stat Counter



Thursday, June 30, 2016

ಚಾರುವಸಂತೀಯಮ್- ಹಂಪನಾ ಅವರ ಕನ್ನಡ ಕಾವ್ಯದ ಸಂಸ್ಕೃತ ಅನುವಾದ ಬಿಡುಗಡೆ -1-7-2016

Invitation-2016

ಧಾರವಾಡದಲ್ಲಿ ರಾಜ್ಯ ಮಟ್ಟದ ಪತ್ರಿಕಾ ಸಂವಾದ -3- 7-2016

" ಸಖೀಗೀತ " ದಲ್ಲಿ ಪಂಡಿತ್ ರವಿಕಿರಣ್ ಮಣಿಪಾಲ್ ಹಿಂದುಸ್ತಾನಿ ಗಾಯನ - 3- 7- 2016 - ನಿಮಗೆ ಸ್ವಾಗತ


ಪಂಡಿತ್ ರವಿಕಿರಣ್ ಮಣಿಪಾಲ್- Pt Ravikiran Manipal Part 1

ಡಿ. ವಿ. ಜಿ --" ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಿಲ್ಲ "

ಡಿ.ವಿ.ಜಿ ಬೆಳಗು:-
ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ
ಬೆರಕೆಯೆಲ್ಲಮರ್ಧ ನಾರೀಶನಂತೆ
ನರತೆಯಣು ನಾರಿಯಲಿ
ನಾರೀತ್ವ ನರನೊಳಣು
ತಿರುಚಿತಿರುವುದು ಮನವ
ಮಂಕುತಿಮ್ಮ

(ಭೂಮಿಯೊಳಗೆ ಪರಿಪೂರ್ಣ ಗಂಡು ಮತ್ತು ಪರಿಪೂರ್ಣ ಹೆಣ್ಣು ಎಂಬವರಿಲ್ಲ. ಇಬ್ಬರೂ ಬೆರಕೆಯಾಗಿರುವ ಸ್ವಭಾವವನ್ನು ಹೊಂದಿರುವರು. ಎಲ್ಲರೂ ಅರ್ಧನಾರೀಶ್ವರರಂತೆ. ಪುರುಷ ಸ್ವಭಾವ ಸ್ತ್ರೀಯರಲ್ಲೂ, ಸ್ತ್ರೀ ಸ್ವಭಾವ ಪುರುಷನಲ್ಲೂ ಸಹಜವಾಗಿ ಇದ್ದೇ ಇರುತ್ತದೆ. ಹೀಗಿರುವುದರಿಂದಲೇ ಅದು ಮನಸ್ಸನ್ನು ಮಥಿಸುತ್ತಾ, ತಿರುಚುತ್ತಾ ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಅಪ್ಪನೊಳಗೊಬ್ಬಾಕೆ ಅಮ್ಮನಿರುವುದು. ತಾಯಿಯ ವಾತ್ಸಲ್ಯವನ್ನಾತ ಧಾರೆಯೆರೆಯುವುದು. ಅಮ್ಮನೊಳಗೊಬ್ಬ ಅಪ್ಪನಿರುವುದು. ಬದುಕನ್ನು ಧೈರ್ಯದಿಂದ ಆಕೆ ಎದುರಿಸಿ ಮಕ್ಕಳನ್ನು ಕಾಪಾಡುವುದು. ಪರಿಸ್ಥಿತಿ ಗೆ ಅನುಗುಣವಾಗಿ ನಮ್ಮೊಳಗಿರುವ ಈ ಗುಣ ಜಾಗೃತವಾಗುತ್ತದೆ. ಪ್ರಕಟಗೊಳ್ಳುತ್ತದೆ.


{ ಕವಿತಾ ಅಡೂರು ಅವರ Facebook ನಿಂದ }

ರಶೀದ್ ವಿಟ್ಲ - ರವಿಶಂಕರ ಒಡ್ಡಂಬೆಟ್ಟು - " ಸಾವಿನದು ಕೊನೆಯಿಲ್ಲದ ಯಾನ "

ನಮ್ಮನ್ನು ಬಿಟ್ಟು... ಹೋದರು ಒಡ್ಡಂಬೆಟ್ಟು
**********************************

44 ರ ತರುಣ, ಕವಿ ಹೃದಯಿ, ಬರಹಗಾರ, ಉಪನ್ಯಾಸಕ ರವಿಶಂಕರ ಶೆಟ್ಟಿ ಒಡ್ಡಂಬೆಟ್ಟು ಕೊನೆಗೂ ವಿಧಿಯ ಲೀಲೆಗೆ ಲೀನರಾದರು ಎನ್ನಲು ತುಂಬಾ ದುಖವಾಗುತ್ತದೆ. ಸಣ್ಣ ಪ್ರಾಯದ ಪತ್ನಿ, ಇನ್ನೂ ಏನೂ ಅರಿಯದ ಇಬ್ಬರು ಎಳೆ ಕಂದಮ್ಮಗಳು, ಅಪಾರ ಅಭಿಮಾನಿಗಳನ್ನು ಒಡ್ಡಂಬೆಟ್ಟು ಬಿಟ್ಟು ಕಾಣದ ಲೋಕಕ್ಕೆ ಮರೆಯಾದರು. ಈ ಹರೆಯದಲ್ಲಿ ಇಂತಹ ಅಪರಂಜಿ ವ್ಯಕ್ತಿಗೆ ಈ ಸಾವು ನ್ಯಾಯವೇ..?

ಅದು 2001 ರ ಸಮಯ. ನಾನು ಆ ಸಂದರ್ಭ "ವಿಜಯ ಕರ್ನಾಟಕ"ದ ವರದಿಗಾರನಾಗಿದ್ದೆ. ರವಿಶಂಕರ ಒಡ್ಡಂಬೆಟ್ಟು ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿದ್ದರು. ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರು ಮತ್ತು ಕವಿ, ಸಾಹಿತಿ ವಿ.ಗ. ನಾಯಕ ಅವರು ಒಡ್ಡಂಬೆಟ್ಟು ಅವರನ್ನು ಅಂದು ನನಗೆ ಪರಿಚಯಿಸಿದ್ದರು. ಅಂದಿನಿಂದ ಪ್ರಾರಂಭವಾದ ಒಡ್ಡಂಬೆಟ್ಟು ಸ್ನೇಹ ಈ ತನಕವೂ ಜೀವಂತವಾಗಿತ್ತು. ಒಡ್ಡಂಬೆಟ್ಟು ತುಂಬಾ ಮೃಧು ಸ್ವಭಾವಿ. ಕವಿ ಹೃದಯಿ. ಮಾತು ಕಮ್ಮಿ ಕೆಲಸ ಜಾಸ್ತಿ. ಸಾಹಿತ್ಯಾಸಕ್ತ. ಜತೆಗೆ ಸಂಘಟಕ. ಅವರ ಜೊತೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ ಅನುಭವ ನನಗಿದೆ. ತುಂಬಾ ಸಿಂಪಲ್ ಪರ್ಸನ್. ಎಲ್ಲಾ ವಿಚಾರದಲ್ಲೂ ಅಗಾಧ ಜ್ಞಾನ, ಚಾಕಚಕ್ಯತೆ ಇದ್ದರೂ ಅವರಿಗಿಂತ ಎಳೆಯರಾದ ನನ್ನಂತಹವರಲ್ಲಿ ಕೇಳಿಯೇ ಕೆಲವೊಂದು ವಿಚಾರಗಳನ್ನು ಫೈನಲ್ ಮಾಡುತ್ತಿದ್ದುದನ್ನು ಮನಗಂಡಿದ್ದೇನೆ.

