’ ಕೃಷ್ಣಾಮೃತ ಮಹಾರ್ಣಾ’ ಮಧ್ವಾಚಾರ್ಯರು ತನ್ನ್ ಇಳಿವಯಸ್ಸಿನಲ್ಲಿ ಬರೆದ ಒಂದು ಸಂಕಲನ ಗ್ರಂಥ. ಇದು ಅವರು ಕೊಕ್ಕಡದ ಇಡೆಪಾಡಿತ್ತಾಯರ ನಿತ್ಯಾನು ಸಂಧಾನಕ್ಕೆಂದು ರಚಿಸಿಕೊಟ್ಟ. ಕೃತಿ. ಈ ಗ್ರಂಥದ ಮೊದಲ ಎರಡು ಶ್ಲೋಕಗಳನ್ನು ಹೊರತುಪಡಿಸಿದರೆ ಉಳಿದವುಗಳೆಲ್ಲ ಪುರಾಣ ವಚನಗಳು.
"ಇಲ್ಲಿ ಉದ್ಧರಿಸಿರುವ ಪ್ರಮಾಣಾ ಶ್ಲೋಕಗಳು ಯಾವ ಯಾವ ಗ್ರಂಥಗಳಿಂದ ಆಯ್ದಂಥವು ಎನ್ನುವುದನ್ನು ಪೂರ್ತಿಯಾಗಿ ಪತ್ತೆಹೆಚ್ಚುವುದು ಇನ್ನೂ ಸಾಧ್ಯವಾಗಿಲ್ಲ. ವಿಷ್ಣು ಪುರಾಣ, ನಾರದೀಯ ಪುರಾಣ ಮುಂತಾದೆಡೆ ಬಂದ ಶ್ಲೋಕಗಳನ್ನು ನಾನು ಗುರುತು ಹಾಕಿಕೊಂಡಿದ್ದೇನೆ. ಆದರೂ ಎಲ್ಲ ಶ್ಲೋಕಗಳ ಆಕರವನ್ನು ನಮೂದಿಸುವಂಟಾಗಲಿಲ್ಲ" ಎಂದು ಬನ್ನಂಜೆಯವರು ಮುನ್ನುಡಿಯಲ್ಲಿ ಬರೆದಿದ್ದಾರೆ. ಪಲಿಮಾರು ಮಠದ ಶ್ರೀ ರಘುವರ್ಯ ತೀರ್ಥರ (ಕ್ರಿ.ಶ. ೧೮ನೆಯ ಶತಮಾನ) ಹಸ್ತಪ್ರತಿಯ ಪಾಠವನ್ನು ಬನ್ನಂಜೆಯವರು ’ಕೃಷ್ಣಾಮೃತ ಮಹಾರ್ಣವ’ದ ಭಾಷಾಂತರಕ್ಕಾಗಿ ಬಳಸಿದ್ದಾರೆ. ೧೯೫೬ರಲ್ಲಿ ಉಡುಪಿಯ ಮಧ್ವಸಿದ್ಧಾಂತ ಗ್ರಂಥಾಲಯದ ಮೂಲಕ ಪ್ರಕಟವಾಗಿದ್ದ ಬನ್ನಂಜೆಯವರ ಭಾಷಾಂತರದ ಪರಿಷ್ಕೃತ ರೂಪಾಂತರ ಈ ಗ್ರಂಥದಲ್ಲಿದೆ.
ಈ ಪುಸ್ತಕದಲ್ಲಿ ಹರಿಪೂಝೆ ಮಹಿಮೆ, ಉಪಾವಾಸದ ಹಿರಿಮೆ, ನಿತ್ಯಾನುಸಂಧಾನ, ದರ್ಮಾಧರ್ಮ ನಿರ್ಣಯ, ಮತ್ತಿತರ ಧಾರ್ಮಿಕ ಆಚರಣೆಗಳಿಗೆ ಸಂಬಂಧ ಪಟ್ಟ ೨೩೦ ಶ್ಲೋಕಗಳಿವೆ. ಬನ್ನಂಜೆಯವರು ಶ್ಲೋಕಗಳನ್ನು ಕನ್ನಡ ಲಿಪಿಯಲ್ಲಿ ನೀಡಿ, ಗದ್ಯಾನುವಾದ ಮಾಡಿ, ಉಪಯುಕ್ತ ಟಿಪ್ಪಣೆಗಳನ್ನು ಬರೆದಿದ್ದಾರೆ. ಅನುಬಂಧ ದಲ್ಲಿರುವ’ಭಗವಂತನ ಕೆಲವು ಮುಖ್ಯಾನಾಮಗಳ ಭಾಗ. ಕೇಶವ, ಕೃಷ್ಣ, ಜನಾರ್ಧನ, ನಾರಾಯಣ, ಗೋವಿಂದ, ಪುರುಷೋತ್ತಮ, ಅನಿರುದ್ಧ, ವಾಸುದೇವ, ಪದ್ಮನಾಭ ಮತ್ತಿತರ ಹೆಸರುಗಳ ಬಹುಮುಖಿ ನಿರ್ವಚನಗಳು ಕುತೂಹಲಕಾರಿಯಾಗಿವೆ.
