stat Counter



Wednesday, October 31, 2018

ಪೇಸ್‌ಬುಕ್ನಾಗೆ ‘ಸುದ್ದ’ ಕನ್ನಡದ ಗಂಧ

ಪೇಸ್‌ಬುಕ್ನಾಗೆ ‘ಸುದ್ದ’ ಕನ್ನಡದ ಗಂಧ | Prajavani: ಕನ್ನಡದಲ್ಲಿ ಶುದ್ಧ, ಅಶುದ್ಧ ಎಂದು ಇದೆಯೇ? ಕನ್ನಡವೆಂದರೆ ಬೆಂಗಳೂರು ಶೈಲಿಯ ಕನ್ನಡ ಎಂಬ ಸಿದ್ಧಸೂತ್ರಕ್ಕೆ ಜೈ ಅನ್ನುವುದನ್ನು ಕಾಣುತ್ತಿದ್ದೇವೆ. ಕೆಲವು ಆಡುಭಾಷೆಗಳು ಹಾಸ್ಯಕ್ಕೂ, ಖಳ ಪಾತ್ರಗಳಿಗೂ ಸೀಮಿತಗೊಳಿಸಿದ್ದೂ ಆಗಿದೆ. ಹಾಸ್ಯ ಗೋಷ್ಠಿಗಳಲ್ಲಿ ಅಥವಾ ಸಿನಿಮಾಗಳಲ್ಲಿ ಕೆಲವು ಪ್ರದೇಶದ ಕನ್ನಡವನ್ನು ಹಾಸ್ಯದ ನೆಪದಲ್ಲಿ ಲೇವಡಿ ಮಾಡುವುದೂ ಉಂಟು. ಈ ಬೆಳವಣಿಗೆಗಳನ್ನೇ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ವಿಡಿಯೊ ಮೂಲಕ ಚರ್ಚಿಸಿದ್ದಾರೆ, ನಗರದ ಪುನೀತ್‌ ಎಂಬ

ಕನ್ನಡ: ಭಾವುಕತೆ ಸಾಕು ಆಧುನಿಕ ಚಿಂತನೆ ಬೇಕು

ಕನ್ನಡ: ಭಾವುಕತೆ ಸಾಕು ಆಧುನಿಕ ಚಿಂತನೆ ಬೇಕು | Prajavani: ಕನ್ನಡಕ್ಕೆ ಪ್ರಸ್ತುತ ಅಗತ್ಯವಿರುವುದು ಕನ್ನಡವನ್ನು ಪ್ರದರ್ಶನ ವಸ್ತುವಾಗಿಸುವ, ಕನ್ನಡಾಂಬೆಯನ್ನು ಮೆರವಣಿಗೆ ಮಾಡುವ ಯೋಜನೆಗಳಲ್ಲ. ಕನ್ನಡವನ್ನು ಒಳಗಿನಿಂದ ಸಶಕ್ತಗೊಳಿಸುವುದು

ಗೋವಿಂದ ಪೈ- ತಾಯೆ ಬಾರ ಮೊಗವ ತೋರ - B.R.CHAYA THAYE BAARA

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ...

"ಬಾರಿಸು ಕನ್ನಡ ಡಿಂಡಿಮವ -- |ಕನ್ನಡ ನಾಡಗೀತೆ

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ { ರಿ } -ನಾಡ ಗೀತೆಗಳು -- ಚಂದ್ರಶೇಖರ ಕೆದ್ಲಾಯ

                HIRTIADKA SAMSKRUTI SIRI TRUST { R }

               GOVERNMENT PRE UNIVERSITY COLLEGE,

                                                   HIRIADKA 


                 ಕರ್ನಾಟಕ ರಾಜ್ಯೋತ್ಸವ -1-11-2018

                           ಶ್ರೀ ಚಂದ್ರಶೇಖರ ಕೆದ್ಲಾಯರಿಂದ  ನಾಡಗೀತೆಗಳು

                                  chandrashekhar kedilaya ಗೆ ಚಿತ್ರದ ಫಲಿತಾಂಶ

                                ಹಿರಿಯಡಕ ಪದವಿ ಪೂರ್ವ ಕಾಲೇಜು ಸಭಾಂಗಣ , 11 am

                                          ನಿಮಗೆ ಸ್ವಾಗತ

       

           

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಪ್ರಬಂಧ ಸ್ಪರ್ಧೆ - ನಾನು ಮೆಚ್ಚಿದ ಅಧ್ಯಾಪಕ

        HIRIADKA SAMSKRUTHI SIRI  TRUST { R ]

             ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ { ರಿ }

                  ಕನ್ನದ ಪ್ರಬಂಧ ಸ್ಪರ್ಧೆ -   " ನಾನು ಮೆಚ್ಚಿದ ಅಧ್ಯಾಪಕ "

{ ಹಿರಿಯಡಕ ಪದವಿ ಪೂರ್ವ ಕಾಲೇಜಿನ ಪಿ. ಯು. ಸಿ ವಿದ್ಯಾರ್ಥಿಗಳಿಗೆ } }

 ಬಹುಮಾನ ವಿತರಣೆ -  1- 11-2018 ರಂದು 11 am

 ಪ್ರಥಮ ಬಹುಮಾನ -

     ----------ಪುನೀತ್ ಶೆಟ್ಟಿ  ದ್ವಿತೀಯ ಪಿ. ಯು. ಸಿ { Science Section }

 --------------- ಎಂ . ವಿಜಯ್  ದ್ವಿತೀಯ ಪಿ. ಯು. ಸಿ

  ದ್ವಿತೀಯ  ಬಹುಮಾನ -

   ----------- ಪ್ರಜ್ಞಾ- , ದ್ವಿತೀಯ ಪಿ. ಯು. ಸಿ  [ Science Section }

--------------- ರವಿ ಕುಮಾರ್  ದ್ವಿತೀಯ ಪಿ. ಯು. ಸಿ { Science Section }

 ತೃತೀಯ ಬಹುಮಾನ


                     ಪ್ರಜ್ಞಾ-ದ್ವಿತೀಯ ಪಿ. ಯು. ಸಿ { ಕಾಮರ್ಸ್ ವಿಭಾಗ }

         ------------ ಎಚ್. ಶಫಾ ,   ಪ್ರಥ ಪಿ. ಯು. ಸಿ ,  ಕಾಮರ್ಸ್ ವಿಭಾಗ }

 ---------------- ಶ್ರೇಯಾ ಪ್ರಥಮ ಪಿ. ಯು. ಸಿ  ಕಾಮರ್ಸ್ 

                      ನಿಮಗೆ ಸ್ವಾಗತ

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ -- ಪ್ರಬಂಧ ಸ್ಪರ್ಧೆ -- ನಾನು ಮೆಚ್ಚಿದ ಪುಸ್ತಕ

               HIRIADKA SAMSKRUTHI SIRI TRUST { R }

               ಹಿರಿಯಡಕ ಸಂಸ್ಕೃತಿ ಸಿರಿ  ಟ್ರಸ್ಟ್

                       ಕನ್ನಡ ಪ್ರಬಂಧ ಸ್ಪರ್ಧೆ - " ನಾನು ಮೆಚ್ಚಿದ ಪುಸ್ತಕ "

    { ಹಿರಿಯಡಕ ಪದವಿ ಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳಿಗಾಗಿ }

     ಬಹುಮಾನ ವಿತರಣೆ   30- 10- 2018 ರಂದು

 ಪ್ರಥಮ ಬಹುಮಾನ -

  ---   ರಂಜಿತಾ  ಹತ್ತನೇ ತರಗತಿ ,  A  ವಿಭಾಗ

 ದ್ವಿತೀಯ ಬಹುಮಾನ

      -------- ದಿಶಾ ಹತ್ತನೇ ತರಗತಿ , B  ವಿಭಾಗ/ ಶ್ರೀರಕ್ಷಾ , ಹತ್ತನೇ ತರಗತಿ  A  ವಿಭಾಗ

    ತೃತೀಯ ಬಹುಮಾನ -

     ------ ದರ್ಶನ್  ,  ಹತ್ತನೇ ತರಗತಿ , / ಶರಣ್ಯ  ಒಂಬತ್ತನೇ ತರಗತಿ  ಬಿ ವಿಭಾಗ

Image may contain: 3 people, people on stage

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ -- ಕಿನ್ನರ ಮೇಳ ತುಮರಿ ಯ " ಹುಂ ಅಂದ , ಉಹೂಂ ಅಂದ

               HIRIADKA SAMSKRUTHI SIRI TRUST

                ಹಿರಿಯಡಕ ಸಂಸ್ಕೃತಿ ಸಿರಿ  ಟ್ರಸ್ಟ್ { ರಿ }

                        ಕಿನ್ನರ ಮೇಳ ತುಮರಿ ಅವರ ಮಕ್ಕಳ ನಾಟಕ

              ಹೂಂ ಅಂದ , ಉಹೂಂ ಅಂದ

                    ಜರ್ಮನ್ ನಾಟಕಕಾರ ಬ್ರೆಕ್ಟ್ ನ ನಾಟಕ

                    ಕನ್ನಡ  ರೂಪಾಂತರ - ವೈದೇಹಿ 

             ಸ್ಥಳ -  ಹಿರಿಯಡಕ ಪದವಿ ಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗ

                    30- 10- 2018 --- 2. 30 pm

                     ಪ್ರಾಯೋಜಕರು - ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್

                               ನಿಮಗೆ  ಸ್ವಾಗತ 

‘ಕನ್ನಡತಿ ಉತ್ಸವ’ ನೋಡಿ

‘ಕನ್ನಡತಿ ಉತ್ಸವ’ ನೋಡಿ | Prajavani: ಮಹಿಳೆಯರ ಸಂವೇದನೆಗಳಿಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿರುವ ಸಂಸ್ಥೆ ‘ಅವಳ ಹೆಜ್ಜೆ’. ಮಹಿಳೆಯರೇ ನಿರ್ಮಿಸಿ, ನಿರ್ದೇಶಿಸಿದ ಕಿರು ಚಿತ್ರಗಳ ಪ್ರದರ್ಶನದ ಜೊತೆಗೆ ಚರ್ಚಾಕೂಟವನ್ನೂ ಆಯೋಜಿಸಿದೆ. ನವೆಂಬರ್‌ 3ರಂದು ನಡೆಯುವ ಈ ಕಾರ್ಯಕ್ರಮದ ಹೆಸರು ‘ಕನ್ನಡತಿ ಉತ್ಸವ’.

Mangaluru Literary Fest on Nov 3

ಸುಧೀಂದ್ರ ಹಾಲ್ದೊಡ್ಡೇರಿ --- - ಸ್ಪಾಂಜುಗಳ ಸೂಕ್ಷ್ಮ ಹಂದರದ ತಾಕತ್ತು, ಮರುರೂಪಿಸುವ ಕಸರತ್ತು

Columns News: using sponge mechanism in engineering technology - ಸ್ಪಾಂಜುಗಳ ಸೂಕ್ಷ್ಮ ಹಂದರದ ತಾಕತ್ತು, ಮರುರೂಪಿಸುವ ಕಸರತ್ತು | Vijaya Karnataka: ತಮ್ಮಷ್ಟಕ್ಕೆ ತಾವೇ ಹಂದರಗಳನ್ನು ನಿರ್ಮಿಸಿಕೊಳ್ಳುವ ಸ್ಪಾಂಜಿನಂಥ ಜೀವಿಗಳ ಗುಣ-ವೈಶಿಷ್ಟ್ಯಗಳನ್ನು ಉತ್ಪಾದನಾ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಅಳವಡಿಸುವ ಬಗ್ಗೆ ವಿಜ್ಞಾನಿಗಳ ಚಿಂತಿಸುತ್ತಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ

Monday, October 29, 2018

ಅಮ್ಮಚ್ಚಿ ಎಂಬ ನೆನಪು-- ಕುಂದಾಪುರ ಕನ್ನಡದಲ್ಲಿ Ammachi Yemba Nenapu - Celeb Bytes | Raj B Shetty | Dr Vaidehi

ಅನ್ಯ ಭಾಷೆ ವಿಡಿಯೋಗಳಲ್ಲಿ ಕನ್ನಡ ಪ್ರಯೋಗ

ಕಾಲೇಜುಗಳಿಗೆ ‘ಶ್ರೀ ರಾಮಾಯಣ ದರ್ಶನಂ’

ಕಾಲೇಜುಗಳಿಗೆ ‘ಶ್ರೀ ರಾಮಾಯಣ ದರ್ಶನಂ’ | Prajavani: ರಾಷ್ಟ್ರಕವಿ ಕುವೆಂಪು ವಿರಚಿತ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಂದ 50 ವರ್ಷಗಳ ಸವಿನೆನಪಿಗಾಗಿ ಕಾಲೇಜುಗಳಲ್ಲಿ ‘ಶ್ರೀರಾಮಾಯಣ ದರ್ಶನಂ’–ಓದು ಅಭಿಯಾನ ಆರಂಭಗೊಂಡಿದೆ.

Sunday, October 28, 2018

ಎಚ್. ಡುಂಡಿರಾಜ್ - ಬೆಹರಿನ್‌ನಲ್ಲಿ ಕನ್ನಡ ಡಿಂಡಿಮ

ಜಿ. ಎನ್. ದೇವಿ - - ಕನ್ನಡವೆಂಬ ಜ್ಞಾನದ ಭಾಷೆ

‘ಕೋಟಿ’ವಿದ್ಯೆ ಇದ್ದರೆ ಕುಲಪತಿ

‘ಕೋಟಿ’ವಿದ್ಯೆ ಇದ್ದರೆ ಕುಲಪತಿ | Prajavani: ಘನತೆವೆತ್ತ ಕುಲಪತಿ ಹುದ್ದೆ ಅಲಂಕರಿಸಲು ಅಪಾರ ವಿದ್ವತ್ತು, ಆಡಳಿತ ನೈಪುಣ್ಯಗಳು ಅರ್ಹತೆಗಳಾಗಿದ್ದ ಕಾಲವೊಂದಿತ್ತು. ಈಗ ಅವು ಕೇವಲ ‘ಮಾನ’ ದಂಡಗಳಾಗಿದ್ದು, ಕುಲಪತಿ ಹುದ್ದೆಗಳು ಕೋಟಿ ಕೋಟಿ ರೂಪಾಯಿಗೆ ಬಿಕರಿಯಾಗುತ್ತಿವೆ.

ರೇಣುಕಾ ನಿಡಗುಂದಿ - ಒಂದು ಆತ್ಮಕತೆಯ ಕುರಿತು...

ರಾಜೀವ ತಾರಾನಾಥ್ - ಕಂಬಾರ ಅವರ ನಾಟಕ - ಮಹಮೂದ್ ಗಾವಾನ್ - ಒಂದು ನಾಟಕದ ಕುರಿತು...

Saturday, October 27, 2018

ಬರಗೂರು ರಾಮಚಂದ್ರಪ್ಪ - - ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಮಾಜಿಕ ಬದ್ಧತೆಯ ಪ್ರಶ್ನೆ

Columns News: creativity, cultural field and social responsibility - ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಮಾಜಿಕ ಬದ್ಧತೆಯ ಪ್ರಶ್ನೆ | Vijaya Karnataka: ಸಮಾನತೆ ಮತ್ತು ಸಹಿಷ್ಣುತೆಯ ಸಂವೇದನೆಯಿಲ್ಲದ ಪ್ರತಿಗಾಮಿ ಪಂಥ ನಮ್ಮ ಸಮಾಜಕ್ಕೆ ಬೇಡ

ಎರಡು ದಿನಗಳ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಚಾಲನೆ - 27-10-2018

ರಾಜೀವ ತಾರಾನಾಥ್ - ಕಂಬಾರ ಅವರ ಹೊಸ ನಾಟಕ - ಮಹಮೂದ್ ಗಾವಾನ್ - Another historical for Kannada - Mysore

Another historical for Kannada - Mysore - The Hindu: Chandrashekhar Kambar’s new historical play, Mahmoud Gawan, based on the life of the merchant who arrived in Bidar and later became the Prime Minister of the Bahmani Sultanate, will be released on Sunday


Another historical for Kannada

ಪಿಹೂ - Pihu | Official Trailer | Vinod Kapri | Ronnie Screwvala | Siddharth Roy...

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್

ಕಾವ್ಯಾ ಕಡಮೆ ನಾಗರಕಟ್ಟೆ ಅವರಿಗೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ -2018

Image may contain: Kavya Kadame Nagarakatte, smiling, text

ಡಾ . ದೇವಿ ಪ್ರಸಾದ್ ಶೆಟ್ಟಿ - ದುಬಾರಿ ವೈದ್ಯಕೀಯಶಿಕ್ಷಣ - Medical Education Has Become An Elitist Affair: Dr. Devi Shetty

Friday, October 26, 2018

ಕೇಸವ ಪ್ರಸಾದ್ . ಬಿ - - ಮೊದಲ ಸುತ್ತಿನ ಟ್ರೇಡ್‌ ವಾರ್‌ನಲ್ಲಿ ಅಮೆರಿಕ ವಿರುದ್ಧ ಚೀನಾದ ಮೇಲುಗೈ

ಬೆನ್ಯಾಮಿನ್ ರಿಗೆ ಜೆ ಸಿ ಬಿ ಪ್ರಶಸ್ತಿ JCB Prize for Literature: Indian writer Benyamin wins inaugural award - CNN

JCB Prize for Literature: Indian writer Benyamin wins inaugural award - CNN: India's most valuable literature prize has crowned south Indian writer Benyamin its inaugural winner for his novel "Jasmine Days," a story of a young women caught up in the Arab Spring protests of 2011.


"Jasmine Days," by Indian author Benyamin, won the inaugural JCB Prize for Literature.

ಎಮ್. ಆರ್. ಕಮಲ -- ನಿನ್ನ ಕಣ್ಣಂಚಿನಲಿ ನೂರಾರು ರಾಗಗಳು

ನಿನ್ನ ಕಣ್ಣಂಚಲ್ಲಿ ನೂರಾರು ರಾಗಗಳು 
ಕದ್ದಲೆಯುತ್ತಿದ್ದಾಗ ನಾನು ಬಂದೆ
`ಎಲ್ಲಿದ್ದಿತೋ ಬಾನು? ಎಲ್ಲಿದ್ದಿಯೋ ನೀನು?
ಈ ಹಾಡು ನಿನ್ನದೇ' -ನೀನು ಅಂದೆ
ಸಾವಿರದ ನೋವಲ್ಲಿ ಜೀವ ಜಂಜಾಟದಲ್ಲಿ
ನಾನು ಮತಿಗೆಟ್ಟಾಗ ನೀನು ಬಂದೆ
ಕಿಚ್ಚು ನಂಜಿನ ಹೊಳೆಯಿಂದೀಚೆ ತೆಗೆದು
ಈ ಕಾಡು ಬಿದಿರಿನ ಕೊಳಲು ನಿನ್ನದೆಂದೆ.
ತುಂಬಿ ಎದೆ ಬಿಗಿದಿದ್ದ ವೇದನೆಯ ಮೊಗ್ಗೊಂದು
ನಿನ್ನ ಹಿತಸ್ಪರ್ಶಕ್ಕೆ ಹೂವಾಯಿತು
ಹೂವಾಯಿತು ನನ್ನ ಕೊಳಲ ಹಾಡಾಯಿತು
ಹಾಡು ಬೃಂದಾವನದಲ್ಲಿ ತಾ ತಣಿಯಿತು
ಅರಳುತ್ತಿರಲಿ ಸಖೀ ನಿನ್ನ ಮುಖಭಾವದಲಿ
ಕವಿತೆ ಹಾಗೆ ಕೋಟಿ ವಿಕಸಿತ ಕಮಲ
ತಡೆದು ನಿಲ್ಲಿಸಲದು ಈ ಜಗದ ಪ್ರಳಯ ವಿಲಯ
ಮನದಲ್ಲಡಗಿದ ಕುರುಕ್ಷೇತ್ರದ ಹಾಲಾಹಲ
ನಾನು ಮೋಹನ ಮುರಳಿ, ನೀನು ರಾಧಾಲೋಲೆ
ಕಳೆಯಲಿ ಹೀಗೆ ಶಿಶಿರ ಗ್ರೀಷ್ಮ ವರ್ಷ
ನಾನು ನುಡಿಸುವೆ ನಿನ್ನ, ನೀನೆ ಅಲ್ಲವೇ ಉಸಿರು
ಎಂಥ ಸೋಜಿಗದ್ದೀ ಜೀವದಾಕರ್ಷ!