ಅವರ ಹನಿಗವನ ನಮ್ಮ ಮನದ ಕದ ತಟ್ಟುತ್ತಿತ್ತು. ಕವನದ ಅವರ ನಾಲ್ಕು ಗೆರೆಗಳು ಚಿಂತಿಸುವವರಿಗೆ ನೂರು ಅರ್ಥವನ್ನು ನೀಡುತ್ತಿತ್ತು. ಬರಹದಲ್ಲಿ ತೀಕ್ಷ್ಣತೆಯಿತ್ತು. ಸಮಾಜ ಕಂಟಕರ ವಿರುದ್ಧದ ಆಯುಧವಾಗಿತ್ತು. ಎಷ್ಟೇ ದೊಡ್ಡವನಾದರೂ ಅನ್ಯಾಯವೆಸಗಿದವರಿಗೆ ಟಾನಿಕ್ ಆಗಿ ಒಡ್ಡಂಬೆಟ್ಟು ಹನಿಗವನ ಪ್ರಚಲಿತದಲ್ಲಿತ್ತು. ಹನಿಗವನದಿಂದಲೇ ಒಡ್ಡಂಬೆಟ್ಟು ಹೆಸರು, ಕೀರ್ತಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಮೂಲತಃ ಗಡಿನಾಡು ಕಾಸರಗೋಡು ಜಿಲ್ಲೆಯ ಕುಬಣೂರು ಗ್ರಾಮದವರಾದ ರವಿಶಂಕರ ಒಡ್ಡಂಬೆಟ್ಟು, ಸಾಯುವ ಮುನ್ನ ಕಾವೂರು ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿದ್ದರು. ಈ ಹಿಂದೆ ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲೂ ಉಪನ್ಯಾಸಕರಾಗಿ ಅಲ್ಲಿನ ಎನ್ನೆಸ್ಸೆಸ್ ಘಟಕವನ್ನು ಕಟ್ಟಿ ಬೆಳೆಸಿದ್ದರು. ಅವರ ಹಲವಾರು ಕವನ ಸಂಕಲನಗಳು ಬಿಡುಗಡೆಗೊಂಡು ಪ್ರಸಿದ್ಧಿ ಪಡೆದಿವೆ. ನೂರಾರು ಲೇಖನ, ಕವನಗಳು ರಾಜ್ಯದ ಪ್ರಸಿದ್ಧ ಪತ್ರಿಕೆಗಳಲ್ಲಿ, ಮ್ಯಾಗಸಿನ್ ಗಳಲ್ಲಿ ಅಚ್ಚೊತ್ತಿವೆ. ಅವರ ಸಾಹಿತ್ಯಗಳು ಸಾಹಿತ್ಯ ಸಮಾರಂಭಗಳಲ್ಲಿ ಅನುರಣಿಸಿವೆ. ಹತ್ತು ಹಲವು ಪ್ರಶಸ್ತಿ ಸನ್ಮಾನಗಳು ಒಡ್ಡಂಬೆಟ್ಟುಗೆ ಒಲಿದುಬಂದಿದೆ. ವಿಶೇಷವೆಂದರೆ ಅವರ ಪ್ರತಿಯೊಂದು ಬರಹ, ಮಾತು ಎಲ್ಲವೂ ಸೌಹಾರ್ದತೆಗೆ, ಸಾಮರಸ್ಯಕ್ಕೆ, ಸಭ್ಯ ಸಮಾಜದ ಸೃಷ್ಟಿಗೆ ಪೂರಕವಾಗಿದ್ದವು.

ಕೊನೆಯ ಕಾಲದಲ್ಲಿ ಒಡ್ಡಂಬೆಟ್ಟು ಅವರು ತಮ್ಮ ಫೇಸ್ಬುಕ್ ನಲ್ಲಿ ಬರೆದ ಸ್ಟೇಟಸ್ ನನ್ನಂತಹ ಹಲವಾರು ಅಭಿಮಾನಿಗಳ ಕಣ್ ರೆಪ್ಪೆಯನ್ನು ಒದ್ದೆ ಮಾಡಿತ್ತು. ಅದನ್ನಿಲ್ಲಿ ಯಥಾವತ್ತಾಗಿ ನೀಡುತ್ತಿದ್ದೇನೆ. ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ದಿನಾಂಕ; 16.10.2015. ವಿವರ ಈ ಕೆಳಗಿನಂತಿವೆ.
"ಕಳೆದ 6 ವರ್ಷದಿಂದ ನಾನು ಕ್ಯಾನ್ಸರ್ ಎಂಬ ಪೀಡೆಯಿಂದ ಬಳಲುತ್ತ ಇದ್ದೇನೆ. ಗುಣವಾಗುತ್ತ ಇಲ್ಲ. 50 ಸಲ ಕಿಮೊಥೆರಪಿ, 50 ಸಲ ರೇಡಿಯೊಥೆರಪಿ ಕೊಟ್ಟು ಬಳಲಿ ಬೆಂಡಾಗಿದ್ದೇನೆ. 50 ಲಕ್ಷ ಖರ್ಚಾದದ್ದಕ್ಕೆ ಸರಕಾರದ ಸಹಾಯ ಸಿಕ್ಕಿದೆ. ಐದಾರು ಸಲ ಆಪರೇಶನ್ ಮಾಡಿಯೂ ಪ್ರಯೋಜನವಾಗಿಲ್ಲ. ಆದರೂ ಆತ್ಮಬಲವನ್ನು ನಂಬಿ ಜೀವ ಉಳಿಸಿಕೊಂಡಿದ್ದೇನೆ ಚಿಕ್ಕ ಮಕ್ಕಳಿಗೋಸ್ಕರವಾಗಿ. ಸಾವು ಸಹ್ಯ. ನೋವನ್ನು ಸಹಿಸುವುದು ಹೇಗೆ? ಇದನ್ನೆಲ್ಲ ನಾನು ಹಂಚಿಕೊಳ್ಳುವುದು ಸರಿಯೇ? ನನಗಿಂತಲೂ ಕಷ್ಟದವರಿರುವಾಗ? ಆದರೂ ಮನಸ್ಸು ಹಗುರ ಮಾಡಿಕೊಳ್ಳುವುದು ಮುಖ್ಯ ತಾನೆ?"

