನ್ನು ಕಳೆದು ಬೆಳಕು ಮೂಡಿಸಿ: ಡಾ ಶ್ರೀನಿವಾಸಮೂರ್ತಿ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 17: ಸ್ವಾತಂತ್ರ್ಯ ಹೋರಾಟ, ಕನ್ನಡಪರ ಹೋರಾಟದಂತಹ ಉತ್ತಮ ಸಮಾಜಮುಖಿ ಚಿಂತನೆಯನ್ನು ಹೊಂದಿರುವವರು ಎಂದಿಗೂ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಚಿಂತನೆಯನ್ನು ಕೂಡ ಮಾಡಿಕೊಳ್ಳುದಿಲ್ಲ. ಅದರ ಬದಲು ಸಮಾಜ ಚಿಂತನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿಡುತ್ತಾರೆ ಎಂದು ಸಾಹಿತಿ ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ಹೇಳಿದರು.
Saturday, November 17, 2018
ಸೂಫಿ ಪರಂಪರೆ ಶಾಂತಿ ಪ್ರಿಯರಾದರೆ, ಶರಣರು ದಯೆಯೇ ಧರ್ಮದ ಮೂಲವೆಂದು ನಂಬಿದವರು: ರಂಜಾನ್ ದರ್ಗಾ { ಆಳ್ವಾಸ್ ನುಡಿಸಿರಿ -2018 }
ಸೂಫಿ ಪರಂಪರೆ ಶಾಂತಿ ಪ್ರಿಯರಾದರೆ, ಶರಣರು ದಯೆಯೇ ಧರ್ಮದ ಮೂಲವೆಂದು ನಂಬಿದವರು: ರಂಜಾನ್ ದರ್ಗಾ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ.17: ಕರ್ನಾಟಕದ ಸೂಫಿ ಸಂತರ ಗ್ರಂಥಗಳು ಇಂಗ್ಲಿಷ್‌ಗೆ ಅನುವಾದ ಗೊಂಡರೆ, ಪ್ರಪಂಚದಲ್ಲಿ ಅದಕ್ಕಿಂತ ದೊಡ್ಡ ಗ್ರಂಥ ಇನ್ನೊಂದು ಇರಲಾರದು ಎಂದು ಹಿರಿಯ ಸಾಹಿತಿ, ಚಿಂತಕ, ವಿಮರ್ಶಕ ರಂಜಾನ್ ದರ್ಗಾ ಅಭಿಪ್ರಾಯಿಸಿದ್ದಾರೆ. ‘ಆಳ್ವಾಸ್ ಪ್ರತಿಷ್ಠಾನ ಮೂಡುಬಿದಿರೆಯ ವಿದ್ಯಾಗಿರಿಯ ರತ್ನಾಕರಕರ್ಣಿ ವೇದಿಕೆ , ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಆಯೋಜಿಸಿರುವ ಆಳ್ವಾಸ್ ನುಡಿಸಿರಿ 2018ರ ಆಧ್ಯಾತ್ಮ ಪರಂಪರೆಯಲ್ಲಿ ಸೂಫಿ’ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕನ್ನಡ ಭಾಷೆಯ ಹುಟ್ಟು - ಪುನರ್ ಪರಿಶೀಲನೆ ಅಗತ್ಯ: ಡಾ| ಷ. ಶೆಟ್ಟರ್ { ಆಳ್ವಾಸ್ ನುಡಿಸಿರಿ 2018 }
ಕನ್ನಡ ಭಾಷೆಯ ಹುಟ್ಟು - ಪುನರ್ ಪರಿಶೀಲನೆ ಅಗತ್ಯ: ಡಾ| ಷ. ಶೆಟ್ಟರ್ | Udayavani - ಉದಯವಾಣಿ: ಮೂಡಬಿದಿರೆ, (ಆಳ್ವಾಸ್ ನುಡಿಸಿರಿ): ಕನ್ನಡ ಭಾಷೆ ಹಲ್ಮಿಡಿ ಶಾಸನದಿಂದ ಉಗಮವಾಗಿದೆ ಎನ್ನುವುದು ಅರ್ಧ ಸತ್ಯ; ಈ ಬಗ್ಗೆ ಮರು ಪರಿಶೀಲಿಸುವ ಸಂದರ್ಭ ಬಂದಿದೆ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ| ಷ. ಶೆಟ್ಟರ್ ಹೇಳಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಆಳ್ವಾಸ್ ನುಡಿಸಿರಿ-2018 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆಯ ಉಗಮದ ಬಗ್ಗೆ 850 ವರ್ಷ ಚರ್ಚೆ
Friday, November 16, 2018
{ ಆಳ್ವಾಸ್ ನುಡಿಸಿರಿ 2018 } ಇಂದು ನಾವು ಬಹುತ್ವ ಬಿಟ್ಟು ಏಕತ್ವ ಕಾಣಲು ಹೊರಟಿದ್ದೇವೆ; ಷ.ಶೆಟ್ಟರ್
ಇಂದು ನಾವು ಬಹುತ್ವ ಬಿಟ್ಟು ಏಕತ್ವ ಕಾಣಲು ಹೊರಟಿದ್ದೇವೆ; ಷ.ಶೆಟ್ಟರ್ | Udayavani - ಉದಯವಾಣಿ: ಮೂಡುಬಿದಿರೆ:ಒಂದು ಕನ್ನಡ ಭಾಷೆಯಲ್ಲಿ ಏಕತೆ ಮಾತ್ರವಿಲ್ಲ, ಅದು ನಮ್ಮ ಬಹುತ್ವದ ಭಾಷೆ, ನಮ್ಮ ಸಂಸ್ಕೃತಿಯನ್ನು ಬಿಂಬಿಸಿದೆ. ಒಂದು ಕನ್ನಡ ಬಹುತ್ವದ ಕನ್ನಡ. ನಾವೆಲ್ಲ ಮಾತನಾಡುವ ಭಾಷೆ ಕನ್ನಡ ಆದರೆ ಆಯಾ ಪ್ರಾಂತ್ಯಕ್ಕೆ, ಪ್ರದೇಶಕ್ಕೆ ಭಿನ್ನ, ಭಿನ್ನವಾಗಿದೆ. ಹೀಗೆ ಕನ್ನಡ ಭಾಷೆ ಭಿನ್ನ, ಭಿನ್ನ ಪ್ರದೇಶದ ಒಂದು ಕನ್ನಡವಾಗಿ ಬಹುತ್ವದಲ್ಲಿ ಅನಾವರಣಗೊಂಡಿದೆ ಎಂದು ಖ್ಯಾತ ಸಂಶೋಧಕ ಡಾ.ಷ.ಶೆಟ್ಟರ್ ಹೇಳಿದರು. ಅವರು ಶುಕ್ರವಾರ ಮೂಡುಬಿದಿರೆ ವಿದ್ಯಾಗಿರಿಯ ಶ್ರೀಮತಿ ಸುಂದರಿ
ಮೈಸೂರು ವಿ.ವಿ ಕುಲಪತಿಯಾಗಿ ಪ್ರೊ.ಹೇಮಂತಕುಮಾರ್ ನೇಮಕ
ಮೈಸೂರು ವಿ.ವಿ ಕುಲಪತಿಯಾಗಿ ಪ್ರೊ.ಹೇಮಂತಕುಮಾರ್ ನೇಮಕ | Prajavani: ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಹೇಮಂತಕುಮಾರ್ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು
ಇನ್ನೊಬ್ಬರು ನಡೆದ ಹಾದಿಯಲ್ಲಿ ನಡೆಯುವ ಬದಲು ನಿಮ್ಮ ಹಾದಿಯಲ್ಲಿ ನಡೆಯಿರಿ: ರಮೇಶ್ ಅರವಿಂದ್
ಇನ್ನೊಬ್ಬರು ನಡೆದ ಹಾದಿಯಲ್ಲಿ ನಡೆಯುವ ಬದಲು ನಿಮ್ಮ ಹಾದಿಯಲ್ಲಿ ನಡೆಯಿರಿ: ರಮೇಶ್ ಅರವಿಂದ್ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 16: ಏನೇ ಮಾತನಾಡಿದರೂ ನಾವು ನಂಬಿಕೆಯಿಟ್ಟು, ಹೃದಯದಿಂದ ಮಾತನಾಡಬೇಕು ನಮ್ಮ ಕೊರತೆ ನಮಗೆ ಕಾಣದ ಈ ಕಾಲ ಘಟ್ಟದಲ್ಲಿ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಬೇಕು, ಬೇರೆಯವರ ಹಾದಿಯಲ್ಲಿ ನಡೆವ ಬದಲು ನಿಮ್ಮ ಹಾದಿಯಲ್ಲಿ ನೀವು ನಡೆದರೆ ಉತ್ತಮ ಎಂದು ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದರು. ಅವರು ಆಳ್ವಾಸ್ ನುಡಿಸಿರಿಯ ಮೊದಲ ದಿನ ನಡೆದ ನನ್ನ ಕಥೆ- ನಿಮ್ಮ ಜೊತೆ ಕಾರ್ಯಕ್ರಮದಲ್ಲಿ ತಮ್ಮ ಜೀವನಾನುಭವವನ್ನು ಹಂಚಿಕೊಂಡರು. ಈ ಜಗತ್ತಿನಲ್ಲಿ
ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಶ್ರೀ ಜಗದಾತ್ಮಾನಂದ ಸ್ವಾಮಿ ವಿಧಿವಶ
ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಶ್ರೀ ಜಗದಾತ್ಮಾನಂದ ಸ್ವಾಮಿ ವಿಧಿವಶ | Vartha Bharati- ವಾರ್ತಾ ಭಾರತಿ: ಮಡಿಕೇರಿ, ನ.15 : ಬದುಕಲು ಕಲಿಯಿರಿ ಪುಸ್ತಕದ ಖ್ಯಾತಿಯ ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕ ಶ್ರೀಜಗದಾತ್ಮನಂದ ಸ್ವಾಮೀಜಿ (89) ವಿಧಿವಶರಾಗಿದ್ದಾರೆ. ನ್ಯುಮೋನಿಯ ಖಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿ ಕಳೆದ 1 ತಿಂಗಳಿನಿಂದ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಾಮೀಜಿ ಬರೆದಿರುವ 'ಬದುಕಲು ಕಲಿಯಿರಿ' ಪುಸ್ತಕ 9 ಭಾಷೆಗಳಲ್ಲಿ ಅನುವಾದಗೊಂಡು ವಿಶ್ವ ವಿಖ್ಯಾತಗೊಂಡಿತ್ತು. ಇಂದು ರಾತ್ರಿ 7.30ಕ್ಕೆ ಸ್ವಾಮೀಜಿ ವಿಧಿ
ಆಳ್ವಾಸ್ ನುಡಿಸಿರಿ 2018 - ಕನ್ನಡ ಪದ ಸೃಷ್ಟಿ- ಸ್ವೀಕರಣ, ಬಳಕೆ- ಪ್ರೊ.ಕೃಷ್ಣೇಗೌಡ
ಕನ್ನಡ ಪದ ಸೃಷ್ಟಿ- ಸ್ವೀಕರಣ, ಬಳಕೆ- ಪ್ರೊ.ಕೃಷ್ಣೇಗೌಡ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 16: ಭಾಷೆಯನ್ನು ಬಳಸದೇ ಇದ್ದರೆ ಭಾಷೆ ಬೆಳೆಯಲು ಸಾಧ್ಯವಿಲ್ಲ. ಶಿಷ್ಠ ಜ್ಞಾನರಿಗೆ ಭಾಷೆಯ ಬಳಕೆಯೂ ಇಲ್ಲ, ಭಾಷಾಜ್ಞಾನದ ಬಗ್ಗೆ ಅರಿವು ತುಂಬಾ ಕಡಿಮೆ. ಇವರಿಗಿಂತ ಹೆಚ್ಚು ಗ್ರಾಮೀಣ ಪ್ರದೇಶದ ಜನರು ಪದಗಳನ್ನು ಮಾತಿನ ಮೂಲಕವೇ ಸೃಷ್ಠಿಸುತ್ತಾರೆ. ಈ ಜನರ ಭಾಷೆಗಳಲ್ಲಿ ಭಾವನೆಗಳಿರುತ್ತವೆ. ಆದ್ದರಿಂದ ಇವರು ಸೃಷ್ಟಿಸುವ ಪದಗಳು ವೇಗವಾಗಿ ವಿಸ್ತರವಾಗುತ್ತದೆ ಎಂದು ಸಾಹಿತಿ ಪ್ರೊ.ಎಂ. ಕೃಷ್ಣೇ ಗೌಡ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ
ಆಳ್ವಾಸ್ ನುಡಿಸಿರಿ 2018 - ಹಲ್ಮಿಡಿ ಶಾಸನದಿಂದಲೇ ಕನ್ನಡ ಭಾಷೆ ಉಗಮ ಎನ್ನುವುದು ಅರ್ಧಸತ್ಯ: ಡಾ.ಷ. ಶೆಟ್ಟರ್
