stat Counter



Sunday, June 19, 2016

ದೆಹಲಿ ಕರ್ನಾಟಕ ಸಂಘ - ಕಾರಂತ , ಮಹಿಷಿ ಮತ್ತು ರಂಗ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ- 2016

 ದೆಹಲಿ ಕರ್ನಾಟಕ ಸಂಘದ ಕಾರಂತ, ಮಹಿಷಿ ಮತ್ತು ರಂಗಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

 ದೇಶದ ರಾಜಧಾನಿ ದೆಹಲಿಯಲ್ಲಿ ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಕಳೆದ ಆರು ದಶಕಗಳಿಂದ ಉಳಿಸಿ ಬೆಳೆಸುತ್ತಿರುವ ದೆಹಲಿ ಕರ್ನಾಟಕ ಸಂಘವು ಪುಸ್ತಕ ಪ್ರಕಟಣೆ, ಮಹಿಳಾ ಸಾಹಿತ್ಯ ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ನೀಡುವ ಮೂರು ಪ್ರಶಸ್ತಿಗಳಿಗೆ ಅರ್ಹ ಸಾಧಕರಿಂದ ಅರ್ಜಿಯನ್ನು ಆಹ್ವಾನಿಸಿದೆ.

ಡಾ. ಕೆ. ಶಿವರಾಮ ಕಾರಂತ ಪ್ರಶಸ್ತಿ:ದೆಹಲಿ ಕರ್ನಾಟಕ ಸಂಘವು ಪ್ರತಿಎರಡು ವರ್ಷಗಳಿಗೊಮ್ಮೆ ನೀಡುವಡಾ. ಕೆ.ಶಿವರಾಮ ಕಾರಂತ ಪ್ರಶಸ್ತಿಯನ್ನು 2016ನೇ ಸಾಲಿಗೆ ನೀಡಲಾಗುತ್ತಿದೆ. ಡಾ. ಶಿವರಾಮ ಕಾರಂತರು ಸ್ವತ: ಹಲವಾರು ಕೃತಿಗಳನ್ನು ಪ್ರಕಟಿಸಿ ಕನ್ನಡದ ಸಾಹಿತ್ಯಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಈ ವರ್ಷದ ಪ್ರಶಸ್ತಿಯನ್ನು ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವುದು.ಈ ಪ್ರಶಸ್ತಿ ನಗದು ಹಣರೂ.50,000/- ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.

ಈ ಹಿಂದೆ ಈ ಪ್ರಶಸ್ತಿಯನ್ನು ಡಾ.ಕಾರಂತರ ಸಾಧನಾಕ್ಷೇತ್ರಗಳಾದ ಸಾಹಿತ್ಯಕ್ಷೇತ್ರಕ್ಕೆ ಯಶವಂತ ಚಿತ್ತಾಲ, ವಿಜ್ಞಾನಕ್ಷೇತ್ರಕ್ಕೆ ಜಿ.ಟಿ.ನಾರಾಯಣರಾವ್, ಯಕ್ಷಗಾನಕ್ಷೇತ್ರಕ್ಕೆ ಶ್ರೀ ಬನ್ನಂಜೆ ಸಂಜೀವ ಸುವರ್ಣ, ಪರಿಸರಕ್ಷೇತ್ರಕ್ಕೆ ಸಾಲು ಮರದ ತಿಮ್ಮಕ್ಕ ಹಾಗೂ ಮಕ್ಕಳ ಸಾಹಿತ್ಯಕ್ಷೇತ್ರಕ್ಕೆ ಶ್ರೀ ಕೋಟಿಗಾನ ಹಳ್ಳಿ ರಾಮಯ್ಯನವರಿಗೆ ನೀಡಲಾಗಿದೆ. ಪ್ರಶಸ್ತಿಗೆ ಸಾಧಕರ ಹೆಸರನ್ನು ಸಂಕ್ಷಿಪ್ತ ವಿವರಗಳೊಂದಿಗೆ ಕಳುಹಿಸಿಕೊಡಬೇಕು