: ಅಂಜಲಿ ರಾಮಣ್ಣ -- ಸ್ಮಶಾನ ವೈರಾಗ್ಯದ ಗುಂಗು ಬಿಡಿಸಿದ 'ಅನಸೂಯಾ'

ಬಂಧಿತರಿಗೆ ‘ಪುಸ್ತಕದ ಮದ್ದು’

Thursday, October 25, 2018

ಮೂರು ಮಕ್ಕಳನ್ನು ಹೊಂದಿದರೆ ಪಂಚಾಯತ್ ಸ್ಪರ್ಧೆಗೆ ಅನರ್ಹ: ಸುಪ್ರೀಂ

ಮೂರು ಮಕ್ಕಳನ್ನು ಹೊಂದಿದರೆ ಪಂಚಾಯತ್ ಸ್ಪರ್ಧೆಗೆ ಅನರ್ಹ: ಸುಪ್ರೀಂ | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ, ಅ. 25: ಮೂರನೇ ಮಗುವನ್ನು ಹೊಂದಿದ ವ್ಯಕ್ತಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗುತ್ತಾನೆ. ಅಂಥ ವ್ಯಕ್ತಿಗಳು ಪಂಚಾಯತ್ ಸದಸ್ಯ ಅಥವಾ ಸರಪಂಚ ಹುದ್ದೆಗೆ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎರಡು ಮಕ್ಕಳ ನೀತಿಗೆ ಬದ್ಧವಾಗುವ ಸಲುವಾಗಿ ಮೂರನೇ ಮಗುವನ್ನು ದತ್ತು ನೀಡಿ ಪಂಚಾಯತ್ ಸರಪಂಚ ಹುದ್ದೆ ಉಳಿಸಿಕೊಳ್ಳುವ ಸುಪ್ರೀಂಕೋರ್ಟ್ ಕಟ್ಟೆ ಏರಿದ ಒಡಿಶಾದ ಬುಡಕಟ್ಟು ಜನಾಂಗದ ಸರಪಂಚರೊಬ್ಬರ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಕೆ.ಎಂ.ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ಎಲ್.ಎಸ್. ಶೇಷಗಿರಿ ರಾವ್ - ಬದುಕು ಬರಹ - L. S. Sheshagiri Rao Life and works

ಪ್ರಸನ್ನ -- ನಾಥೂರಾಮ ಗೋಡ್ಸೆಯ ವಿಚಿತ್ರ ದ್ವಂದ್ವ...

ನಾಥೂರಾಮ ಗೋಡ್ಸೆಯ ವಿಚಿತ್ರ ದ್ವಂದ್ವ... | Prajavani: ಜಿನ್ನಾ ಮಾಡಿದ ಅವಾಂತರದ ನಿಜವಾದ ಫಲಾನುಭವಿಗಳು ಭಾರತೀಯ ಮುಸಲ್ಮಾನರು

Monday, October 22, 2018

ಕೊಂಕಣಿ ಲೇಖಕ ವೆಲುಸ್ಕರ್ ನಿಧನ - Konkani writer & poet Ramesh Bhagwant Veluskar passes away | Goa News

Konkani writer & poet Ramesh Bhagwant Veluskar passes away | Goa News - Times of India: PANAJI: Sahitya Akademi award-winning Konkani poet and writer Ramesh Bhagwant Veluskar passed away on Sunday following a brief illness while on a visi.

ಸುರೇಶ್ ಮರಿನಾಪುರ - {ಮಸುಮ } -ಲೇಖಕ ಸುರೇಶ್ ಮಣಿಲಾಪುರ ಸಂದರ್ಶನ

ಸುರೇಶ್ ಮರಿನಾಪುರ { ಮಸುಮ } - ನನ್ನ ಹಬಾಶಿಕಾ ನಾಟಕದ ಹಿನ್ನೆಲೆ,

ಪ್ರಮೋದ್ ಕುಮಾರ್ . ಕೆ. ಜಿ - Pramod Kumar. K. G - Time to hew a new antiquities law

Time to hew a new antiquities law - OPINION - The Hindu: Cultural vigilantism threatens to cast a long shadow on the production of knowledge of the past

ಮೇರಿ ಜೋಸೆಫ್ -: ಇತರರ 'ಪಾಪದ' ಮೂಟೆ ಹೊರುವ 'ಹೂಗಳು'

Sunday, October 21, 2018

ಜಿ . ಡಿ .ಅಗರ್ವಾಲ್ - Ganga : The 40 year long battle of GD Agarwal | Dhruv Rathee

ಡಿ. ಉಮಾಪತಿ - ತಾಯಿ ‘ಗಂಗೆ ಒಡಲಿಗೆ ಬಿದ್ದ ಬೆಂಕಿ’

ತಾಯಿ ‘ಗಂಗೆ ಒಡಲಿಗೆ ಬಿದ್ದ ಬೆಂಕಿ’ | Prajavani: ಮಾಲಿನ್ಯ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಬಳಲಿ ಏದುಸಿರು ಬಿಡುತ್ತಿರುವ ಜೀವ ಗಂಗೆಗಾಗಿ ಸ್ವಾಮಿ ಜ್ಞಾನಸ್ವರೂಪ ಸಾನಂದರು ನೂರಕ್ಕೂ ಹೆಚ್ಚು ದಿನ ಉಪವಾಸ ಸತ್ಯಾಗ್ರಹದ ನಂತರ ನಿಧನ ಹೊಂದಿದರು.

ರಾಜೀವ್ ತಾರಾನಾಥ್ ನೆನಪಿನ ಮೂಸೆಯಿಂದ ಮೂಡಿದ ಅನ್ನಪೂರ್ಣ ದೇವಿ ಚಿತ್ರ

ರೋಹಿತ್ ಸುಭಾಷ್ ಅವತಿ -- ಕೆಲವು ಕವಿತೆಗಳು


June 26


ಜಿಜ್ಞಾಸೆ
ಇತ್ತು ನನ್ನಲ್ಲಿ,
ಆ ಬಯಲ ನುಂಗುವಾಸೆ
ಕೇಳಿದೆ-ತುಸು ನೀರ, 
ಸಿಗಲಿಲ್ಲ
ಹುಡುಕಲು ಹೊರಟೆ—ಅಮೃತವೇ ಇತ್ತು
ಧುಮುಕಿದೆ ಅದರೊಳಗೆ, 
ಮುಳುಗಿ ಸತ್ತೆ
ಇನ್ನೂ ಇದೆ, ಬಯಲಲ್ಲಿ ಬಯಲಾಗುವಾಸೆ.
ಮತ್ತೆ ಬರುವೆ ಅದಕಾಗಿ.
* * *
ಕಾಕು
ಬಿಸಿಲ ದೃಷ್ಟಿ ನೆಟ್ಟಿದೆ ಆ
ದಿಟ್ಟ ಹೆಂಗಸ ಮೆಟ್ಟಿಗೆ
ನಡೆಯುತ್ತಿದ್ದಾಳೆ ಘಿರಣಿ ಮುಂದಿನ
ಹಾದಿಯಲಿ,
ಮಲಗಿರುವ ಬೀದಿನಾಯಿಗಳ ದಾಟಿ 
ಹರಿದ ಚುಕ್ಕೆ ಸೀರೆಯ 
ಸೆರಗಿಂದ ತಲೆಮುಚ್ಚಿ
ಧಾವಿಸುತ್ತಿದ್ದಾಳೆ-
ಎನೋ ಯೋಚಿಸುತ್ತಾ...
ನನಗನ್ನ ಉಣಿಸಿದ ಆ ಕೈಗಳೀಗ
ಬೆವತಿವೆ-
ಬಿಸಿಲ ತಾಪದಿಂದ 
ಅಲ್ಲ,
ಬದುಕಿನ ಬಿಸಿಲಿಂದ.
* * *
ಕನಸಿನಲ್ಲಿ
ನೀ 
ಹರಿದ ನರಗಳ ಸಿಕ್ಕಾ ಕಂಡು
ಗುಮಾಣಿಸಿದೆ ಬೂದಿಯಾದೀ ಸುಟ್ಟ ಕಂಣ್ಗಳನು
ಪಂಕಾಗಾಳಿಗೆ ಮೈಗೊಟ್ಟು ಬಿದ್ದೆ ನಾ ನಿದ್ದೆಗೆ
ಕಡುಹುಡುಗಿ ಇದ್ದೆ ನೀ ಅಲ್ಲೂ....
—ನೆತ್ತರ ನೆನಪಿಸಲು.
* * *
—ಅವಳಿಗಾಗಿ
ಆ ಹೆಣ್ಣುಜೀವದ ಹಸಿವಿಗೆ—
ಹೊರಚಿಮ್ಮಿದೀ ನನ್ನ ಬಿಸಿನೆತ್ತರ ಆರುವ ಮೊದಲೇ
ಅದರೊಡಲೊಳಿಂದ ಹುಟ್ಟಿತೊಂದು ನಗುಮೊಗದ ನೆತ್ತರುಂಡೆ.
ಆ ಹಾಲುಮೈಯ ಕೆನೆನೆಕ್ಕಿದವ ‘ ನಸೀಬವಾನ ’
—ಎಂದು ಬಡಬಡಿಸುವೀ ಹುಚ್ಚನ ಪಾಲಿಗೆ
ಕಳ್ಳೀಹಾಲು ದಕ್ಕಿತೆಂದು ಕುಡಿದರೆ,
ಜಲ್ದಿ ಅಪ್ಪಿಕೊಳ್ಳಲೊಲ್ಲದೇಕೀ ಸಾವು ?
* * *
— ರೋಹಿತ್ ಸುಭಾಷ್ ಅವಟಿ.
( ಇತ್ತೀಚಿಗೆ ಬರೆದವುಗಳು )

ಕ್ಯಾಪ್ಟನ್ / ಡಾ/ ಹೇಮಚಂದ್ರ ಹೊಳ್ಳ -- -ಪುತ್ತೂರಿನಲ್ಲಿ ಗಾಂಧೀಜಿ ಮತ್ತು ಲಡಾಕ್ ನೆನಪುಗಳು

ಡಾ / ಗುರುರಾಜ ರಾವ್ , ಸುರತ್ಕಲ್ --ವೈದ್ಯಕೀಯ ವೃತ್ತಿಯಲ್ಲಿ ಹಾಸ್ಯ -

Dr. K. S. Karanth -ವೈದ್ಯಕೀಯ ವೃತ್ತಿಯಲ್ಲಿ ಹಾಸ್ಯ

ರಹಮತ್ ತರೀಕೆರೆ --- ರಾಜೀವ ತಾರಾನಾಥರೊಡನೆ ಒಂದು ದಿನ

ರಾಜೀವ ತಾರಾನಾಥರೊಡನೆ ಒಂದು ದಿನ
ಸೂಫಿಗಳ ಮೇಲೆ ಅಧ್ಯಯನ ಮಾಡಿದ್ದ ನಾನು, ಪ್ರಸಿದ್ಧ ಸರೋದ್‍ವಾದಕರಾದ ಪಂಡಿತ್ ರಾಜೀವ ತಾರಾನಾಥರನ್ನು ಭೇಟಿ ಮಾಡುವುದಕ್ಕೆ ಹಲವು ದಿನಗಳಿಂದ ಹಂಬಲಿಸಿದ್ದೆ. ಕಾರಣ, ಸೂಫಿಸಂ ಭಾಗವೇ ಆಗಿರುವ ಸಂಗೀತ, ಧರ್ಮಾತೀತ ಪ್ರಜ್ಞೆ ಹಾಗೂ ವೈಚಾರಿಕತೆಗಳು ಸಂಗಮಿಸಿದ ಪರಂಪರೆಯೊಂದರ ಕುಡಿ ಅವರು. ಈಗಿನ ಭಾರತದ ಸನ್ನಿವೇಶದಲ್ಲಿ ಅವರು ಈ ಪರಂಪರೆಯ ಕೊನೆಯ ಕೊಂಡಿಗಳಲ್ಲಿ ಒಂದೆಂದು ತೋರುವರು. ಈ ವಿಶಿಷ್ಟ ಪರಂಪರೆಯು ಎರಡು ಭೂಮಿಕೆಗಳಲ್ಲಿ ಬೇರು ತಳೆದಿದೆ. ಮೊದಲನೆಯ ಭೂಮಿಕೆ- ತಂದೆ ಪಂಡಿತ ತಾರಾನಾಥರದು. ತಾರಾನಾಥರು ನಿಷ್ಠುರ ವೈಚಾರಿಕರೂ ವೈದ್ಯರೂ ಸಂಗೀತ ಗುರುವೂ ಮಾನವತಾವಾದಿಯೂ ಯೋಗಿಯೂ ರಾಜಕೀಯ ಚಳುವಳಿಗಾರರೂ ಆಗಿದ್ದವರು; ರಾಯಚೂರಿನಲ್ಲಿ ಹಮದರ್ದ್ ಮದರಸಾ ಎಂಬ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು. ಹೈದರಾಬಾದ್ ನಿಜಾಮನ ನಿರಂಕುಶ ಪ್ರಭುತ್ವದ ಬಂಡೆದ್ದು, ಆತನನ್ನು ಜನರಲ್ ಡಯರ್‍ಗೆ ಹೋಲಿಸಿ ಲೇಖನ ಬರೆದು ಗಡಿಪಾರು ಮಾಡಲ್ಪಟ್ಟ ಬಳಿಕ, ಆಗಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ತುಂಗಭದ್ರಾ ಎಂಬ ಜಾಗದಲ್ಲಿ ‘ಪ್ರೇಮಾಯತನ’ ಆಶ್ರಮ ಕಟ್ಟಿಕೊಂಡು ನೆಲೆನಿಂತವರು; ಈ ‘ಪ್ರೇಮಾಯತನ’ವು ಗಾಂಧಿಯವರ ಸಬರಮತಿಯ ಹಾಗೆ ಭಾರತದಲ್ಲೇ ವಿಶಿಷ್ಟ ಆಶ್ರಮ. ತಾರಾನಾಥರು ಸೂಫಿಗಳ ಇಷ್ಕ್ (ಪ್ರೇಮ) ಪರಿಕಲ್ಪನೆಯನ್ನು ನೆನಪಿಸುವಂತೆ ‘ಪ್ರೇಮ’ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು; ಮಂಗಯ್ಯ ಎಂಬ ಯೋಗಿಯ ಶಿಷ್ಯರಾಗಿದ್ದ ಅವರು, ಪ್ರಸಿದ್ಧ ಯೋಗಿನಿ ಅದೋನಿ ಲಕ್ಷ್ಮಮ್ಮನವರ ಸಹವರ್ತಿಯಾಗಿದ್ದವರು. ಎರಡನೇ ಭೂಮಿಕೆಯು, ಸೂಫಿತತ್ವದ ಭಾಗವಾಗಿರುವ ಸಂಗೀತಲೋಕಕ್ಕೆ ಸೇರಿದ ಬಾಬಾ ಅಲ್ಲಾವುದ್ದೀನ್, ಅವರ ಮಕ್ಕಳೂ ಶಿಷ್ಯರೂ ಆದ ಅಲಿಅಕ್ಬರ್‍ಖಾನ್ ಹಾಗೂ ಅನ್ನಪೂರ್ಣಾದೇವಿ, ಗುರುಪುತ್ರಿಯನ್ನೇ ಲಗ್ನವಾದ ಪಂಡಿತ್ ರವಿಶಂಕರ್ ಮುಂತಾದ ಗುರುಗಳಲ್ಲಿದೆ. ಧರ್ಮ ಜಾತಿ ಭಾಷೆ ಪ್ರದೇಶಗಳ ಎಲ್ಲೆದಾಟಿ ಸಂಗೀತವನ್ನೇ ಒಂದು ಧರ್ಮದಂತೆ ಬಾಳಿದ ಈ ಗುರು ಗರಡಿಯಲ್ಲಿ ಪಳಗಿದ ರಾಜೀವ್, ಈ ಪರಂಪರೆಯ ಅತ್ಯುತ್ತಮ ಗುಣಗಳನ್ನು ಬಾಳುತ್ತಿರುವರು.
ರಾಜೀವರ ಮುಂಗೋಪ (ಮೈಕ್ ತೊಂದರೆ ಕೊಟ್ಟದ್ದಕ್ಕಾಗಿ ಭಾಷಣ ನಿಲ್ಲಿಸಿ ಸಭ್ಯಾತ್ಯಾಗ ಮಾಡುವುದು ಇತ್ಯಾದಿ) ಹಾಗೂ ನಿಷ್ಠುರ ನುಡಿಯ ಬಗ್ಗೆ ದಂತಕತೆಗಳನ್ನು ಕೇಳಿದ್ದ ನಾನು, ನೇರವಾಗಿ ಕಾಣಲು ಹಿಂಜರಿದುಕೊಂಡಿದ್ದೆ. ಅವರ ಶಿಷ್ಯರಾದ ಶೈಲಜಾ ವೇಣುಗೋಪಾಲ್ ಹಾಗೂ ಸರ್ವಮಂಗಳಾ ಮುಂತಾದವರ ಮೂಲಕ ಭೇಟಿಗೆ ಯತ್ನಿಸುತ್ತಲೂ ಇದ್ದೆ. ಹೀಗಿರುತ್ತ ಒಂದು ಸಂಜೆ, ಸ್ವತಃ ಅವರಿಂದಲೇ ಅನಿರೀಕ್ಷಿತ ಕರೆ ಬಂತು. ನನಗದು ಉತ್ಕಂಠಿತ ಗಳಿಗೆ. ಸೂಫಿಗಳ ಮೇಲೆ ನನ್ನ ಪುಸ್ತಕವನ್ನು ಹಿಂದೆ ಓದಿದ್ದ ಅವರು ಆಗಷ್ಟೆ ‘ಧರ್ಮಪರೀಕ್ಷೆ’ ಪುಸ್ತಕ ಓದಿದ್ದರು. ‘ಬಹಳ ಚೆನ್ನಾಗಿದೆ. ಸಂತೋಷವಾಗಿದೆ. ಮನೆಗೆ ಬನ್ನಿ. ಮುಂದಿನ ತಿಂಗಳು ಅಮೇರಿಕಾಕ್ಕೆ ಹೋಗ್ತೀನಿ. ಅಷ್ಟರೊಳಗೇ ಬರಬೇಕು’ ಎಂದರು. ‘ಬರಲುಗೊಂಡ ಗಿಡಕೆ ತೊರೆ ಬಂದು ಹೊಯ್ದ’ಂತಾಯಿತು. ಕೂಡಲೇ ಹೊರಟು, ಗೆಳೆಯರಾದ ವಿ.ಎಸ್.ಶ್ರೀಧರ್ ಅವರ ಜತೆ ಹೋಗಿ ಒಂದು ಹಗಲು ಮತ್ತು ರಾತ್ರಿ ಅವರ ಜತೆ ಕಳೆದೆ. ಅವರು ಲಹರಿಯಲ್ಲಿ ಹರಿಸುವ ವಾಗ್ವಿಲಾಸ ಕೇಳಲು, ಹಲವು ವಿಷಯಗಳನ್ನು ಚರ್ಚಿಸಲು, ಬೆಳಗುಜಾವ ಅವರು ಮಾಡುವ ಸರೋದ್ ರಿಯಾಜ್ ಆಲಿಸಲು ಸಾಧ್ಯವಾಯಿತು. ನನ್ನ ಬಾಳುವೆಯಲ್ಲಿ ಅದೊಂದು ಅಪೂರ್ವ ದಿನ.
ಮೈಸೂರಿನ ಸರಸ್ವತಿಪುರಂನಲ್ಲಿರುವ ಮನೆಗೆ ಹೋದಾಗ ಗುಹೆಮುಂದೆ ವಿಶ್ರಮಿಸಿಕೊಳ್ಳುತ್ತಿರುವ ಹುಲಿಯಂತೆ ಆಜಾನುಬಾಹು ರಾಜೀವ್ ಹಾಲಿನಲ್ಲಿ ಪತ್ರಿಕೆ ಓದುತ್ತ ಕುಳಿತಿದ್ದರು. ತುಸು ದೂರದಲ್ಲಿ ಅವರ ಬಲಿಷ್ಠ ನಾಯಿಯೂ ಪವಡಿಸಿತ್ತು. ನಮ್ಮನ್ನು ಅಕ್ಕರೆಯಿಂದ ಬರಮಾಡಿಕೊಂಡ ಅವರು ಅಡುಗೆ ಕೋಣೆಯತ್ತ ಕತ್ತುಹೊರಳಿಸಿ ಅಡಿಗೆಯಮ್ಮನಿಗೆ “ನೋಡಮ್ಮಾ ಮಂದಿ ಬಂದಿದ್ದಾರೆ. ಮೊದಲು ಟೀಕೊಡು’’ ಎಂದರು. ಎದುರು ಗೋಡೆಯ ಮೇಲೆ ಪಂಡಿತ ತಾರಾನಾಥರ ಫೋಟೊ ಇತ್ತು. ಚಹಾಪಾನ ಮಾಡುತ್ತ, ತಾರಾನಾಥರ ಬಗೆಗಿನ ನೆನಪುಗಳನ್ನು ಮೆಲ್ಲಗೆ ಕೆದಕಿದೆ. 70 ವರ್ಷಗಳಷ್ಟು ಹಿಂದಕ್ಕೆ ಜಾರಿ ನಿಧಾನವಾಗಿ ತಮ್ಮನ್ನು ಬಿಚ್ಚಿಕೊಂಡು ರಾಜೀವ್ ಮಾತಾಡತೊಡಗಿದರು.

