stat Counter



Sunday, August 23, 2020

ಮುರಳೀಧರ ಉಪಾಧ್ಯ ಹಿರಿಯಡಕ - ಡಾ| ಎಸ್. ವಿ. ಪರಮೇಶ್ವರ ಭಟ್ಟ, "ಮಹಾಪರಂಪರೆಯ’ ಯ ಸೇತು ಬಂಧ


ಸಾರಸ್ವತ ಲೋಕದ ಅನನ್ಯ ತಾರೆಯೊಂದು ಕಣ್ಮರೆಯಾಯಿತು. ಸಜ್ಜನ, ಸಶಕ್ತ ಸೃಜನಶೀಲ, ಹಳತು-ಹೊಸತರ ಮಧ್ಯೆಯ ಅದ್ಭೌತ ಕೊಂದಿ, ಪಂಡಿತ, ಬರೆಹಗಾರ ಡಾ| ಎಸ್. ವಿ.ಪಿ. ಇನ್ನಿಲ್ಲ. ಆದರೆ ಅವರು ಕನ್ನಡದ ಸಾಹಿತ್ಯ ಲೋಕಕ್ಕೆ ನೀಡಿದ ಅನರ್ಘ್ಯ ಕೊಡುಗೆಗಳು ಅವರನ್ನು ಚಿರಂತನವಾಗಿಸಿವೆ. ’ತರಂಗ’ ಈ ಬರೆಹದ ಮೂಲಕ ಶ್ರದ್ಧಾಪೂರ್ವಕ ಭಾವಾಂಜಲಿ ಸಲ್ಲಿಸುತ್ತಿದೆ.


ಡಾ| ಎಸ್. ವಿ. ಪರಮೇಶ್ವರ ಭಟ್ಟರು (೧೯೧೪-೨೦೦೦ಫ್ ತನ್ನ ಅಳು ನುಂಗಿ ನಗುವ ಮನೋಧರ್ಮ, ಅತ್ಯುನ್ನತಿಯ ಅಧ್ಯಾಪನ-ಭಾಷಣ ಕಲೆ, ಶಿಷ್ಯ ವಾತ್ಸಲ್ಯ, ಹಳೆಯ ಛಂದೋರೂಪಗಳ ಸಾತತ್ಯ ಹಾಗೂ ಅಭಿಜಾತ ಪರಂಪರೆಯ ಸಂಸ್ಕೃತ ಕೃತಿಗಳ ಭಾಷಾಂತರಗಳಿಂದ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ.
೧೯೧೪ರ ಫೆಬ್ರವರಿ ಎಂಟರಂದು ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಸದಾಶಿವರಾಯ-ಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದ ಎಸ್. ವಿ. ಪರಮೇಶ್ವರ ಭಟ್ಟರು, ಕಮಕೋಡು ನರಸಿಂಹ ಶಾಸ್ತ್ರೀ, ವಿ.ಸೀ., ಬಿ.ಎಂ.ಶ್ರೀ., ಟಿ.ಎಸ್. ವೆಂಕಣ್ಣಯ್ಯ , ತೀ.ನಂ.ಶ್ರೀ., ಡಿ.ಎಲ್. ನರಸಿಂಹಾಚಾರ್ಯ-ಇವರೆಲ್ಲರ ಶಿಷ್ಯನಾಗಿ ಕನ್ನಡ ಕಲಿತು. ಕನ್ನಡ ಎಂ.ಎ. ಅಧ್ಯಯನ ಮಾಡಿದರು. ೧೯೩೯ರಿಂದ ಕನ್ನಡ ಪ್ರಾಧ್ಯಾಪಕರಾದರು. ೧೯೬೯-೧೯೭೪ರ ಅವಧಿಯಲ್ಲಿ ಅವರು ಮಂಗಳುರಿನ ಸ್ನಾತಕೋತ್ತರ ಕೇಂದ್ರದ  ನಿದೇರ್ಶಕರಾಗಿದ್ದರು. ಅವರ ಸಮಗ್ರ ಕೃತಿಗಳ ಗ್ರಾತ್ರ., ವಿಷಯ ವೈವಿಧ್ಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ’ರಾಘಿಣೆ’, ’ಗಗನ ಚುಕ್ಕಿ’, ’ಅಂಚೆಯ ಪೆಟ್ಟಿಗೆ’, ’ಇಂದ್ರಗೋಪ’, ’ಸಂಜೆಮಲ್ಲಿಗೆ’-ಇವು ಅವರ್ ಕವನ ಸಂಕಲನಗಳು. ಅವರು ಭಾವ ಗೀತೆಗಳಿಗಿಂತ ಹೆಚ್ಚಾಗಿ ಮುಕ್ತಕಗಳ ಕವಿ. ’ಇಂದ್ರಚಾಪ’, ’ಸುರಗ ಸುರಹೊನ್ನೆ’, ’ಚಂದ್ರವೀಥಿ;, ’ಚಿತ್ರಪಥ’ ’ತುಂಬೆ ಹೂವು’,, ’ಮಳೆಬಿಲ್ಲು’-ಇವು ಅವರ ಮುಕ್ತಕ ಸಂಕಲನಗಳು. ಕಾಳಿದಾಸ, ಭಾಸ, ಹರ್ಷ, ಭವಭೂತಿ-ಇವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿರುವ ಪರಮೇಶ್ವರ ಭಟ್ಟರು ಕನ್ನಡದ ಪ್ರಧಾನ ಭಾಷಾಂತರಕಾರರಲ್ಲೊಬ್ಬರು. ಅಶ್ವಘೋಷನ ’ಬುದ್ಧಚರಿತೆ’, ’ಅಮರು ಶತಕ’, ಭತೃಹರಿಯ ’ ಶತಕತಯ . ಜಯದೇವನ ’ಗೀತಗೋವಿಂದ;, ಹಾಲರಾಜನ ಗಾಥಾ ಸಪ್ತಶತಿ’, ಲಕ್ಷ್ಮೀನೃಸಿಂಹ ಕವಿಯ ’ಕವಿಕೌಮುದಿ’-ಇವು ಅವರ  ಭಾಷಾಂತರ ಕೃತಿಗಳು. ’ಕಾಳಿದಾಸ ಮಹಾಸಂಪುಟ’ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿದೆ.

ಕವಿ ಪರಮೇಶ್ವರ ಭಟ್ಟಾರು ತನ್ನ್ ಯೌವನದ ದಿನಗಳಲ್ಲಿ ಕೆಲವು ಒಳ್ಳೆಯ ಭಾವಗೀತೆಗಳನ್ನು ಬರೆದರು. ’ಹೂವೊಂದರ ಕಥೆ’, ’ತಿಳೆಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು’ ಎಂದು ಆರಂಭವಾಗುವ ’ಒಂದು ರಾತ್ರಿ’, ತಿಳಿನಗೆ ಮೂಡಿಸುವ ಅತಿಥಿಗೆ ಇವು ಅವರ್ ಕೆಲವು ಪ್ರಸಿದ್ಧ ಭಾವಗೀತೆಗಳು.
ಭಾವಗೀತೆಗಳಿಂದ ಮುಕ್ತಕಗಳತ್ತ ಹೊರಳಿದ ಪರಮೇಶ್ವರ ಭಟ್ಟರ ’ಇಂದ್ರಚಾಪ’ ೧೯೬೫ರಲ್ಲಿ ಪ್ರಕಟವಾಯಿತು ’ ಇಂದ್ರಚಾಪದಲ್ಲಿ ೧೨೬೦ ಸಾಂಗತ್ಯ ರೂಪದ ಮುಕ್ತಕಗಳಿವೆ. ಪತ್ನಿಯ ದೀರ್ಘ ಕಾಲದ ಅನಾರೋಗ್ಯದಿಂದ ಪರಮೇಶ್ವರ ಭಟ್ಟರಾ ಸಾಂಸಾರಿಕ ಜೀವನ ಸಂಕಟ-ಸಮಸ್ಯೆಗಳಿಂದ ತುಂಬಿ ಹೋಯಿತು. ತನ್ನ ಗೋಳಿನ ಕತೆಯನ್ನು ಕವಿ’ ಇಂದ್ರ ಚಾಪದಲ್ಲಿ ಬಣ್ಣಿಸಿದ್ದಾರೆ- "ಸಂಸಾರದೊರಳಿಗೆ ವಿಧಿ ರುಬ್ಬು ಗುಂಡಾಗಿ ಚಟ್ನಿ ಮಾಡಿದನೆನ್ನ ತಿರುವಿ "ಒಲೆಯ ಮಂದಿರುವಾಗ ಪಂಪನ ಪದ್ಯವನ್ನ್ಯ್ ಅಕ್ಕಿ ತೊಳೆಯುವಾಗ ಕಾಳಿದಾಸನ ಕಾವ್ಯವನ್ನು ನೆನಪಿಸಿಕೊಳ್ಳುವ, ಸಂಸಾರ ತಾಪತ್ರಯಗಳಿಂದ ಕಂಗಾಲಾದ ಕವಿಯನ್ನು ’ಇಂದ್ರ ಚಾಪದಲ್ಲಿ ನಾವು ಕಾಣುತ್ತೇವೆ. ಗೃಹಸ್ಥ ಜೀವನ್ದ ಪ್ರೀತಿ ವಾತ್ಸಲ್ಯ್, ಲಾಲನೆ-ಪಾಲನೆ, ಸಂಯಮ -ಸಂಕಟಗಳು ’ಇಂದ್ರಚಾಪದಲ್ಲಿ ಮಿಂಚುತ್ತವೆ.
ಏಳುನೂರು ತ್ರಿಪದಿಗಳು ಸಂಕಲನವಾಗಿರುವ ’ಸುರಗಿ-ಸುರಹೊನ್ನೆ’ ೧೯೬೭ರಲ್ಲಿ ಪ್ರಕಟ್ವಾಯಿತು. ಇದರಲ್ಲಿ ಒಬ್ಬ್ಫ಼್ ಗೃಹಸ್ಥ ತನ್ನ  ಹೆಂಡತಿಯೊಂದಿಗೆ ಜೀವನದ ಕಟು-ಮಧುರ ಅನುಭವಗಳನ್ನು ಹಂಚಿಕೊಳ್ಳುತ್ತಾನೆ. ಕವಿ ಬರೆದಿರುವಾಮ್ಟೇ, "     ಹೂವಿನಂಥ ನಮ್ಮ ಮನಸ್ಸು ಬಾಡುತ್ತ ಬಂದರೆ ನಮ್ಮ ಆಯು ಮುಗಿಯುತ್ತ ಬಂದಂತೆಯೇ ಎಂಬ ತತ್ತ್ವ ಇಲ್ಲಿದೆ. ಬಾಡಿದರೂ ಬಣ್ಣವಳಿಸಿ ಹೋಗದ ಸುರಗಿಯಾಗಬೇಕು ನಮ್ಮ ಮನಸ್ಸು ಎಂಬುದು ಈ ನಾಯಕನ ನಿಲುವು. ಆದರೆ ’ಸುರಗಿ-ಸುರಹೊನ್ನೆಯ ಸರಸಿ ಮುದ್ದಣನ್ ಮನೋರಮೆಯಂತೆ ಸಂಭಾಷಣಾ ಚತುಗೆಯಲ್ಲ್, ಇವಳು ಮೌನಿ, ಇವಳ್  ಮೌನ, ಪುರುಷಪ್ರಧಾನ ವ್ಯವಸ್ಥೆಯ ವಿಷಯ ದಾಂಪತ್ಯವನ್ನು ಸೂಚಿಸುವಂತಿದೆ. ಪರಮೇಶ್ವರ ಭಟ್ಟರು ತಾನು ಪಿತ್ರಾರ್ಜಿತವಾಗಿ ಪಡೆದ ಅನುಭವ ಮತ್ತು ತನ್ನ ಸ್ವಯಾರ್ಜಿತ ಅನುಭವಗಳನ್ನು "ಸುರಗಿ-ಸುರಹೊನ್ನೆಯ ಮಾಲೆಯಲ್ಲಿ ಪೋಣೆಸಿದ್ದಾರೆ.-
ಹೊಸಗನ್ನಡದಲ್ಲಿ ’ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬಂಥ ಸೊಗಸಾದ ವಚನಗಳಾನ್ನು ಬರೆದಿರುವ ಕೆಲವೇ ಕವಿಗಳಲ್ಲಿ ಎಸ್. ವಿ.ಪಿ. ಅವರು ಪ್ರಮುಖರು. ’ಉಪ್ಪು ಕಾಡಲು, ’ಪಾಮರ, ಉಂಬರ’ ಅವರ ವಚನ್ ಸಂಕಲನಗಳು ’ಉಪ್ಪು ಕಡಲಿನ’ನ    ಹಲವು ವಚನಗಳಲ್ಲಿ ಕವಿ ಕಡಲಿನೊಂದಿಗೆ ತನ್ನ ಮನೋವ್ಯಥೆಯನ್ನು ತೋಡಿಕೊಳ್ಳುತ್ತಾರೆ. ಕಡಲಿನಲ್ಲಿ ಕಂತುತ್ತಿರುವ ಸೂರ್ಯನ ವಿವಿಧ ರೂಪಗಳನ್ನು ಚೇತೋಹಾರಿಯಾಗಿ ಬಣ್ಣಿಸುತ್ತಾರೆ. ಆತ್ಮಶೋಧನೆ, ವಿಚಾರವಿಮರ್ಶೆ, ವಿಡಂಬನೆ ಮತ್ತು ಎಲ್ಲಕ್ಕಿಂತ  ಮುಖ್ಯವಾಗಿ ಸಮಕಾಲೀನ ರೂಪಕಗಳಿಂದ ಈ ವಚನಗಳು ಗಮನ ಸೆಳೆಯುತ್ತವೆ. ಎಸ್.ವಿ.ಪಿ. ಅವರ ರೂಪಕ ನಿರ್ಮಾಣ ಪ್ರತಿಭೆಗೆ ದೃಷ್ಟಾಂತವಾಗಿ  ’ ಬ್ರೇಕಿಲ್ಲದ ಬೆಲ್ಲಿಲ್ಲದ ಸೈಕಲ್ , ಸ್ಕೂಟರು ನಡೆಸುವ ಗಂಡನ ಮುಖ್ -ಈ ವಚನಗಳನ್ನು ನೋಡ ಬಹುದು ."ಉಪ್ಪು ಕಡಲಿನ ವಚನಗಳಲ್ಲಿ ಆಧ್ಯಾತ್ಮಿಕ ಅನುಭವದ ಗೀಳಾಗಲಿ, ಭಕ್ತಿಯ ಅತಿರೇಕವಾಗಲಿ ಇಲ್ಲ. ಇಲ್ಲಿರುವುದು ’ಉಪ್ಪು ಕಡಲಿ’ನ ವಾಸ್ತವದ ಅನುಭವ ಲೋಕ.
ಡಾ| ಎಸ್. ವಿ. ಪರಮೇಶ್ವರರ ಕಾವ್ಯದ ಒಂದು ಪ್ರಧಾನ ಲಕ್ಷಣ ಹಾಸ್ಯ. ಅವರು ಹಾಸ್ಯರಸವನ್ನು ಕುರಿತು. "ಶೃಂಗಾರವೊಂದೇ ರಸವೆನ್ನುವವರಿದ್ದಾರೆ. ಕರುಣಾವೊಂದೇ ರಸವೆನ್ನು  ವವರಿದ್ದಾರೆ. ಶಾಂತವೊಂದನ್ನೇ ರಸವೆನ್ನುವವ ರಿದ್ದಾರೆ. ಹೀಗಿರುವಲ್ಲಿ ನನ್ನಂಥವರು ಒಬ್ಬಿಬ್ಬರಾದರೂ ಹಾಸ್ಯವೊಂದೇ ರಸವೆಂದರೆ ಯಾರು  ತಪ್ಪು ತೆಳಿಯಲಾಗದು" ಎನ್ನುತ್ತಿದ್ದರು. "ನೀವೊಂದು ಸೀರೆಯ ಎನಗಾಗಿ ತಂದಂದೆ ನಾ ಕಂಡೇ ಕನಸನು ನಿನ್ನೆ..." ಇಂಥ ತತ್ಕಾಲದಲ್ಲಿ ಪರಮಾನಂದವನ್ನು ನೀಡುವ, ’ಎಸ್.ವಿ.ಪಿ.  ಛಾಪು" ಇರುವ ನೂರಾರು ಹಾಸ್ಯ ಮುಕ್ತಕಗಳನ್ನು ಅವರು ಬರೆದಿದ್ದಾರೆ. ’ಇಂದ್ರಚಾಪ’, ’ ಚಿತ್ರಪಥೆಗಳಾಲ್ಲಿ  ಭಟ್ಟರ ಹಾಸ್ಯ ಮುಕ್ತಕಗಳು ಸಿಗುತ್ತವೆ. ತನ್ನ ಖಾಸಗಿ ಬದುಕಿನ ರಂಪ, ರಗಳೆ. ಒಂಟಿತನಗಳನ್ನು ಮರೆಯಲು ಭಟ್ಟಾರು ಹಾಸ್ಯ ಕ್ನ್ಯೆಯನ್ನು ಗೆಳತಿಯನ್ನಾಗಿ ಮಾಡಿಕೊಂಡರು. ’ಅತಿಥಿಗೆ ಕವನದಲ್ಲಿ ನಗರದ ಕೆಳಮಧ್ಯಮ ವರ್ಗಡ ಗೃಹಸ್ಥನೊಬ್ಬನ ಪಾಡು-ಹಾಡಾಗಿದೆ- "ಹೀಗೆ ಹೇಳಾದ ಬರುವಿರೆಂದೆಮಗೆ ಗೊತ್ತೆ. ಎರಡು ದಿನ ತಡ ಮಾಡಿ ಬರಬಾರದಿತ್ತೆ?" ಎಸ್. ವಿ.ಪಿ. ಅವರ ’ಕಣ್ಣು ಮುಚ್ಚಾಎ’ ಎಂಬ ಸ್ವರಚಿತ ಒಗಟುಗಳ ಸಂಕಲನದಲ್ಲಿರುವ ಒಂದು ಒಗಟು ಹೀಗಿದೆ-’ಮಾರಿ ಗುಡೀಲಿ ಮಾರುತಿರಾಯ’. ಇದಕ್ಕೆ ಅವರ ಉತ್ತರ ’ಸಂಸಾರದ ಕಷ್ಟದಲ್ಲಿ ಸಿಕ್ಕಿದ ಕವಿ’ ಎಂದು.

 ದೇಶೀ ಪ್ರಜ್ಞೆ

ಕನ್ನಡದ ನವ್ಯ ಸಾಹಿತಿಗಳು ಪಾಶ್ಚಾತ್ಯ ಸಾಹಿತ್ಯದಿಂದ ಪ್ರಭಾವಿತರಾಗುತ್ತಿದ್ದಾಗ ಪರಮೇಶ್ವರ ಭಟ್ಟರು ನಮ್ಮ ನಾಡಿನ ಪೂರ್ವಸೂರಿಗಳ್ ಆಪೂರ್ವ ಕೃತಿಗಳನ್ನು  ಅಧ್ಯಯನ ಮಾಡಿದರು. ಮಹಾಪರಂಪರೆಯ ಅಭಿಜಾತ ಕೃತಿಗಳನ್ನು -ಕಾಳಿದಾಸ, ಭಾಸ, ಭವಭೂತಿ, ಅಶ್ವಘೋಷರ ಕೃತಿಗಳಾನ್ನು ಭಾಷಾಂತರಿಸಿದರು. ಇವು ನವವಸಾಹತುಶಾಹಿ ಸಿದ್ಧಾಂತಗಳಿಂದ ’ಪಶ್ಛಿಮ ಬುದ್ಧಿ’ಗಳಾಗುವುದರ ವಿರುದ್ಧ ಎಸ್. ವಿ.ಪಿ. ಅವರ ಮೌನ ಕಾರ್ಯಾಚರಣೆಯಾಗಿದ್ದುವು... "ಹಾಗಾಗಿ ಮೂಲಕ್ಕೂ ಹೊಸ ಕಾಲದ ಜನಕ್ಕೂ ಕಡಿಯಲಿರುವ ಸಂಪರ್ಕ ಕಡಿದು ಹೋಗದಿರಲಿ" ಎನ್ನುವ ಅವರ ಹಾರೈಕೆಯಲ್ಲಿ ಸಾಂಸ್ಕೃತಿಕ ಸಾತತ್ಯವನ್ನು ಕುರಿತ ಜವಾಬ್ದಾರಿ, ಎಚ್ಚರಗಳಿವೆ. ತನ್ನ ಭಾಷಾಂತರದ ಉದ್ದೇಶ ಮಾರ್ಗಡ ಕುರಿತು ಅವರು, "ಒಟ್ಟಿನಲ್ಲಿ ಇಲ್ಲಿ ಮೂಲದಲ್ಲಿ ಇದ್ದುದನ್ನು ಬಿಡದೆ, ಇಲ್ಲದುದನ್ನು ಸೇರಿಸದೆ, ಸಂಸ್ಕೃತದ ಭಾವ ತನ್ನ ಮೂಲ ಅಭಿವ್ಯಕ್ತಿಯ ಸೊಗಸನ್ನು ಇಟ್ಟುಕೊಂಡೇ ಕನ್ನಡದಲ್ಲಿ ಒಡಮೂಡುವಂತೆ ಮಾಡುವುದು ನನ್ನ ಉದ್ದೇಶ" ಎಂದಿದ್ದಾರೆ. ’ಮೇಘದೂತ’ದ ಬೇಂದ್ರೆಯವರಂತೆ , ಬಾಣಭಟ್ಟನ ’ಕಾದಂಬರಿ’ಯ ಬನ್ನಂಜೆ ಗೋವಿಂದಾಚಾರ್ಯರಂತೆ ಮೂಲ ಕಾವ್ಯದ ಪುನರ್ ಸೃಷ್ಟಿ ಪರಮೇಶ್ವರ ಭಟ್ಟರ ಉದ್ದೇಶವಲ್ಲ. ಒಂದಕ್ಕೊಂದು ಹೆಣೆದುಕೊಳ್ಳುವ ಸಂಸ್ಕೃತದ ನಾಗಬಂಧದ ಶೈಲಿಯನ್ನು ಉಳಿಸಿಕೊಳ್ಳಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಗರ್ಭ ಗುಡಿಯ ಮೂರ್ತಿಯ ಪ್ರಭಾವಳಿ ಉತ್ಸವ ಮೂರ್ತಿಯಲ್ಲೂ ಇರುತ್ತದೆ.

