ಅವಾಂತರ’ ಪ್ರಹ್ಲಾದ ಅಗಸನ ಕಟ್ಟೆಯವರ ಎರಡನೆಯ ಕಾದಂಬರಿ. ಸರಕಾರಿ ನೌಕರಿಯಲ್ಲಿರುವ ದಂಪತಿಗಳ ವರ್ಗಾವಣೆಯ ಸಮಸ್ಯೆಯ ಸುತ್ತ ಬೆಳೆಯುವ ಈ ಕಾದಂಬರಿ ಅಧಿಕಾರಶಾಹಿಯ ಅಮಾನವೀಯತೆಯನ್ನು ಚಿತ್ರಿಸುತ್ತದೆ. ಸೋಮಶೇಖರನ ಹೆಂಡತಿ ಕಮಲ ಗಂಡಾನಿರುವ ಊರಿಗಿಂತ ತುಂಬ ದೂರದಲ್ಲಿ, ನವಿಲುಗಿರಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಬಸುರಿಯಾಗಿರುವ ಅವಳ ವರ್ಗಾವಣೆಗೆ ಪ್ರಯತ್ನಿಸಲಿಕ್ಕಾಗಿ ಸೋಮಶೇಖರ ಬೆಂಗಳೂರಿಗೆ ಹೋಗುತ್ತಾನೆ. ಯಾಂತ್ರಿಕ, ಭಷ್ಟ್ರ, ಸಹಾನುಭೂತಿ ಶೂನ್ಯ ಅಧಿಕಾರಶಾಹಿಯನ್ನು ಕಂಡು ಕಂಘಾಲಾಗುತ್ತಾನೆ. ಭ್ರಷ್ಟ, ಅವನತಮುಖಿ ವ್ಯವಸ್ಥೆಯಲ್ಲಿ ಪ್ರಕಾಶ ಕಟಕೇರಿ, ಸಹದೇವ ವಣಕಾರರಂಥ ಒಳ್ಳೆಯವರು ಅಪ್ರಸ್ತುತರಾಗಿದ್ದಾರೆ. ಸೋಮಶೇಖರ್ ದಂಪತಿಗಳಿಗೆ ನವಿಲು ಗಿರಿಯ ಪ್ರಾದೇಶಿಕ ವೈಶಿಷ್ಟ್ಯಗಳು ಅಸಹನೀ ಯವಾಗುತ್ತವೆ. ಆಧುನಿಕ ರೀತಿಯ ಶೌಚಾಲಯ ವ್ಯವಸ್ಥೆಯಿಲ್ಲದ ಆ ಊರು ಅವರ ಪಾಲಿಗೆ ನರ್ಅಕವಗುತ್ತದೆ. ಮಳೀಮಠ ದಂಪತಿಗಳು ಮರುಭೂಮಿಯ ಓಯಸಿಸ್ ನಂತೆ ಕಾಣಿಸುತ್ತಾರೆ. ಹುಟ್ಟು ವಾಗಲೇ ಸತ್ತಿರುವ ಸೋಮಶೇಖರ ದಂಪತಿಗಳ್ ಅಮಗು ಅಧಿಕಾರಶಾಹಿಯ ಕ್ರೌರ್ಯದ ಸಂಕೇತವಾಗುತ್ತದೆ.
’ಅವಾಂತರ’ ದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧಿಕಾರಶಾಹಿಯ ಚಿತ್ರಣ ’ತಬರನ ಕತೆ’ಯ ಮುಂದಿನ ಅಧ್ಯಾಯದಂತಿದೆ. ಇದು ವಿಚಿತ್ರ ಕಲ್ಪನೆಯೋ ವಾಸ್ತವವೋ ಎಂದು ಭ್ರಮೆ ಹುಟ್ಟಿಸುವ ಭಯಾನಕ ಸಂಗತಿಗಳು ಈ ಕಾದಂಬರಿಯಲ್ಲಿವೆ.ವಾಸ್ತವ ಅನುಭವ ಗಳಿಗೆ ಕಲಾತ್ಮಕ ಅಭಿವ್ಯಕ್ತಿ ನೀಡುವುದರಲ್ಲಿ ಅಗಸನಕಟ್ಟೆಯವರು ಯಶಸ್ವಿಯಾಗಿದ್ದಾರೆ.
ಮುರಳೀಧರ ಉಪಾಧ್ಯ ಹಿರಿಯಡಕ
No comments:
Post a Comment