ಎಚ್. ಡುಂಡಿರಾಜ್ -- ಆಕಳಿಕೆ ಎಂಬ (ಅ)ಭಾವಗೀತೆ

ಆಕಳಿಕೆ ಎಂಬ (ಅ)ಭಾವಗೀತೆ – ವಿಜಯವಾಣಿ: | ಎಚ್.ಡುಂಡಿರಾಜ್ ಈ ಲೇಖನ ನಿಮಗೆ ಇಷ್ಟವಾದರೆ ಒಂದು ಇ-ಮೈಲ್ ಕಳಿಸಿ ಇಷ್ಟವಾಗದಿದ್ದರೆ ಆಕಳಿಸಿ! ಹೌದು. ನನ್ನ ಭಾಷಣ ಅಥವಾ ಕವನ ವಾಚನವನ್ನು ಕೇಳಿ ನೀವು ಆಕಳಿಸಿದರೆ ನನಗೆ ಖಂಡಿತ ಬೇಸರವಾಗುತ್ತದೆ. ಆದರೆ ಈ ಲೇಖನವನ್ನು ಓದಿ ಆಕಳಿಸಿದರೆ ಬೇಸರವಾಗುವುದಿಲ್ಲ. ಏಕೆಂದರೆ ನೀವು ಓದುತ್ತಿರುವ ಲೇಖನದ ವಿಷಯವೇ ಆಕಳಿಕೆ. ‘ನಿಮ್ಮ ಲೇಖನಕ್ಕೆ ಉಪಚುನಾವಣೆ,

ಡಾ| ಅಮೃತ ಸೋಮೇಶ್ವರರ ಅಮೃತ ಸಿಂಚನ (Ambrosia Sprinkling of Da| Amrutha Somesh...

Saturday, October 20, 2018

: ಮುರಳೀಧರ ಉಪಾಧ್ಯ ಹಿರಿಯಡಕ - ಅಮೃತ ಸೋಮೇಶ್ವರ ಅವರೊಂದಿಗೆ ಒಂದು ಸಂವಾದ...

tulu literature: ಮುರಳೀಧರ ಉಪಾಧ್ಯ ಹಿರಿಯಡಕ - ಅಮೃತ ಸೋಮೇಶ್ವರ ಅವರೊಂದಿಗೆ ಒ...: Amrith Someshwar in Conversation with Muraleedhara Upadhya Hiriadka Muraleedhara Upadhya    : Pl...

ಎಸ್. ಆರ್. ವಿಜಯಶಂಕರ - - ತ್ರಿಭಾಷಾ ಕವಿ ಅಮೃತರಿಗೆ ಭಾಷಾ ಸಮ್ಮಾನ

Columns News: amrutha someshwara gets bharatiya bhasha samman - ತ್ರಿಭಾಷಾ ಕವಿ ಅಮೃತರಿಗೆ ಭಾಷಾ ಸಮ್ಮಾನ | Vijaya Karnataka: ಕಾಸರಗೋಡಿನಿಂದ ಕುಂದಾಪುರದ ವರೆಗೆ ಕರಾವಳಿ ಹಾಗೂ ಒಳನಾಡುಗಳ ವಿದ್ವತ್‌ ವಲಯಗಳಲ್ಲಿ ಜಾತಿ, ಧರ್ಮ, ಪ್ರದೇಶಗಳ ಭೇದ ಭಾವಗಳಿಲ್ಲದೆ ಹಿರಿಕಿರಿಯರೆಲ್ಲರ ಗೌರವಕ್ಕೆ ಪಾತ್ರರಾದವರು ಅಮೃತ ಸೋಮೇಶ್ವರ ಅವರು.



amrutha someshwara gets bharatiya bhasha samman

ಶಿವರಂಜನ್ ಸತ್ಯಂಪೇಟೆ - ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ: ಸಾಮಾನ್ಯವಾಗಿ ಮಠ, ಪೀಠಗಳಿಗೆ ಗುರು-ಜಗದ್ಗುರುಗಳು ಇರುವುದನ್ನು ನಾವಿಂದು ಕಾಣಬಹುದು.

ಡಾ / ತೋಂಟದ ಸಿದ್ದಲಿಂಗ ಮಹಾಸ್ವಾಮಿ - Aashirvachana by SMNPJ Dr. Tontada Siddaling Mahaswamiji, Gadag...

ಆದಿ ಕವಿ ಪಂಪ ವಿಚಾರ ಸಂಕಿರಣ -- 23-10-2018

No automatic alt text available.

ಶ್ರೀವಿದ್ಯಾ ಶಿವಕುಮಾರ್ - Writing Revolt: Breaking barriers one Word at a Time | Srividya Sivakuma...

ಶಬರಿಮಲೆ --- EDITORIAL | Rule of law at stake in Sabarimala | Deccan Herald

EDITORIAL | Rule of law at stake in Sabarimala | Deccan Herald: It’s the latest hunting ground for BJP, having realised the political possibilities

Hindu devotees wait inside the premises of the Sabarimala temple in Pathanamthitta district, Kerala. REUTERS

Friday, October 19, 2018

ರತ್ನಗಿರಿಯಲ್ಲಿ ಪ್ರಚೀನ ಶಿಲಾ ಚಿತ್ರಗಳು - The petroglyphs of Ratnagiri

The petroglyphs of Ratnagiri - OPINION - The Hindu: The recent discovery of 1,000 rock carvings on Maharashtra’s Konkan coast is expected to provide new insights into the early history of the region. Jayant Sriram reports on the archaeological significance of these petroglyphs, which are estimated to be 12,000 years old




“The discovery of the petroglyphs fill a huge gap in the history of the Konkan region.” (Clockwise from top): A large engraving of an elephant in Ukshi village in north Ratnagiri, where a circular viewing gallery has been constructed, along with an inscription that explains the art work’s significance; and an eight ft-long petroglyph in Devache Gothane village in Rajapur district, Maharashtra.Prashant Nakwe

ಸಿ. ಪಿ. ರವಿಕುಮಾರ್ - - ಡಿಜಿಟಲ್‌ ಯುಗದಲ್ಲಿ ಅಪಮಾಹಿತಿಯ ಅಪಾಯಗಳು

Columns News: dangers of fake news in digital age - ಡಿಜಿಟಲ್‌ ಯುಗದಲ್ಲಿ ಅಪಮಾಹಿತಿಯ ಅಪಾಯಗಳು | Vijaya Karnataka: ಸಮಾಜವನ್ನು ಅಸ್ಥಿರಗೊಳಿಸುವ ಅಪಮಾಹಿತಿ ದಾಳಿಗಳ ಕುರಿತು ನಾವು ಜಾಗರೂಕರಾಗುವುದಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ಎಚ್ಚರಿಸಬೇಕು

ದೇವನೂರು ಮಹಾದೇವ -- ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌...

ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌... | Prajavani: ಕನ್ನಡದ ಮೊದಲ ಕಾದಂಬರಿ ‘ಇಂದಿರಾ ಬಾಯಿ’ಗೆ ನೂರು ವರ್ಷ ತುಂಬಿದ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ‘ಮಲೆಗಳಲ್ಲಿ ಮದುಮಗಳು’ ಶತಮಾನದ ಕಾದಂಬರಿ ಎಂದೆ. ಈ ಅನ್ನಿಸಿಕೆ ಕನ್ನಡಕ್ಕೆ ಮಾತ್ರ ಅಲ್ಲ ಭಾರತದ ವ್ಯಾಪ್ತಿಗೂ ಈಗಲೂ ನಿಜ ಅನ್ನಿಸುತ್ತಿದೆ.


Deccan Herald

ಕಂನಾಡ ಸಾಹಿತ್ಯಜ್ಞ ರ ಆತ್ಮಕಥನ - {1946 }

Image may contain: text
Image may contain: text

ಮೈಸೂರಲ್ಲಿ ಜಂಬೂಸವಾರಿ ವೈಭವ | ಸ್ತಬ್ಧ ಚಿತ್ರಗಳ ಅನಾವರಣ | ಟ್ಯಾಬ್ಲೋಗಳನ್ನು ಕಣ್ತುಂ...

ದಸರಾ ಕವಿಗೋಷ್ಠಿ: ಸಾಮಾಜಿಕ ಸಮಸ್ಯೆಗೆ ಒರೆಹಚ್ಚಿದ ಚಿಗುರು ಕವಿಗಳು

Thursday, October 18, 2018

ಹಿಂದೀ ,ತಮಿಳು , ಮಲಯಾಳಮ್ , ಮರಾಠಿ , ಗುಜರಾತಿ--- 5 Indian langu| literature | KDP | Kindle Direct Publishing | Amazon | Indian language | fiction

5 Indian languages added to Kindle Direct Publishing | Books | e-books | literature | KDP | Kindle Direct Publishing | Amazon | Indian language | fiction | non-fiction | Onmanorama | novel: KDP is a free service that allows authors to get fast-market, keep control of their books' rights and set their own prices for their e-books.. Books. e-books. literature. KDP. Kindle Direct Publishing. Amazon. Indian language. fiction. non-fiction. Onmanorama. novel.

ಸುನಿಲ್ ಧರ್ಮಸ್ಥಳ - ಪುರುಷೋತ್ತಮನ ಪುನರ್ಮಿಲನ -ಒಂದು ಮನ ಮಿಡಿವ ಸತ್ಯ ಕತೆ

ಇದು ಸುಮಾರು ಮೂರು ವರ್ಷಗಳ ಹಿಂದಿನ ಕಥೆ.. ಒಬ್ಬ ಪತ್ರಕರ್ತನಾಗಿ ಹಲವಾರು ನ್ಯೂಸ್‌ಗಳನ್ನು ಕವರ್ ಮಾಡಿದ್ದೀನಿ. ಅದರಲ್ಲಿ ಕೆಲವೊಂದು ಬಹುತೇಕ ಒಂದು ನ್ಯೂಸ್ ಮಾತ್ರ. ಇನ್ನೂ ಕೆಲವು, ಕೇವಲ ನ್ಯೂಸ್ ಮಾತ್ರ ಅಲ್ಲದೆ ಅದರಾಚೆಗೆ ಹಲವರಿಗೆ ನೆರವಾಗಿದೆ. ಇದರಲ್ಲೂ ಎರಡು ರೀತಿಯದ್ದು ಇರತ್ತೆ. ಮೊದಲನೆಯದ್ದು ನ್ಯೂಸ್ ಟಿವಿಯಲ್ಲಿ ಬಂದ ಬಳಿಕ ಅದರಿಂದ ಕೆಲವರಿಗೆ ನೆರವಾಗುತ್ತೆ. ಎರಡನೆಯದ್ದು ನಾವು ಮಾಡಿರುವ ನೆರವು ನ್ಯೂಸ್ ಆಗೋದು. ನಾನಿಲ್ಲಿ ಹೇಳೋಕೆ ಹೊರಟಿರೋದು ಎರಡನೆಯ ವಿಚಾರ. ಇದು ನನ್ನ 11 ವರ್ಷಗಳ ವೃತ್ತಿ ಜೀವನದಲ್ಲಿ ತುಂಬಾನೇ ತೃಪ್ತಿ ತಂದು ಕೊಟ್ಟ ವಿಚಾರಗಳಲ್ಲಿ ಒಂದು.
2015ರಲ್ಲಿ ನಾನು ಟಿವಿ ನೈನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಕ್ರೈಂ ರಿಪೋರ್ಟರ್ ಆಗಿ. ನನ್ನ ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ. ಆಗೊಮ್ಮೆ ಈಗೊಮ್ಮೆ ರಜೆ ಸಿಕ್ಕಾಗ ಊರಿಗೆ ಹೋಗಿ ಒಂದರೆಡು ದಿನ ಮನೆಯಲ್ಲಿ ಇದ್ದು ಬರ್ತಿದ್ದೆ. ಊರಿಗೆ ಹೋದಾಗೆಲ್ಲ ಸ್ನೇಹಿತರನ್ನು ಭೇಟಿಯಾಗುವುದು ವಾಡಿಕೆ. ಹೀಗೆ ನಾನು ಭೇಟಿಯಾಗುವ ಗೆಳೆಯರಲ್ಲಿ ಮುಂಡಾಜೆಯ ಅಜೀಜ್ ಸಹ ಒಬ್ಬರು. ಆಗಾಗ ಫೋನ್ ಮಾಡ್ತಾ ಇರ್ತಾರೆ. ಅದೊಂದು ದಿನ ನಾನು ಬೆಂಗಳೂರಿನಲ್ಲಿದ್ದಾಗಲೇ ಅಜೀಜ್ ನನಗೆ ಫೋನ್ ಮಾಡಿದ್ರು. ಕ್ಯಾಸುವಲ್ ಟಾಕ್ ಮಧ್ಯೆ ತಮ್ಮೂರಿನ ವ್ಯಕ್ತಿಯೊಬ್ಬನ ಬಗ್ಗೆ ವಿಚಾರ ಪ್ರಸ್ತಾಪಿಸಿದ್ರು.
ಆತನ ಹೆಸರು ಪುರುಷೋತ್ತಮ್.. ವಯಸ್ಸು ಸುಮಾರು 40 ಇರಬಹುದು. ಕಳೆದ ಎರಡು ವರ್ಷಗಳಿಂದ ಮುಂಡಾಜೆಯ ಸಂಗಮ್ ಅನ್ನೋ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದಾನೆ. ಒರಿಯಾ ಭಾಷೆ ಬಿಟ್ರೆ ಅಲ್ಪಸ್ವಲ್ಪ ತೆಲುಗು ಬರುತ್ತೆ. ಮಾನಸಿಕವಾಗಿ ಅಷ್ಟೇನೂ ಗಟ್ಟಿಯಾಗಿಲ್ಲ. 2013ರಲ್ಲಿ ಈತ ಯಾವುದೋ ಊರಿಂದ ಲಾರಿ ಹತ್ತಿ ಕೊನೆಗೆ ಮುಂಡಾಜೆಯಲ್ಲಿ ಇಳ್ಕೊಂಡಿದ್ದ. ಕತ್ತರಿ ಕಾಣದ ಕೂದಲು.. ಗಡ್ಡದಿಂದ ಆವೃತವಾದ ಮುಖದಲ್ಲಿ ಕಣ್ಣು, ಮೂಗು ಬಿಟ್ರೆ ಇನ್ನೇನು ಕಾಣಿಸ್ತಿರ್ಲಿಲ್ಲ. ಮುಂಡಾಜೆಯ ಸಂಗಮ್ ಹೋಟೆಲ್ ಮುಂಭಾಗದ ಪುಟ್ಟ ಬಸ್ ನಿಲ್ದಾಣದಲ್ಲಿ ಅನಾಥನಾಗಿ ಕುಳಿತಿದ್ದ. ಆರಂಭದಲ್ಲಿ ಇವನನ್ನು ಎಲ್ಲರೂ ವಿಚಿತ್ರ ಜೀವಿಯಂತೆ ನೋಡ್ತಿದ್ರು. ಯಾರಾದ್ರೂ ಏನಾದ್ರೂ ಕೇಳಿದ್ರೆ ತನ್ನೆಲ್ಲ ಹಲ್ಲುಗಳನ್ನು ತೋರಿಸ್ತಾ ನಗುತ್ತಿದ್ದ. ಮುಂಡಾಜೆಯಲ್ಲಿ ಜನ ಮಾತಾಡೋದು ತುಳು ಭಾಷೆ. ಅಪರೂಪಕ್ಕೆ ಕನ್ನಡ ಬಳಸ್ತಾರೆ. ಆದ್ರೆ ಪುರುಷೋತ್ತಮ್‌ಗೆ ಇದ್ಯಾವುದೂ ಅರ್ಥ ಆಗಲ್ಲ. ಕೊನೆಗೆ ಗೊತ್ತಿರುವ ಹಿಂದಿ, ಇಂಗ್ಲೀಷ್ ಭಾಷೆಯಲ್ಲೂ ಮಾತನಾಡಿಸಿದ್ರು. ಯಾರು ಏನೇ ಮಾತಾಡಿದ್ರೂ ಪುರುಷೋತ್ತಮ್ ಉತ್ತರ ನಗುವೇ ಆಗಿತ್ತು. ಒಂದೆರಡು ದಿನ ಬಸ್ ಸ್ಟ್ಯಾಂಡ್‌ನಲ್ಲೇ ಕಾಲ ಕಳೆದ ಪುರುಷೋತ್ತಮ್‌ಗೆ ಸ್ಥಳೀಯರೇ ಊಟ ತಿಂಡಿ ನೀಡ್ತಿದ್ರು. ಈತ ಪ್ಯೂರ್ ವೆಜ್. ನಾನ್‌ವೆಜ್ ತಿನ್ನಲ್ಲ. ಊಟ ತಿಂಡಿ ಕೊಟ್ಟವರಿಗೆ ತನ್ನ ನಗುವಿನ ಮೂಲಕವೇ ಥ್ಯಾಂಕ್ಸ್ ಹೇಳ್ತಿದ್ದ. ಹೀಗೆ ಇದ್ದ ಪುರುಷೋತ್ತಮ್ ಸ್ಥಳೀಯರೊಬ್ಬರಿಂದ ಒಂದು ಕತ್ತಿ(ಮಚ್ಚು) ತಗೊಂಡ. ನಂತ್ರ ಬಸ್ ಸ್ಟ್ಯಾಂಡ್ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕಡಿದು ಕ್ಲೀನ್ ಮಾಡಿದ. ಸ್ಥಳೀಯರು ತನಗೆ ಊಟ ತಿಂಡಿ ಕೊಡ್ತಿದ್ದಾರೆ. ಅದಕ್ಕೆ ಪ್ರತಿಫಲವಾಗಿ ತಾನು ಏನಾದ್ರೂ ಮಾಡ್ಬೇಕು ಅಂತ ಕಳೆ ಕೀಳುವುದು ಮತ್ತಿತರ ಕೆಲಸ ಮಾಡ್ತಿದ್ದ. ಇದನ್ನು ನೋಡಿದ ಸಂಗಮ್ ಹೋಟೆಲ್ ಮಾಲೀಕ ಲತೀಫ್ ಒಂದು ನಿರ್ಧಾರಕ್ಕೆ ಬಂದ್ರು. ಇವನನ್ನ ನಮ್ಮ ಹೋಟೆಲ್‌ನಲ್ಲೇ ಕೆಲಸಕ್ಕೆ ಸೇರ್ಸೋಣ ಅಂತ.. ಕೆಲಸಕ್ಕೆ ಸೇರ್ಸೋ ಮೊದ್ಲು ಪುರುಷೋತ್ತಮ್‌ನ ಒಂದು ರೌಂಡ್ ಕ್ಲೀನ್ ಮಾಡಿದ್ರು. ತಿಂಗಳಾನುಗಟ್ಟಲೆಯಿಂದ ಬೆಳೆದಿದ್ದ ಉದ್ದ ಕೂದಲು ಕತ್ತರಿಸಿ, ಶೇವಿಂಗ್ ಮಾಡ್ಸಿದ್ರು. ಹೊಸ ಬಟ್ಟೆ ಕೊಡಿಸಿದ್ರು. ಹೋಟೆಲ್ ಸಮೀಪವೇ ಪುರುಷೋತ್ತಮ್ ಇರೋದಿಕ್ಕೆ ಒಂದು ರೂಮ್ ಕೊಟ್ರು.
ಹಾಗೆ ಪುರುಷೋತ್ತಮ್ ಹೋಟೆಲ್‌ನಲ್ಲಿ ಕ್ಲೀನಿಂಗ್ ಮಾಡ್ತಾ ಕೆಲಸ ಆರಂಭಿಸಿದ. ಮೂರು ಹೊತ್ತು ಹೋಟೆಲ್‌ನಲ್ಲೇ ಊಟ. ಹಬ್ಬ ಹರಿದಿನ ಇದ್ದಾಗ ಲತೀಫ್ ತನ್ನ ಮನೆಗೆ ಪುರುಷೋತ್ತಮ್‌ನನ್ನೂ ಕರ್ಕೊಂಡು ಹೋಗ್ತಿದ್ದ. ಕ್ರಮೇಣ ಲತೀಫ್ ಮನೆಯವರಿಗೆಲ್ಲ ಪುರುಷೋತ್ತಮ್ ಇಷ್ಟವಾಗಿಬಿಟ್ಟ. ಈತ ಯಾವಾಗ್ಲೂ ತುಂಬಾನೇ ಕ್ಲೀನ್ ಆಗಿ ಇರ್ತಿದ್ದ. ಬೆಳಿಗ್ಗೆ ಎದ್ದು ಒಮ್ಮೆ ಸ್ನಾನ ಮಾಡ್ತಿದ್ದ. ರಾತ್ರಿ ಕೆಲಸ ಮುಗಿಸಿ ಇನ್ನೊಮ್ಮೆ ಸ್ನಾನ ಮಾಡಿದ್ಮೇಲೆ ಮಲಗ್ತಾ ಇದ್ದಿದ್ದು. ಹೋಟೆಲ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡೋದಾದ್ರೂ ತುಂಬಾನೇ ಅಚ್ಚುಕಟ್ಟಾಗಿ ಇರ್ತಿದ್ದ. ಹೀಗೆ ಎರಡು ವರ್ಷ ಕಳೆಯಿತು. ಹೋಟೆಲ್ ಮಾಲೀಕ ಅಜೀಜ್ ಪುರುಷೋತ್ತಮ್ ಹೆಸರಿನಲ್ಲಿ ಪ್ರತಿ ತಿಂಗಳು ಪಿಗ್ಮಿಗೆ ಹಣ ಕಟ್ಟುತ್ತಿದ್ರು. ಅವನು ದುಡಿದ ಹಣ ಅವನ ಹೆಸರಲ್ಲೇ ಇರ್ಲಿ ಅಂತ.. ಈ ನಡುವೆ ಲತೀಫ್ ಸೇರಿದಂತೆ ಹೋಟೆಲ್‌ಗೆ ಬರ್ತಿದ್ದವರೆಲ್ಲ ಪುರುಷೋತ್ತಮ್‌ನ ಊರು ಯಾವುದು ಅನ್ನೋದನ್ನು ವಿಚಾರಿಸ್ತಿದ್ರು. ಎರಡು ವರ್ಷಗಳಿಂದ ಮನೆಯಿಂದ ದೂರ ಇದ್ದಾನೆ, ಮನೆಯವರೆಲ್ಲ ಗಾಬರಿಯಾಗಿರ್ತಾರೆ, ಹೇಗಾದ್ರೂ ಮಾಡಿ ಈತನ ಮನೆಯವರ ಜೊತೆಗೆ ಸಂಪರ್ಕ ಸಾಧಿಸ್ಬೇಕು ಅಂತ ತುಂಬಾನೇ ಪ್ರಯತ್ನ ಪಡ್ತಿದ್ರು. ಆದ್ರೆ ಪುರುಷೋತ್ತಮ್‌ಗೆ ತನ್ನ ಹೆಸರು ಬಿಟ್ರೆ ಇನ್ನೇನು ಹೇಳೋಕೆ ಗೊತ್ತಿರ್ಲಿಲ್ಲ. ಪುರುಷೋತ್ತಮ್‌ಗೆ ಭಾಷೆ ಒಂದು ಸಮಸ್ಯೆಯಾದ್ರೆ, ಮತ್ತೊಂದು ಕಡೆ ತನ್ನ ಊರು, ಮನೆಯವರು ಯಾವುದೂ ಅಷ್ಟಾಗಿ ನೆನಪಿರಲಿಲ್ಲ. ಹಾಗಾಗಿ ಲತೀಫ್ ಮತ್ತು ಸ್ಥಳೀಯರ ಪ್ರಯತ್ನಕ್ಕೆ ಯಾವುದೇ ಫಲ ಸಿಕ್ಕಿರಲಿಲ್ಲ.

