ಸಿನಿಮೋತ್ಸವದಲ್ಲಿ ಇಂದು ನನ್ನ ಆಯ್ಕೆ: ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ನೋಡಲೇಬೇಕಾದ ಸಿನಿಮಾಗಳು ಯಾವವು ಎಂಬ ಜಿಜ್ಞಾಸೆ ಅನೇಕರಿಗೆ ಇರಬಹುದು. ಅಂಥವರಿಗೆ ತೋರುದೀಪವಾಗಲಿ ಎಂಬ ಉದ್ದೇಶದಿಂದ ನಿತ್ಯವೂ ಆಯ್ದ ಒಬ್ಬ ಸಿನಿಮಾ ವಿದ್ಯಾರ್ಥಿ/ ನಿರ್ದೇಶಕ/ ನಿರ್ಮಾಪಕ/ತಂತ್ರಜ್ಞಾನ ಪರಿಣತರು ತಮ್ಮ ಆಯಾ ದಿನದ ಆಯ್ಕೆಯ ಸಿನಿಮಾಗಳು ಮತ್ತು ಹಾಗೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎನ್ನುವುದನ್ನು ಹಂಚಿಕೊಳ್ಳಲಿದ್ದಾರೆ. ಸಿನಿಮೋತ್ಸವದಲ್ಲಿ ಇಂದು (ಫೆ.1) ಪ್ರದರ್ಶನ ಕಾಣಲಿರುವ ಸಿನಿಮಾಗಳಲ್ಲಿ ತಮ್ಮ ಆಯ್ಕೆಯನ್ನು ಹೆಕ್ಕಿ ಕೊಟ್ಟಿದ್ದಾರೆ ಕಥೆಗಾರ ವಸುಧೇಂದ್ರ.
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Sunday, January 31, 2016
ಆಳ ಚರ್ಚೆ ಕಾಣದ ‘ಅಸಹಿಷ್ಣುತೆ’ - -ಡಾ / ಅಜಕ್ಕಳ ಗಿರೀಶ ಭಟ್
ಆಳ ಚರ್ಚೆ ಕಾಣದ ‘ಅಸಹಿಷ್ಣುತೆ’: ಸಾಹಿತಿಗಳು, ಕಲಾವಿದರಿಗೆ ದೇಶದ ಗಡಿಗಳಿಲ್ಲ ಎಂದು ಹೇಳುವವರು ಭಾರತ ಮತ್ತು ನೆರೆಹೊರೆ ದೇಶಗಳಲ್ಲಿರುವ ಅಸಹಿಷ್ಣುತೆಯ ಸ್ವರೂಪಗಳನ್ನು ಹೋಲಿಕೆ ಮಾಡಿದ್ದಾರೆಯೇ?
ಅಸಹನೆ: ಸಂವಾದರಾಹಿತ್ಯ ಕಾಲದ ಕಹಿಫಲ -ಟಿ. ಪಿ. ಅಶೋಕ
ಅಸಹನೆ: ಸಂವಾದರಾಹಿತ್ಯ ಕಾಲದ ಕಹಿಫಲ: ಪ್ರೀತಿ – ಪ್ರೇಮದಷ್ಟೇ ಸಹಜವಾಗಿ ಅಸಹನೆ, ಅಸಹಿಷ್ಣುತೆ ಪದಗಳು ಸಲೀಸಾಗಿ ಬಳಕೆಯಾಗುತ್ತಿರುವ ಸಂದರ್ಭ ಇಂದಿನದು. ನಾವು ಬದುಕುತ್ತಿರುವ ಸಮಾಜದ ಬಗ್ಗೆ ಭಯ ಹುಟ್ಟಿಸುವಂತೆ, ಕೆಲವೊಮ್ಮೆ ತಮಾಷೆಯ ಪದಪ್ರಯೋಗಗಳಂತೆ ಕೇಳಿಸುವ ಈ ಶಬ್ದಗಳು ವರ್ತಮಾನದ ತವಕ ತಲ್ಲಣಗಳ ಸೃಷ್ಟಿಯೇ?
ಅಸಹಿಷ್ಣುತೆಗೆ ವಚನಗಳಲ್ಲಿ ಪರಿಹಾರ -
ಅಸಹಿಷ್ಣುತೆಗೆ ವಚನಗಳಲ್ಲಿ ಪರಿಹಾರ: ‘ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ವಚನಗಳಲ್ಲಿ ಪರಿಹಾರವಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.
‘ಜ್ವರ ಬಂದರೆ ಕುಮಾರವ್ಯಾಸ ಭಾರತವನ್ನು ತಲೆಕೆಳಗಿಡುತ್ತಿದ್ದಳು’
‘ಜ್ವರ ಬಂದರೆ ಕುಮಾರವ್ಯಾಸ ಭಾರತವನ್ನು ತಲೆಕೆಳಗಿಡುತ್ತಿದ್ದಳು’: ‘ನನಗೆ ಜ್ವರ ಬಂದರೆ ನನ್ನಜ್ಜಿ ನನ್ನ ತಲೆದಿಂಬಿನ ಕೆಳಗೆ ಕುಮಾರವ್ಯಾಸ ಭಾರತದ ಕೃತಿಯನ್ನು ಇಡುತ್ತಿದ್ದಳು..’
ಹೀಗೆಂದವರು ಕವಿ ಎಚ್.ಎಸ್. ವೆಂಕಟೇಶಮೂರ್ತಿ.
ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ - - ಜಿ. ಕೃಷ್ಣಪ್ಪ
ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ: ನಾದಲೀಲೆ ಹಾಗೂ ನಿಸರ್ಗದ ಉಪಾಸನೆ ಎರಡನ್ನೂ ಒಳಗೊಂಡ ಅದ್ಭುತ ಪದ್ಯ ‘ಪಾತರಗಿತ್ತಿ’. ವರಕವಿ ಬೇಂದ್ರೆಯ ಮಗು ಮನಸ್ಸನ್ನು ಸೂಚಿಸುವ ಈ ಕವಿತೆ ಚಿಣ್ಣರ ಜೊತೆಗೆ ದೊಡ್ಡವರನ್ನೂ ಕುಣಿಸುವಂತಿದೆ. ಜ. 31 ‘ಕವಿದಿನ’– ಕವಿ ಬೇಂದ್ರೆಯವರ ಹುಟ್ಟಿದ ದಿನ. ಕವಿತೆಯ ಓದು – ವಿಶ್ಲೇಷಣೆ ಕವಿಯನ್ನು ನೆನಪಿಸಿಕೊಳ್ಳುವ ಅತ್ಯುತ್ತಮ ವಿಧಾನ.