ಹಲ್ಮಿಡಿ ಶಾಸನದಿಂದಲೇ ಕನ್ನಡ ಭಾಷೆ ಉಗಮ ಎನ್ನುವುದು ಅರ್ಧಸತ್ಯ: ಡಾ.ಷ. ಶೆಟ್ಟರ್ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ.16: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿತ 15ನೆ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗೆ ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿಂದು ಬೆಳಗ್ಗೆ ಅದ್ದೂರಿ ಚಾಲನೆ ಸಿಕ್ಕಿತು. ‘ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು’ ಎಂಬ ಪರಿಕಲ್ಪನೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನವನ್ನು ಖ್ಯಾತ ಸಂಶೋಧಕ ಡಾ.ಷ.ಶೆಟ್ಟರ್
Thursday, November 15, 2018
ಮಕ್ಕಳೇ ಮುಂದಿನ ಆಸ್ತಿಯಾಗಲಿ : ಎ.ಕೆ ರಾಮೇಶ್ವರ { ಆಳ್ವಾಸ್ ನುಡಿಸಿರಿ 2018 |
ಮಕ್ಕಳೇ ಮುಂದಿನ ಆಸ್ತಿಯಾಗಲಿ : ಎ.ಕೆ ರಾಮೇಶ್ವರ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ.15: ವಿದ್ಯಾರ್ಥಿಸಿರಿಯಲ್ಲಿ ನೃತ್ಯ, ಸಂಗೀತ, ಕವನವನ್ನು ಪ್ರಸ್ತುತಪಡಿಸಿದ್ದು, ಅದು ಮಕ್ಕಳಲ್ಲಿ ಕೊನೆಯವರೆಗೂ ಮುಂದುವರೆಸಿಕೊಂಡು ಹೋಗಬೇಕು.ಮಕ್ಕಳು ಮುಂದೆ ತಮ್ಮ ವೃತ್ತಿ ಜೀವನದಲ್ಲಿ ಆಸ್ತಿ ಮಾಡುವುದರ ಬದಲು, ಮಕ್ಕಳೇ ಮುಂದಿನ ಆಸ್ತಿಯಾಗಬೇಕು, ವಿದ್ಯಾರ್ಥಿಸಿರಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದನ್ನು ನೋಡಿದಾಗ ಡಾ.ಮೋಹನ್ ಆಳ್ವರಿಗೆ ಮಕ್ಕಳ ಮೇಲೆ ಇರುವಂತಹ ವಿಶ್ವಾಸ ಹಾಗೂ ಪ್ರೀತಿ ಅನನ್ಯವಾದುದು ಎಂದು ವಿದ್ಯಾರ್ಥಿಸಿರಿ
Tuesday, November 13, 2018
ಮಂಡ್ಯ ರಮೇಶ್ - - ಬಾಲ್ಯ ಉಳಿಯಲಿ, ಬದುಕು ಬೆಳಗಲಿ
Childrens Day 2018: lets save childhood - ಬಾಲ್ಯ ಉಳಿಯಲಿ, ಬದುಕು ಬೆಳಗಲಿ | Vijaya Karnataka: ವಾಸ್ತವವಾಗಿ ಎಲ್ಲ ಮಕ್ಕಳು ಮೂಲತಃ ಬುದ್ಧಿವಂತರೇ ಆಗಿರುತ್ತಾರೆ. ಬುದ್ಧಿವಂತಿಕೆ ಅಂದ್ರೆ ಬರೀ ಓದುವುದು ಎಂದರ್ಥವಲ್ಲ. ಅದು ಎಲ್ಲ ರೀತಿಯ ಕೌಶಲಗಳನ್ನು ಒಳಗೊಂಡಿರುತ್ತದೆ.
ಆಳ್ವಾಸ್ ಚಿತ್ರಸಿರಿ: ವ್ಯಂಗ್ಯ ಚಿತ್ರಸಿರಿ, ಛಾಯಾ ಚಿತ್ರಸಿರಿ ಪ್ರಶಸ್ತಿ ಪ್ರದಾನ 2018
ಆಳ್ವಾಸ್ ಚಿತ್ರಸಿರಿ: ವ್ಯಂಗ್ಯ ಚಿತ್ರಸಿರಿ, ಛಾಯಾ ಚಿತ್ರಸಿರಿ ಪ್ರಶಸ್ತಿ ಪ್ರದಾನ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 13: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ನುಡಿಸಿರಿ 2018 ಅಂಗವಾಗಿ ನಡೆದ 2018ರ ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ ಹಾಗೂ ವ್ಯಂಗ್ಯ ಚಿತ್ರಸಿರಿ ರಾಜ್ಯಮಟ್ಟದ ಕಲಾಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