ಶ್ರೀವತ್ಸ ಜೋಶಿ -- ಕ್ರೂರಿ ಕಾಠಿಣ್ಯದ ಕಡಲು ಮತ್ತು ‘ಕಾರಿ ಹೆಗ್ಗಡೆಯ ಮಗಳು’

ಕ್ರೂರಿ ಕಾಠಿಣ್ಯದ ಕಡಲು ಮತ್ತು ‘ಕಾರಿ ಹೆಗ್ಗಡೆಯ ಮಗಳು’ - ವಿಶ್ವವಾಣಿ: ಅಮೆರಿಕದಲ್ಲಿ ಜೂನ್‌ನಿಂದ ನವೆಂಬರ್‌ವರೆಗಿನ ಆರು ತಿಂಗಳುಗಳ ಕಾಲ ಹರಿಕೇನ್ ಸೀಸನ್. ಅಟ್ಲಾಂಟಿಕ್ ಸಾಗರಕ್ಕೆ ಅಂಟಿಕೊಂಡಿರುವ ಪೂರ್ವ ಕರಾವಳಿಯಲ್ಲಿ ಪ್ರಳಯಸದೃಶ ಪ್ರಕೋಪ ತೋರುವ ಚಂಡಮಾರುತಗಳ ಋತು. ತೀರಪ್ರದೇಶದ ಜನರ ನಿದ್ದೆಗೆಡಿಸುವ, ಊಹಿಸಲಿಕ್ಕೂ ಸಾಧ್ಯವಿಲ್ಲದಷ್ಟು ಗಾಳಿಮಳೆಯಿಂದ ಅಪಾರ ಸಾವು-ನೋವು, ಕಾರಣವಾಗುವ ಪ್ರಕೃತಿಯ ಮುನಿಸು. ಚಂಡಮಾರುತ ಅಥವಾ ಹರಿಕೇನ್ ಅಂದರೆ- ಜಗನ್ನಿಯಾಮಕ ಭಗವಂತನ ದೃಷ್ಟಿಕೋನದಿಂದ ಹೇಗಿರುತ್ತದೆ ಎಂಬ ಭಯಂಕರ ಕಲ್ಪನೆಯೊಂದನ್ನು ಅಕ್ಷರಗಳ ಆಟದಿಂದ ವಿವರಿಸುವುದಾರೆ- ಸೃಷ್ಟಿ , ಸ್ಥಿತಿ, ಲಯ ಕಾರ್ಯಗಳನ್ನು ನೋಡಿಕೊಳ್ಳುವ ತ್ರಿಮೂರ್ತಿಗಳಲ್ಲಿ ಸ್ಥಿತಿಯ ಇನ್‌ಚಾರ್ಜ್ ‘ಹರಿ’ಯು ತನ್ನ ಕೈಯಲ್ಲೊಂದು …

ಶರಣಕುಮಾರ ಲಿಂಬಾಳೆ ಅವರ " ದಲಿತ ಬ್ರಾಹ್ಮಣ ಮತ್ತು ಇತರ ಕತೆಗಳು " Holding up a mirror

Holding up a mirror - Frontline: In his latest book of short fiction, Sharankumar Limbale, a formidable voice of Dalit literature, mirrors the reality that Dalits live with even today.

Wednesday, October 17, 2018

ಹುಬ್ಬಳ್ಳಿಯ ಶಿವಪ್ಪ ಅವರ ಮನೆಯಲ್ಲೊಂದು ಮ್ಯೂಸಿಯಮ್ - A museum of one's own

A museum of one's own | Deccan Herald: Shahin S Mokashi explores a museum located in a house in Hubballi, which includes a variety of objects from the times of kings to contemporary souvenirs collected during the curator’s travels

ನಾಗೇಶ್ ಹೆಗಡೆ --- ನಮಾಮಿ ಗಂಗೆಗೆ ಮತ್ತೆ ಮತ್ತೆ ‘ಮಂಗಳಾರತಿ’

ನಮಾಮಿ ಗಂಗೆಗೆ ಮತ್ತೆ ಮತ್ತೆ ‘ಮಂಗಳಾರತಿ’ | Prajavani: ಗಂಗಾನದಿಯೇ ಸಂತನ ಬಲಿ ಪಡೆಯಿತೆ? ಅಥವಾ ಸರ್ಕಾರವೇ ಅವರನ್ನು ಬಲಿ ಕೊಟ್ಟಿತೆ?

Deccan Herald

ಸೃಷ್ಟಿಯಾಗದ ಐತಿಹಾಸಿಕ ಕ್ಷಣ: ಮಹಿಳೆಗೆ ಕಾನೂನು ಹಕ್ಕು ನಿರಾಕರಣೆ ಖಂಡನೀಯ

ಸೃಷ್ಟಿಯಾಗದ ಐತಿಹಾಸಿಕ ಕ್ಷಣ: ಮಹಿಳೆಗೆ ಕಾನೂನು ಹಕ್ಕು ನಿರಾಕರಣೆ ಖಂಡನೀಯ | Prajavani: ಮೌನ ಶಕ್ತಿಯಾಗಿ ಮಹಿಳೆಯರೂ ಮುನ್ನೆಲೆಗೆ ಬರಬಹುದಾದ ಸಾಧ್ಯತೆಗಳಿಗೆ ಕುರುಡುಗಣ್ಣಾಗುವುದು ಬೇಡ

ಎಚ್. ಎಸ್ . ವೆಂಕಟೇಶಮೂರ್ತಿ --- ನನ್ನೊಳಗಿನ ಮಲೆನಾಡು - ಭಾಗ 10

ಎಚ್. ಎಸ್. ರಾಘವೇಂದ್ರ ರಾವ್ - -- ನನ್ನೊಳಗಿನ ಮಲೆನಾಡು - ಭಾಗ 9

ತೀರ್ಥಂಕರ ರಾಯ್ - ವಸಾಹತುಶಾಹಿ ಭಾರತದಲ್ಲಿ ಅಸಮಾನತೆ - Tirthankar Roy- Inequality in Colonial India WP286.pdf

WP286.pdf -pls clik here to read

ಎಚ್. ಎಸ್. ರಾಘವೇಂದ್ರ ರಾವ್- ನನ್ನೊಳಗಿನ ಮಲೆನಾಡು ಭಾಗ - 8

ಎಚ್ . ಎಸ್. ರಾಘವೇಂದ್ರ ರಾವ್ - ನನ್ನೊಳಗಿನ ಮಲೆನಾಡು ಭಾಗ - 7

ಹಸ್ತಪ್ರತಿಗಳ ಅಧ್ಯಯನ ಅಗತ್ಯ: ಪ್ರೊ.ಪದ್ಮಾಶೇಖರ್

ಹಸ್ತಪ್ರತಿಗಳ ಅಧ್ಯಯನ ಅಗತ್ಯ: ಪ್ರೊ.ಪದ್ಮಾಶೇಖರ್ | Prajavani: ‘ಪುರಾತನ ಗ್ರಂಥಗಳಲ್ಲಿ ಇರುವ ಜ್ಞಾನ ಇಂದಿನ ಜನತೆಗೆ ತಲುಪಲು ಹಸ್ತಪ್ರತಿಗಳ ಅಧ್ಯಯನ ಶಿಸ್ತುಬದ್ಧವಾಗಿ ನಡೆಯಬೇಕಿದೆ’ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್‌ ಹೇಳಿದರು.

ಅನ್ನಾ ಬರ್ನ್ಸ್ - Man Booker Prize 2018: Anna Burns speaks after winning Prize

Tuesday, October 16, 2018

ಪ್ರೊ/ ಜಿ. ಡಿ ಅಗರ್ವಾಲ್ - Professor G.D. Agarwal's Contributions to the Ganga Cause Were Unparalleled

Professor G.D. Agarwal's Contributions to the Ganga Cause Were Unparalleled: G.D. Agarwal's died as he lived – with a commitment to rejuvenate the Ganga.

Sri Dugaparameshvari Yakshagana -ಚಿಕ್ಕ ಮೇಳ

ಕಾವ್ಯ ಕಡಮೆಗೆ ‘ದಿನಕರ ದೇಸಾಯಿ ಪ್ರಶಸ್ತಿ’ -2018

ಕಾವ್ಯ ಕಡಮೆಗೆ ‘ದಿನಕರ ದೇಸಾಯಿ ಪ್ರಶಸ್ತಿ’ | Prajavani: ಅಂಕೋಲಾದ ದಿನಕರ ದೇಸಾಯಿ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ‘ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ಗೆ ಕಾವ್ಯ ಕಡಮೆ ನಾಗರಕಟ್ಟೆ ಅವರ ‘ಜೀನ್ಸ್‌ ತೊಟ್ಟ ದೇವರು’ ಕವನ ಸಂಕಲನ ಆಯ್ಕೆಯಾಗಿದೆ

.Deccan Herald

ಪ್ರವಾಸ ಕಥನ- By VISHNU BHAT GODSE- 1857 ಸ್ವಾತಂತ್ರ್ಯ ಸಂಗ್ರಾಮದ ಪ್ರತ್ಯಕ್ಷದರ್...

ಕಸಾಪಕ್ಕೆ ಚುನಾವಣೆ ನಡೆಯಲಿ: ಕನ್ನಡ ಸಂಘರ್ಷ ಸಮಿತಿ ಸಭೆಯಲ್ಲಿ ತೀರ್ಮಾನ

ಕಸಾಪಕ್ಕೆ ಚುನಾವಣೆ ನಡೆಯಲಿ: ಕನ್ನಡ ಸಂಘರ್ಷ ಸಮಿತಿ ಸಭೆಯಲ್ಲಿ ತೀರ್ಮಾನ | Prajavani: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರ ಅಧಿಕಾರಾವಧಿ ಮುಂಬರುವ ಮಾರ್ಚ್‌ 2ಕ್ಕೆ ಕೊನೆಯಾಗಲಿದ್ದು, ಮೂರು ತಿಂಗಳು ಮುಂಚಿತವಾಗಿಯೇ ಚುನಾವಣಾ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಬೇಕು’ ಎಂದು ಕನ್ನಡ ಸಂಘರ್ಷ ಸಮಿತಿಯ ಸಮಾನ ಮನಸ್ಕರ ಸಭೆ ಒತ್ತಾಯಿಸಿದೆ.

ದಸರಾ ಪುಸ್ತಕ ಮೇಳ

ವಸುಧೇಂದ್ರ - Prathap Nair - How Vasudhendra became Kannada literature’s first openly gay writer

M I L A P -ಮಣಿಪಾಲ್ - ಚಾರು ನಿವೇದಿತಾ - Symbols of Diversity in Writing: Voicing Dissent with Charu Nivedita at ...

Monday, October 15, 2018

ವಸುಧೇಂದ್ರ - Language is like our parents: Vasudhendra

Language is like our parents: Vasudhendra | Deccan Herald: A section of the society thinks that language is just for communication. In fact, language is like our parents who nurture us. It gives a picture about our culture. Language and communication are interdependent, said writer Vasudhendra.

Writer Vasudhendra speaks during an interaction programme organised at University College in Mangaluru.

ಮುರಳೀಧರ ಉಪಾಧ್ಯ ಹಿರಿಯಡಕ -- ಕನ್ನಡ ಸಾಹಿತ್ಯದ ಇತ್ತೀಚಿಗಿನ ಒಲವುಗಳು

ಕನ್ನಡ ಸಾಹಿತ್ಯದ ಇತ್ತೀಚಿಗಿನ ಪ್ರವೃತ್ತಿಗಳು -

No automatic alt text available.

ರಘುನಾಥ . ಚ. ಹ --- ಕವಿಗಳನ್ನು ಪ್ರೀತಿಸಲು ಎಷ್ಟೊಂದು ಕಾರಣಗಳಿವೆ...

ಕವಿಗಳನ್ನು ಪ್ರೀತಿಸಲು ಎಷ್ಟೊಂದು ಕಾರಣಗಳಿವೆ... | Prajavani: ಅಪವಾದಗಳ ಮಾತಿರಲಿ, ಭಾರತೀಯ ಚೆಲುವೆಯರ ಬಗ್ಗೆ ತಿರುಮಲೇಶರೇಕೆ ಕುರುಡು? ಮರುದಿನದ ಹರಟೆಯ ಸಂದರ್ಭದಲ್ಲಿ ಎದುರಾದ ಈ ಪ್ರಶ್ನೆಗೆ ತಿರುಮಲೇಶರು ನಸುನಗುತ್ತಾ ಹೇಳಿದ್ದು:

ಕೆ.ವಿ. ತಿರುಮಲೇಶ್‌

Dasara Celebration At Mysuru| ಮೈಸೂರಿನಲ್ಲಿ ದಸರಾ ಸಂಭ್ರಮ

ದೀಪಾ ಹಿರೇಗುತ್ತಿ - ಮಧುರ ನೆನಪುಗಳನ್ನು ಮಡಿಲಿಗಿಕ್ಕುವ ಪುಸ್ತಕಗಳು…

ಮಧುರ ನೆನಪುಗಳನ್ನು ಮಡಿಲಿಗಿಕ್ಕುವ ಪುಸ್ತಕಗಳು… – ವಿಜಯವಾಣಿ: | ದೀಪಾ ಹಿರೇಗುತ್ತಿ ಮಲೆನಾಡು ಎಂದರೆ ಅದೊಂದು ಕೌತುಕ, ಥೇಟ್ ಪಶ್ಚಿಮಘಟ್ಟದ ದಟ್ಟಮಲೆಗಳಂತೆ. ಕುವೆಂಪುರವರ ಕಾದಂಬರಿಗಳಲ್ಲಿ ಕಳೆದುಹೋದವರಿಗೆ ಗೊತ್ತು ಮಲೆನಾಡಿನ ಮಡಿಲ ಅನೂಹ್ಯ ಅನುಭವ. ಹೊರಗಿನವರಿಗೆ ಮನದಣಿಯೇ ನೋಡಿದರೂ ಮುಗಿಯದ ದಟ್ಟಹಸಿರಿನ ಕಾಡು ಮತ್ತು ಹಾಲ್ನೊರೆಯ ಜಲಪಾತಗಳ ಸುಂದರ ಪಿಕ್ನಿಕ್ ಸ್ಪಾಟ್ ಮಾತ್ರವೇ ಆಗಿರುವ ಮಲೆನಾಡು ತನ್ನ ಗರ್ಭದಲ್ಲಿ ಅಡಗಿಸಿಕೊಂಡ


ಅಮ್ಮಚ್ಚಿಯೆಂಬ ನೆನಪು- ಹೊಳೆವ ಹೊಳೆಯಾಚೆಗೆ -- ಅನುರಾಧಾ ಭಟ್

ಮಲೆನಾಡಿಗೊಂದು ಕೈದೀವಿಗೆ…

ಮಲೆನಾಡಿಗೊಂದು ಕೈದೀವಿಗೆ… – ವಿಜಯವಾಣಿ: ಮಲೆನಾಡು ಎಂಬ ಆ ಪದವೇ ಆಪ್ಯಾಯಮಾನ. ಅಲ್ಲಿನವರ ಜತೆಗೆ ಮಾತಿಗಿಳಿದರೆ ಸಿಗುವ ಆ ಪ್ರದೇಶದ ಪ್ರಕೃತಿ, ಜನಜೀವನ, ವ್ಯಕ್ತಿಗಳ ಕುರಿತ ವರ್ಣನೆಗೆ ಮಿತಿಯುಂಟೇ.. ಆದರೆ ಅವೆಲ್ಲ ಮಾತಿಗಿಳಿದರಷ್ಟೇ ಸಿಗುವ ಅನುಭವ. ಅದನ್ನು ಕೃತಿಗಿಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ ಪಟವರ್ಧನ ಕುಟುಂಬ ಮತ್ತು ಜಾಗೃತಿ. ಹಾಗಂತ ಈ ಕೃತಿ ಮಲೆನಾಡಿನ ಕುರಿತ ವ್ಯಕ್ತಿಗತ ಅನುಭವಕ್ಕೆ ಸೀಮಿತ ಎಂಬ


- ಉಗ್ರವಾದಕ್ಕೆ ಲೇಖಕರೇ ಗುರಿ -ಅಲ್ಲಮಪ್ರಭು ಬೆಟ್ಟದೂರು

chitradurga News: the goal of the author is to terrorize - ಉಗ್ರವಾದಕ್ಕೆ ಲೇಖಕರೇ ಗುರಿ | Vijaya Karnataka: ಜಾಗತೀಕರಣದ ದಾಳಿ ನಡೆಯುತ್ತಿರುವ ಸನ್ನಿವೇಶದಲ್ಲಿ ಕೋಮುವಾದ, ಉಗ್ರವಾದ ಸಮಸ್ಯೆಗೆ ಲೇಖಕರು ಬರಹಗಾರರೇ ಗುರಿಯಾಗಿದ್ದಾರೆ ಎಂದು ಚಿಂತಕ ಅಲ್ಲಮಪ್ರಭು ಬೆಟ್ಟದೂರು ಆತಂಕ ವ್ಯಕ್ತಪಡಿಸಿದರು.