ಅಂಬಿಕಾತನಯ ದತ್ತರಿಗೆ ಅಭಿಮಾನದ ಹೂಮಳೆ
ಅಭಿಮಾನದ ಹೂಮಳೆ: 1974 ಕನ್ನಡ ಸಾಹಿತ್ಯ ಲೋಕದ ಪಾಲಿಗೆ ಹಬ್ಬದ ವರ್ಷ. ಹೂತ ಹುಣಸಿಯಲ್ಲೂ ಕಾವ್ಯವನ್ನು ಕಾಣಿಸುವ ಕವಿ ದ.ರಾ. ಬೇಂದ್ರೆ ಅವರ ‘ನಾಕು ತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷವದು. ಪ್ರಶಸ್ತಿ ಎನ್ನುವುದು ವ್ಯಕ್ತಿಗತ ಸಂಭ್ರಮವಾಗದೆ ನಾಡಿನ ಸಂಭ್ರಮವಾಗಿ ರೂಪುಗೊಳ್ಳುತ್ತಿದ್ದ ದಿನಗಳವು.
ಕಠಾರಿಪಾಳ್ಯದೊಳಗೆ, ‘ಆನಂದ ನಿಲಯ’ದೊಳಗೆ...{ ಕಾಮರೂಪಿ ಅವರೊಂದಿಗೆ ಪಟ್ಟಾಂಗ }
ಕಠಾರಿಪಾಳ್ಯದೊಳಗೆ, ‘ಆನಂದ ನಿಲಯ’ದೊಳಗೆ...: ಪೂರ್ಣಚಂದ್ರ ತೇಜಸ್ವಿ ಸೃಷ್ಟಿಸಿದ ಅಪೂರ್ವ ಪಾತ್ರಗಳಲ್ಲೊಂದಾದ ಕರ್ವಾಲೊ ಅವರ ಮನೆಗೆ ಎಂದಾದರೂ ಹೋಗಿದ್ದೀರಾ? ಇಲ್ಲವಾದರೆ, ಕೋಲಾರದ ಕಠಾರಿಪಾಳ್ಯದಲ್ಲಿರುವ ‘ಆನಂದ ನಿಲಯ’ಕ್ಕೆ ಒಮ್ಮೆ ಹೋಗಿಬರಬೇಕು. ನೂರಾರು ಪುಸ್ತಕಗಳ ನಡುವೆ ಹುದುಗಿಹೋದಂತೆ ಅಥವಾ ಆ ಪುಸ್ತಕರಾಶಿಯೊಳಗಿನಿಂದ ಯಾವುದೋ ಪಾತ್ರ ಎದ್ದುಬಂದು, ಇತರ ಪಾತ್ರಗಳ ಕುಶಲ ವಿಚಾರಿಸುವಂತೆ ಹಿರಿಯರೊಬ್ಬರು ಕಾಣಿಸುತ್ತಾರೆ.
ಧರ್ಮ, ಸಂಸ್ಕೃತಿ, ಧಾರ್ಮಿಕತೆ ಬೇರೆ ಬೇರೆ - ಬರಗೂರು
ಧರ್ಮ, ಸಂಸ್ಕೃತಿ, ಧಾರ್ಮಿಕತೆ ಬೇರೆ ಬೇರೆ: ‘ಇತ್ತೀಚಿನ ವರ್ಷಗಳಲ್ಲಿ ಧರ್ಮವನ್ನೇ ಸಂಸ್ಕೃತಿ ಎಂದು, ಧರ್ಮ ಮತ್ತು ಧಾರ್ಮಿಕತೆ ಒಂದೇ ಎಂದು, ಧರ್ಮ ಮತ್ತು ರಾಷ್ಟ್ರೀಯತೆ ಒಂದೇ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
Saturday, January 30, 2016
ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಅಮಾನುಷ ಹಲ್ಲೆ
ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಅಮಾನುಷ ಹಲ್ಲೆ: ಸ್ವೀಡನ್‌ನ ಸ್ಟಾಕ್‌ಹೋಮ್ ಬಳಿಯ ಮರ್ಸ್ಟ್ರಾದಲ್ಲಿನ ನಿರಾಶ್ರಿತರ ನೋಂದಣಿ ಕೇಂದ್ರದ ಹೊರಭಾಗದಲ್ಲಿರುವ ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಸುಮಾರು ನೂರು ಮಂದಿ ಮುಸುಕುಧಾರಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
Friday, January 29, 2016
ಕುತಂತ್ರ ರಾಜಕಾರಣದ ಆರೋಪ ಸರಿಯೇ? - ಡಾ / ರಾಜೇಗೌಡ ಹೊಸಹಳ್ಳಿ
ಕುತಂತ್ರ ರಾಜಕಾರಣದ ಆರೋಪ ಸರಿಯೇ?: ಎಲ್ಲರೂ ದೇಶದ ಎಲ್ಲರನ್ನೂ ತಬ್ಬಿಕೊಳ್ಳುತ್ತಾ ಸಾಗುವುದು ಎಲ್ಲರ ಜವಾಬ್ದಾರಿ. ಇದೇ ಪ್ರಗತಿ
‘ನಮ್ಮ ಕಾರು ಸತ್ತುಹೋಗಿದ್ದು...’-ಸುಕನ್ಯಾ ಕಳಸ
‘ನಮ್ಮ ಕಾರು ಸತ್ತುಹೋಗಿದ್ದು...’: ಶೀರ್ಷಿಕೆ ಓದಿದ ಕೂಡಲೇ “ಕಾರು ಎಲ್ಲಾದ್ರೂ ಸಾಯುತ್ತಾ?! ಸಾಯೋಕೆ ಅದೇನು ಕಾರೇ ಅಥ್ವಾ ಎಮ್ಮೆ ಕರುವೇ?’’ ಅಂತ ಗಂಟು ಮುಖ ಮಾಡಿಕೊಳ್ಳಬೇಡಿ ಮಾರಾಯ್ರೇ... ಗಂಟುಮುಖ ಮಾಡಿಕೊಂಡಷ್ಟೂ ಅದು ನಮ್ಮ ಆರೋಗ್ಯ ಮತ್ತು ದುಡ್ಡಿನ ಗಂಟು ಎರಡನ್ನೂ ಕರಗಿಸುತ್ತೆ-ಒಂದು ಕರಗಿದರೆ ಇನ್ನೊಂದು ಕರಗುವುದು ಫ್ರೀ!
ಈ ಚಿತ್ರಗಳ ನೀವು ನೋಡಲೇಬೇಕು...
ಈ ಚಿತ್ರಗಳ ನೀವು ನೋಡಲೇಬೇಕು...: ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ನೋಡಲೇಬೇಕಾದ ಸಿನಿಮಾಗಳು ಯಾವುವು ಎಂಬ ಜಿಜ್ಞಾಸೆ ಅನೇಕರಿಗೆ ಇರಬಹುದು. ಈ ಸರಣಿಯ ಮೊದಲ ಕಂತಿನಲ್ಲಿ ಸಿನಿಮೋತ್ಸವದಲ್ಲಿ ನೋಡಲೇಬೇಕಾದ ನಾಲ್ಕು ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ ಹಿರಿಯ ಸಿನಿಮಾ ವಿಮರ್ಶಕ ಎನ್. ಮನುಚಕ್ರವರ್ತಿ.