ಅಪರೂಪದ ರಚನೆಗಳುಿ
ತ್ರಿಪದಿ, ಸಾಂಗತ್ಯ, ಏಳ-ಕನ್ನಡದ ಇಂಥ ದೇಶೀ ಛಂದೋಪ್ರಕಾರಗಳಲ್ಲಿ ನಮ್ಮ ಕಾಲದ ಅನುಭವ ವಿಶೇಷಗಳನ್ನು ಬರೆಯುತ್ತ, ಕನ್ನಡ ಭಾಷೆಯ ಜತೆ ಕವಿ ಪರಮೇಶ್ವರ ಭಟ್ಟಾರು ನಡೆಸಿದ ಸೃಜನಾತ್ಮಕ ಹೋರಾಟ್ ಮಹತ್ತ್ವದ್ದು.ಪ್ರವಾಹದ ವಿರುದ್ಧ ಈಜುವ ಈ ಸಾಹಸದಿಂದಾಗಿ ಸಾಹಿತ್ಯ ಪರಂಪರೆಯಲ್ಲಿ ಹಳತು-ಹೊಸತರ ಮುಖಾಮುಖಿ ಸಾಧ್ಯವಾಗಿದೆ.ಜನಪದ ಸಾಹಿತ್ಯದಲ್ಲಿ ಮಾತ್ರ ಲಭ್ಯವಿರುವ ಎರಡು ವಾದಗಳ ಏಳೆ ಎಂಬ ಪ್ರಾಚೀನ ದೇಶೀ ವಂದೋರೂಪದಲ್ಲಿ ’ತುಂಬೆಹೂವು’ ಎಂಬ ಅಪೂರ್ವ ಕೃತಿಯೊಂದನ್ನು ಅವರು ರಚಿಸಿದ್ದಾರೆ. ಈ ಛಂದೋಪ್ರಯೋಗಗಳಿಂದಾಘಿ ಅವರ ಕಾವ್ಯದಲ್ಲಿ ಏಕಾತಾನದ ದೋಷವಿಲ್ಲ. ಸಂಸ್ಕೃತ ಕೃತಿಗಳ ಭಾಷಾಂತರಗಳಲ್ಲಿಯೂ ಅವರು ಹಲವು ವಿನೂತನ ಛಂದೋ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.
’ ಕವಿಗೆ ಜಾಹೀರಾಟು ಬೇಕು’ ಎಂದ ಕವಿ ಪರಮೇಶ್ವರ  ಭಟ್ಟರ ಕೃತಿಗಳು . ಗಂಭೀರ ಚರ್ಚೆಗೆ ಒಳಗಾಗದಿರುವುದು ಒಂದು ವಿಪರ್ಯಾಸ. ತನ್ನ ಕಾಲದ ಸಹೃದಯರ ಉಪೇಕ್ಷೆಯನ್ನು ಅಲಕ್ಷಿಸಿ, ಆತ್ಮವಿಶ್ವಾಸದಿಂದ ನಾಟಕಗಳನ್ನು ಬರೆದ ಸಂಸ್ಕೃತ ನಾಟಕಕಾರ ಭವಭೂತಿಯಂತೆ ಪರಮೇಶ್ವರ ಭಟ್ಟರೂ ನಿರ್ಲಿಪ್ತರಾಗಿ ಅಸಾಧಾರಣ ಕೃತಿಗಳನ್ನು ನೀಡಿದರು. ಪಂಪ, ರನ್ನ, ನಾಗವರ್ಮ, ಕುಮಾರವ್ಯಾಸರಂಥ ಕನ್ನಡ ಕವಿಗಳು ಸಂಸ್ಕೃತ ಕೃತಿಗಳನ್ನು ರೂಪಾಂತರಿಸಿದವರು. ನೇರ ಭಾಷಾಂತರ ಮಹತ್ತ್ವ-ಮಿತಿಗಳ ಕುರಿತು ಕನ್ನಡದಲ್ಲಿ ಸಾಕಷ್ಟು ಚರ್ಚೆ ಆಗಿಲ್ಲ. ಇಂಗ್ಲಿಷ್ ಮತ್ತು ಯೂರೋಪಿನ ಸಾಹಿತ್ಯದ ಪ್ರಭಾವ ದಟ್ಟವಾಗಿದ್ದ ನವ್ಯದ ಅಬ್ಬರದ ದಿನಗಳಲ್ಲಿ ಪರಮೇಶ್ವರ ಭಟ್ಟರು ಸಂಸ್ಕೃತದ ಕಾವ್ಯ-ನಾಟಕಗಳನ್ನು ಭಾಷಾಂತರಿಸಿದರು. ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕನ್ನಡ-ಸಂಸ್ಕೃತಗಳನ್ನು ತೌಲನಿಕವಾಗಿ   ಜತೆಯಾಗಿ   ಅಧ್ಯಯನ ಮಾಡುವ ವ್ಯವಸ್ಥೆ ಇಲ್ಲ. ಹಾಸ್ಯ ಪ್ರಧಾನವಾದ ಮುಕ್ತಕಗಳು ವ್ಯಾಖ್ಯಾನ ನಿರಪೇಕ್ಷವಾದುವುಗಳು. ಇಂಥ ಕಾರಣಗಳಿಂದಾಗಿ ಪರಮೇಶ್ವರರ ಕೃತಿಗಳ ಸರಿಯಾದ ವಿಮರ್ಶೆ  ಆಗಿಲ್ಲ. ಡಾ| ಎಸ್.ವಿ. ಪರಮೇಶ್ವರ ಭಟ್ಟರು ನಮ್ಮ ನಾಡಿನ ಮಹಾ ಪರಂಪರೆ ಮತ್ತು ಇಂದಿನ ತಲೆಮಾರಿನ ನಡುವಿನ ಸೇತುಬಂಧವಾಗಿದ್ದರು.



ಮುರಳೀಧರ ಉಪಾಧ್ಯ, ಹಿರಿಯಡಕ


Friday, August 21, 2020

ಸಖೀಗೀತ SAKHEEGEETHA: Muraleedhara upadhya Hiriadka - ಸಖೀಗೀತ http://up...

ಸಖೀಗೀತ SAKHEEGEETHA: Muraleedhara upadhya Hiriadka - ಸಖೀಗೀತ http://up...: ಮುರಳೀಧರ ಉಪಾಧ್ಯ ಹಿರಿಯಡಕ 2009ರ  ಡಿಸೆಂಬರ್ ನಲ್ಲಿ ನಾನು ಆರಂಭಿಸಿದ Muraleedhara Upadhya Hiriadka-http;//mupadhyahiri.blogspot. com  ಗೆ ನಿನ್ನೆಯ ವ...

Wednesday, August 19, 2020

ಮುರಳೀಧರ ಉಪಾಧ್ಯ ಹಿರಿಯಡಕ - - ಕೃಷ್ಣನೆಂಬ ಸೊದೆಯ ಕಡಲು { ಆಚಾರ್ಯ ಮಧ್ವರ ಕೃಷ್ನಾಮೃತ ಮಹಾರ್ಣವ }

’ ಕೃಷ್ಣಾಮೃತ ಮಹಾರ್ಣಾ’ ಮಧ್ವಾಚಾರ್ಯರು ತನ್ನ್ ಇಳಿವಯಸ್ಸಿನಲ್ಲಿ ಬರೆದ ಒಂದು ಸಂಕಲನ ಗ್ರಂಥ. ಇದು ಅವರು ಕೊಕ್ಕಡದ ಇಡೆಪಾಡಿತ್ತಾಯರ ನಿತ್ಯಾನು ಸಂಧಾನಕ್ಕೆಂದು ರಚಿಸಿಕೊಟ್ಟ. ಕೃತಿ. ಈ ಗ್ರಂಥದ ಮೊದಲ ಎರಡು ಶ್ಲೋಕಗಳನ್ನು ಹೊರತುಪಡಿಸಿದರೆ ಉಳಿದವುಗಳೆಲ್ಲ ಪುರಾಣ ವಚನಗಳು.
"ಇಲ್ಲಿ ಉದ್ಧರಿಸಿರುವ ಪ್ರಮಾಣಾ ಶ್ಲೋಕಗಳು ಯಾವ ಯಾವ ಗ್ರಂಥಗಳಿಂದ ಆಯ್ದಂಥವು ಎನ್ನುವುದನ್ನು ಪೂರ್ತಿಯಾಗಿ ಪತ್ತೆಹೆಚ್ಚುವುದು ಇನ್ನೂ ಸಾಧ್ಯವಾಗಿಲ್ಲ. ವಿಷ್ಣು ಪುರಾಣ, ನಾರದೀಯ ಪುರಾಣ ಮುಂತಾದೆಡೆ ಬಂದ ಶ್ಲೋಕಗಳನ್ನು ನಾನು ಗುರುತು ಹಾಕಿಕೊಂಡಿದ್ದೇನೆ. ಆದರೂ ಎಲ್ಲ ಶ್ಲೋಕಗಳ ಆಕರವನ್ನು ನಮೂದಿಸುವಂಟಾಗಲಿಲ್ಲ" ಎಂದು ಬನ್ನಂಜೆಯವರು ಮುನ್ನುಡಿಯಲ್ಲಿ ಬರೆದಿದ್ದಾರೆ. ಪಲಿಮಾರು ಮಠದ ಶ್ರೀ ರಘುವರ್ಯ ತೀರ್ಥರ (ಕ್ರಿ.ಶ. ೧೮ನೆಯ ಶತಮಾನ) ಹಸ್ತಪ್ರತಿಯ ಪಾಠವನ್ನು ಬನ್ನಂಜೆಯವರು ’ಕೃಷ್ಣಾಮೃತ ಮಹಾರ್ಣವ’ದ ಭಾಷಾಂತರಕ್ಕಾಗಿ ಬಳಸಿದ್ದಾರೆ. ೧೯೫೬ರಲ್ಲಿ ಉಡುಪಿಯ ಮಧ್ವಸಿದ್ಧಾಂತ ಗ್ರಂಥಾಲಯದ ಮೂಲಕ ಪ್ರಕಟವಾಗಿದ್ದ ಬನ್ನಂಜೆಯವರ ಭಾಷಾಂತರದ ಪರಿಷ್ಕೃತ ರೂಪಾಂತರ ಈ ಗ್ರಂಥದಲ್ಲಿದೆ.
ಈ ಪುಸ್ತಕದಲ್ಲಿ ಹರಿಪೂಝೆ ಮಹಿಮೆ, ಉಪಾವಾಸದ ಹಿರಿಮೆ, ನಿತ್ಯಾನುಸಂಧಾನ, ದರ್ಮಾಧರ್ಮ ನಿರ್ಣಯ, ಮತ್ತಿತರ ಧಾರ್ಮಿಕ ಆಚರಣೆಗಳಿಗೆ ಸಂಬಂಧ ಪಟ್ಟ ೨೩೦ ಶ್ಲೋಕಗಳಿವೆ. ಬನ್ನಂಜೆಯವರು ಶ್ಲೋಕಗಳನ್ನು ಕನ್ನಡ ಲಿಪಿಯಲ್ಲಿ ನೀಡಿ, ಗದ್ಯಾನುವಾದ ಮಾಡಿ, ಉಪಯುಕ್ತ  ಟಿಪ್ಪಣೆಗಳನ್ನು ಬರೆದಿದ್ದಾರೆ. ಅನುಬಂಧ ದಲ್ಲಿರುವ’ಭಗವಂತನ ಕೆಲವು ಮುಖ್ಯಾನಾಮಗಳ ಭಾಗ. ಕೇಶವ, ಕೃಷ್ಣ, ಜನಾರ್ಧನ, ನಾರಾಯಣ, ಗೋವಿಂದ, ಪುರುಷೋತ್ತಮ, ಅನಿರುದ್ಧ, ವಾಸುದೇವ, ಪದ್ಮನಾಭ  ಮತ್ತಿತರ ಹೆಸರುಗಳ ಬಹುಮುಖಿ ನಿರ್ವಚನಗಳು ಕುತೂಹಲಕಾರಿಯಾಗಿವೆ.
ಬನ್ನಂಜೆಯವರ್ ಪ್ರಸ್ತಾವನೆಯ ಮೊದಲ ವಾಕ್ಯ ಹೀಗಿದೆ-"ಕಲಿಯುಗ ಪ್ರಾರಂಭವಾಗಿ ೪೩೦೦ ವರ್ಷಗಳು ಸಂದು, ಮತ್ತೂ ೩೯ ವರ್ಷಗಳು ಸಂದಾಗ ಭೂಮಿಯಲ್ಲಿ ಉಡುಪಿಯ ಸಮೀಪ, ತೌಳವ ಮಂಡಲದ ಪಾಜಕದಲ್ಲಿ ಪವಮಾನನ ಅವತಾರವಾಯಿತು." ಮೆಕಾಲೆಯ ಶಿಕ್ಷಣ ಪರಂಪರೆಯಲ್ಲಿ ಬೆಳೆದವರಿಗೆ ಈ ವಾಕ್ಯ ಅರ್ಥವಾಗದ ಒಗಟಾಗುತ್ತದೆ.
ಬನ್ನಂಜೆಯವರು, ಇನ್ನೂ ಅಪ್ರಕಟಿತವಾಗಿರುವ , ಅಮೂಲ್ಯ ಸಂಗತಿಗಳನ್ನೊಳಗೊಂಡಿರುವ, ಗ್ರಂಥವೊಂದನ್ನು ಉಲ್ಲೇಖಿಸಿದ್ದಾರೆ-ಮಧ್ವಾಚಾರ್ಯರ ಪೂರ್ವಾಶ್ರಮದ ಸೋದರರಾದ ವಿಷ್ಣುತೀರ್ಥರ’ ಸನ್ನ್ಯಾಸ ಪದ್ಧತಿಗೆ ಭಂಡಾರಕೇರಿ ಮಠದ  ಶ್ರೀ ಸುಲೋತ್ತಮ ತೀರ್ಥರು (ಕ್ರಿ.ಶ. ಹದಿನಾರನೆಯ ಶತಮಾನ)ಬರೆದ  ಟೀಕೆ.ಈ ಗ್ರಂಥ ಆದಷ್ಟು ಬೇಗನೆ, ಕನ್ನಡ ಅನುವಾದ ಸಹಿತ ಪ್ರಕಟವಾಗಬೇಕು.
’ಕೃಷ್ಣನೆಂಬ ಸೊದೆಯ ಕಡಲ’ನ್ನು ಕನ್ನಡಿಗರಿಗೆ ನೀಡಿದ ಬನ್ನಂಜೆ ಗೋವಿಂದಾಚಾರ್ಯರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ, ಹಿರಿಯಡಕ,
ಕೃಷ್ಣನೆಂಬ ಸೊದೆಯ ಕಡಲು,
(ಆಚಾರ್ಯ ಮಧ್ವರ ಕೃಷ್ಣಾಮೃತ ಮಹಾರ್ಣವ)
ಭಾಷಾಂತರ:ಬನ್ನಂಜೆ
ಪ್ರ: ದಶಪ್ರಮತಿ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ :೧೯೯೮
(ಪುಟಗಳು:೨೦+೯೬) ಬೆಲೆ:೪೦.

Thursday, August 13, 2020

ಮುರಳಿಧರ ಉಪಾಧ್ಯ ಹಿರಿಯಡಕ - ಎಚ್. ಎಸ್. ಶಿವಪ್ರಕಾಶ್ ಅವರ " ಮಳೆಯೇ ಮಂಟಪ " -- ಹೇಗೆ ಗೆದ್ದಾರು ನಮ್ಮ ಮುಗ್ಧ ದೇವತೆಗಳು?

ಎಚ್. ಎಸ್.ಶಿವಪ್ರಕಾಶ್,  ಹೊಸ ಶತಮಾನದ ಕನ್ನಡ ಕಾವ್ಯಕ್ಕೆ ಹೊಸ ದಾರಿ ತೋರಬಲ್ಲ ಸಾಮರ್ಥ್ಯ ವಿರುವ ಕವಿಗಳಲ್ಲೊಬ್ಬರು. ’ಮಿಲರೇಪ’, ’ಮಳೆ ಬಿದ್ದ ನೆಲದಲ್ಲಿ’, ಅಣು ಕ್ಷಣ ಚರಿತ್ರೆ’, ’ಸೂರ್ಯ ಜಲ’ ’ನವಿರು ನಾಗರ’ ಗಳ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಆರನೆಯ ಕವನ್ ಸಂಕಲನ ’ ಮಳೆಯೇ ಮಂಟಪ’.
’ಒಂದು ಸಲುಗೆಯ ಬಿನ್ನಪ’ದಲ್ಲಿ ಕವಿ ಶಿವಪ್ರಕಾಶ್, ಕಾವ್ಯವನ್ನು ಕುರಿತ ತನ್ನ ಇತ್ತೀಚೆಗಿನ ಚಿಂತನೆಯನ್ನು ವಿವರಿಸಿದ್ದಾರೆ. -"ಭಾಷೆ ಮತ್ತು ಅನುಭವಗಳ ಸಾಂದ್ರತೆ ಮತ್ತು ಜಟಿಲತೆಯನ್ನು ತ್ಯಜಿಸದೆ ಕವಿತೆ ಆದಷ್ಟು ಸರಳ ರೀತಿಯಲ್ಲಿ  ಸಹೃದಯರನ್ನು ಮುಟ್ಟಬೇಕು ಎಂಬುದು ನನ್ನ ನಂಬುಗೆ.... ಕವಿತೆ ಕೇವಲ್ ಒಂದು ಕಲಾಕೃತಿ ಎಂಬ ನಂಬುಗೆ ಈಗ ನನಗಿಲ್ಲ. ಮೂಲಭೂತವಾ ಗಿ    ಅದೊಂದು ಅನ್ವೇಷಣಾ ಕ್ರಮ. ಸ್ವಯದ ಹಾಗೂ ಇದಿರಿನ ಪೇಚಾಟ ಪರದಾಟಗಳನ್ನು ದಾಟುವ ಪ್ರಯೋಗ, ಪ್ರಕ್ರಿಯೆ" ಎನ್ನುತ್ತಾರೆ ಶಿವಪ್ರಕಾಶ್. ’ಕವಿತೆ ಸಾಯುತ್ತದೆ’ ಎಂಬ್ ಕೂಗನ್ನು ಗೇಲಿ ಮಾಡುತ್ತ ಅವರು ಬುದ್ಧ ಜಾತಕ ಕತೆ ಯೊಂದನ್ನು ನೆನಪಿಸುತ್ತಾರೆ. ಆಲದ ಮರದ ಕೆಳಗಿದ್ದ ಒಂದು ಮೊಲ ಮರದಿಂದ ಒಂದು ಹಣ್ಣು ಬಿದ್ದ ಸದ್ದನ್ನು ಕೇಳಿಸಿ ಕೊಂಡು, ’ಲೋಕೋ ವಿನಸ್ಯತಿ( ಲೋಕ ನಶಿಸುತ್ತಿದೆ) ಎಂದು ಹಾಹಾಕಾರ ಹರಡಿಸಿತಂತೆ!’ಮಳೆಯೇ ಮಂಟಪ’ದಲ್ಲಿ ಮೂವತ್ತೇಳು ಕವನಗಳು, ಹದಿನಾರು ತತ್ತ್ವ ಪದಗಳು ಹಾಗೂ ಮೂವತ್ತು ವಚನಗಳಿವೆ.’ ಉರಿವ ಗುಗ್ಗಳ’ ಹಾಗೂ ’ಅಕ್ಕ-ತಮ್ಮ’ ಇಲ್ಲಿರುವ ಸುದೀರ್ಘ ಕವನಗಳು. ’ಬಸುರಿ ಮೂಳೆಯ ಮೇಲೆ ನಚ್ಚಾನೆ   ನಡು    ಮಧ್ಯಾಹ್ನ’ ಉರಿವ, ಕುಣಿವ ಗುಗ್ಗಳದ ಚಿತ್ರ ಭಯಾನಕವಾಗಿದೆ. ’ಅಕ್ಕ-ತಮ್ಮ’ ಕವಿತೆ ಒಂದು ರಾಜಸ್ಥಾನಿ ಜನಪದ ಕತೆಯಿಂದ ಪ್ರೇರಣಿ ಪಡೆದಿದೆ. ಇಲ್ಲಿನ ಅಕ್ಕ- ತಮ್ಮ ಬರಗಾಲದಲ್ಲಿ ತಮ್ಮನ್ನು ಬಿಟ್ಟು ಹೋದ ತಂದೆ-ತಾಯಿಯ್ ನಿರೀಕ್ಷೆಯಲ್ಲಿ ದ್ದಾರೆ. ’ನೋವಿದ್ದ ಮನದಲ್ಲಿ ಸಾವಿರ ಯೋಚನೆ, ಬಾವಿದ್ದ ಎದೆಯಲ್ಲಿ ಸಾವಿರ  ಕಲ್ಪನೆ’ ಎನ್ನುತ್ತಾಳೆ ಅಕ್ಕ. ’ ಕಬೀರದಾಸರ ಭೋಜಪುರಿ ಕವಿತೆ’ ಅಲ್ಲಮನ ಬೆಡಗಿನ ವಚನಗಳನ್ನು ನೆನೆಪಿಸುವಂತಿದೆ. ನೀರು ಬೂದಿಯಾಗುತ್ತದೆ, ಮೀನು ಬದುಕಿ ಉಳಿಯುತ್ತದೆ. ಇರುವೆ ಉಚ್ಚೆ ಹೊಯ್ದಾಗ ನದಿನಾಲೆ ತುಂಬಿ ಹರಿಯುತ್ತವೆ. ’ ಪ್ರೀತಿಯ ಸ್ನೇಹಿತ ಜೋ’ ಎಂಬ್ ಕವಿತೆಯಲ್ಲಿ ಜಾಗತೀಕರಣ ಎಂಬ್ ರಾಜಕೀಯ ಕುತಂತ್ರವನ್ನು ಕುರಿತ ಕವಿಯ ಪ್ರತಿಕ್ರಿಯೆ ಹೀಗಿದೆ-"ಹೇಗೆ ಗೆದ್ದಾರು ನಮ್ಮ ಮುಗ್ಧ ದೇವತೆಗಳು ವ್ಯಾಪಾರಗಾರರ ಚಾಲೂಕಿ ಕುಹಕಗಳನ್ನು?"