ಪಾರ್ವತೀಶ ಬಿಳಿದಾಳೆ - ಶೂದ್ರ ಶ್ರೀನಿವಾಸರ ‘ಯಾತ್ರೆ’ ಕಾದಂಬರಿ ಆಶಯಗಳದ್ದೇ ಮೇಲುಗೈ

ಶೂದ್ರ ಶ್ರೀನಿವಾಸರ ‘ಯಾತ್ರೆ’ ಕಾದಂಬರಿ ಆಶಯಗಳದ್ದೇ ಮೇಲುಗೈ | Vartha Bharati- ವಾರ್ತಾ ಭಾರತಿ: ಕನ್ನಡದ ಸಾಂಸ್ಕೃತಿಕ ಸಮುದ್ರಕ್ಕೆ ಹರಿದು ಬಂದು ಸೇರುತ್ತಿರುವ ಅಸಂಖ್ಯ ಜಲಧಾರೆಗಳಲ್ಲಿ ಶೂದ್ರ ಶ್ರೀನಿವಾಸರೆಂಬ ತಣ್ಣನೆಯ ಸಿಹಿನೀರಿನ ಹರಿವೂ ಒಂದು. ‘ಯಾತ್ರೆ’ ಶೂದ್ರ ಶ್ರೀನಿವಾಸರ ಹೊಸ ಕಾದಂಬರಿಯಾಗಿದೆ. ಲೇಖಕರೇ ಹೇಳಿಕೊಂಡಿರುವಂತೆ ಕಳೆದ ನಲವತ್ತು ವರ್ಷಗಳಿಂದ ಅವರ ಮನಸ್ಸಿನಲ್ಲಿದ್ದ ವಸ್ತುವೊಂದು ಈಗ ಕಾದಂಬರಿಯಾಗಿ ಅಭಿವ್ಯಕ್ತಗೊಂಡಿದೆ. ಕಳೆದ ವರ್ಷ ‘ಆ ದಿನ’ ಹೆಸರಿನ ಶೂದ್ರರ ಇನ್ನೊಂದು ಕಾದಂಬರಿಯೂ ಪ್ರಕಟಗೊಂಡಿರುವುದು ಆಸಕ್ತಿದಾಯಕ ಸಂಗತಿಯಾಗಿದೆ.

ಮಹಿಳೆಯರ ಅನುಭವಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?

ಮಹಿಳೆಯರ ಅನುಭವಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ? | Vartha Bharati- ವಾರ್ತಾ ಭಾರತಿ: ಕಳೆದ ವಾರ ಇಬ್ಬರು ಮಹಿಳೆಯರು ತಾವು ಈ ಹಿಂದೆ ಅನುಭವಿಸಿದ ಲೈಂಗಿಕ ಕಿರುಕುಳದ ಸಂಕಟದ ಅನುಭವಗಳನ್ನು ಲೋಕದೆದುರು ಪದೇಪದೇ ಹೇಳಿಕೊಳ್ಳಬೇಕಾಯಿತು. ಅಮೆರಿಕದಲ್ಲಿ ಮನಶಾಸ್ತ್ರದ ಪ್ರೊಫೆಸರ್ ಆಗಿರುವ ಕ್ರಿಸ್ಟೀನ್ ಬ್ಲಾಸಿ ಫೋರ್ಡ್ ಅವರು 1982ರಲ್ಲಿ ತಾನು ಹದಿಹರೆಯದವರಾಗಿದ್ದಾಗ ಅಮೆರಿಕದ ಸುಪ್ರೀಂ ಕೋರ್ಟಿಗೆ ಇದೀಗ ನ್ಯಾಯಾಧೀಶರಾಗಿ ನಾಮನಿರ್ದೇಶಿತರಾಗಿರುವ ಬ್ರೆಟ್ ಎಂ. ಕ್ಯಾವನಾವ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದರೆಂದು ಆಪಾದಿಸಿದ್ದಾರೆ. ನಂತರ ಮುಂಬೈನಲ್ಲಿ ನಟಿ ತನುಶ್ರೀ ದತ್ತಾ ಅವರು 2008ರಲ್ಲಿ ನಟ ನಾನಾ ಪಾಟೇಕರ್ ಅವರು ತನಗೆ ಕಿರುಕುಳ ಕೊಟ್ಟ ಬಗ್ಗೆ ಮತ್ತು ಅದರ ಪರಿಣಾಮವಾಗಿ ತಾನು ಚಿತ್ರರಂಗದಿಂದಲೇ ಹೊರಹಾಕಲ್ಪಟ್ಟಿದ್ದರ ಬಗ್ಗೆ ಒಂದು ಟೆಲಿವಿಷನ್ ಚಾನೆಲ್‌ಗೆ ಹೇಳಿಕೊಂಡಿದ್ದಾರೆ.

Sunday, October 14, 2018

- ಎಸ್. ಆರ್. ವಿಜಯುಶಂಕರ - ಡಾ. ಕಾರಂತರ ಬದುಕು- ಬರಹ

dr.shivaram karanth: shivaram karanth life and books - ಡಾ. ಕಾರಂತರ ಬದುಕು- ಬರಹ | Vijaya Karnataka: ಕಾರಂತರು ಪ್ರಾರಂಭದ ಪಠ್ಯಪುಸ್ತಕಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸುತ್ತಲಿನ ಸಾಮಾನ್ಯ ಜೀವನವನ್ನು, ಅವುಗಳ ಸಮಸ್ಯೆಗಳನ್ನು ಗಮನಿಸುವುದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಕಲಿಸುವ ಮೂಲಕ ಚಿಂತನೆಯನ್ನು ಸಹಜವಾಗಿ ಪ್ರೇರೇಪಿಸಬೇಕು ಎಂಬ ವಿಶ್ವಾಸ ಇದ್ದವರು.

ದೌರ್ಜನ್ಯ ನಡೆದಾಗಲೇ ಪ್ರತಿಭಟಿಸುವುದು ಸೂಕ್ತ: ಸಾಹಿತಿ ಸುಕನ್ಯಾ ಮಾರುತಿ

ದೌರ್ಜನ್ಯ ನಡೆದಾಗಲೇ ಪ್ರತಿಭಟಿಸುವುದು ಸೂಕ್ತ: ಸಾಹಿತಿ ಸುಕನ್ಯಾ ಮಾರುತಿ | Prajavani: ಯಾವ ಮಹಿಳೆಯೇ ಆಗಲಿ ದೌರ್ಜನ್ಯ ನಡೆದ ಸಂದರ್ಭದಲ್ಲಿ ಪ್ರತಿಭಟಿಸುವುದು ಅತ್ಯಂತ ಸೂಕ್ತ ಎಂದು ಸಾಹಿತಿ ಸುಕನ್ಯಾ ಮಾರುತಿ ಹೇಳಿದರು.

ಉಡುಪಿಯ ಬನ್ನಂಜೆ ಬಸ್ ನಿಲ್ದಾಣದ ಕಾಮಗಾರಿ: 50 ವರ್ಷ ಹಳೆಯ ಮರಗಳ ಸ್ಥಳಾಂತರ

ಬನ್ನಂಜೆ ಬಸ್ ನಿಲ್ದಾಣದ ಕಾಮಗಾರಿ: 50 ವರ್ಷ ಹಳೆಯ ಮರಗಳ ಸ್ಥಳಾಂತರ - Varthabharathi | DailyHunt: ಉಡುಪಿ, ಅ.13: ಬನ್ನಂಜೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿಯ ಹಿನ್ನೆಲೆಯಲ್ಲಿ ಕೊಡಲಿ ಏಟಿನಿಂದ ನೆಲಕ್ಕೆ ಉರುಳಲಿದ್ದ 50 ವರ್ಷಗಳ ಹಳೆ ಮರಗಳನ್ನು ಅಲ್ಲೇ ಸಮೀಪಕ್ಕೆ ಸ್ಥಳಾಂತರಿಸಿ ನೆಡುವ ಕಾರ್ಯ ಶನಿವಾರ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನಿರ್ಮಾಣಗೊಳ್ಳುವ ಪ್ರದೇಶದಲ್ಲಿದ್ದ 28 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪರಿಸರಾಕ್ತರ ಒಕ್ಕೂಟದ ಪ್ರೇಮಾನಂದ ಕಲ್ಮಾಡಿ ಹಾಗೂ ವಿನಯಚಂದ್ರ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಮರಗಳನ್ನು ಉಳಿಸುವಂತೆ ಕೋರಿಕೊಂಡಿದ್ದರು. ಇತ್ತೀಚೆಗೆ ಈ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಆರ್.ಶಂಕರ್ ಅವರಲ್ಲಿಯೂ ಮರಗಳನ್ನು ಉಳಿಸುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಸಚಿವರು ಮರಗಳನ್ನು ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸಿದ್ದರು.

- ‘ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ’ ಕುರಿತ ಸಂವಾದ | ಕಾರ್ಯಕ್ರಮಕ್ಕೆ ಡಾ.ಬರಗೂರು ಚಾಲನೆ |

chitradurga News: definition of religion for the sake of religion - ‘ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ’ ಕುರಿತ ಸಂವಾದ | ಕಾರ್ಯಕ್ರಮಕ್ಕೆ ಡಾ.ಬರಗೂರು ಚಾಲನೆ | Vijaya Karnataka: ಜಾತಿ, ಧರ್ಮ ಪರವಿರುವ ಮನಸ್ಸುಗಳು, ಪಕ್ಷ ಪರವಾಗಿರುವ ಶಕ್ತಿಗಳು ಅಪ ವ್ಯಾಖ್ಯಾನಗಳಿಂದ ಭಾರತೀಯರ ಮನಸ್ಸನ್ನು ಭಾವೋದ್ರೇಕಗೊಳಿಸುತ್ತಿವೆ. ಅವರಿಗೆ ನಿಜ ವ್ಯಾಖ್ಯಾನಗಳ ಮೂಲಕ ಉತ್ತರಿಸಬೇಕಿದೆ ಎಂದು ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

Saturday, October 13, 2018

ಕನಕರಾಜ ಆರನಕಟ್ಟೇ --- ಕನಸೊಂದರ ಮಹಾಕಥನ

ಕನಸೊಂದರ ಮಹಾಕಥನ | Prajavani: ನಾವು ಓದಲು ತೊಡಗುವ ಯಾವುದೇ ಪುಟವೇ ಅದರ ಆರಂಭವಾಗುತ್ತದೆ. ಆರಂಭದಿಂದಲೇ ಶುರು ಮಾಡಿ ಕಥೆಯನ್ನು ಮುಗಿಸಬೇಕೆಂಬ ನಿಯಮಗಳೇನೂ ಇಲ್ಲಿಲ್ಲ!! ಅದನ್ನು ಪಾವಿಕ್‌ನೇ ಹೇಳುತ್ತಾನೆ. ಆರಂಭ ಅಂತ್ಯಗಳಿಲ್ಲದ ತನ್ನೊಳಗೆ ತಾನೇ ಸುತ್ತುವ ಆ ಮೂಲಕ ಓದುಗರನ್ನು ಸ್ವಾತಂತ್ರ್ಯಗೊಳಿಸುವ ಒಂದು ಕಥನವೇ ಈ ಕಾದಂಬರಿ. ಈ ಕಾದಂಬರಿಯ ಹೆಣ್ಣು- ಗಂಡು ಆವೃತ್ತಿಗಳ ಎರಡೂ ಪುಸ್ತಕಗಳಲ್ಲಿ ಇರುವುದು ಒಂದೇ ಕಥೆ. ಆ ಕಥೆಯ ಮೂರು ಭಾಗಗಳು, ಮೂರು ಧರ್ಮಗಳ ವ್ಯಾಖ್ಯಾನಗಳು.


ಬಂಡಾಯ ಶಕ್ತಿಯ ಪುನರೋದಯಕ್ಕೆ ಕರೆ

'ಬಂಡಾಯ ಸಾಹಿತ್ಯ ಸಂವಾದ' - ಬರಗೂರು ರಾಮಚಂದ್ರಪ್ಪ

ಡಾ / ಶಿವಮೂರ್ತಿಶಿವಾಚಾರ್ಯ ಮಹಾಸ್ವಾನಿಗಳು - ಜೀವನ ನಿರ್ವಹಣೆ ಸಮಸ್ಯೆv/s ಸಾಹಿತ್ಯ ನಿರ್ಮಾಣದ ಸಮಸ್ಯೆ

Columns News: life management problem v/s literature problem - ಬಿಸಿಲ ಬೆಳದಿಂಗಳು: ಜೀವನ ನಿರ್ವಹಣೆ ಸಮಸ್ಯೆv/s ಸಾಹಿತ್ಯ ನಿರ್ಮಾಣದ ಸಮಸ್ಯೆ | Vijaya Karnataka: ಸಮಸ್ಯೆ ಇಲ್ಲದ ವ್ಯಕ್ತಿ ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಬದುಕಿನುದ್ದಕ್ಕೂ ಏನಾದರೊಂದು ಇದ್ದೇ ಇರುತ್ತದೆ. ಬೆಳೆದು ನಿಂತ ಮಗಳ ಮದುವೆಯ ಸಮಸ್ಯೆ ತಾಯಿಗಾದರೆ, ತಂದೆಗೆ ಓದು ಮುಗಿಸಿ ಜೋಲು ಮುಖಮಾಡಿಕೊಂಡು ಮನೆಯಲ್ಲಿರುವ ಮಗನ ನೌಕರಿ ಸಮಸ್ಯೆ. ಮಗಳಿಗೆ ಮದುವೆಯಾದ ಮೇಲೆ ಮಕ್ಕಳಾಗದ ಸಮಸ್ಯೆ. ಅತ್ತೆ-ಮಾವಂದಿರು ಮತ್ತು ಗಂಡನ ಕಿರುಕುಳದ ಸಮಸ್ಯೆ. ಮಗನಿಗೆ ನೌಕರಿ ಸಿಕ್ಕಮೇಲೆ ಬಡ್ತಿ ಸಮಸ್ಯೆ. ಬಡ್ತಿ ಸಿಕ್ಕಮೇಲೆ ಹಿಂಬಡ್ತಿ ಸಮಸ್ಯೆ. ಒಂದೇ ಎರಡೇ? ಒಂದು ಮುಗಿದು ಇನ್ನೇನು ಸುಖವಾಗಿರಬಹುದು ಎನ್ನುವಷ್ಟರಲ್ಲಿ ಮತ್ತೊಂದು ಧುತ್ತೆಂದು ಭೂತಾಕಾರವಾಗಿ ಮುಂದೆ ಬಂದು ನಿಲ್ಲುತ್ತದೆ. ಸಮಸ್ಯೆಗಳು ವ್ಯಕ್ತಿಯ ಮನಸ್ಸಿಗೆ ಕ್ಲೇಶವನ್ನುಂಟುಮಾಡಿದರೂ ಅವುಗಳನ್ನು ಎದುರಿಸಿ ಮೆಟ್ಟಿನಿಂತಾಗ ಆಗುವ ಆನಂದ ಅಪರಿಮಿತ.

ವಿ. ಎಸ್. ಶಾನುಭಾಗ್ -- ನಿನ್ನ ಕಾಣುವ ತವಕದಲಿ Ninna Kanuva Tavakadali- V.S Shanbhag

- ಕೋಟೆ ನಾಡಿನಲ್ಲಿ ಬಂಡಾಯದ ಹೆಜ್ಜೆಗಳು

chitradurga News: the rebellious steps in the fort - ಕೋಟೆ ನಾಡಿನಲ್ಲಿ ಬಂಡಾಯದ ಹೆಜ್ಜೆಗಳು | Vijaya Karnataka: ಎಂಬತ್ತರ ದಶಕದಲ್ಲಿ ನಾಡಿನಾದ್ಯಂತ ಬರಹಗಾರರು, ಚಿಂತಕರಲ್ಲಿ ಬಂಡಾಯದ ಚಿಂತನೆ ಕಿಡಿ ಹೊತ್ತಿಸಿ ಮಹತ್ವದ ಸಾಹಿತ್ಯಕ ಜನಪರ ಚಳವಳಿಯಾಗಿ ಬೆಳೆದ ಬಂಡಾಯ ಸಾಹಿತ್ಯ ಸಂಘಟನೆ ಚಿತ್ರದುರ್ಗ ಜಿಲ್ಲೆಯಲ್ಲೂ ತನ್ನ ಹೆಜ್ಜೆಗಳನ್ನು ದಾಖಲಿಸಿದೆ.

ಪುಸ್ತಕೋತ್ಸವದ ಸುಗ್ಗಿ ಮತ್ತೆ ಬಂತು

ಪುಸ್ತಕೋತ್ಸವದ ಸುಗ್ಗಿ ಮತ್ತೆ ಬಂತು | Prajavani: ಅರಮನೆ ಮೈದಾನದಲ್ಲಿ ಇದೇ 15ರಿಂದ 21ರವರೆಗೆ ಬೆಂಗಳೂರು ಪುಸ್ತಕೋತ್ಸವ ನಡೆಯಲಿದ್ದು, ಅಲ್ಲಿ ಏನೇನು ಇರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

Deccan Herald

ಅನ್ನಪೂರ್ಣಾ ದೇವಿ - Panditayen Annapurna Devi Raga Manj Khamaj & Kaushiki

ಖ್ಯಾತ ಹಿಂದುಸ್ಥಾನಿ ಸಂಗೀತಗಾರ್ತಿ ಅನ್ನಪೂರ್ಣಾ ದೇವಿ ಇನ್ನಿಲ್ಲ

ಖ್ಯಾತ ಹಿಂದುಸ್ಥಾನಿ ಸಂಗೀತಗಾರ್ತಿ ಅನ್ನಪೂರ್ಣಾ ದೇವಿ ಇನ್ನಿಲ್ಲ | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ,ಅ.13: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ,ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರ್ತಿ ಅನ್ನಪೂರ್ಣಾ ದೇವಿ(91) ಅವರು ಶನಿವಾರ ಬೆಳಗಿನ ಜಾವ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕಳೆದ ಕೆಲವು ವರ್ಷಗಳಿಂದ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು.

