stat Counter



Tuesday, April 5, 2016

ಎಂ.ಎನ್. ಕಾಮತ್

ಎಂ.ಎನ್. ಕಾಮತ್
(1883-1941)
ಮುರಳೀಧರ ಉಪಾಧ್ಯ ಹಿರಿಯಡಕ

ಇಪ್ಪತ್ತೆಯ ಶತಮಾನದ ಆರಂಭದ ಇಪ್ಪತ್ತು-ಮೂವತ್ತರ ದಶಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೃದ್ಧಿ-ಸತ್ವಪೂರ್ಣ ಸಾಹಿತ್ಯ ರಚಿಸಿದವರು ಎಂ.ಎನ್. ಕಾಮತರು(1883-1941). ನಾಟಕ .ಕಥೆ, ಕವನ, ಹರಟೆ ಲೇಖನ-ಹೀಗೆ ತನ್ನ ಕಾಲದ ಪತ್ರಿಕೆಗಳಿಗೆ ಕಾಮತ್ಅವರು ಕಾಮ-ತರುವಾಗಿದ್ದರು.

ಎಂ. ಎನ್.ಕಾಮತ್ರ ತಂದೆ ಮುಂಡ್ಕೂರು ಶ್ರಿನಿವಾಸ ಕಾಮತ್ ವ್ಯಾಕ್ಸಿನೇಟರ್ ಕೆಲಸದಲ್ಲಿದ್ದರು. ಶ್ರೀನಿವಾಸ್ ಕಾಮತ್-ತುಂಗಭದ್ರ ದಂಪತಿಗಳ ಮಗನಾಗಿ ನರಸಿಂಗ (ಎಂ.ಎನ್. ಕಾಮತ್) ಜನಿಸಿದ್ದು 1883 ರಲ್ಲಿ .ಕಾರ್ಕಳದಲ್ಲಿದ್ದ ಅಜ್ಜನ ಮನೆಯಲ್ಲಿ ಬಾಲ್ಯದ ಕೆಲವು ವರ್ಷಗಳನ್ನು ಕಳೆದ ಕಾಮತ್ ಮುಂದೆ ಮಂಗಳೂರಿನ ಕೆನರಾ ಹೈಸ್ಕೂಲು ಸೇರಿದರು. ಎಂ.ಗೋವಿಂದ ಪೈಗಳು 1897-98 ರಲ್ಲಿ 'ಕೈ ಕಾಲುಗಳಿಗೆ ಬಳೇ ತೊಟ್ಟು ಹೆರಳು ಹಾಕಿ ಸಾಲೆಗೆ ಬರುತಿದ್ದ' ಕಾಮತರ ಸಹಪಾಠಿಯಾಗಿದ್ದರು. ಕಾಮತ್-ಪೈ ಮತ್ತಿತರರು ಗೆಳೆಯರು ಹೈಸ್ಕೂಲಿನಲ್ಲಿ ಆರಂಭಿಸಿದ ಪತ್ರಿಕÉ(ANGEL) ‘ROBIN RED  BREAST’

ಕಲ್ಕತ್ತದಿಂದ ಹಿಂತಿರುಗಿದ ಕಾಮತರು ಮದ್ರಾಸಿನಲ್ಲಿ ಅಧ್ಯಾಪಕ ವೃತ್ತಿಯ ತರಬೇತಿ ಮುಗಿಸಿದರು. ಉಡುಪಿ, ಮುಲ್ಕಿ, ಬಂಟ್ವಾಳಗಳಲ್ಲಿ ಅಧ್ಯಾಪಕರಾಗಿದ್ದ ಅವರು 1918ರಲ್ಲಿ ತಾನು ಕಲಿತ ಕೆನರಾ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರು. ಬಂಟ್ವಾಳದಲ್ಲಿದ್ದಾಗ ಅಸ್ಪರ್ಶರೊಡನೆ ಊಟ ಮಾಡಿದ ಕಾಮತರಿಗೆ ಸ್ವಜಾತಿ ಬಾಂಧವರು ಬಹಿಷ್ಕಾರ ಹಾಕಿದರು. ಬ್ರಿಟಿಷರ ಮುದ್ರಾಸ್ ಪ್ರಾಂತ್ಯದ ಭಾಗವಾಗಿದ್ದ 'ಸೌತ್ ಕೆನರಾ' ಜಿಲ್ಲೆಯ ಸ್ಕೂಲ್ ಡೇಗಳಲ್ಲಿ ಕನ್ನಡ ನಾಟಕಗಳು ಆರಂಭವಾದದ್ದು ಕಾಮತರಿಂದ. ಕಾಮತರು