stat Counter



Tuesday, July 28, 2020

ಮುರಳೀಧರ ಉಪಾಧ್ಯ -" ಕಾಂತ ಬಾರೆ ಬೂದಬಾರೆ { ಮುದ್ದು ಮೂಡುಬೆಳ್ಲೆ }

 ಕಾಂತಬಾರೆ-ಬೂದಬಾರೆಯರು ತುಳುನಾದಿನ ಜಾನಪದ ಲೋಕದ ಅವಳಿವೀರರು. ವಿಜಯನಗರದ ಆಳ್ವಿಕೆಯ ಅನಂತರ ಬಪ್ಪನಾಡಿನಲ್ಲಿ ಸಾವಂತರು ಪ್ರಬಲರಾದರು. ಅವರ ಆಶ್ರಯದಲ್ಲಿದ್ದ ಕಾಂತಬಾರೆ-ಬೂದಬಾರೆಯರು ವೀರರಾಗಿ ಮಾತ್ರವಲ್ಲ ಕೃಷಿ ನೀರಾವರಿ ಕ್ಷೇತ್ರಗಳಲ್ಲೂ ಹಲವು ಸಾಧನೆಗಳನ್ನು ಮಾಡಿ ಕುರಿತ ಐತಿಹ್ಯ್-ಪಾಡ್ದನಗಳು ಲಭ್ಯವಿವೆ. ಕಾಂತಬಾರೆ-ಬೂದಬಾರೆಯರ ಜನಪ್ರಿಯತೆ ಮೂಲ್ಕಿಯ ಒಂಬತ್ತು ಮಾಗಣೆಗೆ ಸೀಮಿತಗೊಂಡಿದೆ.
ಕ್ಷೇತ್ರಾಧ್ಯಯನ ಹಾಹೂ ಜನಪದ ಪಠ್ಯಗಳ ಅಧ್ಯಯನದಿಂದ ಮುದ್ದು ಮೂಡುಬೆಳ್ಳೆಯವರು ರಚಿಸಿರುವ ಈ ಗ್ರಂಥ ಕಾಂತಬಾರೆ-ಬೂದಬಾರೆಯರನ್ನು ಕುರಿತ ಅನೇಕ ಅಸ್ಪಷ್ಟ ಸಂಗತಿಗಳನ್ನು ಸ್ಪಷ್ಟಪಡಿಸುತ್ತದೆ. ಲೇಖಕರು ಬರೆದಿರುವಂತೆ "ಮೂಲ್ಕಿ ಸೀಮೆಯ ಒಂಬತ್ತು ಮಾಗಣೇಯ ಸಮಸ್ತ ಬಿಲ್ಲವರ ಆರಾಧ್ಯ  ದೈವಗಳಾಗಿರುವ ಅವಳೀವೀರರಾದ ಕಾಂತ ಬಾರೆ ಬೂದಬಾರೆ ಕವಿ ಕಲ್ಪನೆಯ ಸೃಷ್ಟಿಗಳಲ್ಲ. ಈ ಜಾನಪದ ವೀರರು ಶೌರ್ಯ ಪರಾಕ್ರಮಗಳನ್ನು ಸೀಮೆಯುದ್ದಕ್ಕೂ ಮೆರೆದು ಸಾವಂತರಸರ ಬಲಗೈ ಬಂಟರಾಘಿ ಸೀಮೆಯನ್ನು    ರಕ್ಷಣೆ ಮಾಡಿ  ಅಸಾಧಾರಣ ಕಾರ್ಯಗಳನ್ನು ಸಾಧಿಸಿದ ಐತಿಹಾಸಿಕ ವ್ಯಕ್ತಿಗಳು ಎಂಬುದಾಗಿ ಸೀಮೆಯ ಭಕ್ತರು ಬಲವಾಘಿ ನಂಬಿದವರು. ಇದಕ್ಕೆ ಅವರದಾಗಿ ಉಳಿದಿರುವ ಅನೇಕ ಕುರುಹುಗಳ ಸಾಕ್ಷಿ ಇಂದಿಗೂ ಇರುವುದು ಈ ನಂಬಿಕೆ ಯನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ".

ಸೂಕ್ಷ್ಮ ಸ್ತರದ ಅಧ್ಯಯನ ಕೃತಿಯಾದ ’ಕಾಂತಬಾರೆ-ಬೂದಬಾರೆ’ಯಲ್ಲಿ ಮುದ್ದು ಮೂಡುಬೆಳ್ಳೆಯವರ ಪರಿಶ್ರಮ-ಸಾಧನೆಗಳು ಶ್ಲಾಘನೀಯವಾಗಿವೆ.
ಮುರಳೀಧರ ಉಪಾಧ್ಯ, ಹಿರಿಯಡಕ,
ಮೂಲ್ಕಿ ಸೀಮೆಯ ಅವಳಿ ವೀರರು
ಕಾಂತಬಾರೆ-ಬೂದಬಾರೆ
(ಒಂದು ಅಧ್ಯಯನ)
ಲೇ:ಮುದ್ದು ಮೂಡುಬೆಳ್ಳೆ
ಪ್ರ:ಗೆಳೆಯರ ಬಳಗ ಪ್ರಕಾಶನ, ಸಿ.೩,
ಎ.ಐ.ಆರ್. ಕ್ವಾರ್ಟರ್ಸ್, ಉರ್ವಾ ಸ್ಟೋರ್ಸ್, ಮಂಗಳೂರು-೬
ಮೊದಲ ಮುದ್ರಣ-೧೯೯೮.
ಬೆಲೆ:ರೂ.೪೫ (ಪುಟಗಳು:೧೫೪)

No comments:

Post a Comment