
ಪ್ರಕಾಶಕರು -
ಕನಕದಾಸ ಸಂಶೋಧನ ಪೀಠ,
ಗೋವಿಂದ ಪೈ ಸಂಶೋಧನ ಕೇಂದ್ರ
ಉಡುಪಿ-576102
ಮೊದಲ ಮುದ್ರಣ- 2013 , ಬೆಲೆ-ರೂ.75
contact -0820-2521159
ಪಂಡಿತ ಪರಂಪರೆಯ ಹೊಸ ತಲೆಮಾರಿನ ವಿದ್ವಾಂಸ ಡಾ / ಕಬ್ಬಿನಾಲೆ ವಸಂತ ಭಾರದ್ವಾಜರ ’ ಕನಕಮುಂಡಿಗೆ ’ - ನಾನು ಇತ್ತೀಚಿಗೆ ಓದಿದ ಉತ್ತಮ ಸಂಶೋಧನ ಗ್ರಂಥಗಳಲ್ಲಿ ಒಂದು .
" ಮಗಳ್ಗೆ ಮಗನಾದ, ಮಗಳಿಗಳಿಯನಾದ , ಮಗಗೆ ಮೈದುನನಾದ , ಮಗಳಿಗೆ ಪತಿಯಾದ ’ -ಎಂಧ ಹತ್ತಾರು ಪೌರಾಣಿಕ ಕುಟುಂಬ ಸಂಬಂಧದ ಒಗಟುಗಳು ಕನಕದಾಸರ ಮುಂಡಿಗೆಗಳಲ್ಲಿವೆ.ಈ ಒಗಟುಗಳ ಅರ್ಥಾನುಸಂಧಾನ ಈ ಪುಸ್ತಕದಲ್ಲಿದೆ .
ಕನಕದಾಸರು ’ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ " ಎಂದು ಬೀಸುವ ಕಲ್ಲನ್ನು ಬಣ್ಣಿಸುತ್ತಾರೆ. ದೇವತೆಗಳನ್ನೂ ಕಾಡುವ ಲೈಂಗಿಕ ಸೆಳೆತವನ್ನು " ಹಲವು ಜೀವವ ಒಂದೆಲೆ ನುಂಗಿತು " ಎಂದು ಸಾಂಕೇತಿಕವಾಗಿ ನಿರೂಪಿಸುತ್ತಾರೆ.
ಒಗಟುಗಳನ್ನು ಕನಕದಾಸರು ’ಹಳಗನ್ನಡ’ ಎಂದೂ ಹೆಸರು ನೀಡಿದ್ದುಂಟು -" ತಿಳಿದವರು ಪೇಳಿರೀ ಹಳಗನ್ನಡವನ್ನು ’ { ಒಂಬತ್ತು ಹೂವಿಗೆ ಒಂದೇ ನಾಳವು " } ಕನಕದಾಸರ " ಹಳಗನ್ನಡ " ವನ್ನು ಅರ್ಥ ವಿವರಣೆಯಲ್ಲಿ ಒಂದಲ್ಲ , ಹತ್ತು ಹೆಜ್ಜೆ ಮುನ್ನಡೆದಿರುವ ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ಅಭಿನಂದನೆಗಳು.
- ಮುರಳೀಧರ ಉಪಾಧ್ಯ ಹಿರಿಯಡಕ
Dhanyavadagalu.
ReplyDeleteBengalurinalli pusthaka elli sikkutthade?
ReplyDeleteಅಂಕಿತದವರು ತರಿಸುತ್ತಾರೆ.
Delete