stat Counter



Sunday, June 21, 2020

ಮುರಳೀಧರ ಉಪಾಧ್ಯ ಹಿರಿಯಡಕ - ಶಿವರಾಮ್ ಪಡಿಕ್ಕಲ್ ಅವರ " ನಾದು ನುದಿಯ ರೂಪಕ " { 2001 } ಸಾಮಾಜಿಕ ಅಸ್ಮಿತೆಯ ಹುಡುಕಾಟದ ಕಥನ

ಡಾ| ಶಿವರಾಮ ಪಡಿಕ್ಕಲ್ ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಪಿ.ಎಚ್.ಡಿ ಸಂಪ್ರಬಂಧದ ಪರಿಷ್ಕೃತ ರೂಪ ’ನಾಡು-ನುಡಿಯ ರೂಪಕ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಒಂದು ಶತಮಾನದ ಇತಿಹಾಸವಿರುವ ಕನ್ನಡ ಕಾದಂಬರಿ ಪ್ರಕಾರ ಸ್ವಂತಿಕೆಯ  ಛಾಪಿ ನೊಂದಿಗೆ ತಲೆಯೆತ್ತಿ ಬೆಳೆದ ಬಗೆಯನ್ನು ಹಾಗೂ ಅದ ತಾತ್ವಿಕತೆಯನ್ನು ವಿಶ್ಲೇಷಿಸುವುದು ಈ ಸಂಪ್ರಬಂಧದ ಉದ್ದೇಶ. ಕಾದಂಬರಿ ಬರಹದ ಮೂಲಕ ಲಭ್ಯವಾಗುವ ಚಾರಿತ್ರಿಕ ಸನ್ನಿವೇಶವನ್ನು ಚರ್ಚಿಸುತ್ತ, ಮೊದಲ ಕಾದಂಬರಿಗಳು ಕರ್ನಾಟಕದ ಸಂಸ್ಕೃತಿಯನ್ನು ನಿರೂಪಿಸಿದ ರೀತಿಯನ್ನು ಡಾ| ಪಡಿಕ್ಕಲ್ ವಿವರಿಸಿದ್ದಾರೆ.
ಜಾರ್ಜ್ ಲುಕಾಚ್ಸ್ ವಿವರಿಸುವಂತೆ   ವ್ಯಕ್ತಿ  ಮತ್ತು ಸಮಾಜದ  ಛಿದ್ರೀಕರಣದಿಂದ ನಾವೆಲ್ ಹುಟ್ಟುತ್ತದೆ. ನಾವೆಲ್ ನ ನಾಯಕ್ ಬಾಹ್ಯ ಜಗತ್ತಿನಿಂದ ಬೇರ್ಪಟ್ಟವನು. ಗೋಲ್ಡ್ ಮನ್ ನ ಪ್ರಕಾರ ನಾವೆಲ್ ಅವನತ ಸಮಾಜದಲ್ಲಿ ಅಪ್ಪಟ  ಮೌಲ್ಯಗಳ ಹುಡುಕಾಟದ ಕಥನ. ಈ ವ್ಯಾಖ್ಯಾನಗಳನ್ನು , ಅವು ಗಳ ಮಿತಿಗಳನ್ನು ’ ನಾವೆಲ್ ನ್ ಸಿದ್ಧಾಂತ, ಸಮಾಜಶಸ್ತ್ರೀಯ ವಿವರಣಿ ಎಂಬ ಮೊದಲ ಅಧ್ಯಾಯದಲ್ಲಿ ಲೇಖಕರು ಚರ್ಚಿಸಿದ್ದಾರೆ.