ಒಡ್ಡಂಬೆಟ್ಟು ನಮ್ಮ ಜೊತೆಗಿಲ್ಲದಿದ್ದರೂ ಅವರು ಅಮರರಾಗಿದ್ದಾರೆ. ಅವರ ಹನಿಗವನ, ಕವಿತೆಗಳ ಪದಪುಂಜ ನಮ್ಮಿಂದ ಎಂದೂ ಮಾಸಲ್ಲ. ಸ್ನೇಹಜೀವಿ, ಕವಿಮನಸ್ಸಿನ ಅಪರೂಪದ ವ್ಯಕ್ತಿ ಸದಾ ನಮ್ಮೊಳಗಿರುತ್ತಾರೆ. ಒಡ್ಡಂಬೆಟ್ಟು ಅಕಾಲಿಕ ಸಾವು ಅವರ ಈ ಕೆಳಗಿನ ಹನಿಗವನವನ್ನು ಮತ್ತೆ ನೆನಪಿಸಿತು.
"ಲೋಕದ ಪಯಣದಲ್ಲಿ
ಬದುಕು ಒಂದು
ಸಣ್ಣ ನಿಲ್ದಾಣ
ಸಾವಿನದು
ಕೊನೆಯಿಲ್ಲದ ಯಾನ"

-ರಶೀದ್ ವಿಟ್ಲ.

ಮಯೂರ - ಜುಲೈ -2016

Front Page

ಸಂದರ್ಶನ: ಕವಿ ಸುಬ್ರಾಯ ಚೊಕ್ಕಾಡಿ Interview with Subbaraya chokkadi

ಕವಿತಾ ಆರ್ - ರಂಗವಿಹಾರ ನಾಟಕೋತ್ಸವ 2016

ನಾಗೇಶ್ ಹೆಗಡೆ - ಹಾರುವ ತಟ್ಟೆಗಳ ದಶಾವತಾರಗಳು

Wednesday, June 29, 2016

ನಿಡುವಜೆ ರಾಮ ಭಟ್ - ಸುರಭಿಯ ನಾಟ್ಯದ ಒಡನಾಟ



ಸುರಭಿಯ  ನಾಟ್ಯದ ಒಡನಾಟ
ನಿಡುವಜೆ ರಾಮ ಭಟ್
ಚಿತ್ರ: ಮುರಳೀಧರ್, ಕೊಡವೂರು.
      ನೃತ್ಯದ ಬಗ್ಗೆ ಅದಮ್ಯ ಪ್ರೀತಿ ಬೆಳೆಸಿಕೊಂಡಿರುವ ಬಾಲ ಪ್ರತಿಭೆ ಸುರಭಿ,
ಉಡುಪಿಯ ಕೊಡವೂರಿನ ನೃತ್ಯ ನಿಕೇತನದ ನಿದರ್ೇಶಕ ಗುರು ವಿ||ಸುಧೀರ್ ರಾವ್, ವಿ||ಮಾನಸಿ ಸುಧೀರ್ ದಂಪತಿಯ ಸುಪುತ್ರಿ.
     ಸುರಭಿ ಕಳೆದ ಎರಡು ವರ್ಷಗಳಿಂದ ತನ್ನ ಹೆತ್ತವರ  ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು,  ಸಂಸ್ಥೆಯ ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ತನ್ನ ನೃತ್ಯ ಪ್ರದರ್ಶನವನ್ನು ನೀಡಿದ್ದಾಳೆ. ಪ್ರಸಿದ್ಧ ರಂಗ ನಿದರ್ೇಶಕರ ಎರಡು ನಾಡಕ ಕಮ್ಮಟಗಳಲ್ಲಿ ತರಬೇತಿ ಪಡೆದಿರುವ ಸುರಭಿ ಹಲವು ನಾಟಕ, ನೃತ್ಯ ರೂಪಕ, ನೃತ್ಯ ನಾಟಕಗಳಲ್ಲಿ ಪಾತ್ರವಹಿಸಿದ್ದಾಳೆ. ಚಿತ್ರಕಲೆ, ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿ ಇರುವ ಇವಳು ಜಿಲ್ಲಾ ಮಟ್ಟದ ಕಥೆ ಹೇಳುವ ಸ್ಪಧರ್ೆಯಲ್ಲಿ ಬಹುಮಾನ ಪಡೆದಿದ್ದಾಳೆ.
     ಇಷ್ಟೆಲ್ಲ ಸಾಧನೆಗೈದ ಈ ಬಾಲೆ ಉಡುಪಿಯ ಸೈಂಟ್ಮೇರೀಸ್ ಶಾಲೆಯ ಮೂರನೇ ತರಗತಿಯ ವಿದ್ಯಾಥರ್ಿನಿ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ಈಕೆ ತನ್ನ ಎಂಟನೇ ಹುಟ್ಟುಹಬ್ಬದಂದು ಭರತನಾಟ್ಯ ರಂಗಪ್ರವೇಶ ಮಾಡಿ ಇನ್ನೂ ಅಚ್ಚರಿ ಮೂಡಿಸಿದ್ದಾಳೆ!
     ಇತ್ತೀಚೆಗೆ ಉಡುಪಿಯ ರಾಜಾಂಗಣ ಸಭಾಂಗಣದಲ್ಲಿ ಪಯರ್ಾಯ ಶ್ರೀ ಪೇಜಾವರ ಅಧೋಕ್ಷಜ ಶ್ರೀಕೃಷ್ಣ ಮಠದ ಉಭಯ ಶ್ರೀಪಾದರ ಆಶೀವರ್ಾದದೊಂದಿಗೆ ತುಂಬು ಪ್ರೇಕ್ಷಕರ ಸಮ್ಮುಖದಲ್ಲಿ ನೀಡಿದ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
     ಮೊದಲಿಗೆ ಪುಷ್ಪಾಂಜಲಿ(ವೃಂದಾವನ ಸಾರಂಗ, ಆದಿತಾಳ)ಯಲ್ಲಿ 'ಕಾಲೇವರ್ಷತು ಪರ್ಜನ್ಯ' ಎಂಬ ದೀಪಕ್ ಹೆಬ್ಬಾರರ ರಚನೆಯನ್ನು ಸಂಚಾರಿಭಾವದಲ್ಲಿ ಪ್ರದಶರ್ಿಸಿದ್ದು, ಎರಡನೇ ಕೃತಿ 'ಗಜಾನನಯುತಂ ಗಣೇಶ್ವರಂ' ಇದರಲ್ಲಿ ಗಣಪತಿಗೆ ಆನೆಯ ಮುಖ ಬಂದ ಕತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದಳು.
     ನಂತರದಲ್ಲಿ ಪ್ರಮುಖ ಪದವರ್ಣ.  'ಸವಿಯುವ ಬಾ ಸ್ನೇಹ ಪ್ರೇಮಗಳ'(ಶುದ್ಧ ಧನ್ಯಾಸಿ, ಆದಿತಾಳ) ಎಂಬ ಪ್ರಸನ್ನ ಬೆಂಗಳೂರು ಅವರ ರಚನೆಗೆ ಬಾಲಸುಬ್ರಹ್ಮಣ್ಯ ಶರ್ಮ ಅವರು ನೃತ್ಯ ಸಂಯೋಜನೆ ಮಾಡಿದ್ದು, ಈ ಕೃತಿಯಲ್ಲಿ ಸುದಾಮನ ಕತೆಯನ್ನು ಆಯ್ದುಕೊಂಡು ಸ್ನೇಹವೆಂದರೆ ಕೃಷ್ಣ ಸುದಾಮನಂತಿರಬೇಕು ಎಂಬುದನ್ನು ಸೊಗಸಾಗಿ ಸಾರಲಾಯಿತು. ಅಜರ್ುನನಿಗೆ ಶ್ರೀಕೃಷ್ಣನ ಸಾರಥ್ಯ, ಗೀತೋಪದೇಶ ಮೊದಲಾದ ಸನ್ನಿವೇಶಗಳ ಅಭಿನಯವನ್ನು ಈ ಬಾಲೆ ಮಾಡಿದ್ದು ನೋಡುಗರ ಮನಕ್ಕೆ ಮುದ ನೀಡಿತು. ಗೀತೋಪದೇಶದಲ್ಲಿ ಯದಾ ಯದಾಹಿ ಧರ್ಮಸ್ಯ . ., ಪರಿತ್ರಾಣಾಯ ಸಾಧೂನಾಂ . . ಮೊದಲಾದ ಸನ್ನಿವೇಶಗಳನ್ನು ಸುಮಾರು 20 ನಿಮಿಷಗಳ ಕಾಲ ದಣಿವಿಲ್ಲದೆ ಪ್ರಸ್ತುತಪಡಿಸಿದ್ದು ಅಚ್ಚರಿ ಮೂಡಿಸಿತು.
     ಮುಂದೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಕೃತಿ ಮಕ್ಕಳ ಮಗ್ಗಿಯಂತಿರುವ ಸಾಹಿತ್ಯ 'ಒಂದು ಎಂದರೆ ಒಂದು'(ರಾಗ ಮಾಲಿಕೆ, ಆದಿತಾಳ)ಎಂಬ ಒಂದರಿಂದ ಹತ್ತು ಅಂಕೆಯಲ್ಲಿ ಕೃಷ್ಣನ ಜನನದಿಂದ ಕಂಸನ ಮರಣದ ವರೆಗಿನ ಸನ್ನಿವೇಶಗಳನ್ನು ಸಂಚಾರಿ ಭಾವದಲ್ಲಿ ಪ್ರದಶರ್ಿಸಿದಳು.  ಮಧೂರು ಬಾಲಸುಬ್ರಹ್ಮಣ್ಯಂ ಸಂಗೀತ ಸಂಯೋಜಿಸಿದ ಈ ಕೃತಿಯಲ್ಲಿ ಕೃಷ್ಣನ ಜನನ, ಗೋಕುಲದಲ್ಲಿ ಬಾಲಲೀಲೆ ಮೊದಲಾದುವುಗಳನ್ನು ನಿರೂಪಿಸುವಲ್ಲಿಯೂ ಈ ಬಾಲೆ ಹಿಂದೆ ಬೀಳಲಿಲ್ಲ!

