"ವಂಶೀಸಂದೇಶಂ.’ ಡಾ| ಆರ್. ಗಣೇಶ್ ಅವರು ಹಳಗನ್ನಡಾದಲ್ಲಿ ಬರೆದಿರುವ ಹೊಸ ಕಾವ್ಯ್. ಈ ಖಂಡಕಾವ್ಯದ ಕವಿಯ ಸ್ವಗತ (ದೃಕ್ಕು), ಕೊಳಲಿಗೆ ಸಂಬೋಧನೆ (ದೃಶ್ಯ), ಶ್ರೀಕೃಷ್ಣನಲ್ಲಿ ನಿವೇಡಾಣಾ (ದರ್ಶನ) ಎಂಬ ಮೂರು ಭಾಗಗಳಲ್ಲಿ ಒಟ್ಟು ನೂರ ಇಪ್ಪತ್ತು ಪದ್ಯ ಗಳಿವೆ. ಇಪ್ಪತ್ತೆರಡು ಶಾರ್ದೂಲ್ ವಿಕ್ರೀಡಿತ, ಹದಿನೇಳು ಮತ್ತೇಭವಿಕ್ರೀಡಿತ, ಮೂವತ್ತೈದು ಉತ್ಪಲಮಾಲೆ, ಹದಿನೇಳು ಚಂಪಕಮಾಲೆ, ಹದಿನಾರು ಕಂದ ಹಾಗೂ ತಲಾ ಒಂದೊಂದರಂತೆ ಸ್ರಗ್ಛತಿ. ಮಹಾಸ್ರಗ್ಥರೆ, ಪೃಥ್ವಿ, ಹರಿಣೆ, ಶಿಖರಿಣೆ, ದ್ರುತವಿಲಂಬಿತ, ಜಾಪಚಂದಸಿಕ, ವಸಂತ ತಿಲಕ, ಮಂಜುಭಾಷಿಣೆ, ಮಲ್ಲಿಕಾಮಾಲೆ, ಪುಷ್ಟಿತಾಗ್ರ, ಮಂಡಾಕ್ರಾಂತ ಮತ್ತು ಮಾಲಿನೀವೃತ್ತಗಳು ಈ ಕಾವ್ಯದಲ್ಲಿವೆ.
’ ವಂಶೀಸಂದೇಶಂ’ ಸಂವೇಗ (ದು:ಖ)ದಿಂದ ಕೂಡಿರುವ, ಮಧುರ ಭಕ್ತಿಮಾರ್ಗಡ ಸಂದೇಶ ಕಾವ್ಯ. ಈಅ ಕಾವ್ಯದ ವಧು (ಜೀವಾತ್ಮ) ’ಭವಬಂಧನ’ ವೆಂಬ ಪತಿಯ ಬದಲು ’ಪರಮಾತ್ಮ’ (ಕೃಷ್ಣ) ಎಂಬ ಪ್ರಿಯನಿಗೆ ಒಲಿದಿದ್ದಾಳೆ. ಈಕೆ ಪರಕೀಯಾನಾಯಿಕೆ. (ಒಬ್ಬನನ್ನು ಮದುವೆಯಾಗಿ ಬೇರೊಬ್ಬನನ್ನು ಪ್ರೇಮಿಸುವ ವನಿತೆ.
’ಬೆಡಂಗು ಬಡಬಾಳಿನೊಳ್ ಸುಳಿಯ್ ಬಾರದೇಂ’ ’ಗೊಲ್ಲನ ಘೋಷದೊಳ್ ತಳರ್ದ ಮೆಲ್ಲುಲಿ ಬಾರದದೇಕೆ ಬಾಳಿನೊಳ್’ ಎಂಬ ವಿರಹಿಣೆಯ ನಿರೀಕ್ಷೆಯೊಂದಿಗೆ ಈ ಕಾವ್ಯದ ಆರಂಭವಾಗುತ್ತದೆ. ಇಲ್ಲಿನ ನಾಯಿಕೆ, ವಾಸಕೆ ಸಜ್ಜಿಕೆಯಾಗಿ, ವರ್ಷಾಭಿಸಾರಿಕೆಯಾಗಿ, ದಿವಸಾಭಿಸಾರಿಕೆಯಾಗಿ, ದರ್ಶಾಭಿಸಾರಿಕೆಯಾಗಿ, ವಿಪ್ರಲ ಬ್ಧಾನಾಯಿಕೆಯಾಗಿ ಕೃಷ್ಣನನ್ನು ಕಾಯುತ್ತಾಳೆ. ’ದೃಶ್ಯ’ ಎಂಬ ಎರಡನೆಯ ಭಾಗದಲ್ಲಿ ಈ ನಾಯಿಕೆ ಕೃಷ್ಣನ ಕೊಳಲಿನೆದುರು ತನ್ನ್ ಅಂತರಂಗವನ್ನು ಅನಾವರ ಣಗೊಳಿಸುತ್ತಾಳೆ. ಕೊಳಲಿಗೆ ಕೃಷ್ಣನ ಸುಧಾ ಮಧುರ ಅಧರರಸಪಾನ ನಿರಂತರ ಸಿಗುತ್ತಿದೆ. ’ ತ್ವತ್ಪುಣ್ಯಾಮೇಂ ಗಣಮೋ! ಎನ್ನುತ್ತಾಳೆ ನಾಯಿಕೆ. ಈ ಜಗತ್ತಿನ ದಾಂಪತ್ಯವೆನ್ನುವುದು ಪಾಪಪೂರ್ಣ; ಎಂಬ ಈ ನಾಯಿಕೆಯ ನಿಲುವು ಪ್ರಶ್ನಾರ್ಹವಾಘಿದೆ. "ಜಗದಾರಾಧಿಪ ಜಾರ! ಬಾರ! ಪರಕೀಯಾವೃತ್ತಿಯಂ ಪೋಷಿಸಯ್!" ಎಂದು ಈಕೆ ಬಿನ್ನವಿಸುತ್ತಾಳೆ.