ತನ್ನ ನೆಚ್ಚಿನ ನಾಟಕಗಳನ್ನು ಶಾಲಾ ವಾಷರ್ಿಕೋತ್ಸವಕ್ಕಾಗಿ ಬರೆದರು. ತನ್ನ ನಾಟಕಗಳನ್ನು ತಾನೇ ಸ್ವತ: ನಿದರ್ೇಶಿಸುತ್ತಿದ್ದ ಅವರ ನಾಟಕಗಳ ಹಾಡುಗಳು  ಜನಪ್ರಿಯವಾಗಿದ್ದವು. ಒಳ್ಳೆಯ ಭೂಗೋಳ ಶಿಕ್ಷಕರಾಗಿದ್ದ ಕಾಮತರು ಸಭಿಕರನ್ನು ಮತ್ತೆ ಮತ್ತೆ ನಗಿಸುವ ವಾಗ್ಮಿಯಾಗಿದ್ದರು. ಶಿವರಾಮ ಕಾರಂತರ ಹೇಳುವಂತೆ ಸ್ವತಂತ್ರವಾದ ಒಂದುಲಘು ಹಾಸ್ಯದ ತವರುಮನೆಯಾಗಿದ್ದರು.ಆನಂದ ಎಂಬ ಪತ್ರಿಕೆಯನ್ನು ಕೆಲವು ವರ್ಷ ನಡೆಸಿದ ಅವರು ತನ್ನ ಕಾಲದ ಸ್ವದೇಶಾಭಿಮಾನಿ. ಶ್ರೀಕೃಷ್ಣ ಸೂಕ್ತಿ , ಮಧುರವಾಣಿ, ಬೋಧಿನಿ' 'ಕಂಠೀರವ, 'ಉದಯಭಾರತ', ಕನ್ನಡ ಸಹಕಾರಿ, ತ್ರಿವೇಣಿ, ಭಾರತಿ ಪ್ರಭಾತ ತುಣುಕು-ಮಿಣುಕು' ಪತ್ರಿಕೆಗಳಿಗೆ ಬರಹಗಳನ್ನು ನೀಡುತ್ತ ಕನ್ನಡ ಪತ್ರಿಕಾ ಪ್ರಪಂಚದ ಅಕ್ಷಯ ಪಾತ್ರವಾಗಿದ್ದರು.

ಬಾನಿನಾಚೆಗೂ ನೋಟ, ಯುಗದ ಕೊನೆಗೂ ಓಟ' ವಿದ್ದಕಾಮತರು ಮಹಾಯುದ್ಧದ ಬೆಲೆಏರಿಕೆಯ ದಿನಗಳಲ್ಲಿ ಆಥರ್ಿಕವಾಗಿ ಸೊರಗಿದರು. ಅವರು ಹೊಟ್ಟೆಪಾಡಿಗಾಗಿ ಸಿನಿಮಾ ಪ್ರಚಾರ ಪತ್ರಗಳನ್ನು ಬರೆಯಬೇಕಾಯಿತು. ಎನಾದರೂ ಉಳಿಯುವ ಕೆಲಸ ಮಾಡಬಾರದೇ? ಎಂಬ ಶಿವರಾಮ ಕಾರಂತರ ಪ್ರಶ್ನೆಗೆಕಾಮತರಕೊಟ್ಟಉತ್ತರ ಮೊನಚಾಗಿತ್ತುಕಾರಂತರೇ ನೀವೆನ್ನುವುದೆಲ್ಲ ಸಮ ನೋಡಿ.ಆದರೆಅದೆಲ್ಲಕ್ಕಿಂತಅಡುಗೆಯ ಸಾಹಿತ್ಯದೊಡ್ಡದಲ್ಲವೇ? ಮಾಸ್ತಿಯವರಿಗೆ 8-4-1940 ರಂದು ಬರೆದ ಪತ್ರದಲ್ಲಿಕಾಮತರು.A rather sickly man, with a sicklier diabetic wife, with none of his boys settled in life and at least one daughter to be immediately given in marriage, one earning man to look after 8 at home, and the education of 4, this is the picture of me at 50 (?) waiting to be relieved from duty perhaps in July”.

