stat Counter



Saturday, November 13, 2010

A Letter from C N Ramachandran

ಪ್ರಿಯ ಪ್ರೊ. ಉಪಾಧ್ಯ ಅವರಿಗೆ:


ನಮಸ್ಕಾರ. ನೀವು ನನ್ನ ಬ್ಲಾಗ್ ನೋಡಿ ನಿಮ್ಮ ವಿಳಾಸ ಹಾಗೂ ನಿಮ್ಮ ಬ್ಲಾಗ್ ಬಗ್ಗೆ ಕೊಟ್ಟ ವಿವರಗಳನ್ನು ನನ್ನ ಮಗ ರಾಜೇಶ್ ನನಗೆ ನೆನ್ನೆ ತಿಳಿಸಿದ ಕಾರಣ ಇಂದು ನಿಮ್ಮ ಬ್ಲಾಗ್ ನೋಡಲು ಸಾಧ್ಯವಾಯಿತು. ಕೋರಡ್ಕಲ್ ಅವರ ಸಾಹಿತ್ಯದ ಬಗ್ಗೆ ನೀವು ಬರೆದಿರುವ ದೀರ್ಘ ಹಾಗೂ ವಿಮರ್ಶಾತ್ಮಕ ಲೇಖನವನ್ನು ಓದಿ, ಸಂತೋಷದಿಂದ, ಅಲ್ಲಿಯೇ ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ಆದರೆ, ಅಲ್ಲಿ ಎಲ್ಲಿಯೂ ಸಬ್‍ಮಿಟ್ ಎಂದು ಕಾಣಲಿಲ್ಲ. ಆದುದರಿಂದ ನನ್ನ ವಿಚಾರಗಳು ನಿಮಗೆ ತಲಪುತ್ತವೋ ಇಲ್ಲವೋ ಎಂದು ಗೊತ್ತಿಲ್ಲದಿರುವ ಕಾರಣದಿಂದ, ಮತ್ತೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಅಭಿನಂದನೆಗಳು. ನಿಮ್ಮ ಬ್ಲಾಗ್ ಸುಂದರವಾಗಿ, ವಿಚಾರಪ್ರಚೋದಕವಾಗಿ, ಉಪಯುಕ್ತವಾಗಿ ಬರುತ್ತಿದೆ. ಹೀಗೇ ಮುಂದುವರೆಸಿ.

ನಿಮ್ಮ,


ಸಿ. ಎನ್. ರಾಮಚಂದ್ರನ್

No comments:

Post a Comment