stat Counter



Sunday, July 19, 2020

ಶಿವರಾಮ ಕಾರಂತರ "--- ಸಿರಿಗನ್ನಡ ಅರ್ಥಕೋಶ }{1940 }



ಸಿರಿಗನ್ನಡ ಅರ್ಥಕೋಶ 

ಸಂಪಾದಕರು -ಶಿವರಾಮ ಕಾರಂತ

ಸಹಾಯಕ ಮಂಡಳಿ-

ಶ್ರೀ ಬಿ. ಶಂಕರನಾರಾಯಣ ರಾವ್ ,ಕೈ//ಶ್ರೀ. ಐ. ಶಿವರಾಮಯ್ಯನವರು ,

ಶ್ರೀ ಟಿ. ನಾರಾಯಣ ಭಟ್ತರು  , ಶ್ರೀ ಹು. ಬೆಂಗೇರಿಯವರು , ಇತರ ಗೆಳೆಯರು

ಮೊದಲ ಮುದ್ರಣ -1944

ಪ್ರಕಾಶಕರು -ಹರ್ಷ ಪ್ರಕಟಣಾಲಯ , ಪುತ್ತೂರು, ದ. ಕ

ಶಿವರಾಮ ಕಾರಂತರ ಮುನ್ನುಡಿಯ ಆಯ್ದ ಭಾಗ -

’ಈ ಪ್ರಯೋಗದ ಕತೆಯನ್ನು ಚಿಕ್ಕದಾಗಿ ಇಲ್ಲಿ ಹೇಳುವುದು ಅಪ್ರಾಸಂಗಿಕವಲ್ಲ . ನನ್ನ ಗೆಳೆಯರಾದ ಶ್ರೀ ಬಡೆಕ್ಕಿಲ ಶಂಕರನಾರಾಯಣ ರಾಯರು ಕನ್ನಡ ಸಾಹಿತ್ಯ ಪ್ರಿಯರು . ಅವರು ಮೊದಲಿಗೆ ದುಡಿದು ದುಡಿದು ಕುಮಾರವ್ಯಾಸನ ಶಬ್ದ ಸಂಪತ್ತಿಯನ್ನು ಆರಿಸಿ ಬರೆದಿರಿಸಿದ್ದರು , ಅವುಗಳ ಪ್ರಯೋಗಗಳನ್ನು ಸಂಗ್ರಹಿಸಿದ್ದರು. ಅದು ನನ್ನನ್ನು ಆಕರ್ಷಿಸಿತು. ಅದನ್ನೇ ಪಾಯವಾಗಿರಿಸಿಕೊಂದು  ಶಬ್ದಕೋಶ ರಚಿಸಬಾರದೇಕೆ ಎಂದು ಅನಿಸಿತು . ನನ್ನಗುರುಗಳಾದ ಶ್ರೀ ಐ. ಶಿವರಾಮಯ್ಯನವರು  ಈ ಬರಹವನ್ನು ತಿದ್ದಿ ತಮ್ಮ ಶಬ್ದ ಸಂಪತ್ತಿನಿಂದ ಪುಷ್ಟಿಗೊಳಿಸಿದರು . ಈ ಕಾಲದಲ್ಲಿ  ಅನೇಕ ಷಟ್ಪದಿ ಕಾವ್ಯಗಳ ಮತ್ತು ಪ್ರಸಿದ್ದಗೊಂಡ ಇತರ ಗ್ರಂಥಗಳ ಶಬ್ದ ಭಂಡಾರವನ್ನೂ ಅದಕ್ಕೆ ಸೇರಿಸಿಕೊಡೆನು . ಮುಂದೆ ಈ ಕೆಲಸಕ್ಕೆ ನನ್ನ ಮಿತ್ರರಾದ ಶ್ರೀ ಶಂ. ಬಾ. ಜೋಶಿಯವರು ನೆರವಾದರು.ಶ್ರೀ ವಿ. ಸೀ ಅವರೂ ಅನೇಕ ಅಮೂಲ್ಯ ಸೂಚನೆಗಳನ್ನಿತ್ತರು . ಅವರು ತಂತಮ್ಮ ಪ್ರಾಂತದ ಶಬ್ದ ಸಂಗ್ರಹ ಕೊಟ್ಟುದಲ್ಲದೆ ಕರಡು ಪ್ರತಿಯನ್ನು ತಿದ್ದಲು ನೆರವಾದರು , ಶ್ರೀ  ಹುಚ್ಚ ರಾವ್ ಬೆಂಗೇರಿ ಅವರು ಧಾರವಾಡ ಪ್ರಾಂತದ ಮಾತುಗಳನ್ನೂ , ಅರ್ಥಗಳನ್ನೂ ಒದಗಿಸಿ ಕೊಟ್ತರು .ಇತ್ತ ಶ್ರೀ . ಟಿ. ನಾರಾಯಣ ಭಟ್ಟರು ತಮ್ಮ ಭಾಷಾ , ಸಾಹಿತ್ಯ ಪಾಂಡಿತ್ಯದ ನೆರವನ್ನು ನನಗೆ ಒದಗಿಸಿ ಕೊಟ್ಟರು , ಇಷ್ಟೊಂದು ಗೆಳೆಯರು ಕೊಟ್ಟ ಪ್ರತ್ಯಕ್ಷ , ಪರೋಕ್ಷ ಬೆಂಬಲಗಳು ಇಲ್ಲದಿರುತ್ತಿದ್ದರೆ ಈ ಅರ್ಥ ಕೋಶ ಈ ರೂಪಕ್ಕೆ ಬರುತ್ತಿರಲಿಲ್ಲ . ಅವರೆಲ್ಲರಿಗೆ ನಾನು ನನ್ನ ಮಾತಿನ ಋಣ ಸಂದಾಯ ಮಾಡಿದರೆ ಸಾಕೇ ?"

-ಶಿವರಾಮ ಕಾರಂತ

ಮಂಗಳೂರು 

26-12=1940

No comments:

Post a Comment