stat Counter



Wednesday, June 3, 2020

ಮುರಳೀಧರ ಉಪಾಧ್ಯ ಹಿರಿಯಡಕ - ರೇಡಿಯೋ ಪಾಠಗಳ ಸಮೀಕ್ಷೆ

ಡಾ| ಮಹಾಬಲೇಶ್ವರ ರಾವ್  ಅವರು ಡಾ| ಯು.ಪಿ. ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಬರೆದ ’ಪ್ರೌಢ ಶಾಲಾ ಕನ್ನಡ ಪಾಠಗಳು ಒಂದು ಮೌಲ್ಯ ಮಾಪನ’ ಎಂಬ ಪಿಎಚ್.ಡಿ. ಸಂಪ್ರಬಂಧದ ಪರಿಷ್ಕೃತ ಕನ್ನಡ ರೂಪ ’ಪ್ರಸಾರ ಮಾಧ್ಯಮ ಹಾಗೂ ಶಿಕ್ಷಣ’ ಎಂಬ ಹೆಸರಿನಲ್ಲಿ ಪ್ರಕಟವಾಗಿ ದೆ. ಮೊದಲ ಎರಡು ಅಧ್ಯಾಯಗಳಲ್ಲಿ ಲೇಖಕರು ಈ  ಅಧ್ಯಯನದ ಉದ್ದೇಶ ಹಾಹೂ ವ್ಯಾಪ್ತಿಯನ್ನು ಚರ್ಚಿಸಿ, ಅಧ್ಯಯನ ವಿಧಾನ ಹಾಗೂ ತಂತ್ರಗಳಾನ್ನು ನಿರೂಪಿಸಿದ್ದಾರೆ.೧೯೯೨-೯೪ರಲಿ ಕರ್ನಾಟಕದ ಆಕಾಶವಾಣೆ ನಿಲಯಗಳು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಘಿ ಪ್ರಸಾರ ಮಾಡಿದ ಕನ್ನಡ ಭಾಷಾಪಾಠಗಳನ್ನು ಇಲ್ಲಿ ವಿಶ್ಲೇಷಣೆಗಾಗಿ ಆಯ್ದುಕೊಳ್ಳಲಾಗಿದೆ.

ಈ ಸಂಪ್ರಬಂಧದ ಮೂರನೆಯ ಅಧ್ಯಾಯದಲ್ಲಿ ಲೇಖಕರು ಸಮೂಹ ಸಂಪರ್ಕ ಮಾಧ್ಯಮಗಳು ಹಾಗೂ ಅವುಬೀರುವ ಪರಿಣಾಮವನ್ನು, ಬಾನುಲಿ ಹಾಗೂ ಶಿಕ್ಷಣದ ನಡುವಣ ಸಂಬಂಧವನ್ನು ಚರ್ಚಿಸಿದ್ದಾರೆ. ಮುಂದಿನ ಎರಡು ಅಧ್ಯಾಯಗಳಲ್ಲಿ  ಭಾರತದಲ್ಲಿ ಬಾನುಲಿಯ ಉಗಮ, ಶೈಕ್ಷಣಿಕ ಪ್ರಸಾರ ಕಾರ್ಯದ ಆರಂಭ ಹಾಹೂ ಬೆಳವಣೆಗೆಯನ್ನು ದಾಖಲಿಸಿ, ಶೈಕ್ಷಣೆಕ ಪ್ರಸಾರದ ಉದ್ದೇಶ ಮತ್ತು ಕಾರ್ಯವಿಧಾನಗಳನ್ನು ವಿವರಿಸಲಾಗಿದೆ. ಶೈಕ್ಷಣಿಕ ಪ್ರಸಾರ ಕ್ಷೇತ್ರದಲ್ಲಿ    ಆಗಿರುವ ಮೌಲ್ಯಮಾಪದ ಪರಿಕಲ್ಪನೆ, ವಿಧಾನ, ಶೈಕ್ಷಣಿಕ ಪ್ರಸಾರ ಪಾಠಗಳ ಬಗೆಗೆ ಆಗಿರುವ ಸಂಶೋಧನೆಗಳ ವಿವರಗಳು ಆರನೆಯ ಅಧ್ಯಾಯದಲ್ಲಿವೆ.
’ ವಿಶ್ಲೇಷಣೆ-ವ್ಯಾಖ್ಯಾನ’ ಎಂಬ  ಏಳನೆಯ ಅಧ್ಯಾಯದಲ್ಲಿ ಡಾ| ಮಹಾ ಬಲೇಶ್ವರ ರಾವ್ ’ ಪರಿಮಳ’ ಕಾರ್ಯ ಕ್ರಮದ ಇಪ್ಪತ್ತೇಳು ಕನ್ನಡ ಪಾಠಗಳನ್ನು ಅವಲೋಕಿಸಿದ್ದಾರೆ. ’ ಚಂಪುವಿನ ಪೆಂಪು’ ’ವಚನ್ ವೈಭವ’, ’ರಗಳೆಗಳಾ ರಮಣೇಯತೆ’ ’ಸಾಂಗತ್ಯದ ಸೊಬಗು’, ’ನವೋದಯದ ದಿಗ್ಗಜಗಳು’, ’ನವ್ಯ ಭವ್ಯ’, ’ಕನ್ನಡ ಕಾದಂಬರಿಲೋಕದ ದಿಗ್ಗಜರು’, ’ಯಕ್ಷಗಾನ ಬಯಲಾಟ’ ಮತ್ತಿತರ ಪಾಠಗಳನ್ನು   ಆಕಾಶವಾಣೆ ಪ್ರಸಾರ ಮಾಡಿದೆ. ಈ ಪಾಠಗಳಲ್ಲಿ ಮೂರನೇ ಎರಡರಷ್ಟು ಪಾಠಗಳ ಗುಣಮಟ್ಟ ತೃಪ್ತಿಕರವಾಗಿದೆ, ಉಳಿದ ಮೂರನೇ ಒಂದು ಭಾಗದಷ್ಟು ಪಾಠಗಳ ಗುಣಮಟ್ಟ ಅತೃಪ್ತಿಕರವಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಈ ಪಾಠಗಳಿಗೆ ವಿದ್ಯಾರ್ಥಿಗಳಾ, ಶಿಕ್ಷಕರ, ತಜ್ಞರು ಹಾಗೂ ಶಿಕ್ಷಕರ ಸಲಹೆಗಳನ್ನು ಅವರು ದಾಖಲಿಸಿದ್ದಾರೆ.