Thursday, January 28, 2016
Wednesday, January 27, 2016
ನಿಜವಾದ ಸಾಹಿತಿ ಮನುಜ ಪಕ್ಷಪಾತಿ
ನಿಜವಾದ ಸಾಹಿತಿ ಮನುಜ ಪಕ್ಷಪಾತಿ: ‘ನಿಜವಾದ ಸಾಹಿತಿ ರಾಜಕೀಯ ಪಕ್ಷಗಳ ಸದಸ್ಯ ಆಗಿರುವುದಿಲ್ಲ. ಶುದ್ಧ ಮನುಜ ಪಕ್ಷಪಾತಿ ಆಗಿರುತ್ತಾನೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕನ್ನಡ ಬಳಗ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಾಯ್ಕಿಣಿ ಜಗತ್ತು’ ಕಾರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.
Tuesday, January 26, 2016
ಮಂಟೊ ಮುಂಬೈ ಬಿಟ್ಟು ಹೋದದ್ದೇಕೆ?
ಮಂಟೊ ಮುಂಬೈ ಬಿಟ್ಟು ಹೋದದ್ದೇಕೆ?: ಉರ್ದು ಭಾಷೆಯ ಅತ್ಯುತ್ತಮ ಕತೆಗಾರನೆಂದೇ ಸಾದಾತ್ ಹಸನ್ ಮಂಟೊ ಅವರನ್ನು ಪರಿಗಣಿಸಲಾಗುತ್ತದೆ. ಉರ್ದು ಭಾಷೆ ಮೇಲೆ ಪ್ರಭುತ್ವ ಹೊಂದಿದ್ದ ಅವರು 600ಕ್ಕೂ ಹೆಚ್ಚು ಕತೆಗಳನ್ನು, ನೂರಕ್ಕೂ ಹೆಚ್ಚು ರೇಡಿಯೊ ನಾಟಕಗಳನ್ನು ಬರೆದಿದ್ದರು.
Monday, January 25, 2016
ನೂರು ದಳದ ಮಲ್ಲಿಗೆ: ಕೆ.ಎಸ್.ನರಸಿಂಹಸ್ವಾಮಿ
ನೂರು ದಳದ ಮಲ್ಲಿಗೆ: ಕೆ.ಎಸ್.ನರಸಿಂಹಸ್ವಾಮಿ: ಕನ್ನಡ ಸಾರಸ್ವತಲೋಕದಲ್ಲಿ ಮಲ್ಲಿಗೆ ಬಳ್ಳಿಯನ್ನು ನೆಟ್ಟ ಕವಿ ಕೆ.ಎಸ್. ನರಸಿಂಹಸ್ವಾಮಿ (ಜ.26, 1915- ಡಿ. 28, 2003). ಆ ಬಳ್ಳಿಯಿಂದ ಕನ್ನಡದ ರಸಿಕ ಮನಸ್ಸುಗಳು ನಿರಂತರವಾಗಿ ಮಲ್ಲಿಗೆ ಹಂಬುಗಳನ್ನು ಕೊಯ್ದು, ತಂತಮ್ಮ ಎದೆಯೊಳಗೆ ಊರಿಕೊಂಡು ನೀರೆರೆಯುತ್ತಿದ್ದಾರೆ. ‘ಮೈಸೂರ ಮಲ್ಲಿಗೆ’ ಕವಿತೆಗಳ ಮೂಲಕ ಹೊಸ ‘ಜಾನಪದ’ ಸೃಷ್ಟಿಸಿದ ಕವಿಯ ಜನ್ಮಶತಾಬ್ದಿ ವರ್ಷವಿದು...
ಸಹಸ್ರ ಕಂಠದ ಗಾಯನ ‘ಪ್ರೇಮಕವಿ’ಗೆ ನಮನ
ಸಹಸ್ರ ಕಂಠದ ಗಾಯನ ‘ಪ್ರೇಮಕವಿ’ಗೆ ನಮನ: ಕಾವ್ಯಗಳಲ್ಲಿ ದಾಂಪತ್ಯದ ಸವಿಯನ್ನು ಕಟ್ಟಿ ಕೊಟ್ಟ ‘ಮೈಸೂರು ಮಲ್ಲಿಗೆ’ ಖ್ಯಾತಿಯ ಕೆಎಸ್‌ನ ಅವರಿಗೆ ಸೋಮವಾರ ಕಿಕ್ಕೇರಿ ಪಟ್ಟಣದಲ್ಲಿ ಭಿನ್ನರೀತಿಯ ಗಾಯನ ನಮನ ನಡೆಯಿತು.
ಧರಣಿ ಸ್ಥಳದಲ್ಲೇ ಪಾಠ–ಪ್ರವಚನ...
ಧರಣಿ ಸ್ಥಳದಲ್ಲೇ ಪಾಠ–ಪ್ರವಚನ...: ತಮಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಜಿಲ್ಲೆಯ ಅತಿಥಿ ಉಪನ್ಯಾಸಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಗುರುವಾರವೂ ಮುಂದುವರೆಯಿತು. ಗುರುವಾರ ಪ್ರತಿಭಟನಾ ಸ್ಥಳದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಅವರು ತಮ್ಮ ಪ್ರತಿಭಟನೆ ಮುಂದುವರೆಸಿದರು.
ರಾಜ್ಯದ 11 ಮಂದಿಗೆ ಪದ್ಮ ಗೌರವ
ರಾಜ್ಯದ 11 ಮಂದಿಗೆ ಪದ್ಮ ಗೌರವ: ಸಾಹಿತಿ ಎಲ್.ಎಲ್.ಭೈರಪ್ಪ, ಗಾಯಕ ಎಂ.ವೆಂಕಟೇಶ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ 112 ಮಂದಿ ಸಾಧಕರಿಗೆ 2016ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.
‘ಆಪ್ತ ಸಂವಾದ ಆಗಬೇಕು’ { ಬೆಂಗಳುರು ಅಂತಾರಾಷ್ಟ್ರೀಯ ಚಿತ್ರೋತ್ಸವ -2016
‘ಆಪ್ತ ಸಂವಾದ ಆಗಬೇಕು’: ಎಂಟನೇ ‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗುತ್ತಿರುವ ಚಿತ್ರೋತ್ಸವಕ್ಕೆ ಜಾಗತಿಕ ಸಿನಿಮಾ ನಿರ್ಮಾರ್ತೃಗಳು ಸಹ ಸಾಕ್ಷಿಯಾಗುತ್ತಿದ್ದಾರೆ.
ವಿ. ಸೀತಾರಾಮಯ್ಯ --- ಎಮ್ಮ ಮನೆಯಂಗಳದಿ...
~Madhura Haadugalu~: ಎಮ್ಮ ಮನೆಯಂಗಳದಿ...: - ವಿ. ಸೀತಾರಾಮಯ್ಯ ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು || ನಿಮ್ಮ ಮಡಿಲೊಳಗಿರಲು ತಂದಿರುವೆವು ಕೊಳಿರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನು ತುಂಬಲ...
