ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Wednesday, August 12, 2020
ಜಯರಾಮ ಕಾರಂತ - ವೈದೇಹಿ:ಜೀವನ ಮತ್ತು ಕೃತಿಗಳ ಸಮೂಹ ಶೋಧ { ಸಂ- ಮುರಳೀಧರ ಉಪಾಧ್ಯ ಹಿರಿಯಡಕ }
ವೈದೇಹಿ ಕವ್ಯನಾಮದ ಲೇಖಕಿ ಜಾನಕಿ ಶ್ರೀನಿವಾಸಮೂತಿ೯ ಅವರು ನವ್ಯೋತ್ತರ ಕಾಲದ ಸ್ತ್ರೀ ಅಸ್ಮಿತೆಯ ಸಮಥ೯ ಪ್ರತಿಪಾದಕಿ. ಆದೆರೆ ತಾನು ಸ್ತ್ರೀವಾದಿ ಸಾಹಿತಿ ಎಂದು ಬರಹಗಳಲ್ಲಾಗಲಿ ಭಾಷಣಗಳಲ್ಲಾಗಳಿ ಎಲ್ಲೂ ಹೇಳಿಕೂಳ್ಳಲು ಹೋಗದವರು. ಅವರ ಕತೆ. ಕವಿತೆಗಳಲ್ಲಿ ಪುರುಷ ಪಾರಮ್ಯಕ್ಕೆ ಸವಾಲೆಸೆಯುವ ಸಮಾಜ ವಿಮಶ೯ಕಿಯೊಬ್ಬಳ ಚಿಂತನಶೀಲತೆಯಿದೆ. ಜನಪದೂಯ/ದೇಸಿ/ಕಥನ ತಂತ್ರದ ಸಾಧ್ಯತೆಗಳನ್ನು ಕತೆ.ಕವಿತೆ,ಪ್ರಬಂಧಗಳಲ್ಲಿ ಅಚ್ಚರಿ ಹುಟ್ಟಿಸುವಷ್ಟು ಕಲಾತ್ಮಕವಾಗಿ ದುಡಿಸಿಕೊಂಡವರು ಅವರು. ಸಂಸಾರದೊಳಗಿನ ಕ್ರೌಯ೯ ಹಾಗೂ ದಾಂಪತ್ಯ ವಿಘಟನೆ ಕುರಿತ ವೃತ್ತಾಂತಗಳ ಮಂಡನೆಯ ಮೂಲಕ ಸಾಮಾಜಿಕ ಸ್ಥಿತ್ಯಂತರದ ಅನಿವಾಯ೯ ಸನ್ನಿವೇಶಗಳನ್ನೂ ಅದರೂಂದಿಗೆ ಸ್ಮಿತೆಗಾಗಿ ಹಪಹಪಿಸುವ ಹೆಣ್ಣುಜೀವಗಳ ಅಂತರಂಗದ ಪುಟಗಳನ್ನೂ ಸಹೃದಯ ಓದುಗರೆದುರು ತೆರೆದಿಟ್ಟಿ ಕತೆಗಾತಿ೯ಯಾಗಿ ವ್ಯದೇಹಿಯವರೊಗೆ ಎತ್ತರದ ಸ್ಥಾನವಿದೆ. ಅವರ ಕತೆಗಳು, ಕವನಸಂಕಲನಗಳು, ಪ್ರಬಂಧಗಳು, ಅನುವಾದಿತ ಲೇಖನಗಳ ಸಂಗ್ರಹಗಳು,ಹಾಗೂ ಸಂದಶ೯ನದ ಭಾಗಗಳನ್ನು ಕೂಡ ಇಲ್ಲಿ ಸಂಒಆದಕರು ಅಚ್ಚುಕಟ್ಟಾಗಿ ಕಲೆಹಾಕಿದ್ದಾರೆ.
