stat Counter



Sunday, October 14, 2018

ಉಡುಪಿಯ ಬನ್ನಂಜೆ ಬಸ್ ನಿಲ್ದಾಣದ ಕಾಮಗಾರಿ: 50 ವರ್ಷ ಹಳೆಯ ಮರಗಳ ಸ್ಥಳಾಂತರ

ಬನ್ನಂಜೆ ಬಸ್ ನಿಲ್ದಾಣದ ಕಾಮಗಾರಿ: 50 ವರ್ಷ ಹಳೆಯ ಮರಗಳ ಸ್ಥಳಾಂತರ - Varthabharathi | DailyHunt: ಉಡುಪಿ, ಅ.13: ಬನ್ನಂಜೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿಯ ಹಿನ್ನೆಲೆಯಲ್ಲಿ ಕೊಡಲಿ ಏಟಿನಿಂದ ನೆಲಕ್ಕೆ ಉರುಳಲಿದ್ದ 50 ವರ್ಷಗಳ ಹಳೆ ಮರಗಳನ್ನು ಅಲ್ಲೇ ಸಮೀಪಕ್ಕೆ ಸ್ಥಳಾಂತರಿಸಿ ನೆಡುವ ಕಾರ್ಯ ಶನಿವಾರ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನಿರ್ಮಾಣಗೊಳ್ಳುವ ಪ್ರದೇಶದಲ್ಲಿದ್ದ 28 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪರಿಸರಾಕ್ತರ ಒಕ್ಕೂಟದ ಪ್ರೇಮಾನಂದ ಕಲ್ಮಾಡಿ ಹಾಗೂ ವಿನಯಚಂದ್ರ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಮರಗಳನ್ನು ಉಳಿಸುವಂತೆ ಕೋರಿಕೊಂಡಿದ್ದರು. ಇತ್ತೀಚೆಗೆ ಈ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಆರ್.ಶಂಕರ್ ಅವರಲ್ಲಿಯೂ ಮರಗಳನ್ನು ಉಳಿಸುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಸಚಿವರು ಮರಗಳನ್ನು ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸಿದ್ದರು.

No comments:

Post a Comment