ವೇಮುಲ ನೆನಪಿನಲ್ಲಿ ಒಂದೆರಡು ಮಾತು... ಆಕಾರ್ ಪಟೇಲ್
ವೇಮುಲ ನೆನಪಿನಲ್ಲಿ ಒಂದೆರಡು ಮಾತು...: ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇಕಡ 25ರಷ್ಟಕ್ಕಿಂತ ಹೆಚ್ಚಿದೆ ಎಂಬುದನ್ನು 2011ರ ಜನಗಣತಿ ತೋರಿಸಿದೆ. ಇದರಲ್ಲಿ ಶೇಕಡ 16.6ರಷ್ಟು ಜನ ದಲಿತರು, ಶೇಕಡ 8.6ರಷ್ಟು ಜನ ಆದಿವಾಸಿಗಳು.
ಜಾತಿ ರಾಜಕಾರಣ ಮತ್ತು ವಿವೇಕಹೀನ ವಿ.ವಿ.ಗಳು - ನಟರಾಜ ಹುಳಿಯಾರ್
ಜಾತಿ ರಾಜಕಾರಣ ಮತ್ತು ವಿವೇಕಹೀನ ವಿ.ವಿ.ಗಳು: ಹೋರಾಟದ ಕಣದಲ್ಲಿ ವಿಚಾರವಾದಿಗಳಿಂದ ಮೊಳಗಲಿಲ್ಲವೇಕೆ ಗಟ್ಟಿ ದನಿ?
ರವಿಶಂಕರ್ ಗುರೂಜಿ, ರಜನಿಕಾಂತ್‌ಗೆ ಪದ್ಮವಿಭೂಷಣ್
ರವಿಶಂಕರ್ ಗುರೂಜಿ, ರಜನಿಕಾಂತ್‌ಗೆ ಪದ್ಮವಿಭೂಷಣ್: ಪ್ರಸಕ್ತ ಸಾಲಿನ ಪದ್ಮ ಪಶಸ್ತಿಗಳನ್ನು ಪ್ರಕಟಿಸಲಾಗಿದ್ದು, ರಾಜ್ಯದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಖ್ಯಾತ ಚಿತ್ರನಟ ರಜನಿಕಾಂತ್, ಮಾಧ್ಯಮ ದೊರೆ ರಾಮೋಜಿ ರಾವ್ ಸೇರಿದಂತೆ ಹಲವರಿಗೆ ಪದ್ಮ ವಿಭೂಷಣ್ ಪುರಸ್ಕಾರ ಸಂದಿದೆ.
Sunday, January 24, 2016
ರೈತರು ಸೆಮಿನಾರ್‌ಗೆ ಬಂದು ಮಾತನಾಡಲಾದೀತೇ: ಬಿಕೆಸಿ
ರೈತರು ಸೆಮಿನಾರ್‌ಗೆ ಬಂದು ಮಾತನಾಡಲಾದೀತೇ: ಬಿಕೆಸಿ: ರೈತರು, ಶ್ರಮಿಕರು ಅಸಹನೆ ವ್ಯಕ್ತಪಡಿಸುತ್ತಿಲ್ಲ ಎಂದು ವಿಮರ್ಶಕ ಪ್ರೊ. ನಟರಾಜ್ ಹುಳಿಯಾರ್ ಅವರು ‘ಧಾರವಾಡ ಸಾಹಿತ್ಯ ಸಂಭ್ರಮ’ದಲ್ಲಿ ಆಡಿದ್ದ ಮಾತಿಗೆ ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೃಷಿಕರ ಸಮಸ್ಯೆಗೆ ಪರಿಹಾರ ಅರಸುತ್ತಾ... { ಧಾರವಾಡ ಸಾಹಿತ್ಯ ಸಂಭ್ರಮ -2016 }
ಕೃಷಿಕರ ಸಮಸ್ಯೆಗೆ ಪರಿಹಾರ ಅರಸುತ್ತಾ...: ‘ರೈತರ ಆತ್ಮಹತ್ಯೆಗಳು ಎಷ್ಟಾದವು ಎಂದು ಪಟ್ಟಿ ಮಾಡಿ ನೀಡಿದ ಮಾಧ್ಯಮಗಳು, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿ ಆ ಕಾಯಕವನ್ನು ಹೇಗೆ ಮುಂದುವರಿಸಿಕೊಂಡು ಬದುಕು ಮುನ್ನಡೆಸಿದ್ದಾಳೆ ಎಂಬುದನ್ನು ತೋರಿಸಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಗೆ ಯಾರೂ ಹೋಗುವುದಿಲ್ಲ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಿದ್ದಂತೆಯೇ ಸಭೆಯಲ್ಲಿ ನೀರವ ಮೌನ ಆವರಿಸಿತು.
ಮತ್ತೆ ಮತ್ತೆ ಕಾಡಿದ ‘ದಿನಕರ’ {ಧಾರವಾಡ ಸಾಹಿತ್ಯ ಸಂಭ್ರಮ 2016 }
ಮತ್ತೆ ಮತ್ತೆ ಕಾಡಿದ ‘ದಿನಕರ’: ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು/ ಕೊಳ್ಳಿರೀ ಮಗುವನ್ನು, ಎಮ್ಮ ಮನೆ ಬೆಳಕನ್ನು/ನಿಮ್ಮ ಮನೆಯನು ತುಂಬಲೊಪ್ಪಿಸುವೆವು...’ ಮತೆĶ ಮತೆĶ ಕಾಡಿದ ‘ದಿನಕರ’ಮತ್ತೆ ಮತ್ತೆ ಕಾಡಿದ ‘ದಿನಕರ’
‘ಆತ್ಮಕಥೆಗಳು ಪೂರ್ತಿ ಸತ್ಯವಲ್ಲ’ { ಧಾರವಾಡ ಸಾಹಿತ್ಯ ಸಂಭ್ರಮ -2016 }
‘ಆತ್ಮಕಥೆಗಳು ಪೂರ್ತಿ ಸತ್ಯವಲ್ಲ’: ‘ಆತ್ಮಕಥೆಗಳು ಕೆಲವು ಸತ್ಯಗಳನ್ನು ಮುಚ್ಚಿಟ್ಟುಕೊಳ್ಳುತ್ತವೆ’ ಎಂದು ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.
ಸಾಹಿತ್ಯ ಸಂಭ್ರಮದ ಕೊನೆಯ ದಿನವಾದ ಭಾನುವಾರ ನಡೆದ ‘ಸತ್ಯದೊಂದಿಗೆ ಪ್ರಯೋಗ’(ಕನ್ನಡ ಆತ್ಮಕಥೆಗಳು)’ ಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಕಾವ್ಯದೆಡೆಗಿನ ಅಸಹನೆಗೆ ಆಕ್ರೋಶ { ಧಾರವಾಡ ಸಾಹಿತ್ಯ ಸಂಭ್ರಮ -2016 }
ಮಹಾಕಾವ್ಯದೆಡೆಗಿನ ಅಸಹನೆಗೆ ಆಕ್ರೋಶ: ಮಹಾಕಾವ್ಯದ ಬಗೆಗಿನ ಅಸಮ್ಮತಿಯ ನಿಲುವುಗಳನ್ನು ಖಂಡಿಸುತ್ತಲೇ ಅದರ ಪ್ರಸ್ತುತತೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಭಾನುವಾರ ಸಾಹಿತ್ಯ ಸಂಭ್ರಮದಲ್ಲಿ ನಡೆದ ‘ಕನ್ನಡದಲ್ಲಿ ಇಷ್ಟು ಮಹಾಕಾವ್ಯಗಳು ಏಕೆ?’ ಗೋಷ್ಠಿ ಯಶಸ್ವಿಯಾಯಿತು.