1979 ರಿಂದ ಒಂಬತ್ತು ಕಥಾಸಂಕಲನಗಳು, ಮೂರು ಕವನಗಳು, ಒಂದು ಕಾದಂಬರಿ, ನಾಲ್ಕು ಜೀವನಚರಿತ್ರೆಗಳು, ಐದು ಅನುವಾದಿತ ಕೃತಿಗಳು, 13 ಮಕ್ಕಳ ನಾಟಕಗಳು, ವಿವಿದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳ ನಾಲ್ಕು ಸಂಕಲನಗಳನ್ನು ನೀಡಿರುವ ವೈದೇಹಿ ಅವರ ಈಅಕ್ಷರಯಾನ, ಕನ್ನಡದ ಸಿದ್ದಮಾದರಿಗಿಂತ ದೂರ ಸರಿದ ಲೇಖಕಿಯೂಬ್ಬಾಳು ವಸ್ತು ನಿವ೯ಹಣೆಯಲ್ಲಿ ತೋರಿದ ಪ್ರಯೋಗಶೀಲತೆಯನ್ನೂ, ಭಾಷೆಯ ಹಾಗೂ ನಿರೂಪಣೆಯ ಪ್ರಯೋಗದಲ್ಲಿನ ಅನನ್ಯತೆಯನ್ನೂ, ಬದುಕಿನ ಕಾಪ೯ಣ್ಯದ ನಡುವೆ ಸ್ವಂತ ಇರುವಿಕೆಯನ್ನು ಚೆಲುವುಗೊಳಿಸಿಕೊಳ್ಳಬೇಕಾದ ಸಾತ್ತ್ವಿಕ ಹಠವನ್ನೂ ಓದುಗರಿಗೆ ಮನದಟ್ಟು ಮಾಡಿಸುವಂಥದ್ದಾಗಿದೆ. ಬದುಕು ಚಂದವೆನಿಸಬೇಕಿದ್ದರೆ ಇಂಥ ಹಠ ಮಾತ್ರವಲ್ಲ ; ಎಲ್ಲದರಲ್ಲೂಹದ ಕಾಯ್ದುಕೊಳ್ಳಬೇಕು ಎಂಬ ನಿಲುವಿನ ಸಹಜ ಅಂತಃಕರಣಿಯಾದ ಈ ಲೇಖಕಿಯ ಬಗ್ಗೆ ಇಲ್ಲಿ ಕಲೆಹಾಕಲಾಗಿರುವ ಬರಹಗಳಿ, ಲೇಖಕಿಯ ಬಹುಮುಖಿಯಾದ ಸತ್ಯದ ಶೋಧವನ್ನು ಸೋಗಿಲ್ಲದೆ ನಡೆಸಿವೆ. ಇಲ್ಲಿನ ಲೇಖನಗಳ ಬಗ್ಗೆ , ಸ್ವತಃ ವಿಮಶ೯ಕರಾಗಿರುವ ಸಂಪಾದಕರು, ವೈದೇಹಿಯವರ ಕೃತಿಗಳನ್ನು ಕುರಿತು ಅವಮಶ೯ಕನ ಸುತ್ತಿ ಕಾಣಿಸುವುದಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಿರುವ ಮಾತು ಗಮನಿಸತಕ್ಕದ್ದಾಗಿದೆ. ಪುಸ್ತಕದ ಮೊದಲ ಪುಟಗಳಲ್ಲಿ ವೈದೇಹಿಯವರಿಗೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳೂ ಇವೆ. ಪುಟಮಿತಿಯ ಕಾರಣದಿಂದ ಇಲ್ಲಿ ಸೇರಿಲ್ಲದ 12 ಬರಹಗಳ ಪಟ್ಟಿಯೊಂದುನ್ನು ಸಂಪಾದಕರು ನೀಡಿದ್ದಾರೆ. ವೈದೇಹಿಯವರಂಥ ಸೂಕ್ಷ್ಮ-ಸತ್ತ್ವಯುತ ಬರಹಗಾತಿ೯ಯನ್ನು ಓದುವ ಬಗೆ ಹಾಗೂ ಅಥ೯ಮಾಡಿಕೊಳ್ಳುವ ಹಲವು ಬಗೆಗಳನ್ನು ಈ ಸಂಪುಟದ ಬರಹಗಳು ತೋರಿಸಿಕೊಟ್ಟಿವೆ. ಈ ಸಂಪುಟದ ರೂಪಣೆಯ ಹಿಂದಿರುವ ಸಂಪಾದಕರ ಶ್ರಮ ಹಾಗೂ ಶ್ರದ್ಧೆ ಶ್ಲಾಘನೀಯ.
ಜಯರಾಮ ಕಾರಂತ
ಸಂ:ಮುರುಳೀಧರ ಉಪಾಧ್ಯ ಹಿರಿಯಡಕ
ಪ್ರ:ಅಭಿನವ, 17/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040 ಮೊದಲ ಮುದ್ರಣ: 2018 ಬೆಲೆ:500 ರೂ.
No comments:
Post a Comment