Columns News: life management problem v/s literature problem - ಬಿಸಿಲ ಬೆಳದಿಂಗಳು: ಜೀವನ ನಿರ್ವಹಣೆ ಸಮಸ್ಯೆv/s ಸಾಹಿತ್ಯ ನಿರ್ಮಾಣದ ಸಮಸ್ಯೆ | Vijaya Karnataka: ಸಮಸ್ಯೆ ಇಲ್ಲದ ವ್ಯಕ್ತಿ ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಬದುಕಿನುದ್ದಕ್ಕೂ ಏನಾದರೊಂದು ಇದ್ದೇ ಇರುತ್ತದೆ. ಬೆಳೆದು ನಿಂತ ಮಗಳ ಮದುವೆಯ ಸಮಸ್ಯೆ ತಾಯಿಗಾದರೆ, ತಂದೆಗೆ ಓದು ಮುಗಿಸಿ ಜೋಲು ಮುಖಮಾಡಿಕೊಂಡು ಮನೆಯಲ್ಲಿರುವ ಮಗನ ನೌಕರಿ ಸಮಸ್ಯೆ. ಮಗಳಿಗೆ ಮದುವೆಯಾದ ಮೇಲೆ ಮಕ್ಕಳಾಗದ ಸಮಸ್ಯೆ. ಅತ್ತೆ-ಮಾವಂದಿರು ಮತ್ತು ಗಂಡನ ಕಿರುಕುಳದ ಸಮಸ್ಯೆ. ಮಗನಿಗೆ ನೌಕರಿ ಸಿಕ್ಕಮೇಲೆ ಬಡ್ತಿ ಸಮಸ್ಯೆ. ಬಡ್ತಿ ಸಿಕ್ಕಮೇಲೆ ಹಿಂಬಡ್ತಿ ಸಮಸ್ಯೆ. ಒಂದೇ ಎರಡೇ? ಒಂದು ಮುಗಿದು ಇನ್ನೇನು ಸುಖವಾಗಿರಬಹುದು ಎನ್ನುವಷ್ಟರಲ್ಲಿ ಮತ್ತೊಂದು ಧುತ್ತೆಂದು ಭೂತಾಕಾರವಾಗಿ ಮುಂದೆ ಬಂದು ನಿಲ್ಲುತ್ತದೆ. ಸಮಸ್ಯೆಗಳು ವ್ಯಕ್ತಿಯ ಮನಸ್ಸಿಗೆ ಕ್ಲೇಶವನ್ನುಂಟುಮಾಡಿದರೂ ಅವುಗಳನ್ನು ಎದುರಿಸಿ ಮೆಟ್ಟಿನಿಂತಾಗ ಆಗುವ ಆನಂದ ಅಪರಿಮಿತ.
No comments:
Post a Comment