ಕವಿ ಆರ್. ಗಣೇಶ್ ಅವರು ಈ ಕಾವ್ಯವನ್ನು ಸಂಸ್ಕೃತ ಹಳಗನ್ನಡಗಳ ವಿಶಿಷ್ಟ ಮಿಶ್ರಣದ ಶೈಲಿಯಲ್ಲಿ ಬರೆದಿದ್ದಾರೆ. ಹೊಸಗನ್ನಡದ ಬದಲು ಹಳಗನ್ನಡದಲ್ಲಿ ಬರೆದಿರುವುದರಿಂದ ಸಂವಹನದ ಸಮಸ್ಯೆ ಉಂಟಾಗುತ್ತದೆಂಬುದು ಕವಿ ಗಣೇಶರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದ್ದರಿಂದಲೇ ಅವರು ಕಾವ್ಯದ ಕೊನೆಯಲ್ಲಿ ಪದ್ಯಗಳ ತಾತ್ಪರ್ಯವನ್ನು ಹೊಸಗನ್ನಡದಲ್ಲಿ ನೀಡಿದ್ದಾರೆ.(ವಿಪ್ರಲಬ್ಧಾನಾಯಿ ಕೆಯ ಸಂಕೇತಗಳೇ ಅವಳ ನಲ್ಲನಿಗೆ ಅರ್ಥವಾಗದಿದ್ದರೆ ಅವಳು ಸೂಚಿಸುವ ಸಂಕೇತ ಸ್ಥಳಕ್ಕೆ ನಲ್ಲ ಬರುವುದು ಹೇಗೆ?) ’ ನುಡಿಯೊಡಪಾದುದಯ್, ಕವಿತೆಯಾಗದೆ’ ಎಂಬ ಕವಿಯ ಮಾತು ಅರ್ಧಸತ್ಯ. ಇದು ಕವಿತೆ ಹೌದು; ಆದರೆ ನಾರಿಕೇಲ ಪಾಕದ ಕವಿತೆ; ಪಾಂಡಿತ್ಯಪೂರ್ಣ ಕವಿತೆ. ಕನಕದಾಸರ ಮುಂಡಿಗೆಗಳನ್ನು ಸವಿದಿರುವ ಸಹೃದಯರು ಶತಾವಧಾನಿ ಗಣೇಶರ ಈ ಕಾವ್ಯವನ್ನು ಸವಿಯಲು ತಿಣುಕುಬೇಕಾಗುತ್ತದೆ. ಆದರೆ ತನಗೆ ಪ್ರಿಯವಾದ ಸಂಸ್ಕೃತ ಹಳಗನ್ನಡಗಳ ವಿಶಿಷ್ಟ ಮಿಶ್ರಣದಲ್ಲಿ ಕಾವ್ಯ ಬರೆಯುವ ಶತಾವಧಾನಿ ಗಣೇಶರ ’ಸರ್ಜನಶೀಲ’ ಸ್ವಾತಂತ್ರ್ಯವನ್ನು ನಾವು ಅಲ್ಲಗಳೆಯುವಂತಿಲ್ಲ.
"ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸಂತತಮೆಂದೆ ಪಳಗನ್ನಡಮಂ....ನುಡಿವರ್, ದೇಸಿಯಲ್ಲಿದೆಂದರಿದಿರ್ದುಂ" (೧.೪೮) ಎಂದು ಕವಿರಾಜಮಾರ್ಗಕಾರ ಒಂದು ಸಾವಿರ ವರ್ಷಗಳ ಹಿಂದೆ ಅಭಿಪ್ರಾಯಪಟ್ಟಿದ್ದಾನೆ. ಅವನ ಈ ಮಾತನ್ನು ನಾಂದಿಪದ್ಯವಾಗಿ ಸ್ವೀಕರಿಸಿ ’ವಂಶೀ ಸಂದೇಶಂ’ ಕಾವ್ಯವನ್ನು ಕುರಿತ ಸಹೃದಯ ಸಂವಾದವನ್ನು ಆರಂಭಿಸಬೇಕು.
ಮುರಳೀಧರ ಉಪಾಧ್ಯ ಹಿರಿಯಡಕ.
ವಂಶೀಸಂದೇಶಂ
ಲೇ: ಶತಾವಧಾನಿ ಡಾ|ಆರ್. ಗಣೇಶ
ಪ್ರ: ಅಭಿಜ್ಞಾನ ೮, ಗೋಖಲೆ
ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣ,
ನರಸಿಂಹರಾಜ್ ಕಾಲೊನಿ, ಬಸವನಗುಡಿ
ರಸ್ತೆ, ಬೆಂಗಳೂರು-೫೬೦೦೧೯
ಮೊ.ಮುದ್ರಣ:೧೯೯೯
ಬೆಲೆ:ರೂ.೨೫.

No comments:
Post a Comment