     ಅಠಾಣ ರಾಗ, ರೂಪಕತಾಳದಲ್ಲಿ ಮಧುರೈ ಮೀನಾಕ್ಷಿಯ ಕುರಿತಾಗಿ 'ಮಧುರಗಾನ ರೂಪಿಣಿ ಮಧುರಾಪುರಿ ವಾಸಿನಿ' ಎಂಬ ಕೃತಿಯ 'ತಿಲ್ಲಾನ'ವನ್ನು ಪ್ರದಶರ್ಿಸಿ ನೃತ್ಯವನ್ನು ಸಮಾಪನಗೊಳಿಸುವಲ್ಲಿ ಯಶಸ್ವಿಯಾದಳು. ಮನೆಯಲ್ಲಿ ಆಟವಾಡಿಕೊಂಡು ಇರಬೇಕಾದ ಎಳೆಯ ಪ್ರಾಯದ ಈಕೆ ನಾಟ್ಯದೊಡನೆಯೇ ಆಟವಾಡಿ ಕಲೆಯ ಅಪೂರ್ವ ಪ್ರದರ್ಶನಗೈದಿರುವುದು ಶ್ಲಾಘನೀಯ.
    ಹಿನ್ನೆಲೆಯಲ್ಲಿ ವಿ||ಸುಧೀರ್ ರಾವ್ (ನಟುವಾಂಗ), ಉನ್ನಿಕೃಷ್ಣನ್ ನಂಬೂದರಿ ಕುತ್ತಿಕೋಲ್ (ಹಾಡುಗಾರಿಕೆ), ದೇವೇಶ್ ಭಟ್ ಕಿದಿಯೂರು(ಮೃದಂಗ), ಪಿ.ಶ್ರೀಧರ ಆಚಾರ್ಯ, ಪಾಡಿಗಾರು (ಪಿಟೀಲು), ದೀಪಕ್ ಹೆಬ್ಬಾರ್(ಕೊಳಲು), ಪ್ರಕಾಶ್ ಕುಂಜಿಬೆಎಟ್ಟು (ವಣರ್ಾಲಂಕಾರ) ಉತ್ತಮವಾಗಿ ಸಹಕರಿಸಿದರು.
    ನೃತ್ಯ ನಿಕೇತನ ಕೊಡವೂರು ಸಂಸ್ಥೆಯು ತನ್ನ ರಜತ ಮಹೋಹತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ನೃತ್ಯ, ಗಾಯನ, ನಾಟಕ, ಯಕ್ಷಗಾನ, ರೂಪಕ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದು ಸ್ತುತ್ಯರ್ಹವೆನಿಸಿತು.
**  **  **
ಎನ್. ರಾಮ ಭಟ್, 'ಪ್ರಶಾಂತಿ',
ಗುಂಡಿಬೈಲು, ಉಡುಪಿ - 576 102.
(ಅಜಟಟ:- 94499 37170)

70 ವರ್ಷದ ಹಿಂದೆ 55 ರೂ. ಇತ್ತು ನೌಕರರ ವೇತನ!

ಅ. ಶ್ರೀಧರ - ಮನದ ಮರ್ಕಟವನ್ನು ಕೆರಳಿಸುವ ಕುಚಿ ಆಟ

ಪಿ. ಚಂದ್ರಿಕಾ - ಒಬ್ಬಳೇ ಆಡುವ ಆಟ { ಕವನ ಸಂಕಲನ 2016 } ಬಿಡುಗಡೆ -30-6-2016

obbale aaduva aata

ಪ್ರಭಾಕರ ಆಚಾರ್ಯ -ಡಿ. ಡಿ. ಕೊಸಾಂಬಿ ವಿಶ್ಲೇಷಿಸಿದ ಊರ್ವಶಿ D.D. Kosambi: The Urvasi Myth

D.D. Kosambi: The Urvasi Myth: by Prabhaker Acharya This paper examines Prof. D. D. Kosambi’s analysis of the Urvasi legend in the Rgveda. The purpose is to draw attention...

ಸಂಗೀತ ಪಥದಲ್ಲಿ ಸಾಹಿತ್ಯದತ್ತ - The musical route to literature -s. s. santhanam

ಇತಿಹಾಸ ಸಂಶೋಧನೆ - Why Are Indian Historians In A Denial Mode?

