stat Counter



Monday, June 8, 2020

ಮುರಳೀಧರ ಉಪಾಧ್ಯ ಹಿರಿಯಡಕ - - ಡಾ| ಬಿ.ಜಿ.ಎಲ್. ಸ್ವಾಮಿಯವರ ಭಾಷಾಂತರ ಕೃತಿಗಳು { ನಡೆದಿಹೆ ಬಾಳೌ ಕಾವೇರಿ }

ಸಸ್ಯ ವಿಜ್ಜಾನಿ ದಿ| ಡಾ| ಬಿ.ಜಿ.ಎಲ್. ಸ್ವಾಮಿ ಕನ್ನಡದ ಮುಖ್ಯ ಗದ್ಯ  ಲೇಖಕರಲ್ಲೊಬ್ಬರು. ಅವರ ’ಹಸಿರು ಹೊನ್ನು’ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ವಿಜ್ಜಾನ ಸಾಹಿತ್ಯ ಕೃತಿ. ’ಕಾಲೇಜು ರಂಗ’, ’ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’, ಶಾಸನಗಳಲ್ಲಿ ಗಿಡಮರಗಳು’ ’ಫಲಶ್ರುತಿ’-ಇಂಥ ಹಲವು ಸ್ವಾರಸ್ಯ ಪೂರ್ಣ ಪುಸ್ತಕಗಳನ್ನು ಅವರು ಬರೆದಿದ್ದಾರೆ.

 ಚಿಟ್ಟಿ ಮತ್ತು ಜಾನಕಿರಾಮನ್ ಅವರ ನಡೆಂದಾಯ್ ವಾಳೆ ಕಾವೇರಿ’ ಎಂಬ ತಮಿಳು ಪ್ರವಾಸ ಕಥನವನ್ನು ’ ನಡೆದಿಹೆನಾಳೌ ಕಾವೇರಿ’ ಎಂಬ ಹೆಸರಿನಲ್ಲಿ ಬಿ.ಜಿ.ಎಲ್.ಸ್ವಾಮಿ ಅವರು ೧೯೭೭ರಲ್ಲಿ ಕನ್ನಡಕ್ಕೆ ಭಾಷಾಂಅತರಿಸಿದ್ದರು. ಇಪ್ಪತ್ತೈದು ವರ್ಷಗಳಾ ಅನಂತರ ಅವರ್ ಹಸ್ತಪ್ರತಿಗೆ ಮುದ್ರಣಾಯೋಗ ಪ್ರಾಪ್ತವಾಗಿದೆ. ಕಾವೇರಿ, ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ೭೬೦ ಕಿ.ಮೀ. ಹರಿದು ತಮಿಳು ನಾಡಿನ ’ಕಾವಿರಿಪೂ’ ಪಟ್ಟಣದ ಬಳಿ ಬಂಗಳದ ಕಡಲಿಗೆ  ಸೇರುತ್ತದೆ.