ಗೋವಿಂದ ಪೈಗಳು ಹೇಳಿದಂತೆ. ಬಿಸಿಲಿನ ಕಾವನ್ನೂ, ನೀರಿನ ಅಭಾವವನ್ನು ತನಗಲ್ಲವೆಂದು ಈಡಾಡಿ ಈ ಬಟ್ಟ ಬೇಸಗೆಯ ಹೂವು ತೋರಿದ ಸೊಂಪೂ, ಬೀರಿದ ತಂಪೂ, ವಿಸ್ಮಯನೀಯವೇ ಸೈ.
1940ರಲ್ಲಿ ಬೆಂಗಳೂರನಲ್ಲಿ ನಡೆದ ಕನ್ನಡ ಸಣ್ಣಕತೆಗಾರರ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಕಾಮತರಿಗೆ ನೀಡಲಾಯಿತು. ಅನಂತರ ಅಸ್ವಸ್ಥರಾದ ಅವರು ಜಲೋದರದಿಂದ ನರಳಿ 1941 ಎಪ್ರಿಲ್ 24 ರಂದು ನಿಧನರಾದರು.
 ಹತ್ತೊಂಬತ್ತನೆಯ ಶತಮಾನದಲ್ಲಿಒಂದೇ ಒಂದು ಮದ್ರಣಾಲಯ-ಬಾಸೆಲ್ ಮಿಶನ್ ಪ್ರೆಸ್ ದಕ್ಷಿಣ ಕನ್ನಡದಲ್ಲಿತ್ತು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹಲವು  ಛಾಪಖಾನೆಗಳು, ಅವುಗಳಿಂದಾಗಿ ಹತ್ತಾರು ಪತ್ರಿಕೆಗಳು ಆರಂಭವಾದವು.ಈ ಪತ್ರಿಕೆಗಳಿಗೆ ಚಿಂತನಶೀಲ, ಶೈಕ್ಷಣಿಕ ಲೇಖನಗಳನ್ನು , ಸೃಜನಶೀಲ ಬರಹಗಳನ್ನು ನೀಡುವ ಅಂದಿನ ಅಗತ್ಯವನ್ನು ಕಾಮತರು ಚೆನ್ನಾಗಿ ನಿರ್ವಹಿಸಿದರು.ಸುಮಾರು ಮೂವತ್ತಕ್ಕಿಂತ ಹೆಚ್ಚು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಕಾಮತರು ಬರೆದಿದ್ದಾರೆ. ಪಂಜೆಯವರು ಆರಂಭಿಸಿದ ಸಣ್ಣಕಥೆಯ ಪ್ರಕಾರವನ್ನು ಕಾಮತರು ವಸ್ತು ತಂತ್ರಗಳ ನಿರ್ವಹಣೆಯಲ್ಲಿ  ಬೆಳೆಸಿದರು. ಹಾಸ್ಯ ಪ್ರಸಂಗಗಳಿಗೆ ಸೀಮಿತವಾಗಿದ್ದು ಕಥೆ ವಾಸ್ತವ ಮಾರ್ಗ-ಚಿಂತನಾ ಪ್ರಧಾನ ಮಾರ್ಗದಲ್ಲಿ ಪ್ರಾದೇಶೀಕತೆಯ ರಂಗಿನೊಂದಿಗೆ ಮುನ್ನಡೆಯಿತು.