ಇ. ಪಿ. ರೈಸ್ - ಕನ್ನಡ ಸಾಹಿತ್ಯ ಚರಿತ್ರ್ತೆ { 1921 } A history of Kanarese literature : Rice, Edward Peter, 1846-1936 : Free Download & Streaming

ಅರಿಫ಼್ ರಾಜಾ - ಕಾಣಲು ನುರಾರು ಕನಸುಗಳಿವೆ ಆದರೆ ಒಂದೂ ನನ್ನದಲ್ಲ

ಮಣಿಪಾಲದಲ್ಲಿ ಕೋಸಾಂಬಿ ಚಿಂತನ - ಮಂಥನ -2- 7-2016

ಡಿ. ಡಿ. ಕೋಸಾಂಬಿ ಚಿಂತನ - ಮಂಥನ

 ಮುಖ್ಯ ಅತಿಥಿ - ಡಾ / ಬಿ. ಸುರೇಂದ್ರ ರಾವ್

- ಗಾಂಧಿ  ಅಧ್ಯಯನ ಕೇಂದ್ರ , ಮಣಿಪಾಲ

2-7-2016 -10.30 am

Seminar on D. D. Kosambi at Gandhi Centre { Old Tapmi Building , Near police Station , Manipal } 2-7-2016 -- 10.30am

For details pls contact Mr. K. P. Rao -email- kprao1940@gmail.com

                                             WELCOME

ಪಿ ಸಾಯಿನಾಥ್ ಹೊಸ ಕೃತಿ ಕನ್ನಡದಲ್ಲಿ.

ಭಾಸ್ಕರ ಮಯ್ಯರ ಪುಸ್ತಕಗಳು

ಸುಬ್ರಾಯ ಚೊಕ್ಕಾಡಿ { Vedio } - ಕವಿತಾ ವಾಚನ - ಇರುಳ ಸದ್ದುಗಳು :: Karnataka Sahithya Academy -Video Section ::

Tuesday, June 28, 2016

ಪ್ರತಿಭಾ ನಂದಕುಮಾರ್ - ಹೊಸ ವರ್ಷ - Pratibha Nandakumar's poem 'Hosa Varsha' by Kavya Kadame Nagarakatte

ಯುರೋಪ್ ಗೆ ಇಂಗ್ಲಿಷ್ ಬೇಕಾ ? A Brexit for English as EU language?

ಐರೋಪ್ಯ ಒಕ್ಕೂಟದಿಂದ ಇಂಗ್ಲಿಷ್ ಕೂಡ ಹೊರಗೆ?

ಹಾಲ್ದೊಡ್ಡೇರಿ ಸುಧೀಂದ್ರ -- ಸದ್ದಿನ ಸದ್ದಡಗಿಸಲು ಗುದ್ದಾಟ

ಒಂದು ಭಾಷೆ ಬದಲಿಗೆ ವೃತ್ತಿ ಶಿಕ್ಷಣ

ಕುಸುಮಾ ಆಯರಹಳ್ಳಿ- ಕೊಳ್ಳುವ ಮಾರುವ ಹುಚ್ಚು ವೇಗ ನೋಡಿರೋ

ರಾಹುಲ್ ದಯಾಳು - ನನಗೆ ಬೇಕಾಗಿದ್ದು ಎರಡು ಅಡಿ ಜಾಗ, ಒಂದು ಚಂಬು ನೀರು ಮಾತ್ರ.

ದಾಮೋದರ ಧರ್ಮಾನಂದ ಕೊಸಾಂಬಿ : ಭಾರತೀಯ ಚರಿತ್ರಶಾಸ್ತ್ರದ ಮಾ...

pradeephistory: ದಾಮೋದರ ಧರ್ಮಾನಂದ ಕೊಸಾಂಬಿ : ಭಾರತೀಯ ಚರಿತ್ರಶಾಸ್ತ್ರದ ಮಾ...: ವೈಜ್ಞಾನಿಕ ಜ್ಞಾನದಲ್ಲಿ ಕ್ರಾಂತಿಯಾಗುವುದು ಬರಿಯ ಮಾಹಿತಿ ಸಂಗ್ರಹದಿಂದಲ್ಲ , ಬದಲು ಒಂದು ಮಾದರಿ ಬದಲಾವಣೆ , ಸ್ಥಿತ್ಯಂತರವಾಗುವುದರ ಮೂಲಕ . ಇದರಿಂದ ...

JNU - ಕನ್ನಡ ವಿಭಾಗ ಗ್ರಂಥಾಲಯಕ್ಕೆ ಪುಸ್ತಕ ದಾನ ಮಾಡಿ Help pouring in for Kannada library at JNU

ಸಾಹಿತ್ಯ ಅಕಾಡೆಮಿ -LIVE- 'Kavi-Sandhi' Programme Today at 6 pm (28 June 2016)

ಬ್ರಿಟನ್ ಗೆ ಯುರೋಪ್ ಒಕ್ಕೂಟ ಯಾಕೆ ಬೇಡ ? - Why the British said no to Europe - John Pilger

Why the British said no to Europe: This was, in great part, a vote by those angered and demoralised by the sheer arrogance of the apologists for the “remain” campaign and the dismemberment of a socially just civil life in Britain. The

ನವಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ ?