ದೆಹಲಿ ಕರ್ನಾಟಕ ಸಂಘ ಕನ್ನಡ ಭಾರತಿರಂಗ ಪ್ರಶಸ್ತಿ: ದೆಹಲಿ ಕರ್ನಾಟಕ ಸಂಘವು 2015ರಿಂದ ರಂಗಭೂಮಿಯ ಚಟುವಟಿಕೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕನ್ನಡ ಭಾರತಿ ರಂಗ ಪ್ರಶಸ್ತಿಯನ್ನು ಪ್ರತಿ ವರ್ಷವೂ ನೀಡಲುಪ್ರಾರಂಭಿಸಿದೆ. ಈ ಪ್ರಶಸ್ತಿ ರೂ.50,000/- ನಗದು ಹಣ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.2015ರ ಈ ಪ್ರಶಸ್ತಿಯನ್ನು ದೆಹಲಿಯಲ್ಲಿಕನ್ನಡ ಭಾರತಿಯ ಸಂಸ್ಥಾಪಕ ಸದಸ್ಯರೂ ಹಾಗೂ ಅದರ ಬೆಳವಣಿಗೆಗೆ ಸಕ್ರಿಯವಾಗಿ ಕೆಲಸ ಮಾಡಿದ್ದ ಎಂ.ವಿ. ನಾರಾಯಣರಾವ್‍ಅವರಿಗೆ ನೀಡಲಾಗಿತ್ತು.ರಂಗಭೂಮಿಯ ಯಾವುದೇ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿರುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಗೆ ಸಾಧಕರ ಹೆಸರನ್ನು ಸಂಕ್ಷಿಪ್ತ ವಿವರಗಳೊಂದಿಗೆ ಕಳುಹಿಸಿಕೊಡಬೇಕು

ಡಾ.ಸರೋಜಿನಿ ಮಹಿಷಿ ಪ್ರಶಸ್ತಿ: ದೆಹಲಿ ಕರ್ನಾಟಕ ಸಂಘದ ಮಾಜಿಅಧ್ಯಕ್ಷೆದಿ.ಡಾ.ಸರೋಜಿನಿ ಮಹಿಷಿಯವರ ಹೆಸರಿನಲ್ಲಿ ಸಾಹಿತ್ಯ ಕೃತಿಗಳಿಗೆ ಸಂಬಂಧಿಸಿದಂತೆ ಡಾ.ಸರೋಜಿನಿ ಮಹಿಷಿ ಪ್ರಶಸ್ತಿಯನ್ನು ಪ್ರತಿ ವರ್ಷನೀಡಲು ಉದ್ದೇಶಿಸಿದೆ.ಈ ಪ್ರಶಸ್ತಿಯುರೂ.50,000/- ನಗದು ಹಣ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಈ ವರ್ಷದ ಪ್ರಶಸ್ತಿಯನ್ನು ಮಹಿಳಾ ಲೇಖಕಿಯರಕನ್ನಡದ ಸಾಹಿತ್ಯ ಕೃತಿಗಳಿಗೆ ನೀಡಲು ನಿರ್ಧರಿಸಲಾಗಿದೆ.ಪ್ರಕಟಿತ ಕೃತಿಗಳು ಎರಡು ವರ್ಷಗಳ ಇತ್ತೀಚಿನದ್ದಾಗಿರಬೇಕು.ಕೃತಿಗಳ ಆಯ್ಕೆಗಾಗಿಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಆಸಕ್ತರು ತಮ್ಮ ಸಂಕ್ಷಿಪ್ತ ವಿವರಗಳೊಂದಿಗೆ ಕೃತಿಯ ಜೊತೆಗೆ ಕಳುಹಿಸಿಕೊಡಬೇಕು.

No comments:

Post a Comment