 ’ ರಾಷ್ಟ್ರ, ಆಧುನಿಕತೆ ಮತ್ತು ಮೊದಲ  ಕಾದಂಬರಿಗಳಿಉ’ ಎಂಬ್ ಎರಡನೆಯ ಅಧ್ಯಾಯದಲ್ಲಿ ಡಾ| ಪಡಿಕ್ಕಲ್ ಕರಾವಳಿ, ಮೈಸೂರು ಮತ್ತು ಉತರ ಕರ್ನಾಟಕದಲ್ಲಿ ವಿಭಿನ್ನ ರೀತಿಯ ಮೊದಲ ಕಾದಂಬರಿಗಳ ಸೃಷ್ಟಿಗೆ ಕಾರಣಾವಾದ ಸಾಂಸ್ಕೃತಿಕ ಸ್ಥಿತಿಯನ್ನು ವಿವರಿಸಿ, " ಅಂದರೆ ಪಾಶ್ಚಾತ್ಯ ’ನಾವೆಲ್’ ಪರಿಕಲ್ಪನೆಯು ಕನ್ನಡ ಕಾದಂಬರಿಯ್ ಮುಂದೆ ಇದ್ದ ಮಾದರಿಯಾಗಿದೆ. ಆದರೆ ಸಂಪೂರ್ಣವಾಗಿ ’ನಾವೆಲ್’ ಗೆ  ಸದೃಶವಾದ ಕಾದಂಬರಿಯನ್ನು ಕನ್ನಡ ಲೇಖಕರು ರಚಿಸಲಿಲ್ಲ. ಸಾಂಪ್ರದಾಯಿಕ ಬರಹದ ಸಂಪ್ರದಾಯ ಮತ್ತು ನಾವೆಲ್ ಗಳ ನಡುವಿನ್ ರಚನೆಯಿಂದ ಆರಂಭಿಸಿ ಆಧುನಿಕ ಕನ್ನಡ ಕಾದಂಬರಿಯನ್ನು ಅವರು ರಚಿಸಿದರು. ಆದುದರಿಂದ   ’ಕಾದಂಬರಿ’ ಯು ಸೈದ್ಧಾಂತಿಕವಾಗಿಯೇ ನಾವೆಲ್ ಮತ್ತು ಸಾಂಪ್ರದಾಯಿಕ ಕಥನಗಳಿಂದ ಭಿನ್ನ ಮತ್ತು ವಿಶಿಷ್ಟವಾದುದಾಗಿದೆ. ಹತ್ತೊಂಬತ್ತನೆಯ ಶತಮಾನದ ಕನ್ನಡದ ರಮ್ಯ ಕಥಾನಕಗಳು, ರೂಪಾಂತರಗಳು, ನಾಟಕಗಳಲ್ಲಿಯೂ ಕನ್ನಡ ಕಾದಂಬರಿಯ ಹುಟ್ಟಿಗೆ ಕಾರಣ್ವಾದ ವಿದ್ಯಾವಂತ ವರ್ಗದ ಮನ: ಸ್ಥಿತಿಯು ಬಿಂಬಿಸಲ್ಪಟ್ಟಿದೆ" ಎನ್ನುತ್ತಾರೆ.’ ಪ್ರಮುಖ ಲೇಖಾಕರು ಮತ್ತು ವಾಸ್ತವಿಕ ನಿರೂಪಣೆಯ ರಾಜಮಾರ್ಗ’ ಎಂಬ ಮೂರನೆಯ ಅಧ್ಯಾಯದಲ್ಲಿ ಡಾ| ಪಡಿಕ್ಕಲ್ ಅವರ ಒಳನೋಟಗಳಿವೆ. ಮೊದಲ ಕಾದಂಬರಿಗಳಲ್ಲಿರುವ ಆದರ್ಶ್ ಮತ್ತು ವಾಸ್ತವ ಸಂಬಂಧಗಳ ಪರಿಶೀಲನೆ ಯಲ್ಲಿ ಅವರು ಮೂರು ವಿಭಿನ್ನ ಸ್ಥಿತಿಗಳನ್ನು ಗುರುತಿಸಿದ್ದಾರೆ. ಗುಲ್ವಾಡಿ, ಬೋಳಾರರ ಕೃತಿಗಳಲ್ಲಿ ಭವಿಷ್ಯದಲ್ಲಿ ನಿಜವಾಗಿ ಬಿಡುವ ಆದರ್ಶಗಳೀವೆ. ಸಂಪ್ರದಾಯ ಧಾರ್ಮಿಕತೆಯ ವಿಡಂಬನೆ ಈ ಕೃತಿಗಳಲ್ಲಿದೆ. ಪ್ರಗತಿಗಾಗಿ ಗತಕಾಲದತ್ತ  ಹೊರಳುವ ಗಳಗನಾಥ- ಕೆರೂರರ ಕಾದಂಬರಿಗಳಲ್ಲಿ ಆದರ್ಶದ ವೈಭವೀಕರಣವಿದೆ. ಸಂಪ್ರ್ದಾಯವಾದಿಯಾದ ಎಂ,ಎಸ್. ಪುಟ್ಟಣ್ಣಾನವರಿಗೆ ಪಾಶ್ಚಾತ್ಯ ವೈಚಾರಿಕತೆಯ ಅಪಾಯಗಳು ತಿಳಿದಿವೆ. ಆದರ್ಶ ಗತಜೀವನವನ್ನು ಪುನರುಜ್ಜೀವನಗೊಳಿಸುವುದು ಅಸಾಧ್ಯ ಎಂಬ ಅರಿವಿರುವ ಅವರು  ಜೀವನಕ್ರಮದ ಪಲ್ಲಟಗಳನ್ನು ವಿಷಾದದಿಂದ ಚಿತ್ರಿಸುತ್ತಾರೆ.ಡಾ| ಶಿವರಾಮ್ ಪಡಿಕ್ಕಲ್ ಅವರು ವಿವರಿಸುವಂತೆ "ಅಂದರೆ ಈಗಾಗಲೇ ನಾವು ನೋಡಿರುವಂತೆ ವ್ಯಕ್ತಿ ಮತ್ತು ಸಮಾಜದ ದುರಂತ ಬಿರುಕು ಎನ್ನುವುದು ಪಾಶ್ಛಿಮಾತ್ಯ್ ನಾವೆಲ್ ನ್ ಮೂಲಭೂತ ದರ್ಶನ್ವಾದರೆ’ ವ್ಯಕ್ತಿಯ ನೆಲೆಯರಸುವ ಯತ್ನ್’ ಅಥವಾ ಸಾಮಾಜಿಕ ಅಸ್ಮಿತೆಯ ಹುಡುಕಾಟವೆನ್ನುವುದು ಕನ್ನಡ ಕಾದಂಬರಿಯ ತಾತ್ವಿಕತೆಯಾಗಿದೆ. ಇಲ್ಲಿ ಪಾಶ್ಚಿಮಾತ್ಯ ನಾವೆಲ್ ನಲ್ಲಿ ಕಾಣಿಸುವಂತೆ ನಿರೂಪಣಾ ಪ್ರಜ್ಜೆ’ಯದು ಸಮಾಜ್ ದಿಂದ ದೂರ ನಿಂತಿರುವ ಸ್ಥಿತಿಯಲ್ಲ. ಬದಲಾಗಿ ಎಅರಡು ವಿರೋಧೀ ಸಂಸ್ಕೃತಿಗಳಾ )ಆಳಿಸಿಕೊಳ್ಳುವ ಮತ್ತು ಆಳುವ್) ಮುಖಾಮುಖಿಯಲ್ಲಿಯೇ ತನ್ನ ಜನ್ಮವನ್ನು ಪಡೆದು ಅವುಗಳ  ನಡುವೆ ಸಿಲುಕಿರುವ ತ್ರಿಶಂಕು ಸ್ಥಿತಿಯಿಂದ ತನ್ನ ಸಾಮಾಜಿಕ ಅಸ್ಮಿತೆಯನ್ನು ಸ್ಥಾಪಿಸುವ ಯತ್ನವನ್ನು ಕನ್ನಡ ಕಾದಂಬರಿಯ ತಿರುಳೆಂದು  ನಾವು ಗ್ರಹಿಸಬಹುದು. ಆದುದರಿಂದ ಕಾದಂಬರಿಯನ್ನು ’ದೇಸೀ ವಿದ್ಯಾವಂತ ಮತ್ತು ವರ್ಗದ ಸಾಮಾಜಿಕ ಅಸ್ಮಿತೆಯ ಹುಡುಕಾಟದ ಕಥನ’ ಎಂದು ಕರೆಯಬಹುದು.