ಅಂದಿನ ಆವೂರು(1941) ಕಾಮತರ ಪ್ರಸಿದ್ಧ ಕಥಾ ಸಂಕಲನ .'ಕುಮಾರ ಭೀಮಸಿಂಹ', 'ಪ್ರೇಮಪಿಪಾಸೆ, ಕನ್ಯಾ ಬಲಿ. ಕಮಲಕುಮಾರಿ-ಕಾಮತರ ಕಾದಂಬರಿಗಳು 'ತುಳುನಾಡರಾಣಿ.''ಸಂತೆಯ ಕುರುಡನ ಹಾಡು' ಹೊಲೆಯನ ಹಂಬಲ ಬಂಡೆಯೆತ್ತು. ವಟಪುರಾಧೀಶ್ವರ ಶತಕ-ಕಾಮತರ ಕೆಲವು ಮುಖ್ಯ ಕಾವ್ಯಕೃತಿಗಳು .ಪಂಜೆಯವರಂತೆ ಪ್ರಾಸಪ್ರಿಯರಾಗಿದ್ದ ಕಾಮತರು ಪ್ರಾಸವಿಲ್ಲದದ ಮುಕ್ತ ಛಂದಸ್ಸಿನ ಏನು ಘಂಟಾನಾದವಿದು?ಎಂಬ ಕವಿತೆಯನ್ನು 1937 ರಲ್ಲಿ ಬರೆದರು. 'ಬೀಡಿ ಸೇದ ಬೇಡಿ, ನನ್ನ(ಅಥವಾ ನಿಮ್ಮ)ಕೊಡೆ! ಸಾಹಿತ್ಯ ರೈಲ್ವೆ ಕಂಪೆನಿ ಇಂಥ ಹಲವು ಹಾಸ್ಯ ಲೇಖನಗಳು, ಮತ್ತು ಹೊಸ ಕವಿತೆಗಳು ಸಣ್ಣ ಕವಿತೆಗಳು ಬಾಸೆಲ್ ಮಿಶನ್ನೂ ಕನ್ನಡವೂ-ಇಂಥ ಹಲವಾರು ಲೇಖನಗಳನ್ನು ಬರೆದಿರುವ ಕಾಮತರು ಕನ್ನಡ ಪ್ರಬಂಧ ಸಾಹಿತ್ಯದ ಆದ್ಯರಲ್ಲೊಬ್ಬರು.
ಕಾಮತರು ಬಗೆದಂತೆ ಬರೆದು ಹೋಗುತ್ತಿದ್ದ ಅವಸರದ ಬರವಣಿಗೆ ಎಂಬುದನ್ನು ಒಪ್ಪುವ ಗೋವಿಂದ ಪೈಗಳು ಕಾಮತರ ಬರವಣೆಗೆ ಎರವಲು. ಎಂಬ ಇನ್ನೊಂದು ಟೀಕೆಗೆ ಹೀಗೆ ಉತ್ತರಿಸುತ್ತಾರೆ-ಕಾಮತರಂಥ ವಿಶಾಲ ಓದುಳ್ಳ ಕೆಲಸಗಾರರ ಕುಲುಮೆಗೆ ಬರುವ ಲೋಹ ಯಾವ ಗನಿಯದೇಇರಲಿ, ಕರಗಿಸಿದ ಹದವೂ ಹುಯ್ದ ಒಡವೆಯೂ ಅವರದೆ, ಸಮೃದ್ಧವಾಗಿರುವ ಅವರ ಕೃತಿಗಳಿರುವುದು ಐತಿಹಾಸಿಕ ಮಹತ್ವ ಮಾತ್ರವಲ್ಲ, ಬೆರವಳೆಣೆಕೆಯಷ್ಟಾದರೂ ಬೆಲೆಬಾಳುವ ಉಳಿಯುವ ಸಾಹಿತ್ಯ ಕೃತಿಗಳನ್ನು ಅವರು ನೀಡಿದ್ದಾರೆ.