ಕರ್ನಾಟಕದಲ್ಲಿ ಇನ್ನೂರು ಕಿ.ಮೀ.  ಹರಿಯುವ ಕಾವೇರಿ, ತಮಿಳುನಾಡಿನಲ್ಲಿ ಐನೂರ ಅರುವತ್ತು ಕಿ.ಮೀ. ದೂರ ಹರಿಯುತ್ತದೆ. ಶ್ರೀರಂಗಪಟ್ಟಣ, ಶ್ರೀರಂಗಂ, ಕುಂಭಕೋಣ, ತಿರುವಾರೂರು, ಮಯೂರಂ, ತಿರುವೈಯಾರು, ಚಿದಂಬರಂ ಕಾವೇರಿ ತೀರದಲ್ಲಿರುವ ಮುಖ್ಯ ಕ್ಷೇತ್ರಗಳು. ತಮಿಳರು ಕಾವೇರಿಯನ್ನು ’ಪೊನ್ನಿ’ ಎಂದು ಕರೆಯುತ್ತಾರೆ. ಕರ್ನಾಟಕ-ತಮಿಳುನಾಡುಗಳಲ್ಲಿರುವ ಕಾವೇರಿ ತೀರದ ಪ್ರೇಕ್ಷಣೇಯ ಸ್ಥಳಗಳ ಪ್ರವಾಸ ಕಥನ ಈ ಪುಸ್ತಕದಲ್ಲಿದೆ. ಪುರಾಣ ಇತಿಹಾಸ-ವರ್ತಮಾನಗಳಿಂದ ಈ ಪ್ರವಾಸ ಕಥನ ತನ್ನ ಹೊಸತನದಿಂದ ಗಮನ ಸೆಳೆಯುತ್ತದೆ. ಸ್ವಾಮಿಯವರ ಭಾಷಾಂತರ ಅಲ್ಲಲ್ಲಿ ತಮಿಳಿನ ಕಂಪಿನಿಂದ ಕೂಡಿದೆ.
ಸುಬ್ರಹ್ಮಣ್ಯ ಭಾರತಿ (೧೮೮೨-೧೯೨೧) ತನ್ನ ರಾಷ್ಟ್ರಭಕ್ತಿ ಗೀತೆಗಳಿಂದ ಮನೆ-ಮನಗಳಲ್ಲಿ ನೆಲೆಸಿರುವ ’ಜ್ಞಾನರಥ’ ಅವರ ಪ್ರಸಿದ್ಧ ಗದ್ಯ ಕೃತಿ
’ಜ್ಞಾನರಥ’ ಎಂಬ ನೀಳ್ಗತೆ ಹಾಗೂ ಹದಿಮೂರು ಕಿರುಗತೆಗಳು ಈ ಪುಸ್ತಕ ಕವಿ. ದಲ್ಲಿವೆ. ’ಜ್ಞಾನರಥ’ ಒಂದು ಕಾಲ್ಪನಿಕ ಪ್ರವಾಸ ಕಥನ. ಕವಿ ಜ್ಞಾನರಥವನ್ನೇರಿ  ಉಪಶಾಂತಿ, ಗಂರ್ಧವ, ಸತ್ಯ, ಮೃತ್ತಿಕಾ ಮತ್ತು  ಧರ್ಮಲೋಕಗಳಿಗೆ ಭೇಟಿ ನೀಡುತ್ತಾನೆ.ಮನ ಆಳಿದ ಬಳಿಕ ಉಪಶಾಂತಿ ಎಂದು ತಿಳಿದಾಗ ಮನಸ್ಸನ್ನು ಕಳಗೊಂಡ ಉಪಶಾಂತಿ ತನಗೆ ಬೇಡ ಎಂದು ಕವಿ ನಿರ್ಧರಿಸುತ್ತಾನೆ. ’ಯಾವುದರಲ್ಲೂ ತೃಪ್ತಿ ಇಲ್ಲದೇ ಇರುವುದೇ ಮಾನವ ಜನ್ಮಕ್ಕೆ ರಕ್ಷೆ ಹಾಗೂ ಅದರ ಹಿರಿಮೆ’ ಎಂದು ಗಂಧರ್ವಕುಮಾರಿ ಕವಿಗೆ ತಿಳಿಸುತ್ತಾಳೆ. ತಮಾಷೆ ಮಾಡಬಂದವನಿಗೆ ಸತ್ಯ ಅರ್ಥವಾಗುವುದಿಲ್ಲ ಎಂಬ ಅರಿವು ಸತ್ಯಲೋಕದಲ್ಲಿ ಕವಿಗೆ ಮೂಡುತ್ತದೆ.ಮರ್ತ್ಯಲೋಕ ದಲ್ಲಿ ಕವಿ ಕುರುಡು ಕಾಂಚಾಣ್ದ ಕುಣಿತವನ್ನು ಕಾಣುತ್ತಾನೆ. ’ಅರ್ಧ ಧರ್ಮಕ್ಕೆ ಅನ್ನ. ಆದ್ದರಿಂದ ಧರ್ಮವಿರುವವರೆಗೂ ಅದು ಇದ್ದೇ ಇರುತ್ತದೆ’ ಎಂದು  ಧರ್ಮ ಲೋಕದ ಸತ್ಯರಾಮ ಹೇಳುತ್ತಾನೆ.

ಸುಬ್ರಹ್ಮಣ್ಯ ಭಾರತಿಯವರ ಕೆಲವು ಕಿರುಗತೆಗಳು ಜನಪದ ಕತೆಗಳ, ಪಂಚ ತಂತ್ರ ಕತೆಗಳ ಮಾದರಿಯಲ್ಲಿವೆ. ’ಹೊನ್ನು ಬಾಲದ ನರಿ’, ’ಗಿಳಿಕತೆ’ ’ಕಾಗೆ ವ್ಯಾಕರಣ ಕಲಿತದ್ದು’, ’ಸಂಗೀತ ಕಲಿಯತೊಡಗಿದ ಕತ್ತೆ’-ಈ ಕತೆಗಳಲ್ಲಿ ಭಾರತೀಯವರು ಅನ್ಯೋಕ್ತಿ ತಂತ್ರಗಳ ಮೂಲಕ ಮನುಷ್ಯರ ಕುರೂಪ-ಬಹುರೂಪಗಳನ್ನು ಚಿತ್ರಿಸಿದ್ದಾರೆ. ’ ಹೊನ್ನ ಬಾಲದ ನರಿ’ ಕತೆಯನ್ನು ಭಾರತವನ್ನಾಳಿದ ಬ್ರಿಟಿಷ್ ರಾಣೆಯನ್ನು ಕುರಿತ ವಿಡಂಬನೆಯಾಗಿಯೂ ಅರ್ಥೈಸ ಬಹುದು. ’ರಾಘವ ಶಾಸ್ತ್ರಿಯ ಕತೆ’ಯಲ್ಲಿ ಜಾತಿಪದ್ಧತಿಯ ವಿರುದ್ಧ ಹೋರಾಡಿದ ಶ್ರೀ ನಾರಾಯಣ ಗುರುಗಳ  ಜೀವನದ ಹಲವು ಪ್ರಸಂಗಗಳಿವೆ. ಈ ಕತೆಯ್ ತಂತ್ರಕ್ಕೂ ಮಾಸ್ತಿಯವರ್ ಕಥನ್ ತಂತ್ರ್ಕ್ಕೂ ಇರುವ ಸಾಮ್ಯ ಗಮನಾರ್ಹ. ಮಾಸ್ತಿಯವರು ಸುಬ್ರಹ್ಮಣ್ಯ ಭಾರತಿಯವರಿಂದ ಪ್ರೇರಣೆ ಪಡೆದಿರಬಹುದು. ತಮಿಳು ಗದ್ಯ ಸಾಹಿತ್ಯದ ಮಹತ್ವದ ಕೃತಿಯೊಂದನ್ನು ಡಾ| ಬಿ.ಜಿ.ಎಲ್. ಸ್ವಾಮಿಯವರು ಸೊಗಸಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಮುರಳೀಧರ ಉಪಾಧ್ಯ ಹಿರಿಯಡಕ,

ಡೆದಿಹೆ ಬಾಳೌ ಕಾವೇರಿ                                      ಜ್ಞಾನ ರಥ
ತಮಿಳು ಮೂಲ-ಚಿಟ್ಟಿ,                                         ತಮಿಳು ಮೂಲ:ಸುಬ್ರಹ್ಮಣ್ಯ ಭಾರತಿ                       
ಜಾನಕಿರಾಮನ್                                                ಕನ್ನಡಕ್ಕೆ ಡಾ| ಬಿ.ಜಿ.ಎಲ್. ಸ್ವಾಮಿ                          
ಕನ್ನಡಕ್ಕೆ-ಡಾ|ಬಿ.ಜಿ.ಎಲ್.ಸ್ವಾಮಿ                         ಪ್ರ:ಅಂಕಿತ ಪುಸ್ತಕ
ಪ್ರ: ಕಾವ್ಯಾಲಯ,                                              ೫೩, ಶ್ಯಾಮಸಿಂಗ್ ಕಾಂಪ್ಲೆಕ್ಸ್,   
ಪ್ರಕಾಶಕರು, ಜಯನಗರ್,                                     ಗಾಂಧಿಬಜಾರ್ ಮುಖ್ಯ ರಸ್ತೆ,          
ಮೈಸೂರು-೫೭೦೦೧೪.                                     ಬಸವನಗುಡಿ, ಬೆಂಗಳೂರು-೫೬೦೦೦೪.
ಮೊದಲ ಮುದ್ರಣ:೨೦೦೧                                    ಮೊದಲ ಮುದ್ರಣ:೨೦೦೧ 
ಬೆಲೆ:ರೂ.೧೩೫.                                                  ಬೆಲೆ:ರೂ.೭೦         
.                                                                       

No comments:

Post a Comment