shwakarma
ಮಾನ್ಯರೇ,
ಕಿನ್ನರ ಮೇಳ ತುಮರಿ ಸಂಸ್ಥೆಯು ಇದೇ ಬರುವ ೦೧ ಮಾರ್ಚ ೨೦೧೩ ರಿಂದ ೦೫ ಮಾರ್ಚ ೨೦೧೩ ರವರೆಗೆ ತುಮರಿಯಲ್ಲಿ ೫ ದಿನಗಳ ‘ರಂಗಾಭಿನಯ ಸಹೃದಯತಾ ಶಿಬಿರ’ವನ್ನು ಏರ್ಪಡಿಸಿದೆ.
ಈ ಶಿಬಿರದಲ್ಲಿ -
ಅಭಿನಯಕ್ಕೆ ಸಂಬಂಧಿಸಿದ ಬೇರೆ ಬೇರೆ ಸಿದ್ಧಾಂತಗಳು, ನಟನ ತಯಾರಿ, ಸಮಕಾಲೀನ ನಟನ ಸಮಸ್ಯೆ ಮತ್ತು ಸವಾಲುಗಳು ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಹಾಗೂ ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಜೊತೆಗೆ ಬೇರೆ ಬೇರೆ ಪ್ರಕಾರದ ಅಭಿನಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಹಿರಿಯ ರಂಗನಿರ್ದೇಶಕ ಹಾಗೂ ರಂಗ ಶಿಕ್ಷಕ ಶ್ರೀ ರಘುನಂದನ ಅವರು ಶಿಬಿರದ ನಿರ್ದೇಶಕರಾಗಿರುತ್ತಾರೆ. ಜೊತೆಗೆ ನಾಡಿನ ಪ್ರಸಿದ್ಧ ರಂಗತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ.
ಶಿಬಿರದ ಅವಧಿಯಲ್ಲಿ ಪ್ರತಿ ಸಂಜೆ ಸಾಂಸ್ಕೃತಿಕ ಉತ್ಸವವಿರುತ್ತದೆ. ಈ ಉತ್ಸವದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಪ್ರಸಿದ್ಧ ರಂಗತಂಡಗಳ ನಾಟಕಗಳು, ಸಂಗೀತ ಹಾಗೂ ನೃತ್ಯ ಪ್ರದರ್ಶನಗಳಿರುತ್ತವೆ.
ಈ ಶಿಬಿರಕ್ಕೆ ಕಲೆ, ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಆಸಕ್ತಿಯಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದ್ದೇವೆ. ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಊಟ ವಸತಿ ವ್ಯವಸ್ಥೆ ಮಾಡಲಾಗುತ್ತದೆ.
ಆಸಕ್ತರು "ನಿರ್ದೇಶಕರು, ಕಿನ್ನರ ಮೇಳ ತುಮರಿ, ಅಂಚೆ: ಹೆಗ್ಗೋಡು, ಸಾಗರ - ಕರ್ನಾಟಕ ೫೭೭೪೧೭" ಇವರಿಗೆ ಬರೆದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಕೋರಿದೆ. ದೂರವಾಣಿ:9448686353, 9448012267 , 9481017606 ಸಂಪರ್ಕಿಸಬಹುದಾಗಿದೆ.

No comments:
Post a Comment