stat CounterWednesday, February 9, 2011

Sanskrita Sinchana- k krishnappa shetty - kudumallige[[2010]


ಸಂಸ್ಕೃತ ಸಿಂಚನ

(ಸಂ) - ಕೆ. ಕೃಷ್ಣಪ್ಪ ಶೆಟ್ಟಿ ’ಕುಡುಮಲ್ಲಿಗೆ’

 ತೀರ್ಥಹಳ್ಳಿಯ ಸಮೀಪದ ಕುಡುಮಲ್ಲಿಗೆಯ ಕೆ. ಕೃಷ್ಣಶೆಟ್ಟರ ಕಾವ್ಯನಾಮ - ’ಕುಡುಮಲ್ಲಿಗೆ’.

ಸಂಸ್ಕೃತ ಸಿಂಚನಸಂಸ್ಕೃತದ ಎಂಬ ಏಕ ಸ್ವರಾಕ್ಷರದಿಂದ ಆರಂಭವಾಗುವ ಶ್ಲೋಕ-ಶ್ಲೋಕಾರ್ಥಗಳ ಸಂಗ್ರಹ. "ಈ ಕೃತಿಯಲ್ಲಿ ಕೇವಲ ಕಾರತ್ಮಕವಾದ ಕೆಲವೇ ಸಹಸ್ರ ಸಂಸ್ಕೃತ ಶ್ಲೋಕಗಳನ್ನು ಮಾತ್ರ ನೀಡಲಾಗಿದೆ...... ಈ ಕೃತಿಯು ಸಂಸ್ಕೃತದ ಸುವಿಸ್ತಾರವಾದ ದಿಕ್ಸೂಚಿಯಾಗಿದೆ. ಹೇಗೆಂದರೆ ಕೇವಲ ಕಾರಾತ್ಮಕ ಏಕಸ್ವರಾಕ್ಷರದಿಂದ ಆರಂಭಗೊಳ್ಳುವ ಶ್ಲೋಕಗಳ ಸಂಗ್ರಹವಿದು." ಎಂದಿದ್ದಾರೆ ಸಂಪಾದಕರು.
ನೂರಾರು ಸಂಸ್ಕೃತ ಗ್ರಂಥಗಳಿಂದ, ಅಕಾರದಿಂದ ಆರಂಭಗೊಳ್ಳುವ ಶ್ಲೋಕಗಳನ್ನು ಆಯ್ಕೆಮಾಡಿ, ಕನ್ನಡ ಭಾಷಾಂತರದೊಂದಿಗೆ ನೀಡಿರುವ ಕೃಷ್ಣ ಶೆಟ್ಟರು ಸಹೃದಯರಿಗೆ ಅಮೃತಸಿಂಚನ ಮಾಡಿದ್ದಾರೆ. ಇದೊಂದು ಸಂಗ್ರಹ ಹಾಗೂ ಅಧ್ಯಯನಯೋಗ್ಯ ಗ್ರಂಥ.

 ಪ್ರ- ಕುಡುಮಲ್ಲಿಗೆ ಪ್ರಕಾಶನ.
ಮನೆ ನಂ. 1-100/1,  ಶ್ರೀ ದುರ್ಗಾನಂದ ನಿವಾಸ.
ಕೆ.ಕೆ. ಶೆಟ್ಟಿ ಕಂಪೌಂಡು, ಶಾಂತಿನಗರ

ಕಾವೂರು ಅಂಚೆ
 ಮಂಗಳೂರು - 575105
ಮೊದಲ ಮುದ್ರಣ 2010
ಬೆಲೆ ರೂ .250
ಪುಟಗಳು 272

1 comment: