ಎ.ಆರ್. ಕೃಷ್ಣಾಶಾಸ್ತ್ರಿಗಳಾ ’ಸಂಸ್ಕೃತ ನಾಟಕ’ ೧೯೩೭ರಲ್ಲಿ ಪ್ರಕಟವಾಯಿತು. ಅವರು ಅಶ್ವಘೋಷನ ತುಂಡುಗಳ ಆಧಾರದಿಂದ ಅವನ್ ವ್ಯಕ್ತಿತ್ವವನ್ನು ಪುನರ್ ನಿರ್ಮಿಸಿದ ಬಗ್ಗೆ, ಅವರ ಖಚಿತ ಹಾಗೂ ತೂಕದ ವಿಮರ್ಶನ ನಿಲುವಿನ ಬಗ್ಗೆ ಕುರ್ತಕೋಟಿಯವರಿಗೆ ಮೆಚ್ಚುಗೆ ಇದೆ. "ಪಾಶ್ಚಾತ್ಯ ಪಂಡಿತರು ಸಂಸ್ಕೃತ ನಾಟಕದ ಬಗ್ಗೆ ಇಟ್ಟುಕೊಂಡಿರುವ ಅಭಿಪ್ರಾಯಗಳು ಈಗ ನಮ್ಮದಾಗಬೇಕಾಗಿಲ್ಲ.... ಪಾಶ್ಚಾತ್ಯ ವಿಮರ್ಶೆಯ ಮಾನ ದಂಡಗಳು ಸಾರ್ವತ್ರಿಕವೆಂಬ ಭ್ರಮೆ ನಮಗೂ ಇದೆ. ಈ ಭ್ರಮೆಯಿಂದ ತಪ್ಪಿಸಿ ಕೊಳ್ಳುವದು ಅಷ್ಟು ಸುಲಭವಾಗಿಲ್ಲ. ಆದರೂ ಈ ದಿಕ್ಕಿನಲ್ಲಿ ಇದೊಂದು ಚಿಕ್ಕ ಪ್ರಯತ್ನ ಅಷ್ಟೇ". ಎಂದು ಕುರ್ತ ಕೋಟಿಯವರು ’ ಪ್ರತ್ಯಭಿಜ್ಞಾನ’ದ ಮುನ್ನಡಿಯಲ್ಲಿ ಬರೆದಿದ್ದಾರೆ.
ಪ್ರಸ್ತಾವನೆ ಕುರ್ತಕೋಟಿಯವರು ಚರ್ಚಿಸಿರುವ ನಾಟಕಗಳಲ್ಲಿ ಭಾಸನ ’ ಅವಿಮಾರಕ’ ಗಮನ ಸೆಳೆಯುತ್ತದೆ. ಕುರ್ತ ಕೋಟಿಯವರ ಪ್ರಕಾರ, "ಅವಿಮಾರಕ" ಗಮನ ಸೆಳೆಯುತ್ತದೆ. ಕುರ್ತಕೋಟಿಯವರ ಪ್ರಕಾರ ’ಅವಿಮಾರಕ’ ರಂಗಭೂಮಿಯ ದೃಷ್ಟಿಯಿಂದ ಅತ್ಯಂತ ಯಶಸ್ವಿಯಾದ ನಾಟಕ. ನಾಟಕದ ಸ್ವರೂಪದ ಬಗ್ಗೆ, ರಂಗ-ಭೂಮಿಯ ಬಗ್ಗೆ ತಿಳಿಸಿಕೊಡುವ ನಾಟಕ." ಋಷಿಯ ಶಾಪದಿಂದ ಸ್ವಪಚನಾಗಿರುವ ಅವಿಮಾರಕ ಈ ನಾಟಕದ ನಾಯಕ.
ಭಾಸನ’ ಪ್ರತಿಮಾನಾಟಕ’, ಶೂದ್ರಕನ ’ಮೃಚ್ಛಕಟಿಕ;, ಕಾಳಿದಾಸನ’ ಅಭಿಜ್ಞಾನ ಶಾಕುಂತಲ’, ವಿಶಾಖದತ್ತನ ’ಮುದ್ರಾ ರಾಕ್ಷಸ’, ಭವಭೂತಿಯ ’ಉತ್ತರರಾಮ ಚರಿತ’, ಶ್ರೀ ಹರ್ಷನ ’ನಾಗಾನಂದ’ ನಾಟಕಗಳನ್ನು ಕುರ್ತಕೋಟಿಯವರು ’ಪ್ರತ್ಯಭಿಜ್ಞಾನ’ದಲ್ಲಿ ವಿಮರ್ಶಿಸಿದ್ದಾರೆ. ’ಮೃಚ್ಛಕಟಿಕ’ದ ವಿಮರ್ಶೆಯಲ್ಲಿ ಅವರ ಪ್ರತಿಭೆಯ ಹೊಳಹುಗಳಿವೆ. ’ಲಿಂಪತೀವ ತಮೋಂಗಾನಿ’ (ಕತ್ತಲೆ ಮೈಗೆ ಮೆತ್ತಿ ಕೊಂಡಿದೆ)ಎನ್ನುತ್ತಾನೆ ಶೂದ್ರಕ. ’ಮೃಚ್ಛಕಟಿಕ’ದ ಸಮಾಜ ಅರಾಜಕತೆಯ ಕತ್ತಲೆ ಹಾಗೂ ದಾರಿದ್ರ್ಯದ ಕತ್ತಲೆಯಿಂದ ತುಂಬಿದೆ. ಈನಾಟಕದಲ್ಲಿ ಪ್ರಣಯಕ್ಕೆ ರಾಜಕೀಯದ ಬಣ್ಣ ಬರುತ್ತದೆ. ಚಾರುದತ್ತ ವಸಂತ ಸೇನೆಯರ ಪ್ರಣಯ ಉಜ್ಜಯನಿಯ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಒಂದು ಒಳ್ಳೆಯ ಕಾದಂಬರಿಯಂತೆ, ಕಾವ್ಯದಂತೆ ಓದಿಸಿ ಕೊಂಡು ಹೋಗುವುದು, ನಮ್ಮ ಅರಿವನ್ನು ವಿಸ್ತರಿಸುವುದು ’ಪ್ರತ್ಯಭಿಜ್ಞಾನದ ಹೆಚ್ಚುಗಾರಿಕೆ.
ಮುರಳೀಧರ ಉಪಾಧ್ಯ ಹಿರಿಯಡಕ
ಪ್ರತ್ಯಭಿಜ್ಞಾನ
ಲೇ:ಕೀರ್ತಿನಾಥ ಕುರ್ತಕೋಟಿ
ಪ್ರ:ಮನೋಹರ ಗ್ರಂಥಮಾಲಾ ಲಕ್ಷ್ಮೀ
ಭವನ, ಸುಭಾಸ್ ರಸ್ತೆ, ಧಾರವಾಡ-೧.
ಮೊದಲ ಮುದ್ರಣ:೧೯೯೮
ಬೆಲೆ:ರೂ.೧೨೦ (ಪುಟಗಳು:೧೬೮)

No comments:
Post a Comment