stat Counter



Sunday, June 5, 2016

ನ್ಯಾಷನಲ್ ಸ್ಚೂಲ್ ಅಫ಼್ ಡ್ರಾಮಾ , ಬೆಂಗಳೂರು -ಅರ್ಜಿ ಆಹ್ವಾನ - 2016

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಬೆಂಗಳೂರು ಕೇಂದ್ರ ಇವರು ಅಭಿನಯದಲ್ಲಿ ಒಂದು ವರ್ಷದ ಪ್ರಮಾಣ ಪತ್ರದ ಕೋರ್ಸ್ ಗೆ ವಸತಿಶಾಲೆಯಲ್ಲಿಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದ್ದಾರೆ. 15ಜುಲೈ 2016 ರಿಂದ ಕೋರ್ಸ್ ಆರಂಭವಾಗುತ್ತದೆ. ದೇಶದ (ಭಾರತ) ಯಾರೇಯಾದರೂ ಅರ್ಜಿ ಸಲ್ಲಿಸಬಹುದು, ಆದರೆ ಭಾರತದ ದಕ್ಷಿಣ ರಾಜ್ಯಗಳ (ಕನರ್ಾಟಕ,ಸೀಮಾಂಧ್ರ, ತೆಲಂಗಾಣ, ತಮಿಳು ನಾಡು, ಕೇರಳ ಹಾಗು ಪಾಂಡಿಚೆರಿಯ ಪ್ರದೇಶಗಳು ಹಾಗು ಲಕ್ಷದ್ವೀಪಗಳು) ಆಭ್ಯ ಥಿ ಗಳಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿ ಗಳ ಸಂಖ್ಯೆ: 20 (ಇಪ್ಪತ್ತು)
ಮಾಧ್ಯಮ: ಇಂಗ್ಲೀಷ್. ಸೂಚನೆಗಳು ಇಂಗ್ಲೀಷ್ನಲ್ಲಿ ಇರುತ್ತವೆ. ಬಹು ಭಾಷೆಗಳ ಪ್ರಯೋಗಗಳು ನಡೆಯುತ್ತವೆ (ದಕ್ಷಿಣ ಭಾರತೀಯ ಭಾಷೆಗಳು). ಪರೀಕ್ಷೆ ಬರೆಯುವ ಭಾಷೆ ಇಂಗ್ಲೀಷನಲ್ಲಿರುತ್ತದೆ ಅಥವಾ ದಕ್ಷಿಣ ಪ್ರಾಂತದ ಯಾವುದಾದರೂ ಭಾಷೆ.

ಅಗತ್ಯ ಅರ್ಹತೆಗಳು:
1. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯು ಕನಿಷ್ಠ ಅರ್ಹತೆ. ಅತ್ಯುತ್ತಮ ಪ್ರತಿಭೆ ಹೊಂದಿರುವ ಬುಡಕಟ್ಟು. ಜಾನಪದ ಹಾಗು ಪಾರಂಪರಿಕವಾಗಿ ಕಲೆಗಳನ್ನು ಪ್ರದರ್ಶಿಸುತ್ತ ಬಂದಿರುವ ಕುಟುಂಬಗಳ ಅಭ್ಯರ್ಥಿಗಳ ವಿಚಾರದಲ್ಲಿ ಇದು ವಿನಾಯಿತಿಗೆ ಒಳಪಡುತ್ತದೆ.
2. ರಂಗಭೂಮಿಯ ಬಗ್ಗೆ ಸಾಕಷ್ಟು ತಿಳುವಳಿಕೆ ಹಾಗು ಕನಿಷ್ಠ 4(ನಾಲ್ಕು) ಪ್ರಯೋಗಗಳಲ್ಲಿ ಭಾಗಿಯಾಗಿರಬೇಕು.
ವಯೋಮಿತಿ: ಜೂನ್ 1, 2016 ಕ್ಕೆ ಕನಿಷ್ಠ 21 ವರ್ಷಗಳು ಹಾಗು ಗರಿಷ್ಠ 30 ವರ್ಷಗಳಾಗಿರಬೇಕು.