ವಿಮಾನ ದುರಂತದಲ್ಲೇ ನೇತಾಜಿ ಸಾವು
ವಿಮಾನ ದುರಂತದಲ್ಲೇ ನೇತಾಜಿ ಸಾವು: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಕಣ್ಮರೆಗೆ ಸಂಬಂಧಪಟ್ಟ 100 ರಹಸ್ಯ ದಾಖಲೆಗಳ ಡಿಜಿಟಿಲ್ ರೂಪವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ.
Saturday, January 23, 2016
ಬಹುವಚನದ ಪ್ರತಿನಿಧಿ ರಾಜಶೇಖರ್ -ಆರ್ಕೆ , ಮಣಿಪಾಲ
ಬಹುವಚನದ ಪ್ರತಿನಿಧಿ ರಾಜಶೇಖರ್ | Vartha Bharathi- ವಾರ್ತಾ ಭಾರತಿ:
'via Blog this'
g. rajashekhar - bahuvachana bharatha |
ಲಾವಣಿ ಹರಿಸಿದ ಗೀಯ, ಗೀಯ...
ಲಾವಣಿ ಹರಿಸಿದ ಗೀಯ, ಗೀಯ...: ಹೆಣ್‌ಸರಜಾತ ಪದ್ಮಿನಿ
ಸುರತ ಚಂದ್ರಣಿ ಒಂಟಿ ನಾಗಿಣಿ
ನೋಡೆ ತಿರುಗಿ
ಮರಿಗುದಿರಿ ಕುಣಿಸಿದಾಂಗ
ನಾಜೂಕು ನಿನ್ನ ನಡಿಗಿ
ಒಡನಾಟದ ರಸಪ್ರಸಂಗಗಳು { ಧಾರವಾಡ ಸಾಹಿತ್ಯ ಸಂಭ್ರಮ -2016 }
ಒಡನಾಟದ ರಸಪ್ರಸಂಗಗಳು: ‘ಸಾಹಿತಿಗಳೊಂದಿಗೆ ನಾವು’ ಗೋಷ್ಠಿ ಸಾಹಿತ್ಯಾಸಕ್ತರನ್ನು ಮನದಣಿಯೆ ರಂಜಿಸಿತು. ಗೋಷ್ಠಿಯ ನಿರ್ದೇಶಕರಾಗಿದ್ದ ಯಶವಂತ ಸರದೇಶಪಾಂಡೆ ಅವರೂ ಸೇರಿದಂತೆ ಎಂಟು ಜನರು ವಿವಿಧ ಗಣ್ಯ ಸಾಹಿತಿಗಳ ಜತೆಯ ಒಡನಾಟದಲ್ಲಿ ಪಡೆದುಕೊಂಡ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು. ಸುಮಾರು ಒಂದೂವರೆ ಗಂಟೆ ಕಾಲ ಪ್ರೇಕ್ಷಕರು ನಕ್ಕು ನಲಿಯುವಂತೆ ಮಾಡಿದ ಗೋಷ್ಠಿ ಸಾಹಿತ್ಯದ ಗಂಭೀರ ಚರ್ಚೆಗೆ ಲಘು ಲಹರಿಯ ಖುಷಿಯನ್ನು ಬೆರೆಸಿತು.
ಮಾಧ್ಯಮಗಳ ವಿರುದ್ಧ ಆಕ್ರೋಶಕ್ಕೆ ವೇದಿಕೆಯಾದ ಗೋಷ್ಠಿ
ಮಾಧ್ಯಮಗಳ ವಿರುದ್ಧ ಆಕ್ರೋಶಕ್ಕೆ ವೇದಿಕೆಯಾದ ಗೋಷ್ಠಿ: ‘ಮುದ್ರಣ ಮಾಧ್ಯಮಗಳಿಗಿಂತ ವಿದ್ಯುನ್ಮಾನ ಮಾಧ್ಯಮ ಹೆಚ್ಚು ಅಪಾಯಕಾರಿ’ ಎಂದು ರಂಗಕರ್ಮಿ, ಲೇಖಕ ಬಿ. ಸುರೇಶ್ ಹೇಳಿದರು.
‘ಲಲಿತ ಪ್ರಬಂಧಗಳೆಡೆಗೆ ವಿಮರ್ಶಕರ ನಿರ್ಲಕ್ಷ್ಯ’ { ಧಾರವಾಡ ಸಾಹಿತ್ಯ ಸಂಭ್ರಮ -2016 }
‘ಲಲಿತ ಪ್ರಬಂಧಗಳೆಡೆಗೆ ವಿಮರ್ಶಕರ ನಿರ್ಲಕ್ಷ್ಯ’: ‘ಸಾಹಿತ್ಯದಲ್ಲಿಯೂ ಶ್ರೇಣೀಕರಣವಿದೆ. ಅದರ ಏಣಿಯ ಕೆಳಗೆ ಅನೇಕ ಪ್ರಕಾರಗಳು ಉಳಿದುಕೊಂಡಿವೆ. ಅದರಲ್ಲಿ ಲಲಿತ ಪ್ರಬಂಧವೂ ಒಂದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.