ಎಂ. ಎನ್. ಕಾಮತರು ತನ್ನ ಹೆಚ್ಚಿನ ನಾಟಕಗಳನ್ನು ಶಾಲಾ ವಾಷರ್ಿಕೋತ್ಸವಗಳಲ್ಲಿ ಪ್ರದಶರ್ಿಸಲೆಂದೇ ಬರೆದರು. ಅವುಗಳೆಲ್ಲ ಮಕ್ಕಳ ನಾಟಕಗಳಲ್ಲ. ಶಾಲಾ ವಾಷರ್ಿಕೋತ್ಸವಕ್ಕೆಂದು ಬರುವ ಎಲ್ಲಾ ಬಗೆಯ ಪ್ರೇಕ್ಷಕರನ್ನೂ ಗಮನದಲ್ಲಿರಿಸಿಕೊಂಡು ಬರೆದವುಗಳು. ಕನ್ನಡ ಸಂಗೀತ ಚಂದ್ರಹಾಸಾಭ್ಯುದಯ' (1914) ನಾಟಕದಲ್ಲಿ ಅರುವತ್ತು ಹಾಡುಗಳಿವೆ.'ಅಜರ್ುನನ ಚಾತು ಮರ್ಾಸ, ಕಿಲರ್ೋಸ್ಕರ ಅವರ ಮರಾಠಿ 'ಸಂಗೀತ ಸೌಭದ್ರ' ನಾಟಕದ ರೂಪಾಂತರ, ಮೌರ್ಯ ಸಿಂಹಾಸನ '(1919) ಕ್ಷಾತ್ರತೇಜ' ಚಂದ್ರರಾವ್ ಮೋರೆ ಪ್ರತಾಪ ಸಿಂಹ-ಮತ್ತಿತರ ಐತಿಹಾಸಿಕ ನಾಟಕಗಳನ್ನು ಕಾಮತರು ಬರೆದಿದ್ದಾರೆ. ಸದ್ರಿ ಸುಬ್ಬ 'ಶಿಕ್ಷಣ ಪರೀಕ್ಷೆ ನಮ್ಮ ನಾಟ್ಯಾಭಿನಯ 'ಪಂಚಕನ್ಯೆಯರು,ಉದ್ದಾರಾನಂದಇಂಗ್ಲéಿ ಏಕಾಂಕಗಳ ರೂಪಾಂತರಗಳು. 'ಅಂಚೆಮನೆ'(1924) ರವೀಂದ್ರನಾಥ ಠಾಗೋರ್ ಅವರ ನಾಟಕದ ಭಾಷಾಂತರ ಉದ್ಧಾರಾ ನಂದದಲ್ಲಿ ಕಾಮತರು ಜಾತಿ ವ್ಯವಸ್ಥೆಯ ಕ್ರೌರ್ಯದ ಪರಿಣಾಮಗಳತ್ತ ಗಮನ ಸೆಳೆಯುತ್ತಾರೆ. ಗಾಂಧೀಯುಗದ ಸುಧಾರಣಾ ಪರವಾದ ಹೊಸ ಮೌಲ್ಯಗಳನ್ನು ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಇದ್ದವರು ಮೂವರು, ಅಜರ್ಿ (1936) ಮೆಂಬರು ಮತು ್ತಇತರ ಕೆಲವು ನಾಟಕಗಳಲ್ಲಿ ಖಾರವಾದ ರಾಜಕೀಯ ಸಾಮಾಜಿಕ ವಿಡಂಬನೆ ಇದೆ. ಕಂಪೆನಿ ನಾಟಕಗಳ ವಾಗಾಡಂಬರದ ಸಂಭಾಷಣೆಯನ್ನು ಕಾಮತರು ಅನುಕರಿಸಲಿಲ್ಲ ಐತಿಹಾಸಿಕ ನಾಟಕಗಳ ಹಾಡುಗಳಲ್ಲಿ ಶ್ಲೇಷೆಯ ಮೂಲಕ ಮಹಾತ್ಮಾ ಗಾಂಧೀಜಿಯಂಥ ಸಮಕಾಲೀನ ನಾಯಕರನ್ನು ಸ್ತುತಿಸಿದ್ದಾರೆ. ಹಾರೆ-ದೊರೆ, ಮರಗಳ ಕೂಗು ಸೊಕ್ಕಿನ ಬೆಕ್ಕು ಯುದ್ಧಾಂತ್ಯ-ಕಾಮತರ ಈ ಮಕ್ಕಳ ನಾಟಕಗಳಲ್ಲಿ ಮರಗಿಡಗಳು ಪ್ರಾಣಿಪಕ್ಷಿಗಳು ಪಾತ್ರಗಳಾಗಿ ಬರುತ್ತವೆ. ಯುದ್ಧಾಂತ್ಯದಲ್ಲಿ ಮನುಷ್ಯಕುಲದ ನಾಶವನ್ನು ಕಂಡು ಹುಲಿ, ಎತ್ತು ಕುದುರೆ, ಮಂಗಗಳು ಆನಂದಿಸುತ್ತವೆ. ಕಾಮತರು ಕನ್ನಡದಲ್ಲಿ ಮಕ್ಕಳಿಗಾಗಿ ನಾಟಕಗಳನ್ನು ಬರೆದ ಮೊದಲಿಗರಲ್ಲೊಬ್ಬರು.