12 ಸಾಧಕರಿಗೆ 'ಆಳ್ವಾಸ್ ನುಡಿಸಿರಿ ಪ್ರಶಸ್ತಿ' 2018
12 ಸಾಧಕರಿಗೆ 'ಆಳ್ವಾಸ್ ನುಡಿಸಿರಿ ಪ್ರಶಸ್ತಿ' - Varthabharathi | DailyHunt: ಮೂಡುಬಿದಿರೆ, ನ.7: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2018ರ ಅಂಗವಾಗಿ ನೀಡಲಾಗುವ ಆಳ್ವಾಸ್ ನುಡಿಸಿರಿ ಪುರಸ್ಕಾರವನ್ನು ಈ ಬಾರಿ ಕನ್ನಡ ನಾಡು, ನುಡಿಗೆ ಶ್ರಮಿಸಿದ 12 ಸಾಧಕರಿಗೆ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಾ.ಜಿ.ಡಿ.ಜೋಶಿ ಮುಂಬೈ(ಸಾಹಿತ್ಯ, ಶಿಕ್ಷಣ), ಡಾ.ಎ.ವಿ.ನರಸಿಂಹಮೂರ್ತಿ ಮೈಸೂರು(ಇತಿಹಾಸ ತಜ್ಞ), ಡಾ.ಭಾರತಿ ವಿಷ್ಣುವರ್ಧನ್ ಬೆಂಗಳೂರು(ಸಿನೆಮಾ), ಡಾ.ಅರುಂಧತಿ ನಾಗ್ (ರಂಗಭೂಮಿ), ಎಲ್.ಬಂದೇನವಾಝ್ ಖಲೀಪ್ ಆಲ್ದಾಳ ಕಲಬುರಗಿ (ರಂಗ ನಿರ್ದೇಶನ), ಡಾ.ಕೆ.ರಮಾನಂದ ಬನಾರಿ ಕಾಸರಗೋಡು(ಸಾಹಿತ್ಯ), ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ(ಸಾಹಿತ್ಯ, ವಿಮರ್ಶೆ), ಪ್ರೊ.ಎ.ವಿ.ನಾವಡ ಮಂಗಳೂರು(ಸಾಹಿತ್ಯ), ಫಾ.ಪ್ರಶಾಂತ್ ಮಾಡ್ತ(ಸಾಹಿತ್ಯ ಸೇವೆ) ಹೊ.ನಾ.ರಾಘವೇಂದ್ರ (ಸುಗಮ ಸಂಗೀತ), ಅರುವ ಕೊರಗಪ್ಪ ಶೆಟ್ಟಿ(ಯಕ್ಷಗಾನ) ಡಾ.ಮೈಸೂರು ನಟರಾಜ, ವಾಷಿಂಗ್‌ಟನ್(ಸಾಹಿತ್ಯ ಸೇವೆ) ಪ್ರಶಸ್ತಿಗೆ ಆಯ್ಕೆಯಾದ ಸಾಧಕರು.
ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿಯ ಆರು ಪ್ರೊಫೆಸರ್‌ಗಳಿಗೆ ಇನ್ಫೋಸಿಸ್ ಪುರಸ್ಕಾರ
ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿಯ ಆರು ಪ್ರೊಫೆಸರ್‌ಗಳಿಗೆ ಇನ್ಫೋಸಿಸ್ ಪುರಸ್ಕಾರ | Vartha Bharati- ವಾರ್ತಾ ಭಾರತಿ: ಬೆಂಗಳೂರು,ನ.13: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳ ವಿವಿಧ ವರ್ಗಗಳಲ್ಲಿನ ಸಾಧನೆಗಳಿಗಾಗಿ ಆರು ಪ್ರತಿಷ್ಠಿತ ಪ್ರೊಫೆಸರ್‌ಗಳನ್ನು ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ(ಐಎಸ್‌ಎಫ್)ದ 2018ನೇ ಸಾಲಿನ ಇನ್ಫೋಸಿಸ್ ಪುರಸ್ಕಾರಗಳಿಗಾಗಿ ಆಯ್ಕೆ ಮಾಡಲಾಗಿದೆ. ಈ ವಾರ್ಷಿಕ ಪ್ರಶಸ್ತಿಯು ಶುದ್ಧ ಚಿನ್ನದ ಪದಕ,ಪ್ರಶಂಸಾ ಪತ್ರ ಮತ್ತು ಒಂದು ಲಕ್ಷ ಡಾಲರ್ ಬಹುಮಾನವನ್ನೊಳಗೊಂಡಿದೆ.