ಘುಟನಾಪ್ರಧಾನತೆ, ವಾಸ್ತವಿಕತೆ ಮತ್ತು ಆದರ್ಶವಾದಿತನಗಳು ಬೆರೆತಿರುವ ನಿರೂಪಣಾ  ಶೈಲಿ, ಪಾಶ್ಚಿಮಾತ್ಯ ಅರ್ಥದಲ್ಲಿ ’ಇಂಡಿವಿಜುವಲ್’ ಎಂದು ಕರೆಯಲಾಗದ ವಿಶಿಷ್ಟ ವ್ಯಕ್ತಿವಾದಿತನವನ್ನು ಹೊಂದಿದ ಪಾತ್ರಗಳ ಸೃಷ್ಟಿ, ಆದರ್ಶ ಮತ್ತು ವಾಸ್ತವಗಳ ಘರ್ಷಣಾತ್ಮಕ ಸನ್ನಿವೇಶಗಳು ಪರಸ್ಪರ ಘರ್ಷಿಸದೆ ಮೂಲಸ್ಥಿತಿಗೆ ಮರಳುವ ರೀತಿ ಇವನ್ನು ಕನ್ನಡದ ಮೊದಲ ಕಾದಂಬರಿಗಳ ವಿಶಿಷ್ಟ ಲಕ್ಷಣಗಳೆಂದು ಡಾ| ಪಡಿಕ್ಕಳ್ ಗುರುತಿಸುತ್ತಾರೆ.

’ ಇತರ ಕಾದಂಬರಿಗಳು ಮತ್ತು ಮೆಲೋಡ್ರೆಮಾಟಿಕ್ ನಿರೂಪಣೆ ಎಂಬ್ ನಾಲ್ಕನೆಯ ಅಧ್ಯಾಯದಲ್ಲಿ ಲೇಖಕರು ವಸ್ತುವಿನ ದೃಷ್ಟಿಯಿಂದ ಅಧ್ಯಯನದ ಅನುಕೂಲಕ್ಕಾಗಿ ಮಾಡಿಕೊಂಡಿರುವ ವಿಭಾಗಗಳಿವು.೧.ಆರ್ಯ ಕುಲಾಂಗನೆಯರನ್ನು ವೈಭವೀಕರಿಸುವ ಕಾದಂಬರಿಗಳು(ತಿರುಮಲಾಂಭಾ), ೨.ಸ್ತ್ರೀ ಸಮಸ್ಯೆ ಕೇಂದ್ರವಾಗಿರುವ, ಗೃಹಚಿತ್ರವನ್ನು ಮಂಡಿಸುವ ಕಾದಂಬರಿಗಳು(ಆರ್. ಕಲ್ಯಾಣಮ್ಮ ಶಿವರಾಮ್ ಕಾರಂತ, ಎಂ. ಅಣ್ಣಾಜಿ ರಾವ್), ೩. ಗತ ವೈಭವವನ್ನು ವಸ್ತುವಾಗಿರಿಸಿಕೊಂಡ ಕಾದಂಬರಿಗಳು. (ಭಿ.ಪ. ಕಾಳೆ), ೪. ಪತ್ತೇದಾರಿ ಕಾದಂಬರಿಗಳು.