ಈ ಸಂಕಲನದಲ್ಲಿರುವ ವಚನಗಳು ಹಾಗೂ ತತ್ತ್ವ ಪದಗಳ ಕುರಿತು ಶಿವ ಪ್ರಕಾಶ ಹೀಗೆನ್ನುತ್ತಾರೆ-" ಒಂದು ವ್ಯಕ್ತಿಗತ ಶೈಲಿಯನ್ನು ಕಟ್ಟಿಕೊಳ್ಳುವ ಮಾಡರ್ನಿಸ್ಟ್ ಹಠ ಇಂದು ಸಲ್ಲುವುದಿಲ್ಲ.ಈ  ಅರ್ಥದಲ್ಲೇ ವೊಲೆ ಷೊಯಿಂಕ ಹೇಳಿದ್ದು-ಶೋಷಿತ  ಜಗತ್ತಿನ ಬರಹಗಾರನಿಗೆ ಅಗತ್ಯವಾದದ್ದು ಸಾಮಾಜಿಕ ಸಿದ್ಧಾಂತವೇ ಹೊರತು ಕಲಾತ್ಮಕ ಸಿದ್ಧಾಂತವಲ್ಲ. ಈ ತೆರನ ಆಲೋಚನೆಗಳು ಮುಕ್ತಛಂದದ ಮೈಕಟ್ಟುಗಳಿಂದ ಭಿನ್ನವಾಗಿರುವ ’ ತತ್ತ್ವ ಪದ’  ಮತ್ತು ವಚನ್ ರೂಪಗಳಲ್ಲೂ ಕಾವ್ಯ ರಚನೆ ಮಾಡುವಂತೆ ನನ್ನನ್ನು ಪ್ರೇರೇಪಿಸಿದುವು. ಇಂದಿನ ಅಸ್ವಸ್ಥ ಭಾಷೆ ಹಾಗೂ ಸಮುದಾಯಗಳ ಕಾವ್ಯ್ ನರಕಿಗಳ ಆತ್ಮ ಸಂವಾದದಂತೆ ಕೇಳಾತೊಡಗಿದೆ. ಹೊಸ ವ್ಯಕ್ತಿ ಮತ್ತು ವಸ್ತುಗಳೊಂದಿಗೆ ಸಂಭಾಷಣೆಗಳ ನೆಲೆಗಳನ್ನು ಉಳಿಸಿಕೊಳ್ಳವುದರಲ್ಲಿ ಈ ಪ್ರಕಾರಗಳು ನನಗೆ ಸಾಧನಗಳಾದುವು."
’ಮಿಂಡರೈವರು’ ಎಂಬ ತತ್ತ್ವಪದ ದಲ್ಲಿ ಸರಕು ಸಂಸ್ಕೃತಿಯ ಖಾರವಾದ ವಿಡಂಬನೆ ಇದೆ. ಇಲ್ಲಿನ್ ಕಿವುಡ ಟ್ರಾನ್ಸಿ ಸ್ಟರನ್ನು, ಕುರುಡ ಟಿ.ಇಯನ್ನು ಹೆಳವಕಾರನ್ನು, ಕುಂಟ್ ಭೂಟು ಜೊತೆಯನ್ನು, ಮೂಕ ಮೈಕನ್ನು ಅಪೇಕ್ಷಿಸುತಾರೆ.
’ಬೆಟ್ಟದ ಮೇಲೊಂದು ಮನೆಯ ಮಾಡುತ್ತೇನೆ, ಮೃಗ ಖಗಗಳಿಗೆ ಅಂಜದ  ಹಾಗೆ’ ಎಂದು ಆರಂಭವಾಗುವ    ವಚನ  ವಿಶೇಷವಾಘಿ ಗಮನ ಸೆಳೆಯುತ್ತದೆ. ’ಸಮುದ್ರದ ತಡಿಯಲ್ಲಿ ಮನೆ ಮಾಡುತ್ತೇನೆ, ನೊರೆ, ತೆರೆ, ಹೆಮ್ಮೀನು, ಮೊಸಳೆ ತಿಮಿಂಗಿಲಗಳಿಗೆ ಅಂಜದ ಹಾಗೆ’, ’ಸಂತೆಯೊಳಗೊಂದು ಮನೆ ಮಾಡುತ್ತೇನೆ, ಸದ್ದುಗದ್ದಲ ಗಮಲು ಧೂಳುಗಳಿಗಂಜದಂತೆ, ಎನ್ನುವ ನಿರೂಪಕ ವಚನದ ಕೊನೆಯಲ್ಲಿ ಹೀಗೆನ್ನುತ್ತಾನೆ-
"ಈ ಎಲ್ಲವೂ ಚೆನ್ನು
ನೀನೂ ಜತೆಗಿದ್ದರೆ
ಇಲ್ಲದ ಹೋದರೆ 
ಬೆಟ್ಟ ಪೂರ್ತಿ ಬೋಳಾಗುತ್ತದೆ
ಕಡಲ ತಡಿ ಕಡಲಲ್ಲಿ ಮುಳುಗಿ ಹೋಗುತ್ತದೆ.
ಸಂತೆ ಅಂತೂ ಇಂತೂ ನೆರೆದು ಮುಗಿದು ಹೋಗುತ್ತದೆ."

ಶಿವಪ್ರಕಾಶರ ಈ ವಚನ ವಿರಹಿಯ ಶೃಂಗಾರದಿಂದ ಆರಂಭವಾಗಿ, ಸಖೀಗೀತದತ್ತ ತುಡಿಯುತ್ತದೆ.
ಇಲ್ಲಿನ ಒಂದು ವಚನದಲ್ಲಿ ’ಅಚ್ಚಗನ್ನಡದ ಬಿಸಿಲು ನಮ್ಮನ್ನು ಆವರಿಸಿದ ಹಾಗೆ’ ಎಂಬ ಮಾತಿದೆ. ’ಮಳೆಯೇ ಮಂಟಪ’ ಅಚ್ಚಗನ್ನಡದ ಬಿಸಿಲು-ಮಳೆಯ ಖುಶಿ ನೀಡುತ್ತದೆ.

ಮುರಳೀಧರ     ಉಪಾಧ್ಯ  ಹಿರಿಯಡಕ
 ಮಳೆಯೇ ಮಂಟಪ
(ಕವನ ಸಂಕಲನ)
ಲೇ: ಎಚ್. ಎಸ್. ಶಿವಪ್ರಕಾಶ್
ಪ್ರ: ಲೋಹಿಯಾ ಪ್ರಕಾಶನ, ’ಕ್ಷಿತಿಜ’,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮೊದಲ್ ಮುದ್ರಣ:೨೦೦೨.
ಬೆಲೆ ರೂ.೫೦.


ಮುರಳೀಧರ ಉಪಾಧ್ಯ ಹಿರಿಯಡಕ - ಗೌಡ ಜನಾಂಗದ ಇತಿಹಾಸ

ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿಕ ಎಂಬ್ ಮೌಲಿಕ ಗ್ರಂಥ ಪ್ರಕಟವಾಗಿದೆ.
ವ್ಯಕ್ತಿಯ ಸ್ಥಾನಸೂಚಕವಾಗಿದ್ದ ಗೌಡ ಶಬ್ದ ಮುಂದೆ ಜಾತಿಸೂಚಕವಾಗಿದೆ. ಸುಳ್ಯದ ಸುತ್ತಮುತ್ತಲಿನ ಗೌಡರು ಹಾಸನ್ ಜಿಲ್ಲೆಯ ಐಗೂರು ಪ್ರದೇಶದಿಂದ ಹದಿನೈದು-ಹದಿನಾರನೆಯ ಶತಮಾನದಲ್ಲಿ ವಲಸೆ ಬಂದವರು ಎಂದು ಸಂಶೋಧಕರು ಊಹಿಸುತ್ತಾರೆ.
’ಅಭಿನಂದನ-ಅಭಿವಂದನ’ಎಂಬ ಈ ಗ್ರಂಥದ ಮೊದಲ್ ಭಾಗದಲ್ಲಿ ’ಆದಿಚುಂಚನ ಗಿರಿಯ್ ಸಾಂಸ್ಕೃತಿಕ ಅವಲೋಕನ  ಡಾ| ಕೆ. .ರಾಜೇಶ್ವರಿ  ಗೌಡ),    ಗೌಡ  ಜನಾಂಗದ ಮೇರು ವ್ಯಕ್ತಿ, ಶ್ರೀ ಕುರುಂಜಿ ವೆಂಕಟ್ರಮಣ ಗೌಡಪ್ರೋ| ಡಿ. ಜವರೇ ಗೌಡ) ಮತ್ತು ’ವಿದ್ಯಾ ನಗರ  ಕುರುಂಜಿಬಾಗ್’ (ಪೂವಪ್ಪ ಕಣಿಯೂರು, ಕೆ.ವಿ.ದಾಮೋದರ ಗೌಡ)ಎಂಬ ಮೂರು ಲೇಖಾನ್ ಗಳಿವೆ.
’ಗೌಡ ಜನಾಂಗದ ಹಿನ್ನೆಲೆ, ಇತಿಹಾಸ, ಅನನ್ಯತೆ’ ಎಂಬ ಎರಡನೆಯ ಭಾಗದಲ್ಲಿ ಏಳು ಲೇಖನಗಳಿವೆ.’ಅಮರ ಸುಳ್ಯದ ದಂಗೆಯಿಂದಾಗಿ ಗೌಡರು ಬ್ರಿಟಿಷರ ಅವಕೃಪೆಗೆ ತುತ್ತಾದುದನ್ನು ಎನ್.ಎಸ್. ದೇವಿಪ್ರಸಾದ್ ಸಂಪಾಜೆ ಅವರು ಚಾರಿತ್ರಿಕ ದಾಖಲೆಗಳೊಂದಿಗೆ ವಿವರಿಸಿದ್ದಾರೆ. ಡಾ| ಪುರುಷೋತ್ತಮ ಬಿಳಿಮಲೆ ಅವರು’ ಸುಳ್ಯ ಪರಿಸರದ ಗೌಡರು’ ಎಂಬಲೇಖನದಲ್ಲಿ ಗೌಡರ ಕುಟುಂಬ ಪದ್ಧತಿ, ಒಳಾಡಳಿತ, ಜೀವನಾವರ್ತನದ ಆಚರಣೆಗಳು ವಾರ್ಷಿಕಾವರ್ತನದ ಆಚರಣೆಗಳು ಹಾಗೂ ಗೌಡರ ಅನನ್ಯ ಧಾರ್ಮಿಕ, ಪ್ರದರ್ಶನ  ಕಲೆ ’ಸಿದ್ಧವೇಷವನ್ನು ಅವಲೋಕಿಸಿದ್ದಾರೆ ’ಈ ವಿಭಾಗದಲ್ಲಿರುವ ’ನಾಮಧಾರಿ ಒಕ್ಕಲಿಗರು’ (ಡಾ| ಅಂಬಳಿಕೆ ಹಿರಿಯಣ್ಣ), ’ಮಲೆನಾಡು ಶೈವ ಒಕ್ಕಲಿಗರು ಅಥವಾ ವಿಭೂತಿ ಗೌಡರು’ (ಡಾ| ವೈ.ಸಿ. ಭಾನುಮತಿ)’ಗಂಗಡಿಕಾರ ಒಕ್ಕಲಿಗರು’ (ಡಾ| ನಲ್ಲೂರು ಪ್ರಸಾದ್), ’ಕನ್ನಡ ನಾಡಿನ ಒಕ್ಕಲಿಗರು’ (ಪೋ|ಹ.ಕ ರಾಜೇ ಗೌಡ)’ಶಾಸನೋಕ್ತ ಒಕ್ಕಲಿಗ ವೀರರು (ಪೋ|ಡಿ.ಕೆ. ರಾಜೇಂದ್ರ) ಲೇಖನಗಳಲ್ಲಿ  ಸಂಶೋಧನಾತ್ಮಕ ಒಳನೋಟಗಳಿವೆ. ಗೌಡ ಜನಾಂಗ-ಕೃಷಿ, ಸಾಹಿತ್ಯ, ಸಂಸ್ಕೃತಿ ಎಂಬ ಮೂರನೆಯ ಭಾಗದಲ್ಲಿ ಆರು ಲೇಖನಗಳಿವೆ. ಗೌಡರ ಕೃಷಿಲೋಕದ ಕುರಿತು ಎ.ಕೆ. ಹಿಮಕರ, ಗೌಡರ ಐನ್ ಮನೆಗಳ ಕುರಿತು ಪೂವಪ್ಪ ಕಣಿಯೂರು, ಗೌಡ ಜನಾಂಗದ ಕುಣಿತಗಳ ಬಗ್ಗೆ ಯದುಪತಿ ಗೌಡ, ಗೌಡರ ಜನಪದ ಕ್ಸ್ತೆಗಳ್ ಬಗ್ಗೆ ಡಾ| ವಿಶ್ವನಾಥ ಬ್ದಿಕಾನ, ’ಕನ್ನಡದ ಕಟ್ಟಾಳು, ಕೊಳಂಬೆ ಪುಟ್ಟಣ್ಣ ಗೌಡರ ಕುರಿತು ಪ್ರೊ| ಎಂ. ಶಿವಣ್ಣ ನೆಲಮನೆ-ಲೇಖನಗಳನ್ನು ಬರೆದಿದ್ದಾರೆ. ಸಂಜೀವ ಕುದ್ರಾಜೆಯವರು’ ದಕ್ಷಿಣ ಕನ್ನಡದ ಗೌಡ ಜನಾಂಗದ ಸಾಹಿತಿಗಳು’ ಎಂಬ ಲೇಖನದಲ್ಲಿ ಕೊಳಂಬೆ, ಟಿ.ಜಿ.ಮೂಡೂರು, ಡಾ| ಕುಶಾಲಪ್ಪ ಗೌಡ, ಡಾ| ಸುಕುಮಾರ  ಗೌಡ, ಕುತ್ಯಾಳ ನಾಗಪ್ಪ ಗೌಡ(ಕಿರಣ್), ಡಾ| ಚಿದಾನಂದ ಕೊಳಂಬೆ, ಡಾ| ಚಿನ್ನಪ್ಪ ಗೌಡ, ಡಾ| ಬಿಳಿ ಮಲೆ, ಜಿತುನಿಡ್ಲೆ, ಕೆ.ಆರ್. ವಿದ್ಯಾಧರ, ಶ್ರೀಮತಿ ಜಯಮ್ಮ ಚಟ್ಟಿಮಾಡ ಮತ್ತಿತರ ಸಾಹಿತಿ-ವಿದ್ವಾಂಸರನ್ನು ಪರಿಚಯಿಸಿದ್ದಾರೆ.
ಡಾ| ಚಿನ್ನಪ್ಪ ಗೌಡರು ಪ್ರಸ್ತಾವನೆಯಲ್ಲಿ ಬರೆದಿರುವಂತೆ ಜನಾಂಗವೊಂದನ್ನು ಕುರಿತು ಗ್ರಂಥವನ್ನು ಸಂಪಾದಿಸುವುದು ಕಷ್ಟದ ಮತ್ತು ಸೂಕ್ಷ್ಮದ ಕೆಲಸ. ಈ ಜವಾಬ್ದಾರಿಯನ್ನು ಡಾ|ಗೌಡರು ಚೆನ್ನಾಗಿ ನಿರ್ವಹಿಸಿದ್ದಾರೆ. ಇದು ಗೌಡ ಜನಾಂಗದ ಯುವ ಪೀಳಿಗೆಯವರು ಮಾತ್ರವಲ್ಲದೆ, ಜಾನಪದ ವಿದ್ವಾಂಸರು, ಸಾಮಾಜಿಕ ಇತಿಹಾಸದಲ್ಲಿ ಆಸಕ್ತರಾದವರು ಗಂಭೀರವಾಗಿ ಓದಬೇಕಾದ ಗ್ರಂಥ.
ಮುರಳೀಧರ ಉಪಾಧ್ಯ ಹಿರಿಯಡಕ
ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ
ಸಂಪಾದಕರು:ಡಾ|ಕೆ.ಚಿನ್ನಪ್ಪ ಗೌಡ
ಪ್ರ: ಬೆಳ್ಳಿಹಬ್ಬ ಆಚರಣಾ ಸಮಿತಿ, ಒಕ್ಕಲಿಗರ
ಯಾನೆ ಗೌಡರ ಸೇವಾ ಸಂಘ, ಮಂಗಳೂರು
ಮೊದಲ ಮುದ್ರಣ:೨೦೦೩ ಬೆಲೆ:ರೂ.೨೦೦.

ಮುರಳೀಧರ ಉಪಾಧ್ಯ ಹಿರಿಯಡಕ -ಶಿವರಾಮ ಹೆಗಡೆ ಅವರ " ನೆನಪಿನ ರಂಗಸ್ಥಳ "

ಉತ್ತರ  ಕನ್ನಡದ ಕೆರೆಮನೆ  ಶಿವರಾಮ ಹೆಗಡೆಯವರು (೧೯೦೮-೧೯೯೨)ಯಕ್ಷಗಾನ ಕಲಾವಿದರಾಗಿ ಮೆರೆದಾಡಿದವರು.೧೯೫೫-೫೮ರಲ್ಲಿ ಡೇರೆ ಮೇಳವನ್ನು ನಡೆಸಿದ್ದ ಈ  ಕಲಾವಿದರಾಗಿ ಮೆರೆದಾಡಿದವರು. ೧೯೫೫-೫೮ ರಲ್ಲಿ ಡೇರೆ ಮೇಳವನ್ನು ನಡೆಸಿದ್ದ ಈ ಕಲಾವಿದ ೧೯೭೦ರಲ್ಲಿ ಕೇಂದ್ರ ಸರಕಾರದ ಪ್ರಶಸ್ತಿ ಪಡೆದರು. ಅಂಗಡಿ ಹೊಟೇಲ್ ಮಾಲಕ, ಡ್ರೈವರ್, ಬಸ್ ಏಜೆಂಟ್, ಯಕ್ಷಗಾನ ಕಲಾವಿದ-ಹೀಗೆ ವೈವಿಧ್ಯ ಪೂರ್ಣ ಜೀವನಾನುಭವವಿದ್ದ ಅವರ ಬದುಕು ವರ್ಣರಂಜಿತವಾಗಿತ್ತು. ಕೆರೆಮೆನೆ ಶಿವರಾಮ್ ಹೆಗಡೆಯವರ ಆತ್ಮಕಥನವನ್ನು ಧ್ವನಿಮುದ್ರಿಸಿಕೊಂಡು ನಿರೂಪಿಸಿರುವ ಜಿ.ಎಸ್.ಭಟ್ಟರು ಅಸಾಧರಣ ಆತ್ಮಕತೆಯೊಂದನ್ನು ಕನ್ನಡಕ್ಕೆ ನೀಡಿದ್ದಾರೆ.
ಬದುಕಿನ ಆಕಸ್ಮಿಕ ಮತ್ತು ನಿಗೂಢತೆಗಳ ಬಗ್ಗೆ ಬೆರಗು ಮೂಡಿಸುವ ಕೆಲವು ಘಟನೆಗಳು ಕೆರೆಮನೆಯವರ ’ನೆನಪಿನ ರಂಗ ಸ್ಥಳ’ದಲ್ಲಿವೆ.ಹೊನ್ನಾವರ ತಾಲೂಕಿನ ಹಳ್ಳಿಯೊಂದರ ಆಢ್ಯ ವ್ಯಕ್ತಿಯೊಬ್ಬರು ಹದಿನಾರು ರೂಪೈ ವೀಳ್ಯ ನೀಡುವುದಾಗಿ ಆಶ್ವಾಸನೆ ಕೊಟ್ಟು, ಶಿವರಾಮ್ ಹೆಗಡೆಯವರ ಮೇಳದ ಆಟ್ ಮಾಡಿಸಿದರು. ಆಟ ಮುಗಿದ ಮೇಲೆ ಅವರು ಶ್ಯಾನುಭೋಗನೊಬ್ಬನ್ ಅಚಾಡಿ ಮಾತು ಕೇಳಿ ಹಣಕೊಡಲು ನಿರಾಕರಿಸಿದರು. ಪಕ್ಕದ ಊರಿಗೆ ಹೋಗಲು, ಮೇಳದ ಪೆಟ್ಟಿಗೆ ಹೊರಲು ಜನವಿಲ್ಲದೆ ಹೆಗಡೆಯವರುಕಂಗಾಲಾಗಿದ್ದರು  ಆಗ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಗಣಪತಿ ಎಂಬ ಮಳ್ಳ, ಅಕಸ್ಮಾತ್ತಾಗಿ ಬಂದುಅವರಿಗೆ ನೆರವು  ನೀಡಿದ. ಹೀಗೆ ಆಪತ್ತಿನಲ್ಲಿ ಬಾಂಧವನಾಗಿ ಬಂದವನು ಕೆರೆಮನೆಯವರ ನಂಬಿಕೆ. ಶಿವರಾಮ್ ಹೆಗಡೆಯವರು ಕೋರ್ಟಿಗೆ ಹೋಗಿ, ಒಂದು ವರ್ಷದೊಳಗೆ ಯಕ್ಷಗಾನದ ವೀಳ್ಯದ ಹಣವನ್ನು ವಸೂಲು ಮಾಡಿದರು. ಹಣ ಪಾವತಿ ಮಾಡದಂತೆ ತಡೆದ ಆ ಶ್ಯಾನುಭೋಗವನ್ನು ಅವರು ಹತ್ತು ವರ್ಷಗಳ    ಅನಂತರ ಕಂಡರು. ಅದೇ ಶ್ಯಾನುಭೋಗ ಕುಷ್ಟರೋಗಿಯಾಗಿ, ಹುಚ್ಚನಾಗಿ ಗೋಕರ್ಣದ ಹೊಟೇಲೊಂದರ ಮುಂದೆ ಕೊಳೆತ ತಿಂಡಿ-ಹಣ್ಣು ಹೆಕ್ಕುತ್ತಿದ್ದ!