ಲಂಡನ್: ಸ್ವಾಮಿ ನಾರಾಯಣ ಮಂದಿರದಿಂದ ಕೃಷ್ಣ ವಿಗ್ರಹಗಳ ಕಳವು
ಲಂಡನ್: ಸ್ವಾಮಿ ನಾರಾಯಣ ಮಂದಿರದಿಂದ ಕೃಷ್ಣ ವಿಗ್ರಹಗಳ ಕಳವು | Vartha Bharati- ವಾರ್ತಾ ಭಾರತಿ: ಲಂಡನ್, ನ. 12: ಉತ್ತರ ಲಂಡನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದಿಂದ ಕಳ್ಳರು 1970ರ ದಶಕದ ಮೂರು ಅಮೂಲ್ಯ ಕೃಷ್ಣ ವಿಗ್ರಹಗಳನ್ನು ಕಳವುಗೈದಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ಬ್ರೆಂಟ್‌ನ ವಿಲ್ಸ್‌ಡೆನ್ ಲೇನ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಶುಕ್ರವಾರ ಮುಂಜಾನೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಅಧಿಕಾರಿಗಳನ್ನು ಕರೆಸಲಾಯಿತು. ಕಳವಾದ ಹರಿಕೃಷ್ಣ ಮೂರ್ತಿಗಳು 1975ರಲ್ಲಿ ದೇವಸ್ಥಾನ ಆರಂಭಗೊಂಡಂದಿನಿಂದಲೂ ದೇವಸ್ಥಾನದ ಭಾಗವಾಗಿದ್ದವು ಎಂದು
ಚಂದ್ರಶೇಖರ ಕಂಬಾರರ ನೂತನ ನಾಟಕದಲ್ಲಿ ಹೊಸ ಸನ್ನಿವೇಶದ ಭಾಷಾ ಪ್ರಯೋಗ
ಚಂದ್ರಶೇಖರ ಕಂಬಾರರ ನೂತನ ನಾಟಕದಲ್ಲಿ ಹೊಸ ಸನ್ನಿವೇಶದ ಭಾಷಾ ಪ್ರಯೋಗ | Prajavani: ಬಹಮನಿ ಸಾಮ್ರಾಜ್ಯಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಮಹತ್ವವನ್ನು ತಂದುಕೊಟ್ಟ ಮಹಮೂದ್ ಗಾವಾನ್ ಧಾರ್ಮಿಕ ಸಾಮರಸ್ಯದ ರೂಪಕವೂ ಹೌದು. ಗಾವಾನ್‌ರ ಜೀವನ–ಸಾಧನೆಯನ್ನು ಕಂಬಾರರು ರಂಗರೂಪಕ್ಕೆ ಅದ್ಭುತವಾಗಿ ಅಳವಡಿಸಿದ್ದಾರೆ. ಅ. 28ರಂದು ಬಿಡುಗಡೆಯಾಗಲಿರುವ (ಪ್ರ: ಅಂಕಿತ ಪುಸ್ತಕ, ಬೆಂಗಳೂರು) ನಾಟಕದ ಒಂದು ಅಂಕ ಇಲ್ಲಿದೆ.
Monday, November 12, 2018
ಮಲ್ಲಿಕಾರ್ಜುನ ಪಾಟೀಲ - ಕಲಾ ಶಿಕ್ಷಣದ ಉನ್ನತೀಕರಣ ಅಗತ್ಯ
ಕಲಾ ಶಿಕ್ಷಣದ ಉನ್ನತೀಕರಣ ಅಗತ್ಯ | Prajavani: ಕಲಾ ಅಧ್ಯಯನವು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಶಿಕ್ಷಣ.ಯಾವ ಕಾರಣಕ್ಕೂ ಕಲಾ ಶಿಕ್ಷಣವನ್ನು ಕಡೆಗಣಿಸಬಾರದು
ಕಥೆ ಕೇಳೋಣ ಬರ್ರಿ...
ಕಥೆ ಕೇಳೋಣ ಬರ್ರಿ... | Prajavani: ಬಾಲ್ಯದಲ್ಲಿ ಅಜ್ಜ–ಅಜ್ಜಿ ಹೇಳುತ್ತಿದ್ದ ಕಥೆಗೆ ಹೂಂ ಗುಟ್ಟುತ್ತಾ ಮಲಗುವ ಖುಷಿ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಸಿಗಬೇಕೆನ್ನುವ ಉದ್ದೇಶದಿಂದ ಸ್ಥಾಪನೆಯಾದ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿಗೆ ಈಗ ಐದರ ಹರೆಯ. ಈ ಬಾರಿಯ ಕಥೆ ಕೇಳುವ ಹಬ್ಬ ಇದೇ 16ರಿಂದ 18ರವರೆಗೆ ನಡೆಯಲಿದ್ದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಕಥೆಗಾರರು ಭಾಗವಹಿಸುತ್ತಿರುವುದು ವಿಶೇಷ
Sunday, November 11, 2018
ಎಸ್. ಆರ್. ವಿಜಯಶಂಕರ - ಕನ್ನಡವು ಕನ್ನಡವ ಕನ್ನಡಿಸುತಿರುವ ಜೀವಂತಿಕೆ
Columns News: several types of kannada's in kannada - ಕನ್ನಡವು ಕನ್ನಡವ ಕನ್ನಡಿಸುತಿರುವ ಜೀವಂತಿಕೆ | Vijaya Karnataka: ಕನ್ನಡದಲ್ಲಿ ಹೊಸ ಪ್ರಕಾರಗಳಂತೆ ಬೆಳೆದ ಕಾದಂಬರಿ ಹಾಗೂ ಸಣ್ಣಕತೆಗಳು ಏಕೀಕರಣದ ಕಾಲದಿಂದಲೂ ಬಹುತೇಕ ಸಮಸ್ತ ಕರ್ನಾಟಕದ ಜನತೆಗೆ ಅರ್ಥವಾಗುವ ಭಾಷೆಯನ್ನು ಬಳಸಿತು.
