stat Counter



Thursday, October 25, 2018

ಮೂರು ಮಕ್ಕಳನ್ನು ಹೊಂದಿದರೆ ಪಂಚಾಯತ್ ಸ್ಪರ್ಧೆಗೆ ಅನರ್ಹ: ಸುಪ್ರೀಂ

ಮೂರು ಮಕ್ಕಳನ್ನು ಹೊಂದಿದರೆ ಪಂಚಾಯತ್ ಸ್ಪರ್ಧೆಗೆ ಅನರ್ಹ: ಸುಪ್ರೀಂ | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ, ಅ. 25: ಮೂರನೇ ಮಗುವನ್ನು ಹೊಂದಿದ ವ್ಯಕ್ತಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗುತ್ತಾನೆ. ಅಂಥ ವ್ಯಕ್ತಿಗಳು ಪಂಚಾಯತ್ ಸದಸ್ಯ ಅಥವಾ ಸರಪಂಚ ಹುದ್ದೆಗೆ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎರಡು ಮಕ್ಕಳ ನೀತಿಗೆ ಬದ್ಧವಾಗುವ ಸಲುವಾಗಿ ಮೂರನೇ ಮಗುವನ್ನು ದತ್ತು ನೀಡಿ ಪಂಚಾಯತ್ ಸರಪಂಚ ಹುದ್ದೆ ಉಳಿಸಿಕೊಳ್ಳುವ ಸುಪ್ರೀಂಕೋರ್ಟ್ ಕಟ್ಟೆ ಏರಿದ ಒಡಿಶಾದ ಬುಡಕಟ್ಟು ಜನಾಂಗದ ಸರಪಂಚರೊಬ್ಬರ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಕೆ.ಎಂ.ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

No comments:

Post a Comment