ಗಾಂಧೀಜಿಯಂತೆ, ಆತ್ಮಕತೆಯಲ್ಲಿ ತಮ್ಮ ಅಂತರಂಗದ ಪುಟಗಳನ್ನು ತೆರೆಯುವವರು ವಿರಳ. ಕೆರೆಮನೆಯವರು ಇಂಥ ವಿರಳಗಳ ಗುಂಪಿಗೆ ಸೇರಿದ್ದಾರೆ. ನಿರೂಪಕ ಜಿ.ಎಸ್.ಭಟ್ಟರು ದಾಳಲಿಸಿರುವಂತೆ, "ಆದರೆ  ಹೆಗಡೆಯವರ ವಿವಾಹೇತರ ಸಂಬಂಧದ ವಿಷಯದಲ್ಲಿ ಮಾತ್ರ ನಾನು ಪ್ರಶ್ನೆ ಕೇಳಿರಲಿಲ್ಲ.ಆ ಅವಧಿಯ ಒಂದು ಬೆಳಗ್ಗೆ ಚಹಾ ಕುಡಿದು ಕುಳಿತವರು ಇವತ್ತು ಇದನ್ನು ಹೇಳಿ ಬಿಡುತ್ತೇನೆ ಎಂದು ಅವ್ರಾಗಿ ತೊಡಗಿದರು. ನಾನು ಪ್ರಶ್ನೆಯನ್ನೂ ಕೇಳದೆ ಅವರಾಗಿ ಹೇಳದೆಯೂ ಇದ್ದಿದ್ದರೆ ಅಷ್ಟರ ಮಟ್ಟಿಗೆ ಈ  ಕಥನ ಖಂಡಿತ ಅಪೂರ್ಣವಾಗಿ ಬಿಡುತ್ತಿತ್ತು. " ಇಡಗುಂಜಿ ದೇವಾಲಯದ ದೇವದಾಸಿಯೊಬ್ಬಳು ಕೆರೆಮನೆಯವರನ್ನು ಒಲಿದು ಬ್ಂದಳು. ಅವರ ಗೆಳತಿಯಾಗಿ ಆಪತ್ತಿನಲ್ಲಿ ನೆರವು ನೀಡಿದಳು. "ಆಯುಷ್ಯದ ಈ ಅವಧಿಯಲ್ಲಿ ನಿಂತು ಕೊಂಡು ನನ್ನ ಬದುಕಿಗೆ ಸಂಬಂಧಿಸಿದ್ದನ್ನೆಲ್ಲ ನೆನಪಿಸಿಕೊಳ್ಳುವಾಗ ಇದೊಂದನ್ನು ಬಿಟ್ಟರೆ ನಾನು ಅಪ್ರಾಮಾಣಿಕನಾದೇನು" ಎನ್ನುವ ಕೆರೆಮನೆಯವರು ಒಲಿದು

ಮುರಳೀಧರ ಉಪಾಧ್ಯ ಹಿರಿಯಡಕ - ಶತಾವಧಾನಿ ಗಣೇಶರ " ವಂಶೀ ಸಂದೇಶಂ " - { 1999 }

 "ವಂಶೀಸಂದೇಶಂ.’ ಡಾ| ಆರ್. ಗಣೇಶ್ ಅವರು ಹಳಗನ್ನಡಾದಲ್ಲಿ ಬರೆದಿರುವ ಹೊಸ ಕಾವ್ಯ್. ಈ ಖಂಡಕಾವ್ಯದ ಕವಿಯ ಸ್ವಗತ (ದೃಕ್ಕು), ಕೊಳಲಿಗೆ ಸಂಬೋಧನೆ (ದೃಶ್ಯ), ಶ್ರೀಕೃಷ್ಣನಲ್ಲಿ ನಿವೇಡಾಣಾ (ದರ್ಶನ) ಎಂಬ ಮೂರು ಭಾಗಗಳಲ್ಲಿ ಒಟ್ಟು ನೂರ ಇಪ್ಪತ್ತು ಪದ್ಯ ಗಳಿವೆ. ಇಪ್ಪತ್ತೆರಡು ಶಾರ್ದೂಲ್ ವಿಕ್ರೀಡಿತ, ಹದಿನೇಳು ಮತ್ತೇಭವಿಕ್ರೀಡಿತ, ಮೂವತ್ತೈದು ಉತ್ಪಲಮಾಲೆ, ಹದಿನೇಳು ಚಂಪಕಮಾಲೆ, ಹದಿನಾರು ಕಂದ ಹಾಗೂ ತಲಾ ಒಂದೊಂದರಂತೆ ಸ್ರಗ್ಛತಿ. ಮಹಾಸ್ರಗ್ಥರೆ, ಪೃಥ್ವಿ, ಹರಿಣೆ, ಶಿಖರಿಣೆ, ದ್ರುತವಿಲಂಬಿತ, ಜಾಪಚಂದಸಿಕ, ವಸಂತ ತಿಲಕ, ಮಂಜುಭಾಷಿಣೆ, ಮಲ್ಲಿಕಾಮಾಲೆ, ಪುಷ್ಟಿತಾಗ್ರ, ಮಂಡಾಕ್ರಾಂತ ಮತ್ತು ಮಾಲಿನೀವೃತ್ತಗಳು ಈ ಕಾವ್ಯದಲ್ಲಿವೆ.
’ ವಂಶೀಸಂದೇಶಂ’ ಸಂವೇಗ (ದು:ಖ)ದಿಂದ ಕೂಡಿರುವ, ಮಧುರ ಭಕ್ತಿಮಾರ್ಗಡ ಸಂದೇಶ ಕಾವ್ಯ. ಈಅ ಕಾವ್ಯದ ವಧು (ಜೀವಾತ್ಮ) ’ಭವಬಂಧನ’ ವೆಂಬ ಪತಿಯ ಬದಲು ’ಪರಮಾತ್ಮ’ (ಕೃಷ್ಣ) ಎಂಬ ಪ್ರಿಯನಿಗೆ ಒಲಿದಿದ್ದಾಳೆ. ಈಕೆ ಪರಕೀಯಾನಾಯಿಕೆ. (ಒಬ್ಬನನ್ನು ಮದುವೆಯಾಗಿ ಬೇರೊಬ್ಬನನ್ನು ಪ್ರೇಮಿಸುವ ವನಿತೆ.
’ಬೆಡಂಗು ಬಡಬಾಳಿನೊಳ್ ಸುಳಿಯ್ ಬಾರದೇಂ’ ’ಗೊಲ್ಲನ ಘೋಷದೊಳ್ ತಳರ್ದ ಮೆಲ್ಲುಲಿ ಬಾರದದೇಕೆ ಬಾಳಿನೊಳ್’ ಎಂಬ ವಿರಹಿಣೆಯ ನಿರೀಕ್ಷೆಯೊಂದಿಗೆ ಈ ಕಾವ್ಯದ ಆರಂಭವಾಗುತ್ತದೆ. ಇಲ್ಲಿನ ನಾಯಿಕೆ, ವಾಸಕೆ ಸಜ್ಜಿಕೆಯಾಗಿ, ವರ್ಷಾಭಿಸಾರಿಕೆಯಾಗಿ, ದಿವಸಾಭಿಸಾರಿಕೆಯಾಗಿ, ದರ್ಶಾಭಿಸಾರಿಕೆಯಾಗಿ, ವಿಪ್ರಲ ಬ್ಧಾನಾಯಿಕೆಯಾಗಿ  ಕೃಷ್ಣನನ್ನು ಕಾಯುತ್ತಾಳೆ. ’ದೃಶ್ಯ’ ಎಂಬ ಎರಡನೆಯ ಭಾಗದಲ್ಲಿ ಈ ನಾಯಿಕೆ ಕೃಷ್ಣನ ಕೊಳಲಿನೆದುರು ತನ್ನ್ ಅಂತರಂಗವನ್ನು ಅನಾವರ ಣಗೊಳಿಸುತ್ತಾಳೆ. ಕೊಳಲಿಗೆ ಕೃಷ್ಣನ ಸುಧಾ ಮಧುರ ಅಧರರಸಪಾನ ನಿರಂತರ ಸಿಗುತ್ತಿದೆ. ’ ತ್ವತ್ಪುಣ್ಯಾಮೇಂ ಗಣಮೋ! ಎನ್ನುತ್ತಾಳೆ ನಾಯಿಕೆ. ಈ ಜಗತ್ತಿನ ದಾಂಪತ್ಯವೆನ್ನುವುದು ಪಾಪಪೂರ್ಣ; ಎಂಬ ಈ ನಾಯಿಕೆಯ ನಿಲುವು ಪ್ರಶ್ನಾರ್ಹವಾಘಿದೆ. "ಜಗದಾರಾಧಿಪ ಜಾರ! ಬಾರ! ಪರಕೀಯಾವೃತ್ತಿಯಂ ಪೋಷಿಸಯ್!" ಎಂದು ಈಕೆ ಬಿನ್ನವಿಸುತ್ತಾಳೆ.

ಕವಿ ಆರ್. ಗಣೇಶ್ ಅವರು ಈ ಕಾವ್ಯವನ್ನು ಸಂಸ್ಕೃತ ಹಳಗನ್ನಡಗಳ ವಿಶಿಷ್ಟ ಮಿಶ್ರಣದ ಶೈಲಿಯಲ್ಲಿ ಬರೆದಿದ್ದಾರೆ. ಹೊಸಗನ್ನಡದ ಬದಲು ಹಳಗನ್ನಡದಲ್ಲಿ ಬರೆದಿರುವುದರಿಂದ ಸಂವಹನದ ಸಮಸ್ಯೆ ಉಂಟಾಗುತ್ತದೆಂಬುದು ಕವಿ ಗಣೇಶರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದ್ದರಿಂದಲೇ ಅವರು ಕಾವ್ಯದ ಕೊನೆಯಲ್ಲಿ ಪದ್ಯಗಳ ತಾತ್ಪರ್ಯವನ್ನು ಹೊಸಗನ್ನಡದಲ್ಲಿ ನೀಡಿದ್ದಾರೆ.(ವಿಪ್ರಲಬ್ಧಾನಾಯಿ ಕೆಯ ಸಂಕೇತಗಳೇ ಅವಳ ನಲ್ಲನಿಗೆ ಅರ್ಥವಾಗದಿದ್ದರೆ ಅವಳು ಸೂಚಿಸುವ ಸಂಕೇತ ಸ್ಥಳಕ್ಕೆ ನಲ್ಲ ಬರುವುದು ಹೇಗೆ?) ’ ನುಡಿಯೊಡಪಾದುದಯ್, ಕವಿತೆಯಾಗದೆ’ ಎಂಬ ಕವಿಯ ಮಾತು ಅರ್ಧಸತ್ಯ. ಇದು ಕವಿತೆ ಹೌದು; ಆದರೆ ನಾರಿಕೇಲ ಪಾಕದ ಕವಿತೆ; ಪಾಂಡಿತ್ಯಪೂರ್ಣ ಕವಿತೆ. ಕನಕದಾಸರ ಮುಂಡಿಗೆಗಳನ್ನು ಸವಿದಿರುವ ಸಹೃದಯರು  ಶತಾವಧಾನಿ ಗಣೇಶರ ಈ ಕಾವ್ಯವನ್ನು ಸವಿಯಲು ತಿಣುಕುಬೇಕಾಗುತ್ತದೆ. ಆದರೆ ತನಗೆ ಪ್ರಿಯವಾದ ಸಂಸ್ಕೃತ ಹಳಗನ್ನಡಗಳ ವಿಶಿಷ್ಟ ಮಿಶ್ರಣದಲ್ಲಿ ಕಾವ್ಯ ಬರೆಯುವ ಶತಾವಧಾನಿ ಗಣೇಶರ ’ಸರ್ಜನಶೀಲ’ ಸ್ವಾತಂತ್ರ್ಯವನ್ನು ನಾವು ಅಲ್ಲಗಳೆಯುವಂತಿಲ್ಲ.

"ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸಂತತಮೆಂದೆ ಪಳಗನ್ನಡಮಂ....ನುಡಿವರ್, ದೇಸಿಯಲ್ಲಿದೆಂದರಿದಿರ್ದುಂ" (೧.೪೮) ಎಂದು ಕವಿರಾಜಮಾರ್ಗಕಾರ ಒಂದು ಸಾವಿರ ವರ್ಷಗಳ ಹಿಂದೆ ಅಭಿಪ್ರಾಯಪಟ್ಟಿದ್ದಾನೆ. ಅವನ ಈ ಮಾತನ್ನು ನಾಂದಿಪದ್ಯವಾಗಿ ಸ್ವೀಕರಿಸಿ ’ವಂಶೀ ಸಂದೇಶಂ’ ಕಾವ್ಯವನ್ನು ಕುರಿತ ಸಹೃದಯ ಸಂವಾದವನ್ನು ಆರಂಭಿಸಬೇಕು.
ಮುರಳೀಧರ ಉಪಾಧ್ಯ ಹಿರಿಯಡಕ.
ವಂಶೀಸಂದೇಶಂ
ಲೇ: ಶತಾವಧಾನಿ ಡಾ|ಆರ್. ಗಣೇಶ
ಪ್ರ: ಅಭಿಜ್ಞಾನ ೮, ಗೋಖಲೆ
ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣ,
ನರಸಿಂಹರಾಜ್ ಕಾಲೊನಿ, ಬಸವನಗುಡಿ 
ರಸ್ತೆ, ಬೆಂಗಳೂರು-೫೬೦೦೧೯
ಮೊ.ಮುದ್ರಣ:೧೯೯೯
ಬೆಲೆ:ರೂ.೨೫.

ಮುರಳೀಧರ ಉಪಾಧ್ಯ ಹಿರಿಯಡಕ - ಎಸ್. ಮಂಜುನಾಥ್ ಅವರ " ಮೌನದ ಮಣಿ " - ಧ್ಯಾನದ ಗಿಡದ ಹೂವುಗಳು

ಎಸ್. ಮಂಜುನಾಥ್ ಅವರ ’ಮೌನದ ಮಣಿ’ ಕಾಂತಾವರ ಕನ್ನಡ ಸಂಘದ ೧೯೯೯ರ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿರುವ ಸಂಕಲನ. ಈ ಸಂಕಲನದಲ್ಲಿ ೫೮ ಕವನ ಗಳಿವೆ. ಮಂಜುನಾಥ್, ದೈನಂದಿನ ಜೀವನದ ಸಣ್ಣ ಸಂಗತಿಗಳನ್ನು ಕಾವ್ಯದ ಕುಸುರಿಯಲ್ಲಿ ಹಿಡಿದಿಡುವ ಕವಿ.
’ಕವಿತೆ’ ಕವನದ ಕೊನೆಯ ಸಾಲು ಗಳಿವು-"ಗೊತ್ತಿರುವ ವಿಗ್ರಹಗಳಲ್ಲಿ ನಮ್ಮ ಮರವೆ ಮಬ್ಬಿನ ಮುಸುಕೆಳೆದು ಅಣ್ಕಿಸುತ, ಆ ವಿಗ್ರಹದ ಮುಖಕ್ಕೆರಗಿ ಹಾರಾಡುತ್ತಿರುವ ಚಿಟ್ಟೆಯ ತೆರದಿ ಅಚ್ಚರಿಗೊಳಿಸುವೆ." ’ಜಪದಕಟ್ಟೆ’ ಮಂಜುನಾಥ್ ರ ಪ್ರಾತಿನಿಧಿಕ ಕವನ. ಜಪದಕಟ್ಟೆ, ಒಡೆದ ಮಣೆಗಳು ಇಡಿಯಾಗುವ ತಾಣ.’ ಮಣಿಯ ನೆಣೆಸುತಿವೆ ಎಲ್ಲ ಪೊದೆಗಳು, ಮುನಿಗಳಾಗಿವೆ ತೋಪಿನ ಮರಗಳು.’ ಜಪದ ಕಟ್ಟೆಯಲ್ಲಿ ಮುನಿಗಳಿಲ್ಲದಿದ್ದರೂ ಅವರ ತಪಸ್ಸು ಗೋಚರಿಸುತ್ತಿದೆ. " ಕವಿಗಿರುವ ಮಾಸ್ಟರ್ ಕೀ ಮಾತೊಂದೇ" ಎನ್ನುತ್ತಾರೆ ಪು.ತಿ.ನ. ಮಂಜುನಾಥ್ ರ ಕಾವ್ಯದ ಮಾತು ಮೌನದ ಸೆರಗಿನಲ್ಲಿ ಅಡಗಿರುತ್ತದೆ. ಇವರ ಮಾತು ವಾಚಾಳಿತನವಾಗುವುದಿಲ್ಲ. ರಾಜ ಕಾರಣದ ಭಾಷಣಾವಾಗುವುದಿಲ್ಲ. ಕವಿತೆಯೆಂಬ ಕರಣದಿಂದ ನುಡಿಯ ಆಕೃತಿಯನ್ನು ತಡವಲು ಈ ಕವಿ ಹವಣೆಸುತ್ತಾರೆ. ಗಂಜೀಫಾ ರಘುಪತಿ ಭಟ್ಟಾರ ರೇಖೆಗಳಂತೆ, ’ಮೌನದ ಮಣೇ’ ಯ ಸಾಲುಗಳು  ಕಂಗೊಳಿಸುತ್ತವೆ.
ಲೋಕವಸ್ತು ಕವಿತೆಯೊಳಗೆ ಪ್ರವೇಶಿಸುವುದು ಅಲಂಕಾರದ ಮೂಲಕ. ಮಂಜುನಾಥ್ ಕವನಗಳಲ್ಲಿ ಉಪಮೆ, ರೂಪಕಗಳು ವಿಶೇಷವಾಗಿ ಗಮನ ಸೆಳೇಯುತ್ತವೆ. ಬಲು ಚುರುಕಿನ ಹುಡುಗ ನಂದನ್ ’ಜೇಡದಂತೆ’ ಕಾಣಿಸುತ್ತಾನೆ-"ಕಲ್ಲಿಂದ ಮಲ್ಲಿಗೆಯ್ ಬುಡಕ್ಕೆ, ಮನೆ ಹೊಸಲಿಗೆ ಕಾಣದ ನೂಲೊಂದನೇಯುವನು."(-ನಂದನ’) ’ಹುಲ್ಲೆಸಳು’ ಗಳು ತಂಗಾಳಿಗೆ ನಡಗುತ್ತ ’ಪುಟ್ಟವೃದ್ಧ  ಋಷಿಗಳ ಹಾಗೆ’ ಕಾಣೆಸುತ್ತವೆ. ’ರಂಗೋಲಿ’ಯಲ್ಲಿ ಕವೆ, "ಈಗ ತಾನೆ ರಂಗೋಲಿ ಬಿಟ್ಟಾರೆ ಬೆರಳುಗಳ ಕಂಪನ ನನ್ನೆಡೆಗೆ ಬರಲಿ’ ಎನ್ನುತ್ತಾರೆ. ಕವಿ  ಮಂಜುನಾಥ್ ಸಣ್ಣಾ ಸಂಗತಿಗಳ ಮೂಲಕ ದೊಡ್ಡ ಚಿಂತನೆಗಳತ್ತ್ ಹೊರಳುತ್ತಾರೆ. ಕೊಂಬೆ ಮೇಲೋಡಿ ಹಣ್ಣೆಲೆಗಳ ಉದುರಿಸಿದ’ ಅಳಿಲ’ನ್ನು ನೋಡಿ, "ತಾನೇ ಬರಲಾಗದೆ ಮಾಗಿ ಅಳಿಲನ್ನು ಕಳಿಸಿದೆ" ಎನ್ನುತ್ತಾರೆ. ’ಬಾಳಕ’ ಕವನದ ನಿರೂಪಕನಿಗೆ, ’ಹಸಿ ಮೆಣಸ ಸೀಳಿ ಉಪ್ಪು ಮೆಂತ್ಯವ ತುಂಬಿ ಒಣಗಿಸಿದ ಬಾಳಕ’ ಕರಿದ ’ಮಧ್ಯಾಹ್ನ      ತಂದೆಯ ನೆನಪಾಗುತ್ತದೆ.’ ವಕ್ಷಸ್ಥಲ ಲಹರಿ’ ಎಂಬ ಕವನ ಹೀಗೆ ಆರಂಭವಾಗುತ್ತದೆ-

" ಕಡೆಕಡೆದು ಕಡಗೋಲೆ
ಕಡೆಗೆ ಮಿದುಗೊಂಡಂತೆ
ತಿರುಗು ಬುಗುರಿಯ ನೆತ್ತಿಮೇಲೆ ಚಲನೆ ಕುಸುರೆದ್ದಂತೆ
ಇಲ್ಲ-ತನ್ನೊಳಗೆ ಧ್ಯಾನದಲ್ಲಿದ್ದ ಗಿಡ
ಹೂವಾಗಿ ಸ್ಫುರಿಸಿದಂತೆ".
 ’ತನ್ನೊಳಗೆ ಧ್ಯಾನದಲ್ಲಿದ್ದ ಗಿಡ ಹೂವಾಗಿ ಸ್ಫುರಿಸಿದಂತೆ’ ಎಂಬುದು ಈ ಕವಿಯ ಇಡೀ ಕವನ ಸಂಕಲನಕ್ಕೆ ಅನ್ವಯಿಸುವ ಮಾತು. ಪು.ತಿನ. ಅವರ ’ಯದುಗಿರಿಯ ಮೌನಿವಿಕಾಸ’ ದಂಥ ಸಾರ್ಥಕ ಕವನ ನೀಡುವ ರಸಾನುಭವವನ್ನು ’ಮೌನದ ಮಣಿ’ ನೀಡುತ್ತದೆ.
ಮಂಜುನಾಥ್ ಕಾವ್ಯ ಪ್ರಕಾರದ ಇತಿಮಿತಿಗಳ ಬಗ್ಗೆ ಎಚ್ಚರ ಇರುವ ಕವಿ. ಕಾವ್ಯದ ರೂಪಾಸಾಧ್ಯತೆಯನ್ನು ತನ್ನ ಅನನ್ಯ ತೆಯ ಮೂಲಕ ವಿಸ್ತರಿಸುವ ತಾಕತ್ತು ಈ ಕವಿಯಲ್ಲಿದೆ. ಪು.ತಿ.ನ ಅವರ ನಿಸರ್ಗ ಕವಿತೆಗಳು, ಚೀನೀ ತತ್ವಪದಗಳು, ಜಪಾನೀ ಹಾಯಕುಗಳಿಂದ ಪ್ರೇರಣಿ ಪಡೆದಿರುವ ಈ ಕವಿ ಎಲ್ಲ ಪ್ರಭಾವಗಳನ್ನು ಜೀರ್ಣಿಸಿ ಕೊಂಡು ಬೆಳೆಯಬಲ್ಲರು. ’ ಕವಿರಾಜ ಮಾರ್ಗ’ ದ ಶ್ರೀ ವಿಜಯ ’ ಕಲ್ಪನೋಕ್ತಿ ಕಷ್ಟ’ ಎಂಬ ಕಾವ್ಯದೋಷವನ್ನು ಹೆಸರಿಸುತ್ತಾನೆ. ಕವಿಯ ಆಶಯವೇನೆಂದು ಕಲ್ಪಿಸಿಕೊಳ್ಳಲು ಕಷ್ಟವಾಗುವುದು ’ ಕಲ್ಪನೋಕ್ತಿ ಕಷ್ಟ’. ಮಂಜುನಾಥ್ ರ ’ಮೌನದ ಮಣಿ’ ಕಲ್ಪನೋಕ್ತಿಯ ಸೊಗಸಿನಿಂದ ತುಂಬಿದೆ.