ಮನೆ ಕಟ್ಟುವ ಮೊದಲು ಸಂತ್ರಸ್ತರ ಮನಸ್ಸು ಕಟ್ಟಿ: ಸಾಹಿತಿ ಡಾ.ವೈದೇಹಿ
ಮನೆ ಕಟ್ಟುವ ಮೊದಲು ಸಂತ್ರಸ್ತರ ಮನಸ್ಸು ಕಟ್ಟಿ: ಸಾಹಿತಿ ಡಾ.ವೈದೇಹಿ | Vartha Bharati- ವಾರ್ತಾ ಭಾರತಿ: ಮಡಿಕೇರಿ, ನ.11: ಸಂತ್ರಸ್ತರಿಗೆ ಮನೆ, ಕಟ್ಟಡ ನಿರ್ಮಿಸುವ ಮೊದಲು ಸಂತ್ರಸ್ತರ ಮನಸ್ಸು ಮತ್ತು ಬದುಕು ಕಟ್ಟುವುದು ಆದ್ಯತೆಯಾಗಬೇಕೆಂದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಸಾಹಿತಿ ಡಾ.ವೈದೇಹಿ ಸಲಹೆ ನೀಡಿದ್ದಾರೆ. ಕೊಡಗಿಗೆ ಒದಗಿರುವ ಮಹಾಸಂಕಟದ ಸಂದರ್ಭ ಕ್ಷಾತ್ರ ತೇಜಸ್ಸಿನ ಸ್ಥಳೀಯರು ಜೀವನ ಛಲ ಬೆಳೆಸಿಕೊಂಡ ರೀತಿ ಅನನ್ಯವಾದದ್ದು ಎಂದು ಅವರು ಶ್ಲಾಘಿಸಿದ್ದಾರೆ. ಕಾಲೂರು ಗ್ರಾಮದಲ್ಲಿ ಪ್ರಾಜೆಕ್ಟ್ ಕೂರ್ಗ್ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ
ಅಯೋಧ್ಯೆ ಮಂದಿರ-ಮಸೀದಿ ವಿವಾದ: ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ಅಯೋಧ್ಯೆ ಮಂದಿರ-ಮಸೀದಿ ವಿವಾದ: ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ, ನ.12: ಅಯೋಧ್ಯೆ ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಈ ಅರ್ಜಿಯನ್ನು ಜನವರಿ ಮೊದಲ ವಾರದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಜನವರಿಗಿಂತ ಮೊದಲೇ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಆರಂಭಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ‘‘ನಾವು ಈಗಾಗಲೇ ಈ ಕುರಿತಂತೆ
ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್‌ಕುಮಾರ್ ಇನ್ನಿಲ್ಲ
ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್‌ಕುಮಾರ್ ಇನ್ನಿಲ್ಲ | Prajavani: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರಾಗಿ ಅವರು ತಮ್ಮ ಸಾರ್ವಜನಿಕ ಜೀವನ ಆರಂಭಿಸಿದರು. 1985ರಲ್ಲಿ ಎಬಿವಿಪಿಯ ರಾಷ್ಟ್ರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಗೆ 1987ರಲ್ಲಿ ಸೇರ್ಪಡೆಯಾಗಿದ್ದರು.
Saturday, November 10, 2018
ನಾಡಿನೊಳಗಿದ್ದೂ ‘ಪರಕೀಯರು’ ಇವರು...
ನಾಡಿನೊಳಗಿದ್ದೂ ‘ಪರಕೀಯರು’ ಇವರು... | Prajavani: ಕರ್ನಾಟಕ–ಮಹಾರಾಷ್ಟ್ರ ಗಡಿ ಜಿಲ್ಲೆಗಳ ಬಗ್ಗೆ ರಾಜ್ಯ ಸರ್ಕಾರ ಕಾಳಜಿ ತೋರಿಸುತ್ತಿಲ್ಲ. ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳ ಕುರಿತು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ನಮ್ಮ ಸರ್ಕಾರ ಕೂಡ ಲಕ್ಷ್ಯ ಕೊಡುತ್ತಿಲ್ಲ -ಪ್ರೊ.ಚಂದ್ರಶೇಖರ ಪಾಟೀಲ, ಸಾಹಿತಿ
ಭಾರತದ ವಿಶ್ವವಿದ್ಯಾಲಯಗಳ ಪುನರುಜ್ಜೀವನ - Lalitkumar- How to revive Indian universities
How to revive Indian universities | Deccan Herald: Start an all-India Teaching Service, build university-schools, varsity-industry linkages
ನಾರಾಯಣ . ಎ - ಅಯ್ಯಪ್ಪ: ಸಂಪ್ರದಾಯ ನೆಪ
ಅಯ್ಯಪ್ಪ: ಸಂಪ್ರದಾಯ ನೆಪ | Prajavani: ಕೇರಳದ ಉತ್ತರ ಗಡಿಯಿಂದ ಸುಮಾರು 75 ಕಿ.ಮೀ.ದೂರ, ಕರಾವಳಿ ಕರ್ನಾಟಕದಲ್ಲಿರುವ ಹೆಸರಾಂತ ದೇವಾಲಯವೊಂದರಲ್ಲಿ ಜಾತಿಯ ಕಾರಣಕ್ಕೆ ಪ್ರವೇಶ ನಿರಾಕರಿಸಲ್ಪಟ್ಟ ಭಕ್ತನೊಬ್ಬನಿಗೆ ದರ್ಶನ ನೀಡುವ ಸಲುವಾಗಿ ಅಲ್ಲಿನ ದೇವರ ವಿಗ್ರಹವೇ ಸಂಪ್ರದಾಯ ಮುರಿದು ಪಶ್ಚಿಮಕ್ಕೆ ಮುಖ ಮಾಡಿ ನಿಂತ ಐತಿಹ್ಯ ಎಲ್ಲರಿಗೂ ತಿಳಿದೇ ಇದೆ.
