ಎಚ್. ಎಸ್.ಶಿವಪ್ರಕಾಶ್, ಹೊಸ ಶತಮಾನದ ಕನ್ನಡ ಕಾವ್ಯಕ್ಕೆ ಹೊಸ ದಾರಿ ತೋರಬಲ್ಲ ಸಾಮರ್ಥ್ಯ ವಿರುವ ಕವಿಗಳಲ್ಲೊಬ್ಬರು. ’ಮಿಲರೇಪ’, ’ಮಳೆ ಬಿದ್ದ ನೆಲದಲ್ಲಿ’, ಅಣು ಕ್ಷಣ ಚರಿತ್ರೆ’, ’ಸೂರ್ಯ ಜಲ’ ’ನವಿರು ನಾಗರ’ ಗಳ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಆರನೆಯ ಕವನ್ ಸಂಕಲನ ’ ಮಳೆಯೇ ಮಂಟಪ’.
’ಒಂದು ಸಲುಗೆಯ ಬಿನ್ನಪ’ದಲ್ಲಿ ಕವಿ ಶಿವಪ್ರಕಾಶ್, ಕಾವ್ಯವನ್ನು ಕುರಿತ ತನ್ನ ಇತ್ತೀಚೆಗಿನ ಚಿಂತನೆಯನ್ನು ವಿವರಿಸಿದ್ದಾರೆ. -"ಭಾಷೆ ಮತ್ತು ಅನುಭವಗಳ ಸಾಂದ್ರತೆ ಮತ್ತು ಜಟಿಲತೆಯನ್ನು ತ್ಯಜಿಸದೆ ಕವಿತೆ ಆದಷ್ಟು ಸರಳ ರೀತಿಯಲ್ಲಿ ಸಹೃದಯರನ್ನು ಮುಟ್ಟಬೇಕು ಎಂಬುದು ನನ್ನ ನಂಬುಗೆ.... ಕವಿತೆ ಕೇವಲ್ ಒಂದು ಕಲಾಕೃತಿ ಎಂಬ ನಂಬುಗೆ ಈಗ ನನಗಿಲ್ಲ. ಮೂಲಭೂತವಾ ಗಿ ಅದೊಂದು ಅನ್ವೇಷಣಾ ಕ್ರಮ. ಸ್ವಯದ ಹಾಗೂ ಇದಿರಿನ ಪೇಚಾಟ ಪರದಾಟಗಳನ್ನು ದಾಟುವ ಪ್ರಯೋಗ, ಪ್ರಕ್ರಿಯೆ" ಎನ್ನುತ್ತಾರೆ ಶಿವಪ್ರಕಾಶ್. ’ಕವಿತೆ ಸಾಯುತ್ತದೆ’ ಎಂಬ್ ಕೂಗನ್ನು ಗೇಲಿ ಮಾಡುತ್ತ ಅವರು ಬುದ್ಧ ಜಾತಕ ಕತೆ ಯೊಂದನ್ನು ನೆನಪಿಸುತ್ತಾರೆ. ಆಲದ ಮರದ ಕೆಳಗಿದ್ದ ಒಂದು ಮೊಲ ಮರದಿಂದ ಒಂದು ಹಣ್ಣು ಬಿದ್ದ ಸದ್ದನ್ನು ಕೇಳಿಸಿ ಕೊಂಡು, ’ಲೋಕೋ ವಿನಸ್ಯತಿ( ಲೋಕ ನಶಿಸುತ್ತಿದೆ) ಎಂದು ಹಾಹಾಕಾರ ಹರಡಿಸಿತಂತೆ!’ಮಳೆಯೇ ಮಂಟಪ’ದಲ್ಲಿ ಮೂವತ್ತೇಳು ಕವನಗಳು, ಹದಿನಾರು ತತ್ತ್ವ ಪದಗಳು ಹಾಗೂ ಮೂವತ್ತು ವಚನಗಳಿವೆ.’ ಉರಿವ ಗುಗ್ಗಳ’ ಹಾಗೂ ’ಅಕ್ಕ-ತಮ್ಮ’ ಇಲ್ಲಿರುವ ಸುದೀರ್ಘ ಕವನಗಳು. ’ಬಸುರಿ ಮೂಳೆಯ ಮೇಲೆ ನಚ್ಚಾನೆ ನಡು ಮಧ್ಯಾಹ್ನ’ ಉರಿವ, ಕುಣಿವ ಗುಗ್ಗಳದ ಚಿತ್ರ ಭಯಾನಕವಾಗಿದೆ. ’ಅಕ್ಕ-ತಮ್ಮ’ ಕವಿತೆ ಒಂದು ರಾಜಸ್ಥಾನಿ ಜನಪದ ಕತೆಯಿಂದ ಪ್ರೇರಣಿ ಪಡೆದಿದೆ. ಇಲ್ಲಿನ ಅಕ್ಕ- ತಮ್ಮ ಬರಗಾಲದಲ್ಲಿ ತಮ್ಮನ್ನು ಬಿಟ್ಟು ಹೋದ ತಂದೆ-ತಾಯಿಯ್ ನಿರೀಕ್ಷೆಯಲ್ಲಿ ದ್ದಾರೆ. ’ನೋವಿದ್ದ ಮನದಲ್ಲಿ ಸಾವಿರ ಯೋಚನೆ, ಬಾವಿದ್ದ ಎದೆಯಲ್ಲಿ ಸಾವಿರ ಕಲ್ಪನೆ’ ಎನ್ನುತ್ತಾಳೆ ಅಕ್ಕ. ’ ಕಬೀರದಾಸರ ಭೋಜಪುರಿ ಕವಿತೆ’ ಅಲ್ಲಮನ ಬೆಡಗಿನ ವಚನಗಳನ್ನು ನೆನೆಪಿಸುವಂತಿದೆ. ನೀರು ಬೂದಿಯಾಗುತ್ತದೆ, ಮೀನು ಬದುಕಿ ಉಳಿಯುತ್ತದೆ. ಇರುವೆ ಉಚ್ಚೆ ಹೊಯ್ದಾಗ ನದಿನಾಲೆ ತುಂಬಿ ಹರಿಯುತ್ತವೆ. ’ ಪ್ರೀತಿಯ ಸ್ನೇಹಿತ ಜೋ’ ಎಂಬ್ ಕವಿತೆಯಲ್ಲಿ ಜಾಗತೀಕರಣ ಎಂಬ್ ರಾಜಕೀಯ ಕುತಂತ್ರವನ್ನು ಕುರಿತ ಕವಿಯ ಪ್ರತಿಕ್ರಿಯೆ ಹೀಗಿದೆ-"ಹೇಗೆ ಗೆದ್ದಾರು ನಮ್ಮ ಮುಗ್ಧ ದೇವತೆಗಳು ವ್ಯಾಪಾರಗಾರರ ಚಾಲೂಕಿ ಕುಹಕಗಳನ್ನು?"
ಈ ಸಂಕಲನದಲ್ಲಿರುವ ವಚನಗಳು ಹಾಗೂ ತತ್ತ್ವ ಪದಗಳ ಕುರಿತು ಶಿವ ಪ್ರಕಾಶ ಹೀಗೆನ್ನುತ್ತಾರೆ-" ಒಂದು ವ್ಯಕ್ತಿಗತ ಶೈಲಿಯನ್ನು ಕಟ್ಟಿಕೊಳ್ಳುವ ಮಾಡರ್ನಿಸ್ಟ್ ಹಠ ಇಂದು ಸಲ್ಲುವುದಿಲ್ಲ.ಈ ಅರ್ಥದಲ್ಲೇ ವೊಲೆ ಷೊಯಿಂಕ ಹೇಳಿದ್ದು-ಶೋಷಿತ ಜಗತ್ತಿನ ಬರಹಗಾರನಿಗೆ ಅಗತ್ಯವಾದದ್ದು ಸಾಮಾಜಿಕ ಸಿದ್ಧಾಂತವೇ ಹೊರತು ಕಲಾತ್ಮಕ ಸಿದ್ಧಾಂತವಲ್ಲ. ಈ ತೆರನ ಆಲೋಚನೆಗಳು ಮುಕ್ತಛಂದದ ಮೈಕಟ್ಟುಗಳಿಂದ ಭಿನ್ನವಾಗಿರುವ ’ ತತ್ತ್ವ ಪದ’ ಮತ್ತು ವಚನ್ ರೂಪಗಳಲ್ಲೂ ಕಾವ್ಯ ರಚನೆ ಮಾಡುವಂತೆ ನನ್ನನ್ನು ಪ್ರೇರೇಪಿಸಿದುವು. ಇಂದಿನ ಅಸ್ವಸ್ಥ ಭಾಷೆ ಹಾಗೂ ಸಮುದಾಯಗಳ ಕಾವ್ಯ್ ನರಕಿಗಳ ಆತ್ಮ ಸಂವಾದದಂತೆ ಕೇಳಾತೊಡಗಿದೆ. ಹೊಸ ವ್ಯಕ್ತಿ ಮತ್ತು ವಸ್ತುಗಳೊಂದಿಗೆ ಸಂಭಾಷಣೆಗಳ ನೆಲೆಗಳನ್ನು ಉಳಿಸಿಕೊಳ್ಳವುದರಲ್ಲಿ ಈ ಪ್ರಕಾರಗಳು ನನಗೆ ಸಾಧನಗಳಾದುವು."