ಕಾಮತರು ಮಕ್ಕಳಿಗಾಗಿ ಬರೆದ ಪುಸ್ತಕಗಳಲ್ಲಿ 'ಬಾಲಕರ ಮಹಾಭಾರತ', ಯಾದವ ಕೃಷ್ಣ, ಕರ್ಣನ ಕತೆ, ಆರ್ಯಮತೋಪಾಖ್ಯಾನ (ರಾಮಾಯಣ ಕತೆಗಳು)' ಮಹಾರಾಷ್ಟ್ರ-ಇವುಗಮನಾರ್ಹ. ಗದಾಯುದ್ಧದ ಕತೆ, ರನ್ನಭಂಡಾರದ ಮುದ್ರೆಯನ್ನೊಡೆಯುವ ಸೊಗಸಾದ ಗದ್ಯಾನುವಾದ. ಚಂಡಕೌಶೀಕ ಕ್ಷೇವಿೂಶ್ವರನ ಸಂಸ್ಕೃತ ನಾಟಕದ ಸಂಗ್ರಹ ಗದ್ಯರೂಪ. ಕಾಮತರ ಸರಳ ಶೈಲಿಗೆ ನಿದರ್ಶನವಾಗಿ 'ಬಾಲಕರ ಮಹಾಭಾರತದ ಕೆಲವು ಸಾಲುಗಳು ಇಲ್ಲಿವೆ-

ಅತ್ತ ಯಾದವರು ಮದ್ಯಪಾನವನ್ನು ಮಾಡಿ ತಂತಮ್ಮೊಳಗೆ ಬಡೆದಾಡಿಕೊಂಡು ಒಬ್ಬರೂ ಉಳಿಯದೆ ಮಡಿದರು. ಈ ದು:ಖದಿಂದ ಬಲರಾಮನು ಊರನ್ನು ಬಿಟ್ಟು ಕಾಡನ್ನು ಸೇರಿ, ದೇವರ ಧ್ಯಾನ ಮಾಡಿ  ಪ್ರಾಣಬಿಟ್ಟನು,. ಕೃಷ್ಣನೂ ತನ್ನ ಅವಸಾನವು ಸವಿೂಪಿಸಿತೆಂದು ಕುಳಿತಿರಲು. ಅವನ ಪಾದಗಳನ್ನು ಜಿಂಕೆಯ ಕಿವಿಯೆಂದು ಭಾವಿಸಿ ಬೇಡನೊಬ್ಬನು ಬಾಣವನ್ನು ಬಿಟ್ಟನು. ಅಲ್ಲಿಗೆಕೃಷ್ಣ ಲೀಲೆಯು ಕೊನೆಗೊಂಡಿತು. ಅಜರ್ುನನು ಅತ್ತ  ಹೋಗಲು, ವಸುದೇವನು ಅದಾದ ಮರುದಿನವೇ ಮಡಿದನು. ಅವನ ಶವಕ್ಕೆ ಬಹಳ ಗೌರವದಿಂದ ಸಂಸ್ಕಾರ ಮಾಡಿದನು. ಅವನ ಹೆಂಡಿರು ಆ ಶವದೊಡನೆ ಸಹಗಮನ ಮಾಡಿದರು. ಅಜರ್ುನನು ಇನ್ನು ಪ್ರಯೋಜನವಿಲ್ಲದಾದನು. ಅಜರ್ುನನು ಮರಳುವಾಗ ಕಳ್ಳರನ್ನಾದರೂ ಅವನಿಂದ ಜಯಿಸಲಾಗಲಿಲ್ಲ. ಅಜರ್ುನನ ಅವಸ್ಥೆಯೇ ಹೀಗಾದ ಮೇಲೆ ಪಾಂಡವರ ಬಲವು ಕುಂದಿತು .ವ್ಯಾಸಮುನಿಯ ಅಪ್ಪಣೆಯಂತ ೆಕೃಪಾಚಾರ್ಯರು ಪರೀಕ್ಷಿತನಿಗ ೆಗುರುವಾದರು. ಅವನಿಗೆ ಪಾಂಡವರು ಪಟ್ಟಕಟ್ಟಿದರು. ಮಕ್ಕಳಿಗೆ ಇಷ್ಟವಾಗುವ ಪ್ರಾಣಿ ಪಕ್ಷಿಗಳು ನಾಯಕರಾಗಿರುವ ಕವನಗಳನ್ನು ಕಾಮತರು ಬರೆದ್ದಾರೆ 'ಆನೆ ಆನೆಯೋ' ಇರುವೆಯೂ ಮಿಡಿತೆಯೂ 'ಇಂಗ್ಲಿಷಿನಿಂದ ರೂಪಾಂತರಿಸಿದ ಪದ್ಯಗಳು, ಬಾಲಕಳೆದ ನರಿಯ ಉಪದೇಶ ಕಾಮತರ ಹಾಸ್ಯಪ್ರವೃತಿಗೆ ಒಳ್ಳೆಯ ನಿದರ್ಶನ. ತೋಳನೂ ಕುರಿಮರಿಯೂ, ಗೂಡಿನಲ್ಲಿಯೂ ಇಲಿ, ಸಂತೆಯ ಕುರುಡನ ಹಾಡು ಇಂದಿಗೂ ಮಕ್ಕಳ ಮನಸೆಳೆಯಬಲ್ಲವು.