ಕುವೆಂಪು ಸಾಹಿತ್ಯ - ಸಾಂಸ್ಕೃತಿಕ ಅನುಸಂಧಾನ - ವಿಚಾರ ಸಂಕಿರಣ

Image may contain: 1 person, smiling

ರಘು ಇಡ್ಕಿದು ಅವರ ಐದು ನಾಟಕಗಳ ಬಿಡುಗಡೆ

Image may contain: Raghu Idkidu Idkidu, smiling

Friday, October 12, 2018

ಡಿಎಸ್‌ಸಿ ಪ್ರಶಸ್ತಿ ಮೊದಲ ಸುತ್ತಿಗೆ ಜಯಂತ ಕಾಯ್ಕಿಣಿ ಕೃತಿ

ಡಿಎಸ್‌ಸಿ ಪ್ರಶಸ್ತಿ ಮೊದಲ ಸುತ್ತಿಗೆ ಜಯಂತ ಕಾಯ್ಕಿಣಿ ಕೃತಿ | Prajavani: ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕಥೆಗಳ ಸಂಕಲನ, ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಡಿಎಸ್‌ಸಿ ಬಹುಮಾನದ ಸ್ಪರ್ಧೆಯಲ್ಲಿ ಮೊದಲ ಸುತ್ತಿಗೆ ಪ್ರವೇಶಿಸಿದೆ

ಸೌಮ್ಯ .ಪಿ- -ವೇಣುಗೋಪಾಲ ಕಾಸರಗೋಡು ಅವರ ನಾಟಕ - " ದೃಷ್ಟಿ "

ವೇಣುಗೋಪಾಲ ಕಾಸರಗೋಡು

ಡಾ / ಸುಂದರ ಕೇನಾಜೆ - ಕಾಸರಗೋಡಿನ ಕನ್ನಡ ನಾಟಕ ಸಾಹಿತ್ಯ

ಹಯವದನ ಉಪಾಧ್ಯ - -- --ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು

ಮುರಳೀಧರ ಉಪಾಧ್ಯ ಹಿರಿಯಡಕ - -ಅಂತರ್ಜಾಲದಲ್ಲಿ ಕನ್ನಡ ರಂಗಭೂಮಿ

Thursday, October 11, 2018

JNU _ಕನ್ನಡ ಅಧ್ಯಯನ ಪೀಠ: ಪ್ರೊ.ಬಿಳಿಮಲೆ ಮುಂದುವರಿಕೆ

ಕನ್ನಡ ಅಧ್ಯಯನ ಪೀಠ: ಪ್ರೊ.ಬಿಳಿಮಲೆ ಮುಂದುವರಿಕೆ | Prajavani: ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ಸೇವಾ ಅವಧಿಯನ್ನು ಮತ್ತೆ ಎರಡು ವರ್ಷಗಳಿಗೆ ಮುಂದುವರಿಸಲಾಗಿದೆ.

Deccan Herald

ಕೆ.ಸತ್ಯನಾರಾಯಣರ ಸ್ಕೂಲು ಬಿಡುವ ಸಮಯ ಪ್ರಬಂಧ ಕೃತಿ ಕುರಿತು

ಭೂಮಿಗೀತ: ಕೆ.ಸತ್ಯನಾರಾಯಣರ ಸ್ಕೂಲು ಬಿಡುವ ಸಮಯ ಪ್ರಭಂಧಗಳ ಕೃತಿ ಕುರಿತು: ಕನ್ನಡದ ಹಿರಿಯ ಕಥಗಾರರೂ, ಕಾದಂಬರಿಕಾರು ಹಾಗೂ ಪ್ರಬಂಧಕಾರರಾಗಿರುವ ಕೆ.ಸತ್ಯನಾರಾಯಣರವರ ಇತ್ತೀಚೆಗಿನ " ಸ್ಕೂಲು ಬಿಡುವ ಸಮಯ" ಪ್ರಬಂಧಗಳ ಕೃತಿಯನ್ನು ಓದುತ್ತಿ.


..

ಬೇಂದ್ರೆ ಸ್ಮಾರಕ ಕವನ ರಚನಾ ಸ್ಪರ್ಧೆ - 2018

No automatic alt text available.

ಸರಕಾರಿ ಕಾಲೇಜು , ಕಾಸರಗೋಡು - --ಕನ್ನಡ ನಾಟಕ ವಸ್ತು ವಿನ್ಯಾಸ { ವಿಚಾರ ಗೋಷ್ಠಿ }

Tuesday, October 9, 2018

ಅಜಕ್ಕಳ ಗಿರೀಶ್ ಭಟ್ - ಎಸ್. ಎಲ್. ಭೈರಪ್ಪ ಅವರ " ಉತ್ತರ ಕಾಂಡ " Dr Ajjakkala Girish Bhat about Uttarakanda

ಮುರಳೀಧರ ಉಪಾಧ್ಯ ಹಿರಿಯಡಕ - -ಅಂತರ್ಜಾಲದಲ್ಲಿ ಕನ್ನಡ ರಂಗಭೂಮಿ

 ಸರಕಾರಿ ಕಾಲೇಜು , ಕಾಸರಗೋಡು -Government College Kasaragod ,

ವಿಚಾರಗೋಷ್ಠಿ - ಕನ್ನಡ ನಾಟಕ - ವಿಸ್ತು - ವಿನ್ಯಾಸ

ಅಕ್ಟೋಬರ್ -10/ 11 / 2018

-ಅಂತರ್ಜಾಲದಲ್ಲಿ ಕನ್ನಡ ರಂಗಭೂಮಿ

-ಮುರಳೀಧರ ಉಪಾಧ್ಯ ಹಿರಿಯಡಕ

11- 10- 2018 --- 11am

Kannada Theatre in Internet

 - by-Pro. Muraleedhara Upadhya Hirtiadka

ಈ  ಉಪನ್ಯಾಸದಲ್ಲಿ ನಾನು ಉಲ್ಲೀಖಿಸಿದ ವೀಡಿಯೋ  link ಗಳು  ಈ ಬ್ಲಾಗ್ ನಲ್ಲಿವೆ --------------------------

ಪ್ರಸನ್ನ - ಸಮಕಾಲೀನ ರಂಗಭೂಮಿ -- The Contemporary Crisis in Theatre Ecology by Prasanna, Theatre Director

ಕೆ. ವಿ. ಅಕ್ಷರ --- ವರ್ತಮಾನದ ರಂಗಭೂಮಿ - { ಸುಚಿತ್ರ ಸಾಹಿತ್ಯ ಸಂಜೆ }

ಸಂಸ - ವಿಗಡ ವಿಕ್ರಮರಾಯ - Vigada Vikramaraya { ನಿ- ಮಂಜು ಕೊಡಗು }

ಸಂಸ - Mantra Shakti | ಮಂತ್ರಶಕ್ತಿ { ನಿ- ಅಕ್ಷರ. ಕೆ. ವಿ }

ಅ ರಾ ಮಿತ್ರ - ಕೈಲಾಸಂ ಕುರಿತು - Prof A R Mitra on Kailasam

ಎಚ್. ಕೆ. ರಾಮಮೂರ್ತಿ -- ಶ್ರೀರಂಗರ ನಾಟಕಗಳು

ಕುವೆಂಪು - ಸ್ಮಶಾನ ಕುರುಕ್ಷೇತ್ರ { ನಿ- ಕೆ. ವಿ. ಅಕ್ಷರ } Smashana Kurukshetra | ಸ್ಮಶಾನ ಕುರುಕ್ಷೇತ್ರ

ಕುವೆಂಪು - ಶೂದ್ರ ತಪಸ್ವಿ - SHOODRA TAPASVI- NATAKA(PART 3) { ನಿ- ಎಮ್. ಆಶೋಕ ಕುಮಾರ್ }

ಕುವೆಂಪು - ಶೂದ್ರ ತಪಸ್ವಿ - { ಉಪನ್ಯಾಸ - ಸಾ. ಶಿ. ಮರುಳಯ್ಯ }

ಕುವೆಂಪು - ಶೂದ್ರ ತಪಸ್ವಿ { ತೆಲುಗು ನಾಟಕ } Shudhra Thapasvi Natakam Janapadam

ಕುವೆಂಪು - ಜಲಗಾರ { ನಾಟಕ } JALAGAARA FULL PLAY- DIRECTED BY LAKSHMINARAYANA VANIGARA HALLI-

ಮಾಸ್ತಿ - ಕಾಕನಕೋಟೆ [ ನಿ- ಸಿ. ಆರ್. ಸಿಂಹ , ] Kakana Kote Kannada Full HD Movie - Lokesh, Srinath, Lavanya

ಡಿ. ವಿ. ಗುಂದಪ್ಪ - { ಸಂದರ್ಶನ } Sri D V Gundappa, Interview From The AIR Archives

Monday, October 8, 2018

ಮುರಳೀಧರ ಉಪಾಧ್ಯ ಹಿರಿಯಡಕ - - ರಾಷ್ಟ್ರಕವಿ ಗೋವಿಂದ ಪೈ - ಬದುಕು ಬರಹ

ಎ. ಎನ್ . ಮೂರ್ತಿ ರಾವ್ - Tartuffe । ತಾರ್ತೂಫ್ { ಮೋಲಿಯರ್ / ನಿ- ಎಮ್. ಗಣೇಶ್ }

ತುಘಲಕ್ ಪಾತ್ರದಲ್ಲಿ ಸಿ. ಆರ್. ಸಿಂಹ - { A Documentary on Mr C R Simha }

ಗಿರೀಶ್ ಕಾರ್ನಾಡ್ -- Agni Mattu Male । ಅಗ್ನಿ ಮತ್ತು ಮಳೆ { ನಿ -ವೆಂಕಟರಮಣ ಐತಾಳ್ }

ಗಿರೀಶ್ ಕಾರ್ನಾಡ್ - ತಲೆದಂಡ { ನಿ- ಬೆಳಗಲಿ ವೀರಣ್ಣ } Taledanda play written By Girish Karnad. Presented by Nadoja Sri belagal...

ಗಿರೀಶ್ ಕಾರ್ನಾಡ್ - ಹಯವದನ { ಹಿಂದೀ } Hayavadana Drama written by Girish Karnad Patna 8 7 2018

ಗಿರೀಶ್ ಕಾರ್ನಾಡ್ - Why I wrote Rakshasa Tangadi? Girish Karnad | ನಾನೇಕೆ ರಾಕ್ಷಸ ತಂಗಡಿ ಬರೆದೆ?...

Girish Karnad on Rakshasa Tangadi- Part 2 | ರಾಕ್ಷಸ ತಂಗಡಿ | ಕಾರ್ನಾಡರ ಇನ್ನ...

ಎಚ್. ಎಸ್. ಶಿವಪ್ರಕಾಶ್ - { ಸಂದರ್ಶನ } Prof. H.S. Shivaprakash | Interview | www.count2three.de

ಎಚ್. ಎಸ್. ಶಿವಪ್ರಕಾಶ್ - - Kalandugeya Kathe | ಕಾಲಂದುಗೆಯ ಕಥೆ { ನಿ. ಬಿ. ಆರ್. ವೆಂಕಟರಮಣ ಐತಾಳ }

ಪಿ. ಲಂಕೇಶ್ ಸಂದರ್ಶನ | P. Lankesh Interview

ಲಂಕೇಶ್ - ಈಡಿಪಸ್ { ನಿ- ಕೆ. ಎಸ್. ಡಿ. ಎಲ್. ಚಂದ್ರು } OEDIPUS KANNADA DRAMA -M.L.A.C -4

ಲಂಕೇಶ್ - - Gunamukha । ಗುಣಮುಖ { ನಿರ್ದೇಶನ - ಮಂಜು ಕೊಡಗು }

ಚಂದ್ರಶೇಖರ ಕಂಬಾರ - GK Mastara Pranayaprasanga | ಜಿ.ಕೆ ಮಾಸ್ತರ ಪ್ರಣಯಪ್ರಸಂಗ { ನಿ- ಕೆ. ವಿ. ಅಕ್ಷರ }

ಚಂದ್ರಶೇಖರ ಕಂಬಾರ - Thukrana Kanasu (ತುಕ್ರನ ಕನಸು) -Yash Shetty- Rathabeedhi Geleyaru Udupi

ಯು. ಆರ್. ಅನಂತಮೂರ್ತಿ- Suryana Kudure | ಸೂರ್ಯನ ಕುದುರೆ { ನಿರ್ದೇಶನ - ಎಮ್. ಗಣೇಶ್ }

KV Subbanna Interview | ಕೆ.ವಿ.ಸುಬ್ಬಣ್ಣ ಸಂದರ್ಶನ { ಪ್ರಕಾಶ್ ಬೆಳವಾಡಿ }

ಲಿಂಗದೇವರು ಹಳೆಮನೆ -- ನಾಟಕ-- ಗಡಿಯಂಕ ಕುಡಿಮುದ್ದ Gadiyanka Kudimudda Kannada Play Part 1

ಇಕ್ಬಾಲ್ ಅಹಮದ್ - Mamamushi । ಮಾಮಾಮೂಶಿ { ಮೋಲಿಯರ್ ನಾಟಕ }

ಜೋಸೆಫ್ - Ashcharya Chudamani ಆಶ್ಚರ್ಯ ಚೂಡಾಮಣಿ { ಶಕ್ತಿಭದ್ರ }

ಕೆ. ವಿ. ಅಕ್ಷರ -- Malati Madhava | ಮಾಲತೀ ಮಾಧವ

ಕೆ. ವಿ. ಅಕ್ಷರ -- GK Mastara Pranayaprasanga | ಜಿ.ಕೆ ಮಾಸ್ತರ ಪ್ರಣಯಪ್ರಸಂಗ { ಕಂಬಾರ ಅವರ ನಾಟಕ }

ಕೆ. ವಿ. ಅಕ್ಷರ - Sangya Balya । ಸಂಗ್ಯಾ ಬಾಳ್ಯಾ

ಕೆ. ವಿ. ಅಕ್ಷರ -- Babugiri | ಬಾಬುಗಿರಿ { ರವೀಂದ್ರನಾಥ ಟಾಗೋರ್ }

ಆಧುನಿಕ ನಾಟಕದಲ್ಲಾದ ನಾಟ್ಯ ಸಂಗೀತದ ಪರಿವರ್ತನೆ - - Part-II

Part-II - pls clik here to read

ಏಣಗಿ ಬಾಳಪ್ಪ - ರಂಗಗೀತೆಗಳು Paaduka Pattabisheka Vol 1 Jukebox | Ranga Geethegalu | Enagi Balappa

ಏಣಗಿ ಬಾಳಪ್ಪ - { Documentary } ANAGI BALAPPA

ಸುಭದ್ರಮ್ಮ ಮನ್ಸೂರ್ - - Memoir Song by Subhadramma Mansur

ಚಿಂದೋಡಿ ಲೀಲಾ { Documentary } Chindodi Leela

ಹೊನ್ನಪ್ಪ ಭಾಗವತರ್ - Shri. C. Honnappa Bhagavathar's Documentary

ಮುರಳೀಧರ ಉಪಾಧ್ಯ ಹಿರಿಯಡಕ -- -ಬಿ. ವಿ. ಕಾರಂತರ ಕೊಡುಗೆ

ಬಿ. ವಿ. ಕಾರಂತ - Gokula Nirgamana । ಗೋಕುಲ ನಿರ್ಗಮನ { ಕವಿ - ಪು. ತಿ. ನ }

BV Karant Interview । ಬಿ.ವಿ ಕಾರಂತ ಸಂದರ್ಶನ

ರಂಗ ಜಂಗಮ { ನಿರ್ದೇಶಕರು - ಎಸ್ . ರಾಮನಾಥ } Rangajangama | Sanchari Theatre | S Ramanatha Rangayana

ಶ್ರೀನಿವಾಸ ಪ್ರಭು { ಸಂದರ್ಶನ } Chow Chow Bath - By two coffee with Shrinivas Prabhu -

ಆಗಮನ { ನಿರ್ದೇಶಕರು } - ಸುರೇಶ್ ಆನಗಳ್ಳಿ Aagamana - 2015 - Part 1

ಎಸ್. ಮಾಲತಿ - { ರಂಗಭೂಮಿ ನಿರ್ದೇಶಕಿ } Inspiration to Theatre's(Kannada) by S.Malathi

ಶಂಕರನಾಗ್- SHANKAR NAG - THE LEGEND UNFORGETTABLE

ಶಂಕರನಾಗ್ { ಸಂದರ್ಶನ } Shankar Nag's Last Interview FULL

ಬಿ. ಆರ್. ವೆಂಕಟರಮಣ ಐತಾಳ್ - Agalida Alake । ಅಗಲಿದ ಅಲಕೆ { ನಾಟಕ }

ಬಿ. ಆರ್. ವೆಂಕಟರಮಣ ಐತಾಳ್ --- Agni Mattu Male । ಅಗ್ನಿ ಮತ್ತು ಮಳೆ { ಗಿರೀಶ್ ಕಾರ್ನಾಡ್ }

ಬಿ. ಆರ್. ವೆಂಕಟರಮಣ ಐಥಾಳ್ -- Karnaadarsha | ಕರ್ಣಾದರ್ಶ { ನಾಟಕ }

ಬಿ. ಆರ್. ವೆಂಕಟರಮಣ ಐತಾಳ್ --- Kannada Ramayana । ಕನ್ನಡ ರಾಮಾಯಣ { ನಾಟಕ }

{ನೀನಾಸಮ್ ಸಂಸ್ಕೃತಿ ಶಿಬಿರ } - ಇಂದಿನ ಸಂಶೋಧನೆಗಳಲ್ಲಿ ಹೊಸ ಹೊಳಹುಗಳ ಕೊರತೆ: ಸುಂದರ್ ಸಾರುಕ್ಕೈ

Sunday, October 7, 2018

ರಘುನಂದನ -- Raghunandana --ನಾಟಕ , ಕಾವ್ಯ ಮತ್ತು ಪ್ರತ್ಯಭಿಜ್ಜಾನ

ಮಲೆಗಳಲ್ಲಿ ಮದುಮಗಳು |ಸಿ. ಬಸವಲಿಂಗಯ್ಯ | ನಿರ್ದೇಶಕರ ಮಾತು | ಭಾಗ-೧| MALEGALALLI...

ಬಿ. ಸುರೇಶ್ - { ಸಂದರ್ಶನ } B Suresh special interview for Inchara TV

ಗಿರಿಬಾಲೆ { ಏಕವ್ಯಕ್ತಿ ನಾಟಕ } - ಕಿನ್ನರ ಮೇಳ , ತುಮರಿ Kinnara Mela Thumari - Giribaale 01

ಡಾ / ಶ್ರೀಪಾದ ಭಟ್ - ಟಾಗೋರ್ ಅವರ " ಚಿತ್ರಾ " { ನೄತ್ಯ ನಾಟಕ } Dr. Shripad Bhat presents - "CHITRA - A DANCE DRAMA"

ಚಂಪಾ ಶೆಟ್ಟಿ - ಅಕ್ಕು { ವೈದೇಹಿ ಅವರ ಕಥೆ } Akku Trailer

ಕೆ. ಸುಂದರ ರಾಜ್ - ಸಾವಿನ ದಶಾವತಾರ { ಕೆ. ಸತ್ಯನಾರಾಯಣರ ಕಾದಂಬರಿ } k. Sundara Raj Experiences of death - Mysore -

ಸಾರಿಗೆ ಸಿಗದೆ ಗೋಧ್ರಾ ಗಲಭೆ ಹೆಚ್ಚಿತು; ಸೇನಾಧಿಕಾರಿ ಬಿಚ್ಚಿಟ್ಟ ಸತ್ಯಗಳು!

ಪ್ರಧಾನಿ ಅಭ್ಯರ್ಥಿ ಕುರಿತ ಚಂದ್ರಬಾಬು ನಾಯ್ಡು ಹೇಳಿಕೆಯ ಮರ್ಮವೇನು?

ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ -2018

ಮೂಕಜ್ಜಿಯ ಕನಸುಗಳು ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ..!