ಅಭಿವೃದ್ಧಿಯ ಓಟದಲ್ಲಿ ಅಂಟಿದ ಮಸಿ -ಎಮ್. ಜಿ. ಬಾಲಕೃಷ್ಣ
ಅಭಿವೃದ್ಧಿಯ ಓಟದಲ್ಲಿ ಅಂಟಿದ ಮಸಿ: ಮಂಗಳೂರಿನ ಜೋಕಟ್ಟೆ ಜನವಸತಿ ಪ್ರದೇಶದ ಸಮೀಪ ಎಂಆರ್‌ಪಿಎಲ್‌ನ ಪೆಟ್ರೋಲಿಯಂ ಕೋಕ್ ಮತ್ತು ಸಲ್ಫರ್ ಘಟಕ ಆರಂಭವಾದ ಮೇಲೆ ಸುತ್ತಲಿನ ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ಜನ ಪ್ರತಿಭಟನೆಗಿಳಿದಿದ್ದು, ಒಗ್ಗಟ್ಟಿನ ಫಲವಾಗಿ ಕಂಪೆನಿ 2 ವರ್ಷದೊಳಗೆ ಕೋಕ್ ಘಟಕದ ಒಂದು ಭಾಗ ಸ್ಥಳಾಂತರಕ್ಕೆ ಒಪ್ಪಿದೆ. ಈ ಕುರಿತು ವರದಿ ನೀಡಿದ್ದಾರೆ ಎಂ.ಜಿ.ಬಾಲಕೃಷ್ಣ
Friday, January 22, 2016
ಪ್ರಸ್ತುತದ ಸನ್ನಿವೇಶಕ್ಕೆ ಚರಿತೆಯ ಪುಟಗಳ ಕನ್ನಡಿ [ ಧಾರವಾಡ ಸಾಹಿತ್ಯ ಸಂಭ್ರಮ -2016 ]
ಪ್ರಸ್ತುತದ ಸನ್ನಿವೇಶಕ್ಕೆ ಚರಿತೆಯ ಪುಟಗಳ ಕನ್ನಡಿ: ‘ದೇವರು ಯುದ್ಧ ಮಾಡುತ್ತಿರುವನೇ? ಯಾರ ವಿರುದ್ಧ ಯುದ್ಧ ಮಾಡುತ್ತಿರುವುದು? ಕೊಲ್ಲುವುದು ಯಾರನ್ನು? ತಾನೇ ಸೃಷ್ಟಿಸಿದ ಜೀವಿಗಳನ್ನೇ? ಕೊಲ್ಲುವುದೇ ಆಗಿದ್ದರೆ ಸೃಷ್ಟಿಸುವ ಅಗತ್ಯವೇನಿತ್ತು? ಸೃಷ್ಟಿಸುವುದು ಮತ್ತು ನಾಶಪಡಿಸುವುದು ಅವನ ಆಟವೇ. ಅವನ ಆಟಕ್ಕೆ ಜೀವಿಗಳೆಲ್ಲಾ ನೋವು ಅನುಭವಿಸುವುದು ಯಾಕೆ? ನೋವಿಲ್ಲದೇ ಎಲ್ಲರೂ ಸುಖದ ಬದುಕಿನಲ್ಲಿ ನಲಿಯುತ್ತಿದ್ದರೆ ತನ್ನನ್ನು ಯಾರೂ ಲಕ್ಷಿಸದೇ ಹೋದಾರೆಂಬ ಅಳುಕೇ?’
ರಂಜಿಸಿದ ಅಷ್ಟಾವಧಾನಧ್ [ ಧಾರವಾಡ ಸಾಹಿತ್ಯ ಸಂಭ್ರಮ 2016 ]
ರಂಜಿಸಿದ ಅಷ್ಟಾವಧಾನ: ಧಾರವಾಡದಲ್ಲಿ ನಡೆಯುತ್ತಿರುವ ‘ಸಾಹಿತ್ಯ ಸಂಭ್ರಮ’ದಲ್ಲಿ ಮಧ್ಯಾಹ್ನ ಭೋಜನದ ನಂತರ ನಡೆದ ಆರ್. ಗಣೇಶ್ ಅವರ ಅಷ್ಟಾವಧಾನ ಕಾರ್ಯಕ್ರಮ ಕಿಕ್ಕಿರಿದ ಸಾಹಿತ್ಯಾಸಕ್ತರನ್ನು ನಿದ್ದೆಗೆ ಜಾರದಂತೆ, ಲವಲವಿಕೆಯಿಂದ ಇರಿಸುವಲ್ಲಿ ಯಶಸ್ವಿಯಾಯಿತು.
ಧರ್ಮದಿಂದ ಹುಟ್ಟಿದ ಅಸಹನೆ ಅಪಾಯಕಾರಿ { ಧಾರವಾಡ ಸಾಹಿತ್ಯ ಸಂಭ್ರಮ -2016 }
ಧರ್ಮದಿಂದ ಹುಟ್ಟಿದ ಅಸಹನೆ ಅಪಾಯಕಾರಿ: ಎಡ ಮತ್ತು ಬಲಪಂಥೀಯ ವಿಚಾರಧಾರೆಯನ್ನು ಮಗ್ಗುಲಾಗಿಸಿ, ‘ಮಧ್ಯಮ ಮಾರ್ಗ’ವೊಂದು ತೆರೆದುಕೊಳ್ಳುವ ನಿಟ್ಟಿನಲ್ಲಿ ಸಹನೀಯ ಬದುಕಿನ ಮೂಲಗಳ ಹುಡುಕಾಟ... ಎಲ್ಲೆಡೆ ತಣ್ಣಗೆ ಅಪಾಯದ ಅಲೆಗಳನ್ನೆಬ್ಬಿಸುತ್ತಲೇ ಇರುವ ಅಸಹಿಷ್ಣುತೆಯನ್ನು ನಿರ್ವಹಿಸುವ ಬಗೆಯನ್ನು ಕಂಡುಕೊಳ್ಳುವಲ್ಲಿ ಅಸ್ಪಷ್ಟ ದಿಕ್ಕಿನಲ್ಲಿಯೇ ಸಾಗಿದ ಆಲೋಚನೆಗಳು... ಸಮಾಜ ಹಾಗೂ ಸರ್ಕಾರದ ನಡೆಯನ್ನು ವಿಮರ್ಶಿಸುತ್ತಲೇ ತಾರ್ಕಿಕ ಅಂತ್ಯ ಕಾಣದ ವಿಚಾರ ಮಂಡನೆ... ಚರ್ಚೆಗೆ ಮುಂದಾದ ಸಭಿಕರಿಗೆ ಸಿಗದ ಸ್ಪಷ್ಟ ಉತ್ತರ...
ಕಾವ್ಯ ಜನರ ಆಶೋತ್ತರಗಳ ಅಭಿವ್ಯಕ್ತಿ { ಧಾರವಾಡ ಸಾಹಿತ್ಯ ಸಂಭ್ರಮ -2016 }
ಕಾವ್ಯ ಜನರ ಆಶೋತ್ತರಗಳ ಅಭಿವ್ಯಕ್ತಿ: ‘ಆಧುನಿಕ ಕವಿಗೆ ವಸ್ತುವಿನ ಆಯ್ಕೆಯೇ ಒಂದು ನೈತಿಕ ಸಮಸ್ಯೆಯಾಗಿದೆ. ಕಾವ್ಯ ಎನ್ನುವುದು ಕವಿಯ ಆತ್ಮಾಭಿವ್ಯಕ್ತಿಯ ಸಿದ್ಧಿಯಲ್ಲ, ಅದು ಜನರ ಆಶೋತ್ತರಗಳ ಅಭಿವ್ಯಕ್ತಿ’ ಎಂದು ಹಿರಿಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.