ಮೌನದ ಮಣಿ (ಕವಿತೆಗಳು)
ಲೇ: ಎಸ್. ಮಂಜುನಾಥ್
ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು,
ಸಾಗರ
ಮೊದಲ ಮುದ್ರಣ :೧೯೯೯
ಬೆಲೆ ರೂ.೪೦ (ಪುಟಗಳು:೭೨)
ಮುರಳೀಧರ ಉಪಾಧ್ಯ ಹಿರಿಯಡಕ


Wednesday, August 12, 2020

ವಸುಧೇಂದ್ರ - ತುಷಾರ ಕಥಾ ಸ್ಪರ್ಧೆ - ಬಹುಮಾನ ವಿತರಣೆ { audio }

ಶಾಂತಾರಾಮ ಸೋಮಯಾಜಿಯ ಮಣ್ಣಿನ ಬಳೆ ಮತ್ತು ಇತರ ಕತೆಗಳು.

ಶಾಂತಾರಾಮ ಸೋಮಯಾಜಿಯವರ ’ಕೆಂಪು ಹೂವು’ ಕಥಾಸಂಕಲನ ೧೯೭೨ರಲ್ಲು ಪ್ರಕಟವಾಯಿತು.೧೯೭೯ರಿಂದ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂಜಿನಿಯರಿಂಗ್  ಪ್ರೊಫೆಸರ್ ಆಗಿ ನೆಲೆಸಿರುವ ಡಾ| ಸೋಮಯಾಜಿಯವರು ೧೯೯೧-೯೨ರ ಅವಧಿಯಲ್ಲಿ ಬರೆದಿರುವ ಕತೆಗಳು ’ಮಣ್ಣಿನ ಬಳೆ ಮತ್ತು ಇತರ ಕತೆಗಳು’ ಸಂಕಲನದಲ್ಲಿ ಪ್ರಕಟವಾಗಿವೆ. ಈ ಸಂಕಲನದಲ್ಲಿ ಸೋಮಯಾಜಿಯವರ ಸೃಜನಶೀಲ ಆರೋಹರಣಕ್ಕೆ ರುಜುವಾತು ನೀಡುವ ಹನ್ನೊಂದು ಕತೆಗಳಿವೆ. ’ಮಣ್ಣಿನ ಬಳೆ’ ಸೋಮಯಾಜಿಯವರ ಪ್ರಾತಿನಿಧಿಕ ಕತೆ. ಈ ಕತೆಯ ನಿರೂಪಕನ ಪತ್ನಿ ಕ್ಯಾನ್ಸರ್ ರೋಗಿಯಾಗಿ ಸಾವಿನ ದವಡೆಯಲ್ಲಿದ್ದಾಳೆ. ಅವಳ ಮಗ ರವಿ, ಕೌಟುಂಬಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದ ಅಸ್ವಸ್ಥ ಯುವಕ.ಅವನಿಗೆ ತನ್ನ ತಾಯಿಯ ಶವಸಂಸ್ಕಾರಕ್ಕಿಂತ ಗೆಳತಿಯೊಡನೆ ಮಜಾ ಮಾಡುವುದು ಮುಖ್ಯವಾಗುತ್ತದೆ. ಈ ಕತೆಯಲ್ಲಿ  ಬರುವ ರೋಪೀಟಾ ಎಂಬ ಜಲದೇವತೆ, ಕತೆಯ ನಿರೂಪಕ ತನ್ನ  ಸಂಕಟದಲ್ಲಿ ಕಾಣುವ ಕನಸುಗಳ ಸಂಕೇತ ಅಡಿಗರ ’ವರ್ಧಮಾನ’ ಕವನದಲ್ಲಿರುವ ತಂದೆಯಂತೆ ಈ ಕತೆಯ ನಾಯಕ ತನ್ನ ಮಗನ ವರ್ತನೆಯನ್ನು ಕಂದು ಕಂಗಾಲಾಗಿದ್ದಾನೆ.

’ಪಿಂಡೋಸೀಟ್’ ಮನುಷ್ಯನ ಸ್ವಾರ್ಥ ಮತ್ತು ವ್ಯವಸ್ಥೆಯ  ಕ್ರೌರ್ಯಗಳನ್ನು ಧ್ವನಿಸುವ ಕಥೆ. ಅಮಾನುಷವಾಗುತ್ತಿರುವ, ಯಾಂತ್ರಿಕವಾಗುತ್ತಿರುವ ಮನುಷ್ಯ ಸಂಬಂಧಗಳು ಕತೆಗಾರ ಸೋಮಯಾಜಿಯವರನ್ನು ಕಾಡುತ್ತವೆ.’ಅಸಹ್ಯವೆನ್ನು’ ಈ ಸಂಕಲನದ ಇನ್ನೊಂದು  ಒಳ್ಳೆಯ ಕತೆ. ’ಪವಾಡ ಮಾವಿನಮರ’ ಸ್ಥಳ ಪುರಾಣವೊಂದನ್ನು ಜನಪದ ನಂಬಿಕೆಗಳ ಅಧ್ಯಯನ ತಂತ್ರದಲ್ಲಿ ನಿರೂಪಿಸುವ ಕಥೆ.ಮಾಂತ್ರಿಕ ವಾಸ್ತವಿಕತೆ, ಫ್ಯಾಂಟಿಸಿ ಮತ್ತು ಜನಪದ ಕಥನ ತಂತ್ರಗಳನ್ನು ಇತ್ತೀಚೆಗೆ ಕೆಲವು ಕನ್ನಡ ಕತೆಗಾರರು ಬಳಸುತ್ತಿದ್ದಾರೆ. ಸೋಮಯಾಜಿಯವರು ಈ ಕಥನ ತಂತ್ರಗಳ ಪ್ರಯೋಗಗಳನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ’ನಾಟಕ’ ಎರಡು ಮುದ್ದು ಕಣ್ಣುಗಳು’ ’ಒಂದು ಹಂದಿಯ ಕತೆ’ ’ಖಾಲಿ ಲಕೋಟೆ’ ಕತೆಗಳಲ್ಲಿ ಕತೆಗರರು ಏನು ಹೇಳುತ್ತಿದ್ದಾರೆ  ಎನ್ನುವುದರಷ್ಟೆ ಹೇಗೆ ಹೇಳುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.

ಕತೆಗಾರ ಸೋಮಯಾಜಿಯವರು ಮುನ್ನುಡಿಯಲ್ಲಿ ತನ್ನ ಕತೆಗಳ ಧ್ವನಿಯನ್ನು ವಿವರಿಸಿದ್ದಾರೆ. ಅವರು ಬಳಸುವ ಸಂಕೇತ, ತಂತ್ರಗಳು ಸಂವಹನದ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ. ಜೀವನದ ಅರ್ಥಪೂರ್ಣ ಸನ್ನಿವೇಶಗಳ  ಮುಂಚುನೋಟ ನೀಡುವ ಸಣ್ಣಕತೆ ತನ್ನ ಧ್ವನಿ ಶಕ್ತಿಯಿಂದ ಜೀವನದ ಸಮಗ್ರ ನೋಟ ನೀಡುವುದು ಸಾಧ್ಯ ಎಂಬ ಕತೆಗಾರಿಕೆಯ ಪವಾಡ   ರಹಸ್ಯ ಸೋಮಯಾಜಿಯವರಿಗೆ ಗೊತ್ತು.  ಅಮೆರಿಕದಲ್ಲಿರುವ ಈ ಕನ್ನಡ ಕತೆಗಾರರಿಂದ ಅನಿವಾಸಿ ಭಾರತೀಯರ ಬದುಕನ್ನು ಚಿತ್ರಿಸುವ ಇನ್ನಷ್ಟು ಆಳ-ಎತ್ತರದ ಕತೆಗಳನ್ನು ನಾವು ನಿರೀಕ್ಷಿಸಬಹುದು.


ಮಣ್ಣಿನ ಬಳೆ ಮತ್ತು ಇತರ ಕತೆಗಳು
ಲೇ: ಶಾಂತಾರಾಮ್ ಸೋಮಯಾಜಿ
ಪ್ರ:ಲೋಹಿಯಾ ಪ್ರಕಾಶಾನ, ’ಕ್ಷಿತಿಜ’
ಕಪ್ಪಗಲ್ ರಸ್ತೆ, ಗಾಂಧೀನಗರ,
ಬಳ್ಳಾರಿ-೫೮೩೧೦೩.
ಮೊದಲ ಮುದ್ರಣ
ಮುರಳೀಧರ ಉಪಾಧ್ಯ, ಹಿರಿಯಡಕ

ಡಾ / ಸಿ. ಎನ್. ರಾಮಚಂದ್ರನ್ { AUDIO } - ಸ್ತೋತ್ರ ಸಾಹಿತ್ಯ ಮಂಥನ

cnramachandran - Clyp -pls clik here to listen

File:C.N.Ramachandran.JPG

ಅಗಜಾನನ ... , ನಟರಾಜನ ವಿಗ್ರಹ , ನೀ ತಂದೆ ನಾ ಬಂದೆ - ಪುರಂದರದಾಸರು , ನಾಸದೇಯ ಸೂಕ್ತ , ಕೃಷ್ಣ ಯಜುರ್ವೇದ , ಮಂತ್ರ ಪುಷ್ಪ , ಬೈಬಲ್ , Pope  ,Bible , ಸೃಷ್ಠಿ ಕರ್ತ ಮತ್ತು ಸೃಷ್ಠಿ ರಹಸ್ಯ , ಅಂಬರೀಷ , ಅಜಾಮಿಳ ,

Muraleedhara Upadhya -- " ಕನಕನ ಕಿಂಡಿ " ಯಲ್ಲಿ ಡುಂಡಿಪನ್ { DUNDIPUN }

P. V. Acharya -ಪಾ. ವೆಂ. ಆಚಾರ್ಯ -Photo Album

k.Satyanarayana - -ನಿಮ್ಮ ಮೊದಲ ಪ್ರೇಮದ ಕತೆ

ಮುರಳೀಧರ ಉಪಾಧ್ಯ ಹಿರಿಯಡಕ- ಡಾ/ ವಿಶ್ವಾಸ ಅವರ ಸ್ಮೃತಿಪಥ

ಡಾ|| ಎಚ್. ಆರ್. ವಿಶ್ವಾಸ ಅವರ ಕನ್ನಡ - ಸಂಸ್ಕೃತ ಭಾಷಾಂತರಕಾರರಾಗಿ ಪ್ರಸಿದ್ದರಿ. ಎಸ್.ಎಲ್. ಭ್ಯರಪ್ಪನವರ  ಆವರಣ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಭಷಾಂತರ ಪ್ರಶಸ್ತಿ ಪಡೆದಿದ್ದರೆ. ವಿಶ್ವಾಸ ಅವರು ಕನ್ನಡದಿಂದ ಸಂಸ್ಕೃತಕ್ಕೆ ಭಷಾಂತರಿಸಿರುವ ಇನ್ನೊಂದು ಮಹತ್ತ್ವದ ಕೃತಿ - ಪವ೯. ’ ಅಪಶ್ಚಿಮಃ ಪಶ್ಚಿಮೇ ಮತ್ತು ಪಿಡಿದು ಸಂಸ್ಕೃತ ಸೂತ್ರವ..’ - ಇವು ವಿಶ್ವಾಸ ಅವರು ತನ್ನ ಅಮೇರಿಕ ಪ್ರವಾಸದ ಕುರಿತು ವರೆದಿರುವ ಪ್ರವಾಸಕಥನಗಳು. ಡಾ|| ವಿಶ್ವಸ ಅವರ ಅಂಕಣ ಬರಹಗಳ ಸಂಕಲನ - ಸಂಗತ. ಕೆಲವು ಲಲಿತ ಪ್ರಬಂದಗಳು, ಹಾಗೂ ಸೊಗಸಾದ ವ್ಯಕ್ತಿಚಿತ್ರಗಳು ಈ ಸಂಕಲನದಲ್ಲಿವೆ. ಪಿ.ಎಚ್.ಡಿ. ಸಂಪ್ರಬಂಧ ಬರೆಯಲು ಡಾ|| ವಿಶ್ವಸ ಅವರು ಆಯ್ಕೆ ಮಾಡಿಕೊಂಡ ವಿಷಯ - ಜಗ್ಗು ಶಿಂಗರಾಯ೯ನ ಕೃತಿಗಳು. ಡಾ|| ವಿಶ್ವಸ ಸಂಸ್ಕೃತಭಾರತಿಯ ಪೂಣಾ೯ವಧಿ ಕಾಯ೯ಕತ೯ರಾಗಿ ಈಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. 

ಸ್ಮೃತಿಪಥ ಪುಸ್ತಕದ ಬರವಣಿಗೆಯ ಹಿನ್ನೆಲೆಯನ್ನು ಡಾ|| ವಿಶ್ವಾಸ್  ಹೀಗೆ ವಿವರಿಸುತ್ತಾರೆ - ಎಂಟು ತಿಂಗಳ ಹಿಂದೆ (೧೯-೦೭-೨೦೧೩) ನಡೆದ ರಸ್ತೆ ಅಪಘಾತವೂಂದರಲ್ಲಿ ತೀವ್ರ ಜಜ೯ರಿತನಾಗಿ ಪವಾಡವನ್ನುವ ರೀತಿಯಲ್ಲಿ ಬದುಕಿಬಂದು, ವಿಶ್ರಾಂತಿಗೆಂದು ಲ್ಕಾರು ತಿಂಗಳು  ಮನೆಯಲ್ಲೇ ಅಲ್ಲಾಡದೆ ಪಟ್ಟಾಗಿ ಕುಳಿತಿದ್ದಾಗ ಬಿಡದೆ ಕಾಡಲು ತೊಡಗಿದವು ಹಳೆಯ ನೆನಪುಗಳು.ಅವುಗಳಿಗೆ ಅಕ್ಷರದ ರೂಪು ಕೊಡಲು ಪ್ರಯತ್ನಿಸಿದೆ. ಅದರ ಫಲವೇ ಈ ಸ್ಮ್ಕೃತಿಗಳು.’

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹುತ್ತಿನಗದ್ದೆ ಗ್ರಾಮದ ಹುಲಿಯಾಳಿ ವಶ್ವಾಸರ ಹುಟ್ಟೂರು. ಮಲೆನಾಡ ಮಡಿಲಲ್ಲಿ ಎಂಬ ಅಧ್ಯಾಯದಲ್ಲಿ ಮಲೆನಾಡಿನ ಹಳ್ಳಿಗಳ ಆತ್ಮೀಯ ಸಮೀಪ ಚಿತ್ರಣ ಸಿಗುತ್ತದೆ. ಮಲೆನಾಡಿನ ಮಳೆಗಾಲ, ರೈತರ ಸುಖ - ಕಷ್ಟಗಳು, ಮಕ್ಕಳು ಯಕ್ಷಗಾನ ಮಂಡಳಿ, ಆಥಿ೯ಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸಕ್ಕೆ ಪಡುವ ಕಷ್ಟ - ಹೀಗೆ ವೈವಿಧ್ಯಪುಣ೯ ನೆನಪುಗಳು ಇಲ್ಲಿ ಅನಾವರಣಗೊಂಡಿವೆ. ಮಲೆನಾಡಿನ ಗ್ರಾಮೀಣ ಶಿಕ್ಷಣವ್ಯವಸ್ಥೆಯ ಒಂದು ಸ್ಥೂಲ ನೋಟ ಇಲ್ಲಿ ಸಿಗುತ್ತದೆ.

ಮಲೆನಾಡಿನ ಹಳ್ಲಿಗಳಲ್ಲಿ ರಾತ್ರಿ ಕಾಲ್ನಡಿಗೆ ಪ್ರಯಾಣಕ್ಕೆ ಬಳಸುವ ಒಂದು ರೀತಿಯ ಪಂಜಿನ ಹೊತ್ತೆ ಅಡಿಕೆ ಮರದ ಹಾಳೆ ಮತ್ತುದಬ್ಬೆಯಿಂದ ಇದನ್ನು ತಯಾರಿಸುತ್ತಾರೆ. ಈ ಹೊತ್ತೆ ಜಾನಪದ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಜಾನಪದ ನಿಘಂಟಿನಲ್ಲೂ ದಾಖಲಾಗಿಲ್ಲ. ಎತ್ತಿನ ಮೂಗಿನ ಹೂಳ್ಳೆಗಳಲ್ಲಿ ಸೇರಿಕೊಂಡ ಹೂಟ್ಟಿನ ಜಿಗಣೆಯನ್ನು ತೆಗೆಯುವ ಜನಪದ ವೈದ್ಯಕೀಯ ತಂತ್ರ ಕುತೂಹಲಕಾರಿಯಾಗಿದೆ.

ಮನೆಗೆ ನಡೆದುಕೊಂಡು ಹೋಗುವಾಗಲೇ ಕವಾ೯ಲೋ ಕಾದಂಬರಿಯ ಅಧ೯ಭಾಗ ಓದಿದ್ದು ವಿದ್ಯಾಥಿ೯ ಪುಸ್ತಕಪ್ರೀತಿಗೆ ಒಂದು ಪುಟ್ಟ ಉದಾಹರಣೆ. ಶ್ರೀ ವಿಶ್ವೇಶತೀಥ೯ಸ್ವಾಮೀಜಿಯವರ, ಸೋ.ತಿ. ನಾಗರಜ, ರಂಗನಾಥಶಮಾ೯, ಉಡುಪಿಯ ಎನ್. ಲಕ್ಷ್ಮೀನಾರಾಯಣ ಭಟ್ಟ - ಇಂಥ ಸಂಸ್ಕೃತವಿದ್ವಾಂಸರ, ಗೋಪಾಲಕೃಷ್ಣ ಅಡಿಗ, ಹಾ.ಮಾ. ನಾಯಕ, ಎಸ್,ಎಲ್. ಭೈರಪ್ಪನವರಂಥ ಸಾಹಿತಿಗಳ ಆತ್ಮೀಯ ವ್ಯಕ್ತಿಚಿತ್ರಗಳು ಈ ಹೊತ್ತಗೆಯಲ್ಲಿವೆ. ಸೋ.ತಿ. ನಾಗರಾಜರ ವ್ಯಕ್ತಿಚಿತ್ರ ಎಷ್ಟು ಚೆನ್ನಾಗಿದೆ ಎಂದರೆ ತರೀಕೆರೆ ತಾಲೂಕಿನ ಸೋಮಪುರಕ್ಕೆ ಹೋಗಿ ಅವರನ್ನು ಭೇಟಿಯಾಬೇಕೆಂದು ನನಗೆ ಆಸೆಯಾಗಿದೆ. 

ಶಿಂಗರಾಯ೯ ಒಬ್ಬ ಅಲಕ್ಷಿತ ಲೇಖಕನಾಗಿರುವುದರಿಂದ ಡಾ. ವಿಶ್ವಾಸರು ಶಿಂಗರಾಯ೯ನನ್ನು ಕುರಿತುತನ್ನ ಪಿ.ಎಚ್.ಡಿ. ಅದ್ಯತನದ ಬಗ್ಗೆ ವಿವರವಾಗಿ ಬರೆದಿದ್ದರೆ ಚೆನ್ನಾಗಿತ್ತು. ವಿಶ್ವಾಸರು ಹಂಸಕ್ಷೀರ ನ್ಯಾಯದಂತೆ ತನ್ನ ಜೀವನದ ಕಹಿನೆನಪುಗಳನ್ನು ನುಂಗಿಕೂಂಡು ಸಿಹಿ ಅನುಭವಗಖನ್ನು ಕುರಿತು ಮಾತ್ರ ಬರೆದಿದ್ದಾರೆ.

ಸಂಸ್ಕೃತವಿದ್ವಾಂಸರ ಸಂಸ್ಕೃತಭೂಯಿಷ್ಠವಾಗಿ ಬರೆಯದೆ, ಕನ್ನಡಕ್ಕೆ ಹತ್ತಿರವಾದ ಶೈಲಿಯಲ್ಲಿ ಹೇಗೆ ಬರೆಯಬಹುದೆಂಬುದಕ್ಕೆ ಬನ್ನಂಜೆ ಗೋವಿಂದಾಚಾಯ೯ರ ಕನ್ನಡ ಗದ್ಯ ಒಳ್ಳೆಯ ಮಾದರಿ. ಡಾ|| ಎಚ್.ಆರ್. ವಿಶ್ವಾಸ ಅವರ ಸಂಸ್ಕೃತ ಘಾಟನ್ನು ದುರವಿಟ್ಟು, ಕನ್ನಡದಲ್ಲಿ ಬರೆಯುತ್ತಿರುವುದು ಸಂತಸದ ಸಂಗತಿ. ಅವರ ಶೈಲಿ ಕಮ೯ಣಿಸರದೂಳ್ ಚೆಂಬವಳಮಂ ಕೋ"ದಂತಿದೆ. ಡಾ|| ವಿಶ್ವಾಸರ ಬಾಲ್ಯ, ಯೌವನಗಳ ಸುಸಂಸ್ಕೃತ ಅಭಿರುಚಿಗಳ ಸಮೃದ್ದ ನೆನಪುಗಳಿಂದ ಇಡಿಕಿರೊದಿರುವ ಈ ಹೂತ್ತೆಗೆ ಕಾದಂಬರಿಯ ಅದ್ಯಾಯಗಳಂತೆ, ಲಲಿತ ಪ್ರಬಂಧಗಳಂತೆ, ವ್ಯಕ್ತಿಚಿತ್ರಗಳಂತೆ ಸಲೀಸಾಗಿ ಓದಿಸಕೊಂಡು ಹೋಗುತ್ತದೆ.  ನೆನಪಿನ ದೋಣಿಯಲ್ಲಿ ವಿಹರಿಸಿದ ಡಾ|| ವಿಶ್ವಾಸರಿಗೆ ಅಭಿನಂನೆಗಳು.