 ’ ಕೆಲವು ಕಾದಂಬರಿಗಳ  ಅಧ್ಯಯನ’   ಎಂಬ ಐದನೆಯ ಅಧ್ಯಾಯದಲ್ಲಿ  ಡಾ| ಪಡಿಕ್ಕಲ್ ಕನ್ನಡದ  ಮೊದಲ ಕಾದಂಬರಿಗಳು ಆಧುನಿಕ   ರಾಷ್ಟ್ರ ಅದರ  ರಾಷ್ಟ್ರೀಯತೆ, ಆಧುನಿಕತೆ ಮತ್ತು ಆ ಆಧುನಿಕತೆಯಲ್ಲಿ ರೂಪುಗೊಳ್ಳುವ ಆಧುನಿಕ ವ್ಯಕಿತ್ವಗಳನ್ನು ನಿರೂಪಿಸುವ ಕಥನಗಳು ಎನ್ನುವ ಮಾತನ್ನು , ’ ಇಂದಿರಾಬಾಯಿ’ ’ ಮಾಡಿದ್ದುಣ್ಣೋ ಮಹಾರಾಯ್’ ’ ಮಾಧವ ಕರುಣಾವಿಲಾಸ’ ದುಗೇರ್ಶ ನಂದಿನಿ ’ ಚೋರ ಗ್ರಹಣ  ತಂತ್ರ ’ ಎಂಬ ಐದು ಕಾದಂಬರಿಗಳ ವಿಶ್ಲೇಷಣೆಯಿಂದ ಸಮರ್ಥಿಸಿದ್ದಾರೆ.

’ಡಾ| ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಬರೆದಿರುವಂತೆ ಡಾ| ಪಡಿಕ್ಕಲ್ ಅವರ ಈ ಅಧ್ಯಯನವು ಹೊರನೋಟಕ್ಕೆ ಸಮಾಜ್ ಶಾಸ್ತ್ರೀಯ ಎಂದು ಕಾಣಿಸಿದರೂ ಅಂತ ರಂಗದಲ್ಲಿ ಮಾರ್ಕ್ಸ್  ವಾದಿ, ಸ್ತ್ರೀವಾದಿ,   ರಾಚನಿಕೋತ್ತರ, ಆಧುನಿಕೋತ್ತರ, ವಸಾಹತೋತ್ತರ, ವಾಚಕ ಕೇಂದ್ರಿತ ಚಿಂತನೆಗಳಾನ್ನು ಅವುಗಳ ಗಡಿ ರೇಖೆಗಳನ್ನು ಮೀರಿ ಒಂದು ಗೂಡಿಸುತ್ತದೆ." ಜನಪ್ರಿಯ ಸಾಹಿತ್ಯ, ಗಂಭೀರ ಸಾಹಿತ್ಯ ಎಂಬ ವರ್ಗೀಕರಣವನ್ನು ನಿರಾಕರಿಸುವ ಪಡಿಕ್ಕಲ್ ಪತ್ತೇ ದಾರಿ ಕಾದಂಬರಿಗಳನ್ನೂ ಅಧ್ಯಯನ ಮಾಡಿದ್ದಾರೆ. ಕನ್ನಡದ ಮೊದಲ್ ಕಾದಂಬರಿಗಳ ಓದುಗರ ಪ್ರತಿ ಕ್ರಿಯೆಗಳಿಗೆ ಅವರು ಒತ್ತು ನೀಡಿದ್ದಾರೆ. ವಸಾಹತುಶಾಹಿ ತಂದ ಇಂಗ್ಲಿಷ್ ಶಿಕ್ಷಣದಿಂದ ಪ್ರೇರಣೆ ಪಡೆದು ಕನ್ನಡದ ಕಾದಂಬರಿ ಪ್ರಕಾರ ಹುಟ್ತಿತು. ಇಂಗ್ಲಿಷ್