ಸಾಹಿತ್ಯ ಲೋಕದಲ್ಲೂ ರಾಜಕೀಯ ಒತ್ತಡ { ಧಾರವಾಡ ಸಾಹಿತ್ಯ ಸಂಭ್ರಮ -2016 }
ಸಾಹಿತ್ಯ ಲೋಕದಲ್ಲೂ ರಾಜಕೀಯ ಒತ್ತಡ: ‘ದ್ವಿದಳ ಸೈದ್ಧಾಂತಿಕ ವಿಭಜನೆಯ ರಾಜಕೀಯ ಒತ್ತಡ ಹೆಚ್ಚಾಗಿದ್ದರಿಂದ ಅವುಗಳ ನಡುವಿನ ವಿಶಾಲ ಅವಕಾಶವನ್ನು ಗ್ರಹಿಸುವ ಹಾಗೂ ಅನುಭವಿಸುವ ಹಕ್ಕನ್ನು ಜನಸಾಮಾನ್ಯರಿಗೆ ನಿರಾಕರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ’ ಎಂದು ವಿಮರ್ಶಕ ಟಿ.ಪಿ.ಅಶೋಕ ಹೇಳಿದರು.
ಬೇಂದ್ರೆ ಪ್ರಶಸ್ತಿ- 2016 - ಗಿರಡ್ಡಿ, ವೆಂಕಟೇಶಮೂರ್ತಿ ಆಯ್ಕೆ
ಗಿರಡ್ಡಿ, ವೆಂಕಟೇಶಮೂರ್ತಿ ಆಯ್ಕೆ: ಧಾರವಾಡದಲ್ಲಿನ ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ಅಂಬಿಕಾತನಯದತ್ತ ಪ್ರಶಸ್ತಿಗೆ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಮತ್ತು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಗುರುವಾರ ಇಲ್ಲಿ ಹೇಳಿದರು.
Thursday, January 21, 2016
ಜೈಪುರ ಸಾಹಿತ್ಯ ಉತ್ಸವಕ್ಕೆ ಇಂದು ಚಾಲನೆ 22-1-2016
ಜೈಪುರ ಸಾಹಿತ್ಯ ಉತ್ಸವಕ್ಕೆ ಇಂದು ಚಾಲನೆ: ಪ್ರತಿಷ್ಠಿತ ಜೈಪುರ ಸಾಹಿತ್ಯೋತ್ಸವ ಗುರುವಾರ ಆರಂಭ ವಾಗಲಿದ್ದು ಕೆನಡಾದ ಕವಿ ಮತ್ತು ಕಾದಂಬರಿಕಾರ್ತಿ ಮಾರ್ಗರೆಟ್ ಅಟ್‌ವುಡ್, ಲೇಖಕ ರಸ್ಕಿನ್ ಬಾಂಡ್, ಅಮೆರಿಕದ ಪ್ರಸಿದ್ಧ ಛಾಯಾಗ್ರಾಹಕ ನೀಲ್ ಫರ್ಗ್ಯೂಸನ್, ಬ್ರಿಟನ್‌ನ ಸ್ಟೀಫನ್ ಫ್ರೈ ಮುಂತಾದವರು ಭಾಗವಹಿಸಲಿದ್ದಾರೆ.
‘ಸಾಹಿತ್ಯ ಸಂಭ್ರಮ’ -22-1-2016
ನಾಳೆಯಿಂದ ‘ಸಾಹಿತ್ಯ ಸಂಭ್ರಮ’: ‘ಪ್ರಾಯೋಗಿಕವಾಗಿ ಆರಂಭವಾದ ‘ಧಾರವಾಡ ಸಾಹಿತ್ಯ ಸಂಭ್ರಮ’ ಎಲ್ಲರ ಸಹಕಾರದಿಂದ ಅಭೂತಪೂರ್ವ ಯಶಸ್ಸು ಕಂಡಿದ್ದು, ಇದೇ 22ರಿಂದ ನಾಲ್ಕನೇ ಆವೃತ್ತಿ ಆರಂಭವಾಗಲಿದೆ’ ಎಂದು ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಇಲ್ಲಿ ಹೇಳಿದರು.
ನಾಲ್ವರು ದಲಿತ ವಿದ್ಯಾರ್ಥಿಗಳ ಅಮಾನತು ರದ್ದು
ನಾಲ್ವರು ದಲಿತ ವಿದ್ಯಾರ್ಥಿಗಳ ಅಮಾನತು ರದ್ದು: ನಾಲ್ವರು ದಲಿತ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದ ಆದೇಶವನ್ನು ಹೈದರಾಬಾದ್ ವಿಶ್ವವಿದ್ಯಾಲಯ
ಮೃಣಾಲಿನಿ ಸಾರಾಬಾಯ್ ಇನ್ನಿಲ್ಲ
ಮೃಣಾಲಿನಿ ಸಾರಾಬಾಯ್ ಇನ್ನಿಲ್ಲ: ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಬಾಯ್ (97) ಗುರುವಾರ ಕೊನೆಯುಸಿರೆಳೆದರು.
Wednesday, January 20, 2016
ಉಪಗ್ರಹ: ಐಆರ್ಎನ್ಎಸ್ಎಸ್–1ಇ ಯಶಸ್ವಿ ಉಡಾವಣೆ
ಉಪಗ್ರಹ: ಐಆರ್ಎನ್ಎಸ್ಎಸ್–1ಇ ಯಶಸ್ವಿ ಉಡಾವಣೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ (ಸಮುದ್ರ ಮತ್ತು ವಾಯು ಸಂಚಾರ ಮಾರ್ಗಕ್ಕೆ ನೆರವು ನೀಡುವ) ಉಪಗ್ರಹ ವ್ಯವಸ್ಥೆ’ ಸರಣಿಯ ಐದನೇ ಉಪಗ್ರಹ ‘ಐಆರ್ಎನ್ಎಸ್ಎಸ್– 1ಇ’ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಯಶಸ್ವಿಯಾಗಿ ಉಡಾವಣೆಯಾಯಿತು.
ಖಾಸಗಿ ಶಾಲೆಗಳಲ್ಲೂ ಶಿಕ್ಷಕರ ಬರ!
ಖಾಸಗಿ ಶಾಲೆಗಳಲ್ಲೂ ಶಿಕ್ಷಕರ ಬರ!: ಸರ್ಕಾರಿ ಶಾಲೆಗಳಷ್ಟೇ ಅಲ್ಲ; ರಾಜ್ಯದ ಖಾಸಗಿ ಶಾಲೆಗಳೂ ಶಿಕ್ಷಕರ ಕೊರತೆ ಎದುರಿಸುತ್ತಿವೆ! ವಿವಿಧ ವಿಷಯಗಳ ನುರಿತ ಶಿಕ್ಷಕರು ಈಗ ಹೆಚ್ಚು ವೇತನ ನೀಡುವ ಟ್ಯುಟೋರಿಯಲ್‌ಗಳು ಮತ್ತು ಕೋಚಿಂಗ್ ಕೇಂದ್ರಗಳತ್ತ ಮುಖ ಮಾಡುತ್ತಿರುವುದು ಇದಕ್ಕೆ ಕಾರಣ. ಅಲ್ಲದೆ ಶಾಲೆಗಳಲ್ಲಿ ಸಿಗುವ ಸಂಬಳಕ್ಕಿಂತ ಹೆಚ್ಚು ದುಡ್ಡು ಸಂಪಾದಿಸಬಹುದು ಎಂಬ ಕಾರಣಕ್ಕೆ ಕೆಲವು ಶಿಕ್ಷಕರು ತಮ್ಮದೇ ಆದ ಕೋಚಿಂಗ್ ಕೇಂದ್ರ ತೆರೆಯುತ್ತಿರುವುದರಿಂದಲೂ ಈ ಸಮಸ್ಯೆ ಉಂಟಾಗಿದೆ.