ಅರ್ಜಿಗಳು ಇಲ್ಲಿ ಲಭ್ಯ:
ಅರ್ಜಿಗಳನ್ನು ಸ್ಕೂಲ್ ವೆಬ್ ಸೈಟ್ www.nsd.gov.in ನಿಂದ 14 ಏಪ್ರಿಲ್ 2016 ರಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಅರ್ಜಿ ಫಾರಂ ಹಾಗೂ ಪ್ರಾಸ್ಪೆಕ್ಟಸ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಬೆಂಗಳೂರು ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ (ಬೆಂಗಳೂರು ವಿಶ್ವವಿದ್ಯಾಲಯದ ಹಿಂಭಾಗ), ಬೆಂಗಳೂರು -56 ಇಲ್ಲಿ ಬೆಳ್ಲಿಗ್ಗೆ 10ರಿಂದ ಮಧ್ಯಾಹ್ನ 1.00 ರ ವರೆಗೆ ದೊರೆಯುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಜಿ ಜೊತೆಯಲ್ಲಿ ಅಟೆಸ್ಟ್ ಮಾಡಿದ ಪ್ರಮಾಣ ಪತ್ರಗಳು ಹಾಗು ಎನ್ ಎಸ್ ಡಿ, ಬೆಂಗಳೂರು ವಿಭಾಗ ಇವರ ಹೆಸರಲ್ಲಿ ರೂ.150 ಡಿಡಿ ತೆಗೆದು ಲಗ್ಗತ್ತಿಸಿರಬೇಕು.
ಅರ್ಜಿಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು:
ಪೂರ್ಣ ತುಂಬಿದ ಅರ್ಜಿಗಳನ್ನು ನೇರವಾಗಿ ಬಂದು ಅಥವಾ ಅಂಚೆಯಲ್ಲಿ ಶಿಬಿರ ನಿರ್ದೇಶಕರು, ಎನ್ ಎಸ್ ಡಿ, ಬೆಂಗಳೂರು ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಲಿ (ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ) ಬೆಂಗಳೂರು - 56 ಇಲ್ಲಿಗೆ ಕಳುಹಿಸಬಹುದು.
ಕಡೆಯ ದಿನಾಂಕ:
ಅರ್ಜಿಗಳನ್ನು ಸಲ್ಲಿಸಲು 20 ಜೂನ್ 2016 ಕಡೆಯ ದಿನ. ನಂತರ ಬಂದ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಆಯ್ಕೆಯ ವಿಧಾನ:
ಅರ್ಜಿಗಳನ್ನು ಪರಿಶೀಲಿಸಿದ ನಂತರ ಅಂತಿಮಗೊಳಿಸಲಾದ ಪಟ್ಟಿಯಲ್ಲಿನ ಅಭ್ಯರ್ಥಿಗಳು ಜೂನ್ 26,27 ಹಾಗು 28, 2016 ರಂದು ನಡೆಯುವ ಆಡಿಷನ್/ಪ್ರಯೋಗ ಹಾಗು ದೈಹಿಕ ಪರೀಕ್ಷೆಗಳಿಗೆ ತಮ್ಮದೇ ಖರ್ಚಿನಲ್ಲಿ ಬೆಂಗಳೂರು ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ (ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ) ಬೆಂಗಳೂರು - 560056 ಇಲ್ಲಿ ನಡೆಯುವ 2 -4 ದಿನಗಳ ಕಾಲದ ಶಿಬಿರದಲ್ಲಿ ಕಡೆಯ ಸುತ್ತಿನ ಆಯ್ಕೆಯ ಸಲುವಾಗಿ ಭಾಗಿಯಾಗಬೇಕು. ಅಭ್ಯರ್ಥಿಗಳು ಶಿಬಿರದ ಸಂದರ್ಭದಲ್ಲಿ ಮೂಲ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. 
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ನವದೆಹಲಿ ನೇಮಿಸಿದ ತಜ್ಙರ ಸಮಿತಿಯು ಅಭ್ಯರ್ಥಿಗಳ ಅರ್ಹತೆ ಹಾಗು ಪ್ರತಿಭೆಯನ್ನು ನಿರ್ಧರಿಸುತ್ತಾರೆ ಮತ್ತು ಸಮಿತಿಯ ನಿರ್ಧಾರವು ಅಂತಿಮವಾಗಿರುತ್ತದೆ. ಈ ಸಂಬಂಧವಾಗಿ ಪ್ರಚಾರ ನಡೆಸಿದರೆ ಅನರ್ಹಗೊಳಿಸಲಾಗುವುದು.

ವಿದ್ಯಾರ್ಥಿವೇತನ:
ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೈಕ್ಷಣಿಕ ವರ್ಷದಲ್ಲಿ ಅವರ ಕೋಸರ್್ಗೆ ತಿಂಗಳಿಗೆ ವಿದ್ಯಾರ್ಥಿ ವೇತವಾಗಿ ರೂ 4,500/- ನೀಡಲಾಗುವುದು.
ದೈಹಿಕ ಸದೃಢತೆ:
ಆಯ್ಕೆಯಾದ ಎಲ್ಲ ಅಭ್ಯರ್ಥಿಗಳು ದೈಹಿಕ ಸದೃಢತೆಗಾಗಿ ವೈದ್ಯಕೀಯ ಪರಿಕ್ಷೆಗೆ ಒಳಗಾಗಬೇಕು. ಅಂತಿಮ ಆಯ್ಕೆಯು ಅವರ ದೈಹಿಕ ಸದೃಢ ಪರಿಕ್ಷೆಯನ್ನು ಪೂರ್ಣಗೊಳಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.

ಗಮನಿಸಿ:
ಅರ್ಜಿಗಳನ್ನು ಕಚೇರಿಯು ಪರಿಶೀಲಿಸಿದ ನಂತರ ಅಭ್ಯರ್ಥಿಗಳಿಗೆ ದಿನಾಂಕಗಳ ಬಗ್ಗೆ ತಿಳಿಸಲಾಗುವುದು. ಹೆಚ್ಚಿನ ವಿವರಣೆಗೆ ಫೋನ್ ನಂ: 080-2318-3027 ಸಂಪಕರ್ಕಿಸಿ ಅಥವಾ ಇ ಮೇಲ್ - nsd.bengaluruchapter@gmail.com

No comments:

Post a Comment