ಪಿ ಸಾಯಿನಾಥ್ ವಿಶೇಷ ಉಪನ್ಯಾಸ ಬೆಂಗಳೂರಿನಲ್ಲಿ -1 -7-2016

ಅರವಿಂದ ಕರ್ಕಿಕೋಡಿ - ಗೆಳೆಯ ರವಿಶಂಕರ್ ಒಡ್ಡಂಬೆಟ್ಟು ಇನ್ನಿಲ್ಲ

ಅಯ್ಯೋ ನನ್ನ ಪ್ರೀತಿಯ ಗೆಳೆಯ ರವಿಶಂಕರ್ ಒಡ್ಡಂಬೆಟ್ಟು ಹೊರಟು ಹೋದನಂತೆ.. ಈಗಷ್ಟೇ ' ಕವಿತೆ ಗ್ರೂಪ್ ನಲ್ಲಿನ ಮಹೇಶಮೂರ್ತಿ ಅವರು ಕಳುಹಿಸಿದ ಒಡ್ಡಂಬೆಟ್ಟು ಕವನಗಳನ್ನೆಲ್ಲ ಮುಂಜಾನೆ ಎದ್ದು ಖುಷಿಯಿಂದ ಒಂದಾದಮೇಲೊಂದರಂತೆ ಸರದಿಯಂತೆ ಓದುತ್ತಹೋದ ನನ್ನ ಎದೆಗೆ ಭರ್ಚಿಯಂತೆ ತಿವಿದದ್ದು ರವಿಶಂಕರ್ ಕೈ ತಪ್ಪಿ ಹೋದಚೆಂಬ ಸುದ್ದಿ..ಈಗಷ್ಟೇ ನನ್ನ ಎಂದಿನ ಚಾಳಿಯಂತೆ  ಸೂರ್ಯನ ಬಗ್ಗೆ ಕವನ ಬರೆದು ನಿಮ್ಮೆಲ್ಲರ ಜೊತೆ ಅವನ ಮೊಬೈಲಿಗೂ ಕಳುಹಿಸಿದ್ದೆ..ಆದರೆ ಸುದ್ದಿ ತಿಳಿದು ಮಂಗಳೂರಿನಲ್ಲಿದ್ದ ಸೋದರಿ ಡಾ.ಸೀತಾಲಕ್ಷ್ಮೀ ಕರ್ಕಿಕೋಡಿಗೆ ಫೋನ್ ಮಾಡಿ ವಿಚಾರಿಸಿದೆ. ' ಹೌದು ಅಣ್ಣ, ರವಿಶಂಕರ್ ಹನಿಗವನ ಮತ್ತೆ ಸಿಗಲ್ಲ ಅಂದಳು ನೋವಿನ ದನಿಯಲ್ಲಿ..ರಾತ್ರಿಯೇ ಕೊನೆಯುಸಿರೆಳೆದರಂತೆ.' 
ಮತ್ತೆ ಹತ್ತು ವರ್ಷಗಳ ಹಿಂದೆ ಹೋದರೆ , ಸೀತಾಲಕ್ಷ್ಮಿಯ ಮನೆಯಲ್ಲಿಯೇ ಆತನ ಪರಿಚಯ, ಆಕೆಯ ತಂದೆ, ಹಿರಿಯ ಸಾಹಿತಿ ವಿ.ಗ.ನಾಯಕರ ಬಳಿ ತನ್ನ ಕೃತಿಯೊಂದರ ಹನಿಗವನಗಳನ್ನು ತಿದ್ದಿಸಿಕೊಳ್ಳಲು ಬಂದಿದ್ದ. ರಾತ್ರಿಯಿಡೀ ಕುಳಿತು ಸಾಹಿತ್ಯದ ಕುರಿತಂತೆ ನಾವೆಲ್ಲ ಹರಟಿದ್ದೆವು. ಅಂದಿನ ಪರಿಚಯ ಇಂದಿನವರೆಗೂ ನದಿಯಂತೆ ಹರಿದಿತ್ತು..ನಾನು ಹೊನ್ನಾವರದಲ್ಲಿ ನಮ್ಮ
 ' ಹಣತೆ' ಸಂಘಟನೆಯಿಂದ ಹಮ್ಮಿಕೊಂಡ ಜಿ. ಆರ್. ಪಾಂಡೇಶ್ವರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ನನ್ನ ಆಮಂತ್ರಣಕ್ಕೆ ಬೆಲೆಕೊಟ್ಟು ಸ್ವತಃ ಕಾರ್ ಡ್ರೈವ್ ಮಾಡ್ಕೊಂಡು ಬಂದು ಹೋಗಿದ್ದ. ಬರುವಾಗ ವಿ.ಗ.ನಾ.ಮತ್ತು ಸೀತಾಳನ್ನೂ ಕರ್ಕೊಂಡು ಬಂದಿದ್ದ. ಮತ್ತೆ ಯಾವತ್ತೋ ನಮ್ಮ ಮನೆಗೂ ಬಂದು ಹೋಗಿದ್ದ. ಆತನ ಒಂದೊಂದು ಕವನವೂ ಶ್ರೇಷ್ಠವೇ..ಕೆಲವೊಮ್ಮೆ ಆತನ ಹನಿಗವನ ಭರಪೂರು ಹಾಸ್ಯದ ಹೊನಲು ಚೆಲ್ಲಿದರೂ ಅಲ್ಲಿಯೂ ಬಳಸಿದ ಒಂದೊಂದು ರೂಪಕ ಗಂಭೀರವೂ ಗಂಭೀರ ವಿಡಂಬನೆಯ ಒರೆಗಲ್ಲಿಗೆ ಉಜ್ಜಿಕೊಳ್ಳುತ್ತಿತ್ತು. 
ಒಡ್ಡಂಬೆಟ್ಟುವಿನ 'ಮಳೆಬಿಸಿಲು' ಹನಿಗವನ ಸಂಕಲನ ಆತನ ಎರಡನೇ ಕೃತಿ..ಅದು ನಾನು ಹಚ್ಚಿಕೊಂಡ, ನೆಚ್ಚಿಕೊಂಡ ಕೃತಿ..ಆ ಅಭಿಮಾಬಕ್ಕಾಗಿ ನಾನು ಕೆಲವಾರು ವರ್ಷಗಳ ಹಿಂದೆ ' ಸಮಾಜಮುಖಿ' ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣಕ್ಕೆ
 'ಮಖೆಬಿಸಿಲು' ಅಂತ ಹೆಸರಿಟ್ಟುಕೊಂಡಿದ್ದೆ. 
ಆ ಅಂಕಣದಲ್ಲಿ ಒಮ್ಮೆ ರವಿಶಂಕರ್ ಮತ್ತು ಆತನ ಹನಿಗವನಗಳನ್ನು ಪ್ರಸ್ತಾಪ ಮಾಡಬೇಕೆಂದುಕೊಂಡರೂ ಅವಕಾಶ ಕೂಡಿ ಬಂದಿರಲಿಲ್ಲ. ಕೊನೆಗೆ ಆತನ ಮೂರನೇ ಕೃತಿ ಬಿಡುಗಡೆ ಮಾಡುವಾಗ ರವಿಶಂಕರ್ ಒಡ್ಡಂಬೆಟ್ಟು ಮತ್ತು ಆತನ ಹನಿಗವನಗಳ ಬಗ್ಗೆಯೇ ಒಂದು ಅಂಕಣ ಬರೆದು ಸಮಾಧಾನಪಟ್ಟುಕೊಂಡಿದ್ದೆ.. 
ಅನಂತರ ಗದಗನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ದಕ್ಷಿಣ ಕನ್ನಡದ ರವಿಶಂಕರ್ ಮತ್ತು ಉತ್ತರ ಕನ್ನಡದ ಪ್ರತಿಭಾವಂತ ಕವಿ ರಾಮಮೂರ್ತಿ ನಾಯಕ ಅವರನ್ನು ಕವಿಗೋಷ್ಠಿಗೆ ಸೇರಿಸಿದ್ದೆ. ಆಗಷ್ಡೇ ರಾಮಮೂರ್ತಿಯ ' ಅಂಬರ ಗುಬ್ಬಿ' ಕವನ ಸಂಕಲನ ಬಂದಿತ್ತು. ಆ ಸಂಕಲನವನ್ನೂ ಒಮ್ಮೆ ನೀವೆಲ್ಲ ಓದಲೇಬೇಕು.  ಆಗ ನನ್ನ ಬಳಿ ಅಧಿಕಾರ ಇಲ್ಲದಿದ್ದರೂ ಅಂದಿನ ಕಸಾಪ ರಾಜ್ಯಾಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರ ಬಳಿ ಜಗಳವಾಡಿ ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋದ ಸಂದರ್ಭದಲ್ಲೂ ಇವರಿಬ್ಬರ ಹೆಸರನ್ನು ಸೇರಿಸಿದ್ದೆ. ನಲ್ಲೂರು ಸರ್ ನನ್ನ ಮಾತಿಗೆ ಆ ಕಾಲದಲ್ಲೇ ಪ್ರೀತಿ ತೋರಿಸಿದ್ದರು. ಆ ಹಠಕ್ಕೆ ಕಾರಣ ಅವರಿಬ್ಬರೊಳಗೆ ಇದ್ದ ಕಾವ್ಯಶಕ್ತಿ. ಯಾಕೆ ಇಲ್ಲಿ ಅದನ್ನು ನೆನಪಿಸಿಕೊಂಡೆ ಅಂದರೆ ಇಬ್ಬರು ಪ್ರತಿಭಾವಂತರಿಗೆ ಅವಕಾಶ ಕೊಡಿಸಿದ್ದೇನೆ ಅನ್ನುವ ಸಂಭ್ರಮ ನನ್ನಲ್ಲಿತ್ತು.
ಹನಿಗವನದ 'ರವಿ' ಮುಳುಗಿದ್ದಾನೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಆತನಿಗೆ ಈಗ ೪೨ ವಯಸ್ಸು. ಇತ್ತೀಚೆಗಷ್ಟೇ ಹೊಸಮನೆ ಕಟ್ಟಿಕೊಂಡಿದ್ದಾನೆ. ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನಾಧ್ತಕ್ಷರಾಗುವ ಗೌರವವನ್ನೂ ಪಡೆದಿದ್ದ. ನಾನು ಜಿಲ್ಲಾ ಕಸಾಪ ಅಧ್ಯಕ್ಷನಾಗಿ ಆಯ್ಕೆ ಆದಾಗ ಟಿವಿಯಲ್ಲಿ ಸುದ್ದಿ ನೋಡಿ ಸಡಗರಪಟ್ಟು ಫೋನ್ ಮಾಡಿದ್ದ. 'ನೀನು ನಮ್ಮ ಜಿಲ್ಲೆಯ ಹೊಸ ಕವಿಗಳಿಗೆ ಒಂದು ಉಪನ್ಯಾಸ ಕೊಡಬೇಕು, ಕರೆಸುತ್ತೇನೆ.' ಅಂದಿದ್ದೆ. ' ಖಂಡಿತ ಬರ್ತೇನೆ' ಅಂತ ಹೇಳಿದ್ದ.
ರವಿ ಇಂದು ತನ್ನ ಎಲ್ಲ ಹನಿಗವನಗಳನ್ನೂ ನಮ್ಮ ಬಳಿ ಇಟ್ಟು ಹೊರಟಿದ್ದಾನೆ.
ಈ ನೆಲದ ನಂಬಿಕೆಯಂತೆ ಆತನ ಆತ್ಮಕ್ಕೆ ಶಾಂತಿ ಕೋರುತ್ತೇನೆ.
{ ಸಾಹಿತ್ಯ ಲಹರಿ whatsap  ಗುಂಪಿನಿಂದ }