ಬನ್ನಂಜೆಯವರ್ ಪ್ರಸ್ತಾವನೆಯ ಮೊದಲ ವಾಕ್ಯ ಹೀಗಿದೆ-"ಕಲಿಯುಗ ಪ್ರಾರಂಭವಾಗಿ ೪೩೦೦ ವರ್ಷಗಳು ಸಂದು, ಮತ್ತೂ ೩೯ ವರ್ಷಗಳು ಸಂದಾಗ ಭೂಮಿಯಲ್ಲಿ ಉಡುಪಿಯ ಸಮೀಪ, ತೌಳವ ಮಂಡಲದ ಪಾಜಕದಲ್ಲಿ ಪವಮಾನನ ಅವತಾರವಾಯಿತು." ಮೆಕಾಲೆಯ ಶಿಕ್ಷಣ ಪರಂಪರೆಯಲ್ಲಿ ಬೆಳೆದವರಿಗೆ ಈ ವಾಕ್ಯ ಅರ್ಥವಾಗದ ಒಗಟಾಗುತ್ತದೆ.
ಬನ್ನಂಜೆಯವರು, ಇನ್ನೂ ಅಪ್ರಕಟಿತವಾಗಿರುವ , ಅಮೂಲ್ಯ ಸಂಗತಿಗಳನ್ನೊಳಗೊಂಡಿರುವ, ಗ್ರಂಥವೊಂದನ್ನು ಉಲ್ಲೇಖಿಸಿದ್ದಾರೆ-ಮಧ್ವಾಚಾರ್ಯರ ಪೂರ್ವಾಶ್ರಮದ ಸೋದರರಾದ ವಿಷ್ಣುತೀರ್ಥರ’ ಸನ್ನ್ಯಾಸ ಪದ್ಧತಿಗೆ ಭಂಡಾರಕೇರಿ ಮಠದ ಶ್ರೀ ಸುಲೋತ್ತಮ ತೀರ್ಥರು (ಕ್ರಿ.ಶ. ಹದಿನಾರನೆಯ ಶತಮಾನ)ಬರೆದ ಟೀಕೆ.ಈ ಗ್ರಂಥ ಆದಷ್ಟು ಬೇಗನೆ, ಕನ್ನಡ ಅನುವಾದ ಸಹಿತ ಪ್ರಕಟವಾಗಬೇಕು.
’ಕೃಷ್ಣನೆಂಬ ಸೊದೆಯ ಕಡಲ’ನ್ನು ಕನ್ನಡಿಗರಿಗೆ ನೀಡಿದ ಬನ್ನಂಜೆ ಗೋವಿಂದಾಚಾರ್ಯರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ, ಹಿರಿಯಡಕ,
ಕೃಷ್ಣನೆಂಬ ಸೊದೆಯ ಕಡಲು,
(ಆಚಾರ್ಯ ಮಧ್ವರ ಕೃಷ್ಣಾಮೃತ ಮಹಾರ್ಣವ)
ಭಾಷಾಂತರ:ಬನ್ನಂಜೆ
ಪ್ರ: ದಶಪ್ರಮತಿ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ :೧೯೯೮
(ಪುಟಗಳು:೨೦+೯೬) ಬೆಲೆ:೪೦.

AUS Casino - Hendon Mob
ReplyDeleteAUS Casino, is 영주 출장안마 located in Phoenix, Arizona, just 안산 출장마사지 a 포항 출장안마 10-minute 양산 출장샵 drive from 논산 출장마사지 Phoenix. The hotel features 635 guest rooms and suites,
It is said that, Acharya had started the work on śrī kṛṣṇāmṛta mahārṇava at irakī maṭa near rāmakuñja. But, it was completed at kokkaḍa.
ReplyDelete