ಕವನ ಚಿತ್ತಾರ : ಕೆ.ಎಸ್. ನರಸಿಂಹಸ್ವಾಮಿಯವರ 'ರೇಲ್ವೇ ನಿಲ್ದಾಣದಲ್ಲಿ'

Live -ನೇರ ಪ್ರಸಾರ -Sri Sivan SAR Jayanthi Mahotsavam l Sangeetha Siva Sankaram l JB Keertha...

ಮುರಳೀಧರ ಉಪಾಧ್ಯ ಹಿರಿಯಡಕ - - ರವಿಶಂಕರ ಒಡ್ದಂಬೆಟ್ಟು ಸಮಗ್ರ ಕಾವ್ಯ,

ಸಾಹಿತ್ಯ ಜಗಲಿ ವಾಟ್ಸಾಪ್ ಪತ್ರಿಕೆ

ಪಾತ್ರ ಹುಟ್ಟುವ ಬಗೆಯೇ ಬಲು ಸೋಜಿಗವು

ಶರ್ಮಿಳಾ ರವಿಶಂಕರ್ --- -ರವಿ ಶಂಕರ ಒಡ್ಡಂಬೆಟ್ಟು ನೆನಪುಗಳು

ಮುರಳೀಧರ ಉಪಾಧ್ಯ ಹಿರಿಯಡಕ-- ಮುದ್ದಣನಿಂದ ರವಿಶಂಕರ ಒಡ್ಡಂಬೆಟ್ಟು ವರೆಗೆ

Friday, October 5, 2018

ರವಿಶಂಕರ ಒಡ್ಡಂಬೆಟ್ಟು - ತುಳಸಿ ಗಿಡ

ಸಣ್ಣದು ಸಣ್ಣದು ಎಂದು 
 ಮೂಗು ಮುರಿಯಬೇಡ 
ಮನೆಯಂಗಳದಲ್ಲಿ ನೆಡುವುದು 
 ಆಲದಮರವನ್ನಲ್ಲ 
ತುಳಸಿಗಿಡ

ಬಾಬಾ ರಾಮ್‌ದೇವ್‌ ಕುರಿತ ಪುಸ್ತಕದಲ್ಲಿ ನಾವು ಓದಿ ತಿಳಿಯಬಾರದಂಥದ್ದು ಏನಿದೆ?

ಗೋಪಾಲಕೃಷ್ಣ ಅಡಿಗ - - ಅಡಿಗರ ಸರಳತೆ ಹಾಗೂ ಮುಗ್ಧತೆ - ಶ್ರೀಪಾದ ಪೂಜಾರ್ ಹಾಗೂ ಶ್ರ...

ಡಾ / ವಸುಂಧರಾ ಭೂಪತಿ - [ ಸಂದರ್ಶನ } ಪುಸ್ತಕ ಪ್ರೇಮಿಗಳಿಗಾಗಿ ಬುಕ್‌ ಪಾರ್ಕ್‌...

ಹೊಸ ಪದಕೋಶ - English-Kannada science dictionary all set for release

ಬರಗೂರು ರಾಮಚಂದ್ರಪ್ಪ - - ಗುರು ಹುಡುಕುತ್ತ ಗುರುವಾಗಿ ಬೆಳೆದ ಬಸವರಾಜು

Thursday, October 4, 2018

ರಂಗವಲ್ಲಿ - Rangavali - A Musical Love Ballad | Kannada Music Video | With English S...

ಗಂಡಸರಿಗೆ ಮಾತ್ರ; ಇದು ಸುಖ ಸಂಸಾರಕ್ಕಾಗಿ ಬೆಂಗಳೂರಿನ ಕಾಲೇಜೊಂದರ ಸೂತ್ರ!