Tuesday, January 19, 2016
ಬೇಕು ಈ ಹುಡುಗನಿಗೊಂದು ಜಾತಿ -ಎಚ್. ಕಾಂತರಾಜ
ಬೇಕು ಈ ಹುಡುಗನಿಗೊಂದು ಜಾತಿ: ಅಕ್ಷರಜ್ಞಾನ ಇಲ್ಲದ, ಬುದ್ಧಿಮಾಂದ್ಯ, ಮಾತು ಬಾರದ, ಒಂದು ಕಣ್ಣು ಕಾಣದ ಮಹಿಳೆ ಅವಳು. ಬದುಕುವ ಮಾರ್ಗ ಭಿಕ್ಷೆ. ಅವಳ ತಂದೆ-ತಾಯಿ, ಮೂಲ ಯಾವುದೂ ಗೊತ್ತಿಲ್ಲ. ಆದರೆ ಅವಳು ಗರ್ಭಿಣಿಯಾಗಲು ಇದ್ಯಾವುದೂ ಅಡ್ಡಿಯಾಗಲಿಲ್ಲ. ಗರ್ಭಿಣಿಯಾಗಲು ಕಾರಣನಾದ ಕಾಮುಕ ಯಾರೆಂದು ಯಾರಿಗೂ ತಿಳಿಯದು. ರಾತ್ರಿ ಗಸ್ತಿನ ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಜಿಲ್ಲಾ ಆಸ್ಪತ್ರೆಗೆ ಸೇರಿದ ಇವಳು 1990–91ರಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವೆ ಈಗ ಜಾತಿ ಬೇಡುತ್ತಿರುವ ಪರದೇಶಿ ರಘು!
ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು - ಎನ್. ಎ. ಎಮ್. ಇಸ್ಮಾಯಿಲ್
ವಿಕಿಪೀಡಿಯಾ–15: ಕನ್ನಡದ ತಲ್ಲಣಗಳು: ಈ ವರ್ಷದ ಜನವರಿ 15ಕ್ಕೆ ಸರಿಯಾಗಿ ವಿಕಿಪೀಡಿಯಾ ಎಂಬ ಆನ್‌ಲೈನ್ ವಿಶ್ವಕೋಶಕ್ಕೆ 15 ವರ್ಷ ತುಂಬಿತು. ತಿಂಗಳಿಗೆ 49.3 ಕೋಟಿ ಓದುಗರಿರುವ ಈ ವಿಶ್ವಕೋಶವನ್ನು ರೂಪಿಸಿರುವುದು ಒಂದು ಸಂಪಾದಕ ಮಂಡಳಿಯಲ್ಲ. ಇದನ್ನು ಆರಂಭಿಸುವುದರ ಹಿಂದೆ ಒಂದು ತಂಡವಿತ್ತಾದರೂ ಅದು ಬೆಳೆದದ್ದು ವಿಶ್ವವ್ಯಾಪಿಯಾಗಿರುವ ಬಳಕೆದಾರ ಸಂಪಾದಕರಿಂದ.
{ ರೋಹಿತ್ ಆತ್ಮಹತ್ಯೆ ಪ್ರಕರಣ } ಸಚಿವಾಲಯದಿಂದ ಹೈದರಾಬಾದ್ ವಿ.ವಿಗೆ ಐದು ಪತ್ರ
ಸಚಿವಾಲಯದಿಂದ ಹೈದರಾಬಾದ್ ವಿ.ವಿಗೆ ಐದು ಪತ್ರ: ದಲಿತ ವಿದ್ಯಾರ್ಥಿ ವೇಮುಲ ರೋಹಿತ್ ಅವರ ಆತ್ಮಹತ್ಯೆಯಿಂದಾಗಿ ಪ್ರತಿಭಟನೆಗೆ ಗುರಿಯಾಗಿರುವ ಹೈದರಾಬಾದ್ ವಿ.ವಿ ಮೇಲೆ ಮಾನವ ಸಂಪನ್ಮೂಲ ಸಚಿವಾಲಯ ಒತ್ತಡ ಹೇರಿತ್ತೇ? ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಲಭ್ಯವಾಗಿರುವ ದಾಖಲೆಗಳು ಇಂಥದೊಂದು ಅನುಮಾನವನ್ನು ಹುಟ್ಟುಹಾಕಿವೆ.
ಸ್ತ್ರೀ ಬಹುಮುಖಿ ನೆಲೆಗಳನ್ನು ಗುರುತಿಸಬೇಕು: ಬಾಲಸುಬ್ರಹ್ಮಣ್ಯ
ಸ್ತ್ರೀ ಬಹುಮುಖಿ ನೆಲೆಗಳನ್ನು ಗುರುತಿಸಬೇಕು: ಬಾಲಸುಬ್ರಹ್ಮಣ್ಯ: ‘ಹೆಣ್ಣಿನ ಬಹುಮುಖಿ ವ್ಯಕ್ತಿತ್ವದ ನೆಲೆಗಳನ್ನು ಗುರುತಿಸಬೇಕಿದೆ’ ಎಂದು ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
Monday, January 18, 2016
ಗೀತಪ್ರಿಯ , ಅನ್ವರ್ಥನಾಮಿ ಚಿತ್ರಸಾಹಿತಿಯ ಜ್ಞಾಪಕ ಚಿತ್ರಶಾಲೆ...
ಅನ್ವರ್ಥನಾಮಿ ಚಿತ್ರಸಾಹಿತಿಯ ಜ್ಞಾಪಕ ಚಿತ್ರಶಾಲೆ...: ಸಣ್ಣ ನಡುಮನೆಯಲ್ಲಿ ಎರಡು ಕುರ್ಚಿ. ಒಂದರ ಮೇಲೆ ಅವರು ನಿಸೂರಾಗಿ ಹೆಚ್ಚು ಹೊತ್ತು ಕುಳಿತುಕೊಳ್ಳುತ್ತಿರಲಿಲ್ಲ. ಅಡುಗೆಮನೆಯತ್ತ ಪದೇಪದೇ ಇಣುಕುತ್ತಿದ್ದರು. ಅಲ್ಲಿಂದ ಎದ್ದುಹೋಗಿ, ಪತ್ನಿಗೆ ಮೆಲುದನಿಯಲ್ಲಿ ಏನೋ ಹೇಳಿ, ಮತ್ತೆ ಬಂದು ಕೂತು ಮಾತು ಮುಂದುವರಿಸುತ್ತಿದ್ದರು.
Sunday, January 17, 2016
Subscribe to:
Posts (Atom)