 ಶಿಕ್ಷಣದ ಮೂಲಕ ಬಂದ, ಆಧುನಿಕತೆ-ವೈಚಾರಿಕತೆಯನ್ನು ಕುರಿತ ಆಕರ್ಷಣೆ-ವಿಕರ್ಷಣೆ ಕನ್ನಡದ ಮೊದಲ್ ಕಾದಂಬರಿಗಳಲ್ಲಿದೆ. ವಸಾಹತುಶಾಹಿ ಶಿಕ್ಷಣದ ಫಲ ಶ್ರುತಿಯಾಗಿ ಸೃಷ್ಟಿಯಾದ ಕನ್ನಡದ ಮೊದಲ ಕಾದಂಬರಿಗಳನ್ನು ಡಾ| ಪಡಿಕ್ಕಳ್ ವಸಾಹತೋತ್ತರ ಚಿಂತನೆಯ ನೆಲೆಯಿಂದ ವಿಮರ್ಶಿಸಿದ್ದಾರೆ. ಕನ್ನಡ ಕಾದಂಬರಿ ಹಳೆಯ್ ಗದ್ಯ ಕಥನಗಳ ಮುಂದುವರಿಕೆಯೂ ಅಲ್ಲ, ಪಾಶ್ಚಾತ್ಯ ’ನಾವೆಲ್’ ನ ನಕಲೂ ಅಲ್ಲ, ಅದು ಆಧುನಿಕ ವಿದ್ಯಾವಂತ ವರ್ಗದ ಅಸ್ಮಿತೆಯ ಹುಡುಕಾಟದ ಕಥನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದ ಮೊದಲ್ ಕಾದಂಬರಿಗಳ ಉಗಮದ ಸಾಂಸ್ಕೃತಿಕ ಹಿನ್ನಲೆಯನ್ನು ಚರ್ಚಿಸುವ ’ ಕನ್ನಡ ಕಾದಂಬರಿಗಳ ಮೊದಲ್ ಹೆಜ್ಜೆಗಳು’(ಸಂ-ಡಾ| ವಿವೇಕ ರೈ) ಎಂಬ ಲೇಖನ ಸಂಕಲನವೊಂದನ್ನು ಮಂಗಳೂರು ವಿಶ್ವವಿದ್ಯಾನಿಲಯ ೧೯೮೭ರಲ್ಲಿ ಪ್ರಕಟಿಸಿತು. ಇದೀಗ, ಹೈದರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ| ಶಿವರಾಮ್ ಪಡಿಕ್ಕಲ್ ಅವರ ’ ನಾಡು ನುಡಿಯ ರೂಪಕ’ ಎಂಬ ಸಂವಾದ ಯೋಗ್ಯ ಸಂಪ್ರಬಂಧವನ್ನು ಪ್ರಕಟಿಸಿರುವ ಮಂಗಳೂರು ವಿ.ವಿ. ಪ್ರಸಾರಾಂಗ್, ಕನ್ನಡ ಮೊದಲ ಕಾದಂಬರಿಗಳ ಪುನರಾವಲೋಕನದ ಮುಂದಿನ ಹೆಜ್ಜೆಯನ್ನಿರಿಸಿದೆ.
ಮುರಳೀಧರ ಉಪಾಧ್ಯ ಹಿರಿಯಡಕ

ನಾಡು-ನುಡಿಯ ರೂಪಕ
(ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ್ ಕಾದಂಬರಿಗಳು)
ಲೇ:ಡಾ|ಶಿವರಾಮ್ ಪಡಿಕ್ಕಲ್
ಪ್ರ: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ,
ಮಂಗಳ ಗಂಗೋತ್ರಿ-೫೭೪೧೯೯.
ಮೊದಲ್ ಮುದ್ರಣ:೨೦೦೧
ಬೆಲೆ ರೂ.೧೨೦.


No comments:

Post a Comment