         ----ಮುರಳೀಧರ ಉಪಾಧ್ಯ ಹಿರಿಯಡಕ 

 

ಮುರಳೀಧರ ಉಪಾಧ್ಯ ಹಿರಿಯಡಕ -- ರಾಧಾಕೃಷ್ಣ ಕಲ್ಚಾರ್ ಅವರ ಕೂಡುಮನೆ { ಕಾದಂಬರಿ }

ರಾಧಾಕೃಷ್ಣ ಕಲ್ಚಾರ್ ಒಬ್ಬ ಕಸುಗಾಯಿ ಕವಿ. ಕತೆಗಾರ, ಪತ್ರಿಕಾಕತ೯ ಎಂಬುದನ್ನು ನಾನು ಗಮನಿಸಿದ್ದೇನೆ. ಒಂದು ಪ್ರಸಿದ್ದ ಜನಪ್ರಿಯ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಈ ಜವ್ವನಿಗ ಕಾಲೇಜೊಂದರಲ್ಲಿ ಉಪನ್ಯಾಸಕನ ಕೆಲಸ ಸಿಕ್ಕಿದಾಗ ಪತ್ರಿಕಾರಂಗಕ್ಕೆ ವಿದಾಯ ಹೇಳಿದರು. ಈನಿಧಾ೯ರ, ಪ್ರಚಾರವನ್ನು ಇಷ್ಟಪಡದ. ಜನಪ್ರಿಯತೆಯ ಹುಚ್ಚು ಹೊಳೆಯಲ್ಲಿ ತೇಲಿ ಹೋಗದ ಅವರ ಅಂತಮು೯ಖಿ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ಮುನ್ನುಡಿಕಾರನಾಗಿ ಒಂದೆರೆಡು ಪ್ರಸಂಗಗಳಲ್ಲಿ ನನಗೆ ಕಹಿ ಅನುಭವವಾದದ್ದುಂಟು, ದಮ್ಮಯ್ಯ ಹಾಕಿ ನನ್ನಿಂದ ಮುನ್ನುಡಿ ಪಡೆದ ಲೇಖಕರು ಅದನ್ನು ಪ್ರಕಟಿಸುವಾಗ ಕತ್ತರಿ ಪ್ರಯೋಗ ಮಾಡಿ ಪ್ರಕಟಿಸಿದ್ದರು! ರಾಧಾಕೃಷ್ಣ ಕಲ್ಚಾರ್ ಅವರ ಕೂಡುಮನೆ ಕಾದಂಬರಿ ಸ್ಪಧೆ೯ಯಲ್ಲಿ ಬಹುಮಾನ ಪಡೆದಿದೆ ಎಂಬ ಸುದ್ದಿ ಓದಿದಾಗ ಸಂತೋಷ ಪಟ್ಟ ನನಗೆ, ಈಕಾದಂಬರಿಗೆ ಮುನ್ನಡಿ ಬರೆಯಬೇಕೆಂಬ ವಿನಂತಿಯನ್ನು ನಿರಾಕರಿಸುವುದು ಸಾದ್ಯವಾಗಲಿಲ್ಲ. ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು ಎಂಬ ಕವಿವಾಣಿಯನ್ನು ನೆನಪಿಸಿಕೊಂಡು ಒಪ್ಪಿದ್ದೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸುಪಾಸಿನ ಗ್ರಾಮೀಣ ಪರಿಸರದ ಅಡಿಕೆ ತೋಟದ ಬ್ರಾಹ್ಮಣ ಕುಟುಂಬವೊದರ ಕತೆ ಕಲ್ಚಾರರ ಕೂಡುಮನೆ ಯಲ್ಲಿದೆ. ಶಂಭಟ್ಟರ ಕೂಡುಮನೆ ಒಡೆಯುವುದು, ಅವರ ಮೊಮ್ಮಗನ ಕಾಲದಲ್ಲಿ ಮತ್ತೊಮ್ಮೆ ಕೂಡುಮನೆಯಾಗುವುದು ಈ ಕಾದಂಬರಿಯ ವಸ್ತು. ದುಡ್ಡಿನ ಲೆಕ್ಕಾಚಾರಕ್ಕೆ ಸಂಬಂಧಿಸಿ ಅಣ್ಣ-ತಮ್ಮಂದಿರಾದ ನಾರಾಯಣ - ಶಂಕರರಲ್ಲಿ ಉಂಟಗುವ ಮನಸ್ತಾಪವೇ ಕೂಡುಮನೆ ಒಡೆಯಲು ಕಾರಾಣವಾಗುತ್ತದೆ. ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಪದವೀರನಾಗಿ ಮಹಾನಗರದ ಆಕಷ೯ಣೆಗಳಿಗೆ ಸಿಲುಕದೆ ಹಳ್ಲಿಗೆ ಹಿಂದಿರುಗುವ ಶ್ರೀಧರನ (ಶಂಭಟ್ಟರ ಮೊಮ್ಮಗ) ಕಣ್ಣೆದುರಿನಲ್ಲಿಯೇ ಕೂಡುಮನೆ ಪಾಲಾಗುತ್ತದೆ. ಮುಂದೆ ಕೂಡುಮನೆ ಹಿಸೆಯಾಗಲು ಕಾರಣನಾದ ನಾರಾಯಣ (ಶ್ರೀಧರನ ತಂದೆ) ಪಶ್ಚಾತ್ತಾಪ ಪಡುತ್ತಾನೆ. 

''ಮನೆ ಮಂದಿಯ ಸಂಬಂಧ ಗಾಢವಾಗಿ ಉಳಿದಿದೆಯೇ?ಅಥವಾ ಅದೂ ಬದಲಾಗಿದೆಯೇ? ಅಮ್ಮ. ಅಪ್ಪ, ಅಣ್ಣ, ತಂಗಿ ಇತ್ಯಾದಿ ಸಂಬಂಧಗಳೂ ಬದಲಾಗುತ್ತಿವೆಯೇ? ಈ ಪ್ರಶ್ನೆಗಳು ಶಂಭತ್ತರಿಗೆ ಬಿಡಿಸಲಾಗದ ಒಗಟುಗಳಾಗುತ್ತವೆ. ಮನುಷ್ಯ ಸಂಬಂಧಗಳನ್ನು ಕುರಿತ ನಿಗೂಢ ಒಗಟುಗಳನ್ನು ಬಿಡಿಸುವುದರಲ್ಲಿ ಕಾದಂಬಂರಿಕಾರ ಕಲ್ಚಾರರಿಗೆ ಆಸಕ್ತಿ ಇದೆ.

ಅವಿಭಕ್ತ ಕುಟುಂಬವೂಂದು ತಿರುಗಿ ಒಡೆದ ಮೇಲೆ ತಿರುಗಿ ಕೂಡುಮನೆಯಾಗಬೇಕೆಂಬುದು ಒಂದು ಅಸಾಧ್ಯ ಆದಶ೯ವಲ್ಲವೇ? ಈ ಪ್ರಶ್ನೆ ಕಾದಂಬರಿಕಾರನನ್ನು ಕಾಡಿದೆ. ಈಗ ಮತ್ತೆ ಒಟ್ಟಾಗುವುದು ಹೇಳಿದಷ್ಟು ಸುಲಭವೇ? ಎಂದು ಶ್ರೀಧರನ ಚಿಕ್ಕಪ್ಪ ರಾಜಾರಾಮ ಪ್ರಶ್ನಿಸುತ್ತಾನೆ. ಕೂಡುಮನೆ ಭಗ್ನಗೂಳ್ಳದ ಸ್ಥಾವರವಾಗಿ ಉಳಿಯಲು ಸಾಧ್ಯವೇ? ಈ ಕಾದಂಬರಿಯ ಕೂನೆಯ ಸಾಲುಗಳು ಹೀಗಿವೆ- "ಅಂತೂ ಅಜ್ಜನ ಆಸೆ ಈಡೇರುವ ಲಕ್ಷಣ ಕಾಣುತ್ತದೆ. ಇನ್ನು ನನ್ನ ಮಕ್ಕಳೋ, ರಾಮನೋ ಪಾಲು ಕೇಳುವವರೆಗೆ ಹೀಗೇ ನಡೆದೀತಿ. ಆಮೇಲೆ ಮತ್ತೂಮ್ಮೆ ಪಾಲಿಗೆ ಜಗಳ" ಎನ್ನುತ್ತ ಶೀಧರನೂ ನಕ್ಕ". 

ಕೂಡುಮನೆಯವರು ಮತ್ತು ಅವರ ನೆರೆಹೂರೆಯ ಸ್ವಜಾತಿ ಬಾಂಧವರಲ್ಲದೆ ಅನ್ಯಜಾತಿಯವರಾರೂ ಇಲ್ಲಿ ಕಾಣಿಸುವುದಿಲ್ಲ. ಹೀಗೆ ಸ್ವಜಾತಿಯ ದ್ವೀಪದಲ್ಲಿ  ಬದುಕುವುದು ಈ ಕಾಲದಲ್ಲಿ ಸಾದ್ಯವೇ/ ಇದು ಲೇಖಕರ ಅಖಂಡ ದೃಷ್ಟಿಗೆ ಸಂಬಂಧಿಸಿದ ಪ್ರಶ್ನೆಯೂ . ಕೂಡು ಮನೆ ಯಲ್ಲಿ ನಾವು ಚಿಂತಿಸುವಂತೆ ಮಾಡುವ ಇನ್ನೂಂದು ಚಿಕ್ಕ ಪಾತ್ರ_ಶ್ರೀಹರಿ. ಈತನ ಅಂತರ್ ಜಾತೀಯ ವಿವಾಹದಿಂದಾಗಿ ಇವನ ತಂದೆ ನಾರಾಯಣನಿಗೆ ಮಾನಸಿಕ ಆಘಾತವಾಗುತ್ತದೆ. ಶ್ರೀಧರನ ಕೂಡುಮನೆಯಲ್ಲಿ ಶ್ರೀಹರಿ ದಂಪತಿಗಳಿಗೆ ಸ್ವಾಗತವಿದೆಯೇ? ಕಾದಂಬರಿಕಾರರ ನಿಲುವು ಅಸ್ಪಷ್ಟವಾಗಿದೆ. 

ಕಾರಂತರ ಬೆಟ್ಟದ ಜೀವದ ಗೋಪಾಲಯ್ಯ ಅಂತರ್ ಜಾತೀಯ ವಿವಾಹ ಮಾಡಿಕೂಂಡ ತನ್ನ ಮಗನನ್ನು ಒಪ್ಪಿಕೂಳ್ಳುತ್ತಾನೆ. ಆದರೆ ಕೂಡುಮನೆ ಯ ನಾರಾಯಣನಿಗೆ ಇದು ಸಾಧ್ಯಾವಾಗುದಿಲ್ಲ.

ಅಡಿಕೆತೋಟಗಳಲ್ಲಿ ವಾಸಿಸುವ ದಕ್ಷಿಣ ಕನ್ನಡದ ಹವ್ಯಕ ಬಾಹ್ಮಣರ ಅವಿಭಕ್ತ ಕುಟುಂಬಗಳನ್ನು ಕುರಿತು ಸಮಾಜ ಶಾಸ್ತ್ರಜ್ನರೂಬ್ಬರು ಬರೆದ ಸಂಶೋಧನ ಪ್ರಬಂಧವೂಂದನ್ನುನಾನು ಇತ್ತೀಚೆಗೆ ಓದಿದೆ. ಸಂಶೋಧಕ ಮಾಕ್೯ ವಿಕ್ಟರ್ ಹೇಳುವಂತೆ, ಬೇರೆ ಆಗುವ ಸ್ಥಿತಿಯಲ್ಲಿರುವ ಅಥವಾ ಹೆಸರಿಗೆ ಮಾತ್ರ ಒತ್ತಿಗೆ ಇದ್ದು ಅಸಂತೋಷ ವ್ಯಕ್ತಪಡಿಸುತ್ತಾ ಇರುವ ಸಯುಕ್ತ ಪರಿವಾರಗಳಲ್ಲಿ ವಿಷ ಹಾಕಿರುವ ಬಗ್ಗೆ ಸಂದೇಹ ಪಡುವುದು ಹೆಚ್ಚು ಪ್ರಚಲಿತವಾಗಿದೆ. ನನ್ನ ಎರಡು ಮೂರು ವಷ೯ಗಳ ಅಧ್ಯಯನದಿಂದ ತಿಳಿದು ಬಂದಂತೆ ಓರಗಿತ್ತಿಯವರು ಒಬ್ಬರಿಗೂಬ್ಬರು ಸರಿ ಇಲ್ಲದಿದ್ದು ಯಾವಾಗಲೂ ಪರಸ್ಪರ ಮನಸ್ತಾಪದಿಂದ ಕೂಡಿದವರಾಗಿರುತ್ತಾರೆ. ಪ್ರತಿಯೊಬ್ಬಳೂ ಇನ್ನೂಬ್ಬಳಿ ತನ್ನ ಮಕ್ಕಳು ಅಥವಾ ಗಂಡನಿಗೆ ಗಾಕಿರುವರೆಂದು ಸಂದೇಹಿಸಿದ್ದಳು. ಈ ಸಂದೇಹ ಮಾನಸಿಕ ಉನ್ಮಾದದ ಮಟ್ಟಕ್ಕೆ ಹೋಗಿತ್ತು. (ಸಿರಿ- ಅಮೃತ ಸೋಮೇಶ್ವರ ಅಭಿನಂದನ ಗ್ರಂಥ (ಸಂ) ಡಾ|ಪುರುಷೋತ್ತಮ ಬಿಳಿಮಲೆ, ಎ.ವಿ. ನಾವಡ, ರಾಮಚಂದ್ರ ಉಚ್ಚಿಲ, ೧೯೯೫). ಅಡುಕೆತೋಟದ ನಡುವಿನ ಕೂಡುಮನೆ ಒಂದು ಸಂಕೀಣ೯ ಜಗತ್ತು. ಆದರೆ ರಾಧಾಕೃಷ್ನ ಕಲ್ಚಾರ್ ಅವರ ಕಾದಂಬರಿಯಲ್ಲಿ ಯಾವ ಹೆಣ್ಣು ಪಾತ್ರವೂ ಸರಿಯಾಗಿ ಬೆಳೆದಿಲ್ಲ. ಕಾದಂಬರಿಗೆ ಪ್ರಾದೇಶಿಕ ರಂಗು ನೀಡಲು ಲೇಖಕರು ಇನ್ನಷ್ಟು ಪ್ರಯತ್ನಿಸಬಹುದಿತ್ತು. 

"ಕೂಡುಮನೆ" ಓದುವಗ ನನಗೆ ಕಡೆಂಗೋಡ್ಲು ಶಂಕರ ಭಟ್ಟರ ಕಾದಂಬರಿ ಈ ಪೀಳಿಗೆಯ ನೆನಪಾಯಿತು. ಸ್ವಾತಂತ್ರ್ಯ ಹೋರಾಟದ ಸಂದಭ೯ದ ಕಾದಂಬರಿಯಲ್ಲಿ ರಾಜಕೀಯ ಭಿನ್ನಭಿಪ್ರಾಯಗಳ ಕಾರಣದಿಂದ ಒಂದು ಕುಟುಂಬ ಒಡೆಯುತ್ತದೆ. ಕೂಡುಮನೆಯ ನಾರಾಯಣ ಶಂಕರರಿಗೆ ಆಸ್ತಿಯ ರಾಜಕೀಯವೇ ಮುಖ್ಯವಾಗುತ್ತದೆ.

ವಧ೯ಮಾನದ ವರಾತದಲ್ಲಿರುವ ಕಾದಂಬರಿಕಾರ ರಾಧಾಕೃಷ್ನ ಕಲ್ಚಾರ್ ಅದೃಷ್ಟಶಾಲಿ. ಅವರ ಮೂದಲ ಕಾದಂಬರಿ ಕೂಡುಮನೆ ಹಸ್ತಪ್ರತಿಯ ರೂಪದಲ್ಲಿದ್ದಾಗಲೆ ಪ್ರಶಸ್ತಿ ಪಡೆದು ಈಗ ಪ್ರಕಟವಾಗುತ್ತಿದೆ. ಕೂಡುಮನೆ ಓದುವಾಗ ಮನೆಯೂಳಗೆ ಮನೆಯೂಡೇಯ ಇದ್ದಾನೂ ಇಲ್ಲವೂ ಎಂಬ ಗುಮಾನಿ ಮೂಡುವುದಿಲ್ಲ. ಈ ಕಾದಂಬರಿ ಸಹೃದಯರ, ವಿಮಶ೯ಕ ಗಮನ ಸೆಳೆಯಲಿ ಎಂದು ಹಾರೈಸುತ್ತೇನೆ. ಒಂದು ಹೆಜ್ಜೆ ಮುಂದೆ -ಇಷ್ಟು ಸಾಕು ನನಗೆ ಎಂದು ಗಾಂದೀಜಿ ಹೇಳುತ್ತಿದ್ದರು. ರಾಧಾಕೃಷ್ಣ ಕಲ್ಚಾರ್ ಅವರು ಕೋಡುಮನೆ ಯಲ್ಲಿ ಪುಟ್ತ-ದಿಟ್ಟ, ಹೆಜ್ಜೆಯಿಡುತ್ತಿದ್ದಾರೆ. ಅವರ ಪ್ರತಿಭೆ ಪೂಂಬಾಳೆಯಲ್ಲಿರುವ ಸಿಂಗಾರದಂತಿದೆ. ಈ ಸಿಂಗಾರದ ಹೂ ಬಂಗಾರ ಬಣ್ಣದ ಅಡಾಕೆಗೊನೆ ಯಾಗಿ ಮಾಗಲಿ ಎಂದು ಹಾರೈಸುತ್ತೇನೆ. 


                                                                                 ಮುರಳೀಧರ ಉಪಾಧ್ಯ ಹಿರಿಯಡಕ 

ಜಯರಾಮ ಕಾರಂತ - ವೈದೇಹಿ:ಜೀವನ ಮತ್ತು ಕೃತಿಗಳ ಸಮೂಹ ಶೋಧ { ಸಂ- ಮುರಳೀಧರ ಉಪಾಧ್ಯ ಹಿರಿಯಡಕ }

ವೈದೇಹಿ ಕವ್ಯನಾಮದ ಲೇಖಕಿ ಜಾನಕಿ ಶ್ರೀನಿವಾಸಮೂತಿ೯ ಅವರು ನವ್ಯೋತ್ತರ ಕಾಲದ ಸ್ತ್ರೀ ಅಸ್ಮಿತೆಯ ಸಮಥ೯ ಪ್ರತಿಪಾದಕಿ. ಆದೆರೆ ತಾನು ಸ್ತ್ರೀವಾದಿ ಸಾಹಿತಿ ಎಂದು ಬರಹಗಳಲ್ಲಾಗಲಿ ಭಾಷಣಗಳಲ್ಲಾಗಳಿ ಎಲ್ಲೂ ಹೇಳಿಕೂಳ್ಳಲು ಹೋಗದವರು. ಅವರ ಕತೆ. ಕವಿತೆಗಳಲ್ಲಿ ಪುರುಷ ಪಾರಮ್ಯಕ್ಕೆ ಸವಾಲೆಸೆಯುವ ಸಮಾಜ ವಿಮಶ೯ಕಿಯೊಬ್ಬಳ ಚಿಂತನಶೀಲತೆಯಿದೆ. ಜನಪದೂಯ/ದೇಸಿ/ಕಥನ ತಂತ್ರದ ಸಾಧ್ಯತೆಗಳನ್ನು ಕತೆ.ಕವಿತೆ,ಪ್ರಬಂಧಗಳಲ್ಲಿ ಅಚ್ಚರಿ ಹುಟ್ಟಿಸುವಷ್ಟು ಕಲಾತ್ಮಕವಾಗಿ ದುಡಿಸಿಕೊಂಡವರು ಅವರು. ಸಂಸಾರದೊಳಗಿನ ಕ್ರೌಯ೯ ಹಾಗೂ ದಾಂಪತ್ಯ ವಿಘಟನೆ ಕುರಿತ ವೃತ್ತಾಂತಗಳ ಮಂಡನೆಯ ಮೂಲಕ ಸಾಮಾಜಿಕ ಸ್ಥಿತ್ಯಂತರದ ಅನಿವಾಯ೯ ಸನ್ನಿವೇಶಗಳನ್ನೂ ಅದರೂಂದಿಗೆ ಸ್ಮಿತೆಗಾಗಿ ಹಪಹಪಿಸುವ ಹೆಣ್ಣುಜೀವಗಳ ಅಂತರಂಗದ ಪುಟಗಳನ್ನೂ ಸಹೃದಯ ಓದುಗರೆದುರು ತೆರೆದಿಟ್ಟಿ ಕತೆಗಾತಿ೯ಯಾಗಿ ವ್ಯದೇಹಿಯವರೊಗೆ ಎತ್ತರದ ಸ್ಥಾನವಿದೆ. ಅವರ ಕತೆಗಳು, ಕವನಸಂಕಲನಗಳು, ಪ್ರಬಂಧಗಳು, ಅನುವಾದಿತ ಲೇಖನಗಳ ಸಂಗ್ರಹಗಳು,ಹಾಗೂ ಸಂದಶ೯ನದ ಭಾಗಗಳನ್ನು ಕೂಡ ಇಲ್ಲಿ ಸಂಒಆದಕರು ಅಚ್ಚುಕಟ್ಟಾಗಿ ಕಲೆಹಾಕಿದ್ದಾರೆ.

1979 ರಿಂದ ಒಂಬತ್ತು ಕಥಾಸಂಕಲನಗಳು, ಮೂರು ಕವನಗಳು, ಒಂದು ಕಾದಂಬರಿ, ನಾಲ್ಕು ಜೀವನಚರಿತ್ರೆಗಳು, ಐದು ಅನುವಾದಿತ ಕೃತಿಗಳು, 13  ಮಕ್ಕಳ ನಾಟಕಗಳು, ವಿವಿದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳ ನಾಲ್ಕು ಸಂಕಲನಗಳನ್ನು ನೀಡಿರುವ ವೈದೇಹಿ ಅವರ ಈಅಕ್ಷರಯಾನ, ಕನ್ನಡದ ಸಿದ್ದಮಾದರಿಗಿಂತ ದೂರ ಸರಿದ ಲೇಖಕಿಯೂಬ್ಬಾಳು ವಸ್ತು ನಿವ೯ಹಣೆಯಲ್ಲಿ ತೋರಿದ ಪ್ರಯೋಗಶೀಲತೆಯನ್ನೂ, ಭಾಷೆಯ ಹಾಗೂ ನಿರೂಪಣೆಯ ಪ್ರಯೋಗದಲ್ಲಿನ ಅನನ್ಯತೆಯನ್ನೂ, ಬದುಕಿನ ಕಾಪ೯ಣ್ಯದ ನಡುವೆ ಸ್ವಂತ ಇರುವಿಕೆಯನ್ನು ಚೆಲುವುಗೊಳಿಸಿಕೊಳ್ಳಬೇಕಾದ ಸಾತ್ತ್ವಿಕ ಹಠವನ್ನೂ ಓದುಗರಿಗೆ ಮನದಟ್ಟು ಮಾಡಿಸುವಂಥದ್ದಾಗಿದೆ. ಬದುಕು ಚಂದವೆನಿಸಬೇಕಿದ್ದರೆ ಇಂಥ ಹಠ ಮಾತ್ರವಲ್ಲ ; ಎಲ್ಲದರಲ್ಲೂಹದ ಕಾಯ್ದುಕೊಳ್ಳಬೇಕು ಎಂಬ ನಿಲುವಿನ ಸಹಜ ಅಂತಃಕರಣಿಯಾದ ಈ ಲೇಖಕಿಯ ಬಗ್ಗೆ ಇಲ್ಲಿ ಕಲೆಹಾಕಲಾಗಿರುವ ಬರಹಗಳಿ, ಲೇಖಕಿಯ ಬಹುಮುಖಿಯಾದ ಸತ್ಯದ ಶೋಧವನ್ನು ಸೋಗಿಲ್ಲದೆ ನಡೆಸಿವೆ. ಇಲ್ಲಿನ ಲೇಖನಗಳ ಬಗ್ಗೆ , ಸ್ವತಃ ವಿಮಶ೯ಕರಾಗಿರುವ ಸಂಪಾದಕರು, ವೈದೇಹಿಯವರ ಕೃತಿಗಳನ್ನು ಕುರಿತು ಅವಮಶ೯ಕನ ಸುತ್ತಿ ಕಾಣಿಸುವುದಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಿರುವ ಮಾತು ಗಮನಿಸತಕ್ಕದ್ದಾಗಿದೆ. ಪುಸ್ತಕದ ಮೊದಲ ಪುಟಗಳಲ್ಲಿ ವೈದೇಹಿಯವರಿಗೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳೂ ಇವೆ. ಪುಟಮಿತಿಯ ಕಾರಣದಿಂದ ಇಲ್ಲಿ ಸೇರಿಲ್ಲದ 12 ಬರಹಗಳ ಪಟ್ಟಿಯೊಂದುನ್ನು ಸಂಪಾದಕರು ನೀಡಿದ್ದಾರೆ. ವೈದೇಹಿಯವರಂಥ ಸೂಕ್ಷ್ಮ-ಸತ್ತ್ವಯುತ ಬರಹಗಾತಿ೯ಯನ್ನು ಓದುವ ಬಗೆ ಹಾಗೂ ಅಥ೯ಮಾಡಿಕೊಳ್ಳುವ ಹಲವು ಬಗೆಗಳನ್ನು ಈ ಸಂಪುಟದ ಬರಹಗಳು ತೋರಿಸಿಕೊಟ್ಟಿವೆ. ಈ ಸಂಪುಟದ ರೂಪಣೆಯ ಹಿಂದಿರುವ ಸಂಪಾದಕರ ಶ್ರಮ ಹಾಗೂ ಶ್ರದ್ಧೆ ಶ್ಲಾಘನೀಯ.