ಗುರುಪ್ರಸಾದ್ ಕಾಗಿನೆಲೆ -- - ಕಾವ್ಯನಾಮಗಳ ಕಾರ್ಯಕಾರಣ

ಕಾವ್ಯನಾಮಗಳ ಕಾರ್ಯಕಾರಣ
ಒಬ್ಬ ವ್ಯಕ್ತಿ ಕಾವ್ಯನಾಮದಿಂದ ಯಾಕೆ ಬರೆಯುತ್ತಾನೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ? ಅಂಬಿಕಾತನಯದತ್ತ, ಕಾವ್ಯಾನಂದ, ಮುದ್ದಣ, ಚದುರಂಗ, ಎಂಬ ಹೆಸರುಗಳು ಆಯಾ ವ್ಯಕ್ತಿಗಳ ನಿಜವಾದ ಹೆಸರುಗಳ ಅಸ್ತಿತ್ವದ ಜತೆಗೂ ಯಾಕೆ ಪ್ರಚಲಿತವಾಗಿರುತ್ತದೆ? ಎರಿಕ್ ಬ್ಲೇರ್ ಯಾಕೆ ಜಾರ್ಜ್ ಆರ್ವೆಲ್ ಆಗುತ್ತಾನೆ? ಜಾನಕಿ ವೈದೇಹಿ ಯಾಕೆ ಆಗುತಾರೆ? ತಮ್ಮ ಹುಟ್ಟುಹೆಸರುಗಳ ಜತೆಜತೆಗೂ ಕಾವ್ಯನಾಮಗಳೂ ಉಳಿದುಕೊಳ್ಳುವುದು ಹೇಗೆ?
ಈ ಕಾವ್ಯನಾಮ ಅನ್ನುವುದು ಮೇಲುನೋಟಕ್ಕೆ ವ್ಯಾವಹಾರಿಕ ಅಥವಾ ಕಾರ್ಯಕಾರಣ ಅನಿವಾರ್ಯ ಅನಿಸಬಹುದು. ಒಬ್ಬ ವ್ಯಕ್ತಿ ತನ್ನ ಅನಾಮಿಕತೆಯನ್ನು ಉಳಿಸಿಕೊಳ್ಳುವ ಜರೂರು ಹಲವಾರಿರಬಹುದು. ಕೆಲವರಿಗೆ ತಾವು ಕೆಲಸ ಮಾಡುವ ಸಂಸ್ಥೆಗೆ ನಿಷ್ಠನಾಗಿ ಇರುವ ಜವಾಬ್ದಾರಿಯೂ ಇರಬಹುದು. ಇನ್ನೂ ಹಲವರು ಅನೇಕ ಪ್ರಕಾರಗಳಲ್ಲಿ ಬರೆಯತೊಡಗಿದಾಗ ಆಯಾ ಪ್ರಕಾರಕ್ಕೆ ಬೇಕಾದ ಅಂಕಿತನಾಮಗಳನ್ನು ಇಟ್ಟುಕೊಳ್ಳುವುದು ಸಹಜವೂ ಅನಿಸಬಹುದು.
ಡಾನಾಲ್ಡ್ ವೆಸ್ಟ್‌ಲೇಕ್ ಅನ್ನುವ ಅನೇಕ ಕ್ರೈಮ್ ಥ್ರಿಲ್ಲರ್‌ಗಳನ್ನು ರೆಯುವ ಕಾದಂಬರಿಕಾರನೊಬ್ಬ ತಾನು ಬೇರೆಬೇರೆ ಹೆಸರಿನಲ್ಲಿ ಏಕೆ ಬರೆದೆ ಎಂದು ಸಮಾಜಾಯಿಷಿಗಳನ್ನು ಸ್ವಾರಸ್ಯಕರವಾಗಿ ಸಮರ್ಥಿಸಿಕೊಳ್ಳುತ್ತಾನೆ. "ನಾನು ಬರೆಯಲು ಶುರುಮಾಡಿದ ಹೊಸತರಲ್ಲಿ ಬರಹವನ್ನು ಬಹಳ ಪ್ರೀತಿಸುತ್ತಿದ್ದೆ. Like any new lover I used to do it a lot ,ಒಂದೇ ಸಂಚಿಕೆಯಲ್ಲಿ ನನ್ನ ಎರಡು ಅಥವಾ ಮೂರು ಕಥೆಗಳು ಪ್ರಕಟವಾಗಲು ಶುರುವಾದಾಗ ಸಂಪಾದಕರಿಗೆ ಬೇರೆಬೇರೆ ಹೆಸರಿನಲ್ಲಿ ನನ್ನ ಬರಹಗಳನ್ನು ಪ್ರಕಟಿಸುವುದು ಅನಿವಾರ್ಯವಾಯಿತು. ಅವರಿಗೆ ಅದು ಅಷ್ಟು ಕಷ್ಟ ಅಥವಾ ಕೂಡದು ಅನಿಸಲೇ ಇಲ್ಲ. ಒಟ್ಟು ಸ್ವಾರಸ್ಯಕರವಾದ ಕತೆಯಿದ್ದು ಆಯಾ ಹೆಸರಿಗೂ ಮತ್ತು ಶೈಲಿಗೂ ಇದ್ದ ಸಂಬಂಧದ ಎಳೆ ಮುಂದುವರೆಯುತ್ತಾ ಹೋದರೆ ಸಾಕಾಗಿತ್ತು"
ಆತ ಕೊಡುವ ಇನ್ನೊಂದು ಕಾರಣ ಇನ್ನೂ ಕುತೂಹಲಕರವಾಗಿದೆ. ಅವನ ಪ್ರಕಾರ ಇದೊಂದು ಮಾರುಕಟ್ಟೆಯ ತಂತ್ರ. ಕಾರುಕಂಪೆನಿಗಳ ಮಾರುಕಟ್ಟೆಯ ಸ್ಟ್ರಾಟೆಜಿಯಷ್ಟೇ ತರ್ಕಬದ್ಧವಾದದ್ದು. ಉದಾಹರಣೆಯನ್ನು ನಮ್ಮ ಸಂದರ್ಭಕ್ಕೆ ಸಮೀಕರಿಸಿಕೊಂಡರೆ ಸ್ಥೂಲವಾಗಿ ಹೀಗೆ ಹೇಳಬಹುದೇನೋ-ಟಾಟಾ ಕಂಪೆನಿಯವರೇ ಸಫಾರಿಯನ್ನೂ ಮಾಡುವುದು ಸುಮೋವನ್ನೂ ಮಾಡುವುದು, ಇಂಡಿಕಾ, ಇಂಡಿಗೋ,ನ್ಯಾನೋಗಳನ್ನೂ ಮಾಡುವುದು. ಹಾಗೆಯೇ ಟೊಯೋಟಾದವರೇ ಲ್ಯಾಂಡ್ ಕ್ರುಯ್‌ಸರ್ ಅನ್ನೂ ಮಾಡುತ್ತಾರೆ, ಕರೋಲಾವನ್ನೂ ಮಾಡುತ್ತಾರೆ. ಬೇರೆಬೇರೆ ಕಾರುಗಳನ್ನು ಬೇರೆಬೇರೆ ವರ್ಗದ ಜನ ಉಪಯೋಗಿಸುತ್ತಿದ್ದರೂ ಗ್ರಾಹಕರೆಲ್ಲರಿಗೂ ಇದರ ತಯಾರಕ ಟೊಯೋಟ ಕಂಪೆನಿಯೇ ಎಂದು ಗೊತ್ತಿರುತ್ತದೆ. ತಮಗೆ ಬೇಕಾದನ್ನು ಕಂಪೆನಿ ಕೊಟ್ಟಿರುವುದರಿಂದ ಎಲ್ಲರೂ ಆದಷ್ಟು ಈ ಕಂಪೆನಿಗೆ ನಿಷ್ಟರಾಗಿರುತ್ತಾರೆ. ಟೊಯೋಟಾ ಕಂಪೆನಿಗೂ ಎರಡೂ ವರ್ಗದ ಗ್ರಾಹಕರನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ. ಇಬ್ಬರನ್ನೂ ತೃಪ್ತಿಪಡಿಸಲು ತಮ್ಮ ಪ್ರಯತ್ನವನ್ನು ಕಂಪೆನಿ ಕೂಡ ಮಾಡುತ್ತಿದೆ. ಗ್ರಾಹಕರೂ ಖುಷಿಯಾಗಿದ್ದಾರೆ. ಇದೊಂದು ರೀತಿಯ ಗೆಲ್ಲು-ಗೆಲ್ಲು ಸನ್ನಿವೇಶ.
ಆಗ ಟೊಯೋಟಾ ಕಂಪೆನಿಯವರು ತಮ್ಮ ಕರೋಲಾ, ಕ್ಯಾಮ್ರಿ ಅಥವಾ ಲ್ಯಾಂಡ್ ಕ್ರೂಸರ್‌ಗಳ ಜನಪ್ರಿಯತೆಯನ್ನು ನಂಬಿ ಇದ್ದಕ್ಕಿದ್ದಹಾಗೆ ಲೆಕ್ಸಸ್‌ನ ಅರ್ ಎಕ್ಸ್ ೩೩೦ ಯಂತಹ ಒಂದು ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡುತ್ತಾರೆ. ಈ ರೀತಿಯ ತಂತ್ರ ಬೇರೊಂದು ಗುಂಪಿನ ಗ್ರಾಹಕವರ್ಗವನ್ನೇ ಸೃಷ್ಟಿಸುತ್ತದೆ. ತನ್ನ ಬೇರೆ ಉತ್ಪನ್ನಗಳ ಗುಣಮಟ್ಟದಿಂದ ಜನಪ್ರಿಯವಾಗಿರುವ ಟೊಯೋಟಾದವರದ್ದೇ ಕಾರೆಂದು ಮಿನಿಮಮ್ ಗ್ಯಾರಂಟಿ ಲೆಕ್ಸಸ್ಸಿಗೆ ಇದ್ದೇ ಇರುತ್ತದೆ.
ಆದರೆ ಟೊಯೋಟಾ ಕಂಪೆನಿಯವರಿಗೂ ಗೊತ್ತು, ತಮ್ಮ ಕಂಪೆನಿಯ ಉಳಿಗಾಲವಿರುವುದು ಹೆಚ್ಚುಹೆಚ್ಚು ಕರೋಲ ಬ್ರಾಂಡನ್ನು ಮಾರಿದಾಗ ಮಾತ್ರ ಎಂದು. ಈ ಹೊಸಾ ಕಾರು ತಮ್ಮ ಶ್ರೀಮಂತ ಗ್ರಾಹಕರ ತೃಪ್ತಿಗೆ ಮಾತ್ರ.
ಡಾನಲ್ಡ್ ಬರೆಯುವುದು ಥ್ರಿಲ್ಲರ್‌ಗಳನ್ನು. ಶುದ್ಧ, ಉದ್ದಾಮ ಸಾಹಿತಿಗಳು ಇವನನ್ನು ಸಾಹಿತಿ ಎಂದೂ ಒಪ್ಪಿಕೊಳ್ಳುವುದಿಲ್ಲ. ಇರಲಿ, ನನಗೆ ಕುತೂಹಲವೆನಿಸಿದ್ದು ಈತನ ನಾನಾ ರೀತಿಯ ಪರಕಾಯ ಪ್ರವೇಶ. ಈತ ಅರವತ್ತರ ದಶಕದಲ್ಲಿ ಬೇರೆಬೇರೆ ಹೆಸರುಗಳಲ್ಲಿ ಸಣ್ಣಕತೆಗಳನ್ನು ಬರೆಯುತ್ತಿದ್ದ. ನಂತರ ಈತನಿಗೆ ಒಂದು ಕಾದಂಬರಿಯನ್ನು ಬರೆಯಬೇಕು ಅನ್ನಿಸಿದಾಗ ರಿಚರ್ಡ್ ಸ್ಟಾರ್ಕ್ ಎಂಬ ಹೆಸರಿನಲ್ಲಿ "ದಿ ಹಂಟರ್" ಎಂಬ ಹೆಸರಿನ ಕಾದಂಬರಿಯನ್ನು ಬರೆದು ಗೋಲ್ಡ್ ಮೆಡಲ್ ಎಂಬ ಆಗಿನ ಒಂದು ಪ್ರಸಿದ್ಧ ಪ್ರಕಾಶನ ಸಂಸ್ಥೆಗೆ ಕಳಿಸಿದ್ದನಂತೆ. ಆದರೆ, ಆ ಪ್ರಕಾಶನ ಸಂಸ್ಥೆಯವರು ಈ ಕಾದಂಬರಿಯನ್ನು ತಿರಸ್ಕರಿಸಿದರು. ಇದರ ಕೇಂದ್ರ ಪಾತ್ರದ ಹೆಸರು ಪಾರ್ಕರ್ ಎಂದು. ಇದೇ ಪುಸ್ತಕವನ್ನು ಪಾಕೆಟ್ ಬುಕ್ಸ್ ಎಂಬ ಪ್ರಕಾಶನ ಸಂಸ್ಥೆ ಕಾದಂಬರಿಯನ್ನಾಗಿ ಪ್ರಕಟಿಸಿದ್ದೇ ಅಲ್ಲದೇ , ಪಾರ್ಕರನನ್ನೇ ಕೇಂದ್ರಪಾತ್ರವಾಗಿಟ್ಟುಕೊಂಡು ವರ್ಷಕ್ಕೆ ಮೂರು ಕಾದಂಬರಿ ಬರೆದುಕೊಡುತ್ತೀರಾ ಎಂದು ಕೇಳಿದರಂತೆ. ಆದರೆ ಆ ಪ್ರಕಾಶನ ಸಂಸ್ಥೆಯ ಒಂದು ಕರಾರೆಂದರೆ ಈ ಪಾರ್ಕರ್ ಸರಣಿಯ ಕಾದಂಬರಿಗಳೆಲ್ಲಾ ರಿಚರ್ಡ್ ಸ್ಟಾರ್ಕ್ ಎಂಬುವವನ ಹೆಸರಿನಲ್ಲಿಯೇ ಬರೆಯಬೇಕು ಎಂದು. ಈತ ಅದೇ ಹೆಸರಲ್ಲಿ ಅನೇಕ ಜನಪ್ರಿಯ ಕಾದಂಬರಿಗಳನ್ನು ಬರೆದ. (ಹಾಲಿವುಡ್ಡಿನ ಬ್ಲಾಕ್‌ಬಸ್ಟರ್ "ಪಾಯಿಂಟ್ ಬ್ಲಾಂಕ್" ಎನ್ನುವ ಸಿನೆಮಾ ಇವನ ಕಾದಂಬರಿಯನ್ನೇ ಅದರಿಸಿದ್ದು. ನಂತರ ಇತ್ತೀಚಿನ ದಿನಗಳಲ್ಲಿ ಮೆಲ್ ಗಿಬ್ಸನ್ ಇದೇ ಕಾದಂಬರಿಯನ್ನು ರ‍್ಯಾನ್ಸಮ್ ಎಂಬ ಹೆಸರಲ್ಲಿ ತಯಾರಿಸಿದ್ದ)
ಹನ್ನೆರಡು ವರ್ಷ ರಿಚರ್ಡ್ ಸ್ಟಾರ್ಕ್ ಎನ್ನುವ ಹೆಸರಿನಲ್ಲಿ ಈತ ಎಷ್ಟು ಬರೆದಿದ್ದ ಎಂದರೆ ಈತ ತನ್ನ ಹೆಸರಿಗಿಂತಲೂ ರಿಚರ್ಡ್ ಸ್ಟಾರ್ಕ್ ಎಂಬ ಹೆಸರಿನಲ್ಲಿಯೇ ಎಲ್ಲ ಕಡೆ ಪರಿಚಿತನಾಗಿದ್ದ. ಈತ ಎಲ್ಲಿಗೆ ಹೋದರೂ ಪಾಯಿಂಟ್ ಬ್ಲಾಂಕ್ ಬರೆದ ರಿಚರ್ಡ್ ಸ್ಟಾರ್ಕ್ ನಾನೇ ಎಂದು ಪರಿಚಯಮಾಡಿಕೊಳ್ಳುವ ಅನಿವಾರ್ಯತೆ ಇವನಿಗೆ ಬಂದಿತ್ತು.
ಎಲ್ಲ ಸೃಜನಶೀಲ ಕ್ರಿಯೆಯಂತೆ ರಿಚರ್ಡ್ ಸ್ಟಾರ್ಕನ ಬರವಣಿಗೆಗೂ ಒಂದು ಮಿತಿಯಿತ್ತು. ಈತನ ಹೀರೋ ಪಾರ್ಕರ್ ಬಡವಾಗಹತ್ತಿದ್ದ. ಸ್ಟಾರ್ಕ್ ತನ್ನ ಬರವಣಿಗೆಯ ಮಜಾ ಕಳೆದುಕೊಂಡಿದ್ದ. ನಂತರ ಇನ್ನು ಬರೆಯಲಾರೆ ಎನ್ನಿಸಿದಾಗ ರಿಚರ್ಡ್ ಸ್ಟಾರ್ಕ್ ಎನ್ನುವ ಹೆಸರಿನಲ್ಲಿ ಬರೆಯುವುದನ್ನು ಈತ ನಿಲ್ಲಿಸಿದ.
ಇಷ್ಟು ಹೊತ್ತಿಗೆ ವೆಸ್ಟ್‌ಲೇಕ್‌ನ ಹೆಸರು ಬೇರೇ ಇನ್ನಿತರ ಬರಹಗಳಿಂದ ಜನಪ್ರಿಯವಾಗಿತ್ತು. ಅಷ್ಟೇ ಅಲ್ಲ ಇನ್ನೂ ಬೇರೆಬೇರೆ ಹೆಸರುಗಳಲ್ಲಿ ಈತ ಬರೆಯುವುದನ್ನು ಮುಂದುವರೆಸಿದ್ದ. ಆದರೆ ಸ್ಟಾರ್ಕ್ ತನ್ನ ಬರಹದ ಹದವನ್ನು ಕಳೆದುಕೊಂಡಿದ್ದ. ಆಗ ಏವನ್ ಅನ್ನುವ ಪ್ರಕಾಶನ ಸಂಸ್ಥೆ ಈ ಸ್ಟಾರ್ಕ್ ಬರೆದ ಕಾದಂಬರಿಗಳನ್ನು ಪ್ರಕಟಿಸಲು ಮುಂದಾಯಿತು. ಆದರೆ ಅವರು ವೆಸ್ಟ್‌ಲೇಕ್ ನ ಮೂಲಹೆಸರಿನಲ್ಲಿಯೇ ಪ್ರಕಟಿಸುತ್ತೇವೆ ಎಂದು ಹಟಹಿಡಿದಿದ್ದರು. ಅವರ ಪ್ರಕರ ಸ್ಟಾರ್ಕ್‌ನ ಹೆಸರಿನ ಜಾದೂ ಮುಗಿದಿತ್ತು ಅದೇ ಪಾರ್ಕರ್ ಸರಣಿಯ ಕಾದಂಬರಿಗಳು ವೆಸ್ಟ್‌ಲೇಕ್‌ನ ಹೆಸರಲ್ಲಿ ಪ್ರಕಟಿಸಲ್ಪಟ್ಟವು.
ನಂತರ ಹದಿನೈದು ವರ್ಷಗಳ ನಂತರ ಯಾವುದೋ ಒಂದು ಪಾರ್ಕರ್ ಪಾತ್ರವಿರುವ ಚಿತ್ರಕ್ಕೆ ಚಿತ್ರಕತೆ ಬರೆದ ವೆಸ್ಟ್‌ಲೇಕ್‌ಗೆ ಆ ಚಿತ್ರದ ನಿರ್ದೇಶಕ ಈ ಚಿತ್ರದ ಚಿತ್ರಕತೆಗಾರನ ಹೆಸರನ್ನು ರಿಚರ್ಡ್ ಸ್ಟಾರ್ಕ್ ಎಂದೇ ಹಾಕಬೇಕು ಎಂದು ಒತ್ತಾಯಿಸಿದ. ಏಕೆಂದರೆ ಪಾರ್ಕರ್ ಸರಣಿಯ ಕಾದಂಬರಿಗಳು ಸ್ಟಾರ್ಕನ ಹೆಸರಿನ ಜತೆಗೆ ಥಳಕು ಹಾಕಿಕೊಂಡುಬಿಟ್ಟಿಯಾಗಿತ್ತು. ಆದರೆ ಒಂದು ಸಣ್ಣ ತೊಂದರೆಯಿತ್ತು. ಹಾಲಿವುಡ್ ಚಿತ್ರಕ್ಕೆ ಚಿತ್ರಕತೆ ಬರೆಯುವವರ"ರೈಟರ್ಸ್ ಗಿಲ್ದ್" ಅನ್ನುವ ಬರಹಗಾರರ ಸಂಘದ ಸದಸ್ಯರಾಗಬೇಕು. ಅದಕ್ಕೆ ವೆಸ್ಟ್‌ಲೇಕ್ ಸದಸ್ಯನಾಗಿದ್ದನೇ ಹೊರತು ಸ್ಟಾರ್ಕ್ ಅಲ್ಲ. ಹೀಗೆ ಯಾವ ಜನಪ್ರಿಯ ಹೆಸರಿನಲ್ಲಿ ಆತ ಈ ಪಾರ್ಕರ್ ಎಂಬ ಪಾತ್ರವನ್ನು ಸೃಷ್ಟಿಸಿದ್ದನೋ ಅದೇ ಹೆಸರಿನಲ್ಲಿ ಈತ ತನ್ನದೇ ಸಿನೆಮಾಕ್ಕೆ ಚಿತ್ರಕತೆ ಬರೆಯಲಾಗಲಿಲ್ಲವಂತೆ. (ನಂತರ ಈ ಸಣ್ಣ ತೊಡಕನ್ನು ಆತ ಹೇಗೋ ನಿವಾರಿಸಿಕೊಂಡ)
ಒಬ್ಬ ವ್ಯಕ್ತಿ ತಾನು ಬರೆದ ಬರಹಗಳ, ಕಾದಂಬರಿಗಳ ಮೇಲೆ ಹಕ್ಕು ಸಾಧಿಸಲು ಒದ್ದಾಡಬೇಕಾಗಿತ್ತು. ಈತ ಹೇಳುತ್ತಾನೆ. "ಕೆಲವೊಮ್ಮೆ ನನಗನಿಸುತ್ತದೆ, ನನಗೆ ನಾನು ರಿಚರ್ಡ್ ಸ್ಟಾರ್ಕ್ ಎಂದುಕೊಂಡಿದ್ದಾಗ ಮಾತ್ರ ಆ ಪಾರ್ಕರ್ ಪಾತ್ರವನ್ನು ಸೃಷ್ಟಿಸಲಾಗುತ್ತಿತ್ತೇನೋ. ಹೆಚ್ಚು ಹೆಚ್ಚು ವೆಸ್ಟ್‌ಲೇಕ್ ನಾನಾಗುತ್ತಿದ್ದಾಗ ಈ ಸ್ಟಾರ್ಕ್ ಅನ್ನುವ ಬರಹಗಾರನೊಳಗೆ ನನಗೆ ಪರಕಾಯ ಪ್ರವೇಶ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ, ನಾನು ಹೆಚ್ಚು ಸ್ಟಾರ್ಕ್ ಆಗಿದ್ದಾಗ ಬಹಳ ಸಮಯ ನನ್ನ ಹೀರೋ ಪಾರ್ಕರನ ಜತೆ ಕಾಲ ಕಳೆಯುತ್ತಿದ್ದ ಕಾರಣವೇನೋ, ನಾನು ವೆಸ್ಟ್‌ಲೇಕ್ ಆಗಲು ಸಾಧ್ಯವೇ ಆಗಲಿಲ್ಲ. ಒಂದರ ಅಸ್ತಿತ್ವವನ್ನು ಪಡೆಯಲು ಇನ್ನೊಂದನ್ನು ಕೊಲ್ಲಬೇಕಾಗಿತ್ತು."
ಬರಹವನ್ನೇ ವೃತ್ತಿಮಾಡಿಕೊಂಡವರಿಗೆ ಈ ಅಂಕಿತನಾಮಗಳು, ಕಾವ್ಯನಾಮಗಳು ಹೀಗೆ ಕೆಲವೊಮ್ಮೆ ಅನಿವಾರ್ಯವಾಗಬಹುದು. ಮೊದಲೇ ಹೇಳಿದಹಾಗೆ ಅನೇಕ ವ್ಯಾವಹಾರಿಕ ಕಾರಣಗಳು ಇಲಿ ಮುಖ್ಯವಾಗಬಹುದು. ಆದರೆ ತನ್ನ ಅಸ್ಮಿತೆಯನ್ನೇ ಮರೆಸುವ ಎರಡೆರಡು ಆತ್ಮಗಳನ್ನು ಜೀವಿಸುವ ಈ ವೆಸ್ಟ್‌ಲೇಕನ ಕತೆ ಒಂದು ವಿಚಿತ್ರ ಎನಿಸಬಹುದು. ಇನ್ನೂ ರೋಚಕವಾದ ವಿಷಯವೆಂದರೆ ವೆಸ್ಟ್‌ಲೇಕೇ ಸ್ಟಾರ್ಕ್ ಎನ್ನುವುದು ಬಹಳ ಜನಕ್ಕೆ ಗೊತ್ತಿತ್ತು.
ಶ್ರೀನಿವಾಸ, ಕಾವ್ಯಾನಂದ, ಚದುರಂಗ, ಶ್ರೀರಂಗ-ಈ ಕಾವ್ಯನಾಮಗಳು ಹೇಗೆ ಬಂದ ಸಂದರ್ಭ ನನಗೆ ಗೊತ್ತಿಲ್ಲ. ಆದರೆ ಈ ರೀತಿಯ ಅಸ್ಮಿತೆಯ ಪ್ರಶ್ನೆ ಈ ಕಾವ್ಯನಾಮಗಳನ್ನಿಟ್ಟುಕೊಂಡವರನ್ನು ಕಾಡಿತ್ತೋ ಇಲ್ಲವೋ ಎನ್ನುವುದೂ ನನಗೆ ಗೊತ್ತಿಲ್ಲ. ಮಾಸ್ತಿಯವರಿಗೆ ಶ್ರೀನಿವಾಸ ಎಂಬ ಹೆಸರು ಕತೆ ಬರೆಯುವ ತುರ್ತಿಗೆ ಇನ್ನೊಂದು ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಬೇಕೆನ್ನುವ ಜರೂರಿಗಾಗಿ ಸೃಷ್ಟಿಯಾಯಿತು ಅನ್ನಿಸುವುದಿಲ್ಲ. (ಇದು ನನ್ನ ತಪ್ಪುಗ್ರಹಿಕೆಯಾಗಿದ್ದರೆ ಕ್ಷಮಿಸಿ) ಇದು ಭಾವನಾತ್ಮಕವಾಗಿ ಮುಖ್ಯವಾಗಿತ್ತು ಎಂದು ಮಾತ್ರ ನನಗೆ ಅನಿಸುತ್ತದೆ. ಹಾಗೆಯೇ ಕೂಡಸಂಗಮದೇವ, ಗಿರಿಧರ ಗೋಪಾಲ, ಪುರಂದರ ವಿಠಲ ಎನ್ನುವ ಕಾವ್ಯನಾಮಗಳು ಭಕ್ತಿಭಾವಗಳ ತುರ್ತೇ ಹೊರತು ಮೇಲೆ ಹೇಳಿದ ವ್ಯಾವಹಾರಿಕ ತುರ್ತಲ್ಲ.
ಕಾವ್ಯನಾಮಗಳನ್ನಿಟ್ಟುಕೊಂಡು ಬರೆಯುವುದರ ಚರಿತ್ರೆ ಬಹಳ ಹಳೆಯದು. ಹೆಂಗಸರು ಅಪರಾಧ ತನಿಖೆಗಳ ಬಗ್ಗೆ ಬರೆಯುವಾಗ ಅಥವಾ ತಮ್ಮನ್ನು ಗಂಡು ವಿಮರ್ಶಕರು ಸ್ವಲ್ಪ ಗಂಭೀರವಾಗಿ ಪರಿಗಣಿಸಲಿ ಎಂದೂ ತಮ್ಮ ನಿಜನಾಮದಲ್ಲಿ ಬರೆಯುತ್ತಿದ್ದ ಕಾಲ ಒಂದಿತ್ತು. ಔಟ್ ಆಫ್ ಆಫ್ರಿಕಾದಂತ ಕಾದಂಬರಿ ಬರೆದ ಕ್ಯಾರೆನ್ ಬ್ಲಿಕ್ಸೆನ್ ಅಥವಾ ಜನಪ್ರಿಯ ಹ್ಯಾರಿ ಪಾಟರ್ ಸರಣಿ ಬರೆದ ಜೆ.ಕೆ. ರೌಲಿಂಗ್ (ಹೆಣ್ಣು ಅಥವಾ ಗಂಡು ಎಂದು ಗೊತ್ತಾಗದೇ ಇರಲು ಈಕೆ ಜೆ.ಕೆ. ಎಂಬ ಇನಿಶಿಯಲ್‌ಗಳನ್ನು ಬಳಸಿದ್ದಳು) ಕೂಡ ಇದಕ್ಕೆ ಅಪವಾದವಲ್ಲ. ಹಾಗೆಯೇ ಪ್ರೇಮಕಥೆಗಳನ್ನು ಗಂದಸರು ಬರೆಯಬೇಕಾದರೆ ಹೆಣ್ಣು ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದ ನಿದರ್ಶನಗಳೂ ಇವೆ.
ಸದ್ಯ ಕನ್ನಡದಲ್ಲಿ ಜೋಗಿ ಎಂಬ ಹೆಸರಿನಲ್ಲಿ ಬರೆಯುತ್ತಿರುವ ಗಿರೀಶ್ ರಾವ್‌ರವರ ನದಿಯ ನೆನಪಿನ ಹಂಗು ಕಾದಂಬರಿಯಲ್ಲಿ ಕಾದಂಬರಿಯ ನಾಯಕ ರಘುನಂದನ "ಮನುಷ್ಯನಿಗೆ ಒಂದು ಹಂಬಲವಿರುತ್ತೆ. ಅಜ್ಞಾತವಾಗಿ ಉಳಿಯುವುದು ಅವನಿಗೆ ಆಗದ ಕೆಲಸ. ತಾನು ತಾನಾಗಿಯೇ ಪ್ರಕಟಗೊಳ್ಳಬೇಕು ಎನ್ನುವ ಅದಮ್ಯ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ" ಎಂದು ಒಂದು ಸಂದರ್ಭದಲ್ಲಿ ಸ್ವಗತಪಡುತ್ತಾನೆ. ಇದು ನನಗೆ ಯಾಕೆ ನೆನಪಾಗುತ್ತಿದೆಯೆಂದರೆ ಜೋಗಿಯವರು ಬೇರೆಬೇರೆ ಹೆಸರುಗಳಿಂದ ಬರೆಯುತ್ತಿದ್ದಾಗಲೇ ಅವರ ಜಾನಕಿ ಕಾಲಂ ಪುಸ್ತಕ ಪ್ರಕಟವಾಯಿತು. ಅದರ ಪುಟ್ಟ ಪರಿಚಯದಲ್ಲಿ "ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಸಾಹಿತಿ ಈಗ ಇಂvಪ್ಪಲ್ಲಿ ವಾಸಿಸುತ್ತಿದ್ದಾರೆ ಎಂಬ ಇತ್ಯೋಪರಿಗಳಿಂದ ಮುಕ್ತವಾಗುವ ಹಂಬಲ ಮತ್ತು ಅನಿವಾರ್ಯತೆಯ ಕಾರಣಗಳಿಂದ ಪರಿಚಯವನ್ನು ಜಾನಕಿ ಎಂಬಲ್ಲಿಗೆ ಸೀಮಿತಗೊಳಿಸಲಾಗಿದೆ" ಎಂದು ಬರೆಯುತ್ತಾರೆ. ಹೀಗೆ ಬರೆಯುವಾಗ ನಾವು ಕೇವಲ ಬರಹದಿಂದ ಮಾತ್ರ ಬರಹಗಾರನನ್ನು ಪ್ರೀತಿಸುತ್ತೇವೆ. ಸಾಹಿತಿಯ ನಿಜವಾದ ಅಸ್ಮಿತೆ ಯಾರಿಗೂ ಗೊತ್ತಿರದ ಕಾರಣ ಬರಹ ಮತ್ತು ಓದುಗನ ನಡುವೆ ಈ "ಸಾಹಿತಿ" ಎನ್ನುವ ಮಾನುಷಿಕ ಫ್ಯಾಕ್ಟರ್ ಅಳಿಸೇ ಹೋಗುತ್ತದೆ. ಸಾಹಿತಿಗೂ ತನ್ನನ್ನು ಮತ್ತು ತನ್ನ ಲೇಖಕರನ್ನು ಬಂಧಿಸುವುದು ತನ್ನ ಬರಹಗಳು ಮಾತ್ರ ಎಂಬ ಅರಿವು ಮಾತ್ರ ಇದ್ದಾಗ ಬರಹಕ್ಕೆ ಒಂದು ವಿಚಿತ್ರ ಅಗೋಚರ ಆಪ್ತತೆ ಬಂದುಬಿಡುತ್ತದೆ. ಆಗ ಜಾನಕಿ ಯಾರು ಅನ್ನುವುದು ಮುಖ್ಯವಾಗುವುದೇ ಇಲ್ಲ. ಜಾನಕಿಯನ್ನು ಜನ ಪ್ರೀತಿಸಿದ್ದು ಇದೇ ಕಾರಣಕ್ಕೆ.
ಬಹಳ ವರ್ಷಗಳ ಕೆಳಗೆ ಸುಧಾ ವಾರಪತ್ರಿಕೆಯ"ನೀವು ಕೇಳಿದಿರಿ?" ವಿಭಾಗದ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಿದ್ದರು ಎಂಬುದನ್ನು ಬಹಳ ಗುಪ್ತವಾಗಿಡುತ್ತಿದ್ದರು. ಉತ್ತರಿಸುವ ವ್ಯಕ್ತಿ ಸತ್ತಾಗ ಮಾತ್ರ ಆ ವ್ಯಕ್ತಿಯ ಪರಿಚಯವನ್ನು ಬಹಿರಂಗಪಡಿಸುತ್ತಿದ್ದರು. ಒಂದಿಷ್ಟುಕಾಲ ಜಿ ಪಿ ರಾಜರತ್ನಂರವರು ಈ ವಿಭಾಗಕ್ಕೆ ಉತ್ತರ ಕೊಡುತ್ತಿದ್ದರು. ಒಂದು ವಾರ ಯಾರೋ ಪ್ರಶ್ನಿಸಿದ್ದರು "ನೀವು ಸತ್ತಾಗ ಮಾತ್ರ ನೀವು ಯಾರು ಎಂದು ನಮಗೆ ಗೊತ್ತಾಗುತ್ತದೆ. ನೀವು ಯಾವಾಗ ಸಾಯುತ್ತೀರಿ?" ರಾಜರತ್ನಂರವರೂ ತುಂಟತನದಿಂದ ಏನೋ ಉತ್ತರಿಸಿದ್ದರು. ಆದರೆ ಮುಂದಿನವಾರವೇ ರಾಜರತ್ನಂರವರು ತೀರಿಕೊಂಡಿದ್ದು ತೀರ ಆಕಸ್ಮಿಕವಾದರೂ ಈ ಪ್ರಶ್ನೆಯನ್ನು ಕೇಳಿದವರ ಪಾಡು ಹೇಗಾಗಿರಬೇಡ. ಬಹಳ ನೊಂದುಕೊಂಡು ನಂತರ ಪ್ರಶ್ನೆ ಕೇಳಿದವರು ಒಪ್ಪೋಲೆಯನ್ನು ಬರೆದಿದ್ದರು. ಪಾಪ, ಇದರಲ್ಲಿ ಅವರ ತಪ್ಪೇನೂ ಇರಲಿಲ್ಲ.
ಈ ಕಾವ್ಯನಾಮಗಳ ಮೇಲೆ ನನ್ನ ಗೌರವ ಈಗ ಇನ್ನೂ ಜಾಸ್ತಿಯಾಗಿದೆ. ಒಂದು ಕಾಲದಲ್ಲಿ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಇಟ್ಟುಕೊಂಡ ಹೆಸರನ್ನು ಜನಪ್ರಿಯವಾದ ಮೇಲೆ ಮುಚ್ಚಿಟ್ಟುಕೊಳ್ಳುವುದು ಇನ್ನೂ ದೊಡ್ದ ಕೆಲಸ. ಅದು ಕೆಲವೊಮ್ಮೆ ದುಸ್ತರ ಕೂಡ.
Comments
😊
Manage
Repl
T
2
Reply4h
Reply4h