ಬೆಳಕೆಂದರೇನಯ್ಯ? ತಿಳಿಯ ಹೇಳಿರಿ ನನಗೆ.
ಬೆಳಕು ಹಾಲಂತೆ ಹರಿಯುವುದೆ? ಸವಿಯಿಹುದೇ?
ಬೆಳಕು ಸುಳಿವಾಗ ಗಾಳಿಯ ತೆರದಿ ಸುಳಿಯುವುದೆ?
ಬೆಳಕೆನ್ನ ಊರುಗೋಲಿಗೆತಟ್ಟದಿಹುದೆ?
ಹಾಲು ಕುಡಿಯಲು ಬಲ್ಲೆ ಸವಿಯರಿವೆ!ನೀರಂತೆ
ನಾಲಗೆಯು ಹಾಲು ತೆಳ್ಳನೆ ಎಂದರಿಯದೇ?
ಹಾಲು ಬೆಳ್ಳಗೆ ತೋರುತಿದೆಎಂದರೇನಯ್ಯ?
ಹಾಲಿನಂತೆಯೇ ನೀರು ಬೆಳ್ಳಗಿರದೇ

ಎಂಬ ಸಂತೆಯಕುರುಡನ ಪ್ರಶ್ನೆಗಳು ಮನಕಲಕುವಂತಿವೆ. ತನ್ನಕಾಲದ ಅನೇಕ ಶಾಲಾ ಪಠ್ಯಪುಸ್ತಕಗಳನ್ನು ಕಾಮತರು ಸಂಪಾದಿಸಿದ್ದರು.
ಸಾಹಿತ್ಯರೈಲ್ವೆ ಕಂಪೆನೆ (1916) ಎಂಬ ಹರಟ ೆಕಾಮತರ ಹಾಸ್ಯ ವಿಡಂಬನೆಗಳಿಗೆ ಒಳ್ಳೆಯ ಉದಾಹರಣೆ. ಅದರ ಒಂದು ಆಯ್ದ ಭಾಗ ಇಲ್ಲಿದೆ.
ಸೀಮೆಯ ಒಂದು ಕೊನೆಯಿಂದ ಮತ್ತೊಂದು ಕೊನೆಯ ವರೆಗೆ ಸಾಹಿತ್ಯ ರೈಲ್ವೆ ಕಂಪೆನಿಯ  ಪಟ್ಟಿಗಳ ಹಾದಿಯು ನೀಡಿಕೊಂಡಿರುವುದು. ಭಾವನೆಗಳೂ ಭಾವಿಸುವವರೂ ಇದರ ಮೇಲೆ ಪ್ರಯಾಣಿಕರು. ವಾಲ್ಮೀಕಿಯು ಯಾವುದೋ ಒಂದು ಕಾಲದಲ್ಲಿ  ಮೊದಲನೇ ವರ್ಗದಲ್ಲಿ ಹತ್ತಿದವನೂ ಇಂದಿನವರೆಗೂ ಅವನು ಮುಟ್ಟಬೇಕಾದ ಸ್ಟೇಶನ್ನೇ ಇನ್ನೂ ಸವಿೂಪವಾಗಿಲ್ಲ.