                                                                                                          ಜಯರಾಮ ಕಾರಂತ 

ಸಂ:ಮುರುಳೀಧರ ಉಪಾಧ್ಯ ಹಿರಿಯಡಕ

ಪ್ರ:ಅಭಿನವ, 17/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040 ಮೊದಲ ಮುದ್ರಣ: 2018 ಬೆಲೆ:500 ರೂ.

ಮುರಳೀಧರ ಉಪಾಧ್ಯ ಹಿರಿಯಡಕ -- ಪುಸ್ತಕ ಪ್ರತಿಷ್ಠೆ-2018 ಭಾಗ- 2

                                           ಆತ್ಮಕತೆ ಬೇವನ ಚರಿತ್ರ- ವ್ಯಕ್ತಿಚಿತ್ರ-2018

1.ಸಿದ್ಧಲಿಂಗ ಪಟ್ಟಣ ಶೆಟ್ಟಿ-ಗಿರಿಜವ್ವನ ಮಗ.

2.ಅ.ನಾ.ಪ್ರಹ್ಲಾದರಾವ್ (ನಿರೂಪಣೆ)-ರಾಜಮೂಗಿ೯(ಪಾ.ಎ.ಎಸ್.ಅಧಿಕಾರೊ ಕೆ. ಜ್ಯೆರಾಜ್ ಅವರ ಆಡಳಿತದ ಅನುಭವಗಳು)

3.ನಮ್ಮೊಳಗಿನ ನಾಡು (ಕನಾ೯ಟಕ ನರಕಾರದ ಮಾಜಿ ಸಚಿವ ಬಿ.ಎ.ಮೊಹೀದಿನ್ ಆತ್ಮಕತೆ.)

4.ಇಂದಿರಾ ಹಲಂಬಿ- ಸ್ಮರಣಿಗೆ ಶರಣಾದೆ.

5.ಸ್ವಾಮಿರಾವ್ ಕುಲಕಣಿ೯-ಕಾಡುತಾವ ನೆನಪು.

6.ಪದ್ಯಣ ಗೋಪಾಲಕೃಷ್ಣ-ಅನುಭವ.ಅನುಭಾವಗಳು.

7.ಗಿರಿಮನೆ ಶ್ಯಾಮರಾವ್-ಮಲೆನಾಡಿನ ಮರೆಯದ ನೆನಪುಗಳು.

8.ಲಕ್ಷ್ಮೀ ಕುಂಜತ್ತೂರು-ಪ್ರಜ್ಞಾ ಭೂಮಿ.

9.ಮಾಗೋಡು ರಾಮಹೆಗಡೆ-ದಶಾವತಾರ

10.ಪಿ.ವಿ.ರಾವ್- ಅಂಚೆ ಜೀವನದ ನೆನಪುಗಳು.

11.ನಾರಾಯಣಿ ದಾಮೋದರ್-ನುಡಿನುಡಿತ (ನೆನಪುಗಳು)

12.ಸಿ.ಜಿ.ಪುರಾಣಿಕಮಠ-ಆನಂದದಾಯಕ ಬದುಕು.

13.ಭಾಸ್ಕರ ಹೆಗಡೆ-ಮ್ಯಾಗ್ ಸೇಸೆ ಪುರಸ್ಕೃತ ವಿಜ್ಞಾನಿ ಹರೀಶ ಹಂದೆ.

14.ಡಾ| ಪದ್ಮಿನಿ ನಾಗರಾಜ- ಕೃಷ್ಣಮೂತಿ೯ ಕವತ್ತಾರು.

15.ಡಾ| ಬಿ.ಎಸ್.ವೆಂಕಟಲಕ್ಷ್ಮಿ-ಪತ್ನಿಯರ ಕಂಡಂತೆ ಪ್ರಸಿದ್ಧರು.

16.ಡಾ| ಎಸ್.ಆರ್. ಅರುಣ್ ಕುಮಾರ್-ಪಂಡಿತ ಪರಂಪರೆಯ ಡಾ| ಪಾದೇಕಲ್ಲು ವಿಷ್ಣುಭಟ್ಟ

17.ಡಾ| ಅ. ರಾಮಚಮ್ದ್ರ ಭಾಟ್-ವಿನೀಲ (ಅಡ್ಯನಡ್ಕ ಕೃಷ್ಣಭಟ್ ಸಂಸ್ಮರಣ

18.ಕೆ.ಎಸ್.ಪರಮೇಶ್ವರ-ತೇಜಸ್ವಿಸಿಕ್ಕರು

19.ಕಾವೆಂಶ್ರೀ-ಪೂಣ೯ಚಂದ್ರ (ಚಿಟ್ಟಾಣಿ ರಾಮಚಂದ್ರ ಹೆಗಡೆ)

20.ಡಾ| ಸುಂದರ ಕೇನಾಜೆ-ಜೋಶಿ,ಆಳ-ನಿರಾಳ 

21.ಸಂದ್ಯಾ ಅಣ್ಣಯ್ಯ-ಮಾಥಾ೯ ಯಾಕಿಯೋಪಾಜ್ .

22.ಆಗುಂಬೆ ಎಸ್. ನಟರಾಜ- ಧಮ೯ಸಂತಾನ (ಭಕ್ತಿ ಭಡಾರಿ ಬಸವಣ್ಣ)

23.ಬಾಬು ಕೃಷ್ಣಮೂತಿ೯-ಸ್ವಾತಂತ್ರ್ಯ ಹೋರಾಟದ ಹೀರೊಗಳು.

24.ಶಂಕರ್ ಸಾರಡ್ಕ-ಕಾಂಪ್ಕೊ ಬ್ರಹ್ಮ, ಸಹಕಾರಿ ರತ್ನ, ಭಕ್ತಿ ಭಂಡಾರಿ ಬಸವಣ್ಣ)

25.ಮಲ್ಲಿಕಾಜು೯ನ ಮಾಳವಾಡ-ಗಣಿತ ವನಿತೆಯರು.

26.ಅಶೋಕ ದೊಮ್ಮಲೂರು- ಗಹನ ಚೇತನ ಗಾಡಗೆ ಬಾಬಾ.

27.ಚಿದಾನಂದಮೂತಿ೯ ಎಂ-ಕನ್ನಡ ಸಂಸ್ಕೃತಿ ಹೆಮ್ಮೆಯ ನಾಲ್ವರು ಮಹಿಳೆಯರು.


Tuesday, August 4, 2020

ಅಡಿಗ ಪದ್ಯ : ಶ್ರೀ ರಾಮನವಮಿಯ ದಿವಸ { ಅಡಿಗರ ಧ್ವನಿಯಲ್ಲಿ }

ಸು. ರಂ . ಎಕ್ಕುಂಡಿ - Mithile | ಮಿಥಿಲೆ

ಪ್ರೊ/ ಶ್ರೀಪತಿ ತಂತ್ರಿ - ರಾಮನ ಅಯನ ರಾಮಾಯಣ

ರಾಮನ ಅಯನ ರಾಮಾಯಣ | Udayavani – ಉದಯವಾಣಿ

ಕೀರಿಕ್ಕಾಡು ವಿಷ್ಣು ಭಟ್ಟರ ಆತ್ಮಕತೆ- " ಯಕ್ಷರಸ ಜೀವನ "


Keerikkadu Vishnu Bhat -ಕೀರಿಕ್ಕಾಡು ವಿಷ್ಣು ಭಟ್Yakshrasa

Yaksharasa Jivana Auttobiography
 By Keerikkadu Vishnu Bhat
 Published in  1981
Published by 
Keerikkadu Vishnu Bhat Felicitation Committe
 PERADALA , KASARAGOD

Ebrahim Alkazi 15 5 2002 ಇಬ್ರಾಹಿಮ್ ಅಲ್ಕಾಜಿ

Sunday, August 2, 2020

ಮುರಳೀಧರ ಉಪಾಧ್ಯ ಹಿರಿಯಡಕ - ಆಶೀಶ್ ನಂದಿ ವಿಚಾರ - ಆವೇಗದವರ ನಡುವೆ ಅಂತರ್ಮುಖಿ

ಡಾ| ಆಶೀಶ್ ನಂದಿ ಅವರು ದಿಲ್ಲಿಯ ’ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ನ್ ನಿರ್ದೇಶಕರಾಗಿದ್ದಾರೆ. ರಾಜಕೀಯ ಮನೋವಿಜ್ಞಾನಿಯಾಗಿರುವ ಅವರು ಸಮಕಾಲೀನ್ ಭಾರತದ ಜಿಜ್ಞಾಸುಗಳಲ್ಲೊಬ್ಬರಾಗಿ ಹೆಸರುವಾಸಿಯಾಗಿದ್ದಾರೆ. ಈ ಪುಸ್ತಕದಲ್ಲಿ ಅವರ್ ಮೂರು ಲೇಖನಗಳು ಮತ್ತು ಎರಡು ಭಾಷಣಗಳಿವೆ. ಇವು ಗಳನ್ನು ಕೆ.ವಿ. ಸುಬ್ಬಣ್ಣ, ಕು.ಶೀ. ಹರಿದಾಸ ಭಟ್ಟ, ಕೆ.ವಿ. ಅಕ್ಷರ ಮತ್ತು ಜಶವಂತ ಜಾಧವ್ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಚೆನ್ನಾಗಿ ಭಾಷಾಂತರಿಸಿದ್ದಾರೆ.

’ಸತಿ-ಹತ್ತೊಂಬತ್ತನೆಯ ಶತಮಾನದ ಹೆಂಗಸರು ಹಿಂಸೆ ಹಾಗೂ ಪ್ರತಿಭಟನೆಯ ಒಂದು ವೃತ್ತಾಂತ’ ಹಾಗೂ ’ಅಂತಿಮ ಮುಖಾಮುಖಿ-ಗಾಂಧೀ ಹತ್ಯೆಯ ರಾಜಕೀಯ’ ಇವು ಡಾ| ಆಶೀಶ್ ನಂದಿ ಯವರ ಸಂಶೋಧನಾತ್ಮಕ ಲೇಖನಗಳು.
ಸತಿ ಪದ್ಧತಿ ಬಂಗಾಳದ ನವ ಶ್ರೀಮಂತರಲ್ಲಿ ಜನಪ್ರಿಯವಾಗಿತ್ತು. ಈ  ನವ ಶ್ರೀಮಂತ ವರ್ಗಗಳವರು ಪಶ್ಚಿಮದ ಪ್ರಭಾವಕ್ಕೆ ತೆರೆದುಕೊಂಡು ಆ ಕಾರಣದಿಂದಲೇ ಮನೋವೈಜ್ಞಾನಿಕವಾಗಿ ಮೂಲೆ ಗುಂಪಾಗಿದ್ದರು. ಮೇಲು ಜಾತಿಯ ಹಿಂದು ಗಳು, ಸಂಸ್ಕೃತೀಕರಣಗೊಳ್ಳುತ್ತ ಮೇಲು ಮುಖ ಚಲನೆಯನ್ನಾರಂಭಿಸಿದ್ದ ಕೆಳ ಜಾತಿಗಳವರು ಸತಿ ಪದ್ಧತಿಯನ್ನು ಆಚರಿಸುತ್ತಿದ್ದರು. ಸತಿ ಪದ್ದತಿಯು ಆಸ್ತಿಯ ಹಂಚಿಕೆಯಲ್ಲಿ ಹಸ್ತಕ್ಷೇಪ ನಡೆಸುವ ತಂತವೂ ಆಗಿತ್ತು. ಆಶೀಶ್ ನಂದಿ ತನ್ನ್ ಲೇಖನದಲ್ಲಿ ರಾಮಮೋಹನ ರಾಯ್ ಅವರ ಎಳೆ ವಯಸ್ಸಿನ ಅಂತರಂಗದ ಅನುಭವಗಳ  ಮೇಲೆ ಒತ್ತು ನೀಡುತ್ತಾರೆ. ರಾಮ್ ಮೋಹನ ರಾಯ್ ಅವರ ಮೇಲೆ ತಾಯಿ ತಾರಿಣೀದೇವಿ, ತಂದೆ ರಮಾಕಾಂತ ರಾಯ್ ಅವರ್ ವ್ಯಕ್ತಿತ್ವಗಳ ಪ್ರಭಾವಗಳನ್ನು ಗುರುತಿಸುತ್ತಾರೆ. ನಂದಿಯವರು ವಿಶ್ಲೇಷಿಸಿರುವಂತೆ, " ತನ್ನ್ ತಾಯಿಯು ಹೀಗೆ ಪ್ರತೀ ಕಾರಕ್ಕೂ ವ್ಯಕ್ತಿ ಹನನಕ್ಕೂ ಹವಣಿಸಿದ್ದಾಳೆನ್ನುವ ಭಾವನೆಯೇ ರಾಯ್ ನಲ್ಲಿ ಆಳವಾದ ಸಿಟ್ಟು ನೋವುಗಳಿಗೂ ಮತ್ತು ತತ್ಫಲವಾಘಿ ಹುಟ್ಟಿದ ಪಾಪಪ್ರಜ್ಞೆಯ ತುಡಿತಕ್ಕೂ ಕಾರಣವಾಯಿತು.... ಅವನು ಆಕೆಯ ಆಸ್ತಿಕ ಧಾರ್ಮಿಕತೆಯನ್ನು ಖಂಡಿಸಿದ; ಆಕೆಯ ಕೌಟುಂಬಿಕ-ಆರ್ಥಿಕ ಅಧಿಕಾರಗಳನ್ನು ಕಿತ್ತುಕೊಂಡ; ಆಕೆಯ ವಿರುದ್ಧ ಕೋರ್ಟು ದಾವೆಗಳಲ್ಲಿ ಗೆದ್ದ. ಕಡೆಗೆ ಆಕೆಯ ಮಾತೃತ್ವವನ್ನು ಕೂಡಾ ನಿರಾಕರಿಸಿ ಬಿಟ್ಟ. ಅರ್ಥಾತ್ ಅವನು ಸಂಪೂರ್ಣವಾಗಿ ಆಕೆಯನ್ನು ಪರಾಭವಗೊಳಿಸಿ. ಹೆಮ್ಮೆಯ ಹೆಗ್ಗಡಿತಿ ತಾರಿಣೀದೇವಿಯು ತನ್ನ ಕಡೆಯ ದಿನಗಳಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರದ ದೇವಾಲಯವೊಂದರಲ್ಲಿ ಕಸಗುಡಿಸುತ್ತ ಕಾಲ ನೂಕಬೇಕಾಯಿತು." ರಾಮ ಮೋಹನ ರಾಯ್ ನ ಈ ಸಂಪೂರ್ಣ ಗೆಲುವು ಅಪಾಯಕಾರಿಯಾಗಿತ್ತು. ತನ್ನ್ ಮನಸ್ಸಿನಲ್ಲಿ ಉಳಿದ ಪಾಪ ಪ್ರಜ್ಜೆಯನ್ನು ಸರಿಪಡಿಸಿಕೊಳ್ಳಲು ಅವನು ದೊಡ್ಡ ಪ್ರಯತ್ನಗಳನ್ನು ಮಾಡಿದ. ರಾಮ ಮೋಹನ ರಾಯ್ ಕಟ್ಟಿದ ಸುಧಾರಣೆಯು ಒಂದು ಸಾರ್ವಜನಿಕ ಪಶ್ಚಾತ್ತಾಪದ ಬೃಹರ್ ಕಟ್ಟಡವಾಗಿ ತ್ತು ಎಂದು ಆಶೀಶ್ ನಂದಿ ವಿಶ್ಲೇಷಿಸುತ್ತಾರೆ.

 ’ ಗಾಂಧೀ ಹತ್ಯೆಯ ರಾಜಕೀಯ’ ಲೇಖನದಲ್ಲಿ ಆಶೀಶ್ ನಂದಿಯವರು ಗಾಂಧೀಜಿಯ   ರಾಜಕೀಯ ತಂತ್ರಗಳ ಮಹತ್ವವನು ವಿವರಿಸಿ,ಗೋಡ್ಸೆಯ ಬಾಲ್ಯ-ಯೌವನಗಳ ಅನುಭವಗಳನ್ನು ಬೆದಕುತಾರೆ.’ ಕಾಂಗ್ರೆಸ್ ಏನಾದರೂ ದೇಶ ವಿಭಜನೆಯನ್ನು ಒಪ್ಪಿಕೊಳ್ಳಲು ಇಚ್ಚಿಸಿದರೆ, ಅದು ನನ್ನ ಮೃತ ಶಾರೀರದ ಮೇಲೆ ಮಾತ್ರವೇ ಆಗತಕ್ಕದ್ದು’ ಎಂದು ಗಾಂಧೀಜಿ ಹೇಳಿದ್ದರು. ’ ನಮ್ಮ ಮಾತೃ ಭೂಮಿಯನ್ನು ತುಂಡರಿಸುವಲ್ಲಿ ಈತನು ಪ್ರಮುಖ ಪಾತ್ರ ವಹಿಸಿದವನು ಎನ್ನುವ ಕಾರಣಕ್ಕಾಗಿ ’ ತಾನು ಗಾಂಧಿಯನ್ನು ಕೊಂದೆ ಎಂದು ಗೋಡ್ಸೆ ತಿಳಿಸಿದ್ದ. ಗಾಂಧೀಜಿಯ ರಾಜಕಾರಣವು ಆತ್ಮಶಕ್ತಿ, ಅಂತರ್ವಾಣಿ, ಉಪವಾಸ, ಪ್ರಾರ್ಥನೆ, ಮನ:ಶೌಚ ಇತ್ಯಾದಿ ಪುರಾತನ ಕಾಲದ ಮೂಡನಂಬಿಕೆಗಳಿಂದ ಪೋಷಿತ ಗೊಂಡದ್ದೆಂಬುದು ಗೋಡ್ಸೆಯ ವಾದ ವಾಘಿತ್ತು. ನಂದಿಯವರ ಈ ಲೇಖನ ಒಬ್ಬ ಪ್ರತಿಭಾವಂತ ಸಿನಿಮಾ ನಿರ್ದೇಶಕನ ಟಿಪ್ಪಣೆಗಳಂತಿದೆ; ತಲಸ್ಪರ್ಶಿಯಾದ ಮನೋವೈಜ್ಜಾನಿಕ ಒಳನೋಟಗಳಿಂದ ಕೂಡಿದೆ.’ಪ್ರಸ್ತುತ ಭಾರತ ಮತ್ತು ಗ್ರಾಮೀಣ ತತ್ವ ಪರಿಕಲ್ಪನೆ’ ಹಾಗೂ ’ಪ್ರಸ್ತುತ ಭಾರತ ಮತ್ತು ದೇಶೀಯ ಜ್ಜಾನ  ಪರಂಪರೆಗಳು’ ಲೇಖನಗಳಲ್ಲಿ ನಮ್ಮ ಗ್ರಾಮತತ್ವ ಪ್ರತಿಭೆ-ಪರಿಕಲ್ಪನೆಗಳನ್ನು ನಾವು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಅಶೀಶ್ ನಂದಿ ಎಚ್ಚರಿಸುತ್ತಾರೆ-"ಜನ ಸಮುದಾಯಗಳು ಶತಶತಮಾನಗಳಿಂದ ಬದುಕುತ್ತ ಬಂದ ಜ್ಞಾನ ಪರಂಪರೆಗಳನ್ನು, ಸೃಜಿಸಿಕೊಳ್ಳುತ್ತ ಬಂದ ಜೀವನಕ್ರಮಗಳನ್ನು ಉಪೇಕ್ಷಿಸಿದಲ್ಲಿ, ಅವಮಾನಿಸಿದಲ್ಲಿ, ಏಕಾಯೇಕಿಯಾಗಿ, ಬದಲಾಯಿಸಲು ಹವಣಿಸಿದಲ್ಲಿ ಇಂದಲ್ಲ ಇನ್ನೊಂದು ದಿನ ಅದಕ್ಕಾಗಿ ಘೋರ ಬೆಲೆಯನ್ನು ನಾವು ತೆರಬೇಕಾಗುತ್ತದೆ".
’ ವಿಜ್ಞಾನ, ಅಧಿಕಾರ ಮತ್ತು ಸಂಸ್ಕೃತಿ’ ಲೇಖನದಲ್ಲಿ ಆಶೀಶ್ ನಂದಿ, ವಿಜ್ಜಾನ ಪರಂಪರೆಯನ್ನು ಇತಿಶ್ರೀ ಮಾಡಿ ಸಂಸ್ಕೃತಿ ವಿಶೇಷಗಳ ಪತನಕ್ಕೆ ಕಾರಣವಾಗಿರುವುದರತ್ತ ಗಮನಸೆಳೆಯುತ್ತಾರೆ. ರಾಜಕಾರಣೆಗಳು ಜನಾಭಿಪ್ರಾಯಕ್ಕೆ ಹೆದರಿದಂತೆ ವಿಜ್ಞಾನಿಗಳು ಹೆದರುವುದಿಲ್ಲ. ವಿಜ್ಞಾನ ಸೃಷ್ಟಿಸಿದ ಸಮಸ್ಯೆಗಳಿಗೆ ವಿಜ್ಞಾನ ದಲ್ಲಿಯೆ ಉತ್ತರವಿದೆ ಎಂದು ವಿಜ್ಞಾನಿಗಳು ಸುಳ್ಳು ಹೇಳುತ್ತಾರೆ. ಆಧುನಿಕ ವಿಜ್ಞಾನ ಸರ್ವಾಧಿಕಾರದ ಸ್ವರೂಪ ಲಕ್ಷಣಗಳನ್ನು ಪಡೆದುಕೊಳ್ಳುತ್ತಿದೆ ಎಂದು ಆಶೀಶ್ ನಂದಿ ವಾದಿಸುತ್ತಾರೆ.