’ಮಿಂಡರೈವರು’ ಎಂಬ ತತ್ತ್ವಪದ ದಲ್ಲಿ ಸರಕು ಸಂಸ್ಕೃತಿಯ ಖಾರವಾದ ವಿಡಂಬನೆ ಇದೆ. ಇಲ್ಲಿನ್ ಕಿವುಡ ಟ್ರಾನ್ಸಿ ಸ್ಟರನ್ನು, ಕುರುಡ ಟಿ.ಇಯನ್ನು ಹೆಳವಕಾರನ್ನು, ಕುಂಟ್ ಭೂಟು ಜೊತೆಯನ್ನು, ಮೂಕ ಮೈಕನ್ನು ಅಪೇಕ್ಷಿಸುತಾರೆ.
’ಬೆಟ್ಟದ ಮೇಲೊಂದು ಮನೆಯ ಮಾಡುತ್ತೇನೆ, ಮೃಗ ಖಗಗಳಿಗೆ ಅಂಜದ ಹಾಗೆ’ ಎಂದು ಆರಂಭವಾಗುವ ವಚನ ವಿಶೇಷವಾಘಿ ಗಮನ ಸೆಳೆಯುತ್ತದೆ. ’ಸಮುದ್ರದ ತಡಿಯಲ್ಲಿ ಮನೆ ಮಾಡುತ್ತೇನೆ, ನೊರೆ, ತೆರೆ, ಹೆಮ್ಮೀನು, ಮೊಸಳೆ ತಿಮಿಂಗಿಲಗಳಿಗೆ ಅಂಜದ ಹಾಗೆ’, ’ಸಂತೆಯೊಳಗೊಂದು ಮನೆ ಮಾಡುತ್ತೇನೆ, ಸದ್ದುಗದ್ದಲ ಗಮಲು ಧೂಳುಗಳಿಗಂಜದಂತೆ, ಎನ್ನುವ ನಿರೂಪಕ ವಚನದ ಕೊನೆಯಲ್ಲಿ ಹೀಗೆನ್ನುತ್ತಾನೆ-
"ಈ ಎಲ್ಲವೂ ಚೆನ್ನು
ನೀನೂ ಜತೆಗಿದ್ದರೆ
ಇಲ್ಲದ ಹೋದರೆ
ಬೆಟ್ಟ ಪೂರ್ತಿ ಬೋಳಾಗುತ್ತದೆ
ಕಡಲ ತಡಿ ಕಡಲಲ್ಲಿ ಮುಳುಗಿ ಹೋಗುತ್ತದೆ.
ಸಂತೆ ಅಂತೂ ಇಂತೂ ನೆರೆದು ಮುಗಿದು ಹೋಗುತ್ತದೆ."
ಶಿವಪ್ರಕಾಶರ ಈ ವಚನ ವಿರಹಿಯ ಶೃಂಗಾರದಿಂದ ಆರಂಭವಾಗಿ, ಸಖೀಗೀತದತ್ತ ತುಡಿಯುತ್ತದೆ.
ಇಲ್ಲಿನ ಒಂದು ವಚನದಲ್ಲಿ ’ಅಚ್ಚಗನ್ನಡದ ಬಿಸಿಲು ನಮ್ಮನ್ನು ಆವರಿಸಿದ ಹಾಗೆ’ ಎಂಬ ಮಾತಿದೆ. ’ಮಳೆಯೇ ಮಂಟಪ’ ಅಚ್ಚಗನ್ನಡದ ಬಿಸಿಲು-ಮಳೆಯ ಖುಶಿ ನೀಡುತ್ತದೆ.
ಮುರಳೀಧರ ಉಪಾಧ್ಯ ಹಿರಿಯಡಕ
ಮಳೆಯೇ ಮಂಟಪ
(ಕವನ ಸಂಕಲನ)
ಲೇ: ಎಚ್. ಎಸ್. ಶಿವಪ್ರಕಾಶ್
ಪ್ರ: ಲೋಹಿಯಾ ಪ್ರಕಾಶನ, ’ಕ್ಷಿತಿಜ’,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮೊದಲ್ ಮುದ್ರಣ:೨೦೦೨.
ಬೆಲೆ ರೂ.೫೦.

No comments:
Post a Comment