ಮುರಳೀಧರ ಉಪಾಧ್ಯ ಹಿರಿಯಡಕ { Audio } ರವಿಶಂಕರ ಒಡ್ಡಂಬೆಟ್ಟು ಅವರ ಕವಿತೆಗಳು

Muralaeedhara Upadhya -Kalaka Award 2014 Uploaded by muraleedhara.upadhya at Your Listen

ರವಿಶಂಕರ ಒಡ್ಡಂಬೆಟ್ಟು ಮತ್ತು  ಕವಿತಾ ನರೇಶ್ ಮಂಚಿ ಅವರಿಗೆ ಕಲಕ {  Kadri Lions Club Award }  ಪ್ರಶಸ್ತಿ { 2014 }  ನೀಡುವ ಸಮಾರಂಭದಲ್ಲಿ ನಾನು ಮಾಡಿದ ಭಾಷಣ
Muraleedhara Upadhya Hiriadka { Audio } - KALAKA { Kadri Lions Club  } Award to Ravishankar Oddambettu

Monday, June 27, 2016

ಮಳೆಬಿಸಿಲು -ರವಿಶಂಕರ ಒಡ್ಡಂಬೆಟ್ಟು ಅವರ ಬ್ಲಾಗ್

ಮಳೆಬಿಸಿಲು -/-ಸಣ್ಣದು ಸಣ್ಣದು ಎಂದು 
 ಮೂಗು ಮುರಿಯಬೇಡ 
ಮನೆಯಂಗಳದಲ್ಲಿ ನೆಡುವುದು 
 ಆಲದಮರವನ್ನಲ್ಲ 
ತುಳಸಿಗಿಡ
 - ರವಿಶಂಕರ ಒಡ್ಡಂಬೆಟ್ಟ್ಯು

ಸಾವು ಹತ್ತಿರವೆಂದು

ಗೊತ್ತಿದ್ದರೂ

ಗೊನೆ ಹಾಕಿದ ಬಾಳೆಗೆ

ಸಂತಸವೋ ಸಂತಸ

   -ರವಿಶಂಕರ ಒಡ್ಡಂಬೆಟ್ಟು

Kannada Poet Ravishankar Oddambettu expired on 27-6-2016 .


ಕವಿ ರವಿಶಂಕರ ಒಡ್ಡಂಬೆಟ್ಟು ನಿಧನ - 27- 6-2016

Ravishankar Oddambettu
 ಕವಿ   ರವಿಶಂಕರ ಒಡ್ಡಂಬೆಟ್ಟು  ಕ್ಯಾನ್ಸೆರ್ ಗೆ ಬಲಿಯಾದ ಸುದ್ದಿ ತಿಳಿದು ಆಘಾತವಾಯಿತು.  ಅವರಿಗೆ ನನ್ನ ಅಂತಿಮ ನಮನಗಳು - ಮುರಳೀಧರ ಉಪಾಧ್ಯ ಹಿರಿಯಡಕ









ಡಾ / ಶೈಲಾ . ಯು - ಸಬಿಹಾ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಪತಿ

ಎಸ್. ಜಿ. ವಾಸುದೇವ್- Mapping the Madras Line - S G Vasudev, Velu Viswanadhan & A S Panneerselvan