ಅಕ್ಷರ ಚಿಂತನಮಾಲೆಯ ಸಂಪಾದಕ್ ಡಾ| ಟಿ.ಆರ್. ನಾಗರಾಜ್ ತನ್ನ ಹಿನ್ನುಡಿಯಲ್ಲಿ, ವಾಚ್ಯದ ಹಿಂದಿರುವ ವ್ಯಂಗ್ಯದ ಸಿದ್ಧಾಂತಿಯಾದ ಆಶೀಶ್ ನಂದಿ ಯವರ ದೃಷ್ಟಾಂತ ಪ್ರತಿಭೆಯ ಮಹತ್ವಮಿತಿಗಳನ್ನು ಗುರುತಿಸಿದ್ದಾರೆ.
ಡಾ| ಆಶೀಶ್ ನಂದಿ, ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಹೇಳುವ ಯೋಜನಾ ತಜ್ಞರಲ್ಲ. ಅವರು ರಾಜಕೀಯ ಮನೋವಿಜ್ಞಾನಿಯಾಗಿ ವ್ಯಕ್ತಿ ಮತ್ತು ಸಂದರ್ಭಗಳ ಹಿನ್ನೆಲೆಯನ್ನು ವಿಶ್ಲೇಷಿಸುತ್ತಾರೆ; ಜಿಜ್ಞಾಸುವಾಗಿ ಗಂಭೀರ ಪ್ರಶ್ನೆಗಳನ್ನು ಕೇಳುತ್ತಾರೆ. ವಿಜ್ಞಾನ ಬೃಹತ್-ತಂತ್ರಜ್ಞಾನಗಳನ್ನು ನಂಬಿ ಆವೇಗದಲ್ಲಿರುವ ಜನಜಂಗುಳಿಗೆ ಯಾವುದು ಮರೀಚಿಕೆ, ಯಾವುದು ಅಚ್ಛೋದಸರಸ್ಸು ಎಂದು ತಿಳಿಯುವುದಿಲ್ಲ. ಬೃಹತ್ ತಂತ್ರಜ್ಞಾನದ ದೋಷರಾಶಿ ಗೊತ್ತಿಲ್ಲದ ಜನ ಆಸೆಯಿಂದ ಅದರ್ ಚರಣ ಸೇವೆ ಮಾಡುತ್ತಿದ್ದಾರೆ. ಆವೇಗದವರ ನಡುವಿನಲ್ಲಿ ಅಂತರ್ಮುಖಿಯಾಗಿರುವ ಆಶೀಶ್ ನಂದಿ ಹುಲ್ಲೆ ಮೊಗದ ಹುಲಿಗಳನ್ನು ಗುರುತಿಸಿ ಎಚ್ಚರಿಸುತ್ತಾರೆ.

ಮುರಳೀಧರ ಉಪಾಧ್ಯ ಹಿರಿಯಡಕ
ಆಶೀಶ್ ನಂದಿ ವಿಚಾರ
(ಡಾ| ಆಶೀಶ್ ನಂದಿ ಅವರ ಆಯ್ದ ಬರಹಗಳು)
ಪ್ರ:ಅಕ್ಷರ ಪ್ರಕಾಶನ.
ಹೆಗ್ಗೋಡು-೫೭೭೪೧೭
ಮೊದಲ ಮುದ್ರಣ:೧೯೯೫ ಬೆಲೆ:ರೂ.೫೦.

Saturday, August 1, 2020

ಅರವಿಂದ ಚೊಕ್ಕಾಡಿ - ಪುರುಷೋತ್ತಮ ಬಿಳಿಮಲೆ ಅವರ " ಕಾಗೆ ಮುಟ್ಟಿದ ನೀರು "

ಡಾ. ಪುರುಷೋತ್ತಮ ಬಿಳಿಮಲೆಯವರ ಅನುಭವ ವೃತ್ತಾಂತ ' ಕಾಗೆ ಮುಟ್ಟಿದ ನೀರು' ಇವತ್ತು ಮಾರುಕಟ್ಟೆಗೆ ಬಂದಿದೆ. ಓದಬೇಕಾದ ಪುಸ್ತಕ. ಋತುಮಾನ ಸ್ಟೋರ್ ನ‌ ಲಿಂಕ್ ಕೊಟ್ಟಿದ್ದೇನೆ. ಆಸಕ್ತರು ಸಂಪರ್ಕಿಸಬಹುದು.
ಕಾಗೆ ಮುಟ್ಟಿದ ನೀರು ಒಂದು ರೂಪಕವಾಗಿ ಹಲವು ರೀತಿಯಲ್ಲಿ ಕೃತಿಯನ್ನು ವ್ಯಾಪಿಸಿಕೊಳ್ಳುತ್ತದೆ. ಕಾಗೆ ಮೈಲಿಗೆ ಎಂದು ಲೆಕ್ಕ. ಆದರೆ ಪಿತೃಗಳಿಗೆ ಪಿಂಡವನ್ನು ತಲುಪಿಸುವುದು ಕಾಗೆ ಎಂದು ನಂಬಿಕೆ. ಒಗ್ಗಟ್ಟಿಗೆ ಕಾಗೆಯೇ ಪ್ರತಿನಿಧಿ. ಒಂದಗುಳು ಕಂಡರೆ ಕಾಗೆ ತನ್ನ ಬಳಗವನ್ನು ಕರೆಯುತ್ತದೆ ಎಂದು ಶರಣರು ಹೇಳಿದ್ದಾರೆ. ಒಂದು ಭಾಷೆಗೆ ಕಾಗೆ ಸೀಮಿತವಲ್ಲ." ಕಾಕ್ಕಾಯ್ ಕುಲಮಾಯ್ ಅವಧರಿತ್ತಾಲುಂ ವಟ್ರುಮಯಾವದ್ ವಳರ್ನ್ದಿರುಕ್ಕುಂ" ಎಂದು ತಮಿಳಿನಲ್ಲೂ ಬರುತ್ತದೆ. ಮಕ್ಕಳಿಗೆ ಪ್ರಿಯವಾದ ಹಕ್ಕಿ ಕಾಗೆ. 'ಪ' 'ಮ' ಹೇಗೆಯೋ ಹಾಗೆಯೇ,' ಕಾ..ಕಾ' ವೂ ಮೂಲಧ್ವನಿಯಲ್ಲೆ ಸೇರಿ ಕಾಗೆಯೊಂದಿಗೆ ನಯನ‌ ಸಂಪರ್ಕವನ್ನು ಹೊಂದುತ್ತದೆ. ಹೀಗೆ ಕಾಗೆಯ ಹಲವು ಗುಣ ಸ್ವಭಾವಗಳು ಕೃತಿಯ ವಿವರಗಳನ್ನು ರೂಪಕಾತ್ಮಕವಾಗಿ ಬೆಳೆಯಿಸುತ್ತದೆ.
ಈ ಕೃತಿಯು ಸುಮಾರು ಅರುವತ್ತು ವರ್ಷಗಳ ಹಿಂದಿನ ಅನುಭವಗಳಿಂದ ವಿವರಗಳನ್ನು ತೆಗೆದುಕೊಳ್ಳುತ್ತದೆ ಎಂಬ ನೆಲೆಯಲ್ಲಿಯೇ ಕೃತಿಯನ್ನು ಪರಿಗಣಿಸಬೇಕು. ನನ್ನ ಬಾಲ್ಯದ ಬದುಕೇ ಈಗ ಇಲ್ಲ. ಹಾಗಿರುವಾಗ ಬಿಳಿಮಲೆಯವರ ಬಾಲ್ಯದ ಬದುಕಿನ ಸ್ಥಿತಿ ಈಗಿಲ್ಲ ಎಂಬುದನ್ನು ಪರಿಗಣಿಸಿ ಓದಿಕೊಳ್ಳದಿದ್ದರೆ, ಕೆಲವು ಎಡಪಂಥೀಯರು 'ರಾಮಾಯಣ' ದಲ್ಲಿ ಭಾರತದ ಸಂವಿಧಾನವನ್ನು ಹುಡುಕಲು ಹೊರಟು ರಾಮಾಯಣದ ಓದಿನ ಅನುಭವವನ್ನೆ ಪಡೆಯಲಾಗದೆ ಅಸಹನೆಯನ್ನು ಬೆಳೆಯಿಸಿಕೊಳ್ಳುತ್ತಾರಲ್ಲ ಆ ರೀತಿಯ ಪರಿಸ್ಥಿತಿ ಎದುರಾಗುತ್ತದೆ. 65 ವರ್ಷಗಳ ಹಿಂದಿನ ಪಂಜದಲ್ಲಿ ಬದುಕು ಆರಂಭವಾಗುತ್ತದೆ. ಅಲ್ಲಿನ ಸಾಮುದಾಯಿಕ ಬದುಕು, ಕ್ಷೌರಿಕ, ಬ್ಯಾರಿ, ಜ್ಯೋತಿಷಿ, ಯಕ್ಷಗಾನ, ಕರಿಮಲೆ, ಬಿರುಮಳೆ, ಏಡಿ-ಇದೆಲ್ಲ ಸಮೃದ್ಧ ಅನುಭವಗಳ ಒಂದು ಕಾಲಮಾನದ ಗ್ರಾಮ ಬದುಕಿನ ಚಿತ್ರಣವನ್ನು‌ ನೀಡುತ್ತವೆ. ಬಹುಶಃ ಮುಂದಿನ ದಿನಗಳಿಗೆ ಇವು ಐತಿಹಾಸಿಕ ದಾಖಲೆಗಳೇ ಆಗಬಹುದೇನೊ.
ಎರಡನೆಯದು ಬಿಳಿಮಲೆಯವರ ವಿದ್ವತ್ ಅನುಭವಗಳು. ಜನಪದದ ಕುರಿತ ಅವರ ವ್ಯಾಪಕ ಅಧ್ಯಯನ, ಮೆಕೆಂಜಿಯ ಕೈಫಿಯತ್ ಗಳು ಮುಂತಾದ ಸಂಶೋಧನೆ, ಪಂಜದ ಕಾಡಿನ‌ ಮೂಲೆಯಲ್ಲಿ ಜನಿಸಿ ಟೋಕಿಯೊ, ಇಸ್ರೇಸ್ ಹೀಗೆ ಅಂತಾರಾಷ್ಟ್ರೀಯ ವಿದ್ವತ್ ಸಭೆಯ ಪಾಲುದಾರನಾಗಿ ಬೆಳೆದ ಒಂದು ವೈಚಾರಿಕ ಬದುಕು ಕೃತಿಯ ಮತ್ತೊಂದು ಮಗ್ಗುಲು.
ಮೂರನೆಯದು ಜನರೊಂದಿಗಿನ ಒಡನಾಟ. ಇಲ್ಲಿ ಕಾಣಿಸಲ್ಪಡುವ ಶಿವರಾಮ ಕಾರಂತರು ಸಾಹಿತ್ಯ ಮಾತ್ರ ಅಲ್ಲ; ವ್ಯಕ್ತಿತ್ವವೂ ಹೌದು. ಇಲ್ಲಿ ಬರುವ ಸುನಿಲ್ ಕುಮಾರ್, ತಾಳ್ತಜೆ ವಸಂತ ಕುಮಾರ್, ಕುರುಂಜಿ ವೆಂಕಟ್ರಮಣ ಗೌಡ, ಐತಾಳರು, ಕಂಬಾರರು, ಮಣಿಮಾಲಿನಿ, ದೆಹಲಿ ಕನ್ನಡ ಸಂಘದ ಸಮಸ್ಯೆಗೆ ಸ್ಪಂದಿಸಿದ ಅಂದಿನ ಕೇಂದ್ರ ಸಚಿವ ಅನಂತ ಕುಮಾರ್ -ಹೀಗೆ ಇಂತಹ ಅನೇಕ ವ್ಯಕ್ತಿಗಳು ವರ್ತಮಾನದ ಬದುಕಿನಲ್ಲಿ ಇರುವವರು/ಇದ್ದವರು. ಈ ಒಡನಾಟಗಳು ಬಿಳಿಮಲೆಯವರ ವ್ಯಕ್ತಿತ್ವದ ಒಟ್ಟೂ ಸ್ವರೂಪವನ್ನು ಕಾಣಿಸುತ್ತವೆ.
ಇನ್ನೊಂದು ಆಯಾಮ ಬಿಳಿಮಲೆಯವರ ಸಂಘರ್ಷಗಳು. ಐತಾಳರ ' ಬ್ರಾಹ್ಮಣ ಬಂಡಾಯ' ಕೃತಿಯ ವಿರುದ್ಧದ ಬಿಳಿಮಲೆಯವರ ಹೋರಾಟ ಬರುತ್ತದೆ. ಐತಾಳರು ಬಂಧನಕ್ಕೊಳಗಾದಾಗ ಬಿಳಿಮಲೆಯವರೇ ನ್ಯಾಯಾಲಯದಲ್ಲಿ," ಇದು ಕಾನೂನಿನಿಂದ ತೀರ್ಮಾನ ಆಗಬೇಕಾದ ವಿಷಯವಲ್ಲ" ಎಂದು ಸಾಕ್ಷಿ ಹೇಳುವುದು ಮತ್ತು ಮೊಕದ್ದಮೆ ಬಿದ್ದು ಹೋಗುವುದು ಒಂದು ಕಾಲಮಾನಕ್ಕೆ ಎಡಪಂಥೀಯ ವೈಚಾರಿಕತೆಗೆ ಇದ್ದ ಶಕ್ತಿಯು, "ಹೇಗಾದರೂ ಹಣಿಯಬೇಕು" ಎನ್ನುವ ವರ್ತಮಾನದ ವೈಚಾರಿಕತೆಯನ್ನು ಅಣಕಿಸುತ್ತಾ ವೈಚಾರಿಕತೆ ಹೇಗಿದ್ದಾಗ ಅದಕ್ಕೆ ಮಾನ್ಯತೆ ಬರುತ್ತದೆ ಎಂಬುದಕ್ಕೆ ನಿದರ್ಶನವಾಗುತ್ತದೆ.
ಒಂದು ತುಂಬು ಬದುಕಿನ ಅಂತಃಶಕ್ತಿಯನ್ನು ಅಲ್ಲಿ ಬರುವ ಬುದ್ಧಿವಂತಿಕೆ, ದಡ್ಡತನ, ದಡ್ಡತನದೊಳಗಣ ಪ್ರೀತಿ, ಜೋಕು, ವಿಡಂಬನೆ ಮುಂತಾದವುಗಳಿಂದ ಕೃತಿಯು ಹೇಳುತ್ತಾ ಹೋಗುತ್ತದೆ. "ವಿವೇಕಾನಂದ ಕಾಲೇಜಿನಲ್ಲಿದ್ದಾಗ ನನಗೆ ಪ್ರೀತಿಸಲು ಯಾರೂ ಸಿಗಲಿಲ್ಲ" ಎನ್ನುವಲ್ಲಿನ ತುಂಟತನದ ಗಮ್ಮತ್ತು ಶೋಭನಾ ಅವರನ್ನು ಪ್ರೀತಿಸಿದ ವಿವರ ಬಂದಾಗ "ಯಬ್ಬ, ಕಡೆಗೂ ಇವರಿಗೊಂದು ವ್ಯವಸ್ಥೆ ಆಯಿತಲ್ಲ" ಎಂಬ ಸಮಾಧಾನವನ್ನು ಓದುಗರಿಗೆ ಕೊಡುತ್ತದೆ. ಬಿಳಿಮಲೆ ಆ ಕಾಲಕ್ಕೇ ಬ್ರಾಹಮಣ ಯುವತಿಯನ್ನು ಪ್ರೀತಿಸಿ ಮದುವೆಯಾದವರು. ಮತ್ತು ಅದಕ್ಕಾಗಿಯೇ ಯುವತಿಯ ಮನೆಯ ಬಳಿ ಯಕ್ಷಗಾನ ಮಾಡುವುದು, ಯಕ್ಷಗಾನಕ್ಕೆ ಎಲ್ಲರೂ ಬಂದರೂ ಬೇಕಾದವರು ಬಾರದಿರುವುದು, ಮತ್ತೆ ಮದುವೆ ಇದೆಲ್ಲ ಚಂದದ ವಿಷಯಗಳು. ಮದುವೆ ಮಾಡಿಸಲು ಅಲ್ಲೊಬ್ಬರು ಕಮ್ಯುನಿಸ್ಟ್ ಭಟ್ರು ಬರುತ್ತಾರೆ. ಕಮ್ಯುನಿಸ್ಟಾದರೂ ಭಟ್ರು. ಭಟ್ರಾದರೂ ಕಮ್ಯುನಿಸ್ಟರು. ಈ ಎರಡೂ ಹೇಳಿಕೆಗಳು ಒಂದಾಗುವಲ್ಲಿ ಸೃಷ್ಟಿಯಾಗುವ ಸೌಂದರ್ಯ ಅದ್ಭುತ!. ಮದುವೆಯ ನಂತರ ಯುವತಿಯ ಅಜ್ಜಿ ಬಂದು ದಂಪತಿಯನ್ನು ಮನೆಗೆ ಕರೆದೊಯ್ದು ಸಮಸ್ಯೆ ಪರಿಹರಿಸುವುದು, ಬಿಳಿಮಲೆಯವರ ತಂದೆ "ಸಣ್ಣ ಸೊಸೆ ಡೆಲ್ಲಿಯಿಂದ ಬಂದಿದ್ದಾಳೆ" ಎಂದು ಬರೆದಿಡುವುದು ಇದೆಲ್ಲ ತಲೆಮಾರುಗಳ ಜೀವನ ಧರ್ಮವನ್ನು ಅರ್ಥ ಮಾಡಿಸುತ್ತವೆ. ಇವತ್ತು ಬಿಳಿಮಲೆಯವರ ಕೆಲಸ ಮಾಡುವ ಕಿಡ್ನಿ ಅವರ ಪತ್ನಿಯದು. ಪ್ರೇಮ ವಿವಾಹ ವಿಫಲವಾಗುತ್ತದೆ ಎಂಬ ನಂಬಿಕೆಗೆ ಅವರು ಒಂದು ಚಾಲೆಂಜ್.
ಇದರ ಬಗ್ಗೆ ಪ್ರತ್ಯೇಕವಾಗಿ ಬರೆಯುತ್ತೇನೆ. ಇಲ್ಲಿಗೆ ಇಷ್ಟು ಸಾಕು. ಕೃತಿಯ ಉದ್ದಕ್ಕೂ ಖುಷಿ ಕೊಡುವ ಭಾಷಾ ಲಾಲಿತ್ಯ ಕೊನೆಯಲ್ಲಿ ಮನುಷ್ಯ ಜೀವನವನ್ನು ಮರು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಬಿಳಿಮಲೆಯವರು ಕೃತಿಯನ್ನು ಕೊನೆಗೊಳಿಸುವುದು ಹೀಗೆ:
".......
ಕಣ್ಣು ಸರಿಯಿಲ್ಲ, ಎಡದ ಕಣ್ಣು ಕಾಣೋದಿಲ್ಲ.
ಎರಡು ಸ್ಟಂಟ್ ಹಾಕಲಾಗಿದೆ
ನಲವತ್ತು ವರ್ಷಗಳಿಂದ ಡಯಾಬೆಟಿಕ್
ಅಂಗಾಲು ಬಿಸಿಯಾಗ್ತದೆ. ನ್ಯೂರೋಪತಿ
ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿದೆ"
ಅವನು ತಲೆಯೆತ್ತಿ ನನ್ನ ಕಡೆ ನೋಡಿದ. ಭರ್ತಿ ಮಾಡಿಕೊಳ್ಳಲು ಅವನಲ್ಲಿ ಕಾಲಂಗಳೇ ಉಳಿದಿರಲಿಲ್ಲ. ನಾನು ನಿಧಾನವಾಗಿ ಹೇಳಿದೆ: ನೀನು ಬರೆದುಕೊಳ್ಳಬೇಕಾದ ಮುಖ್ಯ ಟಿಪ್ಪಣಿ ಎಂದರೆ, ಇಷ್ಟೆಲ್ಲ ಕಾಯಿಲೆಗಳ ನಡುವೆ ಇಷ್ಟು ವರ್ಷದ ವರೆಗೆ ಹೇಗೆ ಬದುಕಿದ ಅಂತ. ಅವನು ಮುಗುಳ್ನಕ್ಕ. ದೇಹವನ್ನು ಕೊಂಡೊಯ್ಯುವ ವಾಹನ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಹಾಗಂತ ನಾನೇನೂ ಅದಕ್ಕೆ ಕಾದು ಕುಳಿತಿಲ್ಲ. ಮಾಡಬೇಕಾದ ಕೆಲಸಗಳು ಹಲವಿವೆ. ಬರೆಯಬೇಕಾದ ಪುಸ್ತಕಗಳೂ ಕೆಲವಿವೆ.
"
Image may contain: one or more people, text that says 'ಪುರುಷೋತ್ತಮ ಬಿಳಿಮಲೆ ಕಾಗೆ ಮುಟ್ಟಿದ ನೀರು ಚದುರಿ ಬಿದ್ದ ಆತ್ಮದ ತುಣುಕುಗಳು ಕಾಗೆ ಮುಟ್ಸಿದ ನೀರು ಪುರುಷೋತ್ತಮ ಬಿಳಿಮಲೆ ಆಹರ್ನಿಡಿ'
You, Purushottama Bilimale, Sumithra Lc and 138 others
29 Comments
6 Shares
Like
Comment
Share

'ಸ್ವಾತಂತ್ರದೇವಿಗೆ' – 100ನೇ ಹೆಜ್ಜೆ | ದ. ರಾ. ಬೇಂದ್ರೆ | Kannada Poem by Da. ...