’ಸಂಶೋಧನೆಯ ಫಲಶ್ರುತಿ’ ಯೊಂದಿಗೆ ಬಾನುಲಿ ಪಾಠಗಳ ಗುಣಮಟ್ಟ  ಹೆಚ್ಚಿಸಲು ಸೂಕ್ತ ಸಲಹೆಗಳನ್ನುಡಾ| ರಾವ್ ನೀಡಿದ್ದಾರೆ ಹಣ, ಸಮಯ, ಶ್ರಮ, ಬುದ್ದಿಶಕ್ತಿ ಈ ಎಲ್ಲವನ್ನೂ ವ್ಯಯಿಸಿ ಬಾನುಲಿ ಕೇಂದ್ರಗಳವರು ಪ್ರಸಾರ ಮಾಡುವ ಈ ಪಾಠಗಳು ಶ್ರೋತೃವರ್ಗಕ್ಕೆ ತಲುಪಬೇಕು, ಅವು ಉತ್ತಮ     ಗುಣಮಟ್ಟದ ಪಾಠಗಳಾಗಬೇಕು ತರಗತಿಯ ಬೋಧನೆ ಹಾಗೂ ಕಲಿಕೆಯನ್ನು ಪ್ರಚೋದಿಸಬೇಕು ಎಂಬ ಸದಾಶಯ ಈ ಅಧ್ಯಯನದ ಹಿನ್ನೆಲೆಯಲ್ಲಿದೆ.

ಅಲಕ್ಷಿತ ಕ್ಷೇತ್ರವೊಂದರ ಆಯ್ಕೆ, ಸರಳ ಸುಂದರ ಗದ್ಯ ಶೈಲಿ, ಸಮೀಕ್ಷೆಯಲ್ಲಿ ಉಕ್ತದ ವಿಶ್ಲೇಷಣೆ, ಅನುಕ್ತದ ಉಲ್ಲೇಖ, ದುರುಕ್ತದ ತಿದ್ದು ಪಡಿ, ಸಂಶೋಧನೆಯ ಫಲಶ್ರುತಿಯ, ಇತಿ-ಮಿತಿಗಳ ಅರಿವು-ಇವು ಈ ಸಂಪ್ರಬಂಧದ ಧನಾತ್ಮಕ ಅಂಶಗಳು. ’ಪ್ರಸಾರ ಮಾಧ್ಯಮ ಹಾಗೂ ಶಿಕ್ಷಣಕ್ಕೆ   ಸಂಬಂಧಪಟ್ಟ ಅಪೂರ್ವಮ್ ಅಸಾಮಾನ್ಯ ಸಂಪ್ರಬಂಧವೊಂದನ್ನು ಬರೆದಿರುವ ಡಾ| ಮಹಾಬಲೇಶ್ವರ ರಾವ್ ಅಭಿನಂದನಾರ್ಹರು.                                

No comments:

Post a Comment