ಎಸ್. ಜಿ. ವಾಸುದೇವ್-{ Audio } - ಕೆ. ಕೆ. ಹೆಬ್ಬಾರ್ -S. G. Vasudev { Audio -English } - K. K. Hebbar

vasudevsg - Clyp

S. G. Vasudev's talk at K. K. Hebbar art Gallery , Mcph , Manipal on 24-6-2016

ಅರಣ್ಯ ನೀತಿ ಬದಲಾವಣೆ : ಖಾಸಗಿಯಿಂದ ಅಪಾಯ ಖಚಿತ- ಉದಯವಾಣಿ

ವಿತ್ತ ಖಾತೆ ಮೇಲೆ ಕಣ್ಣಿಟ್ಟಿದ್ದೀರಾ, ಸ್ವಾಮಿ? -ಎಂ.ಎಲ್‌. ಲಕ್ಷ್ಮೀಕಾಂತ್‌

ಯದುವೀರ - ತ್ರಿಶಿಕಾ ಕಲ್ಯಾಣ

Sunday, June 26, 2016

ಕಾವಾಲಂ ನಾರಾಯಣ ಫಣಿಕ್ಕರ್ { ಸಂದರ್ಶನ } Interview with Kavalam Narayana Panicker

ಕೇರಳದ ಪ್ರಸಿದ್ಧ ಕವಿ, ನಾಟಕಾಚಾರ್ಯ ಕಾವಾಲಂ ನಾರಾಯಣ ಪಣಿಕ್ಕರ್ ನಿಧನ

ಕಿ. ರಂ. ನಾಗರಾಜ್ ಕಂಡಂತೆ ಸಿ. ಜಿ. ಕೆ

ಗಂಗಾ ಪಾದೇಕಲ್

ಗಂಗಾ ಪಾದೇಕಲ್ ರಿಗೆ ಅನುಪಮಾ ಪ್ರಶಸ್ತಿ -2016

ಥಾಯ್ ಲ್ಯಾಂಡ್ ನಲ್ಲಿ ಆಶೋಕನಿಗಾಗಿ ಸಂಶೋಧನೆ Nayanjot Lahiri - Re-searching Ashoka in Thailand

ಕೌಶಿಕ್ ಐತಾಳ್ - ದೇವ ಬಂದ ನಮ್ಮ ಸ್ವಾಮಿ ಬಂದ - Koushik Aithal singing Dasarapada " Deva Banda Namma" .

ಎಮ್.ಎಸ್. ರುದ್ರೇಶ್ವರಸ್ವಾಮಿ -ಅವಳ ಕವಿತೆ {2016 }

ಕಾಶ್ಮೀರದ ಪುಟ್ಟಹಳ್ಳಿಯಿಂದ ಕೋಮು ಸಾಮರಸ್ಯದ ಪಾಠ!

Saturday, June 25, 2016

ವೆನೆಜ಼ುವೇಲಾದಲ್ಲಿ ಪಳ್ಳತ್ತಡ್ಕ ಕುಮಾರ ಪ್ರಸಾದ್ ಕೊಲೆ

Ayurveda Entrepreneur Found Dead in Venezuela - Mangalorean.com:

'via Blog this'
pallattadka Kumara Prasad -ಪಳ್ಳತ್ತಡ್ಕ ಕುಮಾರ ಪ್ರಸಾದ್,

ಸಸ್ಯಶಾಸ್ತ್ರ  ಪರಿಣತ ದಿ/ ಪಳ್ಳತ್ತ್ಯಡ್ಕ ಕೇಶವ ಭಟ್ಟರ ಮಗ ಕುಮಾರ ಪ್ರಸಾದ್ ಅವರನ್ನು ವೆನೆಜ಼ುವೇಲಾದಲ್ಲಿ  24- 6-2016 ರಂದು ಕೊಲೆ ಮಾಡಲಾಗಿದೆ  . ಅವರು ಅಲ್ಲಿ ಆರೋಗ್ಯವರ್ಧಕ ಆಹಾರಕ್ರಮದ ಕುರಿತು ಪ್ರಚಾರ ಮಾಡುತ್ತಿದ್ದರು . Mr. Kumar Prasad { son of Pallattadka Keshava Bhat was murdered at Venezuvela on 24-6-2016.

ಆನಂದ ಪಾಟೀಲ - ಸುಮತೀಂದ್ರ ನಾಡಿಗ

ಹತ್ತು ಸಂಪುಟಗಳಲ್ಲಿ 2,300 ಶಾಸನ

ಶತಾವಧಾನಿ ಗಣೇಶ್ - ಮೇಘಮಲ್ಹಾರ

ಎಸ್. ಆರ್. ವಿಜಯಶಂಕರ - ಮಾವಿನಕೆರೆಯವರ ಮಾಸ್ತಿ ಮಾರ್ಗಸೂಚಿ ಕೃತಿ

ಡಾ / ಎಮ್. ಚಿದಾನಂದಮೂರ್ತಿ- - ಶರಣ ಚಳವಳಿ ಉಗಮ ಬಿಜ್ಜಳನ ರಾಜಾಂಗಣ!

ಕರ್ನಾಟಕದ ಡೆಮಾಗ್ರಫಿಕ್ ಬದಲಾವಣೆಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳು

ಟಾಗೋರ್ ಅವರ ಚಿತ್ರಾ { ನಿ- ಡಾ / ಶ್ರೀಪಾದ ಭಟ್ } ನಾಂದಿ - ವಾಗರ್ಥವಿವ --- { Vedio }

ಸುಬ್ರಾಯ ಚೊಕ್ಕಾಡಿ - ಕವಿಯ ನೋಡಿ , ಕವಿತೆ ಕೇಳಿ - 26- 6-2016

Friday, June 24, 2016

ಮಾಲಿನಿ ಮಲ್ಯ { Audio } - ಶಿವರಾಮ ಕಾರಂತರು ಮತ್ತು ಕೆ. ಕೆ. ಹೆಬ್ಬಾರ್

ರೇಖಾ ಹೆಬ್ಬಾರ್ [ Audio } - ಕೆ. ಕೆ. ಹೆಬ್ಬಾರ್

rekhahebbar - Clyp:

Rekha Hebbar
'via Blog this'
Rekha Hebbar's{ Audio }  talk at K. K. Hebbar Art Gallery , MCPH , MANIPAL on 25-6-2016

ರಜನಿ ಪ್ರಸನ್ನ -{ Audio } - ಕೆ.ಕೆ. ಹೆಬ್ಬಾರ್ ಆರ್ಟ್ ಗ್ಯಾಲರಿ

rajaniprasanna - Clyp:

Rajani Prasanna
'via Blog this'
Rajani Prasanna's talk { AUDIO } at K. K. Hebbar Ary Gallery , Mcph Manipal on 24-6-2016

ಮಣಿಪಾಲ: ಹೆಬ್ಬಾರ್ ಗ್ಯಾಲರಿ, ಕಲಾಕೇಂದ್ರ ಉದ್ಘಾಟನೆ

ಡಾ.ಕಾರಂತ ಬಾಲವನದ ಅಭಿವೃದ್ಧಿಗೆ ಒಂದು ಕೋ.ರೂ. ಬಿಡುಗಡೆ: ಡಿಸಿ

ಮಂಟಪ ಪ್ರಭಾಕರ ಉಪಾಧ್ಯ- - ಭಾಮಿನಿ | Bhamini

ಪುಷ್ಪಮಾಲಾ . ಎನ್ . Pushpamala N - Slide Lecture - Chandigarh Lalit Kala Akademi: Amrita She...

ಸಿದ್ದರಾಮಯ್ಯ‘ಮರುಹುಟ್ಟು’ಪಡೆಯಲಿ-ದೇವನೂರು

ಕಸ ತಿಂದು ಗೊಬ್ಬರ ಕೊಡುವ ಯಂತ್ರ!