Friday, November 9, 2018
ಶಂಕರಿ ಶರ್ಮ ಪುತ್ತೂರು -- ಮೊಬೈಲು ಪುರಾಣ
ಮೊಬೈಲು ಪುರಾಣ | Oppanna : ಒಪ್ಪಣ್ಣನ ಒಪ್ಪಂಗೊ: ಅಪ್ಪು, ಈಗಾಣ ಕಾಲಲ್ಲಿ ಈ ಸಂಚಾರವಾಣಿ (ಮೊಬೈಲು) ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ ಹೋಯ್ದು ಹೇಳಿರೆ ಲೊಟ್ಟೆ ಅಲ್ಲ ಅಲ್ಲದಾ?. ಅದರಲ್ಲೂ ಈಗಾಣ ಹೊಸ ನಮೂನೆಯ ಸ್ಮಾರ್ಟ್ ಫೋನು ಕುಂಞಿ ಮಕ್ಕಳಿಂದ ಹಿಡುದು ಕಣ್ಣು ಸರಿ ಕಾಣದ್ದ ಪ್ರಾಯಸ್ಥರು ಕೂಡಾ ಹಿಡ್ಕೊಂಡು ತಿರುಗುದೇ ಕಾಣ್ತಪ್ಪ.
ವಿಚಾರವಾದಿ ಜ.ಹೊ.ನಾರಾಯಣಸ್ವಾಮಿ ನಿಧನ
ವಿಚಾರವಾದಿ ಜ.ಹೊ.ನಾರಾಯಣಸ್ವಾಮಿ ನಿಧನ | Prajavani: ಲೇಖಕ, ವಿಚಾರವಾದಿ ಆದ ಜ.ಹೊ.ನಾರಾಯಣಸ್ವಾಮಿ (75) ಅನಾರೋಗ್ಯದಿಂದ ಶುಕ್ರವಾರ ಮೈಸೂರು ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನಿಧನರಾದರು.
Thursday, November 8, 2018
- ಅಮೆರಿಕದಲ್ಲಿ ಅರಳಿದ ಸಮೋಸಾ ಬ್ರಿಗೇಡ್: ಹೆಚ್ಚುತ್ತಿದೆ ಭಾರತ ಮೂಲದ ಸಂಸದರ ಪ್ರಭಾವಿ ತಲೆಮಾರು
Columns News: samosa brigade in usa - ಅಮೆರಿಕದಲ್ಲಿ ಅರಳಿದ ಸಮೋಸಾ ಬ್ರಿಗೇಡ್: ಹೆಚ್ಚುತ್ತಿದೆ ಭಾರತ ಮೂಲದ ಸಂಸದರ ಪ್ರಭಾವಿ ತಲೆಮಾರು | Vijaya Karnataka: ಅಮೆರಿಕದ ಕಾಂಗ್ರೆಸ್(ಶಾಸಕಾಂಗ)ಗೆ ನಡೆದ ಚುನಾವಣೆಯಲ್ಲಿ ಐದು ಮಂದಿ ಭಾರತೀಯ ಮೂಲದ ಸದಸ್ಯರು ಮರಳಿ ಆಯ್ಕೆಯಾಗಿದ್ದಾರೆ. ಆ ಮೂಲಕ 'ಸಮೋಸಾ ಬ್ರಿಗೇಡ್' ಗೆದ್ದಂತಾಗಿದೆ.
Wednesday, November 7, 2018
Tuesday, November 6, 2018
ದೀಪಾವಳಿ ವಿಶೇಷಾಂಕಗಳು -2018
Viyayakarnataka 2018 |
Vijayavani Deepavali-2018 |
udayavani Deepavali 2018 |
Prajavani 2018 |
Subscribe to:
Posts (Atom)