ಈ ಹೊಗೆಬಂಡಿಯ ಗಾಡರ್್ರು ತಮ್ಮ ಗುರುತು ಪರಿಚಯವನ್ನುಳ್ಳವರನ್ನು ಮೂರನೆಯ ತರಗತಿಯವರಂತಿರಲಿ-ಯಾವ ಟಿಕೇಟೂ ಇಲ್ಲದವರನ್ನು ಸಹ ಮೊದಲನೆಯ ತರಗತಿಯ ಗಾಡಿಯಲ್ಲಿ ಹತ್ತಿಸಿ ಬಿಡುವರು. ಏನನ್ಯಾಯ!
 ಇನ್ನು ಪಾಪ! ಕೆಲವರು ಬೆದರಿ ಬೆದರಿ ನಮ್ರತೆಯಿಂದ ತಮ್ಮ ಯೋಗ್ಯತೆಯನ್ನು ತಿಳಿದೂ(ಫಸ್ಟ್)ಮೊದಲನೆಯ ತರಗತಿಯ ಟಿಕೆಟ್ಟನ್ನು ಪಡೆದು ಸ್ಟೇಶನ್ನಿಗೆ ಬರುತ್ತಿರುವಾಗಲೇ ಅಲ್ಲಿಂದ ಗಾಡಿಯು ಹೊರಟೇ ಹೋಗುವುದಿದೆ. ಆ ಗಡಿಬಿಡಿಯಲ್ಲಿ ಸಿಕ್ಕಿದೆಡೆ ಮೂರನೇ ತರಗತಿಯಲ್ಲಾದರೂ ಏರಿ ಕುಳಿತವರೇ ಹತ್ತೆಂಟು ಸ್ಟೇಶನುಗಳನ್ನು ದಾಟಿದ ನಂತರ ಎಲ್ಲಿಯಾದರೂ ಗಾರ್ಡನ ದೃಷಿಗೆ ೆಇವರು ಬಿದ್ದರೆ, ಆಗ ತಾನ ೆಇವರಿಗ ೆಯೋಗ್ಯವಾದ ತರಗತಿಯ ಆಸನವು ದೊರೆಯುವುದು.
ಇಂತಹ ಅವ್ಯವಸ್ಥೆಗಳೂ ದುರವಸ್ಥೆಗಳೂ ಯಾವಾಗ ದೂರಗೊಳ್ಳವುವೋ ತಿಳಿಯದು. ಅಂತಹ ಏಪರ್ಾಡಿನ ಕೆಲವಾದರೂ ಬರುವುದೊ ಇಲ್ಲವೊ?
ಕನ್ನಡ ಸಾಹಿತ್ಯ ರೈಲೆ ್ವಕಂಪೆನಿಯ ಗಾಡಿಗಳಲ್ಲಿ ಮೊದಲನೆಯ ಎರಡನೆಯ ತರಗತಿಗಳಲ್ಲಿ ಪ್ರಯಾಣ ಮಾಡುವವರು ಬಹು ಕಡಿಮೆ ಸಂಖ್ಯೆಯವರಾಗಿಯೂ ಮೂರನೆಯ ತರಗತಿಯಲ್ಲಿ ಜನಸಂದಣಿಯು ಪ್ರಬಲವಾಗಿಯೂ ತೋರುವಂತಿದೆ.
ಗ್ರಂಥಋಣ
1.ಮುರಳೀಧರ ಉಪಾಧ್ಯ ಹಿರಿಯಡಕ(1975 ಎಂ.ಎನ್.ಕಾಮತ್ ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.
2.ವರದರಾಯ ಪೈ. ಎಂ.ಎನ್.ಕಾಮತ್ ಒಂದು ಪರಿಚಯ (1984)ಕನರ್ಾಟಕ ಸಂಘ ಪುತ್ತೂರು(ದ.ಕ)
3.ಕಾಮತ್ ಎಂ.ಎನ್.-ಅಂದಿನ ಆವೂರು (1941) ಮಿತ್ರ ಮಂಡಳಿ ಮಂಗಳೂರು.
4.ಮಂಗೇಶ ರಾವ್, ಪಂಜೆ-ಕನ್ನಡಎರಡನೇ ಪದ್ಯ ಪುಸ್ತಕ (1931)ಬಾಸೆಲ್ ಮಿಶನ್, ಮಂಗಳೂರು.

No comments:

Post a Comment